ಬುಟ್ಟಿಯು (ಗೂಡೆ, ಕುಕ್ಕೆ) ಸಾಂಪ್ರದಾಯಿಕವಾಗಿ ಬಿರುಸಾದ ನಾರುಗಳಿಂದ ನಿರ್ಮಿಸಲಾದ ಧಾರಕ. ಈ ನಾರುಗಳನ್ನು ಮರದ ದಬ್ಬೆಗಳು, ಬಳ್ಳಿಗಳು, ಮತ್ತು ಬೆತ್ತ ಸೇರಿದಂತೆ, ಅನೇಕ ವಸ್ತುಗಳಿಂದ ತಯಾರಿಸಬಹುದು. ಬಹುತೇಕ ಬುಟ್ಟಿಗಳನ್ನು ಸಸ್ಯ ವಸ್ತುಗಳಿಂದ ತಯಾರಿಸಲಾಗುತ್ತದಾದರೂ, ಜವಿ/ಜಮಿ, ತಿಮಿಯೆಲುಬು, ಅಥವಾ ಲೋಹದ ತಂತಿಯಂತಹ ಇತರ ವಸ್ತುಗಳನ್ನು ಬಳಸಬಹುದು. ಸಾಮಾನ್ಯವಾಗಿ ಬುಟ್ಟಿಗಳನ್ನು ಕೈಯಿಂದ ಹೆಣೆಯಲಾಗುತ್ತದೆ. ಕೆಲವು ಬುಟ್ಟಿಗಳಿಗೆ ಮುಚ್ಚಳವನ್ನು ಕೂಡಿಸಲಾಗುತ್ತದೆ, ಇತರ ಬುಟ್ಟಿಗಳನ್ನು ಹಾಗೆಯೇ ತೆರೆದು ಬಿಡಲಾಗುತ್ತದೆ.

ಉಪಯೋಗಗಳು

ಬದಲಾಯಿಸಿ

ಬುಟ್ಟಿಗಳು ಉಪಯುಕ್ತವಾದ ಜೊತೆಗೆ ಸೌಂದರ್ಯದ ಉದ್ದೇಶಗಳಿಗೆ ಕೆಲಸಕ್ಕೆ ಬರುತ್ತವೆ. ಕೆಲವು ಬುಟ್ಟಿಗಳು ವಿಧ್ಯುಕ್ತ, ಅಂದರೆ ಧಾರ್ಮಿಕ ಸ್ವರೂಪದ್ದಾಗಿರುತ್ತವೆ.[] ಸಾಮಾನ್ಯವಾಗಿ ಬುಟ್ಟಿಗಳನ್ನು ಶೇಖರಣೆ ಹಾಗೂ ಸಾಗಣೆಗಾಗಿ ಬಳಸಲಾಗುತ್ತದಾದರೂ, ವಿಶೇಷೀಕೃತ ಬುಟ್ಟಿಗಳನ್ನು ಜರಡಿಗಳಾಗಿ, ಅಡುಗೆಗಾಗಿ, ಬೀಜಗಳು ಹಾಗೂ ಧಾನ್ಯಗಳನ್ನು ಸಂಸ್ಕರಿಸಲು, ಜೂಜು ಕಾಯಿಗಳನ್ನು ಹಾರಿಸಲು, ಗಿಲಿಕೆಗಳು, ಬೀಸಣಿಗೆಗಳು, ಮೀನು ಬಲೆಗಳು, ದೋಬಿಖಾನೆಯಲ್ಲಿ, ಮತ್ತು ಇತರ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. "Hopi Basketry." Archived 2012-02-24 ವೇಬ್ಯಾಕ್ ಮೆಷಿನ್ ನಲ್ಲಿ. Northern Arizona Native American Culture Trail. (retrieved 13 Nov 2011)


"https://kn.wikipedia.org/w/index.php?title=ಬುಟ್ಟಿ&oldid=893985" ಇಂದ ಪಡೆಯಲ್ಪಟ್ಟಿದೆ