ಬ್ರಾಂಕೈಟಿಸ್ ಎನ್ನುವುದು ಒಂದು ಸೋಂಕು. ಇದು ಬ್ಯಾಕ್ಟೀರಿಯಾದಿಂದ ಬರುತ್ತದೆ[೧]. ಕೆಲವು ಬಾರಿ ನೆಗಡಿಯ ನಂತರ ಬರಬಹುದು. ಇಲ್ಲವದರೆ ಇಡೀ ವರ್ಷದಲ್ಲಿ ಆಗಾಗ್ಗೆ ಬರಬಹುದು. ದೀರ್ಘಕಾಲದವರೆಗೆ ತೊಂದರೆಯಾದರೆ ಶ್ವಾಸನಾಳಗಳು, ಶ್ವಾಸಕೋಶಗಳು ಭಾದಿಸಲ್ಪಡುತ್ತವೆ.ಈ ಬ್ರಾಂಕೈಟಿಸ ಕೆಲವರಿಗೆ ಅನಾಯಾಸವಾಗಿ ಸೋಂಕಿದರೆ, ಮತ್ತೆ ಕೆಲವರಿಗೆ ಕಾಡುವುದೇ ಇಲ್ಲ. ಕಾರಣವೇನೋ ತಿಳಿಯದು. ಸ್ತ್ರೀಯರಿಗಿಂತ ಪುರುಷರಿಗೆ ಈ ಕಾಯಿಲೆ ಬರುವುದು ಹೆಚ್ಚು. ಇದು ೧:೧೦ರ ಪ್ರಮಾಣದಲ್ಲಿರಬಹುದು. ಸಿಗರೇಟು, ಬೀಡಿ ಸೇದುವವರಿಗೆ ಶೇ.೫೦ರಷ್ಟು ಸಾಧ್ಯತೆ ಇದೆ.

ಲಕ್ಷಣಗಳುಸಂಪಾದಿಸಿ

 • ಎಡೆಬಿಡದ ಕೆಮ್ಮ
 • ಉಸಿರಾಡೀದಾಗ ಬೆಕ್ಕು ಕೂಗಿದಂತಹ ಶಬ್ದವಿರುತ್ತದೆ.
 • ಕಫದಲ್ಲಿ ಕೀವು ತರಹ ಇದ್ದು ತಿಳಿಹಸಿರು ಅಥವಾ ಹಳದಿ ಬಣ್ಣವಿದ್ದು ಅಂಟಂಟಾಗಿರುತ್ತದೆ.
 • ಆಯಾಸ, ಹಸಿವಿಲ್ಲದಿರುವುದು, ತಲೆನೋವು, ಜ್ವರ ಇವು ಮುಖ್ಯ ಲಕ್ಷಣಗಳು.

ಎಷ್ಟು ದಿನ ಇರಬಹುದು?ಸಂಪಾದಿಸಿ

ಒಂದು ವಾರದಿಂದ ಮೂರು ವಾರದವರೆಗೂ ಇರಬಹುದು. ಬೇರೇನೂ ಕಾಯಿಲೆ ಇಲ್ಲದಿದ್ದರೆ ತನಗೆ ತಾನೇ ಶಮನವಾಗುತ್ತದೆ.

ಕಾರಣಗಳುಸಂಪಾದಿಸಿ

ಶ್ವಾಸನಾಳಲ್ಲಿ ಪ್ರವೇಶಿಸಿದ ಹಲವು ರೀತಿಯ ಸೂಕ್ಷ್ಮ್ ಜೀವಾಣುಗಳು, ವೈರಸಗಳು, ಶ್ವಾಸಕೋಶದಲ್ಲಿ ಹೊಕ್ಕು ಸೋಂಕು ಉಂಟು ಮಾಡುತ್ತವೆ. ಶ್ವಾಸನಾಳದ ಪೊರೆ ಹಿಗ್ಗಿ ಉಸಿರಾಟದ ಮಾರ್ಗವನ್ನು ಕಿರಿದುಗೊಳಿಸುತ್ತದೆ. ಹೊರಗೆ ಹೋಗಬೇಕಾದ ಶ್ಲೇಷ್ಮ ಅಲ್ಲೇ ಬಂಧಿಯಾದುತ್ತದೆ. ಅದನ್ನು ಹೊರಹಾಕುವಲ್ಲಿ ಕೆಮ್ಮು ಬಂದು ಆಯಾಸವಾಗುತ್ತದೆ.

ಗಂಭೀರತೆಸಂಪಾದಿಸಿ

ರೋಗ ಗಂಭೀರವಾದರೆ ಮಕ್ಕಳಿಗೂ ವೃದ್ಧರಿಗೂ ನ್ಯುಮೋನಿಯಾ ಆಗಬಹುದು.

ಮನೆ ಮದ್ದುಸಂಪಾದಿಸಿ

 • ಮನೆಯಲ್ಲಿ ಬೆಚ್ಚಗೆ ಇದ್ದು ವಿಶ್ರಾಂತಿ ತೆಗೆದುಕೊಳ್ಳುವುದು.
 • ಬಿಸಿ ಬಿಸಿ ಪಾನೀಯಗಳನ್ನು ಸೇವಿಸಬೇಕು. ಮುಕ್ತವಾಯು ಸಂಚಾರವಿರಬೆಕು.

ಡಾಕ್ಟರನ್ನು ಕಾಣುವುದುಸಂಪಾದಿಸಿ

 • ಉಸಿರಾಟದಲ್ಲಿ ತೊಂದರೆ, ಕೆಮ್ಮಿದಾಗ ನೋವಾದರೆ.
 • ರೋಗಿಯು ಚಿಕ್ಕ ಮಗು ಅಥವಾ ಅತಿ ವೃಧ್ದರಾಗಿದ್ದರೆ.

ಡಾಕ್ಟರರ ಸಲಹೆ ಏನು?ಸಂಪಾದಿಸಿ

 • ಶರೀರಕ್ಕೆ ಶ್ರಮವಾದಂತೆ ನೋಡಿಕೊಳ್ಳಬೇಕು. ವಿಶ್ರಾಂತಿ ಅಗತ್ಯ. ಇದರಿಂದ ಶ್ವಾಸಕೋಶಕ್ಕೆ ಸೋಂಕು ಹರಡುದಂತೆ ಹಾಗೂ ನ್ಯುಮೋನಿಯಾಗೆ ಪರಿವರ್ತನೆಯಾಗದಂತೆ ತಡೆಯಬಹುದು.
 • ನ್ಯುಮೋನಿಯಾ ಆಗುವ ಸಂಭವವಿದ್ದಲ್ಲಿ, ಆಂಟಿಬಯಾಟಿಕ್ಸ್ ಔಷಧಿಯನ್ನು ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ.
 • ಕೆಮ್ಮಿಗೆ ಔಷಧಿಗಳನ್ನು ತೆಗೆದುಕೊಳ್ಳಲು ಸೂಚಿಸುತ್ತಾರೆ.

ಎಚ್ಚರಿಕೆಸಂಪಾದಿಸಿ

 • ಸಿಗರೇಟು, ಬೀಡಿ ಸೇದುವುದನ್ನು ಸಂಪೂರ್ಣ ತ್ಯಜಿಸುವುದರ ಜೊತೆಗೆ, ಅಂತಹ ವಾತಾವರಣದಲ್ಲಿಯೂ ಇರಬಾರದು.
 • ಚಿಕ್ಕ ಮಕ್ಕಳು, ವೃದರು ಶೀತವಾತಾವರಣದಲ್ಲಿ ಮಲಗಬಾರದು.
 • ನೆಗಡಿಯಾದವರ, ಶ್ವಾಸಕೋಶ ಸೋಂಕುವುಳ್ಳವರ ಹತ್ತಿರ ಸುಳಿಯಬಾರದು.
 • ಅಕ್ಯೂಟ್ ಬ್ರಾಂಕೈಟಿಸ್‍ನಿಂದ ಅಂತಹ ದುಷ್ಪರಿಣಾಮವೇನು ಇಲ್ಲಾ.

ಉಲ್ಲೇಖಸಂಪಾದಿಸಿ

 1. ಆರೋಗ್ಯ ಕೈಪಿಡಿ, ಡಾ.ಸಿ.ಎಲ್.ವೆಂಕಟರಾಮ್. ಪುಟ ಸಂಖ್ಯೆ೫೬