ಭಾರತದಲ್ಲಿ ಕಪ್ಪುಹಣ

ಕಪ್ಪುಹಣದ ವ್ಯಾಖ್ಯೆ ಬದಲಾಯಿಸಿ

  • ಭಾರತದಲ್ಲಿ, ಕಪ್ಪು ಹಣವೆಂದರೆ ಆದಾಯ ಮತ್ತು ಇತರೆ ತೆರಿಗೆಗಳನ್ನು ಪಾವತಿ ಮಾಡದೆ (ಕಪ್ಪು ಮಾರುಕಟ್ಟೆಯಲ್ಲಿ?) ಗಳಿಸಿದ ಮತ್ತು ಸಮಗ್ರಹಿಸಿದ ಹಣವನ್ನು ಕಪ್ಪುಹಣವೆ೦ದು ಕರೆಯುತ್ತಾರೆ. ಹೀಗೆ ತೆರಿಗೆ ತಪ್ಪಿಸಿದ ಹಣವನ್ನು ಭಾರತೀಯರು ವಿದೇಶಿ ಬ್ಯಾಂಕುಗಳಲ್ಲಿ ಹೇರಳವಾಗಿ ಠೇವಣಿ ಮಾಡಿರುವ ಸುದ್ದಿ ಇದೆ. ಈ ಕಪ್ಪು ಹಣದ ಒಟ್ಟು ಪ್ರಮಾಣ ತಿಳಿದಿಲ್ಲ. ಕೆಲವು ಮಾಧ್ಯಮ ವರದಿಗಳ ಪ್ರಕಾರ ಒಟ್ಟು $ ೧.೪ ಟ್ರಿಲಿಯನ್ ಹಣವನ್ನು ಸ್ವಿಜರ್ಲ್ಯಾಂಡ್ ನಲ್ಲಿ ಬಚ್ಚಿಡಲಾಗಿದೆ ಎಂದು ಹೇಳಲಾಗುತ್ತದೆ.ಇತರ ವರದಿಗಳು ಸೇರಿದಂತೆ, ಸ್ವಿಸ್ ಬ್ಯಾಂಕರ್ಸ್ ಅಸೋಸಿಯೇಷನ್ ಮತ್ತು ಸ್ವಿಜರ್ಲ್ಯಾಂಡ್ ಸರ್ಕಾರವು ಈ ವರದಿಗಳನ್ನು ತಪ್ಪು ಹಾಗೂ ಕೃತ್ರಿಮ ಎಂದು ತಿಳಿಸಿತು, ಮತ್ತು ಎಲ್ಲಾ ಸ್ವಿಸ್ ಬ್ಯಾಂಕುಗಳಲ್ಲಿ ಭಾರತದ ನಾಗರಿಕರು ಠೇವಣಿ ಮಾಡಿರುವ ಒಟ್ಟು ಪ್ರಮಾಣ ಸುಮಾರು $ ೨ ಬಿಲಿಯನ್ ಎಂದು ತಿಳಿಸಿದೆ. ಪನಾಮಾ ದೇಶದ ಬೊಗಸ್ ಕಂಪನಿಗಳಲ್ಲಿ ಈ ತೆರಿಗೆ ತಪ್ಪಿಸಿದ ಹಣ ಇಟ್ಟಿರುವುದಾಗಿ ಸುದ್ದಿ ಹಬ್ಬಿದೆ.[೧]
  • ಫೆಬ್ರವರಿ ೨೦೧೨ ರಲ್ಲಿ, ಕೇಂದ್ರೀಯ ತನಿಖಾ ದಳದ ನಿರ್ದೇಶಕ ಭಾರತಿಯರು ವಿದೇಶಿ ಅಕ್ರಮ ವಿದೇಶಿ ಅಕ್ರಮ ಒಟ್ಟು $ ೫೦೦ ಬಿಲಿಯನ್ ಹಣವನ್ನು ಇರಿಸಿದ್ದರೆ, ಈ ಪ್ರಮಾಣದ ಹಣವನ್ನು ಬೇರೆ ದೇಶವು ಇರಿಸಿಲ್ಲ. ಮಾರ್ಚ್ ೨೦೧೨ ರಲ್ಲಿ, ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ ಭಾರತ ಸರ್ಕಾರವು ಸ್ಪಷ್ಟಪಡಿಸಿದ೦ತೆ $ ೫೦೦ ಬಿಲಿಯನ್ ಮೇಲೆ ಸಿಬಿಐ ನಿರ್ದೇಶಕರ ಹೇಳಿಕೆ ಜುಲೈ 2011 ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯನ್ನು ಆಧರಿಸಿದ ಅಂದಾಜಿನ ಮೊತ್ತ ಎಂದು ಸ್ಪಷ್ಟಪಡಿಸಿತು.[೨]

ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್ ಬದಲಾಯಿಸಿ

  • ಅನೇಕ ಪ್ರಸಿದ್ಧ ನಾಗರಿಕರ ಜೊತೆ ಸೇರಿ ಖ್ಯಾತ ನ್ಯಾಯವಾದಿ ಮತ್ತು ಮಾಜಿ ಕಾನೂನು ಸಚಿವ ರಾಮ್ ಜೇಠ್ಮಲಾನಿ ವಿದೇಶದ ತೆರಿಗೆ ಹ್ಯಾವೆನ್ಸ್ ನಲ್ಲಿರುವ ಕಪ್ಪು ಹಣವನ್ನು ಹಿಂದಕ್ಕೆ ತರಲು ಸಹಾಯಮಾಡುವ೦ತೆ, ಮತ್ತು ಆಡಳಿತ ಚೌಕಟ್ಟಿನ್ನು ಬಲಗೊಳಿಸಲು, ಮತ್ತು ಕಪ್ಪು ಹಣದ ಮತ್ತಷ್ಟು ಸೃಷ್ಟಿಯನ್ನು ತಡೆಗಟ್ಟಲು ನ್ಯಾಯಾಲಯದ ನಿರ್ದೇಶನಗಳನ್ನು ಕೋರಿ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ೨೦೦೯ರ ನಂ ೧೭೬ ನ ರಿಟ್ ಅರ್ಜಿ (ಸಿವಿಲ್)ಯನ್ನು ದಾಖಲಿಸಲಯಿತು.
  • ಜನವರಿ 2011 ರಲ್ಲಿ, (ಎಸ್ಸಿ) ಲಿಚ್ಟೆನ್ಸ್ಟಿನ್ ಬ್ಯಾಂಕ್ ನಲ್ಲಿ ಹಣ ಇರಿಸಿರುವವರ ಹೆಸರುಗಳು ಬಹಿರಂಗಪಡಿಸಿಲ್ಲ ಏಕೆ ಎಂದು ತನಿಖಾ ತ೦ಡವನ್ನು ಕೇಳಿತು . ಸರ್ಕಾರವು, ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ಇರಿಸಿರುವ,"ಕಂಗೆಡಿಸುವ" ಹಣದ ಪ್ರಮಾಣದ ಬಗ್ಗೆ ಲಭ್ಯವಿರುವ ಮಾಹಿತಿಯನ್ನು ಬಿಡುಗಡೆ ಮಾಡುವಲ್ಲಿ ಹೆಚ್ಚು ಮುಂಬರಬೇಕೆ೦ದು ನ್ಯಾಯಾಲಯವು ಸರ್ಕಾರದ ಜೊತೆ ವಾದಿಸಿತು.[೩]

ಮೋದಿಯವರ ವಚನ ಬದಲಾಯಿಸಿ

  • ನರೆಂದ್ರ ಮೋದಿಯವರು ತಾವು ಅಧಿಕಾರಕ್ಕೆ ಬಂದರೆ ವಿದೇಶಿ ಬ್ಯಾಂಕಿನಲ್ಲಿರುವ ಕಪ್ಪುಹಣವನ್ನು ತರಿಸಿ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ೧೫ ಲಕ್ಷರೂಪಾಯಿಪಅವತಿ ಮಾಡಿ ಠೇವಣಿಇಡುವುದಾಗಿ ಹೇಳಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ಏಕೆ ಆ ವಚನವನ್ನು ಪಾಲಿಸಿಲ್ಲವೆಂದು ವಿರೋದ ಪಕ್ಷವಾದ ಕಾಂಗ್ರೆಸ್ ಪ್ರಶ್ನಿಸಿತು.[೪][೫]

ಭಾರತೀಯ ರೂ.500. ಮತ್ತು ರೂ1000.ನೋಟುಗಳ ಚಲಾವಣೆ ರದ್ದತಿ ಬದಲಾಯಿಸಿ

  • ಭಾರತ ಸರ್ಕಾರ ಬುಧವಾರ 9 ನವೆಂಬರ್ 2016 ರಿಂದ ಎಲ್ಲಾ ರೂ..500 ಮತ್ತು ರೂ. 1000 ಬ್ಯಾಂಕ್-ನೋಟುಗಳ ಅನಾಣ್ಯೀಕರಣವನ್ನು ಘೋಷಣೆ ಮಾಡಿದ್ದು, ಭಾರತದಲ್ಲಿ ಕಾನೂನು ಬದ್ಧವಾಗಿ ಮಹಾತ್ಮ ಗಾಂಧಿ ಸರಣಿಯ ರೂ.1000 ಬ್ಯಾಂಕ್ ನೋಟುಗಳ ಮೌಲ್ಯವನ್ನು (ನವೆಂಬರ್ 08,2016 ಮದ್ಯರಾತ್ರಿಯಿಂದ) ರದ್ದುಗಳಿಸುತ್ತಿರುವುದಾಗಿ 8 ನವೆಂಬರ್ 2016 ರಲ್ಲಿ ಘೋಶಿಸಲಾಯಿತು.[೬]
  • ಭಾರತ ಪ್ರಧಾನಿ ನರೇಂದ್ರ ಮೋದಿಯವರು 8:15 ರಾತ್ರಿ ಹೊಸದಿಲ್ಲಿಯಲ್ಲಿ ಈ ಪ್ರಕಟಣೆ ಮಾಡಿದರು. ಅದೇ ದಿನ ಮೋದಿಯವರಿಂದ ರಾಷ್ಟ್ರಕ್ಕೆ ಒಂದು ಅನಿಗದಿತ ನೇರ ಪ್ರಸಾರ ಭಾಷಣದಲ್ಲಿ ಮಹಾತ್ಮ ಗಾಂಧಿ ಸರಣಿಯ ಎಲ್ಲಾ ರೂ. 500 ಮತ್ತು ರೂ. 1000 ಬ್ಯಾಂಕ್ ನೋಟುಗಳ ಪರಿಚಲನೆ ಅಮಾನ್ಯವಾಗಿದೆ ಎಂದು ಘೋಷಿಸಿ ಈ ಪ್ರಕಟಣೆ ಮಾಡಲ್ಪಟ್ಟಿತು. ಹಳೆಯ ಬ್ಯಾಂಕ್‍ನೋಟುಗಳನ್ನು ಮಹಾತ್ಮ ಗಾಂಧಿ ಹೊಸ ಸರಣಿಯ, ಹೊಸ ರೂ.500 ಮತ್ತು ರೂ. 2000 ಬ್ಯಾಂಕ್ ನೋಟುಗಳ ನೀಡಿಕೆಯ ವಿನಿಮಯವನ್ನು ಘೋಷಿಸಿತು.

ಉದ್ದೇಶ ಬದಲಾಯಿಸಿ

  • ಕಪ್ಪು ಹಣ, ಭ್ರಷ್ಟಾಚಾರ, ಖೋಟಾ ನೋಟು, ಭಯೋತ್ಪಾದನೆ ತಡೆಗೆ ಅಚ್ಚರಿಯ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ಮಂಗಳವಾರ ಮಧ್ಯರಾತ್ರಿಯಿಂದ ರೂ.500 ಮತ್ತು ರೂ.1,000 ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದೆ. ಇದೇ ಮೊದಲ ಬಾರಿ ಸುದ್ದಿ ವಾಹಿನಿಗಳ ಮೂಲಕ ಅನಿರೀಕ್ಷಿತವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ನಿರ್ಧಾರ ಪ್ರಕಟಿಸಿದ್ದಾರೆ.[೭][೮]

ಯಚೂರಿ ಪ್ರಶ್ನೆ ಬದಲಾಯಿಸಿ

  • ಏಪ್ರಿಲ್ 1 ರಿಂದ ಅಕ್ಟೋಬರ್ 31, 2016, ನಡುವೆ ಆದಾಯ ತೆರಿಗೆ ತನಿಖೆಗಳ ಡೇಟಾ ಪ್ರಕಾರ ಕಪ್ಪು ಹಣ ಹೊಂದಿರುವವರು ವಿವರಿಸದ ಸ್ವತ್ತುಗಳ ಲ್ಲಿ 7,700 ಕೋಟಿ ರೂ. ಅಡಗಿದೆಯೆಂದು ಬಹಿರಂಗ ಪಡಿಸಿಇದ್ದಾರೆ; ಈ ಕಾರಣದಿಂದಾಗಿ, ಕಪ್ಪು ಹಣದಲ್ಲಿ ರೂ 408 ಕೋಟಿ, ಅಥವಾ 5 ಪ್ರತಿಶತ ನಗದು ಆಗಿತ್ತು. ಉಳಿದದ್ದು ವ್ಯಾಪಾರ, ಸ್ಟಾಕ್‍ಗಳು, ಸ್ಥಿರಾಸ್ತಿ ಮತ್ತು ಬೇನಾಮಿ ಬ್ಯಾಂಕ್ ಖಾತೆಗಳ ಹೂಡಿಕೆಯಾಗಿತ್ತು ಎಂದು, ದಾಖಲೆಗಳು ತಿಳಿಸಿವೆ.
  • 2015-16 ರಲ್ಲಿ, ಕಪ್ಪು ಹಣದ ದೊಡ್ಡ ಪತ್ತೆ ವರದಿ ಪ್ರಕಾರ, ಒಂದು ವರ್ಷದಲ್ಲಿ ಶೇ. 6 ರಷ್ಟು ನಗದು ಆಗಿತ್ತು. ನವೆಂಬರ್ 17 ರಂದು, ಸೀತಾರಾಮ್ ಯೆಚೂರಿ, ಪ್ರಧಾನ ಕಾರ್ಯದರ್ಶಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್), ಕೇಳಿದ ಸವಾಲು : "ಕಪ್ಪು ಆರ್ಥಿಕತೆ ಕೇವಲ 6% ನಗದು, 'ಉಳಿದ ತಂತಿಯಚೂರು', ಒಟ್ಟು ಕರೆನ್ಸಿಯಲ್ಲಿ - ನಕಲಿ ಕರೆನ್ಸಿ 0.025% ಹಾಗಾಗಿ ಅನಾಣ್ಯೀಕರಣ ನಡೆಸುವಿಕೆಯ ಗುರಿ ಯಾವುದು..?"

ಕಪ್ಪು ಹಣ ಮೂಲೋತ್ಪಾಟನೆ ಸಾಧ್ಯವೇ? ಬದಲಾಯಿಸಿ

ಪನಾಮ ಪೇಪರ್ಸ್‌-ಪನಾಮದಲ್ಲಿ ಕಪ್ಪುಹಣ ಹೂಡಿಕೆ
  • ಅದು 1970–2015ರ ನಡುವೆ ಜಗತ್ತಿನ 200 ದೇಶಗಳ 14000 ಬಲಾಢ್ಯ ಕಕ್ಷಿದಾರರು ಪನಾಮ ದೇಶದ ಮೊಸ್ಸಕ್ ಫೊನೆಸ್ಕ ಎಂಬ ಕಂಪನಿಯೊಡನೆ ನಡೆಸಿದ ಕಳ್ಳ ವಹಿವಾಟುಗಳ ಸಾಕ್ಷಾತ್ ದಾಖಲೆಗಳಾಗಿದ್ದವು. ಜಗತ್ತಿನ 12 ದೇಶಗಳ ರಾಜಕೀಯ ಮುಖ್ಯಸ್ಥರೂ ಒಳಗೊಂಡಂತೆ 14000 ಉದ್ಯಮಿಗಳು, ನಟರು, ವಿಟರು, ಡ್ರಗ್ ಮಾಫಿಯಾಗಳು ಹಾಗೂ ಇನ್ನಿತರರು ತಮ್ಮ ದೇಶದಲ್ಲಿ ವಂಚನೆಯಿಂದ ಗಳಿಸಿದ ಕಾಳಧನವನ್ನು ಪನಾಮಾದ ‘ಮೊಸ್ಸಕ್ ಫೊನೆಸ್ಕ’ ಕಂಪೆನಿಯ ಮೂಲಕ ಬಚ್ಚಿಟ್ಟಿದ್ದು ಹೀಗೆ: ಮೊಸ್ಸಾಕ್ ಫೊನೆಸ್ಕಾ ಕಂಪನಿ ಕಾಳಧನವನ್ನು ಕಾನೂನುಬದ್ಧವಾಗಿ ಮುಚ್ಚಿಡಲು ಬೇಕಾದ ಸುಳ್ಳು ಕಂಪೆನಿಗಳನ್ನು ಸೃಷ್ಟಿಸಿಕೊಡುತ್ತದೆ.
  • ಪ್ರಧಾನಮಂತ್ರಿಯ ಆಪ್ತ ಉದ್ಯಮಿ ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ, ಉದ್ಯಮಿಗಳಾದ ಸಮೀರ್ ಗೆಹ್ಲಾಟ್ (ಇಂಡಿಯಾ ಬುಲ್ಸ್) ಮತ್ತು ಡಿಎಲ್ ಸಿಂಗ್ (ಡಿಎಲ್‌ಎಫ್), ಅಪೊಲೋ ಟೈರ್ಸ್‌ನ ಮಾಲೀಕ ಕುಟುಂಬವನ್ನು ಒಳಗೊಂಡಂತೆ 500ಕ್ಕೂ ಹೆಚ್ಚು ಭಾರತದ ಅತಿ ಶ್ರೀಮಂತರ ಮತ್ತು ರಾಜಕೀಯ ಬಲಾಢ್ಯರ ಹೆಸರು ಈ ಅಧ್ಯಯನದಲ್ಲಿ ಪ್ರಸ್ತಾಪವಾಗಿದೆ. ಕೇಂದ್ರ ಸರ್ಕಾರ ಇದನ್ನು ಗಮನಿಸಿದ್ದು, ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ಘೋಷಿಸಿದೆ.
  • ಮೊಸ್ಸಾಕ್ ಪೋನೆಸ್ಕಾ ಕಂಪನಿಯೊಂದೇ 2 ಲಕ್ಷ ಸುಳ್ಳು ಕಂಪೆನಿಗಳನ್ನು ಒದಗಿಸಿದೆ. ಇಂಥ ಸಾವಿರಾರು ಕಂಪೆನಿಗಳು ಪನಾಮದಲ್ಲಿವೆ. ಪನಾಮಾದಂಥ ಕನಿಷ್ಠ 90 ಸಾಗರೋತ್ತರ ತೆರಿಗೆ ಮುಕ್ತ ಸ್ವರ್ಗತಾಣಗಳು ಜಗತ್ತಿನಲ್ಲಿವೆ. ಒಂದು ಅಂದಾಜಿನ ಪ್ರಕಾರ ಕನಿಷ್ಠ 7.5 ಟ್ರಿಲಿಯನ್ ಡಾಲರಿನಷ್ಟು ಕಾಳಧನವು ಇಲ್ಲಿ ಶೇಖರಗೊಂಡಿದೆ.[೯](20 Nov, 2016)
.
  • ಕೇಶವ ಜಿ. ಝಿಂಗಾಡೆ;16 Nov, 2016;
  • ಅನಾನುಕೂಲತೆಗಳು
  • ಜನಸಾಮಾನ್ಯರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ಕೈಯಲ್ಲಿ ಕಾಸಿಲ್ಲದೇ ಅಥವಾ ಗರಿಷ್ಠ ಮುಖಬೆಲೆಯ ನೋಟುಗಳು ಇದ್ದರೂ ಅವುಗಳನ್ನು ಬಳಸಲಿಕ್ಕಾಗದೆ ಜನರು ಬವಣೆ ಪಟ್ಟಿದ್ದಾರೆ. ಹೊಸ ನೋಟುಗಳನ್ನು ಪಡೆದುಕೊಳ್ಳಲು ಎಟಿಎಂ, ಬ್ಯಾಂಕ್‌ಗಳಿಗೆ ಅಲೆದು ಸುಸ್ತಾಗಿದ್ದಾರೆ. ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳ ಬಳಕೆ ಬಗ್ಗೆಯೂ ಅರಿವು ಇಲ್ಲ. ಅನಕ್ಷರಸ್ಥರು ಬಿಡಿ, ಅನೇಕ ಸುಶಿಕ್ಷಿತರಿಗೂ ಡೆಬಿಟ್‌ ಕಾರ್ಡ್‌ / ಕ್ರೆಡಿಟ್‌ ಕಾರ್ಡ್‌ ಬಳಕೆ ಜ್ಞಾನ ಇಲ್ಲ.
  • ವಿದೇಶಿ ಕರೆನ್ಸಿ, ಚಿನ್ನ, ಸ್ಥಿರಾಸ್ತಿ ಮತ್ತು ವಿದೇಶಿ ತೆರಿಗೆ ಸ್ವರ್ಗಗಳ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿರುವ ದೊಡ್ಡ ಮಿಕಗಳು ಪಾರಾಗುತ್ತವೆ. ಆದರೆ, ಸಣ್ಣ ಪುಟ್ಟ ಮೀನುಗಳು ಬಲೆಗೆ ಬೀಳಲಿವೆ. ಅಲ್ಪಾವಧಿಯಲ್ಲಿ ಹತ್ತಾರು ಸಂಕಷ್ಟಗಳಿಗೆ ಗುರಿಯಾದರೂ, ದೀರ್ಘಾವಧಿಯಲ್ಲಿ ಇದರಿಂದ ದೇಶಿ ಆರ್ಥಿಕತೆಗೆ ಒಳಿತಾಗಲಿದೆ.[೧೦]

ಕಪ್ಪು ಹಣ ಘೋಷಣೆಗೆ ಹೊಸ ನಿಯಮ ಬದಲಾಯಿಸಿ

  • ೨೮-೧೧-೨೦೧೬
  • ಕಪ್ಪುಹಣ ಹೊಂದಿರುವವರು ಭಾರಿ ತೆರಿಗೆ ಮತ್ತು ದಂಡ ಪಾವತಿಸುವ ಮೂಲಕ ಅದನ್ನು ಸಕ್ರಮಗೊಳಿಸಲು ಸಾಧ್ಯವಾಗುವಂತೆ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಲೋಕಸಭೆ ಯಲ್ಲಿ ಮಂಡಿಸಲಾಗಿದೆ. ತಿದ್ದುಪಡಿ ಮಸೂದೆಯನ್ನು ಹಣಕಾಸು ಮಸೂದೆ ಯಾಗಿ ಮಂಡಿಸಲಾಗಿದೆ. ಹಣಕಾಸು ಮಸೂದೆಗೆ ರಾಜ್ಯಸಭೆಯ ಒಪ್ಪಿಗೆ ಅಗತ್ಯ ವಿಲ್ಲ. ಹಾಗಾಗಿ ರಾಜ್ಯಸಭೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇಲ್ಲ ಎಂಬುದು ಇಲ್ಲಿ ಸಮಸ್ಯೆ ಆಗುವುದಿಲ್ಲ. ೨೯ ರಂದು ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ;
  • ಸಕ್ರಮ ಪ್ರಸ್ತಾವಗಳು;ಕಪ್ಪುಹಣ ಘೋಷಿಸಿದರೆ ತೆರಿಗೆ ಪ್ರಮಾಣ:
  • 30% ತೆರಿಗೆ
  • 10% ದಂಡ
  • 50% ಒಟ್ಟು ಪಾವತಿಸಬೇಕಾದ ಪ್ರಮಾಣ
  • ತೆರಿಗೆಯ ಮೇಲೆ 33% ಸೆಸ್‌ (ಒಟ್ಟು ಕಪ್ಪುಹಣದ ಶೇ 10ರಷ್ಟು)
  • ಒಟ್ಟು ಕಪ್ಪುಹಣದ ಶೇ 25ರಷ್ಟನ್ನು ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಲ್ಲಿ (ಪಿಎಂಜಿವೈ) ಠೇವಣಿ ಇರಿಸಬೇಕು
  • ನಾಲ್ಕು ವರ್ಷ ಅವಧಿಯ ಈ ಠೇವಣಿಗೆ ಬಡ್ಡಿ ಇಲ್ಲ
  • ಈ ನಿಧಿ ಯಾವುದಕ್ಕೆ ಬಳಕೆ: ನೀರಾವರಿ, ಮನೆ, ಶೌಚಾಲಯ ನಿರ್ಮಾಣ, ಪ್ರಾಥಮಿಕ ಆರೋಗ್ಯ, ಪ್ರಾಥಮಿಕ ಶಿಕ್ಷಣ
  • ಕಪ್ಪುಹಣ ಇರಿಸಿದವರಿಗೆ ದೊರೆಯುವ ಹಣದ ಪ್ರಮಾಣ: 25%
  • ಘೋಷಿಸದೆ ಸಿಕ್ಕಿಬಿದ್ದವರಿಗೆ ದಂಡ:
  • 60% ತೆರಿಗೆ ತೆರಿಗೆಯ ಮೇಲೆ ಶೇ 25 ರಷ್ಟು ಮೇಲ್ತೆರಿಗೆ (ಇದು ಒಟ್ಟು ಮೊತ್ತದ ಶೇ 15ರಷ್ಟಾಗುತ್ತದೆ)
  • ಪರಿಶೋಧನೆ ನಡೆಸಿದ ಅಧಿಕಾರಿ ಹೆಚ್ಚುವರಿ ಶೇ 10 ತೆರಿಗೆ ವಿಧಿಸುವುದಕ್ಕೂ ಅವಕಾಶ ಇದೆ
  • 85% ಪಾವತಿಸಬೇಕಾದ ಮೊತ್ತ

[೧೧][೧೨]

ಚಲಾವಣೆಯಲ್ಲಿದ್ದ ಹಣ ಬದಲಾಯಿಸಿ

  • ಈಗ ಸರ್ಕಾರ ಹೇಳುತ್ತಿರುವಂತೆ ನೋಟುಗಳನ್ನು ರದ್ದು ಮಾಡುವ ಮೊದಲು ಚಲಾವಣೆಯಲ್ಲಿದ್ದ 500 ಮತ್ತು 1000 ರೂಪಾಯಿಗಳ ಮತ್ತು ಇತರ ನೋಟುಗಳ ಒಟ್ಟು ಮೌಲ್ಯ 17.54 ಲಕ್ಷ ಕೋಟಿ ರೂಪಾಯಿಗಳು. ಇದರಲ್ಲಿ ಶೇಕಡಾ 45ರಷ್ಟು 500 ರೂಪಾಯಿ ನೋಟುಗಳು. ಅದು ಸುಮಾರು 7.89 ಲಕ್ಷ ಕೋಟಿ ರೂಪಾಯಿಗಳಷ್ಟಾಗುತ್ತದೆ. ಉಳಿದಂತೆ ಶೇಕಡಾ 39ರಷ್ಟು ನೋಟುಗಳು 1000 ರೂಪಾಯಿಗಳವು. ಇದರ ಮೌಲ್ಯ ಸುಮಾರು 6.84 ಲಕ್ಷ ಕೋಟಿ ರೂಪಾಯಿಗಳು. (ಇದು ಪ್ರಜಾವಾಣಿ ವರದಿ)

ಚಲಾವಣೆಯಲ್ಲಿದ್ದ ಹಣ:(ಈ ಕೆಳಗಿನ ಮಾಹಿತಿ; firstpost.ವರದಿ) ಬದಲಾಯಿಸಿ

  • ಕಪ್ಪುಹಣ ಎಲ್ಲಿ??
31 ಮಾರ್ಚಿ 2016,ರಲ್ಲಿ ಚಲಾವಣೆಯಲ್ಲಿದ್ದ ನೋಟುಗಳು
ವಿವರ ನೋಟುಗಳ ಸಂಖ್ಯೆ ಶೇಕಡಾ ಮೌಲ್ಯ- ಹಣದ ಮೊತ್ತ ಶೇಕಡಾ
500ರ ನೋಟುಗಳು 1571 ಕೋಟಿ 17. 4 % 7.9 ಲಕ್ಷ ಕೋಟಿ 47. 8
1000 ದ ನೋಟುಗಳು 633 ಕೋಟಿ 7. 00% 6. 3 ಲಕ್ಷ ಕೋಟಿ 38. 5
500ರ +1000 ದ ನೋಟುಗಳು 2203 ಕೋಟಿ 24. 4% 14. 2 ಲಕ್ಷ ಕೋಟಿ 86. 4
ಎಲ್ಲಾ ಬಗೆಯ ನೋಟುಗಳು 9027 ಕೋಟಿ 16. 4 ಲಕ್ಷ ಕೋಟಿ sourceRBI
ನವೆಂಬರ್ 27ರ ತನಕ ವಾಪಾಸು ಬಂದ ಹಳೆ ನೋಟುಗಳು 18 ದಿನದಲ್ಲಿ 8.45 ಲಕ್ಷ ಕೋಟಿ
ಆರ್.ಬಿ.ಐ.ನಲ್ಲಿ ಬ್ಯಾಂಕಿನವರ ಠೇವಣಿ ಮತ್ತು ಚಾಲ್ತಿಹಣ ಅಂದಾಜು 5 ಲಕ್ಷ ಕೋಟಿ
ಆರ್.ಬಿ.ಐ.ನಲ್ಲಿ ಡಿಸೆಂಬರ್ 2016 ಆದಿಯಲ್ಲಿ ಒಟ್ಟು ಹಳೇ ನೋಟು 13 ಲಕ್ಷ ಕೋಟಿ ಉಳಿದ 1. 2ಲಕ್ಷ ಕೋಟಿ ಜಮಾಕ್ಕೆ ಇನ್ನೂ 33ದಿನ ಇದೆ

[೧೩]

ಹಾಲಿ ಚಲಾವಣೆಯಲ್ಲಿ ನೋಟುಗಳ ಸಂಖ್ಯೆ ಬದಲಾಯಿಸಿ

  • ನೋಟುಗಳ ಸಂಖ್ಯೆಯಲ್ಲಿ ಹೇಳುವುದಾದರೆ 15.78 ಶತಕೋಟಿ 500 ರೂಪಾಯಿಗಳ ಮತ್ತು 6.84 ಶತಕೋಟಿ 1,000 ರೂಪಾಯಿಗಳ ನೋಟುಗಳು ಚಲಾವಣೆಯಲ್ಲಿದ್ದವು.(ಪ್ರಜಾವಾನಣಿ ವರದಿ)

ಇನ್ನೂ ಆರು ತಿಂಗಳ ಬೇಕು ಬದಲಾಯಿಸಿ

  • 500 ರೂಪಾಯಿಗಳ ಮುದ್ರಣ ನವೆಂಬರ್ 10ರಿಂದ ಆರಂಭವಾಗಿದೆ ಎಂದು ಕೊಂಡರೆ ಅದು ಪೂರ್ಣಗೊಳ್ಳಲು ಇನ್ನೂ ಆರು ತಿಂಗಳ ಬೇಕಾಗುತ್ತದೆ. ಮುದ್ರಣಾಲಯಗಳ ಪೂರ್ಣ ಸಾಮರ್ಥ್ಯದ ಶೇಕಡಾ 80ರಷ್ಟನ್ನು ಮುದ್ರಣಕ್ಕೆ ಬಳಸಿಕೊಳ್ಳಬಹುದು. ಇನ್ನುಳಿದ ಶೇಕಡಾ 20ರಷ್ಟನ್ನು 100 ರೂಪಾಯಿಗಳಿಂದ 5 ರೂಪಾಯಿಗಳ ತನಕದ ನೋಟುಗಳ ಮುದ್ರಣಕ್ಕೆ ಬಳಬೇಕಾಗುತ್ತದೆ. ಕೊರತೆ ಇರುವ ನೋಟುಗಳಲ್ಲಿ ಈಗ ಇವೂ ಸೇರಿಕೊಂಡಿವೆ.ಅಂದರೆ ಏಪ್ರಿಲ್ ತಿಂಗಳ ಕೊನೆಯ ಹೊತ್ತಿಗಷ್ಟೇ ನೋಟುಗಳ ಕೊರತೆ ಪೂರ್ಣವಾಗಿ ನಿವಾರಣೆಯಾಗುತ್ತದೆ. (ಅಂದರೆ ಪ್ರಧಾನ ಮಂತ್ರಿಗಳ ಭರವಸೆಯ 50 ದಿನಗಳಲ್ಲಿ ನೋಟಿನ ಸಮಸ್ಯೆ ಪರಿಹಾರವಾಗುವುದಿಲ್ಲ.)[೧೪]

ಹಣದ ರೂಪದಲ್ಲಿ ಅತಿ ಕಡಿಮೆ ಕಪ್ಪುಹಣ ಇತ್ತೇ? ಬದಲಾಯಿಸಿ

  • 20 ದಿನದ ಸಮೀಕ್ಷೆ:
  • ಹಣದ ರೂಪದಲ್ಲಿ ಅತಿ ಕಡಿಮೆ ಕಪ್ಪುಹಣ
  • ಕಪ್ಪು ಹಣದ ಮೇಲಿನ ಸರ್ಜಿಕಲ್ ಸ್ಟ್ರೈಕ್ ವಿಫಲ
  • 1 Dec, 2016
  • ದೇಶದೊಳಗೆ ಇದ್ದ ಕಪ್ಪು ಹಣ ಅದರಲ್ಲೂ ಮುಖ್ಯವಾಗಿ ಐದು ನೂರು ಮತ್ತು ಒಂದು ಸಾವಿರ ರೂಪಾಯಿಗಳ ನೋಟುಗಳ ರೂಪದಲ್ಲಿದ್ದ ಕಪ್ಪು ಹಣ ಎಷ್ಟೆಂಬ ಖಚಿತ ಲೆಕ್ಕಾಚಾರ ಯಾರ ಬಳಿಯೂ ಇರಲಿಲ್ಲ. ಇಲ್ಲಿಯ ತನಕ ಈ ಮೊತ್ತವನ್ನು ಮೂರರಿಂದ ಐದು ಲಕ್ಷ ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗುತ್ತಿತ್ತು. ಹಣಕಾಸು ಖಾತೆಯ ರಾಜ್ಯ ಸಚಿವ ಅರ್ಜುನ್ ರಾಮ್ ಮೆಘ್ವಾಲ್ ಅವರು 'ನವೆಂಬರ್ 8ರವರೆಗಿನ ಲೆಕ್ಕಾಚಾರದಂತೆ ದೇಶದಲ್ಲಿ ಚಲಾವಣೆಯಲ್ಲಿದ್ದ 500 ಮತ್ತು 1000 ರೂಪಾಯಿಗಳ ನೋಟುಗಳ ಮೌಲ್ಯ 15.44 ಲಕ್ಷ ಕೋಟಿ ರೂಪಾಯಿಗಳು'
  • ನವೆಂಬರ್ 27ರ ತನಕ 8.45 ಲಕ್ಷ ಕೋಟಿ ಮೌಲ್ಯದ ಹಳೆಯ ನೋಟುಗಳು ಬ್ಯಾಂಕ್‌ಗಳಿಗೆ ಠೇವಣಿಯಾಗಿ ಬಂದಿದೆ. ಇದು ಕೇವಲ 18 ದಿನಗಳ ಲೆಕ್ಕಾಚಾರ.
  • ವಿವಿಧ ವಾಣಿಜ್ಯ ಬ್ಯಾಂಕ್‌ಗಳು ರಿಸರ್ವ್ ಬ್ಯಾಂಕ್‌ನಲ್ಲಿ ಮೀಸಲು ನಿಧಿಯೊಂದನ್ನು ಇಟ್ಟಿರಬೇಕಾಗುತ್ತದೆ. ಈ ಮೀಸಲು ನಿಧಿಗೆ ಸಾಮಾನ್ಯವಾಗಿ 500 ಮತ್ತು 1000 ರೂಪಾಯಿಗಳ ನೋಟುಗಳನ್ನೇ ಬಳಸಲಾಗುತ್ತಿತ್ತು. ಈ ನಿಧಿಯ ರೂಪದಲ್ಲಿದ್ದ ಹಣ 4.06 ಲಕ್ಷ ಕೋಟಿ ರೂಪಾಯಿಗಳು.
  • ಇದರ ಹೊರತಾಗಿ ಬ್ಯಾಂಕುಗಳಲ್ಲಿ ಇದ್ದ ಹಣದ ಪ್ರಮಾಣ 70,000 ಕೋಟಿ ರೂಪಾಯಿಗಳು. ಇದರಲ್ಲಿ ಬೇರೆ ಬೇರೆ ಮುಖ ಬೆಲೆಯ ನೋಟುಗಳೂ ಇರುತ್ತವೆ ಎಂಬ ಅಂಶವನ್ನು ಪರಿಗಣಿಸಬೇಕು. ಹಾಗೆಯೇ ಒಟ್ಟಾರೆ ನೋಟುಗಳಲ್ಲಿ 1000 ಮತ್ತು 500 ರೂಪಾಯಿ ನೋಟುಗಳೇ ಶೇಕಡಾ 86ರಷ್ಟಿದ್ದವು ಎಂಬ ಅಂಶವನ್ನೂ ಗಮನದಲ್ಲಿಟ್ಟುಕೊಂಡು ಲೆಕ್ಕ ಹಾಕಬೇಕಾಗುತ್ತದೆ. ಸುಮಾರು 50,000 ಕೋಟಿಯಷ್ಟು ಹಣ ದೊಡ್ಡ ಮೊತ್ತದ ನೋಟುಗಳಲ್ಲಿದ್ದವು ಎಂದುಕೊಳ್ಳಬಹುದು.
  • ಅಂದರೆ ನವೆಂಬರ್ 27ರ ತನಕ ಜನರು ಬ್ಯಾಂಕ್‌ಗಳಿಗೆ ತಂದುಕೊಟ್ಟ ದೊಡ್ಡ ಮೊತ್ತದ ನೋಟುಗಳು, ರಿಸರ್ವ್ ಬ್ಯಾಂಕ್‌ನಲ್ಲಿದ್ದ ಮೀಸಲು ನಿಧಿ ಮತ್ತು ಬ್ಯಾಂಕ್‌ಗಳ ಬಳಿ ಇದ್ದ ನೋಟುಗಳನ್ನೆಲ್ಲಾ ಒಟ್ಟು ಸೇರಿಸಿದರೆ 13 ಲಕ್ಷ ಕೋಟಿ ರೂಪಾಯಿಗಳಾಗುತ್ತದೆ.
  • ಈವರೆಗಿನ ಲೆಕ್ಕಾಚಾರಗಳಂತೆ ಎರಡು ತೀರ್ಮಾನಕ್ಕೆ ಬರಬಹುದು. ಮೊದಲನೆಯದ್ದು 500 ಮತ್ತು 1000 ರೂಪಾಯಿಗಳ ನೋಟಿನ ರೂಪದಲ್ಲಿದ್ದ ಕಪ್ಪು ಹಣದ ಪ್ರಮಾಣ ಬಹಳ ಸಣ್ಣದಾಗಿತ್ತು. ಎರಡನೆಯದ್ದು ಕಪ್ಪು ಹಣವನ್ನು ಇಟ್ಟುಕೊಂಡಿದ್ದವರು ಯಶಸ್ವಿಯಾಗಿ ಅದನ್ನು ಚಲಾವಣೆಗೆ ಅರ್ಹವಾಗಿರುವ ನೋಟುಗಳಾಗಿ ಪರಿವರ್ತಿಸಿಕೊಂಡಿದ್ದಾರೆ.
  • ಈ ಎರಡು ತರ್ಕಗಳಲ್ಲಿ ಯಾವು ನಿಜವಾದರೂ ಸರ್ಕಾರ ಬೆಟ್ಟ ಅಗೆದು ಇಲಿಯನ್ನು ಹಿಡಿವ ಕೆಲಸ ಮಾಡಿತು ಎನ್ನಬೇಕಾಗುತ್ತದೆ. ಪ್ರಧಾನ ಮಂತ್ರಿಯವರು ಕಪ್ಪು ಹಣದ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‌‌ನಲ್ಲಿ ಗಾಯಗೊಂಡವರು ಬಡವರು ಮಾತ್ರ.[೧೫]

ಭಾರತದ ಕಪ್ಪುಹಣದ ಅಂದಾಜು ಬದಲಾಯಿಸಿ

  • ಅರ್ಥಶಾಸ್ತ್ರಜ್ಞ ಷ್ನೇಯ್ಡರ್,ಪ್ರಕಾರ ಕ್ರಿಯಾತ್ಮಕ ಬಹು-ಸೂಚಕಗಳು ಬಹು ಕಾರಣಗಳ ವಿಧಾನ ಮತ್ತು ಕರೆನ್ಸಿ ಬೇಡಿಕೆ ವಿಧಾನ ಬಳಸಿಕೊಂಡು ಭಾರತದ ಕಪ್ಪು ಹಣ ಆರ್ಥಿಕತೆಯ ಗಾತ್ರ ವನ್ನು ಅಂದಾಜುಮಾಡಿದಾಗ ಅದು, 28- 30% ರಷ್ಟು ಇರಬಹುದು. ಅದು ಏಷ್ಯಾ ದೇಶಗಳ ಎಲ್ಲದರ ಸರಾಸರಿಗೆ ಹೋಲಿಸಿದರೆ 23 ಮತ್ತು 26% ನಡುವಿನ ಅಂದಾಜಿನಲ್ಲಿದೆ ಒಂದು ಆಫ್ರಿಕಾ ದೇಶಗಳ ಕಪ್ಪುಹಣದ ಸರಾಸರಿ 41 ರಿಂದ 44%, ಮತ್ತು ಲ್ಯಾಟಿನ್ ಅಮೆರಿಕಾ ದೇಶಗಳ ಸರಾಸರಿ 41- 44% ಳಿದ್ದು ಆಯಾ ದೇಶೀಯ ಉತ್ಪನ್ನಗಳ ಒಟ್ಟಾರೆ ಸರಾಸರಿ ಪ್ರಮಾಣದ. ಈ ಅಧ್ಯಯನದ ಪ್ರಕಾರ, 96 ಅಭಿವೃದ್ಧಿಶೀಲ ದೇಶಗಳಲ್ಲಿ ("ಅಧಿಕೃತ" ಜಿಡಿಪಿ ಒಂದು ಪ್ರತಿಶತ ಎಂದು) ನೆರಳು (ಕಪ್ಪುಹಣ) ಆರ್ಥಿಕ ವ್ಯವಸ್ಥೆಯ ಸರಾಸರಿ ಗಾತ್ರ 38.7% ರಷ್ಟು; ಕಪ್ಪು ಹಣದ ವಿಚಾರದಲ್ಲಿ ಅಭಿವೃದ್ಧಿ ರಾಷ್ಟ್ರಗಳಲ್ಲಿ ಭಾರತವು ಈ ಸರಾಸರಿಯ ಕೆಳಗೆಯೇ ಇದೆ.ಎಂದರೆ 28 ರಿಂದ 30% ರಷ್ಟು.[೧೬]

[೧೭][೧೮]

ಕಪ್ಪುಹಣ ಎಲ್ಲಿ? ಬದಲಾಯಿಸಿ

  • ಕನ್ನಡಪ್ರಭ ವರದಿ:01 Dec 2016;
ವಿವರ ಅಂಕೆ-ಸಂಖ್ಯೆ
ಚಾಲ್ತಿಯಲ್ಲಿದ್ದ 500 ಮತ್ತು 1000 ರೂ ಮೌಲ್ಯದ ಒಟ್ಟು ಹಣ 15.44 ಲಕ್ಷ ಕೋಟಿ ರೂ
500 ರೂ ನೋಟುಗಳಲ್ಲಿ 8.58 ಲಕ್ಷ ರೂ ಕೋಟಿ ರೂ
1000 ರೂ ನೋಟುಗಳಲ್ಲಿ 6.86 ಲಕ್ಷ ರೂ ಕೋಟಿ ರೂ
ನವೆಂಬರ್ 27 ರ ನಡುವೆ ಬ್ಯಾಂಕ್ ಗಳಲ್ಲಿ ನಿಷೇಧಿತ ನೋಟುಗಳು ಜಮಾ ಆಗಿರುವ ಹಣದ ಒಟ್ಟು ಮೊತ್ತ 8.45 ಲಕ್ಷ ಕೋಟಿ ರೂ
ನವೆಂಬರ್ 8 ರಂದು ಬ್ಯಾಂಕ್ ಗಳು ಆರ್ ಬಿ ಐ ನಲ್ಲಿ ತಮ್ಮ ಠೇವಣಿ (ಸಿ ಆರ್ ಆರ್) ಒಟ್ಟು ನಗದು 4.06 ಲಕ್ಷ ಕೋಟಿ ರೂ.
ಬ್ಯಾಂಕ್ ಗಳು ದಿನನಿತ್ಯದ ವ್ಯವಹಾರದ ಒಟ್ಟು ನಗದು ಅಂದಾಜು 70,000 ಕೋಟಿ ರೂ
ಈಗಗಾಲೇ ಆರ್ ಬಿ ಐ ಸೇರಿ ದ ಒಟ್ಟು ನಿಷೇಧಿತ ನೋಟುಗಳು ನಗದು ಅಂದಾಜಿನಲ್ಲಿ ಒಟ್ಟು ಅಂದಾಜು 13 ಲಕ್ಷ ಕೋಟಿ ರೂ
ಇನ್ನು 30 ದಿನಗಳು ಬಾಕಿಯಿದ್ದು ಡಿಸೆಂಬರ್ 30 ರೊಳಗೆ ಜಮಾ ಆಗುವುದು ಇನ್ನುಳಿದ ಹಣ 2 ಲಕ್ಷ ಕೋಟಿ ರೂ
ಕಪ್ಪು ಹಣ ಉನ್ನತ ಮೌಲ್ಯದ ನೋಟುಗಳಲ್ಲಿ ಶೇಖರವಾಗಿಲ್ಲವೇ? ಕಪ್ಪುಹಣ ಎಲ್ಲಿ?
ಇದರಲ್ಲಿ ಬದಲಾಯಿಲಾಗದ ನೇಪಾಳದಲ್ಲಿ ಚಲಾವಣೆಯಲ್ಲಿದ್ದ ಒಂದು ಲಕ್ಷ ಕೋಟಿಗೂ ಹೆಚ್ಚನ ಹಣ ಸೇರಿಲ್ಲ. ರೂ.ಒಂದು ಲಕ್ಷ ಕೋಟಿಗೂ ಹೆಚ್ಚನ ಹಣ

[೧೯]

ಘೋಷಣೆಯ ಹಣ ಸ್ವೀಕರಿಸಲು ನಿರಾಕರಣ ಬದಲಾಯಿಸಿ

  • ಡಿಸೆಂಬರ್ 04, 2016 19:22 ಹೊಸದಿಲ್ಲಿ
  • ತೆರಿಗೆ ಅಧಿಕಾರಿಗಳು 2,13,860 ಕೋಟಿ ರೂ ಮೊತ್ತದ ಎರಡು ಘೋಷಣೆಗಳನ್ನು ತಿರಸ್ಕರಿಸಿದ್ದಾರೆ.
  • ಆದಾಯ ಘೋಷಣೆ ಯೋಜನೆ (ಐಡಿಎಸ್‌) ಅಡಿ ಮುಂಬಯಿ ಕುಟುಂಬವೊಂದು ₹ 2 ಲಕ್ಷ ಕೋಟಿ ಅಕ್ರಮ ಸಂಪತ್ತು ಘೋಷಣೆಮಾಡಿದೆ. ಆದಾಯ ತೆರಿಗೆ (ಐ.ಟಿ) ಇಲಾಖೆ ಅದನ್ನು ತಿರಸ್ಕರಿಸಿದ್ದು, ಕುಟುಂಬದ ವಿರುದ್ಧ ತನಿಖೆ ಆರಂಭಿಸಿದೆ.
  • ಏನಾಯಿತು: ಎರಡು ಹೆಚ್ಚಿನ ಮೌಲ್ಯದ ಘೋಷಣೆಗಳನ್ನು ನಾಲ್ಕು ತಿಂಗಳ ಆದಾಯ ಪ್ರಕಟಣೆ ಯೋಜನೆ ಸಂದರ್ಭದಲ್ಲಿ ಮಾಡಲಾಯಿತು (ಐಡಿಎಸ್)
  • ಇದರ ಅರ್ಥ ಏನು: ಆದಾಯ ತೆರಿಗೆ ಇಲಾಖೆಯವರು ಗುಜರಾತ್‍ನ ಸ್ಥಿರಾಸ್ಥಿಯುಳ್ಳ ಮಹೇಶ್ ಷಾರ (ರೂ 13.860 ಕೋಟಿ;) ಘೋಷಣೆಯನ್ನು ಮತ್ತು ನಾಲ್ಕು ಸದಸ್ಯರ ಮುಂಬಯಿ ಕುಟುಂಬದ (2 ಲಕ್ಷ ಕೋಟಿ) ಘೋಷಣೆಯನ್ನು ನಕಲಿ ಘೋಷಣೆ (ಫೇಕ್) ಎಂದು ಗಣನೆಗೆ ತೆಗೆದುಕೊಂಡಿಲ್ಲ' ಎಂದು ಹೇಳಿದೆ.
  • ಮುಂದೆ: ಆದಾಯ ತೆರಿಗೆ ಇಲಾಖೆಯು ಘೋಷಣೆಗಾರರ ವಿರುದ್ಧ ತನಿಖೆಗೆ ಆದೇಶ ಮಾಡಿದೆ.(ಇದನ್ನು ತೆಗೆದುಕೊಂಡಿದ್ದರೆ ಸರ್ಕಾರ ಅಚ್ಚು ಹಾಕಿದ ಎಲ್ಲಾ ನೋಟುಗಳೂ ವಾಪಾಸು ಬಂದಂತೆ ಆಗುತ್ತಿತ್ತು. ಕಪ್ಪು ಹಣದ ನೋಟುಗಳೇ ಇಲ್ಲ ಎಂದಾಗುತ್ತಿತ್ತು)

[೨೦]

  • ಇದುವರೆಗೆ ಐಡಿಎಸ್‌ ಯೋಜನೆ ಅಡಿ ಘೋಷಣೆಯಾಗಿರುವ ಅಕ್ರಮ ಸಂಪತ್ತಿನ ಒಟ್ಟು ಮೌಲ್ಯ ರೂ.67,382 ಕೋಟಿ. ಇದಕ್ಕಿಂತ ಈ ಕುಟುಂಬ ಘೋಷಿಸಿರುವ ಸಂಪತ್ತಿನ ಮೌಲ್ಯ ಮೂರುಪಟ್ಟು ಹೆಚ್ಚು.(Income Disclosure Scheme (IDS) by four members of a Mumbai family as it was found to be "suspicious"and was made by persons with "very small means".)[೨೧][೨೨]

ಲೆಕ್ಕಕ್ಕೆ ಸಿಗದ ಹಣ ಯಾ ಕಪ್ಪುಹಣ ಬದಲಾಯಿಸಿ

  • ಲೆಕ್ಕಕ್ಕೆ ಸಿಗದ ಆದಾಯದ ಗಾತ್ರ; ಇಲ್ಲಿ ಮಾಡಿದ ಲೆಕ್ಕಾಚಾರದಂತೆ ಲೆಕ್ಕಕ್ಕೆ ಸಿಗದ ಆದಾಯವನ್ನು ಜಿಡಿಪಿಯ ಶೇ 40ರಷ್ಟು ಎಂದು ಅಂದಾಜಿಸಲಾಗಿದೆ.
  • ಕ್ಷೇತ್ರವಾರು ವಿಶ್ಲೇಷಣೆ
  • ೧.ರಿಯಲ್‌ ಎಸ್ಟೇಟ್‌; 40 %: ಒಟ್ಟು ಕಪ್ಪುಹಣದಲ್ಲಿ ಪಾಲು;
  • *ರಿಯಲ್‌ ಎಸ್ಟೇಟ್ ಕ್ಷೇತ್ರದ ಪ್ರಮುಖ ಪಾತ್ರಧಾರಿಗಳು: ಡೆವಲಪರ್‌ಗಳು, ಬಿಲ್ಡರ್‌ಗಳು, ಗುತ್ತಿಗೆದಾರರು ಮತ್ತು ಹೂಡಿಕೆದಾರರು.
  • ೨.ಶಿಕ್ಷಣ ಕ್ಷೇತ್ರರೂ.48,400 ಕೋಟಿ ಶಿಕ್ಷಣ ಕ್ಷೇತ್ರದಲ್ಲಿ ಒಂದು ವರ್ಷದಲ್ಲಿ ಸೃಷ್ಟಿಯಾಗುವ ಲೆಕ್ಕಕ್ಕೆ ಸಿಗದ ಹಣದ ಮೊತ್ತ.
  • ೩.ಚಿನ್ನ; 18 ಸಾವಿರ ಟನ್‌:ರೂ. 64 ಲಕ್ಷ ಕೋಟಿ: ದಾಸ್ತಾನು ಇಟ್ಟಿರುವ 18 ಸಾವಿರ ಟನ್‌ ಚಿನ್ನದ ಮೌಲ್ಯ
  • ೪.ಗಣಿಗಾರಿಕೆ ರೂ.27,800 ಕೋಟಿ: ಪ್ರಮಾಣ ಶೇ 10.2ರಷ್ಟು.
  • ೫.ಕೃಷಿ ರೂ.50 ಸಾವಿರ ಕೋಟಿ: ಇದರ ಪ್ರಮಾಣ ಶೇ 1.2ರಷ್ಟು.
  • ೬.ಹಣ ಲೇವಾದೇವಿ ರೂ.18.86 ಲಕ್ಷ ಕೋಟಿ:
  • ೭.ಸರ್ಕಾರಿ ಗುತ್ತಿಗೆಗಳಲ್ಲಿ ನಡೆಯುವ ಲಂಚದ ಪ್ರಮಾಣ.10–20 %: ಸರ್ಕಾರಿ ಅಧಿಕಾರಿಗಳೇ ಒಪ್ಪಿಕೊಂಡಿರುವಂತೆ.
  • ೭.ಚುನಾವಣಾ ನಿಧಿ
  • 75%: ಚುನಾವಣೆಯಲ್ಲಿ ಬಳಕೆಯಾಗುವ ಲೆಕ್ಕಕ್ಕೆ ಸಿಗದ ಹಣದ ಪ್ರಮಾಣ 2001ರಲ್ಲಿ ಸಮಿತಿಯೊಂದು ಕಂಡುಕೊಂಡಿರುವಂತೆ, ಅಭ್ಯರ್ಥಿಯೊಬ್ಬ ಪ್ರಚಾರಕ್ಕಾಗಿ ಮಿತಿಗಿಂತ 20 ಪಟ್ಟು ಅಧಿಕ ಖರ್ಚು ಮಾಡಿದ್ದ. ನೀರಾವರಿ, ರಸ್ತೆ, ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ಸರ್ಕಾರಿ ಯೋಜನೆಗಳು ಅಕ್ರಮಗಳು ನಡೆಯುವ ಇತರ ಪ್ರಮುಖ ತಾಣಗಳು

[೨೩]

ಕಪ್ಪುಹಣ ಘೋಷಣೆಗೆ ಮಾರ್ಚ್‌ವರೆಗೆ ಅವಕಾಶ ಬದಲಾಯಿಸಿ

  • 17 Dec, 2016
  • 2017ರ ಮಾರ್ಚ್‌ 31ರವರೆಗೆ ಬ್ಯಾಂಕ್‌ ಖಾತೆಗಳಲ್ಲಿ ಠೇವಣಿ ಇರಿಸುವ ದಾಖಲೆರಹಿತ ಹಣವನ್ನು ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯ ಅಡಿಯಲ್ಲಿ ಘೋಷಣೆ ಮಾಡುವುದಕ್ಕೆ ಅವಕಾಶ ಇದೆ ಎಂದು ಸರ್ಕಾರ ತಿಳಿಸಿದೆ. ಹೀಗೆ ಸಕ್ರಮಗೊಳಿಸುವ ಹಣಕ್ಕೆ ಶೇ 50ರಷ್ಟು ತೆರಿಗೆ ಮತ್ತು ದಂಡ ವಿಧಿಸಲಾಗುವುದು. ಒಟ್ಟು ಮೊತ್ತದ ಶೇ 25ರಷ್ಟನ್ನು ನಾಲ್ಕು ವರ್ಷ ಬಡ್ಡಿರಹಿತ ಠೇವಣಿಯಾಗಿ ಇರಿಸಬೇಕಾಗುತ್ತದೆ. ಶೇ 25ರಷ್ಟು ಮೊತ್ತ ಮಾತ್ರ ದಾಖಲೆರಹಿತ ಹಣ ಹೊಂದಿದ್ದವರಿಗೆ ದೊರೆಯುತ್ತದೆ. ನಂತರ ಕಪ್ಪುಹಣ ಪತ್ತೆಯಾದರೆ ಗರಿಷ್ಠ ಶೇ 87.25ರಷ್ಟು ತೆರಿಗೆ ಮತ್ತು ದಂಡ ವಿಧಿಸುವುದಕ್ಕೆ ಅವಕಾಶ.

ಯೋಜನೆ ಬದಲಾಯಿಸಿ

  • ದಾಖಲೆರಹಿತ ಹಣ ಸಕ್ರಮಗೊಳಿಸಲು ಅವಕಾಶ ನೀಡುವ ತೆರಿಗೆ (ತಿದ್ದುಪಡಿ) ಮಸೂದೆಗೆ ರಾಷ್ಟ್ರಪತಿ ಅಂಕಿತ.
  • ಗೋಪ್ಯವಾಗಿಯೇ ಇರಲಿದೆ ಕಪ್ಪುಹಣ ಘೋಷಣೆ ಮಾಹಿತಿ: ಘೋಷಿಸಿದವರ ವಿರುದ್ಧ ವಿಚಾರಣೆಗೆ ಮಾಹಿತಿ ಬಳಕೆ ಇಲ್ಲ
  • ಕಪ್ಪುಹಣ ಘೋಷಣೆ ನಂತರ ವಿಚಾರಣೆಯಿಂದ ರಕ್ಷಣೆ ಪಡೆಯಲು ತೆರಿಗೆ ಪಾವತಿ ರಶೀತಿ
  • ಬೇರೆಯವರ ಹಣವನ್ನು ತಮ್ಮ ಹೆಸರಿನಲ್ಲಿ ಯಾರೂ ಘೋಷಿಸಿಕೊಳ್ಳದಂತೆ ಸರ್ಕಾರದಿಂದ ಸೂಚನೆ
  • ಆದಾಯದ ಬಗ್ಗೆ ಸುಳ್ಳು ಮಾಹಿತಿ ನೀಡಿದರೆ ಪಾವತಿಸಬೇಕಾದ ತೆರಿಗೆ ಶೇ 200ರಷ್ಟು ದಂಡ ವಿಧಿಸುವ ಆದಾಯ ತೆರಿಗೆ ಕಾಯ್ದೆಯ 270 ಎ ಸೆಕ್ಷನ್‌ ಈಗಲೂ ಅಸ್ತಿತ್ವದಲ್ಲಿದೆ. ಅಗತ್ಯ ಸಂದರ್ಭಗಳಲ್ಲಿ ಬಳಕೆಯಾಗಲಿದೆ: ಸರ್ಕಾರ ಸ್ಪಷ್ಟನೆ
  • ನಿಷ್ಕ್ರಿಯ ಖಾತೆಗಳು ಮತ್ತು ಶೂನ್ಯ ಠೇವಣಿಯ ಜನಧನ ಖಾತೆಗಳ ಠೇವಣಿ, ಸಾಲ ಮರುಪಾವತಿ, ನಗರ ಸಹಕಾರ ಬ್ಯಾಂಕುಗಳು, ಆರ್‌ಟಿಜಿಎಸ್‌ ಹಣ ವರ್ಗಾವಣೆ ಮೇಲೆ ಕಟ್ಟುನಿಟ್ಟಿನ ನಿಗಾ.
  • ರಾಜಕೀಯ ಪಕ್ಷಗಳು ಬ್ಯಾಂಕ್‌ಗೆ ಜಮೆ ಮಾಡುವ ಹಳೆಯ ರೂ.500, ರೂ.1,000 ನೋಟುಗಳಿಗೆ ಆದಾಯ ತೆರಿಗೆಯಿಂದ ವಿನಾಯಿತಿ. ಆದರೆ ಈ ಹಣಕ್ಕೆ ದಾಖಲೆ ಇರಬೇಕು ಮತ್ತು ಒಬ್ಬ ವ್ಯಕ್ತಿಯಿಂದ ರೂ.20 ಸಾವಿರಕ್ಕಿಂತ ಹೆಚ್ಚು ಹಣ ಸ್ವೀಕರಿಸಿರಬಾರದು ಎಂಬ ನಿಯಮ.[೨೪]

ಭಾರತ ದೇಶದಲ್ಲಿ ಕಾಳಧನವೇ ಇಲ್ಲವೇ? ಬದಲಾಯಿಸಿ

  • ನೋಟು ರದ್ಧತಿ ಬಳಿಕ ರೂ.1000 ಮುಖಬೆಲೆಯ ಶೇ 98.7 ರಷ್ಟು ನೋಟುಗಳು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ )ಮರಳಿವೆ ಎಂದು ಆರ್‌ಬಿಐ ವೆಬ್‌ಸೈಟ್‌ನಲ್ಲಿ (27 Aug, 2017) ಪ್ರಕಟಿಸಲಾಗಿದೆ. ಇದರಿಂದ ದೇಶದಲ್ಲಿ ಕಾಳಧನವೇ ಇಲ್ಲ ಎಂಬುದು ವೇದ್ಯವಾದಂತಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಬ್ಯಾಂಕಿಂಗ್‌, ಖಜಾನೆ ಮತ್ತು ಸಾರ್ವಜನಿಕರ ಬಳಿಯಿಂದ 8,925 ಕೋಟಿಯಷ್ಟು ರೂ.1000 ಮುಖ ಬೆಲೆಯ ನೋಟುಗಳು ಆರ್‌ಬಿಐಗೆ ಮರಳಿವೆ. ಇನ್ನು ಶೇ 1.3 ರಷ್ಟು ನೋಟುಗಳು ಮಾತ್ರ ಆರ್‌ಬಿಐ ಕೈಸೇರಿಲ್ಲ ಎಂದು ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆ ವರದಿ ಮಾಡಿದೆ. ಆರ್‌ಬಿಐ ವೆಬ್‌ಸೈಟ್‌ ನಲ್ಲಿ ರೂ.500 ಮುಖ ಬೆಲೆಯ ನೋಟುಗಳ ಬಗ್ಗೆ ಯಾವುದೇ ಮಾಹಿತಿಯನ್ನು ಪ್ರಕಟಿಸಿಲ್ಲ. ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಾಳಧನವಿದೆ ಎಂದು ಹೇಳುತ್ತಿದ್ದ ಬಿಜೆಪಿ ಸರ್ಕಾರಕ್ಕೆ ಈ ಮಾಹಿತಿಯಿಂದ ದಿಘ್ಬ್ರಮೆಯಾದಂತಾಗಿದೆ. ಶೇ 99 ರಷ್ಟು ರೂ.1000 ಮುಖಬೆಲೆಯ ನೋಟುಗಳು ಮರಳಿರುವುದರಿಂದ ಕಾಳಧನ ಅತಿ ಕಡಿಮೆ ಪ್ರಮಾಣದಲ್ಲಿ ಇರುವುದನ್ನು ಊಹಿಸಬಹುದು ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟರು.[೨೫]

ನೋಡಿ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. India writes to Switzerland seeking black money info;INDIA Updated: Jun 30, 2014
  2. White paper on black money likely to be tabled in Budget Session
  3. ["SC raps govt on black money in foreign banks – Economy and Politics". livemint.com. 19 January 2011. Retrieved 23 May 2011.]
  4. Black money: Where is Rs 15 lakh for each Indian? Congress asksTNN | Oct 30, 2014, 04.29 AM IST
  5. ["Ram Jethmalani attacks Modi, Amit Shah for failing to bring back black money". Retrieved 29 July 2015.]
  6. Withdrawal of Legal Tender Status for ₹ 500 and ₹ 1000 Notes: RBI Notice;Date : Nov 08, 2016
  7. Demonetisation of Rs. 500 and Rs. 1000 notes: RBI explains
  8. scrapped currency notes and the entire exchange process
  9. "ಪನಾಮ ಪೇಪರ್ಸ್‌: ಧನಾಢ್ಯರು ಹಣವನ್ನು ಬಚ್ಚಿಡುವ ಕಥೆ;ಶಿವಸುಂದರ್;20 Nov, 2016". Archived from the original on 2017-05-18. Retrieved 2017-01-17.
  10. "ಆತಂಕ; ಕಪ್ಪು ಹಣ ಮೂಲೋತ್ಪಾಟನೆ ಸಾಧ್ಯವೇ?". Archived from the original on 2016-11-21. Retrieved 2016-12-02.
  11. ಕಾಳಧನಕ್ಕೆ ಶೇ 85 ತೆರಿಗೆ;29 Nov, 2016
  12. Nov, 2016[ಶಾಶ್ವತವಾಗಿ ಮಡಿದ ಕೊಂಡಿ]
  13. Chart: Why Rs 500, Rs 1,000 notes' circulation surged in over 2 years;By Rajesh Pandathil and Kishor Kadam[ಶಾಶ್ವತವಾಗಿ ಮಡಿದ ಕೊಂಡಿ]
  14. ನೋಟಿನ ಸಮಸ್ಯೆ ಪರಿಹಾರ
  15. ಕಪ್ಪು ಹಣ ಎಲ್ಲಿದೆ? ಇದ್ದದ್ದೆಲ್ಲಾ ಬಿಳಿಯಾಯಿತೇ?;1 Dec, 2016
  16. Friedrich Schneider (September 2006). "Shadow Economies and Corruption All Over the World: What Do We Really Know?" (PDF). Institute for the Study of Labor (IZA Bonn).
  17. [Owen Lippert, Michael Walker (December 1997). The Underground Economy: Global Evidence of Its Size and Impact. ISBN 978-0889751699.]
  18. [Frey and Schneider (2000). "Informal and Underground Economy"(PDF).]
  19. "ಕಪ್ಪುಹಣ ಎಲ್ಲಿ? ಬಹುತೇಕ ಎಲ್ಲ ನಿಷೇಧಿತ ನೋಟುಗಳ ಜಮಾ ಸಾಧ್ಯತೆ!1 Dec 2016 12: 01 Dec 2016". Archived from the original on 2 ಡಿಸೆಂಬರ್ 2016. Retrieved 3 ಡಿಸೆಂಬರ್ 2016.
  20. 04, 2016 19:22 ಹೊಸದಿಲ್ಲಿ Taxmen reject two declarations totaling Rs 2,13,860 croreDec 04, 2016
  21. ರೂ.2 ಲಕ್ಷ ಕೋಟಿ ಸಂಪತ್ತು ಘೋಷಣೆ ತಿರಸ್ಕರಿಸಿದ ಐ.ಟಿ;ಪಿಟಿಐ;5 Dec, 2016
  22. Family ‘declares’ Rs 2 lakh crore
  23. "ಲೆಕ್ಕಕ್ಕೆ ಸಿಗದ ಹಣದ ಲೆಕ್ಕ!;14 Dec, 2016". Archived from the original on 2016-12-17. Retrieved 2016-12-16.
  24. "ಕಪ್ಪುಹಣ ಘೋಷಣೆಗೆ ಮಾರ್ಚ್‌ವರೆಗೆ ಅವಕಾಶ". Archived from the original on 2016-12-18. Retrieved 2016-12-17.
  25. ಆರ್‌ಬಿಐಗೆ ಮರಳಿದ ಶೇ 99 ರಷ್ಟು ₹1000 ಮುಖಬೆಲೆಯ ನೋಟುಗಳು: ದೇಶದಲ್ಲಿ ಕಾಳಧನವೇ ಇಲ್ಲ!;ಏಜೆನ್ಸಿಸ್‌;27 Aug, 2017