ಬೇಲಿ

ನಿಯಂತ್ರಣ ರೇಖೆಯ ಚಳುವಳಿಯನ್ನು ತಡೆಯುವುದು

ಬೇಲಿಯು ಸಾಮಾನ್ಯವಾಗಿ ಹೊರಾಂಗಣದ ಒಂದು ಪ್ರದೇಶವನ್ನು ಆವರಿಸುವ ಒಂದು ರಚನೆ. ಇದನ್ನು ಸಾಮಾನ್ಯವಾಗಿ ಕಂಬಗಳಿಂದ ನಿರ್ಮಿಸಲಾಗಿರುತ್ತದೆ. ಈ ಕಂಬಗಳು ಒಂದಕ್ಕೊಂದಕ್ಕೆ ಹಲಗೆಗಳು, ತಂತಿ, ಅಡ್ಡಪಟ್ಟಿಗಳು ಅಥವಾ ತಂತಿಬಲೆಯಿಂದ ಜೋಡಣೆಗೊಂಡಿರುತ್ತವೆ. ಬೇಲಿಯು ಗೋಡೆಯಿಂದ ಭಿನ್ನವಾಗಿದೆ. ಬೇಲಿಯು ತನ್ನ ಪೂರ್ಣ ಉದ್ದಕ್ಕೆ ಘನ ಅಡಿಪಾಯವನ್ನು ಹೊಂದಿರುವುದಿಲ್ಲ.[] ಬೇಲಿ ಹಾಕುವುದರ ಪರ್ಯಾಯಗಳಲ್ಲಿ ಕಂದಕ (ಕೆಲವೊಮ್ಮೆ ಇದನ್ನು ನೀರಿನಿಂದ ತುಂಬಲಾಗುತ್ತದೆ ಮತ್ತು ಒಂದು ಅಗಳನ್ನು ರಚಿಸುತ್ತದೆ) ಸೇರಿದೆ.

ಕಟ್ಟಿಗೆಯ ಬೇಲಿ

ಬೇಲಿಗಳಲ್ಲಿ ಅನೇಕ ಬಗೆಗಳಿವೆ. ಅವುಗಳನ್ನು ಬಳಸುವ ಕಾರ್ಯಗಳ ಪ್ರಕಾರ ಅವನ್ನು ವಿಂಗಡಿಸಬಹುದು. ಕೃಷಿ ಬೇಲಿಯ ಕಾರ್ಯವೆಂದರೆ ಜಾನುವಾರುಗಳನ್ನು ಒಳಗಿಡುವುದು ಮತ್ತು ಪರಭಕ್ಷಕರನ್ನು ಹೊರಗಿಡುವುದು. ಧ್ವನಿ ನಿರೋಧಕ ಬೇಲಿಯ ಕಾರ್ಯವೆಂದರೆ ಶಬ್ದ ಮಾಲಿನ್ಯವನ್ನು ಕಡಿಮೆಮಾಡುವುದು. ಜನಸಮೂಹ ನಿಯಂತ್ರಣ ತಡೆಗಳನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತದೆ. ಇವು ಭೌತಿಕ ಮತ್ತು ಮಾನಸಿಕ ತಡೆಗಳಾಗಿ ಕಾರ್ಯನಿರ್ವಹಿಸುತ್ತವೆ. ಗೌಪ್ಯತಾ ಬೇಲಿಯ ಕಾರ್ಯವೆಂದರೆ ಗೋಪ್ಯತೆ ಮತ್ತು ಭದ್ರತೆಯನ್ನು ಒದಗಿಸುವುದು. ತಾತ್ಕಾಲಿಕ ಬೇಲಿಗಳು ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುತ್ತವೆ ಮತ್ತು ಚಲನೆಯನ್ನು ನಿಯಂತ್ರಿಸುತ್ತವೆ. ಇವನ್ನು ತಾತ್ಕಾಲಿಕ ಪ್ರವೇಶ ನಿಯಂತ್ರಣವು ಬೇಕಾದ ಕಡೆ ಬಳಸಲಾಗುತ್ತದೆ, ವಿಶೇಷವಾಗಿ ಕಟ್ಟಡ ಮತ್ತು ನಿರ್ಮಾಣ ಸ್ಥಳಗಳಲ್ಲಿ. ಪರಿಧಿ ಬೇಲಿಯ ಕಾರ್ಯವೆಂದರೆ ಅತಿಕ್ರಮಣ ಅಥವಾ ಕಳ್ಳತನವನ್ನು ತಡೆಯುವುದು ಮತ್ತು ಮಕ್ಕಳು ಹಾಗೂ ಸಾಕುಪ್ರಾಣಿಗಳು ಹೊರಹೋಗದಂತೆ ತಡೆಯುವುದು. ಅಲಂಕಾರಕ ಬೇಲಿಗಳು ಒಂದು ಸ್ವತ್ತು, ತೋಟ ಅಥವಾ ಇತರ ಸ್ಥಳದ ನೋಟವನ್ನು ಹೆಚ್ಚಿಸುತ್ತವೆ. ಗಡಿ ಬೇಲಿಯು ಒಂದು ಸ್ಥಿರಾಸ್ತಿಯ ಚೂರಿನ ಗಡಿಯನ್ನು ಗುರುತಿಸುತ್ತದೆ. ಉಭಯಚರಿ ಬೇಲಿಯು ಪ್ಲಾಸ್ಟಿಕ್ ಪದರಗಳ ಒಂದು ಗಿಡ್ಡನೆಯ ಬೇಲಿಯಾಗಿದ್ದು ಉಭಯಚರಗಳು ಮತ್ತು ಸರೀಸೃಪಗಳ ಚಲನೆಯನ್ನು ತಡೆಯುತ್ತದೆ.

ಬೇಲಿಗಳನ್ನು ಅವುಗಳಲ್ಲಿ ಬಳಸಲಾದ ನಿರ್ಮಾಣ ಸಾಮಗ್ರಿಗಳ ಪ್ರಕಾರ ಕೂಡ ವಿಂಗಡಿಸಬಹುದು. ತಂತಿ ಜಾಲರಿ ಬೇಲಿಯು ಒಂದು ಬಗೆಯ ತಂತಿ ಬೇಲಿಯಾಗಿದ್ದು ತಂತಿಗಳನ್ನು ಒಟ್ಟಾಗಿ ಹೆಣೆದಿರಲಾಗುತ್ತದೆ. ಕಾಂಕ್ರೀಟ್ ಬೇಲಿಯನ್ನು ಸ್ಥಾಪಿಸುವುದು ಸುಲಭವಾಗಿದ್ದು ಬಹಳ ಬಾಳಿಕೆ ಬರುತ್ತದೆ. ಪೊದೆ ಬೇಲಿಯು ತಡೆಯನ್ನು ರಚಿಸಲು ಅಥವಾ ಒಂದು ಪ್ರದೇಶದ ಗಡಿಯನ್ನು ಗುರುತಿಸಲು ನೆಡಲಾದ ಮತ್ತು ತರಬೇತಿ ನೀಡಲಾದ ನಿಕಟ ಅಂತರದ ಕುರುಚಲು ಗಿಡಗಳು ಮತ್ತು ಕೆಲವೊಮ್ಮೆ ಮರಗಳ ಒಂದು ಸಾಲು.

ಉಲ್ಲೇಖಗಳು

ಬದಲಾಯಿಸಿ
  1. Dr D G Hessayon (1992). The Garden DIY Expert. pbi publications. p. 5. ISBN 0-903505-37-1.


"https://kn.wikipedia.org/w/index.php?title=ಬೇಲಿ&oldid=862538" ಇಂದ ಪಡೆಯಲ್ಪಟ್ಟಿದೆ