ಬೆಳವಡಿ ಮಲ್ಲಮ್ಮ ಕರ್ನಾಟಕದ ಬೆಳಗಾವಿ ಜಿಲ್ಲೆಯ ವೀರ ರಾಣಿ, ಮರಾಠರ ವಿರುದ್ಧ ಹೋರಾಡಲು ಮಹಿಳಾ ಸೇನೆಯನ್ನು ಸಂಘಟಿಸಿದ ಮೊದಲ ಮಹಿಳೆ.[][]

ಬೆಳವಡಿ ಮಲ್ಲಮ್ಮ
Bornಆಗಸ್ಟ್ 18,
Known forbrave queen ( warrior)
ಬೆಳವಡಿ ಪ್ರಾಂತ್ಯದ ಭೂಪಟ

ವಿಶ್ವದಲ್ಲಿ ಪ್ರಥಮ ಮಹಿಳಾ ಸೈನ್ಯ ಕಟ್ಟಿದ್ದು ಬೆಳವಡಿಯ ವೀರ ರಾಣಿ ಮಲ್ಲಮ್ಮ.

ಜೀವನಚರಿತ್ರೆ ಬೆಳವಡಿ ಮಲ್ಲಮ್ಮನ ಬಾಲ್ಯ ಮತ್ತು ಜಿವನ ಚರಿತ್ರೆ

ಬದಲಾಯಿಸಿ

ಬೆಳವಡಿ ಮಲ್ಲಮ್ಮ ಮತ್ತು ಶಿವಾಜಿ ನಡುವೆ ನಡೆದ ಯುದ್ಧದ ಐತಿಹಾಸಿಕ ದಾಖಲೆಗಳ ಪಟ್ಟಿ.

೧. ಬೆಳವಡಿ ಸಂಸ್ಥಾನದ ಪಾರಂಪರಿಕ ತಾಣವಾದ ಬೃಹನ್ಮಠದ ಶಿವ ಬಸವ ಶಾಸ್ತ್ರಿಯವರು ಬರೆದ ತರಾತುರಿ ಪಂಚಮರ ಇತಿಹಾಸ ಪುಸ್ತಕದಲ್ಲಿ ಬೆಳವಡಿ ಸಂಸ್ಥಾನದ ಇತಿಹಾಸವು 1511ರಿಂದ ರಾಜ ಚಂದ್ರಶೇಖರ ರಾಜನೊಂದಿಗೆ ಪ್ರಾರಂಭವಾಗುತ್ತದೆ. ಈ ಪುಸ್ತಕದಲ್ಲಿ ಮರಾಠಿ ರಾಜ ಶಿವಾಜಿ ಮತ್ತು ಬೆಳವಡಿ ಮಲ್ಲಮ್ಮನವರ ನಡುವೆ ನಡೆದ ಯುದ್ಧ ದಾಖಲಾಗಿದೆ. ಈಶಪ್ರಭು ಯುದ್ಧಭೂಮಿಯಲ್ಲಿ ನಿಧನರಾದ ನಂತರ ಮಲ್ಲಮ್ಮ ಛತ್ರಪತಿ ಶಿವಾಜಿ ಮಹಾರಾಜರನ್ನು ಸೋಲಿಸಿದಳು. ಈ ಯುದ್ಧದ ನೆನಪಿಗಾಗಿ ವೀರಗಲ್ಲುಗಳನ್ನು ಬೆಳವಡಿಯ ಸಂಸ್ಥಾನದಲ್ಲಿ ಮಲ್ಲಮ್ಮನ ಹೆಸರಲ್ಲಿ ಕಟ್ಟಿಸಲಾಯಿತು. ತರಾತುರಿ ಪಂಚಮರ ಇತಿಹಾಸ ಪುಸ್ತಕ 1929 ರಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು.

೨. ಮಲ್ಲಮ್ಮನ ಗುರುಗಳಾಗಿದ್ದ ಶಂಕರ ಭಟ್ಟರು ಬರೆದ ಸಂಸ್ಕೃತ ಪುಸ್ತಕ ಶಿವವಂಶ ಸುಧರ್ನವದಲ್ಲಿ ಶಿವಾಜಿಯನ್ನು ಬೆಳವಡಿ ಮಲ್ಲಮ್ಮ ಸೋಲಿಸಿದರು ಎಂದು ದಾಖಲಾಗಿದೆ. ಶಿವಾಜಿಯ ಎರಡನೇ ಸೊಸೆಯಾಗಿದ್ದ ತಾರಾಬಾಯ್ ಅವರು ಈ ಪುಸ್ತಕಕ್ಕೆ ಪ್ರಥಮ ಬಹುಮಾನ ನೀಡಿದ್ದರು ಮತ್ತು ಈ ಪುಸ್ತಕದಲ್ಲಿ ಶಿವಾಜಿ ಮತ್ತು ಮಲ್ಲಮ್ಮರ ನಿಖರವಾದ ವಿಷಯವಿದೆ ಎಂದು ಹೇಳಿದ್ದಾರೆ.

೩. ಜಾದುನಾಥ್ ಸರ್ಕಾರ್ ಶಿವಾಜಿಯ ಜೀವನಚರಿತ್ರೆಯನ್ನು ಮರಾಠಿ ಭಾಷೆಯಲ್ಲಿ ಬರೆದಿದ್ದು ಈ ಪುಸ್ತಕದಲ್ಲಿ ಮಲ್ಲಮ್ಮಳನ್ನು 'ಸಾವಿತ್ರಿ ಬಾಯಿ' ಎಂದು ಕರೆದಿದ್ದಾರೆ. ಮಲ್ಲಮ್ಮ ಮತ್ತು ಶಿವಾಜಿಯ ನಡುವಿನ ಯುದ್ದ 27 ದಿನಗಳ ಕಾಲ ನಡೆದಿತ್ತು ಎಂದು ಬರೆದಿದ್ದಾರೆ


೪.ಶಿವಾಜಿ ಮತ್ತು ಮಲ್ಲಮ್ಮ ನಡುವೆ ನಡೆದ ಯುದ್ದದಲ್ಲಿ ಶಿವಾಜಿ ಮಹಾರಾಜರು ಭಾಗವಹಿಸಲಿರಲಿಲ್ಲ.

ಕೆಲವರು ಶಿವಾಜಿ ಬೆಳವಡಿ ಮಲ್ಲಮ್ಮನ ಎದುರು ಸೋತು ಕ್ಷಮೆ ಕೇಳಿದರು ಎಂದು ಸುಳ್ಳು ಇತಿಹಾಸ ಪ್ರಚಾರ ಮಾಡುತ್ತಾರೆ. ಕ್ಷಮೆ ಕೇಳಿದ್ದು ನಿಜ ಆದರೆ ಬೇರೆ ಕಾರಣಕ್ಕೆ.

ಶಿವಾಜಿ ಸೇನೆಯ ಕಮಾಂಡರ್ ಹಾಗೂ ಶಿವಾಜಿ ಬಗ್ಗೆ ಗೌರವ ಹೊಂದಿದ್ದ ಮಲ್ಲಮ್ಮನ ಪತಿ ಈಶಪ್ರಭು ನಡುವೆ ದಾಳಿಗೆ ಕಾರಣದ ಬಗ್ಗೆ ಸರಿಯಾದ ದಾಖಲೆ ಇಲ್ಲ. ಕದನದಲ್ಲಿ ಈಶಪ್ರಭು ಮೃತಪಡುತ್ತಾರೆ. ನಂತರ ವೀರಾವೇಶದಿಂದ ಹೋರಾಡಿದ ಮಲ್ಲಮ್ಮ ಇಡೀ ದಕ್ಷಿಣ ಭಾರತ ಗೆದ್ದಿದ್ದ ಶಿವಾಜಿ ಸೇನೆಯನ್ನು ಬೆಚ್ಚಿ ಬೀಳಿಸಿ ಹಿಮ್ಮೆಟ್ಟಿಸುತ್ತಾರೆ. ಆದರೆ 27 ದಿನಗಳ ನಂತರ ಕಮಾಂಡರ್ ಮಲ್ಲಮ್ಮನನ್ನು ಸೆರೆ ಹಿಡಿದು ಶಿವಾಜಿ ಮುಂದೆ ಹಾಜರುಪಡಿಸುತ್ತಾನೆ.

ಮಲ್ಲಮ್ಮನ ಪತಿಯ ಸಾವಿಗೆ ಹಾಗೂ ಕಮಾಂಡರ್ ಅಸಭ್ಯ ವರ್ತನೆ ಬಗ್ಗೆ ಶಿವಾಜಿ ಕ್ಷಮೆ ಕೇಳುತ್ತಾರೆ (ಕಮಾಂಡರ್ ಕಣ್ಣು ಕೀಳಿಸುತ್ತಾರೆ ಎಂದು ಉಲ್ಲೇಖ ಇದೆ). ಮಲ್ಲಮ್ಮನ ಶೌರ್ಯ ಮೆಚ್ಚಿ ಆಕೆಯನ್ನು ತಂಗಿ ಎಂದು ಸ್ವೀಕರಿಸಿ ಸನ್ಮಾನ ಮಾಡಿ ಆಕೆಯ ಕೋಟೆ ವಾಪಸ್ ಕೊಟ್ಟು ಹಾನಿಗೆ ಪರಿಹಾರವನ್ನೂ ನೀಡುತ್ತಾರೆ. ಶಿವಾಜಿ ಮಹಾರಾಜರು ಮಲ್ಲಮ್ಮನ ಮಗುವಿಗೆ ಹಾಲು ಕುಡಿಸುವ ಶಿಲ್ಪ ಹಾಗೂ ಮಲ್ಲಮ್ಮ ಶಿವಾಜಿ ಮಹಾರಾಜರನ್ನು ಹೊಗಳಿ ಬರೆಸಿದ ವೀರಗಲ್ಲು ಯಾದವಾಡ ಎಂಬಲ್ಲಿ ಇಂದಿಗೂ ಇದೆ.

೫. ಮರಾಠಿ ಇತಿಹಾಸಕಾರರಲ್ಲಿ ಅನೇಕ ಗೊಂದಲಗಳು ಇರುವ ಬಗ್ಗೆ ಪುಣೆ ವಿಶ್ವವಿದ್ಯಾಲಯದವರು ಸಾಬೀತು ಮಾಡಿದ್ದಾರೆ. ಅವಳು ಶತ್ರು ಪಡೆಗಳ ಜತೆ ಕುದುರೆ ಮೇಲೆ ಸೀರೆಯಲ್ಲಿ ವೀರಗಚ್ಚೆ ಹಾಕಿ ಹೋರಾಡಿದಳು. ೬. ಬೆಳವಡಿಯ ಮಲ್ಲಮ್ಮನ ಆಯುಧಗಳು : ಬಿಲ್ಲು ಬಾಣ, ಕಾವಲಿ ಇವರ ಸೈನ್ಯದ ಆಯುಧಗಳಾಗಿದ್ದವು []

ವಿದ್ವಾಂಸರಾದ ಶೇಷೊ ಶ್ರೀನಿವಾಸ್ ಮುತಾಲಿಕ್ ಅವರು ಕ್ರಿ. ಶ. ೧೭೦೪-೦೫ ರಲ್ಲಿ ಮಧುಲಿಂಗ ನಾಯಕರ ಅರಮನೆ ಜೀವನವನ್ನು ಮರಾಠಿ ಭಾಷೆಯಲ್ಲಿ ದಾಖಲಿಸಿದ್ದಾರೆ.[ಸಾಕ್ಷ್ಯಾಧಾರ ಬೇಕಾಗಿದೆ]

ಉಲ್ಲೇಖಗಳು ಕನ್ನಡ

ಬದಲಾಯಿಸಿ
  1. "Ensure Belwadi Mallamma of Belgaum district gets her place in international history". The Hindu. Chennai, India. 2008-10-26. Archived from the original on 30 October 2008. {{cite news}}: Unknown parameter |deadurl= ignored (help)
  2. "The Saga of a Historic Education Society, BELAWADI". {{cite web}}: Cite has empty unknown parameter: |dead-url= (help)
  3. "Translation of the speech originally delivered in Kannada". Archived from the original on 2007-01-28. {{cite web}}: Cite has empty unknown parameter: |dead-url= (help)