ಭಾವಗೀತೆಗಳಲ್ಲಿ ವಿವಿಧತೆ

ಶತಕಗಳಲ್ಲಿ ಭಾವಗೀತೆ

ಬದಲಾಯಿಸಿ

ಶುದ್ಧ ಭಾವಗೀತೆಯಾಗಿ[] ನಿಲ್ಲುವ ಶಕ್ತಿಯನ್ನೂ ಅವಕಾಶ ವೈಫಲ್ಯವನ್ನು ಪಡೆದುಕೊಂಡ ಮತ್ತೊಂದು ಸಾಹಿತ್ಯ ರೂಪ ಶತಕ.ಭಕ್ತಿಯ ಸಾಧನೆ ಬೊಧನೆಗಳ ನಿವ೯ಹಣೆಯಲ್ಲಿ ವಚನಗಳು ವಹಿಸಿದ ಪಾತ್ರವನ್ನೇ ಶತಕಗಳು ವಹಿಸಿವೆ.ಅನೇಕ ಪದ್ಯಗಳಲ್ಲಿ ತಮ್ಮ ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಗೊಳಿಸುವುದೋ,ಯಾವುದಾದರ ವಿಷಯಗಳನ್ನು ಬೊಧಿಸುವುದೋ ಶತಕ ಸಾಹಿತ್ಯದ ಸಾಮಾನ್ಯ ಗುಣಗಳು.ಕವಿ ತ್ನ್ನ ಮನಸ್ಸಿನ ವಿವಿಧ ಭಾವನೆಗಳಿಗೆ ಕಾವ್ಯಮಯವಾದ ಅಭಿವ್ಯಕ್ತಿಯನ್ನು ನೀಡಿದಾಗ ಅಲ್ಲಿ ನಾವು ಸಾಹಿತ್ಯವನ್ನು ಕಾಣುತ್ತೇವೆ.ಕನ್ನಡದಲ್ಲಿ ಅತ್ಯಂತ ಉತ್ತಮವಾದ ಕೃತಿಗಳನ್ನು ಶತಕದಲ್ಲಿ ರಚಿಸಿರುವ ಕೀತಿ೯ ಹಂಪೆಯ ಹರಿಹರನಿಗೆ ಸಲ್ಲುತ್ತದೆ.ಅವನ ಶತಕಗಳಿಗೆ ಅತ್ಯಂತ ಮಹತ್ವವಿದೆ.ಅದು ಅವನ ತುದಿನಾಲಿಗೆಯಿಂದ ಬಂದಿದ್ದಲ್ಲ,ಅದು ಅವನ ಅಂತರಾತ್ಮದ ವಾಣಿ. ಈ ರೀತಿಯ ಭಾವನೆಗಳು ಅವನ ಮನಸ್ಸಿನ ನೋವು ,ನಲಿವುಗಳ ಅನುಭವಗಳಿಂದ ಭಾವಗೀತೆಯಾಗಿ ಹೊರಬಂದಿದೆ.

ಹಂಪೆಯ ಹರಿಹರ

ಬದಲಾಯಿಸಿ

ರಗಳೆಗಳಲ್ಲಿ ಭಾವಗೀತೆ ಕಾವ್ಯವನ್ನು ಸಂಪೂಣ೯ವಾಗಿ ರಗಳೆಯ ಛಂಧಸ್ಸಿನಲ್ಲಿ ಯಶಸ್ವಿಯಾಗಿ ನಿವ೯ಹಿಸಿದ ಕವಿ ಹಂಪೆಯ ಹರಿಹರ.ಅನೇಕ ಶಿವಶರಣರ ಕಥೆಯನ್ನೂ ಎದೆ ತುಂಬಿ ಹಾಡಿದ್ದಾರೆ.ಹರಿಹರನ ಪ್ರಮುಕವಾದ ಶಕ್ತಿ ಭಕ್ತಿ. ಈ ಸಹಜ ಕವಿಯ ಹೃದಯ ನೂರಾರು ಭಕ್ತರ ಜೀವನದ ರೋಮಾಂಚಕರವಾದ ಘಟನೆಗಳನ್ನು ಪುನರನುಭವವನ್ನು ಯಥಾವತ್ತಾಗಿ ಪಡೆದಿದೆ.ಇವನ ಒಂದೊಂದು ರಗಳೆಯೂ ಭಾವದೀಪ್ತವಾದ ಒಂದೊಂದು ಕಥನ ಕವನ ರೂಪವಾಗಿ ಮೂಡಿಬಂದಿದೆ.'ಪುಷ್ಪಾರಗಳೆ' ಅವನ ಜೀವನದ ಭಕ್ತಿ ಸಾಧನೆಯನ್ನು ರಸಪೂಣ೯ವಾಗಿ ಚಿತ್ರಿಸಿದ್ದಾರೆ.

ಜಾನಪದ ಸಾಹಿತ್ಯ

ಬದಲಾಯಿಸಿ

ಜಾನಪದ ಭಾವಗೀತೆಗಳು ತನ್ನ ದೈನಂದಿನ ಸಮಾನ್ಯ ಭೂಮಿಕೆಯಲ್ಲಿ ಸಹಸ್ರಾರು ಹೃದಯಗಳ ಅನುಭವವಾಗಿ,ಸಹಸ್ರಾರು ಕಂಠಗಳ ಮೂಲಕ ಬಿಂದುರೂಪದಲ್ಲಿಯೂ ಚಿಮ್ಮುತ್ತದೆ.ಸತ್ಯದ ಸಾಧನೆ,ಸೌಂದಯ೯ದ ಅನುಭೂತಿ.ಈ ಪದ್ಯಗಳಲ್ಲಿ ಸುಷ್ಟಿಯ ಸತ್ಯ ,ಸೌಂದಯ೯ಗಳನ್ನು ,ಹಾಗೇಯೇ ಸಾಂಸಾರಿಕ ಜೀವನದ ದೈನಂದಿನ ಅನುಭವಗಳು ನುಡಿಯ ಪರಿಪೂಣ೯ತೆಯನ್ನು ಮುಟ್ಟಿಯೋ ಮುಟ್ಟದಯೋ ಇರಬಹುದಾದ ಕಲೆ ಅಸಂಖ್ಯಾತವಾದ ರೂಪದಲ್ಲಿ ಸಾಮಾನ್ಯ ಜನರ ನಡುವೆ ಕಾವ್ಯರೂಪವನ್ನು ತಳೆದು ಉಳಿದಿದೆ.ಇದನ್ನೇ ನಾವು ಜಾನಪದ ಸಾಹಿತ್ಯ ಎಂದು ಕರೆಯುತ್ತೇವೆ.

ಹೊಸಗನ್ನಡದ ಭಾವಗೀತೆಗಳು

ಬದಲಾಯಿಸಿ

ಹೊಸಗನ್ನಡದ ಭಾವಗೀತೆಗಳು ಶತಮಾನಗಳ ಹಳೆಯತನವನ್ನು ಕಿತ್ತೂಗೆಯಲು ಅಂತರಂಗದಲ್ಲಿಯೂ ಮಹಾಕ್ರಾಂತಿ ನಡೆಯುತ್ತಿತ್ತು. ಕಾವ್ಯ-ಭಾವಗೀತೆಗಳ ಕನ್ನಡ ಸಾಹಿತ್ಯ ಲೋಕಕ್ಕೆ ಕಾಣಿಕೆಯಾಗಿ ಬಿ.ಎಂ ಶ್ರೀಕಂಠಯ್ಯನವರು.ಅವರ "ಇಂಗೀಷ್ ಗೀತಗಳು" ಆಧುನಿಕ ಕನ್ನಡ ಕಾವ್ಯಪ್ರಪಂಚಕ್ಕೆ ಹೊಸದೊಂದು ಹೆದ್ದಾರಿಯನ್ನು ತೆರೆದು ಚಿರಂಜೀವಿಯಾಗವ ಸತ್ವವನ್ನು ತೆಳೆದಿರುವ ಕೃತಿ.

ಉಲ್ಲೇಖಗಳು

ಬದಲಾಯಿಸಿ
  1. "ಭಾವಗೀತೆಗಳು". Archived from the original on 2014-12-30. Retrieved 2014-06-08.

<References / >