ಭಕ್ತಿ ಶರ್ಮಾ
ಭಕ್ತಿ ಶರ್ಮಾ | |
---|---|
Born | ಮುಂಬಯಿ, ಮಹಾರಾಷ್ಟ್ರ, India | ೩೦ ನವೆಂಬರ್ ೧೯೮೯
Nationality | Indian |
Occupation | Open water swimmer |
Years active | 2003–present |
Awards | Tenzing Norgay National Adventure Award, 2010 |
Website | bhaktisharma.in |
ಈಜುಪಟು ಭಕ್ತಿಶರ್ಮಾ
ಬದಲಾಯಿಸಿ- ದೂರಗಾಮಿ ಈಜುಪಟು ಭಕ್ತಿ ಶರ್ಮಾ (ಜನನ:30 ನವೆಂಬರ್ 1989) ಮುಂಬಯಿನಲ್ಲಿ ಹುಟ್ಟಿ ರಾಜಸ್ತಾನದ ಉದಯಪುರದಲ್ಲಿ ಬೆಳೆದ ಭಕ್ತಿ ಅವರ ತಂದೆ ಚಂದ್ರಶೇಖರ ಶರ್ಮ. ತಾಯಿ ಲೀನಾ ಶರ್ಮ. ಮೂಲತಃ ಈಜುಪಟುವಾಗಿದ್ದು, ಈಗ ಮಗಳ ಪಾಲಿಗೆ ಕೋಚ್ ಆಗಿರುವ ಲೀನಾ, ಭಕ್ತಿಗೆ ಎರಡೂವರೆ ವರ್ಷವಾಗಿದ್ದಾಗಲೇ ಈಜುಕೊಳಕ್ಕೆ ತಳ್ಳಿದ್ದರಂತೆ. ಉದಯಪುರದ ಪಂಚತಾರಾ ಹೋಟೆಲ್‌ಗಳು ಮತ್ತು ರಿಸಾರ್ಟ್‌ಗಳಲ್ಲಿರುವ ಈಜುಕೊಳಗಳಲ್ಲಿ ಒಂದೆರಡು ವರ್ಷ ಈಜುವ ಯತ್ನ ಮಾಡಿದ ಭಕ್ತಿ ನಂತರದ ನಾಲ್ಕು ವರ್ಷಗಳ ಕಾಲ ಈಜಿನಿಂದ ದೂರವಿರಬೇಕಾಯಿತು. ವರ್ಷದ ಆರು ತಿಂಗಳು ಚಳಿಯಿಂದ ಅಲ್ಲಿನ ಈಜುಕೊಳಗಳು ಮುಚ್ಚಿರುತ್ತಿದ್ದವು ಮತ್ತು ಪಂಚತಾರಾ ಈಜುಕೊಳಗಳಿಗೆ ಕೊಡುವಷ್ಟು ಶುಲ್ಕ ಅವರ ಪೋಷಕರ ಬಳಿ ಇರುತ್ತಿರಲಿಲ್ಲ. ಆಕೆಗೆ ಸುಮಾರು ಎಂಟು ವರ್ಷ ತುಂಬುವ ವೇಳೆ, ಅಲ್ಲಿನ ಶಾಲೆಯೊಂದರಲ್ಲಿ ಈಜುಕೊಳ ನಿರ್ಮಾಣ ಮಾಡಿದರು. ಭಕ್ತಿ ಮತ್ತೆ ಈಜು ಆರಂಭಿಸಿದರು
- ಹದಿನಾಲ್ಕು ವರ್ಷ ತುಂಬುವುದರೊಳಗೆ ಸ್ಥಳೀಯ, ಜಿಲ್ಲಾ ಮತ್ತು ರಾಜ್ಯಮಟ್ಟದ ಈಜು ಚಾಂಪಿಯನ್ ಆಗಿ ಹೊರಹೊಮ್ಮಿದ ಆಕೆ ರಾಷ್ಟ್ರೀಯ ಮಟ್ಟದಲ್ಲಿ ಕೂಡ ಸಾಕಷ್ಟು ಹೆಸರು ಗಳಿಸಿದರು. ಭಕ್ತಿ ಕೈಹಾಕಿದ ಮೊದಲ ಸಾಹಸ, ನವಿ ಮುಂಬಯಿನ ಉರಾನ್ ಹಡಗುಕಟ್ಟೆಯಿಂದ ಈಜಿಕೊಂಡು ಮುಂಬಯಿನ ‘ಗೇಟ್ ವೇ ಆಫ್ ಇಂಡಿಯ’ ತಟ ಸೇರುವುದು. 14 ವರ್ಷದ ಹುಡುಗಿ 5 ಗಂಟೆಗಳ ಅವಧಿಯಲ್ಲಿ 16 ಕೀಲೋ ಮೀಟರ್ ಉದ್ದದ ಆ ಜಲಹಾದಿಯನ್ನು ಕ್ರಮಿಸಿದಾಗ ಮುಂಬಯಿ . ಅರಬ್ಬಿ ಸಮುದ್ರದಲ್ಲಿ ಯಶಸ್ವಿಯಾದ ಮೇಲೆ ಭಕ್ತಿ ತನ್ನ ತಾಯಿ ಲೀನಾ ಮತ್ತು ಗೆಳತಿ ಪ್ರಿಯಾಂಕ ಗೆಹ್ಲೋಟ್ ಜೊತೆ ಸೇರಿ ರೀಲೆ ತಂಡ ಕಟ್ಟಿದರು. ಆ ರೀಲೆ ತಂಡ ಯಶಸ್ವಿಯಾಗಿ ‘ಇಂಗ್ಲಿಷ್ ಚಾನೆಲ್’ ಈಜಿ ದಾಟಿತು. ಆಗಿನ್ನೂ ಭಕ್ತಿಗೆ 15 ವರ್ಷ. ‘ಇಂಗ್ಲಿಷ್ ಚಾನೆಲ್’ ಜೊತೆಯಾಗಿ ಮತ್ತು ಯಶಸ್ವಿಯಾಗಿ ಈಜಿದ ಜಗತ್ತಿನ ಏಕೈಕ ತಾಯಿ–ಮಗಳ ಜೋಡಿ ಎಂಬ ದಾಖಲೆ ಲೀನಾ ಮತ್ತು ಭಕ್ತಿ ಹೆಸರಲ್ಲಿ ಉಳಿದುಕೊಂಡಿತು.
ಇಂಗ್ಲಿಷ್ ಕಡಲ್ಗಾಲವೆ ಈಜು
ಬದಲಾಯಿಸಿ- 2006ರ ಜುಲೈ 6, ಭಕ್ತಿ ಇಂಗ್ಲೆಂಡ್‌ನ ಡೋವರ್‌ನಲ್ಲಿರುವ ಷೇಕ್ಸ್‌ಪಿಯರ್ ಬೀಚ್‌ನಲ್ಲಿ ಏಕಾಂಗಿಯಾಗಿ ‘ಇಂಗ್ಲಿಷ್ ಚಾನೆಲ್’ಗೆ ಇಳಿದರು. ಆಗ ಆಕೆಗೆ 16 ವರ್ಷ. ‘ಅವರಿಗಿಂತ ಮೊದಲು ಭಾರತದವರೇ ಆದ ಆರತಿ ಸಹಾ ಮತ್ತು ರೂಪಾಲಿ ರೆಪಾಲೆ ‘ಇಂಗ್ಲಿಷ್ ಚಾನೆಲ್’ ಯಶಸ್ವಿಯಾಗಿ ಈಜಿ ದಾಟಿದ್ದರು. ಅದನ್ನು ಜಗತ್ತಿನ ಅತ್ಯಂತ ಸಾಹಸಮಯ ಈಜು ಎಂದೇ ಪರಿಗಣಿಸಲಾಗಿದೆ.
- ಇಂಗ್ಲಿಷ್ ಕಾಲುವೆಯನ್ನು ಈಜಿದ ಕೆಲವೇ ತಿಂಗಳಲ್ಲಿ ಭಕ್ತಿ ಲೇಕ್ ಜ್ಯೂರಿಚ್ ಸ್ಪರ್ಧೆಯಲ್ಲಿ ಸ್ವರ್ಣ ಗೆದ್ದರು. 2007ರಲ್ಲಿ ಗಲ್ಫ್ ಆಪ್ ಮೆಕ್ಸಿಕೊ, ಪೆಸಿಫಿಕ್ ಮಹಾಸಾಗರದ ರಾಕ್, ಅಟ್ಲಾಂಟಿಕ್ ಮಹಾಸಾಗರದಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಸ್ವರ್ಣಪದಕ ಪಡೆದರು. , ಮೆಡಿಟರೇನಿಯನ್ ಸಮುದ್ರದ ಸ್ಟ್ರೈಟ್ ಆಫ್ ಜಿಬ್ರಾಲ್ಟರ್ ದಾಟಿ ದಾಖಲೆಗಳ ಮೇಲೆ ದಾಖಲೆ ಸ್ಥಾಪಿಸಿದರು.
ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ
ಬದಲಾಯಿಸಿ- 2010ರಲ್ಲಿ ಅಂದರೆ ‘ಸಿಂಬಯಾಸಿಸ್’ ಸೇರುವ ಒಂದು ವರ್ಷದ ಮೊದಲು ಭಕ್ತಿ ಆರ್ಕಟಿಕ್ ಮಹಾಸಾಗರದಲ್ಲಿ ಈಜಿ ದಾಖಲೆ ಮಾಡಿದರು. ಆ ಮೂಲಕ ಜಗತ್ತಿನ ನಾಲ್ಕು ಮಹಾಸಾಗರಗಳಲ್ಲಿ ಈಜಿದ ಅತ್ಯಂತ ಕಿರಿಯ ಮತ್ತು ಎರಡನೇ ಈಜುಪಟುವಾಗಿದ್ದರು.
- ಭಾರತದಲ್ಲಿ ಸಾಹಸ ಕ್ರೀಡೆಗಳಿಗೆ ನೀಡುವ ಅತ್ಯುನ್ನತ ಪ್ರಶಸ್ತಿ ‘ತೇನ್‌ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿ’ ಗಳಿಸಿದರು . ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕೈಯಿಂದ ಆ ಪ್ರಶಸ್ತಿ ಸ್ವೀಕರಿಸಿದರು. ನಂತರಬೆಂಗಳೂರಿನಲ್ಲಿ , ಸಿಂಬಯಾಸಿಸ್’ ಸೇರಿ ಸ್ನಾತಕೋತ್ತರ ಪದವಿಯ ಅಭ್ಯಾಸಮಾಡಿದರು.
- ಎರಡು ವರ್ಷಗಳ ಸ್ನಾತಕೋತ್ತರ ಪದವಿ ಪಡೆದು ಮುಂಬಯಿಗೆ ತೆರಳಿದ ಭಕ್ತಿ ಒಂದು ಕಾರ್ಪೋರೇಟ್ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೆಲಸ ಮಾಡಿದ್ದು ಒಂದೇ ಒಂದು ವರ್ಷ ಮಾತ್ರ! ಕೆಲಸ ಬಿಟ್ಟು ಮರಳಿ ಈಜುಕೊಳಕ್ಕೆ ಧುಮುಕಿದರು. ಅದಾಗಲೇ ನಾಲ್ಕು ಮಹಾಸಾಗರಗಳನ್ನು ಈಜಿದ್ದ ಭಕ್ತಿ ಪಾಲಿಗೆ ಐದನೇ ಮತ್ತು ಕೊನೆಯ ಅಂಟಾರ್ಕಟಿಕ ಮಹಾಸಾಗರವನ್ನು ಈಜಬೇಕೆಂಬ ಬಯಕೆಯಾಯಿತು.
ಅಂಟಾರ್ಕಟಿಕ ಹಿಮಕಡಲಿನಲ್ಲಿ ಈಜುವ ಸಾಹಸ
ಬದಲಾಯಿಸಿ- ಮೊದಲ ಹಂತದಲ್ಲಿ ಮನೆಯಲ್ಲಿಯೇ ದೊಡ್ಡ ಪ್ಲಾಸ್ಟಿಕ್ ಟಬ್‌ನಲ್ಲಿ ನೀರಿನ ಜೊತೆ ಮಂಜುಗಡ್ಡೆ ಹಾಕಿ ಅಮ್ಮ ಮಗಳಿಗೆ ತರಬೇತಿ ನೀಡಿದರು. ನಂತರ ಒಂದು ಪುಟ್ಟ ಈಜುಕೊಳದಲ್ಲಿ ಮಂಜಿನ ಗಡ್ಡೆಗಳನ್ನು ಹಾಕಿ ರಾತ್ರಿಯಿಡೀ ಈಜಿ ದೇಹ ಮತ್ತು ಮನಸ್ಸು ಎರಡನ್ನೂ ಗಟ್ಟಿ ಮಾಡಿಕೊಂಡ ಭಕ್ತಿ ಪಾಲಿಗೆ ಹಣಕಾಸಿನ ಸಮಸ್ಯೆ ಎದುರಾಯಿತು.
- ಮೊದಲ ಹಂತದಲ್ಲಿ ಮನೆಯಲ್ಲಿಯೇ ದೊಡ್ಡ ಪ್ಲಾಸ್ಟಿಕ್ ಟಬ್‌ನಲ್ಲಿ ನೀರಿನ ಜೊತೆ ಮಂಜುಗಡ್ಡೆ ಹಾಕಿ ಅವರ ತಾಯಿ ಮಗಳಿಗೆ ತರಬೇತಿ ನೀಡಿದರು. ನಂತರ ಒಂದು ಪುಟ್ಟ ಈಜುಕೊಳದಲ್ಲಿ ಮಂಜಿನ ಗಡ್ಡೆಗಳನ್ನು ಹಾಕಿ ರಾತ್ರಿಯಿಡೀ ಈಜಿ ದೇಹ ಮತ್ತು ಮನಸ್ಸು ಎರಡನ್ನೂ ಗಟ್ಟಿ ಮಾಡಿಕೊಂಡರು.
- ಆದರೆ ಮುಂದಿನವ್ಯವಸ್ಥೆಗೆ ಭಕ್ತಿ ಗೆ ಹಣಕಾಸಿನ ಸಮಸ್ಯೆ ಎದುರಾಯಿತು. ಸ್ಥಳೀಯ ಕಂಪೆನಿಯವರೊಬ್ಬರು ಸ್ಪಾನ್ಸರ್‌ಷಿಪ್ ನೀಡಿದರು. ಐದು ಜನರನ್ನು ಒಳಗೊಂಡ ತಂಡ ಉದಯಪುರ, ದೆಹಲಿ, ಫ್ರಾಂಕ್ವರ್ಟ್, ಬ್ಯೂನಸ್ ಏರೀಸ್ ಮೂಲಕ ಅಂಟಾರ್ಕಟಿಕದ ಹೆಬ್ಬಾಗಿಲು ಉಷುವಾಯ್ ತಲುಪಿದ್ದು 2015ರ ಜನವರಿ 7ರಂದು. ಅಲ್ಲಿಂದ ಕ್ರೂಸ್ ಹತ್ತಿ ಈಜುತಾಣ ತಲುಪಿದ್ದು 10ರಂದು.ಆ ದಿನ ಸುತ್ತಲೂ ಹರಡಿದ್ದ ಬಿಳಿ–ನೀಲಿ ಮಂಜುಗಡ್ಡೆಯ ಸಾಗರ. ಇದರಲ್ಲಿ ಭಕ್ತಿ ಅಂಟಾರ್ಕಟಿಕ ಮಹಾಸಾಗರಕ್ಕೆ ಧುಮುಕಿದಾಗ ಆ ನೀರಿನ ಉಷ್ಣತೆ ಕೇವಲ ಒಂದು ಡಿಗ್ರಿ ಸೆಲ್ಸಿಯಸ್ ಇತ್ತು. ‘ಆ ದಿನ ನನಗಿದ್ದ ಒಂದೇ ಗುರಿ ಈಜಬೇಕು ಎನ್ನುವುದು ಮಾತ್ರ. ಆ ನಂಬಿಕೆಯ ಬಲದಿಂದಲೇ ನೀರಿಗೆ ಧುಮುಕಿದ ನಾನು ಈಜುತ್ತಲೇ ಸಾಗಿದೆ. ಪಕ್ಕದಲ್ಲಿಯೇ ಒಂದು ಪೆಂಗ್ವಿನ್ ಕೂಡ ಈಜುತ್ತಿತ್ತು. ಆ ಕೊರೆವ ಚಳಿಯಲ್ಲಿ, ಮಂಜುಗಡ್ಡೆಗಳ ನಡುವಿನ ಹಾದಿಯಲ್ಲಿ ಎಷ್ಟು ಹೊತ್ತು ನಾನು ಈಜಿದೆ ಎನ್ನುವ ಅರಿವು ನನಗಿರಲಿಲ್ಲ. ಒಂದು ಹಂತದಲ್ಲಿ ನನ್ನನ್ನು ಹಿಂಬಾಲಿಸುತ್ತಿದ್ದ ಬೆಂಗಾವಲಿನಲ್ಲಿದ್ದ ಬೋಟ್‌ನಲ್ಲಿದ್ದವರು ಮೇಲೆ ಬರುವಂತೆ ಹೇಳಿದರು. ತಿರುಗಿ ಬೋಟ್ ಹತ್ತಿದ ಮೇಲೆ ಸುಮಾರು ಎರಡು ಗಂಟೆ ನಾನು ಎಚ್ಚರ ತಪ್ಪಿದ್ದೆ. ಎಚ್ಚರಗೊಂಡ ಮೇಲೆ, ನಾನು 41 ನಿಮಿಷ 14 ಸೆಕೆಂಡುಗಳಲ್ಲಿ 1.4 ಮೈಲು ಈಜಿ ವಿಶ್ವದಾಖಲೆ ಮಾಡಿದ ವಿಷಯ ಅರಿವಿಗೆ ಬಂತು. ಸುತ್ತಮುತ್ತ ಅಭಿಮಾನಿಗಳ ಸಾಗರವಿಲ್ಲ. ಹಿಂದಿದ್ದ ತಂಡದ ಸದಸ್ಯರು ಕೂಡ ಚಳಿಯಲ್ಲಿ ಮುದುಡಿಹೋಗಿದ್ದರು. ಚಪ್ಪಾಳೆಗಳ ಸದ್ದಿಲ್ಲ. ಎದುರಿದ್ದದ್ದು ವಿಶಾಲವಾಗಿ ಹರಡಿದ್ದ ಅಂಟಾರ್ಕಟಿಕ ಮಹಾಸಾಗರ. ನೀಲಾಕಾಶ. ನಡುವೆ ಹರಡಿದ್ದ ಮಂಜುಗಡ್ಡೆಗಳ ಶಿಖರಗಳು’ – ಎಂದು ಭಕ್ತಿ ಭಾವುಕರಾಗಿ ಹೇಳುತ್ತಾರೆ.
ಮುಂದಿನ ಗುರಿ ಒಲಿಂಪಿಕ್ಸ್
ಬದಲಾಯಿಸಿ- ಅವರ ಮುಂದಿನ ಗುರಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ದೂರಗಾಮಿ ಈಜುಸ್ಪರ್ಧೆ. ಅದನ್ನು 2008 ರಿಂದ ಸೇರಿಸಲಾಗಿದೆ. ಅದು ತೆರೆದ ಸಾಗರದಲ್ಲಿ 10 ಕಿಲೋಮೀಟರ್ ಈಜುವ ಸ್ಪರ್ಧೆ. ಆ ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ಭಕ್ತಿ ಶರ್ಮ ತಯಾರಿ ನಡೆಸುತ್ತಿದ್ದಾರೆ. ಅವರು, ಅದಕ್ಕಾಗಿ ಈಗಾಗಲೇ ತರಬೇತಿ ಆರಂಭಿಸಿದ್ದಾರೆ.
- ಭಕ್ತಿ ಶರ್ಮ ವಿಶೇಷ ತರಬೇತಿಗಾಗಿ ಅಮೆರಿಕಾಕ್ಕೆ ತೆರಳಲು ಸಿದ್ಧರಾಗುತ್ತಿದ್ದಾರೆ. ಮೂರುವರೆ ವರ್ಷಗಳ ಕಾಲದ ನಿರಂತರ ತರಬೇತಿಗಾಗಿ ಸುಮಾರು ಒಂದೂವರೆ ಕೋಟಿ ರೂಪಾಯಿ ಸಹಾಯವನ್ನು ಸ್ಪಾನ್ಸರ್‌ಷಿಪ್ ಮೂಲಕ ನಿರೀಕ್ಷಿಸುತ್ತಿರುವ ಭಕ್ತಿಯವರು ಗುರಿ ಮುಟ್ಟುವ ಭರವಸೆ ಭರವಸೆ ಹೊಂದಿದ್ದಾರೆ.
ಇದುವರೆಗಿನ ಸಾಧನೆಗಳ ಪಟ್ಟಿ
ಬದಲಾಯಿಸಿ- ಶರ್ಮಾ ಅವರ ಈಜು ವೃತ್ತಿಯ ಕೇವಲ ಸ್ವಲ್ಪ 10 ವರ್ಷಗಳಲ್ಲಿ ಶ್ಲಾಘನೀಯವಾದ ಕೆಲವು ಪ್ರಮುಖ ಮೈಲಿಗಲ್ಲುಗಳು ಸೇರಿವೆ:
- 2006: 16 ನೇ ವಯಸ್ಸಿನಲ್ಲಿ ಇಂಗ್ಲೀಷ್ ಚಾನೆಲ್ ನ್ನು ಡೋವರ್ ಇಂಗ್ಲೆಂಡ್ನ ಶೇಕ್ಸ್ಪಿಯರ್ ಬೀಚ್,ನಿಂದ ಕಾಲಿಸ್, ಫ್ರಾನ್ಸ್ ಗೆ ಜುಲೈ 6 ರಂದು 13 ಗಂಟೆಗಳ 55 ನಿಮಿಷಗಳ ಸಮಯದಲ್ಲಿ ಈಜಿ ದಾಟಿದರು.
- 2006: ಜ್ಯೂರಿಚ್ ಸರೋವರವನ್ನು ಈಜಿ ಗೆದ್ದರು.
- 2007:. ಫೋರ್ಟ್ ಮೈಯರ್ಸ್ ಬೀಚ್ ನ, ಫ್ಲೋರಿಡಾದ 2007ರ ಯು.ಎಸ್.ಎ. ಈಜುಸ್ಪರ್ಧೆ ಓಪನ್ ವಾಟರ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ಮೆಕ್ಸಿಕೋ ಗಲ್ಫ್ ನಲ್ಲಿ 25 ಕಿಮೀ ಈಜಿದರು.
- 2007:. ಪೆಸಿಫಿಕ್ ಸಾಗರದಲ್ಲಿರುವ (ಅಟ್ ಅಲ್ಕ್ಯಾಟ್ರಾಜ್) ರಾಕ್ ನ್ನು ಸುತ್ತುವರಿಯುವ 6.5 ಕಿ.ಮೀ ಈಜು-ಓಟವನ್ನು ಪೂರ್ಣಗೊಳಿಸಿದರು. 2007: ಅಟ್ಲಾಂಟಿಕ್ ಸಾಗರದ ಕೀ ವೆಸ್ಟ್ ದ್ವೀಪ, ಸುತ್ತ ಈಜುವ ಮ್ಯಾರಥಾನ್ನಲ್ಲಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದು ಮೂರು ಪ್ರಮುಖ ಅಮೆರಿಕನ್ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ ಮೊದಲ ಏಷ್ಯನ್ ಈಜುಗಾರಳು.
- 2007:. 5 ಗಂಟೆ 13 ನಿಮಿಷಗಳಲ್ಲಿ, , ಸ್ಪೇನ್ ನಲ್ಲಿ ಮೆಡಿಟರೇನಿಯನ್ಗೆ ಅತ್ಯಂತ ಸವಾಲಿನ ಸಮುದ್ರ ಶಿಕ್ಷಣವೆಂದು ಪರಿಗಣಿಸಲ್ಪಟ್ಟಿದ್ದ ಟರೀಫಾದ ಹತ್ತಿರದ ಒಂದು ಗಿಬ್ರಾಲ್ಟರ್ ಜಲಸಂಧಿಯನ್ನು ದಾಟಿದರು
- 2010: ಯಶಸ್ವಿಯಾಗಿ ಆರ್ಕ್ಟಿಕ್ ಸಾಗರದಲ್ಲಿ 33 ನಿಮಿಷಗಳಲ್ಲಿ 1.8 ಕಿ.ಮೀ. ಈಜಿದ ವಿಶ್ವದ ಎರಡನೇ ಕಿರಿಯ ಈಜುಗಾರಳು ಮತ್ತು 4 ಸಾಗರಗಳಲ್ಲಿ ಈಜಿದ ಈಜುಪಟು.
- 2004: ಯಶಸ್ವಿಯಾಗಿ 36 ಕಿ.ಮೀ. ದೂರವನ್ನು 9 ಗಂಟೆ 30 ನಿಮಿಷಗಳಲ್ಲಿ ಭಾರತದ ಹಿಂದೂ ಮಹಾಸಾಗರ ಧರ್ಮತಲಾದಿಂದ ಗೇಟ್ವೇ ಗೆ ಈಜುವ ಸಾಹಸ ಮಾಡಿ ಗೆದ್ದರು.
- 2008:, ಧರ್ಮತಲಾದಿಂದ ಭಾರತದ, ಮುಂಬಯಿ ಗೇಟ್ವೇ ಗೆ 16 ಗಂಟೆಗಳ 58 ನಿಮಿಷಗಳಲ್ಲಿ 72 ಕಿ.ಮೀ. ತಾಯಿ ಲೀನಾ ಶರ್ಮಾ ಮತ್ತು ಸ್ನೇಹಿತ ಪ್ರಿಯಾಂಕಾ ಗೆಹ್ಲೋಟ್ ಜೊತೆಗೆ ಈಜುವ ಮೂಲಕ ಭಾರತೀಯ ದಾಖಲೆಯನ್ನು ರಚಿಸಲಾಗಿದೆ.[೬][೭][೮]
ನೋಡಿ
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ ndian swimmer Bhakti Sharma sets world record in Antarctic Ocean
- ↑ "ಮಹಾಸಾಗರಗಳ ದತ್ತುಪುತ್ರಿಯ ಒಲಿಂಪಿಕ್ಸ್ ಕನಸು6 Nov, 2016". Archived from the original on 2016-11-06. Retrieved 2016-11-06.
- ↑ Bhakti Sharma: Conquers the seven seas
- ↑ AIMING TO SWIM FOR GLORY AT TOKYO 2020!
- ↑ Bhakti Sharma seeks crowdfunding to prepare for Tokyo Olympics
- ↑ Indian swimmer Bhakti Sharma sets world record in Antarctic Ocean
- ↑ [೧]
- ↑ Bhakti Sharma: The open water swimmer who conquered five oceans