ಶ್ರೀ ಬೈಜ್ ನಾಥ್ ಸಿಂಗ್, ಒಬ್ಬ ಭಾರತೀಯ ನಾಗರಿಕರು. ಅವರಿಗೆ ಮರಣೋತ್ತರವಾಗಿ ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ನೀಡಲಾಯಿತು. [೧]

ಶ್ರೀ

ಬೈಜ್ ನಾಥ್ ಸಿಂಗ್

ಅಶೋಕ ಚಕ್ರ
Born
ಚಾಹಿಪುರ ಗ್ರಾಮ, ಭಿಂಡ್ ಜಿಲ್ಲೆ, ಮಧ್ಯಪ್ರದೇಶ, ಭಾರತ
Diedಅಕ್ಟೋಬರ್ 22, 1969(1969-10-22)
Nationalityಭಾರತೀಯರು
Citizenship ಭಾರತ
Parent
  • ಶ್ರೀ ರೂಪ್ ಸಿಂಗ್ (father)
Awards ಅಶೋಕ ಚಕ್ರ

ಆರಂಭಿಕ ಜೀವನ ಬದಲಾಯಿಸಿ

ಶ್ರೀ ಬೈಜ್ ನಾಥ್ ಸಿಂಗ್ ಅವರು ಶ್ರೀ ರೂಪ್ ಸಿಂಗ್ ಅವರ ಪುತ್ರನಾಗಿ ಮಧ್ಯಪ್ರದೇಶ ಭಿಂಡ್ ಜಿಲ್ಲೆಯ ಚಹಿಪುರ ಗ್ರಾಮದಲ್ಲಿ ಜನಿಸಿದರು. ಅವರ ಕುಟುಂಬದಲ್ಲಿ, ಸೈನ್ಯಕ್ಕೆ ಧೈರ್ಯದಿಂದ ಮತ್ತು ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸುವ ಸಂಪ್ರದಾಯವಿತ್ತು.

ಹಿನ್ನೆಲೆ ಬದಲಾಯಿಸಿ

ಭಿಂಡ್ ಜಿಲ್ಲೆಯಲ್ಲಿ ದರೋಡೆಕೋರ ಉಪಟಳವಿತ್ತು. ಕೆಲವು ದರೋಡೆಕೋರರು ಬಂದು ಇಡೀ ಗ್ರಾಮವನ್ನು ಲೂಟಿ ಮಾಡುತ್ತಾರೆ ಎಂದು ಬೈಜ್ ನಾಥ್ ವಿಷಾದಿಸುತ್ತಿದ್ದರು. ತಮ್ಮ ಪ್ರದೇಶವನ್ನು ದರೋಡೆಕೋರರ ಭಯೋತ್ಪಾದನೆಯ ಆಳ್ವಿಕೆಯಿಂದ ಮುಕ್ತಗೊಳಿಸಲು, ಬೈಜ್ ನಾಥ್ ಸಿಂಗ್ ತೋರಿದ ಶೌರ್ಯ ಎಲ್ಲರಿಗೂ ಮಾದರಿಯಾಯಿತು. ಇದರ ನಂತರ ದರೋಡೆಕೋರರು ಅವರ ಗ್ರಾಮವನ್ನು ಪ್ರವೇಶಿಸಲು ಹೆದರುವ ಸ್ಥಿತಿ ನಿರ್ಮಾಣವಾಯಿತು.

ಶೌರ್ಯದ ಪ್ರದರ್ಶನ ಬದಲಾಯಿಸಿ

ದರೋಡೆಕೋರರು ಬಂದು ಜನರನ್ನು ಯಾವುದೇ ಅಳುಕಿಲ್ಲದೆ ಲೂಟಿ ಮಾಡುತ್ತಿದ್ದರು ಮತ್ತು ಜನರನ್ನು ಕೊಲ್ಲುತ್ತಿದ್ದರು. ಆದರೆ ಒಮ್ಮೆ, ದರೋಡೆಕೋರರು ಮುಂದಿನ ಬಾರಿ ಯಾವಾಗ ಬರುತ್ತಾರೆಯೋ, ಅವರು ಜೀವಂತವಾಗಿ ಹಿಂತಿರುಗುವುದಿಲ್ಲ ಎಂದು ಬೈಜ್ ನಾಥ್ ನಿರ್ಧರಿಸಿದರು. ಮತ್ತು ತಮ್ಮ ಜೀವವನ್ನು ಪಣಕ್ಕಿಟ್ಟು ಅವರು ದರೋಡೆಕೋರರ ವಿರುದ್ಧ ನಿಂತರು. ೧೯೬೯ ರ ಅಕ್ಟೋಬರ್ ೨೨ ರಂದು ಕುಖ್ಯಾತ ದರೋಡೆಕೋರನಾದ ಸರು ಸಿಂಗ್, ಮಾಲ್ಪುರಾ ಗ್ರಾಮದ ಶ್ರೀ ಮೋಹರ್ ಸಿಂಗ್ ಮತ್ತು ಶ್ರೀ ಉದಯ್ ಸಿಂಗ್ ಅವರನ್ನು ಕೊಂದನು. ಈ ಸುದ್ದಿಯನ್ನು ಕೇಳಿದ ಮಾಲ್ಪುರ ಮತ್ತು ರಾಹೌಲಿ ಗ್ರಾಮದ ನಾಗರಿಕರು ಅಪರಾಧ ಸ್ಥಳಕ್ಕೆ ತಲುಪಿ ದರೋಡೆಕೋರರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ಡಕಾಯಿತರು ಅಪಾಯವನ್ನು ಅರಿತುಕೊಂಡು ಓಡಿಹೋದರು. ಆದರೆ ಅಲ್ಲಿಂದ ಹೊಡುವಾಗ, ಅವರು ಮತ್ತೊಬ್ಬ ಗ್ರಾಮಸ್ಥನನ್ನು ಕೊಂದು ಹಾಕಿದರು. ಛಹಿಪುರದ ಪ್ರಜೆ ಬೈಜ್ ನಾಥ್ ಸಿಂಗ್ ಅವರು ಕೂಡ ಗುಂಡಿನ ಸದ್ದು ಕೇಳಿದರು. ಅವರು ತನ್ನ ಬಂದೂಕಿನಿಂದ ದರೋಡೆಕೋರರ ವಿರುದ್ಧ ಹೋರಾಡಲು ನಿರ್ಧರಿಸಿದರು. ದರೋಡೆಕೋರರ ಸಂಖ್ಯೆ ಹೆಚ್ಚಾಗಿದೆ ಮತ್ತು ಅವರ ಬಳಿ ಶಸ್ತ್ರಾಸ್ತ್ರಗಳಿವೆ ಎಂದು ಗ್ರಾಮಸ್ಥರು ಅವರನ್ನು ತಡೆಯಲು ಪ್ರಯತ್ನಿಸಿದರು. ಆದರೆ ಬೈಜ್ ನಾಥ್ ಯಾರ ಮಾತನ್ನೂ ಕೇಳದೆ ದರೋಡೆಕೋರರನ್ನು ಅಟ್ಟಿಸಿಕೊಂಡು ಹೋದರು. ಸುಮಾರು ೧ ಕಿ. ಮೀ. ವರೆಗೆ ದರೋಡೆಕೋರರನ್ನು ಹಿಂಬಾಲಿಸಿದ ನಂತರ, ಅವರು ಶತ್ರುಗಳ ಗುಂಪನ್ನು ನೋಡಿದರು. ಬೈಜ್ ನಾಥ್ ದರೋಡೆಕೋರರಿಗೆ ಸವಾಲು ಹಾಕಿ ಅವರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ಅವರು ಪ್ರತಿದಾಳಿ ನಡೆಸಿ ಸುಮಾರು ಅರ್ಧ ಘಂಟೆಯವರೆಗೆ ಗುಂಡು ಹಾರಿಸುತ್ತಲೇ ಇದ್ದರು. ಬೈಜನಾಥ್ ಇನ್ನೂ ಏಕಾಂಗಿಯಾಗಿ ಹೋರಾಡುತ್ತಿದ್ದರು. ಸ್ವಲ್ಪ ಸಮಯದ ನಂತರ, ದರೋಡೆಕೋರರು ಅವರನ್ನು ಸುತ್ತುವರೆದರು. ಅಪಾಯವನ್ನು ಅರಿತ ಬೈಜ್ ನಾಥ್ ತಮ್ಮ ಸ್ಥಳವನ್ನು ಬದಲಾಯಿಸಲು ಪ್ರಯತ್ನಿಸಿದರು, ಆದರೆ ಅಷ್ಟರಲ್ಲಿ, ದರೋಡೆಕೋರರು ಅವರನ್ನು ಗುರಿಯಾಗಿಸಿಕೊಂಡಿದ್ದರು. ಅವರಿಗೆ ಹಲವು ಗುಂಡುಗಳು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದರು.

ಅಶೋಕ ಚಕ್ರ ಪ್ರಶಸ್ತಿ ಬದಲಾಯಿಸಿ

ದರೋಡೆಕೋರರೊಂದಿಗೆ ಏಕಾಂಗಿಯಾಗಿ ಹೋರಾಡಿ ಅಪಾರ ಧೈರ್ಯವನ್ನು ತೋರಿಸಿದ ಅವರ ಅದ್ಭುತ ಶೌರ್ಯಕ್ಕಾಗಿ, ಅವರಿಗೆ ಮರಣೋತ್ತರವಾಗಿ ಅಶೋಕ ಚಕ್ರ ನೀಡಲಾಯಿತು.

ಉಲ್ಲೇಖಗಳು ಬದಲಾಯಿಸಿ

  1. "Baij Nath Singh | Gallantry Award".