ಮಂಗಳವಾರ ರಜಾದಿನ (ಚಲನಚಿತ್ರ)

ಮಂಗಳವಾರ ರಜಾದಿನ - ಯುವಿನ್ ಬರೆದು ನಿರ್ದೇಶಿಸಿದ 2021 ರ ಕನ್ನಡ ಭಾಷೆಯ ರೋಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದೆ. ತ್ರಿವರ್ಗ ಟೀಮ್ ನಿರ್ಮಿಸಿದೆ ಮತ್ತು ಸ್ಟುಡಿಯೋ 18 ವಿತರಿಸಿದೆ, ಚಂದನ್ ಆಚಾರ್ ಮತ್ತು ಲಾಸ್ಯ ನಾಗರಾಜ್ ನಟಿಸಿದ್ದಾರೆ, ಪ್ರಜೋತ್ ಡಿಸಾ ಅವರ ಸಂಗೀತ ಮತ್ತು ರಿತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತವಿದೆ. []

ಮಂಗಳವಾರ ರಜಾದಿನ
ನಿರ್ದೇಶನಯುವಿನ್
ನಿರ್ಮಾಪಕತ್ರಿವರ್ಗ ಟೀಮ್
ಲೇಖಕಯುವಿನ್
ಪಾತ್ರವರ್ಗ
ಸಂಗೀತಪ್ರಜೋತ್ D'sa
ಛಾಯಾಗ್ರಹಣಉದಯ್ ಲೀಲಾ
ಸಂಕಲನಮಧು ತುಂಬಕೆರೆ
ವಿತರಕರುಸ್ಟುಡಿಯೋ 18
ಬಿಡುಗಡೆಯಾಗಿದ್ದು೫ ಫೆಬ್ರವರಿ ೨೦೨೧
ಅವಧಿ೧೧೦ ನಿಮಿಷಗಳು

ಕಥಾವಸ್ತು

ಬದಲಾಯಿಸಿ

ಕುಮಾರನು ಕ್ಷೌರಿಕನಾಗಿದ್ದು, ಮನೆತನದ ಉದ್ಯೋಗವನ್ನು ನಡೆಸಲು ತನ್ನ ತಂದೆಯೊಂದಿಗೆ ಕೆಲಸ ಮಾಡಲು ಶಾಲೆಯನ್ನು ತೊರೆದವನು. ಅವರ ಕೆಳ-ಮಧ್ಯಮ-ವರ್ಗದ ಬದುಕು ಸಾಲಗಳು ಮತ್ತು ಆದರ್ಶಗಳಿಂದ ತುಂಬಿದೆ. ಆದರೆ ಕುಮಾರ ಜೀವನದ ಒಂದು ಆಸೆ ಎಂದರೆ ಕನ್ನಡದ ಸೂಪರ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರ ಕೇಶ ವಿನ್ಯಾಸ ಮಾಡುವುದು. ಕುಮಾರನ ಸ್ನೇಹಿತರು ಮತ್ತು ಅಭಿ ಅವನನ್ನು ಕನ್ನಡದ ಸೂಪರ್‌ಸ್ಟಾರ್ ಸುದೀಪ್ ಅವರ ನಿಕಟ ಸಹವರ್ತಿ ಎಂದು ಹೇಳಿಕೊಳ್ಳುವ ಮಾರ್ಟಿನ್ ಲೂಥರ್‌ಗೆ ಪರಿಚಯಿಸಿದರು, ಮಾರ್ಟಿನ್ ಲೂಥರ್‌ ನು ಈ ಕನಸನ್ನು ಈಡೇರಿಸಲು ಸಹಾಯ ಮಾಡುವ ಭರವಸೆ ನೀಡುತ್ತಾನೆ. ಕುಮಾರ್ ಅವರ ತಂದೆ ಅನಾರೋಗ್ಯದಿಂದ ಬಳಲುತ್ತಾನೆ ಮತ್ತು ಕೊನೆಯಲ್ಲಿ ಸುದೀಪ್ ಬಂದು ಅವನನ್ನು ಉಳಿಸುತ್ತಾರೆ.

ಪಾತ್ರವರ್ಗ

ಬದಲಾಯಿಸಿ
  • ಕುಮಾರ ಪಾತ್ರದಲ್ಲಿ ಚಂದನ್ ಆಚಾರ್
  • ಸೀತಲ್ ಪಾತ್ರದಲ್ಲಿ ಲಾಸ್ಯ ನಾಗರಾಜ್
  • ಮಾದೇವನಾಗಿ ಗೋಪಾಲಕೃಷ್ಣ ದೇಶಪಾಂಡೆ
  • ಅಭಿ ಪಾತ್ರದಲ್ಲಿ ರಜನಿಕಾಂತ್
  • ಮಾರ್ಟಿನ್ ಲೂಥರ್ ಪಾತ್ರದಲ್ಲಿ ಜಹಾಂಗೀರ್
  • ಸುದೀಪ್ ಸುದೀಪ್ ಆಗಿಯೇ

ಪ್ರಜೋತ್ ಡಿಸಾ ಅವರು "ಮಂಗಳವಾರ ರಜಾದಿನ" ಶೀರ್ಷಿಕೆ ಗೀತೆಯನ್ನು ರಚಿಸಿದ್ದಾರೆ. ರಿಥ್ವಿಕ್ ಮುರಳೀಧರ್ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಮಂಗಳವಾರ ರಜಾದಿನ"ಯೋಗರಾಜ್ ಭಟ್ವಿಜಯ್ ಪ್ರಕಾಶ್3:47
2."ಕೂಳೆ"ಯುವಿನ್,ಉದಯ್ ಲೀಲಾನವೀನ್ ಸಜ್ಜು2:51
3."ನೀನೇ ಗುರು"ಘೌಸ್ ಪೀರ್ಪುನೀತ್ ರಾಜಕುಮಾರ್3:40

ವಿಮರ್ಶೆಗಳು

ಬದಲಾಯಿಸಿ

ದಿ ಟೈಮ್ಸ್ ಆಫ್ ಇಂಡಿಯಾ ಗಾಗಿ ಮಂಗಳವರ ರಜಾದಿನವನ್ನು ವಿಮರ್ಶಿಸುತ್ತಾ, ಸುನಯನಾ ಸುರೇಶ್ ಐದು ನಕ್ಷತ್ರಗಳಲ್ಲಿ ಎರಡೂವರೆ ನಕ್ಷತ್ರಗಳನ್ನು ನೀಡಿದ್ದಾರೆ ಮಂಗಳವರ ರಜಾದಿನ ಕಥೆಯು ಅದರ ಪೂರ್ಣ ಸಾಮರ್ಥ್ಯವನ್ನು ತಲುಪದಿರಬಹುದು, ಆದರೆ ಇದು ಉತ್ತಮವಾದ ಒಂದು-ಬಾರಿ ವೀಕ್ಷಣೆಯನ್ನು ಮಾಡಬಹುದಾದ ಚಿತ್ರವಾಗಿದೆ [] thehansindia.com ಅವರ ವಿಮರ್ಶೆಯಲ್ಲಿ, ನಿಶ್ಚಿತ್ ಎನ್ ಅವರು ಐದು ನಕ್ಷತ್ರಗಳಲ್ಲಿ ಎರಡೂವರೆ ನಕ್ಷತ್ರಗಳನ್ನು ನೀಡಿದ್ದಾರೆ. "ಮಂಗಳವರ ರಜಾದಿನ" ದಲ್ಲಿ ಹೊಸತೇನೂ ಇಲ್ಲ, ಆದರೂ ಒಂದು ಬಾರಿ ನೋಡಬಹುದು. ." ಎಂದು ಹೇಳುತ್ತಾರೆ . [] ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗಾಗಿ, ಎ.ಶಾರದಾ ಅವರು ಚಿತ್ರಕಥೆಯನ್ನು ಪ್ರಶಂಸಿಸುತ್ತಾ ಮೂರು ನಕ್ಷತ್ರಗಳನ್ನು ನೀಡಿದರು, ಶಾರದ ಅವರು ಹೀಗೆ ಹೇಳಿದರು: " . . . ಮಂಗಳವಾರ ರಜಾದಿನವು ಮಧ್ಯಮವರ್ಗದ ಕುಟುಂಬದ ಮತ್ತು ಸಾಮಾನ್ಯರ ಕನಸುಗಳ ಸ್ಪಷ್ಟ ಚಿತ್ರಣವನ್ನು ಕೊಡುತ್ತದೆ, ಜೊತೆಗೆ ಎಲ್ಲಾ ವರ್ಗದ ಪ್ರೇಕ್ಷಕರನ್ನು ಸಹ ಪೂರೈಸುತ್ತದೆ. . . ." . []

ಉಲ್ಲೇಖಗಳು

ಬದಲಾಯಿಸಿ
  1. "Mangalavara Rajaadina Movie Review: A sentimental comedy drama". 7 February 2021.
  2. "Mangalavara Rajaadina Movie Review: A good premise, that could have been handled better". The Times of India. Retrieved 3 March 2021.
  3. "Mangalavara Rajaadina Movie Review: A sentimental comedy drama". thehansindia.com. 7 February 2021. Retrieved 9 March 2020.
  4. "Managalavara Rajadina Movie Review: Styled in simplicity". The New Indian Express. Retrieved 9 March 2021.


ಬಾಹ್ಯ ಕೊಂಡಿಗಳು

ಬದಲಾಯಿಸಿ