ಭ್ರೂಣಹತ್ಯೆ ಎಂದರೆ ಭ್ರೂಣವನ್ನು ನಾಶಮಾಡುವ ಕ್ರಿಯೆ.[೧]

ಕಾನೂನುಬದ್ಧ ಗರ್ಭಪಾತದ ಅವಧಿಯಲ್ಲಿ ಬಳಕೆ ಬದಲಾಯಿಸಿ

ವೈದ್ಯಕೀಯ ಬಳಕೆಯಲ್ಲಿ, "ಭ್ರೂಣಹತ್ಯೆ" ಶಬ್ದವನ್ನು ಸಾಮಾನ್ಯವಾಗಿ ಯಾವುದೋ ರೂಪದ ಗರ್ಭಪಾತದ ಮೊದಲು ಕೇವಲ ಭ್ರೂಣದ ಮರಣವನ್ನು ಉಂಟುಮಾಡುವುದು ಎಂಬ ಅರ್ಥಕೊಡಲು ಬಳಸಲಾಗುತ್ತದೆ. ಭ್ರೂಣಹತ್ಯೆಯನ್ನು "ಸಜೀವ ಜನನದ ಯಾವುದೇ ಅಪಾಯವಾಗದಿರುವುದನ್ನು ಖಚಿತಗೊಳಿಸಲು ವೈದ್ಯಕೀಯ ಗರ್ಭಪಾತದ ಮೊದಲು ಗರ್ಭಾವಸ್ಥೆಯ ೨೧ ವಾರ ಹಾಗೂ ೬ ದಿನಗಳ ನಂತರ" ಮಾಡಬೇಕು ಎಂದು ರಾಯಲ್ ಕಾಲೇಜ್ ಶಿಫಾರಸು ಮಾಡುತ್ತದೆ.[೨] ೨೦ ವಾರಗಳ ನಂತರದ ಗರ್ಭಪಾತಗಳಲ್ಲಿ, ಭ್ರೂಣಹತ್ಯೆಯನ್ನು ನೆರವೇರಿಸಲು ಭ್ರೂಣದ ಹೃದಯವನ್ನು ನಿಲ್ಲಿಸುವ ಸಲುವಾಗಿ ಭ್ರೂಣದ ಹೃದಯದೊಳಗೆ ಡಿಜಾಕ್ಸಿನ್ ಅಥವಾ ಪೊಟ್ಯಾಷಿಯಮ್ ಕ್ಲೋರೈಡ್‍ನ ಚುಚ್ಚುಮದ್ದನ್ನು ಬಳಸಬಹುದು.[೩]

ಉಲ್ಲೇಖಗಳು ಬದಲಾಯಿಸಿ

  1. Definitions of feticide from dictionary.com.
  2. "3270 RCOG Abortion guideline.qxd" (PDF). Archived from the original (PDF) on 2012-05-29. Retrieved 2014-02-23.
  3. Vause, S; Sands, J; Johnston, TA; Russell, S; Rimmer, S (May 2002). "Could some fetocides be avoided by more prompt referral after diagnosis of fetal abnormality?". J Obstet Gynaecol. 22 (3): 243–5. doi:10.1080/01443610220130490. PMID 12521492.