ಭಾರತದ ಬ್ಯಾಂಕಿನ ವ್ಯವಸ್ಥೆ

(ಭಾರತದ ಬ್ಯಾ೦ಕಿನ ವ್ಯವಸ್ಥೆ ಇಂದ ಪುನರ್ನಿರ್ದೇಶಿತ)

{{merge karnatak ಬ್ಯಾಂಕಿಂಗ್}}

ಬ್ಯಾಂಕ್

ಬ್ಯಾಂಕ್ ಅನ್ನುವ ಶಬ್ದ ಇಂಗ್ಲೀಷ್ ಭಾಷೆಗೆ ಸೇರಿದಲ್ಲ. ಅದರ ಮೂಲ ಜರ್ಮನ್ ಭಾಷೆಯ ಬಂಕ್ ಅನ್ನುವ ಶಬ್ದದಲ್ಲಿ ಅಡಗಿದೆ. ಹಿಂದೆ ಜರ್ಮನಿಯಲ್ಲಿ ಜೂಜಾಡುವಾಗ ಹಣವನ್ನು ಒಂದಡೆ ಸಂಗ್ರಹಿಸಿ ಇಟ್ಟು, ವಿಜೇತರಿಗೆ ಹಣವನ್ನು ಎಣಿಸಿಕೊಡುವಾಗ 'ಬಂಕ್' ಅನ್ನುವ ಬೆಂಚಿನಂತಹ ಸ್ವಲ್ಪ ಇಳಿಜಾರು ಮರದ ವಸ್ತುವಿನ ಮೇಲೆ ನಾಣ್ಯಗಳನ್ನು ಜಾರಿಸಿ ಕೊಡುತ್ತಿದ್ದರು. ಕಾಲಾನಂತರ ಬಂಕ್ 'ಬ್ಯಾಂಕ್' ಆಗಿ ಪರಿವರ್ತಿತವಾಯಿತು. ಇವತ್ತು ವಿಶ್ವದಾದ್ಯಂತಹ ಹಣಕಾಸಿನ ಲೇವಾದೇವಿ ನಡೆಸುವ ಸಂಸ್ತೆಗಳನ್ನು ಬ್ಯಾಂಕ್ ಎಂದೇ ಕರೆಯುತ್ತಾರೆ. ಬ್ಯಾಂಕ್ ಅನ್ನುವ ಶಬ್ದವನ್ನು ಕೇಳಿದರೆ. ಹಣ ಮತ್ತು ಕೌಂಟರುಗಳ ಹಿಂದೆ ಹಣವನ್ನು ಎಣಿಸುವ ಚಿತ್ರ ಕಣ್ಣುಮುಂದೆ ಬರುತ್ತದೆ.


ಬ್ಯಾಂಕ್ ಎಂದರೇನು?

ಕೆಲ ಪ್ರವರ್ತಕರು ತಮ್ಮ ಪಾಲಿನ ವಂತಿಗೆಯನ್ನು (ಶೇರು ಬಂಡವಾಳ) ಸೇರಿಸಿ, ಸರಕಾರದ ಕಂಪನಿ ಕಾಯ್ದೆಯ ಮೇರೆಗೆ ಬ್ಯಾಂಕ್ ಅನ್ನುವ ಹಣಕಾಸಿನ ಸಂಸ್ಥೆಯೊಂದನ್ನು ಸ್ಥಾಪಿಸಿ, ಸಾರ್ವ ಜನಿಕರಿಂದ ಠೇವಣೆ ರೂಪದಲ್ಲಿ ಹನವನ್ನು ಕೆಲ ಅವಧಿಯ ಮೇರಿಗೆ ತಮ್ಮ ಇಟ್ಟುಕೊಂಡು, ಸಾಲದ ಅವಶ್ಯವಿರುವ ಉದ್ದಿಮೆದಾರರಿಗೂ ಮತ್ತು ವ್ಯಾಪಾರಿಗಳಿಗೂ, ಅಲ್ಪಕಾಲದವರೆಗೆ ಸಾಲವನ್ನು ಕೊಡುತ್ತಾರೆ. ಬ್ಯಾಂಕಿನವರು ಠೇವಣಿ ಇಟ್ತ ಗ್ರಾಹಕರಿಗೆ ಕಡಿಮೆ ಬಡಿಯನ್ನಿಟ್ಟು ಸಾಲಗಾರರಿಂದ ತಾವಿತ್ತ ಸಾಲಕ್ಕೆ ಹೆಚ್ಚು ಬಡಿಯನ್ನು ಪಡೆಯುತ್ತಾರೆ. ಈ ಹೆಚ್ಚಿನ ಬಡ್ಡಿಯನ್ನು ಬ್ಯಾಂಕುಗಳು ತಮ್ಮೆ ಕಾರ್ಯನಿರ್ವಹನೆಗೆ ವ್ಯಯಿಸುತ್ತವೆ. ನಿಜವಾಗಿ ನೂಡಿದರೆ, ಬ್ಯಾಂಕುಗಳಲ್ಲಿ ಹೆಚ್ಚಿನ ಹಣವೆಲ್ಲವು ಠೇವಣಿದಾರರದು. ಆದರೆ, ಅವರಿಗೆ ಬ್ಯಾಂಕಿನ ಆಡಳಿತದಲ್ಲಿ ಯಾವ ಸ್ಥಾನವು ಇಲ್ಲ. ಅದೆ ಶೇರ್ ಹೊಂದಿದ್ದರೆ, ಅವರು ಬ್ಯಾಂಕಿನ ವಾರ್ಷಿಕ ಸಭೆಯಲ್ಲಿ ಬ್ಯಾಂಕಿನವರನ್ನು ಪ್ರಶ್ನಿಸಬಹುದು, ಕಾರಣ, ಬ್ಯಾಂಕುಗಳಿಗೆ ಯಾವ ಶೆರು ಹಣವನ್ನು ಕೊಡುತ್ತಾರೋ ಅವರೇ ಒಡೆಯರು, ಸಾಲಗಳನ್ನು ಕೊಡುವಾಗ ಬ್ಯಾಂಕಿನವರು ಸಾಲಗಳನ್ನು ಕುದುರೆ ಜೂಜಿಗೆ, ಸಟ್ಟಾ ವ್ಯಾಪಾರಕ್ಕೆ ಕೊಡುವಂತಿಲ್ಲ. ಬ್ಯಾಂಕುಗಳ ಸಾಲವನ್ನು ಉತ್ಪಾದನಾ ಉದ್ದೇಶಕ್ಕೆ ಕೊಡಬೇಕೆಂಬ ನಿರ್ಬಂದವಿದೆ. ಮೊದಲು ಬ್ಯಾಂಕಿನವರು ದೀರ್ಘಾವಧಿ ಕಾಲದವರೆಗೆ ಸಾಲಗಳನ್ನು ಕೊಡುವಂತಿಲ್ಲ. ಈಚೆಗೆ ದೇಶದ ಕೇಂದ್ರ ಬ್ಯಂಕ್ ಎಂದು ಕರೆಸಿಕೊಳ್ಳುವ ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಗೆ ಧೀರ್ಘಾವಧಿ ಸಾಲವನ್ನು ಕೊಡಲು ಅನುಮತಿಯನ್ನಿತ್ತಿದೆ. ಬ್ರಿಟಿಷರು ಈ ದೇಶಕ್ಕೆ ಬಂದ ಮೇಲೆ ಬ್ರಿಟಿಷ್ ಮಾದರಿಯ ಬ್ಯಾಂಕಿಂಗ್ ಸಂಸ್ಥೆಗಳು ಸ್ಥಾಪಿತ ಗೊಂಡವು. ಬ್ಯಾಂಕುಗಳು ಹುಟ್ಟುವ ಪೂರ್ವದಲ್ಲಿ ಜಮೀನುರಾದರು, ಸಾಹುಕಾರರು, ಮಾರವಾಡಿಗಳು, ಗುಜರಾತಿಗಳು, ಪಾರ್ಸಿಗಳು, ಜೈನರು, ಪಠಾಣರು, ಪರ್ಷಿಯ ಕಡೆಯಿಂದ ಬರುತ್ತಿದ ಮುಲ್ತಾನಿಗಳು, ದಕ್ಶಿಣದಲ್ಲಿ ಚೆಟ್ಟಿಯಾರರು ಹಣದ ಅವಶ್ಯಕತೆ ಇದ್ದವರಿಗೆ ಸಾಲವನ್ನು ಒದಗಿಸುತ್ತಿದ್ದರು. ಸಾಹುಕಾರರು ಸಾಲವನ್ನೀಯುವಾಗ ಸಾಲಗಾರರಿಂದ ಭದ್ರತೆ ಅಥವ ಅಡವು ಪಡೆಯುತ್ತಿದ್ದರು. ಇದು ಸಾಲವೆ ಗಿರವಿ ಅಂಗಡಿಗಳಲ್ಲಿ ಪದಾರ್ಥಗಲನ್ನು ಅಥವಾ ಬೆಳ್ಳಿ-ಬಂಗಾರದ ವಸ್ತುಗಳನ್ನು ಒತ್ತೆಯಾಗಿಟ್ಟುಕೊಂಡು ಸಾಲ ಕೊಡುವುದನ್ನು ನಾವು ಇಂದಿಗು ನೂಡುತ್ತೇವೆ. ಆದರೆ, ಈ ಸಾಲದ ವ್ಯವಸ್ಥೆ ಅಸಂಘಟಿತ ವಲದಲ್ಲಿ ನಡೆಯುತ್ತಿದ್ದುದರಿಂದ ಬಡ್ದಿಯ ದರ ಹೆಚ್ಚಿರುತ್ತಿತು. ಈ ರೀತಿ ಸಾಲ ಪಡೆದು ಬಡ್ಡಿಯನ್ನು ಕೊಡುವುದರಲ್ಲಿ ಅನೇಕ ಸಂಸಾರಗಳೆ ಹಾಳಾದವು. ಇದರಿಂದ ಸರಕಾರವು ಖಾಸಗಿ ಸಾಲಗಳನ್ನೇ ನಿರ್ಬಂಧಿಸಿತು. ಸರಕಾರದ ಅನುಮತಿ ಪಡೆದ ಕೆಲವು ಗಿರವಿ ಅಂಗಡಿಗಳು ಅಲ್ಲಲ್ಲಿ ಕಣ್ಣಿಗೆ ಕಾಣುತ್ತವೆ. ಬ್ಯಾಂಕುಗಳೂ ಬಂಗಾರವನ್ನು ಅಡವಿಟ್ಟುಕೊಂಡು ಸಾಲವನ್ನು ಕೊಡುತ್ತವೆ. ಬಂಗಾರದ ಆಭರಣಗಳ ಮೇಲೆ ಸಾಲ ನೀಡುವ ಖಾಸಗಿ ಹಣಕಾಸು ಸಂಸ್ಥೆಗಳು ಈಗ ಸಹಸ್ರಾರು ಶಾಖೆಗಳನ್ನು ತೆರೆದಿರುವುದನ್ನು ನೋಡಬಹುದು. ಬ್ಯಾಂಕ್ ಸಾಲಿಗನೂ ಹೌದು ಮತ್ತು ಸಾಲಗಾರನೂ ಹೌದು. ಬ್ಯಾಂಕ್ ಠೇವಣಿ ಪಡೆಯುವದರಿಂದ, ಸಾಲಗಾರನಾಗುತ್ತದೆ, ಸಾಲವನ್ನು ಕೊಡುವದರಿಂದ ಸಾಲಿಗನೂ ಆಗುತ್ತದೆ. ಕ್ರೌಥರ್ ಅನ್ನುವ ಅರ್ಥಶಾಸ್ತ್ರಗ್ನನು ಬ್ಯಾಂಕುಗಳೆಂದರೆ ಉದ್ದರಿಯನ್ನು ಸೃಷ್ಟೀಸುವ ಒಂದು ಕಾರ್ಖಾನೆ ಎಮ್ದು ಅನ್ನುತ್ತಾನೆ. ಕಿನ್ ಸ್ಲೇ ಅನ್ನುವ ಇನ್ನೊಬ್ಬ ಅರ್ಥಷಾಸ್ತ್ರಗ್ನ ಅವಶ್ಯಕತೆಗಿಂತ ಮಿಕ್ಕಿದ ಹಣವನ್ನು ಸಂಗ್ರಹಿಸಿಟ್ಟುಕೊಂಡು ಹಣದ ಅಡಚಣೆ ಇರುವವರೆಗೆ ಸಾಲ ನೀಡಲು ಯಾವ ಒಂದು ಸಂಸ್ಥೆಗೆ ಈ ಹಣವನ್ನು ಕೊಡುತ್ತಾರೋ ಆ ಸಂಸ್ಥೆ ಬ್ಯಾಂಕ್ ಎಂದು ಅರ್ಥೈಸಿದ್ದಾನೆ. ವಿಶ್ವದಾದ್ಯಂತ ಬ್ಯಾಂಕ್ ಅಂದರೇನು ಅನ್ನುವ ನಿರ್ದಿಷ್ಟ ವ್ಯಾಖ್ಯಾನವನ್ನು ಮಾಡಲು ಅರ್ಥಶಾಸ್ತ್ರಗ್ನರು ಶ್ರಮಿಸಿದ್ದಾರೆ. ಕಾರಣ, ಬ್ಯಾಂಕುಗಳಲ್ಲದೆ ಸಾರಫರು, ಸಾಹುಕಾರರು, ಹಣಕಾಸಿನ ಸಂಸ್ಥೆಗಳು ಸಾಲ ನೀಡುವಿಕೆಯನ್ನು ಮಾಡುವುದುಂಟು. ಆದರೆ, ಖಾಸಗಿ ವಲಯದಲ್ಲಿ ಸಾಲಗಳನ್ನು ಕೊಡುವ ಅಥವ ಠೇವಣಿಗಳನ್ನು ಸ್ವೀಕರಿಸುವ ವ್ಯಕ್ತಿ ಅಥವಾ ಸಂಸ್ಥೆ ಬ್ಯಾಂಕಿಂಗ್ ಅರ್ಥದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಭಾರತದಲ್ಲಿ ಕೊನೆಗೆ ಬ್ಯಾಂಕ್ ಅಂದರೇನು ಅನ್ನುವ ವ್ಯಾಖ್ಯೆಯನ್ನು ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ -೧೯೯೯ರಲ್ಲಿ ಮಾಡಿದ್ದಾರೆ. ಈ ವ್ಯಾಖ್ಯಯ ಪ್ರಕಾರ ರಿಸರ್ವ್ ಬ್ಯಾಂಕ್ ಅಫ಼್ ಇಂಡಿಯ ಅನುಮತಿ ಪಡೆದು ಹಣದ ಲೇವಾದೇವಿ ಮಾಡುವ ಕಂಪನಿಗಳು ತಮ್ಮ ಹೆಸರಿನಲ್ಲಿ ಬ್ಯಾಂಕ್ ಅಥವಾ ಬ್ಯಾಂಕರ್ ಅನ್ನುವ ಶಬ್ದವನ್ನು ಕಡ್ಡಾಯವಾಗಿ ಸೇರಿಸಲೇಬೇಕು ಎಂದು ಹೇಳಿದ್ದಾರೆ. ಹಣಕಾಸಿನ ವ್ಯವಹಾರವನ್ನು ಮಾಡುವ ಬೇರೆ ಕಂಪನಿಗಳು ಈ ಬ್ಯಾಂಕ್ ಅಥವಾ ಬ್ಯಾಂಕರ್ ಶಬ್ದವನ್ನು ಬಳಸಕುಡದು ಎಂಬ ನಿರ್ಬಂಧವಿದೆ. ಬ್ಯಾಂಕ್ ನಿರ್ವಹಿಸುವ ಕಾರ್ಯಗಳಿಂದ ಬ್ಯಾಂಕ್ ಅಂದರೇನು ಅನ್ನುವವರ ಅರ್ಥ ಮಾಡಿಕೊಳ್ಳಬೇಕು. ಸ್ಥೂಲವಾಗಿ ಬ್ಯಾಂಕುಗಳು ಈ ಕಾರ್ಯಗಳನ್ನು ನಿರ್ವಹಿಸಬೇಕು. ಸ್ವಾತಂತ್ರ್ಯ ಬಂದ ಮೇಲೆ, ಸಾಮಾಜಿಕ ಪರಿವರ್ತನೆಗೆ ಅನುಗುಣವಾಗಿ, ಬ್ಯಾಂಕುಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಸಹಾಯ ಸಲ್ಲಿಸುವ ಹೊಣೆಗಾರಿಕೆ ಹೊತ್ತಿವೆ. ಆರ್ಥಿಕ ಸೇರ್ಪಡೆ ಈಚಿನ ವರ್ಷದಲ್ಲಿ ಬ್ಯಾಂಕುಗಳ ಮುಖ್ಯ ಚಟುವಟಿಕೆಗಳಲ್ಲಿ ಒಂದಾಗಿದೆ.


ಭಾರತೀಯ ಬ್ಯಾಂಕುಗಳ ರಚನಾಕ್ರಮ


ಪ್ರತಿಯೊಂದು ದೇಶದಲ್ಲಿಯೂ ಆ ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿರ್ವಹಿಸಲು ಒಂದು ಕೇಂದ್ರ ಬ್ಯಾಂಕ್ ಇರುತ್ತದೆ. ಈ ಕೇಂದ್ರ ಬ್ಯಾಂಕನ್ನು ಸರಕಾರವು ತಾನೆ ರಚಿಸಿದ ಶಾಸನದ ಮೂಲಕ ಸ್ಥಾಪಿಸಿದರೂ, ಸರಕಾರವು ಈ ಕೇಂದ್ರ ಬ್ಯಾಂಕಿಂಗ್ ಸ್ವತಂತ್ರವಾದಿ ಕಾರ್ಯವನ್ನು ನಿರ್ವಹಿಸುವ ಅಧಿಕಾರವನ್ನು ವಹಿಸಿಕೊಟ್ಟಿರುತ್ತಾರೆ. ಇಂಗ್ಲೆಂಡ್ ಅಲ್ಲಿ 'ಬ್ಯಾಂಕ್ ಆಫ್ ಇಂಗ್ಲೆಂಡ್' ಇರುವಂತೆ ಭಾರತದಲ್ಲಿ 'ರಿಸರ್ವ್ ಬ್ಯಾಂಕ್ ಆಫ್ ಇಂಡಿಯ' ಅನ್ನುವ ಒಂದು ಕೇಂದ್ರ ಬ್ಯಾಂಕ್ ಇದೆ. ೧೯೩೪ರಲ್ಲಿ ಬ್ರಿಟೀಷರಿರುವಾಗಲೇ ಶಾಸನವನ್ನು ರಚಿಸಿ 'ರಿಸರ್ವ್ ಬ್ಯಾಂಕ್ ಆಫ್ ಇಂಡಿಯ' ಎಂಬ ಕೇಂದ್ರ ಬ್ಯಾಂಕನ್ನು ಸ್ಥಾಪಿಸಿದರು. ಮೊದಲು ಇದು ಸಾಮಾನ್ಯ ಬ್ಯಾಂಕಿನಂತೆ ಶೇರುದಾರರ ಬ್ಯಾಂಕೇ ಆಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ೧೯೪೯ರಲ್ಲಿ ಬ್ಯಾಂಕಿಂಗ್ ಕಂಪನಿ ನಿಯಂತ್ರಣ ಕಾನೂನನ್ನು ರಚಿಸಿ ರಿಸರ್ವ್ ಬ್ಯಾಂಕನ್ನು ಸರಕಾರಿ ಬ್ಯಾಂಕನ್ನಾಗಿ ಪರಿವರ್ತಿಸಿದರು. ಇದು ಮೊಟ್ಟಮೊದಲಿನ ರಾಷ್ಟ್ರಿಕರಣ ಎಂದೂ ಕರೆಯಬಹುದು. ರಿಸರ್ವ್ ಬ್ಯಾಂಕ್ ಸ್ಥಾಪನೆಗೊಳ್ಳುವ ಪೂರ್ವದಲ್ಲಿ ಸರಕಾರವೆ ಈ ಬ್ಯಾಂಕುಗಳ ಮೇಲೆ ಹತೋಟಿ ಹೊಂದಿತ್ತು. ಆದರೆ ಬ್ಯಾಂಕುಗಳು ಅಣಬೆಗಳಂತೆ ಹುಟ್ಟಿ ಸಾಹಯತ್ತಿದ್ದವು. ೧೯೯೨ ಮತ್ತು ೧೯೩೬ರ ಮಧ್ಯೆ ೩೭೩ ಬ್ಯಾಂಕಿಂಗ್ ಕಂಪನಿಗಳು ದಿವಾಳಿ ತೆಗೆದವು. ೧೯೪೫ರಲ್ಲಿ ಕೂಡ ಹಲವಾರು ಬ್ಯಾಂಕುಗಳು ತಮ್ಮ ಬಾಗಿಲುಗಳನ್ನು ಮುಚ್ಚಿದವು. ಬ್ಯಾಂಕುಗಳು ವಿಫಲವಾಗಿದ್ದರಿಂದ ಸಾಮಾನ್ಯ ಜನರು ತಮ್ಮ ಉಳಿತಾಯದ ಹಣವನ್ನು ಕಳೆದುಕೊಳ್ಳುವುದನ್ನು ನೋಡಿ, ಭಾರತ ಸರಕಾರವು 'ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ ೧೯೪೯ನ್ನು, ಜಾರಿಯಲ್ಲಿ ತಂದು, ರಿಸರ್ವ್ ಬ್ಯಾಂಕಿಂಗ್ ದೇಶದ ಸಮಗ್ರ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿಯಂತ್ರಿಸುವ ಅಧಿಕಾರವನ್ನು ವಹಿಸಿಕೊಟ್ಟಿತು. ಈ ಬ್ಯಾಂಕಿನ ಸ್ಥಾಪನೆಯಾದಾಗ ಅದನ್ನು ಕೇಂದ್ರ ಬ್ಯಾಂಕೆಂದೇ ಕರೆಯಬಹುದಿತ್ತು. ಆದರೆ, ಆಗ ಖಾಸಗಿ ವಲಯದಲ್ಲಿ 'ದಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯ' ಅನ್ನುವ ಬ್ಯಾಂಕ್ ಇದ್ದುದರಿಂದ ಈ ಕೇಂದ್ರ ಬ್ಯಾಂಕನ್ನು ರಿಸರ್ವ್ ಬ್ಯಾಂಕ್ ಎಂದು ಕರೆಯಲಾಯಿತು.



ಭಾರತೀಯ ರಿಸರ್ವ್ ಬ್ಯಾಂಕ್


ಭಾರತದ ಕೇಂದ್ರೀಯ ಬ್ಯಾಂಕ್. ಇದನ್ನು ಏಪ್ರಿಲ್ ೧ ೧೯೩೫ರಂದು ಸ್ಥಾಪಿಸಲಾಯಿತು. ರಿಸರ್ವ ಬ್ಯಾಂಕಿನ ಕೇಂದ್ರ ಕಛೇರಿಯನ್ನು ಮೊದಲಿಗೆ ಕೊಲ್ಕತ್ತದಲ್ಲಿ ಪ್ರಾರಂಭಿಸಿದರಾದರೂ ನಂತರ ೧೯೩೭ರಲ್ಲಿ ಮುಂಬೈಗೆ ಬದಲಾಯಿಸಲಾಯಿತು. ೧೯೪೯ರಿಂದ ಭಾರತ ಸರ್ಕಾರವು ಇದರ ಒಡೆತನವನ್ನು ಹೊಂದಿದೆ. ರಘುರಾಮ್ ರಾಜನ್ ಬ್ಯಾಂಕ್ನ ಹಾಲಿ ಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಿದಾರೆ. ಇದು ೨೨ ಪ್ರಾದೇಶಿಕ ಶಾಖೆಗಳನ್ನು ಹೊಂದಿದೆ. ರಿಜರ್ವ್ ಬ್ಯಾಂಕು ದೇಶದ ಅತ್ಯುನ್ನತ ಬ್ಯಾಂಕ್ ಆಗಿದೆ. ರಿಜರ್ವ್ ಬ್ಯಾಂಕನ್ನು ೧೯೩೪ರ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ ಯನ್ವಯ ಒಂದು ಖಾಸಗಿ ಷೇರುದಾರರ ಬ್ಯಾಂಕ್ ಆಗಿ ೧೯೩೫ ರ ಏಪ್ರಿಲ್ ೧ ರಂದು ಸ್ಥಾಪಿಸಲಾಯಿತು. ಸ್ವಾತಂತ್ಯ ನಂತರ ಸರ್ಕಾರಿ ಸ್ವಾಮ್ಯದ ಕೇಂದ್ರ ಬ್ಯಾಂಕ್ ಒಂದರ ಅವಶ್ಯಕತೆ ಬಿತ್ತಾದ್ದರಿಂದ ಸರ್ಕಾರ ರಿಜರ್ವ್ ಬ್ಯಾಂಕನ್ನು ೧೯೪೭ ರ ಜನವರಿ ೧ ರಂದು ರಾಷ್ಟ್ರೀಕರಿಸಿ ಕೇಂದ್ರ ಬ್ಯಾಂಕನ್ನಾಗಿ ಪರಿವರ್ತಿಸಿತು. ಈ ಬ್ಯಾಂಕು ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಗ್ರಸ್ಥಾನ ಪಡೆದಿದ್ದು ಎಲ್ಲಾ ಬ್ಯಾಂಕ್ ಗಳು ಮತ್ತು ಹಣಕಾಸಿನ ಸಂಸ್ಥೆಗಳ ನೇರ ನಿಯಂತ್ರಣ ಸಾಧಿಸುತ್ತಿದೆ. ಇದು ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿದೆ.


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ


ಭಾರತೀಯ ಸ್ಟೇಟ್ ಬ್ಯಾಂಕ್ ಭಾರತದ ರಾಷ್ಟ್ರೀಕೃತ ಮತ್ತು ಖಾಸಗಿ ವಲಯದ ಬ್ಯಾಂಕ್ ಗಳ ಪೈಕಿ ಅತಿ ದೊಡ್ಡ ಬ್ಯಾಂಕ್ ಆಗಿದೆ. ೧೮೦೬ರಲ್ಲಿ ಸ್ಥಾಪಿತಗೊಂಡ ಈ ಬ್ಯಾಂಕ್ ನ್ನು 'ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ' ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.ಮುಂದೆ ೧೯೫೫ರಲ್ಲಿ ಭಾರತ ಸರ್ಕಾರ ಇದನ್ನು ರಾಷ್ಟ್ರೀಕೃತ ಬ್ಯಾಂಕ್ ಎಂದು ಘೋಷಿಸಿ 'ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ'ದ ಆಧೀನಕ್ಕೆ ಒಳಪಡಿಸಿತು.ಭಾರತದ ಹಳ್ಳಿಹಳ್ಳಿಗಳಲ್ಲಿಯೂ ತನ್ನ ಶಾಖೆಗಳನ್ನು ತೆರೆದಿರುವ ಸ್ಟೇಟ್ ಬ್ಯಾಂಕ್ ತನ್ನ ವಿಶ್ವಾಸದ ಪ್ರತೀಕವಾಗಿ ಜಗತ್ತಿನ ೩೨ ವಿವಿಧ ರಾಷ್ಟ್ರಗಳಲ್ಲಿ ಸುಮಾರು ೯೨ ಶಾಖೆಗಳನ್ನೂ ಕೂಡ ತೆರೆದಿದೆ


ವಾಣಿಜ್ಯ ಬ್ಯಾಂಕುಗಳು


ವಾಣಿಜ್ಯ ಬ್ಯಾಂಕುಗಳು ಹಣಕಾಸಿನ ಸಂಸ್ಥೆಗಳಾಗಿದ್ದು , ವ್ಯಾಪಾರ ಮತ್ತು ಇನ್ನಿತರ ಉದ್ಧೇಶಕ್ಕೈ ಸಾಲ ಕೊಡುವ ಮತ್ತು ಠೇವುಗಳನ್ನು ಸ್ವೀಕರಿಸುವ ಸಂಸ್ಥೆಗಳಾಗಿವೆ. ಈ ಸಂಸ್ಥೆಗಳ ಹುಟ್ಟು ಬೆಳಣೆಗೆಗೆ ಸುಮಾರು ಮೂರು ನೂರು ವರ್ಷಗಳ ಇತಿಹಾಸವಿದೆ. ಬ್ಯಾಂಕ್ ಎಂಬ ಪದವು ಇಟಾಲಿಯನ್ ಪದ `ಬ್ಯಾಂಕೋ' ಎಂಬ ಪದದಿಂದ ಬಂದಿರುತ್ತದೆ. ಬ್ಯಾಂಕೋ ಎಂದರೆ ಹಿಂದಿನ ಕಾಲದ ಸಾಹುಕಾರರ ಉಪಯೋಗಿಸುತ್ತಿದ್ದ ಬೆಂಚು ಅಥವಾ ಬಾಕು ಎಂದಾರ್ಥವಾಗುತ್ತದೆ. ಮಾರುಕಟ್ಟೆಯಲ್ಲಿ ಬೆಂಚು ಹಾಕಿಕೊಂಡು ಅದರ ಮೇಲೆ ಕುಳಿತು ಸಾಹುಕಾರರು ಹಣದ ಲೇವಾ ದೇವಿ ವ್ಯವಹಾರವನ್ನು ಮಾಡುತ್ತಿದ್ದರು. ಇಂಗ್ಲೆಂಡಿನಲ್ಲಿ ಅಕ್ಕಸಾಲಿಗರು ಕೈಗೊಂಡ ಹಣದ ಲೇವಾದೇವಿ ವ್ಯಾವಹಾರಗಳಲ್ಲಿ ಇಂದಿನ ಬ್ಯಾಂಕ್ ವ್ಯವಹಾರ ಪದ್ಧತಿಯ ಉಗಮವನ್ನು ಕಾಣಬಹುದು. ವ್ಯಾಪಾರಸ್ಥರು ತಮ್ಮಲ್ಲಿ ಅಧಿಕ ಇದ್ದ ಹಣವನ್ನು ಸುರಕ್ಶತೆಗಾಗಿ ಅಕ್ಕಸಾಲಿಗರಿಗೆ ಒಪ್ಪಿಸುತ್ತಿದ್ದರು. ಅಕ್ಕಸಾಲಿಗರು ಠೇವಣಿ ಇಟ್ಟ ವ್ಯಾಪಾರಸ್ತರಿಗೆ ಅವರಿಟ್ಟ ಠೇವಣಿಯ ಮೌಲ್ಯದಷ್ತು ರಾಶಿದಿಯನ್ನು ಕೊಡುತ್ತಿದ್ದರು. ರಶೀದಿಗಳಿಗೆ ಅಕ್ಕಸಾಲಿಗರ ಪಾವತಿ ಚೀಟಿ'ಗಳೆಂದು ಕರೆಯುತ್ತಿದ್ದರು. ಈ ಪಾವತಿ ಚೀಟಿಯನ್ನು ಹೊಂದಿದವರಿಗ ಠೇವಣಿಯ ಹಣ ವಾಪಾಸ ಪಡೆಯಲು ಹಕ್ಕು ಇರುತಿತ್ತು. ಬೇಡಿದಾಗ ಹಣವನ್ನು ಹಿಂದಿರುಗಿಸುವ ಹೊಣೆ ಅಕಸಾಲಿಗದಾಗಿತ್ತು. ಅಕ್ಕಸಾಲಿಗರ ಪಾವತಿ ಚೀಟಿಗಳು ಈ ಭರವಸೆಯ ಸಂಕೇತಗಳಾಗಿದ್ದವು. ಈ ಪ್ರಕಾರ ಹಣದ ಲೇವಾದೇವಿ ವ್ಯವಹಾರ ಮಾಡುವಾಗ ಅವರಿಗೆ ಹೊಸ ಅನುಭವದ ಅರಿವಾಯಿತು. ಎಲ್ಲಾ ಠೇವಣಿದಾರರು ಒಂದೇ ವೇಳೆಗೆ ತಾವಿಟ್ಟ ಠೇವಣಿಯ ಹಣವನ್ನು ವಾಪಾಸಕೇಳಲು ಬರುವುದಿಲ್ಲವೆಂಬ ವಿಶ್ವಾಸ ಅವರಗಾಯಿತು. ಅದರಿಂದಅವರ ಠೇವಣಿಯ ಹಣವನ್ನು ತಮ ಬಳಿ ಸೋಮಾರಿಯಾಗಿಡುವುದಕ್ಕೆ ಬದಲು ಅಗತ್ಯವಿದ್ದವರಿಗೆ ಸಾಲ ಕೊಟ್ಟು ಬಡ್ಡಿಯನ್ನು ಸಂಪಾದಿಸಲು ಪ್ರಾರಂಭಿಸಿದರು. ಈ ರೀತಿ ಕೇವಲ ಭದ್ರತೆಗಾಗಿ ಇಟ್ಟ ಠೇವಣಿಯ ರೂಪದಲ್ಲಿನ ಹಣವು ಸಾಲ ಕೊಡುವ ವ್ಯವಹಾರಕ್ಕಾಗಿ ಬಳಸಲ್ಪಡುವ ಸಾಧನವಾಯಿತು.ಕ್ರಮೇಣ ಸ್ವತಂತ್ರ ಬ್ಯಾಂಕಿಗ್ ಸಂಸ್ಥೆಗಳು ವಾಣಿಜ್ಯ ವ್ಯವಹಾರಗಳಿ ಸಾಲ ನೀಡಲು ಅಸ್ತಿತ್ವದಲ್ಲಿ ಬಂದವು.


ಸಹಕಾರಿ ಬ್ಯಾಂಕ್


ಭಾರತದಲ್ಲಿ ಮೊಟ್ಟಮೊದಲಿನ ಸಾಲವಿತರಣ (ಬ್ಯಾಂಕಿಂಗ್) ಸಹಕಾರ ಸಂಘವು ಬಂಗಾಳದಲ್ಲಿ ದಿ. ೨೫-೩-೧೯೦೪ / 25-3-1904ರಂದು/ರಲ್ಲಿ ಬಂಗಾಳ ಸರ್ಕಾರದ ಬೆಂಬಲ ಮತ್ತು ಸಹಾಯದಿಂದ ಆರಂಭವಾಯಿತು. ಸ್ನೇಹಿತರ ಸಹಕಾರ ಸಂಘಗಳ ಕಾನೂನು/ನಿಯಮಗಳ ಅಡಿಯಲ್ಲಿ ಅದು ನೊಂದಾವಣೆಯಾಗಿತ್ತು. ಸಹಕಾರ ಸಂಘದ ನಿಯಮಗಳು ೧೯೧೯/1919 ರಲ್ಲಿ ರಾಜ್ಯಗಳ ಆಡಳಿತ ವಿಷಯಗಳ ಪಟ್ಟಿಯೊಳಗೆ ಸೇರಿತು. ೧೯೫೧ /1951 ರಲ್ಲಿ ೫೦೧/501 ಕೇಂದ್ರ ಸಹಕಾರ ಯೂನಿಯನ್ ಗಳು , ಕೇಂದ್ರ ಸಹಕಾರ ಬ್ಯಾಕುಗಳೆಂದು ಪುನರ್ನಾಮಕರಣ ಮಾಡಲಾಯಿತು.


ಭೂ ಅಭಿವೃದ್ಧಿ ಬ್ಯಾಂಕುಗಳು

ಕರ್ನಾಟಕ ರಾಜ್ಯದಲ್ಲಿ ಪ್ರತಿಯೊಂದು ತಾಲೂಕಿಗೆ ಒಂದು ಭೂ ಅಭಿವೃದ್ಧಿ ಬ್ಯಾಂಕುಗಳಾಗಿ ಕಾರ್ಯನಿರ್ವಹಿಸುತ್ತವೆ. ಇವುಗಳ ಉದ್ದೇಶ ರೈತರ ಭೂ ಅಭಿವೃದ್ಧಿಗಾಗಿ, ಜಮೀನು ದುರಸ್ತಿಗಾಗಿ, ಜಮೀನು ಖರೀದಿಗಾಗಿ, ಬೇರೆ ಬೇರೆ ಸಹಕಾರೇತರ ಬ್ಯಾಂಕ್ಗಳಲ್ಲಿ ಮಾಡಿದ ಸಾಲ ತೀರಿಸುವುದಕ್ಕಾಗಿ, ತೋಟಗಾರಿಕೆ ಅಭಿವೃದ್ಧಿಗಾಗಿ ಪಶುಸಂಗೋಪನಾ ಉದ್ದೇಶಕ್ಕಾಗಿ, ಬಾವಿಗಳನ್ನು ತೋಡಿ ನೀರನ್ನು ಉಪಯೋಗಿಸಲಿಕ್ಕಾಗಿ, ಕೊಳವೆ ಬಾವಿ ತೋಡಲಿಕ್ಕಾಗಿ ಟ್ರಾಕ್ಟರ್ ಖರೀದಿಗಾಗಿ, ಇತ್ಯಾದಿ ವಿವಿಧ ಉದ್ದೇಶಕ್ಕಾಗಿ ದೀರ್ಘಾವಧಿ ಸಾಲ ರೈತರಿಗೆ ನೀಡುವುದೇ ಆಗಿದೆ