[]

thumb|ಬೆಳವಣಿಕಿಯ ವೀರಭದ್ರೇಶ್ವರ ಶೀಲಾಮೂರ್ತಿ ಬೆಳವಣಿಕಿ ಗ್ರಾಮವು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿರುವ ಪ್ರಮುಖ ಸ್ಥಳವಾಗಿದ್ದು

  • ಬೆಳವಣಿಕಿಯು ಆಡಳಿತದ ದೃಷ್ಟಿಯಿಂದ ಬೆಳಗಾವಿ ವಿಭಾಗದ ವ್ಯಾಪ್ತಿಗೆ ಸೇರುತ್ತದೆ
  • ಇದು ಗದಗ ಜಿಲ್ಲಾ ಕೇಂದ್ರದಿಂದ ಸುಮಾರು ೩೧ ಕೀ.ಮಿ ದೂರದಲ್ಲಿದೆ.
  • ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸುಮಾರು ೪೭೨ ಕೀ.ಮಿ ದೂರದಲ್ಲಿದೆ.
  • ಮಲ್ಲಾಪುರ, ಯಾವಗಲ್, ಕೌಜಗೇರಿ, ದಾಟನಾಳ,ಬಳಗಾನೂರ ಸುತ್ತಮುತ್ತಲಿನ ಹಳ್ಳಿಗಳಾಗಿವೆ
  • ಬೆಳವಣಿಕಿಯು ಪಶ್ಚಿಮಕ್ಕೆ ನರಗುಂದ,ನವಲಗುಂದ, ಉತ್ತರಕ್ಕೆ ಬಾದಾಮಿ, ದಕ್ಷಿಣಕ್ಕೆ ಗದಗ ತಾಲೂಕುಗಳಿಂದ ಸುತ್ತುವರೆದಿದೆ.
  • ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಅನುಗುಣವಾಗಿ ಗ್ರಾಮಪಂಚಾಯತ್ ಅಧ್ಯಕ್ಷ ಗ್ರಾಮದ ಪ್ರಮುಖನಾಗಿರುತ್ತಾನೆ.

ಗ್ರಾಮದ ಸಂಕ್ಷಿಪ್ತ ವಿವರ

ಬದಲಾಯಿಸಿ
  • ಗ್ರಾಮಪಂಚಾಯತ: ಬೆಳವಣಿಕಿ
  • ಗ್ರಾಮ ಪಂಚಾಯತ್ ಅಧ್ಯಕ್ಷ: ಪ್ರವೀಣ ಮಾಡೊಳ್ಳಿ
  • ಒಟ್ಟು ಕುಟುಂಬಗಳ ಸಂಖ್ಯೆ: ೧೦೦೨(೨೦೦೧ ರ ಜನಗನತಿಯ ಅನುಗುಣವಾಗಿ)
  • ಒಟ್ಟು ವಾರ್ಡಗಳ ಸಂಖ್ಯೆ: ೦೬
  • ವಿಧಾನಸಭಾ ಕ್ಷೇತ್ರ: ನರಗುಂದ
  • ಲೋಕಸಭಾ ಕ್ಷೇತ್ರ: ಬಾಗಲಕೋಟೆ
  • ವಿಧಾನಸಭಾ ಸದಸ್ಯ: ಸಿ ಸಿ ಪಾಟೀಲ್
  • ಲೋಕಸಭಾ ಸದಸ್ಯ: ಪಿ ಸಿ ಗದ್ದಿಗೌಡರ
  • ಸಮಯದ ವಲಯ: IST (UTC+೫:೩೦)
  • ಆಡಳಿತ ಭಾಷೆ: ಕನ್ನಡ
  • ವಾಹನ ನೋಂದಣಿ: ಕೆ ಎ ೨೬
  • ಎಸ್ ಟಿ ಡಿ ಸಂಖ್ಯೆ: ೦೮೩೮೧

ಬೆಳವಣಿಕಿ ಇತಿಹಾಸ ಮತ್ತು ಗ್ರಾಮದ ಹೆಸರಿನ ಮೂಲ

ಬದಲಾಯಿಸಿ
 
ರಾಯರ ದೇವಸ್ತಾನ ಬೆಳವಣಿಕಿ

ಬೆಳವಣಿಕಿಯ ಇತಿಹಾಸದ ನಿಖರವಾದ ಮಾಹಿತಿಯನ್ನು ನಾವು ರೋಣ ಹಾಗೂ ಕುರ್ತಕೋಟಿ ಶಾಸನಗಳ ಮೂಲಕ ತಿಳಿಯಬಹುದಾಗಿದೆ. ರೋಣ ಶಾಸನದ ಪ್ರಕಾರ ಗಂಗರ ಮಾಂಡಲಿಕನಾದ ಬುತಯ್ಯನು ಗಂಗವಾಡಿ-೯೬೦೦೦,ಬೇಲ್ವೋಳ-೩೦೦,ಪುಲಿಗೆರೆ-೩೦೦ ಪ್ರದೇಶಗಳಿಗೆ ಶಕ ೮೬೮(ಕ್ರಿ.ಶ ೯೪೨)ರಲ್ಲಿ ರಾಜ್ಯಪಾಲನಾಗಿ ಕಾರ್ಯನಿರ್ವಹಿಸಿದ್ದನು(ಇಲ್ಲಿ ೯೬೦೦೦,ಮತ್ತು ೩೦೦ ಸಂಖ್ಯೆಗಳ ಪ್ರತ್ಯಯವು ಜಿಲ್ಲೆಗಳಲ್ಲಿರುವ ಒಟ್ಟು ಹಳ್ಳಿಗಳನ್ನು ಬಿಂಬಿಸುವ ಅಂಕಿ ಅಂಶವಾಗಿದ್ದರೂ ಸಹಿತ ಇಲ್ಲಿ ಬಹುಶಃ ಹೆಚ್ಚಾಗಿ ಆಯಾ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ಸಂಖ್ಯೆಯನ್ನು ಪ್ರತಿಬಿಂಬಿಸುತ್ತದೆ)ಎನ್ನುವದಕ್ಕೆ ಪೂರಕವಾಗಿ ಅವನ ಕುರ್ತಕೋಟಿ ಶಾಸನವು ಶಕ ೮೬೮(ಕ್ರಿ.ಶ ೯೪೬) ರಲ್ಲಿ ಈ ಭಾಗಗಳಿಗೆ ಮುಖ್ಯಸ್ಥನಾಗಿದ್ದನು ಎಂದು ಸಾರುತ್ತದೆ ಅದ್ದರಿಂದ ರಾಷ್ಟ್ರಕೂಟ ಮತ್ತು ಅವರ ಸಾಮಂತರಾದ ಕಲ್ಯಾಣ ಚಾಲುಕ್ಯರ ಕಾಲದ ಶಾಸನಗಳಿಂದ ತಿಳಿಯುವದಾದರೆ ಬೆಳವಣಿಕಿ ಗ್ರಾಮವು ಸುಮಾರು ೯ ಮತ್ತು 10 ನೆಯ ಶತಮಾನದಿಂದಲೂ ಅಸ್ತಿತ್ವದಲ್ಲಿದೆ ಎಂದು ಕಂಡು ಬರುತ್ತದೆ. ಅಲ್ಲದೆ ಮರಾಠ ಚಕ್ರವರ್ತಿ ಶಿವಾಜಿ ಮತ್ತು ಪೇಶ್ವೆಯರು ಕೂಡ ೧೭ ಮತ್ತು ೧೮ ನೆಯ ಶತಮಾನದಲ್ಲಿ ಆಳಿದ ಕುರುಹು ಇತಿಹಾಸದ ದಾಖಲೆಗಳಿಂದ ತಿಳಿದುಬರುತ್ತದೆ.ಇನ್ನು ಈ ಗ್ರಾಮದ ಹೆಸರಿನ ಮೂಲವನ್ನು ಹುಡುಕುತ್ತ ಹೊರಟಾಗ ಈ ಭಾಗವನ್ನು ಬೆಳವಲ-ನಾಡು ೩೦೦ ಅಥವಾ ಬೇಲ್ವೋಳ-೩೦೦ಎಂತಲೂ ಕರೆಯಲಾಗುತ್ತಿತ್ತು. ಬಹುಶಃ ಬೆಳವಣಿಕಿಯ ಹೆಸರು ಬೆಳವಲನಾಡು-೩೦೦(ದಖನ್ ಪ್ರಸ್ತಭೂಮಿ),ಬೇಲ್ವೋಲ-೩೦೦,ಬೆಳ್ವೋಳ-೩೦೦ ರಿಂದ ಹುಟ್ಟಿಕೊಂಡಿದೆ ಎನ್ನುವ ಸ್ಪಷ್ಟ ಅಂಶ ರೋಣ ಹಾಗು ಕುರ್ತಕೋಟಿ ಶಿಲಾಶಾಸನಗಳಿಂದ ತಿಳಿದು ಬರುತ್ತದೆ.ಬೆಳ್ವೊಲ” ಎಂದರೆ ಬೆಳೆವ ಹೊಲ ಅಥವಾ ಫಲವತ್ತಾದ ಭೂಮಿ ಎಂದರ್ಥ. ಬೆಳ್ವಲನಾಡಲ್ಲಿ ರೋಣ, ಕೌಜಗೇರಿ, ಬೆಳ್ವಣಕಿ-೧೨, ನರೆಯಂಗಲ್ಲು-೧೨, ಜಕ್ಕಲಿ, ಸವಡಿ, ಅಬ್ಬಿಗೇರಿ, ಮೊದಲಾದ ಗ್ರಾಮಗಳು ಸೇರಿದ್ದವು.ಮುಖ್ಯವಾಗಿ ಬೆಳವಲನಾಡು-೩೦೦ ಎಂದರೆ ಮೂನ್ನೂರು ಗ್ರಾಮಗಳಿಂದ ಕೂಡಿದ ಫಲವತ್ತಾದ ನಾಡು ಅಥವಾ ಪ್ರದೇಶ ಎಂದಾಗುತ್ತದೆ.

ಜನರು ಹಾಗು ಗ್ರಾಮದ ವೈಶಿಷ್ಟಗಳು

ಬದಲಾಯಿಸಿ
 
ಬೆಳವಣಿಕಿಯ ಪ್ರಮುಖ ಕುಡಿಯುವ ನೀರಿನ ಕೆರೆ

ಸಾಮಾನ್ಯವಾಗಿ ಬೆಳವಣಿಕಿಯ ಹೆಸರು ಜನರ ಆಡುಭಾಷೆಯಲ್ಲಿ ಬೊಳುಂಕಿ,ಬೊಳುನಕಿ,ಬೆಳವಂಕಿ,ಎಂದು ಬಳಸಲಾಗುತ್ತದೆ.ಬೆಳವಣಿಕಿಯು ರೋಣ ತಾಲುಕಿನಲ್ಲಿರುವ ಪ್ರಮುಖ ಗ್ರಾಮವಾಗಿದೆ. ಭೌಗೋಳಿಕವಾಗಿ ಗ್ರಾಮವು ಬಯಲುಶೀಮೆಯಲ್ಲಿದೆ ಮತ್ತು ರಾಜ್ಯದ ಪ್ರಮುಖ ಸ್ತಳಗಳಿಗೆ ಸಂಪರ್ಕ ಕಲ್ಪಿಸಲು ರಾಜ್ಯ ಹೆದ್ದಾರಿ ಸಹಿತ ೫ ರಸ್ತೆ ಮಾರ್ಗಗಳಿವೆ.ಇನ್ನು ಅಭಿವೃದ್ದಿ ವಿಷಯಕ್ಕೆ ಬರುವುದಾದರೆ ಶಿಕ್ಷಣಸಂಸ್ಥೆಗಳು,ಬ್ಯಾಂಕ್,ಪ್ರಾಥಮಿಕ ಆರೋಗ್ಯ ಕೇಂದ್ರ,ಪಶುಆರೋಗ್ಯ ಕೇಂದ್ರ,ಚಲನಚಿತ್ರಮಂದಿರ ಈ ರೀತಿ ಅರೆನಗರದ ಗುಣಲಕ್ಷಣಗಳನ್ನು ಬೆಳವಣಿಕಿ ಹೊಂದಿದೆ ಎಂದರೂ ತಪ್ಪಾಗಲಾರದು.ಇಲ್ಲಿ ಕೃಷಿಯ ಪ್ರಧಾನವಾದ ಶೇಕಡಾ ೮೦ರಷ್ಟು ಜನರ ಕಸುಬಾಗಿದೆ ಮತ್ತು ಸಣ್ಣಕೈಗಾರಿಕೆಗಳಾದ ಹತ್ತಿಗಿರಣಿಗಳು ಕೆಲವು ಭೂಮಾಲಿಕರ ಒಡೆತನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ.ಬೆಳವಣಿಕಿಯು ಸಮಾಜ ಪರಿವರ್ತನಾ ಸಮುಧಾಯ ಸಂಸ್ಥಾಪಕರು ಮತ್ತು ಸಾಮಾಜಿಕ ಕಾರ್ಯಕರ್ತರಾದ ಎಸ್.ಆರ್.ಹಿರೇಮಠರವರ ಜನ್ಮಸ್ತಳವು ಹೌದು.

ಸಂಸ್ಕ್ರತಿ ಮತ್ತು ದೇವಾಲಯಗಳು

ಬದಲಾಯಿಸಿ
 
ಸಪ್ತಮಾತೃಕೆಯರ ಶಿಲ್ಪಕಲೆ(ವೀರಭದ್ರೇಶ್ವರ ದೇವಸ್ತಾನದ ಹತ್ತಿರ) ಬ್ರಾಹ್ಮಣಿ,ವೈಷ್ಣವಿ,ಮಹೇಶ್ವರಿ, ಇಂದ್ರಾಣಿ, ಕುಮಾರಿ,ವರಾಹಿ,ಚಾಮುಂಡಾ ನರಸಿಂಹಿ.

ಬೆಳವಣಿಕಿಯಲ್ಲಿ ಹಿಂದೂ ಮತ್ತು ಮುಸ್ಲಿಂರ ಜನಸಂಖ್ಯೆ ಅಧಿಕ ಸಂಖ್ಯೆಯಲ್ಲಿರುವುದರಿಂದ ಬಹುತೇಕ ಹಬ್ಬ-ಹರಿದಿನಗಳು ಈ ಧರ್ಮಗಳ ಕೇಂದ್ರಿತವಾಗಿವೆ.ಅಲ್ಲದೆ ಎರಡು ಧರ್ಮಗಳ ಜನರು ಪರಸ್ಪರ ಭೇಧಭಾವಗಳಿಲ್ಲದೆ ಎಲ್ಲ ಹಬ್ಬಗಳಲ್ಲಿ ಸಾಮೂಹಿಕವಾಗಿ ಪಾಲ್ಗೊಳ್ಳುತ್ತಾರೆ,ಇದು ಗ್ರಾಮದ ಸೌಹಾರ್ದ ಹಾಗು ಭಾವಕ್ಯತೆಯ ಪರಂಪರೆಯನ್ನು ಎತ್ತಿ ತೋರಿಸುತ್ತದೆ.

ಬೆಳವಣಿಕಿಯಲ್ಲಿರುವ ವೀರಭದ್ರೇಶ್ವರ ದೇವಸ್ತಾನದ ಮೂರ್ತಿಯು ಕರ್ನಾಟಕದಲ್ಲಿ ಹೊಸದಾಗಿ ಕೆತ್ತಿರುವ ಮೂರ್ತಿಗಳಲ್ಲಿ ಅಪರೂಪವಾದಂತಹ ಶಿಲ್ಪಕಲೆಯಾಗಿದೆ, ಇದರ ಬಗ್ಗೆ ಧಾರವಾಡ ಜಿಲ್ಲೆಯ ಗ್ಯಾಜಿಟಿಯರ ೧೯೫೯( ಇಂಗ್ಲಿಷ್ -ಎಮ್ ಆರ್ ಪಾಲಂದೆ) ಹಾಗು ೧೯೯೫(ಕನ್ನಡ-ಸೂರ್ಯನಾಥ ಕಾಮತ) ರ ಆವೃತ್ತಿಗಳಲ್ಲಿ ಉಲ್ಲೇಖಿಸಲಾಗಿದೆ.[೧]

ಬೆಳವಣಿಕಿಯಲ್ಲಿರುವ ದೇವಸ್ತಾನ ಮತ್ತು ಮಸೀದಿಗಳು:

  • ಶ್ರೀ ವೀರಭದ್ರೇಶ್ವರ ದೇವಸ್ತಾನ
  • ಬಸಣ್ಣದೇವರ ಗುಡಿ
  • ಮುಷ್ಟಿಗೆರಿ ದ್ಯಾಮಮ್ಮನ ಗುಡಿ
  • ಗಾಳಿ ದುರ್ಗಮ್ಮನ ಗುಡಿ
  • ಹನುಮಂತದೇವರ ಗುಡಿ
  • ಗುರುಲಿಂಗಮ್ಮನ ಮಠ
  • ಬಳಗಾನೂರ ಮಠ
  • ಲಕ್ಷ್ಮಿ ಗುಡಿ
  • ಅಮರೇಶ್ವರ ದೇವಸ್ತಾನ
  • ಮೈಲಾರಲಿ೦ಗೇಶ್ವರ ದೇವಸ್ತಾನ
  • ಕಪ್ಪತ್ತನ ಗುಡಿ
  • ದೊಡ್ದೇಶ್ವರ ಗುಡಿ
  • ಕಳ್ಳಿಬಸವಣ್ಣನ ಗುಡಿ
  • ನಾಗಪ್ಪನ ಕಟ್ಟಿ
  • ಅಕ್ಕಮಹಾದೇವಿ ಗುಡಿ
  • ರಾಯರ ಗುಡಿ
  • ಎಲ್ಲಮ್ಮನ ಪಾದಗಟ್ಟಿ
  • ಮೆಕ್ಕಾ ಮಸೀದಿ
  • ಮೆಕ್ಕಾ ಮಸೀದಿ

ಬೆಳವಣಿಕಿಯಲ್ಲಿ ಯುವ ಮತ್ತು ಮಹಿಳಾ ಸ್ವಸಹಾಯ ಗುಂಪುಗಳು

ಬದಲಾಯಿಸಿ

ಬೆಳವಣಿಕಿಯ ಅಭಿವೃದ್ದಿಯಲ್ಲಿ ಯುವ ಹಾಗು ಮಹಿಳಾ ಸ್ವ ಸಹಾಯ ಗುಂಪುಗಳ ಪಾತ್ರ ಅತ್ಯಂತ ಹಿರಿದಾದುದು ಕಾರಣವಿಸ್ಟೆ ಇವತ್ತು ಗ್ರಾಮ ಪಂಚಾಯತ್ ನಡೆಸುವ ಗ್ರಾಮಸಭಾ ಸಾಮೂಹಿಕ ಸಭೆಗಳ ಮೂಲಕ ರೈತಕಾರ್ಮಿಕ ಹಾಗೂ ಮಹಿಳಾ ಸಮಸ್ಯೆಗಳನ್ನುಎತ್ತುವಲ್ಲಿ ಗುಂಪುಗಳು ಕಳೆದ ದಶಕಗಳಿಂದ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಅಲ್ಲದೆ ಅನಕ್ಷರಸ್ಥ ಯುವಕರು ಹಾಗೂ ಮಹಿಳೆಯರು ಕೂಡ ಈ ಸಂಘಗಳಿಂದ ಸರ್ಕಾರದ ಯೋಜನೆಗಳನ್ನು ತಮ್ಮ ಸಬಲೀಕರಣ ಹಾಗೂ ಸಶಕ್ತೀಕರಣಕ್ಕೆ ಬಳಸಿಕೊಳ್ಳಲು ಸಾಧ್ಯವಾಗಿದೆ.

  • ಭಾರತ ಪ್ರಜಾಸತ್ತಾತ್ಮಕ ಯುವಜನ ಒಕ್ಕೂಟ(ದಿವೈಎಫ್ಇ)
  • ಭಾರತ ಜ್ಞ್ಯಾನ ವಿಜ್ಞ್ಯಾನ ಸಮಿತಿ
  • ಕರ್ನಾಟಕ ಪ್ರಾಂತ ರೈತ ಸಂಘ
  • ಭೂಮಿಕಾ ಮಹಿಳಾ ಸ್ವ ಸಹಾಯ ಸಂಘ
  • ಸಾಲುಮರದ ತಿಮ್ಮಕ್ಕಾ ಸ್ವ ಸಹಾಯ ಸಂಘ
  • ಅನ್ನಪೂರ್ಣೆಶ್ವರಿ ಸ್ವ ಸಹಾಯ ಸಂಘ
  • ವಿದ್ಯಾಶ್ರೀ ಸ್ವ ಸಹಾಯ ಸಂಘ
  • ಲಕ್ಷ್ಮಿ ದೇವಿ ಸ್ವ ಸಹಾಯ ಸಂಘ
  • ರೇಣುಕಾ ಸ್ತ್ರೀ ಶಕ್ತಿ ಸಂಘ
  • ಶಾರದಾ ಸ್ವ ಸಹಾಯ ಸಂಘ
  • ಅಕ್ಕಮಹಾದೇವಿ ಸ್ವ ಸಹಾಯ ಸಂಘ
  • ದಾನೇಶ್ವರಿ ಸ್ತ್ರೀ ಶಕ್ತಿ ಸಂಘ
  • ಗಜಾನನ ಗೆಳೆಯರ ಬಳಗ
  • ಭಗತ್ ಸಿಂಗ್ ಯುವಕರ ಸಂಘ

ಬೆಳವಣಿಕಿಯಲ್ಲಿ ಶಿಕ್ಷಣ ಸಂಸ್ಥೆಗಳು

ಬದಲಾಯಿಸಿ
  • ಕನ್ನಡ ಮಾದರಿಯ ಪ್ರಾಥಮಿಕ ಗಂಡುಮಕ್ಕಳ ಶಾಲೆ
  • ಕನ್ನಡ ಮಾದರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆ
  • ಉರ್ದು ಪ್ರಾಥಮಿಕ ಶಾಲೆ
  • ಶ್ರೀ ವೀರಭದ್ರೇಶ್ವರ ಫ್ರೌಡಶಾಲೆ
  • ಶ್ರೀ ವೀರಭದ್ರೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾನಿಲಯ
  • ನವದರ್ಶನ ಇಂಗ್ಲಿಷ್ ನರ್ಸರಿ ಸ್ಕೂಲ್

ಜನಸಂಖ್ಯೆಯ ವಿವರ

ಬದಲಾಯಿಸಿ

ಬೆಳವಣಿಕಿ ಗ್ರಾಮದಲ್ಲಿ ೨೦೦೧ ರ ಜನಗಣತಿಯ ಪ್ರಕಾರ ೫೧೧೮ ಜನಸಂಖ್ಯೆಯನ್ನು ಹೊಂದಿದೆ

ಪುರುಷರು-೨೬೪೨

ಮಹಿಳೆಯರು-೨೪೭೬

ಒಟ್ಟು ಸರಾಸರಿ ಲಿಂಗಾನುಪಾತ-೯೪೫(೧೦೦೦ ಕ್ಕೆ)

ಚಿಕ್ಕ ಮಕ್ಕಳ ಲಿಂಗಾನುಪಾತ-೮೬೪(೧೦೦೦ಕ್ಕೆ)

ಸಾಕ್ಷರತಾ ಪ್ರಮಾಣ-೭೧.೪೧%

ಪುರುಷರು-೮೧.೭೪

ಮಹಿಳೆಯರು-೬೦.೬೦%

ಒಟ್ಟು ಜನಸಂಖ್ಯೆಯಲ್ಲಿ ಮಕ್ಕಳ ಪ್ರಮಾಣ-೫೩೩ (೧೧.೦೧%).

ಬೆಳವಣಿಕಿಯನ್ನು ಹೀಗೆ ತಲುಪಿ

ಬದಲಾಯಿಸಿ

ರಸ್ತೆ ಮುಖಾಂತರ:

ರೋಣ ಪಟ್ಟಣ ಅತ್ಯಂತ ಹತ್ತಿರದ ಪಟ್ಟಣವಾಗಿದ್ದು ಕೇವಲ ೧೯ ಕಿಲೋಮೀಟರ್ ದೂರದಲ್ಲಿದೆ ಈ ಮಾರ್ಗ ರಾಜ್ಯ ಹೆದ್ದಾರಿಯಾಗಿದ್ದು ಇದು ಹುಬ್ಬಳ್ಳಿ ಹಾಗೂ ಬೆಳಗಾವಿ ಇನ್ನಿತರ ಮಹಾನಗರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ .

ರೈಲ್ವೆಯ ಮುಖಾಂತರ:

ಮಲ್ಲಾಪುರ ರೈಲ್ವೇ ನಿಲ್ದಾಣ ಸುಮಾರು ೫ ಕಿಲೋಮೀಟರ್ ದೂರದಲ್ಲಿದೆ, ಇಲ್ಲಿಂದ ಗದಗ (೩೧ ಕೀ.ಮೀ)ಮತ್ತು ಹುಬ್ಬಳ್ಳಿ(೬೪ ಕಿಲೋಮೀಟರ್) ರೈಲ್ವೇ ಜಂಕ್ಷನಗಳ ಮೂಲಕ ಹೊರರಾಜ್ಯಗಳಿಗೂ ತಲುಪಬಹುದು.

ಹತ್ತಿರದ ರೈಲ್ವೇ ನಿಲ್ದಾಣಗಳು:

  • ಮಲ್ಲಾಪುರ ರೈಲ್ವೇ ನಿಲ್ದಾಣ-೫ ಕೀ ಮೀ
  • ಬಳಗಾನೂರ ರೈಲ್ವೇ ನಿಲ್ದಾಣ-೧೦ ಕೀ ಮೀ
  • ಹೊಳೆ ಆಲೂರ ರೈಲ್ವೇ ನಿಲ್ದಾಣ-೨೪ ಕೀ ಮೀ

ಹತ್ತಿರದ ವಿಮಾನ ನಿಲ್ದಾಣಗಳು:

ಬಾಹ್ಯ ಕೊಂಡಿಗಳು

ಬದಲಾಯಿಸಿ

ಆಕರ ಗ್ರಂಥಗಳು

ಬದಲಾಯಿಸಿ

[]

ಉಲ್ಲೇಖಗಳು

ಬದಲಾಯಿಸಿ
  1. R S Panchamukhi (1941). KARNATAKA INSCRIPTIONS VOL 1&2. Kannada Research office Dharwar: Kannada Research office Dharwar. p. 310.
  2. James M Campbell (1884). Gazetter of Bombay Presidency Volume XXII-Dharwar. Bombay: Government central press. p. 857.