ಬೆಂಡೆಮರ
Kydia calycina | |
---|---|
Scientific classification | |
Unrecognized taxon (fix): | Kydia |
ಪ್ರಜಾತಿ: | K. calycina
|
Binomial name | |
Kydia calycina | |
Synonyms[೨] | |
List
|
ಬೆಂಡೆಮರ ಅಥವಾ ಕಿಡಿಯಾ ಕ್ಯಾಲಿಸಿನಾ ಎಂಬುದು ಭಾರತೀಯ ಉಪಖಂಡ, ದಕ್ಷಿಣ ಚೀನಾ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುವ ಕಿಡಿಯಾ ಕುಲದ ಹೂಬಿಡುವ ಸಸ್ಯವಾಗಿದೆ.[೨] ವೇಗವಾಗಿ ಬೆಳೆಯುವ, ಮಧ್ಯಮ ಗಾತ್ರದ ಮರ. ಇದನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತದೆ. ಇದು ಅಗ್ಗದ ಮರ ಮತ್ತು ಫೈಬರ್ಗಾಗಿ ಬೆಳೆಸಲಾಗುತ್ತದೆ.[೩] ಭಾರತದಲ್ಲಿ ಪಶ್ಚಿಮ ಘಟ್ಟ, ಪೂರ್ವ ಘಟ್ಟ, ಎಲೆ ಉದುರಿಸುವ ಶುಷ್ಕ ಕಾಡುಗಳಲ್ಲಿ ಕಂಡು ಬರುತ್ತದೆ.
ಹೆಸರುಗಳು
ಬದಲಾಯಿಸಿಭಾರತದ ವಿವಿಧ ಪ್ರದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ಈ ಮರದ ಹೆಸರುಗಳು ಇಂತಿವೆ.
- ಅಸ್ಸಾಮಿ-ಬಾನ್-ಕೋಪಾಹಿ,ಕುಕುಹಾ,ಪಿಚೋಲಾ
- ಬೆಂಗಾಲಿ-ಪೋಲಾ ಪೋಲಾ
- ಚೈನೀಸ್-翅果麻 ಚಿ ಗುವೋ ಮಾ
- ಆಂಗ್ಲ-ಪುಲಾ,ರಾಕ್ಸ್ಬರ್ಗ್ನ ಕಿಡಿಯಾ
- ಗುಜರಾತಿ-ದೊಡ್ಡ ಹಿರ್ವಾನಿ, ಮೋತಿ ಹಿರ್ವಾನಿ
- ಹಿಂದಿ-ಪುಲಾ,ಪತ್ತ,ಪುಲಿಯಾ
- ಕನ್ನಡ-ಬೆಂದೆ, ಬೆಂಡೆಮರ
- ಕೊಂಕಣಿ -ವಾರಂಗ್
- ಮಲಯಾಳಂ-ವೆಲ್ಲಚಡಚಿ,ವೆಲುಕ್ಕು,ವೆಲುಕ್ಕುವೆಂಟಾ, ಕಟ್ಟಾವನಕ್ಕ್, ವೆಲಲತಚ್ಚಿ.
- ಮಣಿಪುರಿ-ಖಾಬಿ
- ಮರಾಠಿ -ರಣ್ ಭೆಂಡಿ, ರಣಭೆಂಡಿ,ವಾರಂಗ್
- ಒರಿಯಾ-ಬ್ಯಾಂಕೋಪಾಸಿಯಾ
- ಇತರೆ-ಬೆಂಡೈ,ಭೋತಿ,ಇಲ್ಯಾ,ಕುಬಿಂದೆ,ಕಿಡಿಯಾ,ವೆಲ್ಲಚಡಚಿ,ವೆಲ್ಲುಕು ವೆಂಟಾ,ಪುಲಿಯಾ
- ತಮಿಳು-ವಟ್ಟಕಣ್ಣು,ಪುಲಾ
- ತೆಲುಗು-ಪೊಟಾರಿ
- ಉರ್ದು-ಕಪಾಸಿಯಾ
ಸಸ್ಯ ವಿವರಣೆ
ಬದಲಾಯಿಸಿಸುಮಾರು ೧೫ ಮೀಟರ್ ಎತ್ತರಕ್ಕೆ ಬೆಳೆಯುವ ಮರ. ತೊಗಟೆ ೫-೬ ಸೆ.ಮೀ ದಪ್ಪ ಇರುತ್ತದೆ.ಬಣ್ಣ ಬೂದು ಕಂದು.ಕಿರುಕೊಂಬೆಗಳು ದುಂಡಾಗಿದ್ದು, ನಕ್ಷತ್ರಾಕಾರದ ಮೃದುತುಪ್ಪಳದಿಂದ ಕೂಡಿರುತ್ತವೆ.ಎಲೆಗಳು ಸರಳವಾಗಿದ್ದು, ಪರ್ಯಾಯವಾಗಿರುತ್ತವೆ.ಅಕ್ಟೋಬರ್ -ಡಿಸೆಂಬರ್ ತಿಂಗಳಲ್ಲಿ ಹೂವು ಬಿಡುತ್ತದೆ.
ಉಪಯೋಗಗಳು
ಬದಲಾಯಿಸಿಮರ ಉರುವಲಾಗಿ ಉಪಯೋಗವಾಗುತ್ತದೆ. ಎಲೆಗಳು ಆನೆಗಳಿಗೆ, ಜಿಂಕೆ ಮತ್ತು ಕಾಡುಕೋಣಗಳಿಗೆ ಉತ್ತಮ ಮೇವು.
ಉಲ್ಲೇಖಗಳು
ಬದಲಾಯಿಸಿ- ↑ Pl. Coromandel 3: 11 (1811)
- ↑ ೨.೦ ೨.೧ "Kydia calycina Roxb". Plants of the World Online. Board of Trustees of the Royal Botanic Gardens, Kew. 2017. Retrieved 4 September 2020.
- ↑ Swaminathan, M. S.; Kochhar, S. L. (23 May 2019). Major Flowering Trees of Tropical Gardens. Cambridge University Press. p. 45-46. ISBN 9781108640633.