ಬೆವರುಸಾಲೆ (ಸೆಕೆಬೊಕ್ಕೆ) ಒಂದು ಚರ್ಮರೋಗವಾಗಿದೆ.[] ಇದರಲ್ಲಿ ಚರ್ಮದ ಕೆಳಗೆ ತಡೆಯಲ್ಪಟ್ಟ ಬೆವರು ಗ್ರಂಥಿ ನಾಳಗಳಿಂದ ಸಿಲುಕಿಕೊಂಡ ಬೆವರಿನಿಂದ ಚಿಕ್ಕ, ತುರಿಕೆ ಬರಿಸುವ ದದ್ದುಗಳು ಕಾಣಿಸಿಕೊಳ್ಳುತ್ತವೆ. ಬೆವರುಸಾಲೆಯು ಉಷ್ಣವಲಯಗಳು ಹಾಗೂ ಬೇಸಿಗೆ ಋತುವಿನ ಅವಧಿಯಂತಹ ಬಿಸಿ ಹಾಗೂ ಆರ್ದ್ರ ಹವೆಯಲ್ಲಿ ಸಾಮಾನ್ಯ ಅಸ್ವಸ್ಥತೆಯಾಗಿದೆ. ಇದು ಎಲ್ಲ ವಯಸ್ಸಿನ ಜನರನ್ನು ಬಾಧಿಸುತ್ತದಾದರೂ, ಇದು ಚೆನ್ನಾಗಿ ವಿಕಾಸಗೊಳ್ಳದ ಬೆವರು ಗ್ರಂಥಿಗಳ ಕಾರಣದಿಂದ ವಿಶೇಷವಾಗಿ ಮಕ್ಕಳಲ್ಲಿ ಹಾಗೂ ಶಿಶುಗಳಲ್ಲಿ ಸಾಮಾನ್ಯವಾಗಿದೆ.

ಚಿಹ್ನೆಗಳು ಮತ್ತು ಲಕ್ಷಣಗಳು

ಬದಲಾಯಿಸಿ

ಬೆವರುಸಾಲೆಯ ಲಕ್ಷಣಗಳಲ್ಲಿ ಉದ್ರೇಕಗೊಂಡ ಹಾಗೂ ತುರಿಕೆ ಉಂಟುಮಾಡುವ ಸಣ್ಣ ಕೆಂಪು ದದ್ದುಗಳು ಸೇರಿವೆ. ಇವು ಏಕಕಾಲದಲ್ಲಿ ಬಾಧಿತನ ದೇಹದ ಹಲವು ಭಾಗಗಳಲ್ಲಿ ಕಾಣಿಸಿಕೊಳ್ಳಬಹುದು. ಅತ್ಯಂತ ಸಾಮಾನ್ಯವಾದ ಭಾಗಗಳೆಂದರೆ ಎದೆಯ ಮೇಲ್ಭಾಗ, ಕುತ್ತಿಗೆ, ಮೊಣಕೈಯ ಮಡಿಕೆಗಳು, ಸ್ತನಗಳ ಕೆಳಗೆ ಹಾಗೂ ವೃಷಣ ಕೋಶದ ಕೆಳಗೆ.[]

ಉಲ್ಲೇಖಗಳು

ಬದಲಾಯಿಸಿ
  1. "Miliaria - DermNet New Zealand". dermnetnz.org.
  2. Jacklitsch, Brenda L. (June 29, 2011). "Summer Heat Can Be Deadly for Outdoor Workers". NIOSH: Workplace Safety and Health. Medscape and NIOSH.