ಭಾರತೀಯ ಪರಿಷತ್ ಅಧಿನಿಯಮ ೧೯೦೯

ಭಾರತೀಯ ಪರಿಷತ್ ಅಧಿನಿಯಮ-೧೯೦೯(ಇಂಡಿಯನ್ ಕೌನ್ಸಿಲ್ ಆಕ್ಟ್) ಸಾಮಾನ್ಯವಾಗಿ ಮಿಂಟೋ-ಮಾರ್ಲೆ ಸುಧಾರಣೆ ಎಂದೂ ಪ್ರಸಿದ್ಧಿಯಾಗಿದೆ. ಯುನೈಟೆಡ್ ಕಿಂಗ್ಡಮ್ ನ ಬ್ರಿಟಿಷ್ ಸಂಸತ್ತಿನಲ್ಲಿ ಜಾರಿಯಾದ ಈ ಅಧಿನಿಯಮ ಭಾರತದ ಬ್ರಿಟಿಷ್ ಸರ್ಕಾರದಲ್ಲಿ ಹಂತ ಹಂತವಾಗಿ ಭಾರತೀಯರ ಸಹಭಾಗಿತ್ವವವನ್ನು ಹೆಚ್ಚಿಸುವ ಅಂಶಗಳನ್ನು ಒಳಗೊಂಡಿದ್ದಿತು.

ಪ್ರಮುಖ ಅಂಶಗಳು ಬದಲಾಯಿಸಿ

ಮಿಂಟೋ-ಮಾರ್ಲೆ ಸುಧಾರಣೆಯ ಮೂಲಕ ಭಾರತೀಯ ಪರಿಷತ್ ಅಧಿನಿಯಮ ೧೮೬೧ ಹಾಗು ಭಾರತೀಯ ಪರಿಷತ್ ಅಧಿನಿಯಮ ೧೮೯೨ ತಿದ್ದುಪಡಿಯೂ ಆದಂತಾಯಿತು[೧].

  • ಕೇಂದ್ರ ಹಾಗು ದೇಶಿಯ ಸಂಸ್ಥಾನಗಳ ವಿಧಾನ ಪರಿಷತ್ ಸದಸ್ಯರುಗಳು ನಾಲ್ಕು ವಿವಿಧ ಆಯ್ಕೆಯ ಅನುಸಾರ ಆಯ್ಕೆಯಾದವರಾಗಿರುತ್ತಾರೆ,
೧. ಮಾಜಿ ಗವರ್ನರ್ ಜನರಲ್ ಅಥವಾ ಅವರ ಕಾರ್ಯ ನಿರ್ವಾಹಕ ಪರಿಷತ್ ನ ಸದಸ್ಯರು.
೨. ನಾಮ ನಿರ್ದೇಶಿತ ಸರ್ಕಾರಿ ಅಧಿಕಾರಿಗಳು (ಗವರ್ನರ್ ಜನರಲ್ ಅವರಿಂದ ನಾಮನಿರ್ದೇಶಿತವಾಗುವ ಸರ್ಕಾರದಲ್ಲಿ ಅಧಿಕಾರಿ ಸ್ತರವನ್ನು ಅಲಂಕರಿಸಿರುವ ವ್ಯಕ್ತಿಗಳು).
೩. ನಾಮ ನಿರ್ದೇಶಿತ ಸಾಮಾನ್ಯರು (ಗವರ್ನರ್ ಜನರಲ್ ಅವರಿಂದ ನಾಮನಿರ್ದೇಶಿತವಾಗುವ ಸರ್ಕಾರದಲ್ಲಿ ಯಾವುದೇ ಸ್ಥಾನ ಅಲಂಕರಿಸದ ವ್ಯಕ್ತಿಗಳು).
೪. ಚುನಾಯಿತ ಸದಸ್ಯರು (ಭಾರತದ ವಿವಿಧಜಾನ ಸಮೂಹದಿಂದ ಚುನಾಯಿತರಾದ ವ್ಯಕ್ತಿಗಳು).
  • ಕೇಂದ್ರದ ವಿಧಾನ ಪರಿಷತ್ ನಲ್ಲಿ ನಾಮನಿರ್ದೇಶಿತ ಹಾಗು ಚುನಾಯಿತ ಸದಸ್ಯರ ಸಂಖ್ಯೆಗಿದ್ದ ಮಿತಿಯನ್ನು ೧೬ ರಿಂದ ೬೦ಕ್ಕೆ ಏರಿಸಲಾಯಿತು. (ಮಾಜಿ ಸದಸ್ಯರನ್ನು ಹೊರತು ಪಡಿಸಿ)
  • ಗವರ್ನರ್ ಅಥವಾ ಲೆಫ್ಟಿನಂಟ್ ಗವರ್ನರ್ ಗಳ ಕೈ ಕೆಳಗಿನ ಸಂಸ್ಥಾನಗಳ ವಿಧಾನ ಪರಿಷತ್ ಗೆ ಚುನಾಯಿತ ಹಾಗು ನಾಮನಿರ್ದೇಶಿತ ಸದಸ್ಯರ ಸಂಖ್ಯೆಗಿದ್ದ ಮಿತಿಯನ್ನು ಏರಿಕೆ ಮಾಡಲಾಯಿತು. ಬಂಗಾಳ, ಬಾಂಬೆ, ಮದ್ರಾಸ್, ಸಂಯುಕ್ತ ಸಂಸ್ಥಾನಗಳು ಹಾಗು ಪೂರ್ವ ಬಂಗಾಳ ಮತ್ತು ಅಸ್ಸಾಂ ಗಳಿಗೆ ಸಂಬಂಧಿಸಿದಂತೆ ಈ ಸಂಖ್ಯೆ ೫೦ ನಿಗದಿಯಾದರೆ ಪಂಜಾಬ್, ಬರ್ಮಾ ಹಾಗು ಇನ್ನು ಮುಂದೆ ರಚನೆಯಾಗುವ ಯಾವುದೇ ಲೆಫ್ಟಿನಂಟ್ ಗವರ್ನರ್ ಗಳ ಕೆಳಗಿನ ಸಂಸ್ಥಾನಗಳಿಗೆ ಈ ಸಂಖ್ಯೆ ೩೦ ಎಂದು ನಿಗದಿಯಾಯಿತು[೨]. .
  • ಮುಸಲ್ಮಾನರಿಗೆಂದೇ ಪ್ರತ್ಯೇಕ ಮತಕ್ಷೇತ್ರಗಳನ್ನು ಕೊಡಲಾಯಿತು[೩].
  • ಸರ್ಕಾರಿ ಸದಸ್ಯರು ಬಹು ಸಂಖ್ಯೆಯಲ್ಲಿದ್ದರೂ ಸಂಸ್ಥಾನಗಳಲ್ಲಿ ಸರ್ಕಾರೇತರ ಸದಸ್ಯರು ಬಹುಸಂಖ್ಯೆಯಲ್ಲಿ ಇರಬಹುದಾಗಿತ್ತು.
  • ವಿಧಾನ ಪರಿಷತ್ ನ ಸದಸ್ಯರಿಗೆ ಅಯ-ವ್ಯಯ ಕುರಿತು ಚರ್ಚಿಸುವ, ಸಲಹೆಗಳನ್ನು ನೀಡುವ ಹಾಗು ತಿದ್ದುಪಡಿಗಳಿಗೆ ಆಗ್ರಹಿಸುವ ಹಕ್ಕನ್ನು ಕೊಡಲಾಗಿತ್ತು. ಬ್ರಿಟಿಷ್ ಸಂಸತ್ತು ಕೆಲವು ವಿಚಾರಗಳನ್ನು ಮತ ವ್ಯಾಪ್ತಿಯಿಂದ ಹೊರಗಿಟ್ಟು ಇನ್ನುಳಿದವುಗಳಿಗೆ ಮತದ ಮುಖಾಂತರ ವಿಧಾನ ಪರಿಷತ್ ಸದಸ್ಯರು ಒಪ್ಪಿಗೆ ಸೂಚಿಸಲು ಅಧಿಕಾರವನ್ನು ಕೊಡಮಾಡಲಾಗಿತ್ತು.
  • ಭಾರತದ ರಾಜ್ಯ ಕಾರ್ಯದರ್ಶಿಗಳಿಗೆ ಮದ್ರಾಸ್ ಹಾಗು ಬಾಂಬೆ ಪ್ರಾಂತಗಳ ಕಾರ್ಯನಿರ್ವಾಹಕ ಪರಿಷತ್ ಗಳ ಸಂಖ್ಯೆಯನ್ನು ೨ ರಿಂದ ೪ ಕ್ಕೆ ಏರಿಸುವ ಅಧಿಕಾರ ಕೊಡಲಾಯಿತು.
  • ಭಾರತೀಯ ವ್ಯವಹಾರಗಳ ರಾಜ್ಯ ಕಾರ್ಯದರ್ಶಿಗಳ ಪರಿಷತ್ ಗೆ ಇಬ್ಬರು ಭಾರತೀಯರನ್ನು ನಾಮ ನಿರ್ದೇಶನ ಮಾಡಲಾಯಿತು.
  • ಭಾರತದ ಗವರ್ನರ್ ಜೆನರಲ್ ಅವರಿಗೆ ತಮ್ಮ ಕಾರ್ಯನಿರ್ವಾಹಕ ಪರಿಷತ್ ಗೆ ಒಬ್ಬ ಭಾರತೀಯನನ್ನು ನೇಮಿಸಿಕೊಳ್ಳಲು ಅಧಿಕಾರ ಕೊಡಲಾಯಿತು.

ಇವನ್ನೂ ನೋಡಿ ಬದಲಾಯಿಸಿ

ಬಾಹ್ಯ ಸಂಪರ್ಕಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. ಭಾರತ ಸರ್ಕಾರದ "ಅಪೆಂಡಿಕ್ಸ್ ೧: ಇಂಡಿಯನ್ ಕೌನ್ಸಿಲ್ ಆಕ್ಟ್ ೧೯೦೯". ಕ್ಲಾರ್ಡನ್ ಪ್ರೆಸ್ ೧೯೦೭. pp 427
  2. ಭಾರತ ಸರ್ಕಾರದ "ಅಪೆಂಡಿಕ್ಸ್ ೧: ಇಂಡಿಯನ್ ಕೌನ್ಸಿಲ್ ಆಕ್ಟ್ ೧೯೦೯". ಕ್ಲಾರ್ಡನ್ ಪ್ರೆಸ್ ೧೯೦೭. pp 430
  3. ಜೇಮ್ಸ್ ಸ್ಟುರಾಟ್ ಓಲ್ಸೊನ್; ರಾಬರ್ಟ್ ಶಾಡಲ್ (1996). ಐತಿಹಾಸಿಕ ಬ್ರಿಟಿಷ್ ಸಾಮ್ರಾಜ್ಯದ ಡಿಕ್ಷನರಿ. ಗ್ರೀನ್ ವುಡ್ ಪಬ್ಲಿಷಿಂಗ್ ಗ್ರೂಪ್. pp. 759–. ISBN 978-0-313-29367-2. ಮಿಂಟೋ-ಮಾರ್ಲೆ ಸುಧಾರಣೆ ಹುಟ್ಟುಹಾಕಿದ ಧರ್ಮಗಳ ಕಂದಕ, ವಿಸ್ಮೃತ ಆಂಗ್ಲ ಲೇಖನ.