ಭಾರತೀಯ ದರ್ಶನಗಳು (ಪುಸ್ತಕ)

ಭಾರತೀಯ ದರ್ಶನಗಳು ದೇವಿಪ್ರಸಾದ್ ಚಟ್ಟೋಪಾಧ್ಯಾಯ[ಶಾಶ್ವತವಾಗಿ ಮಡಿದ ಕೊಂಡಿ] ಯವರು ಬರೆದ ಪುಸ್ತಕ. ಕನ್ನಡಕ್ಕೆ ಅನುವಾದ : ಕಕ್ಕಿಲ್ಲಾಯ ಬಿ ವಿ.

ಭಾರತೀಯ ದರ್ಶನಗಳು
ಲೇಖಕರುದೇವಿಪ್ರಸಾದ್ ಚಟ್ಟೋಪಾಧ್ಯಾಯ
ಅನುವಾದಕಕಕ್ಕಿಲ್ಲಾಯ ಬಿ ವಿ
ದೇಶಭಾರತ
ಭಾಷೆಕನ್ನಡ
ವಿಷಯತತ್ವಶಾಸ್ತ್ರ
ಪ್ರಕಾಶಕರುನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨೦೧೪, ೩ನೆ ಮುದ್ರಣ
ಪುಟಗಳು272
ಐಎಸ್‍ಬಿಎನ್9788173021534

ಇದು ಭಾರತೀಯ ದರ್ಶನಗಳಲ್ಲಿನ ಹಲವು ತತ್ವಶಾಸ್ತ್ರದ ಶಾಖೆಗಳನ್ನು ಉಲ್ಲೇಖಿಸಿ, ಚರ್ಚಿಸಿ ಪರಾಮರ್ಶಿಸಿ ಬರೆದ ಡಾ|| ದೇವಿಪ್ರಸಾದ ಚಟ್ಟೋಪಾಧ್ಯಾಯರ ಆಂಗ್ಲ ಕೃತಿಯೊಂದರ ಅನುವಾದ. ಪ್ರಪಂಚದಾದ್ಯಂತ ಅನೇಕ ತತ್ವಶಾಸ್ತ್ರಜ್ಞರು ತಂತಮ್ಮ ಕಾಲ-ದೇಶಗಳಿಗೆ ಅನುಸಾರವಾಗಿ ದಾರ್ಶನಿಕ ಪರಂಪರೆಯೊಂದಿಗೆ ತತ್ವಶಾಸ್ತ್ರವನ್ನು ವ್ಯಾಖ್ಯಾನಿಸಿದ್ದಾರೆ. ಅಂತೆಯೇ ಭಾರತದಲ್ಲೂ ಷಡ್‍ದರ್ಶನಗಳೆಂಬ ವೈದಿಕ ತತ್ವಶಾಸ್ತ್ರದ ಆಧಾರದಿಂದ ಹುಟ್ಟಿಬೆಳೆದು ಮುಂದೆ ಸಾಗಿ ಒಂದಕ್ಕಿಂತ ಇನ್ನೊಂದು ಭಿನ್ನವಾಗಿ ಶಾಖೋಪಶಾಖೆಗಳಾಗಿ ಹರಡಿ ಗೊಂದಲವನ್ನೇ ಸೃಷ್ಟಿಸಿವೆ. ಅಲ್ಲಿನ ಉತ್ತಮ ವಿಚಾರಗಾಳನ್ನು ಶ್ಲಾಘಿಸಿದಂತೆಯೇ ಕಾಳಿಂದ ಜೊಳ್ಳನ್ನು ಬೇರ್ಪಡಿಸುವ ಮತ್ತು ವಿಶ್ಲೇಷಣೆ-ಚಿಂತನೆಗಳಿಂದ ಸರಿಯಾದುದನ್ನು ಅಳೆದು ತೂಗಿ ನೋಡುವ ಕೆಲಸವೂ ನಡೆಯಿತು. ಅಂಥವರಲ್ಲಿ ಅಗ್ರಮಾನ್ಯರೆಂದು ಪರಿಗಣಿತರಾದವರು ಡಾ|| ದೇವಿಪ್ರಸಾದ್ ಚಟ್ಟೋಪಾಧ್ಯಾಯರು. ಭಾರತೀಯ ತತ್ವಶಾಸ್ತ್ರದ ಪರಿಚಯಾತ್ಮಕ ಗ್ರಂಥವೊಂದನ್ನು ಬರೆದು ಮಾರ್ಕ್ಸ್‌ವಾದಿ ದೃಷ್ಟಿಕೋನದಿಂದ ವಿಮರ್ಶಿಸಿದಾಗ ಎಲ್ಲರ ಗಮನವೂ ಅದರತ್ತ ಹರಿದು ಅವರ ಚಿಂತನೆಗಳಿಗೆ ವಿದ್ವತ್ ವಲಯದಿಂದ ಮನ್ನಣೆ ದೊರೆಯಿತು. ಅವರ ವಿಚಾರಗಳನ್ನು ಈ ಕೃತಿಯ ಅನುವಾದದೊಂದಿಗೆ ಓದಿ ಸವಿಯುವ ಅವಕಾಶ ಇದೀಗ ಕನ್ನಡಿಗರಿಗೆ ಲಭಿಸಿದೆ.

ಬಾಹ್ಯ ಸಂಪರ್ಕ ಬದಲಾಯಿಸಿ