ಭುವನೇಶ್ವರ್‌ ಕುಮಾರ್

ಭುವನೇಶ್ವರ ಕುಮಾರ್ (ಜನನ ೧೯೯೦ ಫೆಬ್ರುವರಿ ೫)ಇವರು ಒಬ್ಬ ಭಾರತೀಯ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ. ದೇಶೀಯ ಕ್ರಿಕೆಟ್‌ನಲ್ಲಿ ಅವರು ಉತ್ತರಪ್ರದೇಶ ರಾಜ್ಯದ ಪರ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾರೆ. ಪಾಕಿಸ್ತಾನದ ವಿರುದ್ಧ ಟ್ವೆಂಟಿ -20 ಪಂದ್ಯದಲ್ಲಿ ಯಶಸ್ವಿಯಾಗಿ ಮೂರು ವಿಕೆಟ್ ಗೊಂಚಲು ಪಡೆಯುವ ಮೂಲಕ ಅವರ ಪ್ರತಿಭೆಯನ್ನು ಮೊದಲು ಹೊರಹೊಮ್ಮಿಸಿದರು.

ಭುವನೇಶ್ವರ್ ಕುಮಾರ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಭುವನೇಶ್ವರ್ ಕುಮಾರ್ ಸಿಂಘ್
ಹುಟ್ಟು (1990-02-05) ೫ ಫೆಬ್ರವರಿ ೧೯೯೦ (ವಯಸ್ಸು ೩೪)
ಮೀರತ್, ಉತ್ತರ ಪ್ರದೇಶ, ಭಾರತ
ಅಡ್ಡಹೆಸರುBhuvi[೧]
ಎತ್ತರ5 ft 9 in (175 cm)[೨]
ಬ್ಯಾಟಿಂಗ್Right-handed
ಬೌಲಿಂಗ್Right-arm medium fast
ಪಾತ್ರBowler
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ 276)22 February 2013 v Australia
ಕೊನೆಯ ಟೆಸ್ಟ್24 January 2018 v South Africa
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 194)30 December 2012 v Pakistan
ಕೊನೆಯ ಅಂ. ಏಕದಿನ​21 January 2022 v South Africa
ಅಂ. ಏಕದಿನ​ ಅಂಗಿ ನಂ.15
ಟಿ೨೦ಐ ಚೊಚ್ಚಲ (ಕ್ಯಾಪ್ 45)25 December 2012 v Pakistan
ಕೊನೆಯ ಟಿ೨೦ಐ22 November 2022 v England
ಟಿ೨೦ಐ ಅಂಗಿ ನಂ.15
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2007/08–presentUttar Pradesh
2009–2010Royal Challengers Bangalore
2011–2013Pune Warriors India
2014–presentSunrisers Hyderabad
ವೃತ್ತಿ ಅಂಕಿಅಂಶಗಳು
ಸ್ಪರ್ಧೆ Test ODI T20I FC
ಪಂದ್ಯಗಳು ೨೧ ೧೨೧ ೭೭ ೭೦
ಗಳಿಸಿದ ರನ್ಗಳು ೫೫೨ ೫೫೨ ೬೧ ೨,೪೩೩
ಬ್ಯಾಟಿಂಗ್ ಸರಾಸರಿ ೨೨.೦೮ ೧೪.೧೫ ೧೦.೧೬ ೨೭.೦೩
೧೦೦/೫೦ ೦/೩ ೦/೧ ೦/೦ ೧/೧೪
ಉನ್ನತ ಸ್ಕೋರ್ ೬೩* ೫೩* ೧೬ ೧೨೮
ಎಸೆತಗಳು ೩,೩೪೮ ೫,೮೪೭ ೧,೪೧೫ ೧೨,೩೯೩
ವಿಕೆಟ್‌ಗಳು ೬೩ ೧೪೧ ೮೪ ೨೧೮
ಬೌಲಿಂಗ್ ಸರಾಸರಿ ೨೬.೦೯ ೩೫.೧೧ ೨೩.೩೧ ೨೬.೫೩
ಐದು ವಿಕೆಟ್ ಗಳಿಕೆ ೧೨
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೬/೮೨ ೫/೪೨ ೫/೪ ೬/೭೭
ಹಿಡಿತಗಳು/ ಸ್ಟಂಪಿಂಗ್‌ ೮/– ೨೯/– ೧೦/– ೧೮/–
ಮೂಲ: ESPNcricinfo, 29 November 2022

ಆರಂಭಿಕ ಜೀವನ ಬದಲಾಯಿಸಿ

ಭುವಿ, ಪಶ್ಚಿಮ ಉತ್ತರ ಪ್ರದೇಶದ ಒಂದು ಗುರ್ಜಾರ್ ಕುಟುಂಬಕ್ಕೆ ಸೇರಿದವರಾಗಿದ್ದು, ಮತ್ತು ಮೀರತ್ ನಲ್ಲಿ ಕಿರಣ್ ಪಾಲ್ ಸಿಂಗ್ ಮತ್ತು ಇಂದ್ರೇಶ್ ದ೦ಪತಿಯ ಮಗನಾಗಿ ೫ ಫೆಬ್ರವರಿ ೧೯೯೦ ರಂದು ಜನಿಸಿದರು. ಅವರ ತಂದೆ ಉತ್ತರ ಪ್ರದೇಶದಲ್ಲಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಆಗಿದ್ದರೆ,ಮತ್ತು ಅವರ ತಾಯಿ ಗೃಹಿಣಿ.ತನ್ನ ಸಹೋದರಿ ರೇಖಾ, ಭುವಿ ಅವರನ್ನು ಮೊದಲು ಕ್ರಿಕೆಟ್ ಆಡಲು ಉತ್ತೇಜಿಸಿದರು ಮತ್ತು ಅವರ ೧೩ನೇ ವಯಸ್ಸಿನಲ್ಲಿ ಮೊದಲು ತರಬೇತಿ ಕೇಂದ್ರಕ್ಕೆ ಕರೆದೊಯ್ದರು.

ದಾಖಲೆ ಬದಲಾಯಿಸಿ

  • ಅವರು ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ ೯೭ ಎಸೆತಗಳಲ್ಲಿ ೩೮ ರನ್ ಗಳಿಸಿದ್ದರು.
  • ೩೮ ರನ್ ೧೦ ಸ್ಥಾನದಲ್ಲಿ ಬರುವ ಭಾರತೀಯ ಬ್ಯಾಟ್ಸ್ಮನ್ ಗಳಿಸಿದ ಅತ್ಯಧಿಕ ರನ್ ಆಗಿದೆ.
  • ೨೦೧೩ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಪ್ರವಾಸದ ಮೊದಲ ಪ೦ದ್ಯದ ಸಮಯದಲ್ಲಿ ಧೋನಿ ಅವರೊ೦ದಿಗೆ ೯ ವಿಕೆಟ್ಗೆ ೧೪೦ ರನ್ನುಗಳನ್ನು ಬಾರಿಸಿದ್ದರೆ.
  • ಜುಲೈ ೨೦೧೪ರ ಇಂಗ್ಲೆಂಡ್ ಮತ್ತು ಭಾರತದ ಪ್ರವಾಸದ ೧ನೇ ಟೆಸ್ಟ್ಮನ ಪ್ರತಿ ಇನ್ನಿಂಗ್ಸ್ನಲ್ಲಿ ಒಂದುಅರ್ಧ-ಶತಕವನ್ನು ಗಳಿಸಿದ್ದಾರೆ.

ದೇಶೀಯ ಕ್ರಿಕೆಟ್ ಬದಲಾಯಿಸಿ

ಇವರು ಕೇಂದ್ರ ವಲಯದ ತಂಡದಲ್ಲಿ ತಮ್ಮ ೧೭ನೇ ವಯಸ್ಸಿನಲ್ಲಿ ಬಂಗಾಳ ವಿರುದ್ಧ ಚೊಚ್ಚಲ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದಾರೆ( ದುಲೀಪ್ ಟ್ರೋಫಿ ).ಉತ್ತರ ವಲಯದ ವಿರುದ್ಧ ೨ನೇ ಸೆಮಿಫೈನಲ್ ಪಂದ್ಯದಲ್ಲಿ ೩.೦೩ ಎಕಾನಮಿ ರೇಟ್ ಜೊತೆ ಒಂದು ವಿಕೆಟ್ ಕಬಳಿಸಿದರು. ಒಬ್ಬ ಕೆಳ ಕ್ರಮಾಂಕದ ಆಟಗಾರನಾಗಿಯೂ ೩೧೨ ಎಸೆತಗಳಲ್ಲಿ ೧೨೮ ರನ್ನುಗಳನ್ನು ನಾಲ್ಕನೇ ಕ್ರಮಾಂಕದ ಆಟಗಾರನೊಂದಿಗೆ ಜೊತೆಯಾಟವಾಡಿದ್ದಾರೆ. ಈ ಪಂದ್ಯದಲ್ಲಿ ಅವರಿಗೆ ಪಂದ್ಯಪುರುಷ ಪ್ರಶಸ್ತಿ ನೀಡಲಾಯಿತು.೨೦೦೮/೦೯ ರ ಪ್ರಥಮ ದರ್ಜೆಯ ರಣಜಿ ಪೈನಲ್ ಪ೦ದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಸೊನ್ನೆಗೆ ಉರುಳಿಸಿದ ಪ್ರಥಮಿಗರೆನಿಸಿದರು.

ಅಂತಾರಾಷ್ಟ್ರೀಯ ಕ್ರಿಕೆಟ್ ಬದಲಾಯಿಸಿ

ಪರ್ವಿನ್ದೆರ್ ಅವನ್ , ಅವರು ಇಂಗ್ಲೆಂಡ್ ವಿರುದ್ಧದ ೨೦-೨೦ ಸರಣಿಯಲ್ಲಿ ತೋರಿದ ಕಳಪೆ ಪ್ರದರ್ಶನದಿಂದಾಗಿ, ಇದರಿಂದಾಗಿ ಮುಂದಿನ ಪಂದ್ಯದಲ್ಲಿ ಭುವಿ ಅವರು ಸ್ಥಾನ ಗಳಿಸುವಲ್ಲಿ ಯಶಸ್ವಿಯಾದರು. ಅದು ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆಯಿತು. ಆ ಪಂದ್ಯದಲ್ಲಿ ಅವರು, ೨.೨೫ ಎಕಾನಮಿಯಲ್ಲಿ ೪ ಒವರ್ಗಳಲ್ಲಿ ೯ ರನ್ನುಗಳಿಗೆ ೩ ವಿಕೆಟನ್ನು ಕಬಳಿಸಿದರು. ಇದರ ಮೂಲಕ T೨೦ ಕ್ರಿಕೆಟ್ನಲ್ಲಿ ಅತ್ಯುತ್ತಮ ಬೌಲಿಂಗ್ ದಾಖಲೆಯನ್ನು ಮುರಿದರು.ಏಕದಿನ ಪಂದ್ಯದಲ್ಲಿ ತಮ್ಮ ಮೊದಲ ಎಸೆತಕ್ಕೆ ಪಾಕಿಸ್ತಾನದ ಹಫೀಜ್ ಅವರನ್ನು ಔಟ್ ಮಾಡಿದರು ಮತ್ತು ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು .

ಟೆಸ್ಟ್ ಪಾದಾರ್ಪಣೆ ಬದಲಾಯಿಸಿ

ಇವರ ಮೊದಲ ಟೆಸ್ಟ್ ಬಾರ್ಡರ್ ಗಾವಸ್ಕರ್ ಟ್ರೋಫಿ ೨೦೧೩, ಆಸ್ಟೇಲಿಯಾ ವಿರುದ್ಧದ ೪ ಪಂದ್ಯಗಳ ಸರಣಿಯಲ್ಲಿ ೬ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.

ಉಲ್ಲೇಖನ ಬದಲಾಯಿಸಿ

  1. "Happy Birthday Bhuvneshwar Kumar: Top 5 Bowling Performances by the 'King of Swing'". News 18. 5 February 2022. Retrieved 3 July 2022.
  2. BhuvneshwarKumar’s profile on Sportskeeda