Abelmoschus esculentus
Okra plant, with mature, and developing fruits in Hong Kong
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
A. esculentus
Binomial name
Abelmoschus esculentus
Map showing worldwide okra production
Worldwide okra production
Synonyms[]
List
    • Abelmoschus bammia Webb
    • Abelmoschus longifolius (Willd.) Kostel.
    • Abelmoschus officinalis (DC.) Endl.
    • Abelmoschus praecox Sickenb.
    • Abelmoschus tuberculatus Pal & Singh
    • Hibiscus esculentus L.
    • Hibiscus hispidissimus A.Chev. nom. illeg.
    • Hibiscus longifolius Willd.
    • Hibiscus praecox Forssk.

ಬೆಂಡೆ (ಅಬೆಲ್‍ಮಾಸ್ಕಸ್ ಎಸ್ಕ್ಯುಲೆಂಟಸ್ ಮಾಂಕ್) ಮ್ಯಾಲೊ ಕುಟುಂಬದಲ್ಲಿನ ಒಂದು ಹೂಬಿಡುವ ಸಸ್ಯ. ಅದನ್ನು ಅದರ ತಿನ್ನಬಹುದಾದ ಹಸಿರು ಬೀಜಕೋಶಗಳಿಗಾಗಿ ಮಹತ್ವ ಕೊಡಲಾಗುತ್ತದೆ. ಬೆಂಡೆಯ ಭೌಗೋಳಿಕ ಮೂಲ ವಿವಾದಾತ್ಮಕವಾಗಿದೆ, ದಕ್ಷಿಣ ಏಷ್ಯಾ, ಈಥಿಯೋಪಿಯಾ ಮತ್ತು ಪಶ್ಚಿಮ ಆಫ಼್ರಿಕಾ ಮೂಲಗಳದ್ದೆನ್ನುವ ಬೆಂಬಲಿಗರಿದ್ದಾರೆ.

ಬೆಂಡೆಯು ಮಾಲ್ವೇಸೀ ಕುಟುಂಬಕ್ಕೆ ಸೇರಿದ ದ್ವಿದಳ ಸಸ್ಯ. ಇದರ ವೈಜ್ಞಾನಿಕ ಹೆಸರು ಹೈಬಿಸ್ಕಸ್ ಎಸ್ಕ್ಯುಲೆಂಟಸ್ ಅಥವಾ ಅಬಲ್‍ಮಾಸ್ಕಸ್ ಎಸ್ಕ್ಯುಲೆಂಟಸ್. ಇದನ್ನು ಹಿಂದಿಯಲ್ಲಿ ಬಿಂಡಿ. ಇಂಗ್ಲಿಷಿನಲ್ಲಿ ಲೇಡಿಸ್ ಫಿಂಗರ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಗೂಂಬೊ ಎಂದು ಕರೆಯುತ್ತಾರೆ. ಬೆಂಡೆಯ ಉಗಮಸ್ಥಾನ ಆಫ್ರಿಕಾ ಖಂಡದ ಉಷ್ಣವಲಯವೆಂದು ಸಸ್ಯ ವಿಜ್ಞಾನಿಗಳ ಅಭಿಪ್ರಾಯ. 1216ಕ್ಕಿಂತ ಪೂರ್ವದಲ್ಲಿ ಯೂರೊಪಿಯನ್ನರು ಇದನ್ನು ಬೆಳೆಸುತ್ತಿದ್ದರು. ಅಲ್ಲಂದೀಚೆಗೆ ಇದನ್ನು ಉಷ್ಣವಲಯ ಮತ್ತು ಸಮಶೀತೋಷ್ಣವಲಯಗಳೆರಡರಲ್ಲೂ ಬೆಳೆಸಲಾಗುತ್ತದೆ. ಇದು ಸುಮಾರು 2 ಮೀ. ಎತ್ತರದವರೆಗೆ ಬೆಳೆಯುತ್ತದೆ. ಸಾಮಾನ್ಯವಾಗಿ ಕವಲೊಡೆಯದಿರದ ಉದ್ದನೆಯ ನೀಳವಾದ ಕಾಂಡ ಮತ್ತು ತಾಯಿ ಬೇರು ಸಮೂಹ ಇರುವುವು. ಕಾಂಡದ ಮೇಲೆ ಸಣ್ಣ ರೋಮಗಳಿವೆ. ಕಾಂಡದಲ್ಲಿ ಸರಳವಾದ ಮತ್ತು ಅಂಗೈಯಾಕೃತಿ ಹೋಲುವ ಅನೇಕ ಎಲೆಗಳಿವೆ. ಎಲೆಯ ಅಲಗು ಭಾಗದಲ್ಲಿ ರೆಟಿಕ್ಯುಲೇಟ್ ನಾಳವಿನ್ಯಾಸ ಇದೆ.

ಸಸ್ಯ ಚೆನ್ನಾಗಿ ಬೆಳೆದ ಬಳಿಕ ಎಲೆಯ ಕಂಕುಳಲ್ಲಿ ಅಥವಾ ಕಾಂಡದ ತುದಿಯಲ್ಲಿ ಬಿಡಿ ಬಿಡಿಯಾಗಿ ಹೂ ಬಿಡುತ್ತದೆ. ಈ ಮಾದರಿಯ ಹೂವಿಗೆ ಸಾಲಿಟರಿ ಸೈರ್ಮ ಎಂದು ಹೆಸರು. ಪ್ರತಿಯೊಂದು ಹೂವಿನಲ್ಲೂ ಪುಷ್ಪ ಪಾತ್ರೆ, ಪುಷ್ಪದಳ ಮಂಡಲ, ಪುಂಕೇಸರ ಮಂಡಲ ಮತ್ತು ಸ್ತ್ರೀ ಭಾಗ ಎಂಬ ನಾಲ್ಕು ಮುಖ್ಯ ಭಾಗ ಉಂಟು. ಎಂದೇ ಇದು ಪೂರ್ಣ ಪುಷ್ಪ. ಇದುದ್ವಿಲಿಂಗ ಪುಷ್ಪ. ಇದರಲ್ಲಿ ಆಕ್ಟಿನೋಮಾರ್ಫಿಕ್ ಸಿಮೆಟ್ರಿ ಇದೆ. ಪಾತ್ರೆಯಲ್ಲಿ ಎಪಿಕೇಲಿಕ್ಸ್ ಉಂಟು. ಪಾತ್ರೆ ಹೂವಿನ ಹೊರವಲಯ. ಇದು ಒಟ್ಟಿಗೆ ಕೂಡಿಕೊಂಡಿರುವ ಐದು ಪುಷ್ಪ ಪತ್ರಗಳಿಂದಾಗಿದೆ. ದಳಗಳು ಕೆಳಭಾಗದಲ್ಲಿ ಕೂಡಿಕೊಂಡೊ ಮೇಲ್ಭಾಗದಲ್ಲಿ ಬಿಡಿಬಿಡಿಯಾಗಿಯೂ ಇವೆ. ಇವುಗಳಿಗೆ ಆಕರ್ಷಣೀಯ ಬಣ್ಣ ಇದೆ. ಪುಷ್ಪ ಪತ್ರಗಳು ಮತ್ತು ಪುಷ್ಪದಳಗಳು ಕ್ರಮವಾಗಿ ವಾಲ್ವೇಟ್ ಮತ್ತು ಟ್ವಿಸ್ಟಡ್ ಈಸ್ಟೈವೇಷನ್ನನ್ನು ಪ್ರದರ್ಶಿಸಿತ್ತವೆ.

ಮೂರನೆಯ ವಲಯವಾದ ಪುಂಕೇಸರ ಮಂಡಲ ಹೂವಿನ ಗಂಡು ಭಾಗ. ಇದು ಅನೇಕ ಪುಂಕೇಸರ ಗಳಿಂದಾಗಿದೆ. ಪ್ರತಿಯೊಂದು ಪುಂಕೇಸರದಲ್ಲಿಯೂ ಪರಾಗಕೋಶ ಮತ್ತು ಪುಂಕೇಸರದಂಡವಿದ್ದು ಎಲ್ಲ ದಂಡಗಳೂ ಒಟ್ಟಿಗೆ ಕೂಡಿಕೊಂಡು ಪುಂಕೇಸರ ನಳಿಕೆಯಾಗಿವೆ. ಇದಕ್ಕೆ ಮಾನಡಲ್ಫಸ್ ಸ್ಥಿತಿ ಎಂದು ಹೆಸರು. ಪರಾಗಕೋಶಗಳಿಗೆ ಹುರುಳಿ ಬೀಜದ ಆಕಾರವಿದೆ. ಪ್ರತಿಯೊಂದೂ ಬಿಡಿ ಬಿಡಿಯಾಗಿದ್ದು ಅನೇಕ ಪರಾಗರೇಣುಗಳನ್ನು ಉತ್ಪತ್ತಿ ಮಾಡುತ್ತವೆ.

ಸ್ತ್ರೀ ಭಾಗ ಪುಷ್ಪದ ಮಧ್ಯಭಾಗದಲ್ಲಿದೆ. ಇದರಲ್ಲಿ ಅಂಡಾಶಯ, ಶಲಾಕೆ ಮತ್ತು ಶಲಾಕಾಗ್ರ ಎಂಬ ಮೂರು ಮುಖ್ಯ ಭಾಗ ಉಂಟು. 5 ರಿಂದ 10 ಕಾರ್ಪೆಲುಗಳಿಂದಾಗಿರುವುದು. ಎಲ್ಲ ಕಾರ್ಪೆಲುಗಳೂ ಕೂಡಿ ಕೊಂಡಿರುವುವು ಈ ಸ್ಥಿತಿಗೆ ಸಿನ್‍ಕಾರ್ಪಸ್ ಎಂದು ಹೆಸರು. ಹೂವಿನಲ್ಲಿ ಅಂಡಾಶಯ ಉಚ್ಛ್ರಾಯ ಸ್ಥಿತಿಯಲ್ಲಿವೆ.

ಬೆಂಡೆ ಸಸ್ಯದಲ್ಲಿ ಕೀಟಗಳಿಂದ ಪರಕೀಯ ಪರಾಗಸ್ಪರ್ಶ ನಡೆಯುತ್ತದೆ. ಈ ವಿಧಾನಕ್ಕೆ ಎಂಟಮೋಫಿಲಿ ಎಂದು ಹೆಸರು. ಬೆಂಡೆ ಸಸ್ಯ ದ್ವಿಲಿಂಗ ಪುಷ್ಪಗಳನ್ನು ಬಿಟ್ಟರೂ ಇದರಲ್ಲಿ ಸ್ವಕೀಯ ಪರಾಗಸ್ಪರ್ಶ ನಡೆಯುವುದಿಲ್ಲ. ಕಾರಣ ಹೂವಿನ ಗಂಡು ಮತ್ತು ಹೆಣ್ಣು ಭಾಗಗಳು ಬೇರೆ ಬೇರೆ ಕಾಲದಲ್ಲಿ ಬಲಿಯುತ್ತದೆ. ಇಲ್ಲಿ ಮೊದಲು ಪುಂಕೇಸರಗಳು ಬಲಿಯುವುದರಿಂದ ಈ ಸ್ಥಿತಿಗೆ ಪ್ರಿಟ್ಯಾಂಡ್ರಿ ಎಂದು ಹೆಸರು. ಪರಾಗ ಸ್ಪರ್ಶ ಕ್ರಿಯೆ ಆದಮೇಲೆ ಪರಾಗರೇಣುಗಳು ಬೆಳವಣಿಗೆ ಹೊಂದಿ ಒಂದೊಂದು ಎರಡೆರಡು ಗಂಡು ಬೀಜಾಣುಗಳನ್ನು ಉತ್ಪತ್ತಿ ಮಾಡುತ್ತವೆ. ಇವು ಗರ್ಭಧಾರಣೆಯಲ್ಲಿ ಭಾಗವಹಿಸುತ್ತವೆ. ಈ ಕ್ರಿಯೆ ಓವ್ಯೂಲಿನಲ್ಲಿ ನಡೆಯುತ್ತದೆ. ಗರ್ಭಧರಿಸಿದ ಓವ್ಯೂಲಿಗೆ ಬೀಜ ಎಂದು ಹೆಸರು. ಬೀಜಕ್ಕೆ ಕವಚ ಮತ್ತು ಭ್ರೂಣ ಇವೆ. ಸಾಮಾನ್ಯವಾಗಿ ಬೀಜಗಳಲ್ಲಿ ಭ್ರೂಣಾಹಾರ ಇರುವುದಿಲ್ಲ. ಬಲಿತ ಅಂಡಾಶಯಕ್ಕೆ ಹಣ್ಣು ಎಂದು ಹೆಸರು.

ಬೆಂಡೆಕಾಯಿ (ಹಣ್ಣು) ಸರಳ ಮತ್ತು ಶುಷ್ಕ ಫಲ. ಇದಕ್ಕೆ ಕ್ಯಾಪುಲಾರ್ ಫ್ರೊಟ್ ಎಂಬುದು ಸರಿಯಾದ ಹೆಸರು. ಎಳೆಯ ಬೆಂಡೆ ಕಾಯಿಯಲ್ಲಿ ಲೋಳೆ ವಸ್ತು ಇರುವುದು. ಕಾಯಿಗಳನ್ನು ಮೇಲೋಗರ ಮಾಡಲು ಹಸಿರು ತರಕಾರಿಯಾಗಿ ಉಪಯೋಗಿಸುತ್ತಾರೆ. ಬಲಿತ ಕಾಂಡ ಮತ್ತು ಹಣ್ಣುಗಳಿಂದ ನಾರು ತೆಗೆಯುತ್ತಾರೆ. ಆದರೆ ಗಣನೀಯ ಪ್ರಮಾಣದಷ್ಟು ನಾರು ಪಡೆಯಲು ಸಾಧ್ಯವಾಗದು. ಅಲ್ಪ ಪ್ರಮಾಣದಲ್ಲಿ ದೊರೆಯುವ ಈ ನಾರನ್ನು ಕಾಗದ ಮತ್ತು ಬಟ್ಟೆ ತಯಾರಿಕೆಯಲ್ಲಿ ಬಳಸುತ್ತಾರೆ. ಬೆಂಡೆಗಿಡ ಹತ್ತಿ ಬೆಳೆಯುವ ಹವೆ ಮತ್ತು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದರ ಬೆಳೆವಣಿಗೆಗೆ ಕಪ್ಪು ಮಣ್ಣು ಹಾಗೂ ಅಲ್ಯೂಮಿನಿಯಮ್ ಮಣ್ಣು ಪ್ರಶಸ್ತವಾದುದು. ಇಂಥ ಮಣ್ಣು ಇದ್ದು ವಾರ್ಷಿಕವಾಗಿ 75 ರಿಂದ 250 ಸೆಂ.ಮೀ. ಮಳೆ ಮತ್ತು 21 ಯಿಂದ 45 ಉಷ್ಣತೆ ಇರುವ ಪ್ರದೇಶಗಳಲ್ಲಿ ಬೆಂಡೆ ಹುಲುಸಾಗಿ ಬೆಳೆದು ಹೆಚ್ಚಿನ ಇಳುವರಿ ಕೊಡುತ್ತದೆ.

ಆರೋಗ್ಯ ಉಪಯೋಗಗಳು

ಬದಲಾಯಿಸಿ

ಬೆಂಡೆಕಾಯಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಬೆಂಡೆಕಾಯಿ ನೀರು ಕೂಡ ಅಷ್ಟೇ ಒಳ್ಳೆಯದು. ಬೆಂಡೆಕಾಯಿ ಅನೇಕ ಪೌಷ್ಟಿಕಾಂಶದ ಮೌಲ್ಯಗಳಿಂದ ಸಮೃದ್ಧವಾಗಿರುವ ತರಕಾರಿಯಾಗಿದೆ. ಬೆಂಡೆಕಾಯಿಯಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ, ರಂಜಕ, ವಿಟಮಿನ್ ಎ, ಬಿ, ಸಿ, ಥಯಾಮಿನ್ ಮತ್ತು ರೈಬೋಫ್ಲಾವಿನ್‌ನಂತಹ ಅನೇಕ ಪೋಷಕಾಂಶಗಳಿವೆ.

ಮಧುಮೇಹಿಗಳಿಗೆ ಪ್ರಯೋಜನಕಾರಿ

ಬದಲಾಯಿಸಿ

ಬೆಂಡೆಕಾಯಿಯ ಸೇವನೆಯು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಮಧುಮೇಹಿಗಳು ಬೆಂಡೆಕಾಯಿ ನೀರನ್ನು ಪ್ರತಿದಿನ ಸೇವಿಸಿದರೆ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಕಡಿಮೆಯಾಗುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಬದಲಾಯಿಸಿ

ಬೆಂಡೆಕಾಯಿ ನೀರು ಜೀರ್ಣಕಾರಿ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿದೆ. ಬೆಂಡೆಕಾಯಿ ನೀರಿನಲ್ಲಿ ಫೈಬರ್ ಸಮೃದ್ಧವಾಗಿರುವುದರಿಂದ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ, ಮಲಬದ್ಧತೆ, ಆಮ್ಲೀಯತೆಯನ್ನು ನಿವಾರಿಸುತ್ತದೆ ಮತ್ತು ಹೊಟ್ಟೆಯನ್ನು ಶುದ್ಧಗೊಳಿಸುತ್ತದೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಬದಲಾಯಿಸಿ

ಬೆಂಡೆಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬದಲಾಗುತ್ತಿರುವ ಋತುವಿನಲ್ಲಿ ಶೀತ, ಕೆಮ್ಮು, ಜ್ವರದ ಸಮಸ್ಯೆ ಇರುವವರು ವಾರಕ್ಕೆ 1-2 ಬಾರಿ ಬೆಂಡೆಕಾಯಿ ನೀರನ್ನು ಕುಡಿಯುವಂತೆ ತಜ್ಞರು ಸಲಹೆ ನೀಡುತ್ತಾರೆ.

ಕೊಲೆಸ್ಟ್ರಾಲ್ ನಿಯಂತ್ರಿಸುತ್ತೆ

ಬದಲಾಯಿಸಿ

ಬೆಂಡೆಕಾಯಿ ನೀರನ್ನು ಕುಡಿಯುವುದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು. ಬೆಂಡೆಕಾಯಿಯಲ್ಲಿ ಹೆಚ್ಚಿನ ಫೈಬರ್ ಅಂಶ ಇರುವ ಕಾರಣ, ಹೆಚ್ಚಿದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ.

ಹೃದಯದ ಆರೋಗ್ಯ ಸುಧಾರಿಸುತ್ತೆ

ಬದಲಾಯಿಸಿ

ಬೆಂಡೆಕಾಯಿ ನೀರು ಹೃದಯವನ್ನು ಆರೋಗ್ಯವಾಗಿಡಲು ಕೆಲಸ ಮಾಡುತ್ತದೆ. ಬೆಂಡೆಕಾಯಿಯಲ್ಲಿ ಕಂಡುಬರುವ ಕರಗುವ ಫೈಬರ್ ರಕ್ತದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಹಿಡಿದು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹಾಗಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಂಡೆಕಾಯಿ ನೀರನ್ನು ಕುಡಿಯಿರಿ.

ಕಣ್ಣುಗಳಿಗೆ ಪ್ರಯೋಜನಕಾರಿ

ಬದಲಾಯಿಸಿ

ಬೆಂಡೆಕಾಯಿಯಲ್ಲಿ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಇರುತ್ತದೆ. ಇದರಿಂದ ಕಣ್ಣುಗಳ ಸಾಮರ್ಥ್ಯವೂ ಹೆಚ್ಚುತ್ತದೆ. ಉತ್ತಮ ಕಣ್ಣುಗಳಿಗೆ ಬೆಂಡೆಕಾಯಿ ನೀರನ್ನು ನಿಯಮಿತವಾಗಿ ಸೇವಿಸಲು ಸಲಹೆ ನೀಡಲಾಗುತ್ತದೆ.[]

ಚರ್ಮಕ್ಕೆ ಪ್ರಯೋಜನಗಳು

ಬದಲಾಯಿಸಿ

ಬೆಂಡೆಕಾಯಿ ನೀರನ್ನು ಸೇವಿಸುವುದರಿಂದ ಚರ್ಮಕ್ಕೂ ಪ್ರಯೋಜನಕಾರಿ. ಬೆಂಡೆಕಾಯಿ ನೀರು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಬೆಂಡೆಕಾಯಿ ನೀರನ್ನು ಕುಡಿಯುವುದರಿಂದ ಚರ್ಮವು ಹೊಳೆಯುತ್ತದೆ.[]

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಚಿತ್ರಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "The Plant List: A Working List of All Plant Species". Archived from the original on 7 ಫೆಬ್ರವರಿ 2019. Retrieved 3 October 2014.
  2. "ಬೆಂಡೆ ಕತ್ತರಿಸಿ ನೆನೆಸಿಟ್ಟ ನೀರು ಕುಡಿದರೆ, ಬರೋಬ್ಬರಿ 10 ಆರೋಗ್ಯ ಲಾಭಗಳಿವೆ". Vijay Karnataka. Retrieved 30 August 2024.
  3. "Health Care: ಖಾಲಿ ಹೊಟ್ಟೆಯಲ್ಲಿ ಬೆಂಡೆ ಕತ್ತರಿಸಿ ನೆನೆಸಿಟ್ಟ ನೀರು ಕುಡಿದ್ರೆ ಈ ಎಲ್ಲಾ ರೋಗಗಳು ಮಾಯವಾಗುತ್ತೆ!". News18 ಕನ್ನಡ. 24 June 2023. Retrieved 30 August 2024.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಬೆಂಡೆ&oldid=1243128" ಇಂದ ಪಡೆಯಲ್ಪಟ್ಟಿದೆ