ಬೆಹ್ರಾಂಮ್ ಕಂಟ್ರಾಕ್ಟರ್

ಚಿತ್ರ:Behram contractor.jpg
'ಬೆಹ್ರಾಂಮ್ ಕಂಟ್ರಾಕ್ಟರ್'

”Behram Contractor’

ಬದಲಾಯಿಸಿ

(೧೯೩೦-೨೦೦೧) "ಬಿಝಿ ಬೀ" (Busybee), ಎಂದು ಅವರ ಪ್ರಿಯ ಓದುಗರು ಕರೆಯುವ, ’ಬೆಹ್ರಾಮ್ ಕಂಟ್ರಾಕ್ಟರ್, ರವರದು, ಭಾರತದ ಪತ್ರಿಕೋದ್ಯಮದಲ್ಲಿ ಒಂದು ಪ್ರಸಿದ್ಧ ಹೆಸರು. ’ಬೆಹ್ರಾಮ್ ಕಂಟ್ರಾಕ್ಟರ್, ತಮ್ಮದೇ ಸ್ವಂತ-ಪತ್ರಿಕೆ ಹೊರತರುವ ಮೊದಲು, Free Press Journal, Times of India (Bombay), and Midday ಗಳಲ್ಲಿ ಪತ್ರಿಕಾಕರ್ತರಾಗಿ ಡುಡಿದಿದ್ದರು. ಅವರದೇ ಸ್ವಂತ ಪತ್ರಿಕೆ 'The Afternoon Dispatch and Courier ,' (ಈಗ, ’ The Afternoo”) ೧೯೮೫ ರಲ್ಲಿ ಸ್ಥಾಪಿಸಿಕೊಂಡರು. ’ಬೆಹ್ರಾಮ್ ಕಂಟ್ರಾಕ್ಟರ್, ಟೈಮ್ಸ್ ಆಫ್ ಇಂಡಿಯಾ, ಪತ್ರಿಕೆಯನ್ನು ಬಿಟ್ಟಮೇಲೂ, ’ಬಿಝೀ ಬೀ’, ಎನ್ನುವ ಹೆಸರಿನಲ್ಲಿ ಅಂಕಣಗಳನ್ನು ಬರೆಯುತ್ತಲೇ ಇದ್ದರು. Times of India and the Midday ,ತಮ್ಮ ಪತ್ರಿಕೆಯ ಸಂಪಾದಕತ್ವದ ಜೊತೆಗೆ, 'ರಂಡ್ ಅಂಡ್ ಎಬೌಟ್,' ” (’Round and About’ ) ಅಂದಿನ ಮುಂಬಯಿನ ಓದುಗರ ಅತ್ಯಂತ ಪ್ರೀತಿಯ, ಹಾಗೂ ಜನಪ್ರಿಯ ಅಂಕಣವಾಗಿತ್ತು.

"Eating Out" ಅಂಕಣ,ಅತ್ಯಂತ ಜನಪ್ರಿಯವಾಗಿತ್ತು

ಬದಲಾಯಿಸಿ

ಮುಂಬಯಿ ನಗರದ ಅನೇಕ, ಹೋಟೆಲ್ ಗಳಲ್ಲಿ ತಯಾರಿಸುವ ವೈವಿಧ್ಯಮಯ, ರುಚಿಕರ ತಿಂಡಿ-ತಿನಸುಗಳು, ವಿಶೇಷ ವ್ಯಂಜನಗಳು, ಅವನ್ನು ಬಡಿಸುವ ಸೇವೆಗಳ ಬಗ್ಗೆ, ಮಾಹಿತಿಗಳು, ಅವರ "Eating Out" ಕಾಲಂ, ನ ಓದುಗರಿಗೆ, ಪರ್ಯಟಿಕರಿಗಲ್ಲದೆ, ಸದಾ ಉತ್ತಮ ಆಹಾರಗಳನ್ನು ಭುಂಜಿಸಲು ಅರಸುತ್ತಾ ಅಲೆಯುವ ಒಂದು ತಿಂಡಿಪೋತ-ವರ್ಗಕ್ಕೆ ಮುದಕೊಡುತ್ತಿದ್ದವು.

ಪ್ರಶಸ್ತಿ,ಹಾಗೂ ಸನ್ಮಾನಗಳು

ಬದಲಾಯಿಸಿ
  • "ಪದ್ಮಶ್ರೀ" 1990, ರಲ್ಲಿ ಪಡೆದರು.
  • Goenka Award for Excellence in Journalism" 1996 ರಲ್ಲಿ ಗಳಿಸಿದರು.
  • From Bombay to Mumbai", ಎಂಬ ಪುಸ್ತಕವನ್ನು ೧೯೯೮ ರಲ್ಲಿ ಹೊರತಂದರು. ಇದು, ಅವರು ’೧೯೯೬-೧೯೯೭’ ಸಾಲಿನಲ್ಲಿ ಪ್ರಕಟಿಸಿದ ಅತ್ಯುತ್ತಮ ’ಬಿಝಿ ಬೀ,’ ಅಂಕಣಗಳಮಾಲೆಯೆಂದು ಗುರುತಿಸಲ್ಪಟ್ಟಿತ್ತು.

’ಬೆಹ್ರಾಮ್ ಕಂಟ್ರಾಕ್ಟರ್,’ ರವರು, ಸನ್.೨೦೦೧ ರಲ್ಲಿ ’ಹೃದಯಾಘಾತದಿಂದ ನಿಧನರಾದರು.