ಭೀಮಾಶಂಕರ ಇದು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು. ಈ ಜ್ಯೋತಿರ್ಲಿಂಗವು ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ಖೇಡ್ ತಾಲೂಕಿನಲ್ಲಿದೆ. ಇದು ಖೇಡದಿಂದ ೫೦ ಕಿ ಮೀ ದೂರದಲ್ಲಿದೆ, ಪುಣೆ ನಗರದಿಂದ ೧೧೦ ಕಿಮೀ ದೂರದಲ್ಲಿದೆ. ಇದು ಸಹ್ಯಾದ್ರಿ ಪರ್ವತ ಶ್ರೇಣಿಯ ಘಟ್ಟ ಪ್ರದೇಶದಲ್ಲಿದೆ. ಮಹಾರಾಷ್ಟ್ರದಲ್ಲಿರುವ ಇತರ ಜ್ಯೋತಿರ್ಲಿಂಗಗಳೆಂದರ್ ತ್ರಯಂಬಕೇಶ್ವರ ಮತ್ತು ಘೃಷ್ಣೇಶ್ವರ. ಭೀಮಾಶಂಕರ ಇದು ಭೀಮಾ ನದಿಯ ಉಗಮ ಸ್ಥಾನವಾಗಿದೆ, ಈ ನದಿಯು ಕೃಷ್ಣಾ ನದಿಯ ಉಪನದಿಯಾಗಿದ್ದು, ಕೃಷ್ಣೆಯನ್ನು ರಾಯಚೂರಿನ ಬಳಿ ಸೇರುತ್ತದೆ. ಇಲ್ಲಿ ಭೀಮಾಶಂಕರ ಕಾಡುಮೃಗಗಳ ಅಭಯಾರಣ್ಯವೂ ಇದೆ. (ನೋಡಿ :ಭೀಮಾಶಂಕರ ದೇವಾಲಯ) -ಚರ್ಚೆಪುಟ:ಭೀಮಾಶಂಕರ

Bhimashankar Shiva Mandir

ಹೆಸರು: Bhimashankar Shiva Mandir
ಪ್ರಮುಖ ದೇವತೆ: Bhimashankar(Shiva)
ವಾಸ್ತುಶಿಲ್ಪ: Nagara
ಸ್ಥಳ: Bhimashankar