ಬೇಗೂರು, ಕುಣಿಗಲ್. ಬದಲಾಯಿಸಿ

ಅಕ್ಷಾಂಶ ೧೩° ೦೦′ ೨೫″ ಹಾಗೂ ರೇಖಾಂಶ ೭೭° ೦೨′ ೫೦″ ಗಳಲ್ಲಿರುವ ತುಮಕೂರು ಜಿಲ್ಲೆ ಯ ಕುಣಿಗಲ್ ತಾಲ್ಲೋಕಿನ ಪ್ರಮುಖ ಗ್ರಾಮವೇ ಬೇಗೂರು. ಕುಣಿಗಲ್ ಪಟ್ಟಣದಿಂದ ಬೆಂಗಳೂರಿಗೆ ಸಾಗುವ ಹಳೆಯ ರಾ‍ಷ್ಟ್ರೀಯ ಹೆದ್ದಾರಿಯಲ್ಲಿ CH 69.900 Km ಸುಮಾರಿನಲ್ಲಿ ವ್ಯವಸಾಯೋತ್ಪನ್ನ ಮಾರುಕಟ್ಟೆಯ ಕಾಂಪೌಂಡ್ ಗೋಡೆಯ ಬದಿಯಲ್ಲಿ ಸುಮಾರು ೨ ಕಿಮೀ ದೂರ ಸಾಗಿದರೆ, ಕೆರೆಯ ಏರಿಯು ಮುಗಿಯುವ ಸ್ಠಳದಲ್ಲಿ ರಸ್ತೆಯ ಬಲ ಬದಿಯಲ್ಲಿ ದೇವರ ಗುಡಿ ಸಿಗುವುದು. ಇದೇ ಬೇಗೂರ ಶ್ರೀ ಆಂಜನೇಯ ದೇವರ ಗುಡಿ. ಇದರ ನಂತರ ಬೇಗೂರ ಕೆರೆ ಕೋಡಿ ಹಳ್ಳವನ್ನು ದಾಟಲು ಇರುವ ಮೇಲ್ಮಟ್ಟದ ಕಾಸ್ವೇ ಇದಾದ ನಂತರ ಅರಳಿ ಮರದ ಬಳಿಯ ಕೂಡು ರಸ್ತೆ. ಇಲ್ಲಿಂದಲೇ ಪ್ರಾರಂಭ ಬೇಗೂರು ಗ್ರಾಮ.