ಭೂಗೋಳ ಶಾಸ್ತ್ರದಲ್ಲಿ, ಭೂಶಿರ ಎಂದರೆ ಒಂದು ಜಲಸಮೂಹದಲ್ಲಿ, ಸಾಮಾನ್ಯವಾಗಿ ಸಮುದ್ರದೊಳಗೆ ವಿಸ್ತರಿಸುವ ದೊಡ್ಡ ಗಾತ್ರದ ಭೂಚಾಚು ಅಥವಾ ಚಾಚುಭೂಮಿ. ಭೂಶಿರವು ಸಾಮಾನ್ಯವಾಗಿ ಕಡಲ ತೀರರೇಖೆಯ ದಿಕ್ಕಿನಲ್ಲಿ ಗಮನಾರ್ಹವಾದ ಬದಲಾವಣೆಯನ್ನು ಪ್ರತಿನಿಧಿಸುತ್ತದೆ. ಇದರಿಂದ ಇವು ಸವೆತದ ನೈಸರ್ಗಿಕ ರೂಪಗಳಿಗೆ, ಮುಖ್ಯವಾಗಿ ಭರತದ ಕ್ರಿಯೆಗಳಿಗೆ ಒಳಗಾಗುವಂತೆ ಮಾಡುತ್ತವೆ. ಆದ್ದರಿಂದ ಭೂಶಿರಗಳು ತುಲನಾತ್ಮಕವಾಗಿ ಲಘು ಭೌಗೋಳಿಕ ಜೀವಿತಾವಧಿಯನ್ನು ಹೊಂದಿರುತ್ತವೆ. ಭೂಶಿರಗಳು ಹಿಮನದಿಗಳು, ಜ್ವಾಲಾಮುಖಿಗಳು, ಮತ್ತು ಸಮುದ್ರ ಮಟ್ಟದಲ್ಲಿನ ಬದಲಾವಣೆಗಳಿಂದ ರೂಪಗೊಳ್ಳಬಹುದು. ಈ ಪ್ರತಿಯೊಂದು ರೂಪಗೊಳ್ಳುವಿಕೆಯ ವಿಧಾನಗಳಲ್ಲಿ ಸವೆತವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಕೆಲವು ಸುಪರಿಚಿತವಾದ ಭೂಶಿರಗಳೆಂದರೆ ಭಾರತದಲ್ಲಿನ ಕನ್ಯಾಕುಮಾರಿ (ಕೇಪ್ ಕಾಮೊರಿನ್) (ಭಾರತದ ಮುಖ್ಯಭೂಭಾಗದ ತುತ್ತತುದಿಯಾದ ಇದು, ಬಂಗಾಳ ಕೊಲ್ಲಿ, ಅರಬ್ಬಿ ಸಮುದ್ರ, ಹಾಗೂ ಹಿಂದೂ ಮಹಾಸಾಗರಗಳ ತ್ರಿಸಂಗಮದಲ್ಲಿ ಸ್ಥಿತವಾಗಿದೆ), ಇಂದಿರಾ ಪಾಯಿಂಟ್ (ಭಾರತದ ದಕ್ಷಿಣತಮ ಬಿಂದು, ಅಂಡಮಾನ್‍ನಲ್ಲಿ ಸ್ಥಿತವಾಗಿದೆ), ದಕ್ಷಿಣ ಆಫ಼್ರಿಕಾದ ಗುಡ್‍ಹೋಪ್ ಭೂಶಿರ ಇತ್ಯಾದಿ.

ಕಾಡ್ ಭೂಶಿರ ಮತ್ತು ಮ್ಯಾಸಚೂಸಿಟ್ಸ್ ಕರಾವಳಿಗೆ ದೂರದಲ್ಲಿರುವ ದ್ವೀಪಗಳು, ಅಂತರಿಕ್ಷದಿಂದ ನೋಡಿದಾಗ

ಬಾಹ್ಯ ಸಂಪರ್ಕಗಳು

ಬದಲಾಯಿಸಿ

What is a cape? Archived 2019-10-02 ವೇಬ್ಯಾಕ್ ಮೆಷಿನ್ ನಲ್ಲಿ.


"https://kn.wikipedia.org/w/index.php?title=ಭೂಶಿರ&oldid=1057229" ಇಂದ ಪಡೆಯಲ್ಪಟ್ಟಿದೆ