ಮಂಗಳೂರು ಒಪ್ಪಂದವು ಎರಡನೆಯ ಮೈಸೂರು ಯುದ್ಧವನ್ನು ಕೊನೆಗೊಳ್ಳಿಸಲು ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಮಧ್ಯೆ ಉಂಟಾದ ರಾಜಿ. ಇದಕ್ಕೆ ೧೭೮೪ಮಾರ್ಚ್ ೧೧ರಂದು ಸಹಿ ಹಾಕಲಾಯಿತು. ಟಿಪ್ಪುವಿಗೆ ಈ ಒಪ್ಪಂದದ ದೊಡ್ಡ ಅನುಕೂಲವೇನಾಯಿತೆಂದರೆ (ಇದು ಅವನಿಗೆ ವಿಜಯದ ಹಕ್ಕುಸಾಧಿಸಲು ಅವಕಾಶ ನೀಡಿತು) ಬ್ರಿಟಿಷರ ಮೇಲೆ ವಾಸ್ತವಿಕ ಒಪ್ಪಂದದ ಮಾನಸಿಕ ಪ್ರಭಾವವಾಗಿತ್ತು.