ಬೆರ್ರಿ ಹಣ್ಣು
- ಇತರೆ ಬಳಕೆಗಳಿಗಾಗಿ, ನೋಡಿ ಬೆರ್ರಿ ಹಣ್ಣು (ಅಸಂದಿಗ್ಧೀಕರಣ).
ಬೆರ್ರಿ ಹಣ್ಣಿ ನ ಸಸ್ಯಶಾಸ್ತ್ರೀಯ ಅರ್ಥನಿರೂಪಣೆಯ ಪ್ರಕಾರ ಅದು ಒಂದೇ ಅಂಡಾಶಯದಿಂದ ಹೊರಬರುವ ತಿರುಳಿನಿಂದ ಕೂಡಿದ ಹಣ್ಣು ಆಗಿದೆ. ದ್ರಾಕ್ಷಿಹಣ್ಣುಗಳು ಇವಕ್ಕೆ ಒಂದು ಉದಾಹರಣೆ. ಬೆರ್ರಿ ಹಣ್ಣು ಇಡೀ ಅಂಡಾಶಯದ ಗೋಡೆಯು ಸೇವಿಸಬಲ್ಲ ಬೀಜಕೋಶವಾಗಿ ಪಕ್ವಗೊಳ್ಳುವ ರೀತಿಯ ಬಹುಸಾಮಾನ್ಯವಾದ ತಿರುಳಿನಿಂದ ಕೂಡಿದ ಹಣ್ಣಿನ ವಿಧವಾಗಿದೆ. ಅವುಗಳು ತೆಳುವಾದ ಹೊರಾವರಣ ಹಾಗೂ ತಿರುಳಿನಿಂದ ಕೂಡಿದ ಒಳಾವರಣಗಳನ್ನು ಹೊಂದಿರುವ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಶಲಾಖಗಳನ್ನು ಹೊಂದಿರಬಹುದಾಗಿರುತ್ತದೆ. ಇವುಗಳ ಬೀಜಗಳು ಸಾಧಾರಣವಾಗಿ ಅಂಡಾಶಯದ ತಿರುಳಿನೊಳಗೆ ಸೇರಿಕೊಂಡಿರುತ್ತವೆ. ಬೆರ್ರಿ ಹಣ್ಣುಗಳನ್ನು ಹೊಂದಿರುವ ಸಸ್ಯವನ್ನು ದುಂಡುಗಾಯಿ ಬಿಡುವ ಸಸ್ಯ ವೆಂದು ಹೇಳಲಾಗುತ್ತದೆ. ಬೆರ್ರಿ ಹಣ್ಣುಗಳ ತರಹದ ಆದರೆ ವಾಸ್ತವವಾಗಿ ಬೆರ್ರಿ ಹಣ್ಣುಗಳಲ್ಲದ ಹಣ್ಣನ್ನು ಉತ್ಪಾದಿಸುವ ಈ ಸಸ್ಯಗಳ ತಳಿಗಳನ್ನು ದುಂಡುಗಾಯಿ ಹಣ್ಣು ಗಳೆಂದು ಕರೆಯಲಾಗುತ್ತದೆ.
ಆಡುಮಾತಿನ ಆಂಗ್ಲಭಾಷೆಯಲ್ಲಿ, "ಬೆರ್ರಿ " ಎಂಬುದು ಯಾವುದೇ ತರಹದ ಸಣ್ಣ ಸೇವಿಸಬಲ್ಲ ಹಣ್ಣನ್ನು ಸೂಚಿಸುತ್ತದೆ. ಇಂತಹಾ "ಬೆರ್ರಿ ಹಣ್ಣುಗಳು " ಸಾಧಾರಣವಾಗಿ ರಸಭರಿತ, ವರ್ತುಲಾಕಾರದ ಅಥವಾ ಅರೆ-ದೀರ್ಘಾಕಾರದ, ದಟ್ಟವರ್ಣದ, ಸಿಹಿಯಾದ ಅಥವಾ ಹುಳಿಯಾದ ಹಾಗೂ ಹಲವು ಬೀಜಗಳು ಇರಬಹುದಾದರೂ ಗೊರಟೆ ಅಥವಾ ಕುಳಿಗಳನ್ನು ಹೊಂದಿರದಿರುವ ಹಣ್ಣುಗಳಾಗಿರುತ್ತವೆ.
ಟೊಮೆಟೋಗಳಂತಹಾ ಹಲವು ಬೆರ್ರಿ ಹಣ್ಣುಗಳು ಸೇವಿಸಬಲ್ಲ ಹಣ್ಣುಗಳಾಗಿದ್ದರೆ, ಅದೇ ಕುಟುಂಬದ ಇತರ ಹಣ್ಣುಗಳಾದ ಮಾರಕ ನೈಟ್‌ಷೇಡ್ ಹಣ್ಣುಗಳು (ಅಟ್ರೋಪಾ ಬೆಲ್ಲಾಡೊನ್ನಾ ) ಮತ್ತು ಗೆಣಸು/ಬಟಾಟೆ/ಆಲೂಗೆಡ್ಡೆಯ (ಸೊಲಾನಮ್ ಟ್ಯುಬೆರೋಸಮ್ ) ಹಣ್ಣುಗಳಂತಹವು ಮನುಷ್ಯರಿಗೆ ವಿಷಕಾರಿಯಾಗಿರುತ್ತವೆ. ದೊಡ್ಡ ಮೆಣಸಿನಕಾಯಿ ತರಹದ ಬೆರ್ರಿ ಹಣ್ಣುಗಳು ತಮ್ಮ ಬೀಜಗಳ ಸುತ್ತ ತಿರುಳಿನ ಬದಲಾಗಿ ಖಾಲಿ ಜಾಗವನ್ನು ಹೊಂದಿರುತ್ತವೆ.
ಸಸ್ಯಶಾಸ್ತ್ರೀಯ ಬೆರ್ರಿ ಹಣ್ಣುಗಳು
ಬದಲಾಯಿಸಿಸಸ್ಯಶಾಸ್ತ್ರೀಯ ಭಾಷೆಯಲ್ಲಿ, ಬೆರ್ರಿ ಹಣ್ಣು ಎಂಬುದು ಬೀಜಗಳು ಹಾಗೂ ತಿರುಳನ್ನು ಹೊಂದಿರುವ ಒಂದೇ ಅಂಡಾಶಯದಿಂದ ಉತ್ಪಾದನೆಯಾಗುವ ಸಾಧಾರಣ ಹಣ್ಣು ಆಗಿರುತ್ತದೆ ; ಅಂಡಾಶಯವು ಪುಷ್ಪಪಾತ್ರದ ಕೆಳಗಿರಬಹುದು ಅಥವಾ ಮೇಲಿರಬಹುದು.
ಸಸ್ಯಶಾಸ್ತ್ರೀಯ ಬೆರ್ರಿ ಹಣ್ಣುಗಳ ಉದಾಹರಣೆಗಳಲ್ಲಿ ಕೆಳಕಂಡವು ಸೇರಿವೆ:
- ಬೇರ್‌ಬೆರ್ರಿ ಹಣ್ಣು (ಆರ್ಕ್‌ಟೋಸ್ಟಾಫಿಲೋಸ್ spp.)
- ಬಾರ್‌ಬೆರ್ರಿ ಹಣ್ಣು (ಬರ್ಬೆರಿಸ್ ; ಬರ್ಬೆರಿಡಾಸಿಯೇ)
- ಕಾಗೆಕಾಯಿ (ಎಂಪೆಟ್ರಮ್ spp.)
- ದ್ವೀಪ ಒಣದ್ರಾಕ್ಷಿ (ರೈಬ್ಸ್ spp.; ಗ್ರಾಸ್ಸುಲೇರಿಯಾಸಿಯೇ), ಕೆಂಪು, ಕಪ್ಪು, ಮತ್ತು ಬಿಳಿ ವಿಧಗಳು
- ಎಲ್ಡರ್‌ಬೆರ್ರಿ ಹಣ್ಣು (ಸಾಂಬುಕಸ್ ನೈಗರ್ ; ಕ್ಯಾಪ್ರಿಫೋಲಿಯಾಸಿಯೇ)
- ಗೂಸ್‌ಬೆರ್ರಿ ಹಣ್ಣು (ರೈಬ್ಸ್ spp.; ಗ್ರಾಸ್ಸುಲೇರಿಯಾಸಿಯೇ)
- ಭಾರತೀಯ ಗೂಸ್‌ಬೆರ್ರಿ (ಫಿಲಾಂಥಸ್ ಎಂಬ್ಲಿಕಾ)
- ದ್ರಾಕ್ಷಿ, ವಿಟಿಸ್ ವಿನಿಫೆರಾ
- ಹನಿಸಕಲ್ : ಕೆಲವು ತಳಿಗಳ ಬೆರ್ರಿ ಹಣ್ಣುಗಳು ತಿನ್ನಬಲ್ಲವಾಗಿದ್ದು ಅವುಗಳನ್ನು ಹನಿ ಬೆರ್ರಿ ಹಣ್ಣುಗಳು ಎಂದು ಕರೆಯಲಾಗುತ್ತದಾದರೆ, ಉಳಿದವು ವಿಷಪೂರಿತವಾಗಿರುತ್ತವೆ (ಲೋನಿಸೆರಾ spp.; ಕ್ಯಾಪ್ರಿಫೋಲಿಯಾಸಿಯೇ)
- ಕೌಬೆರ್ರಿ ಹಣ್ಣು /ಲಿಂಗಾನ್‌ಬೆರ್ರಿ ಹಣ್ಣು ವಾಕ್ಕಿನಿಯಮ್ ವಿಟಿಸ್-ಇಡಾಯಿಯಾ
- ಮೇಸೇಬು (ಪೋಡೋಫೈಲಮ್ spp.; ಬರ್ಬೆರಿಡಾಸಿಯೇ)
- ನ್ಯಾನ್ನಿಬೆರ್ರಿ ಹಣ್ಣು ಅಥವಾ ಷೀಪ್‌ಬೆರ್ರಿ ಹಣ್ಣು (ವೈಬರ್‌ನಮ್ spp.; ಕ್ಯಾಪ್ರಿಫೋಲಿಯಾಸಿಯೇ)
- ಓರೆಗಾನ್-ದ್ರಾಕ್ಷಿ (ಮಹೋನಿಯಾ ಆಕ್ವಿಫೋಲಿಯಮ್ ; ಬರ್ಬೆರಿಡಾಸಿಯೇ)
- ಸ್ಟ್ರಾಬೆರ್ರಿ ಮರ (ಆರ್ಬಟಸ್ ಯುನೆಡೋ ), ಇದು ವಾಸ್ತವ ಸ್ಟ್ರಾಬೆರ್ರಿಯೆಂದು ಗೊಂದಲಗೊಳ್ಳಬಾರದು (ಫ್ರಾಗೇರಿಯಾ )
- ಸೋಲಾನಾಸಿಯೇ ಕುಟುಂಬದ ಟೊಮೆಟೋ ಹಾಗೂ ಇತರೆ ತಳಿಗಳು
- ಬಾಳೆಹಣ್ಣು
- ಕ್ರ್ಯಾನ್‌ಬೆರಿ
- ಕಲ್ಲಂಗಡಿ
- ಕುಂಬಳಕಾಯಿ
ಮಾರ್ಪಡಿಸಬಹುದಾದ ಬೆರ್ರಿ ಹಣ್ಣುಗಳು
ಬದಲಾಯಿಸಿಕಿತ್ತಳೆ, ಕಮ್‌ಕ್ವಾಟ್ ಮತ್ತು ನಿಂಬೆಹಣ್ಣುಗಳಂತಹಾ ನಿಂಬೆಕುಲದ ಹಣ್ಣುಗಳು, ತೊಳೆಹಣ್ಣು/ಹೆಸ್ಪೆರಿಡಿಯಮ್ ಎಂಬ ವಿಶೇಷನಾಮವನ್ನು ನೀಡಲಾಗಿರುವ ಬಹಳವೇ ರಸಭರಿತವಾದ ಒಳಾವರಣವನ್ನು ಹೊಂದಿರುವ ಹಾಗೂ ದಪ್ಪ ತೊಗಟೆಯೊಂದಿಗಿರುವ ಬೆರ್ರಿ ಹಣ್ಣು ಆಗಿರುತ್ತವೆ.
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ (March 2011) ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಪುಷ್ಪಪಾತ್ರದ ಮೇಲ್ಭಾಗದಲ್ಲಿರುವ ಅಂಡಾಶಯದಿಂದ ಬೆಳೆದುಕೊಂಡು ಬರುವ ದಿಟವಾದ ಬೆರ್ರಿ ಹಣ್ಣುಗಳ ಹಾಗಲ್ಲದೇ ಪುಷ್ಪಪಾತ್ರದ ಕೆಳಗಿರುವ ಅಂಡಾಶಯದಿಂದ ಬೆಳೆದುಕೊಂಡು ಬರುವ ಬೆರ್ರಿ ಹಣ್ಣುಗಳನ್ನು ಕೆಲವು ವೇಳೆ ಎಪಿಗೈನೋಸ್ ಬೆರ್ರಿ ಹಣ್ಣುಗಳೆಂದು ಅಥವಾ ಹುಸಿ ಬೆರ್ರಿ ಹಣ್ಣುಗಳು ಎಂದು ಕರೆಯಲಾಗುತ್ತದೆ. ಎಪಿಗೈನೋಸ್ ಬೆರ್ರಿ ಹಣ್ಣುಗಳು ಎಂದು ಕರೆಯಲಾಗುವ ಈ ಬೆರ್ರಿ ಹಣ್ಣು ಅಂಡಾಶಯದ ಪಕ್ಕದಲ್ಲಿರುವ ಹೂವಿನ ಭಾಗಗಳಿಂದ ಒಡಮೂಡುವ ಅಂಗಾಂಶಗಳನ್ನು ಹೊಂದಿರುತ್ತದೆ. ಪುಷ್ಪಪಾತ್ರದ ದಳಗಳ ಕೆಳಭಾಗದ ಸಸ್ಯದ ನಳಿಕೆಗಳು, ಹೂವಿನ ಎಸಳು/ಪುಷ್ಪದಳಗಳು ಹಾಗೂ ಪರಾಗ ಕೇಸರಗಳು ಪಕ್ವತೆಯನ್ನು ಪಡೆದುಕೊಂಡಾಗ ತಿರುಳಿನಿಂದ ಕೂಡಿದಂತಾಗಿ ಅಂಡಾಶಯದೊಂದಿಗೆ ಮಿಳಿತಗೊಂಡು ಹಣ್ಣಾಗಿ ರೂಪುಗೊಳ್ಳುತ್ತದೆ. ಎಪಿಗೈನೋಸ್ ಬೆರ್ರಿ ಹಣ್ಣುಗಳೆಂದು ವರ್ಗೀಕರಿಸಲ್ಪಡುವ ಸಾಧಾರಣ ಹಣ್ಣುಗಳಲ್ಲಿ ಬಾಳೆಹಣ್ಣುಗಳು, ವ್ಯಾಕ್ಕಿನಿಯಮ್ ಪ್ರಕಾರದ ಸದಸ್ಯತಳಿಗಳು (e.g. , ಕ್ರಾನ್‌ಬೆರ್ರಿ ಹಣ್ಣುಗಳು ಮತ್ತು ಬ್ಲ್ಯೂಬೆರ್ರಿ ಹಣ್ಣುಗಳು) ಹಾಗೂ ಕಕರ್ಬಿಟೇಸಿಯೇ ಕುಟುಂಬದ ಹಣ್ಣುಗಳು (e.g. , ಸೌತೆಕಾಯಿಗಳು, ಕಲ್ಲಂಗಡಿಹಣ್ಣುಗಳು ಮತ್ತು ಕುಂಬಳಕಾಯಿಯ ವೈವಿಧ್ಯಗಳು) ಸೇರಿವೆ.
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ (March 2011) ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಕಕರ್ಬಿಟೇಸಿಯೇ ಹಣ್ಣುಗಳನ್ನು ಹೆಚ್ಚು ದಪ್ಪವಾದ ಹೊರಭಾಗದ ತೊಗಟೆಯನ್ನು ಹೊಂದುವಂತೆ ಮಾರ್ಪಡಿಸಿದ ಹಣ್ಣುಗಳಿಗೆ ಮತ್ತೊಂದು ವಿಶೇಷ ಹೆಸರನ್ನು ನೀಡಲಾಗುತ್ತದೆ. ಕಠಿಣವಾದ ಹೊರತೊಗಟೆಯನ್ನು ಹೊಂದಿದ ಬೆರ್ರಿ ಹಣ್ಣುಗಳಿಗೆ ಪೆಪೋ ಗಳೆಂದು ವಿಶೇಷ ಹೆಸರಿನಿಂದ ಕರೆಯಲಾಗುತ್ತದೆ. ಕಕರ್ಬಿಟೇಸಿಯೇ ಕುಟುಂಬದಲ್ಲಿ ಪೆಪೋಗಳು ತೀರಾ ಸಾಮಾನ್ಯವಾದರೂ, ಪ್ಯಾಸ್ಸಿಫ್ಲೋರಾ ಮತ್ತು ಕ್ಯಾರಿಕಾ ಕುಲದ ಹಣ್ಣುಗಳನ್ನು ಕೂಡಾ ಕೆಲವೊಮ್ಮೆ ಪೆಪೋಗಳೆಂದು ಪರಿಗಣಿಸಲಾಗುತ್ತದೆ.[೧]
ಸಸ್ಯಶಾಸ್ತ್ರೀಯವಲ್ಲದ ಬೆರ್ರಿ ಹಣ್ಣು
ಬದಲಾಯಿಸಿಸಾಮಾನ್ಯವಾಗಿ ಬೆರ್ರಿ ಹಣ್ಣುಗಳು ಎಂದೇ ಕರೆಯಲ್ಪಡುವ ಹಲವು ಹಣ್ಣುಗಳು ವಾಸ್ತವವಾಗಿ ವೈಜ್ಞಾನಿಕ ಸ್ವರೂಪದಲ್ಲಿ ಬೆರ್ರಿ ಹಣ್ಣುಗಳು ಅಲ್ಲದೇ ಹೋದರೂ ಈ ಕೆಳಕಂಡ ವರ್ಗಗಳಿಗೆ ಒಳಪಡುತ್ತವೆ:
ಓಟೆಹಣ್ಣು/ಅಷ್ಟಿಫಲ/ಗೊರಟೆಹಣ್ಣುಗಳು
ಬದಲಾಯಿಸಿಓಟೆಹಣ್ಣು/ಅಷ್ಟಿಫಲ/ಗೊರಟೆಹಣ್ಣುಗಳು ತಿರುಳಿನಿಂದ ಕೂಡಿದ ಹಣ್ಣುಗಳಾಗಿದ್ದು (ಸಾಧಾರಣವಾಗಿ) ಒಂದೇ ಬೀಜವನ್ನು ಹೊಂದಿರುವ ಅಂಡಾಶಯದಿಂದ ಉತ್ಪತ್ತಿಯಾಗುವಂತಹವಾಗಿದ್ದು ಬೀಜದ ಸುತ್ತಲೂ ಕಠಿಣವಾದ (ಅಂತಃಫಲಕವಚ ಎಂದು ಕರೆಯಲಾಗುವ) ಗೊರಟೆಯ ಪದರವು ಸುತ್ತುವರೆದಿರುತ್ತದೆ.
- ಪ್ಲಮ್ ಹಣ್ಣು
- ಪೀಚ್ ಹಣ್ಣು
- ಹಾಕ್/ಹ್ಯಾಕ್‌ಬೆರ್ರಿ ಹಣ್ಣು (ಸೆ/ಕೆಲ್ಟಿಸ್ spp.; ಕ್ಯಾನ್ನಾಬಾಸಿಯೇ)
ಇತರೆ ಓಟೆಹಣ್ಣು/ಅಷ್ಟಿಫಲ/ಗೊರಟೆಹಣ್ಣುಗಳ ತರಹ ಒಂದೇ ಬೀಜವನ್ನು ಹೊಂದಿರುವ ಆದರೆ ಗಡುಸಾದ ಅಂತಃಫಲಕವಚವನ್ನು ಹೊಂದಿರದ ಹಣ್ಣುಗಳಲ್ಲಿ ಈ ಕೆಳಕಂಡವು ಸೇರಿವೆ:
- ಅವೊಕಾಡೋ (ಪರ್ಸಿಯಾ ಅಮೇರಿಕಾನಾ )
- ಕಡಲ/ಸೀ-ಬಕ್‌ಥಾರ್ನ್ (ಹಿಫಾಫಿ ರಾಮನಾಯ್ಡೀಸ್ ; ಎಲೇಗ್ನಾಸಿಯೇ) ತಿರುಳಿನಿಂದ ಕೂಡಿದ ಹಣ್ಣಿನೊಳಗಿನ ಏಕಮೇವ ಬೀಜ
ಪೋಮ್ ಕುಲದ ಹಣ್ಣುಗಳು
ಬದಲಾಯಿಸಿಸೇಬುಗಳು ಹಾಗೂ ಮರಸೇಬುಗಳಂತಹಾ ರೋಸಾಸಿಯೇ ಕುಲದ ಪೈರಿನೇ ಉಪಕುಲದ ಸಸ್ಯಗಳಿಂದ ಉತ್ಪತ್ತಿಯಾಗುವ ಪೋಮ್ ಕುಲದ ಹಣ್ಣುಗಳು ಅಂಡಾಶಯದ ಅಂಗಾಂಶಗಳಿಂದ ಸ್ಪಷ್ಟವಾಗಿ ಬೀಜಗಳನ್ನು ಪ್ರತ್ಯೇಕಿಸುವ ಸ್ವರೂಪ/ಸಂರಚನೆ(ಗೊರಟೆ)ಯನ್ನು ಹೊಂದಿರುತ್ತವೆ. ಆದಾಗ್ಯೂ, ಸಣ್ಣಗಾತ್ರದ ಪೋಮ್ ಕುಲದ ಹಣ್ಣುಗಳನ್ನು ಕೆಲವೊಮ್ಮೆ ಬೆರ್ರಿ ಹಣ್ಣುಗಳು ಎಂದು ಕರೆಯಲಾಗುತ್ತದೆ. ಕ್ರಾಟೇಗಸ್ ಕುಲ ದ ದಟ್ಟ ಕೆಂಪು ಬಣ್ಣದ ಹಾಥಾರನ್ ಹಣ್ಣುಗಳನ್ನು ಕೆಲವೊಮ್ಮೆ ಹಾಬೆರ್ರಿ ಹಣ್ಣುಗಳು ಎಂದು ಕರೆಯಲಾಗುತ್ತದೆ. ಅಮೇಲಾಂಕಿಯರ್ ಪೋಮ್ ಕುಲದ ಹಣ್ಣುಗಳು ಪಕ್ವವಾಗುವ ವೇಳೆಗೆ ಎಷ್ಟು ಮೃದುವಾಗುತ್ತವೆಂದರೆ ಅವು ಬ್ಲ್ಯೂಬೆರ್ರಿ ಹಣ್ಣನ್ನು ಹೋಲುತ್ತವೆ ಹಾಗೂ ಜೂನ್‌ಬೆರ್ರಿ ಹಣ್ಣುಗಳು ಅಥವಾ ಸಸ್ಕಾಟೂನ್ ಬೆರ್ರಿ ಹಣ್ಣುಗಳೆಂದು ಕರೆಯಲ್ಪಡುತ್ತವೆ.
ಸಂಯುಕ್ತ ಹಣ್ಣುಗಳು
ಬದಲಾಯಿಸಿಸಂಯುಕ್ತ ಹಣ್ಣುಗಳು ಎಂದರೆ ವಿವಿಧ ಹಣ್ಣುಗಳನ್ನೇ ಭಾಗಗಳ ಸಮೂಹಗಳನ್ನು ಅಥವಾ ಸಮುಚ್ಚಯಗಳನ್ನೇ ಒಟ್ಟಾಗಿ ಸೇರಿಸಿ ಹಣ್ಣುಗಳಾಗಿರುವಂತಹವು:
- ಸಮುಚ್ಛಯ ಹಣ್ಣುಗಳು ಒಂದೇ ಹೂವಿನ ವಿವಿಧ ಅಂಡಾಶಯಗಳಿಂದ ಹೊರಬಂದ ಬೀಜಗಳನ್ನು ಉಳ್ಳವಾಗಿರುತ್ತವೆ. ಇದಕ್ಕೆ ಉದಾಹರಣೆಗಳಲ್ಲಿ ಬ್ಲಾಕ್‌ಬೆರ್ರಿ ಹಣ್ಣು, ರ್ರ್ಯಾಸ್ಪ್‌ಬೆರ್ರಿ ಹಣ್ಣು ಮತ್ತು ಬೇಬೆರ್ರಿ ಹಣ್ಣುಗಳು ಸೇರಿವೆ.
- ಹಲವು ಹಣ್ಣುಗಳು, ಇವು ಹಲವು ಹೂವುಗಳಿಂದ ರೂಪುಗೊಂಡ ಹಣ್ಣುಗಳಾಗಿದ್ದು ಇವುಗಳು ಒಂದಕ್ಕೊಂದು ಬಹುಮಟ್ಟಿಗೆ ಅಂಟಿಕೊಂಡಿರುವಂತೆ ಅಥವಾ ಬಿಗಿದುಕೊಂಡಿರುವಂತೆ ಇರುತ್ತವೆ. ಹಿಪ್ಪನೇರಳೆ ಹಣ್ಣು ಹಲವುವಿಧ ಹಣ್ಣುಗಳಲ್ಲಿ ಒಂದು ಬೆರ್ರಿ ಹಣ್ಣು -ರೀತಿಯ ಉದಾಹರಣೆಯಾಗಿದೆ ; ಇದು ಸಣ್ಣ ಸಣ್ಣ ಪ್ರತ್ಯೇಕ ಹೂವುಗಳನ್ನು ಒಳಗೊಂಡ ಹಣ್ಣಾಗಿ ರೂಪುಗೊಳ್ಳುತ್ತಿರುವಂತೆ ಸಂಕುಚಿತಗೊಳ್ಳುವ ಗೊಂಚಲುಗಳಿಂದ ಬೆಳೆಯುತ್ತದೆ.[೨]
ಆನುಷಂಗಿಕ ಹಣ್ಣುಗಳು
ಬದಲಾಯಿಸಿಆನುಷಂಗಿಕ ಹಣ್ಣುಗಳಲ್ಲಿ ಸೇವಿಸಬಹುದಾದ ಭಾಗವು ಅಂಡಾಶಯದಿಂದ ಉತ್ಪತ್ತಿಯಾಗುವುದಿಲ್ಲ. ಇವುಗಳಲ್ಲಿ ಬೆರ್ರಿ ಹಣ್ಣು -ತರಹದ ಉದಾಹರಣೆಗಳಲ್ಲಿ ಕೆಳಕಂಡವು ಸೇರಿವೆ:
- ಸ್ಟ್ರಾಬೆರ್ರಿ - ಅಂಡಾಶಯಗಳ ಸಮುಚ್ಛಯಗಳಿಂದ ರೂಪುಗೊಂಡ ಬೀಜಗಳ ರೀತಿಯ ಅಕೀನ್/ಸಣ್ಣಒಣಹಣ್ಣುಗಳ ಸಮುಚ್ಛಯವು ವಾಸ್ತವವಾಗಿ "ಹಣ್ಣು " ಆಗಿರುತ್ತದೆ ಹಾಗೂ ತಿರುಳಿನಿಂದ ಕೂಡಿದ ಭಾಗವು ಪುಷ್ಪಪಾತ್ರೆಯಿಂದ ಬೆಳೆದುಕೊಳ್ಳುತ್ತದೆ.
- ಗರ್ಬಿರ್, ಡಚೆಸ್ನಾ ಇಂಡಿಕಾ - ಸ್ಟ್ರಾಬೆರ್ರಿಯಂತಹಾ ಸಂರಚನೆಯನ್ನೇ ಇದೂ ಹೊಂದಿರುತ್ತದೆ
- ಕಡಲ ದ್ರಾಕ್ಷಿ (ಕೊಕ್ಕೋಲೋಬಾ ಯೂವಿಫೆರಾ ; ಪಾಲಿಗೊನಾಸಿಯೇ) - ಈ ಹಣ್ಣು ತಿರುಳಿನಿಂದ ಕೂಡಿದ ಪುಷ್ಪಪಾತ್ರದಿಂದ ಸುತ್ತುವರೆಯಲ್ಪಟ್ಟ ಒಣ ಬೀಜಕೋಶವಾಗಿರುತ್ತದೆ
- ವಿಂಟರ್‌ಗ್ರೀನ್/ಚಳಿಗಾಲದ ಹಸಿರು ಗಿಡ (ಗೌಲ್‌ಥೀರಿಯಾ ಪ್ರೊಕಂಬೆನ್ಸ್ ) - ಈ ಹಣ್ಣು ತಿರುಳಿನಿಂದ ಕೂಡಿದ ಪುಷ್ಪಪಾತ್ರದಿಂದ ಸುತ್ತುವರೆಯಲ್ಪಟ್ಟ ಒಣ ಬೀಜಕೋಶವಾಗಿರುತ್ತದೆ
ಬಣ್ಣಗಳು ಹಾಗೂ ಸಂಭಾವ್ಯ ಆರೋಗ್ಯದ ಅನುಕೂಲಗಳು
ಬದಲಾಯಿಸಿತಮ್ಮ ಹಿನ್ನೆಲೆಯಲ್ಲಿನ ಪರಿಸರಕ್ಕೆ ಬಣ್ಣಗಳಿಗೆ ಸಂಬಂಧಪಟ್ಟಂತೆ ಛಾಯಾಭೇದವನ್ನು ಹೊಂದಿರುವುದರಿಂದ, ಬೆರ್ರಿ ಹಣ್ಣುಗಳು ತಮ್ಮನ್ನು ಸೇವಿಸುವ ಪ್ರಾಣಿಗಳಿಗೆ ಹೆಚ್ಚು ಆಕರ್ಷಕವಾಗಿ ಕಂಡು ತನ್ಮೂಲಕ ಸಸ್ಯಗಳ ಬೀಜಗಳು ಪ್ರಸಾರವಾಗುವುದಕ್ಕೆ ಅನುಕೂಲವಾಗುತ್ತದೆ.
ಬೆರ್ರಿ ಹಣ್ಣುಗಳ ಬಣ್ಣಗಳು ಸಸ್ಯಗಳಲ್ಲಿನ ನೈಸರ್ಗಿಕ ವರ್ಣದ್ರವ್ಯಗಳಿಂದ ಉಂಟಾಗಿದ್ದು, ಅವುಗಳಲ್ಲಿ ಹಲವು ಬೆರ್ರಿ ಹಣ್ಣುಗಳ ತೊಗಟೆ ಹಾಗೂ ಬೀಜಗಳಲ್ಲಿ ಪ್ರಧಾನವಾಗಿ ಕೇಂದ್ರೀಕರಿಸಿದ ಫ್ಲಾವೊನಾಯ್ಡ್‌ಗಳು, ಆಂಥೋಸ್ಯಾನಿನ್‌ಗಳು ಮತ್ತು ಟ್ಯಾನಿನ್‌ಗಳಂತಹಾ ಪಾಲಿಫಿನಾಲ್‌ಗಳಾಗಿರುತ್ತವೆ. ಬೆರ್ರಿ ಹಣ್ಣುಗಳ ವರ್ಣದ್ರವ್ಯಗಳು ಸಾಧಾರಣವಾಗಿ ಅಜೈವಿಕ ಪರಿಸ್ಥಿತಿಯಲ್ಲಿ ಆಕ್ಸಿಡೀಕರಣಶಮನಕಾರಿಗಳಾಗಿದ್ದು ಆದ್ದರಿಂದ ಸಸ್ಯ ಆಹಾರಗಳಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದ ಆಮ್ಲಜನಕ ಮೂಲದ ಹೀರುವಿಕೆ ಸಾಮರ್ಥ್ಯ ("ORAC")ವನ್ನು ಹೊಂದಿರುತ್ತವೆ.[೩] ಉತ್ತಮ ಪೋಷಕಾಂಶಗಳನ್ನು ಹೊಂದಿರುವುದು ಮಾತ್ರವಲ್ಲದೇ ಪ್ರಯೋಗಾಲಯದಲ್ಲಿ ರೂಪಿಸಲಾದ ORAC "ಸೂಪರ್‌ಫ್ರೂಟ್ಸ್ " ಎಂದು ಕರೆಯಲ್ಪಡುವ ಕ್ರಿಯಾತ್ಮಕ ಆಹಾರಗಳ ನವೀನ ವರ್ಗದೊಳಗೆಯೇ ಹಲವು ಬೆರ್ರಿ ಹಣ್ಣುಗಳ ನಡುವಿನ ಭಿನ್ನತೆಯನ್ನು ಪ್ರತ್ಯೇಕಿಸುತ್ತದೆ. ಆದಾಗ್ಯೂ, ಇದುವರೆಗೆ ಶರೀರವೈಜ್ಞಾನಿಕವಾಗಿ ಬೆರ್ರಿ ಪಾಲಿಫಿನಾಲ್‌ಗಳು ವಾಸ್ತವವಾಗಿ ಮಾನವ ದೇಹದೊಳಗೆ ಆಕ್ಸಿಡೀಕರಣಶಮನಕಾರಿಗಳಾಗಿರಬಲ್ಲವು ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲವಾದುದರಿಂದ ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್‌ಗಳಲ್ಲಿ ಉತ್ಪನ್ನಗಳ ಮೇಲಿರುವ ಉತ್ಪನ್ನ ಚೀಟಿಗಳು ಪಾಲಿಫಿನಾಲ್‌ಗಳು ಆಕ್ಸಿಡೀಕರಣಶಮನಕಾರಿಗಳಾಗಿರುತ್ತವೆ ಎಂಬ ಹೇಳಿಕೆಯು ತಪ್ಪೆಂದು ಪರಿಗಣಿತವಾಗುತ್ತದೆ.[೪][೫]
ಇವನ್ನೂ ಗಮನಿಸಿ
ಬದಲಾಯಿಸಿ- ಪಾಕಯೋಗ್ಯ ಹಣ್ಣುಗಳ ಪಟ್ಟಿ
- ಸೇವಿಸಲನರ್ಹವಾದ ಹಣ್ಣುಗಳ ಪಟ್ಟಿ
- ಆನುಷಂಗಿಕ ಹಣ್ಣು
- ಸಮುಚ್ಛಯ ಹಣ್ಣು
- ಹಲವು ಹಣ್ಣು
- ಗೊರಟೆಹಣ್ಣು/ಅಷ್ಟಿ ಫಲ
- ವೀಟ್‌ಬೆರ್ರಿ ಹಣ್ಣು
ಟಿಪ್ಪಣಿಗಳು
ಬದಲಾಯಿಸಿ- ↑ ಎ ಸಿಸ್ಟಮ್ಯಾಟಿಕ್ ಟ್ರೀಟ್‌ಮೆಂಟ್ ಆಫ್ ಫ್ರೂಟ್ ಟೈಪ್ಸ್
- ↑ ಅಮೇರಿಕನ್ ಪಾರಂಪರಿಕ ವೈಜ್ಞಾನಿಕ ಪದಕೋಶ, Google Books
- ↑ Wu X, Beecher GR, Holden JM, Haytowitz DB, Gebhardt SE, Prior RL (2004). "Lipophilic and hydrophilic antioxidant capacities of common foods in the United States". J. Agric. Food Chem. 52 (12): 4026–37. doi:10.1021/jf049696w. PMID 15186133.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ ಗೈಡೆನ್ಸ್ ಫಾರ್ ಇಂಡಸ್ಟ್ರಿ , ಫುಡ್ ಲೇಬಲಿಂಗ್ ; ನ್ಯೂಟ್ರಿಯೆಂಟ್ ಕಂಟೆಂಟ್ ಕ್ಲ್ಯೇಮ್ಸ್; ಡೆಫನೆಷನ್ ಫಾರ್ "ಹೈ ಪೊಟೆನ್ಸಿ" ಅಂಡ್ ಡೆಫನಿಷನ್ ಫಾರ್ "ಆಂಟಿಆಕ್ಸಿಡೆಂಟ್" ಫಾರ್ ಯೂಸ್ ಇನ್ ನ್ಯೂಟ್ರಿಯೆಂಟ್ ಕಂಟೆಂಟ್ ಕ್ಲೇಮ್ಸ್ ಫಾರ್ ಡಯೆಟರಿ ಸಪ್ಲಿಮೆಂಟ್ಸ್ ಅಂಡ್ ಕನ್‌ವೆನ್ಷನಲ್ ಫುಡ್ಸ್ Archived 2017-03-02 ವೇಬ್ಯಾಕ್ ಮೆಷಿನ್ ನಲ್ಲಿ. U.S. ಡಿಪಾರ್ಟ್‌ಮೆಂಟ್ ಆಫ್ ಹೆಲ್ತ್ ಅಂಡ್ ಹ್ಯೂಮನ್ ಸರ್ವೀಸಸ್ , ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್, ಸೆಂಟರ್ ಫಾರ್ ಫುಡ್ ಸೇಫ್ಟಿ ಅಂಡ್ ಅಪ್ಲೈಡ್ ನ್ಯೂಟ್ರಿಷನ್‌ನಲ್ಲಿನ ಬಳಕೆಗಾಗಿ, ಜೂನ್ 2008
- ↑ EFSA Panel on Dietetic Products, Nutrition and Allergies (NDA)2, 3 (2010). "Scientific Opinion on the substantiation of health claims related to various food(s)/food constituent(s) and protection of cells from premature aging, antioxidant activity, antioxidant content and antioxidant properties, and protection of DNA, proteins and lipids from oxidative damage pursuant to Article 13(1) of Regulation (EC) No 1924/20061" (PDF). EFSA Journal. 8 (2). Parma, Italy: European Food Safety Authority: 1489.
{{cite journal}}
: CS1 maint: multiple names: authors list (link) CS1 maint: numeric names: authors list (link)
ಬಾಹ್ಯ ಕೊಂಡಿಗಳು
ಬದಲಾಯಿಸಿ- ಸಸ್ಯಗಳು ಹಾಗೂ ಉದ್ಯಾನಗಳ ಸಂರಕ್ಷಣೆಗಾಗಿನ ರಾಷ್ಟ್ರೀಯ ಸಮಿತಿ Archived 2009-07-04 ವೇಬ್ಯಾಕ್ ಮೆಷಿನ್ ನಲ್ಲಿ. – ಬೆರ್ರಿ ಹಣ್ಣುಗಳ ವಿವರಣೆ
- Encarta.msn.com( Archived 2009-10-28 ವೇಬ್ಯಾಕ್ ಮೆಷಿನ್ ನಲ್ಲಿ. 2009-10-31) – ವಾಸ್ತವವಾದ ಬೆರ್ರಿ ಹಣ್ಣುಗಳು, ಪೆಪೋಗಳು ಮತ್ತು ಹೆಸ್ಪೆರಿಡಿಯಾಗಳ ನಡುವೆ ವ್ಯತ್ಯಾಸ ಗ್ರಹಿಕೆಗಳು
- ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಬೆರ್ರಿ ಕ್ರಾಪ್ಸ್ ಇನಿಷಿಯೇಟಿವ್
- ಬೆರ್ರಿ ಹೆಲ್ತ್ ಬೆನಿಫಿಟ್ಸ್ ನೆಟ್ವರ್ಕ್ Archived 2013-07-25 ವೇಬ್ಯಾಕ್ ಮೆಷಿನ್ ನಲ್ಲಿ. – ಬೆರ್ರಿ ಹಣ್ಣುಗಳ ಆರೋಗ್ಯಕ್ಕೆ ಸಂಬಂಧಿಸಿದ ಗುಣಲಕ್ಷಣಗಳ ಮೇಲೆ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳು