ಬ್ಯೋಃನ್‌ಸ್ಟಿಯರ್ನ್ ಬ್ಯೋಃನ್ಸನ್

ಬ್ಯೋಃನ್‌ಸ್ಟಿಯರ್ನ್ ಬ್ಯೋಃನ್ಸನ್
Björnstjerne Björnson, 1901.jpg
ಜನನ: (೧೮೩೨-೧೨-೦೮)೮ ಡಿಸೆಂಬರ್ ೧೮೩೨
ಜನನ ಸ್ಥಳ: ಕ್ವಿಕ್ನೆ, ನಾರ್ವೆ
ನಿಧನ:26 April 1910(1910-04-26) (aged 77)
ಪ್ಯಾರಿಸ್, ಫ್ರಾನ್ಸ್
ವೃತ್ತಿ: ಕವಿ, ಕಥೆಗಾರ, ನಾಟಕಕಾರ
ರಾಷ್ಟ್ರೀಯತೆ:ನಾರ್ವೆ
ಪ್ರಶಸ್ತಿಗಳು:ಸಾಹಿತ್ಯದ ನೊಬೆಲ್ ಪ್ರಶಸ್ತಿ (೧೯೦೩)

Bjørnstjerne Bjørnsonಸಂಪಾದಿಸಿ

(ಡಿಸೆಂಬರ್ ೮, ೧೮೩೨ – ಏಪ್ರಿಲ್ ೨೬, ೧೯೧೦)

ನಾರ್ವೆಯ ರಾಷ್ಟ್ರಕವಿ . ೧೯೦೩ ರಲ್ಲಿ ಮೂರನೆಯ ಸಾಹಿತ್ಯದ ನೋಬೆಲ್ ಪ್ರಶಸ್ತಿಯನ್ನು ಪಡೆದರು. ನಾರ್ವೆ ದೇಶದ ನಾಲ್ವರು ಮಹಾನ್ ಲೇಖಕರಲ್ಲಿ ಅವರೂ ಒಬ್ಬರು. ನಾರ್ವೆ ದೇಶದ ರಾಷ್ಟ್ರಗೀತೆಯನ್ನು ಅವರೇ ರಚಿಸಿದ್ದು.

ಬಾಲ್ಯ ಹಾಗೂ ಸಾಹಿತ್ಯರಚನೆಸಂಪಾದಿಸಿ

ತಂದೆ ಪಾದ್ರಿಯಾಗಿದ್ದರು. ಹಳ್ಳಿಯ ಶಾಂತ ಪರಿಸರದಲ್ಲಿ ಬೆಳೆದ ರವರು ತಮ್ಮ ೧೧ ನೆಯ ಪ್ರಾಯದಲ್ಲೇ ಸುಂದರ ಕವಿತೆಗಳನ್ನು ರಚಿಸತೊಡಗಿದರು. ಆಕಾಲದ ಉನ್ನತ ವಿದ್ಯಾಭ್ಯಾಸವಾದ ಮೆಟ್ರಿಕ್ಯುಲೇಶನ್ ೧೮೫೨ ರಲ್ಲಿ ಮುಗಿಸಿ ಪತ್ರಕರ್ತರಾದರು. ನಾಟಕ ವಿಮರ್ಶೆ ಅವರ ಪಾಲಿಗೆ ಬಂದ ಕೆಲಸವಾಗಿತ್ತು. ಅವರು ನಾಟಕಗಳ ನಿರ್ದೇಶಕರಾಗಿಯೂ ದುಡಿದರು. ಬ್ಯೋಃ ನ್ ಸನ್ ರವರು ೩ ಉತ್ತಮ ಕಾದಂಬರಿಗಳನ್ನು ಬರೆದರು. (೧೮೫೭, ೧೮೬೦, ೧೮೬೮) ಅವೆಲ್ಲಾ ನಿಸರ್ಗದ ಸೌಂದರ್ಯವನ್ನು ವಿವರಿಸುವ ಸುಂದರ ಕೃತಿಗಳು. ನಾಟಕಗಳ ಮೂಲಕ, ಹಳ್ಳಿಯ ಬದುಕನ್ನು ಚಿತ್ರಿಸುವ ಆಶೆಯಾಯಿತು. ' ಸೀಗರ್ಡ್ ಸ್ಲೆಂಬೆ' ಎಂಬ ಕಾವ್ಯನಾಟಕ ತ್ರಿವಳಿಯ ರಚನೆಯಾಯಿತು. ೧೮೭೦ ರ ದಶಕದಲ್ಲಿ ತೊಡಗಿಸಿಕೊಂಡ ಅವರ ಕಾವ್ಯರಚನಾ ಕೌಶಲ "ಆರ್ನ್ ಲ್ಯೋಟ್' ಎಂಬ ಮಹಾಕಾವ್ಯಕ್ಕೆ ನಾಂದಿಯಾಯಿತು. ಹೇಗೋ ರಾಜಕೀಯದ ಕಡೆ ತಿರುಗಿದ ಬ್ಯೋಃ ನ್ ಸನ್ ರವರು ಕಾವ್ಯಶಕ್ತಿಯನ್ನು ಕಳೆದುಕೊಂಡರು. ನಾರ್ವೆಯಿಂದ ಬೇರೆಕಡೆ ಹೋದರು. ಆದರೆ ಅಲ್ಲಿ ಅವರ ಮನಸ್ಸು ನಿಲ್ಲದೆ, ೪ ವರ್ಷಗಳ ಬಳಿಕ ಮತ್ತೆ ಸ್ವದೇಶಕ್ಕೆ ಮರಳಿ ಸಾಹಿತ್ಯರಚನೆಗೆ ಆರಂಭಿಸಿದರು. ಕಾದಂಬರಿ ಮತ್ತು ಕಾವ್ಯನಾಟಕಗಳು ಪ್ರಮುಖವಾಗಿವೆ.

' ಸೀಗರ್ಡ್ ಸ್ಲೆಂಬೆ ' ಯೇ, 'ಬ್ಯೋಃನ್ ಸ್ಟಿಯರ್ನ್ ಬ್ಯೋಃನ್ಸನ್', ರವರ ಮಹಾನ್ ಕೃತಿಯೆಂದು ಎಲ್ಲರೂ ಒಪ್ಪಿಕೊಂಡಿದ್ದಾರೆಸಂಪಾದಿಸಿ

ಪರಂಪರಾಗತವಾಗಿ ಬಂದ ಕಥಾವಸ್ತುವನ್ನು ಆರಿಸಿಕೊಂಡು ತಮ್ಮ ಅನುಪಮ ಪ್ರತಿಭೆಯಿಂದ ಅದನ್ನು ಮಹಾಕಾವ್ಯವನ್ನಾಗಿ ಪರಿವರ್ತಿಸಿದ ಸಾಮರ್ಥ್ಯ ಬ್ಯೋಃ ನ್ ಸನ್ ರವರದು. ಸೀಗರ್ಡ್ ಹನ್ನೆರಡನೆ ಶತಮಾನದಲ್ಲಿ ಜೀವಿಸಿದ್ದ ಒಬ್ಬ ರಾಜನೊಬ್ಬನ ಅನೈತಿಕ ಪುತ್ರ. 'ಸ್ಲೆಂಬೆ' ಅಥವಾ ಹಾಳಾದವ ಎನ್ನುವುದು ಆತನ ಅಡ್ಡಹೆಸರು. ತನ್ನ ಹುಟ್ಟಿನ ರಹಸ್ಯಗೊತ್ತಾದಮೇಲೆ ಉತ್ತರಾಧಿಕಾರಕ್ಕೆ ಹಕ್ಕು ಮಂಡಿಸಿ ಉಪಯೋಗವಿಲ್ಲವೆಂದು ಪವಿತ್ರಭೂಮಿಯತ್ತ 'ಕ್ರುಸೇಡ್' ಯುದ್ಧದಲ್ಲಿ ಭಾಗವಹಿಸಲು ತೆರಳುತ್ತಾನೆ. ದಾರಿಯಲ್ಲಿ ಸಣ್ಣ-ಪುಟ್ಟ ಪಾಳೇಗಾರರ ನಡುವಿನ ಯುದ್ಧದಲ್ಲಿ ಭಾಗವಹಿಸಿ ಗೆದ್ದು ಅವರ ಆಯಕನಾಗುವ ಅವಕಾಶವಿದ್ದರೂ ಅವನ್ನು ತಿರಸ್ಕರಿಸಿ ಮುಂದುವರೆಯುತ್ತಾನೆ. 'ಆಡ್ ಹಿಲ್ಡ್ ' ಎಂಬ ಸುಂದರಿಯನ್ನು ಪ್ರೀತಿಸುತ್ತಾನೆ. ಅವಳಿಂದಲೂ ಅಗಲುವುದು ಅನಿವಾರ್ಯವಾಗಿ, ೧೦ ವರ್ಷಗಳಕಾಲ ಕ್ರುಸೇಡ್ ನಲ್ಲಿ ಹೋರಾಡಿ ತನ್ನ ತಾಯ್ನಾಡಿಗೆ ವಾಪಸ್ ಬಂದಾಗ, ಅವನ ಅಪ್ಪನಿಗೆ ಬದಲಾಗಿ ಸಿಂಹಾಸನದಲ್ಲಿ ಅವನ ಇನ್ನೊಬ್ಬ ಅನೈತಿಕ ಪುತ್ರ ಕುಳಿತಿರುತ್ತಾನೆ. ಸೀಗರ್ಡ್ ಗೆ ತನ್ನ ತಪ್ಪಿನ ಅರಿವಾಗುತ್ತದೆ. ಅವನೇ ಊರಿನಲ್ಲಿ ಉಳಿದಿದ್ದರೆ,ಸಿಂಹಾಸನದ ವಾರಸದಾರನಾಗಿರುತ್ತಿದ್ದ. ಈಗ ಅವನಿಗೆ ಅಧಿಕಾರವಾಪಸ್ ಕೊಡಲು ಯಾರೂ ಸಿದ್ಧರಿರಲಿಲ್ಲ. ಅದಲ್ಲದೆ ಅಪ್ಪನ ಔರಸಪುತ್ರನ ಕಣ್ಣು ಕಿತ್ತು ಸೆರೆಮನೆಯಲ್ಲಿ ಇಟ್ಟಿದ್ದರು. ತನ್ನದೇಶದ ವಿರುದ್ಧವೇ ಯುದ್ಧವನ್ನು ಘೋಶಿಸಿ, ಹೋರಾಡುತ್ತ ಅವನು ಮರಣಹೊಂದುತ್ತಾನೆ. ಈ ಕಾವ್ಯದಲ್ಲಿ ಮಾನವ ಸ್ವಾಭಾವಗಳು ಮತ್ತು ಹಾಗೂ ಪರಿಸ್ಥಿತಿಗಳ ಅದ್ಭುತ ಚಿತ್ರಣವಿದೆ.

ಮರಣಸಂಪಾದಿಸಿ

ಬ್ಯೋಃ ನ್ ಸನ್ , ಪ್ಯಾರಿಸ್ ನಲ್ಲಿ ತೀರಿಕೊಂಡಾಗ, ಯುದ್ಧ ನೌಕೆಗಳನ್ನು ಕಳಿಸಿ ಅವನ ದೇಹವನ್ನು ನಾರ್ವೆಗೆ ವಾಪಸ್ ತರಿಸಿ, ಸಕಲ ಸರಕಾರಿ ಮರ್ಯಾದೆಗಳೊಂದಿಗೆ ಅಂತ್ಯ ಸಂಸ್ಕಾರವನ್ನು ಮಾಡುತ್ತಾರೆ.