ಬೀಜ (ಸಂಸ್ಕೃತ ಪದ)
ಬೀಜ ಒಂದು ಸಂಸ್ಕೃತ ಪದವಾಗಿದೆ. ಹಿಂದೂ ಮತ್ತು ಬೌದ್ಧ ಧರ್ಮಗಳಲ್ಲಿ ಇದನ್ನು ವಿಷಯಗಳ ಮೂಲ ಅಥವಾ ಕಾರಣಕ್ಕೆ ರೂಪಕವಾಗಿ ಬಳಸಲಾಗುತ್ತದೆ ಮತ್ತು ಬಿಂದು ಪದಕ್ಕೆ ನಂಟು ಹೊಂದಿದೆ.
ತಂತ್ರದಲ್ಲಿ
ಬದಲಾಯಿಸಿವಜ್ರಾಯನ ಬೌದ್ಧಧರ್ಮ ಮತ್ತು ಹಿಂದೂ ಧರ್ಮದಲ್ಲಿ, ಬೀಜ ಪದವನ್ನು ಮಂತ್ರಗಳೊಳಗಿರುವ ಆಧ್ಯಾತ್ಮಿಕ "ಬೀಜಾಕ್ಷರ"ಗಳಿಗೆ ಬಳಸಲಾಗುತ್ತದೆ.[೧] ಈ ಬೀಜಗಳು ನಿಖರವಾದ ಅರ್ಥಗಳನ್ನು ಹೊಂದಿರುವುದಿಲ್ಲ, ಆದರೆ ಆಧ್ಯಾತ್ಮಿಕ ತತ್ತ್ವಗಳಿಗೆ ಸಂಪರ್ಕಗಳನ್ನು ಸಾಗಿಸುತ್ತವೆ ಎಂದು ನಂಬಲಾಗಿದೆ. ಅತ್ಯಂತ ಪರಿಚಿತವಾಗಿರುವ ಬೀಜಾಕ್ಷರವೆಂದರೆ ಓಂ. ಇದು ಮೊಟ್ಟಮೊದಲು ಹಿಂದೂ ಧರ್ಮಗ್ರಂಥಗಳಾದ ಉಪನಿಷತ್ತುಗಳಲ್ಲಿ ಕಂಡುಬಂದಿತು.
ಯಂತ್ರಗಳ ಮೇಲೆ ಬರೆಯಲ್ಪಟ್ಟ ಮಂತ್ರಗಳು ಮೂಲಭೂತವಾಗಿ ದೈವತ್ವಗಳು ಅಥವಾ ಲೌಕಿಕ ಶಕ್ತಿಗಳನ್ನು ಪ್ರತಿನಿಧಿಸುವ ಚಿಂತನಾ ರೂಪಗಳಾಗಿವೆ, ಮತ್ತು ಧ್ವನಿ ಕಂಪನಗಳ ಮೂಲಕ ಪ್ರಭಾವ ಬೀರುತ್ತವೆ.
— [೨]
ಕೆಲವು ತಾಂತ್ರಿಕ ಸಂಪ್ರದಾಯಗಳಲ್ಲಿ, ವರ್ಣಮಾಲೆಯ ಬೀಜವು ಮಾತೃಕೆಯರ ವಿಗ್ರಹರಹಿತ ನಿರೂಪಣಗಳು ಮತ್ತು ವಿಶ್ವಾಸಾರ್ಹ ಸಾಕಾರತೆಗಳೆಂದು ಅರ್ಥಮಾಡಿಕೊಳ್ಳಲಾಗಿದೆ.
ಟಿಪ್ಪಣಿಗಳು
ಬದಲಾಯಿಸಿ- ↑ https://www.yogapedia.com/definition/5655/bija
- ↑ Khanna, Madhu (2003). Yantra: The Tantric Symbol of Cosmic Unity. Inner Traditions. ISBN 0-89281-132-3 & ISBN 978-0-89281-132-8. p.21