ಬಿ. ವಿಜಯಲಕ್ಷ್ಮಿ (೧೯೫೨ - ೧೨ ಮೇ ೧೯೮೫) ಅವರು ಭಾರತದ ಭೌತಶಾಸ್ತ್ರಜ್ಞೆಯಾಗಿದ್ದರು.

ಬಿ. ವಿಜಯಲಕ್ಷ್ಮಿ
Born೧೯೫೨
ಭಾರತ
Died೧೨ ಮೇ ೧೯೮೫
Occupationಭೌತಶಾಸ್ತ್ರಜ್ಞೆ
Spouseಟಿ. ಜಯರಾಮ್‍

ಆರಂಭಿಕ ಜೀವನ ಮತ್ತು ಶಿಕ್ಷಣ

ಬದಲಾಯಿಸಿ

ಸಂಪ್ರದಾಯವಾದಿ ಕುಟುಂಬದಲ್ಲಿ ಜನಿಸಿದ ಅವರು ೧೯೭೪ ರಲ್ಲಿ ತಿರುಚಿರಾಪಳ್ಳಿಯ ಸೀತಾಲಕ್ಷ್ಮಿ ರಾಮಸ್ವಾಮಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು ಮತ್ತು ಸೈದ್ಧಾಂತಿಕ ಭೌತಶಾಸ್ತ್ರ ವಿಭಾಗಕ್ಕೆ ಸೇರಿದರು.[][][] ೧೯೮೨ ರಲ್ಲಿ, ಅವರು ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪೂರ್ಣಗೊಳಿಸಿದರು ಮತ್ತು ಶೀಘ್ರದಲ್ಲೇ ಟಿ. ಜಯರಾಮ್ ಅವರನ್ನು ಭೇಟಿಯಾದರು ಮತ್ತು ವಿವಾಹವಾದರು.[][]

ವೃತ್ತಿ

ಬದಲಾಯಿಸಿ

ಬಿ. ವಿಜಯಲಕ್ಷ್ಮಿ ಅವರ ಅಧ್ಯಯನಗಳು ಬಾಹ್ಯ ವಿದ್ಯುತ್ಕಾಂತೀಯ ಮತ್ತು ಗುರುತ್ವಾಕರ್ಷಣೆಯ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಪಿನ್‌ನ ಸಾಪೇಕ್ಷತಾ ಸಮೀಕರಣಗಳ ವಿಷಯಗಳನ್ನು ಪರಿಶೋಧಿಸುತ್ತವೆ, ಹಾಗೂ ಹೆಚ್ಚಿನ ಸ್ಪಿನ್ ಸಿದ್ಧಾಂತಗಳನ್ನು ನಿರ್ಮಿಸುವ ಮಾರ್ಗಗಳನ್ನು ಹುಡುಕುತ್ತವೆ. ಸ್ವಲ್ಪ ಸಮಯದ ನಂತರ ಅವರು ಸಾಪೇಕ್ಷವಲ್ಲದ ಕ್ವಾಂಟಮ್ ಮೆಕ್ಯಾನಿಕ್ಸ್‌ನಲ್ಲಿ ಸ್ಪಿನ್ನಿಂಗ್ ಪಾರ್ಟಿಕಲ್‌ನ ಬಗ್ಗೆ ಅ‍ಧ್ಯಯನ ಮಾಡಿದರು. ೧೯೭೮ ರ ಸುಮಾರಿಗೆ ಮದ್ರಾಸ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ವಾಂಸರ ಸಂಘವನ್ನು ರಚಿಸಲಾಯಿತು ಮತ್ತು ಅದಕ್ಕೆ ಬಿ. ವಿಜಯಲಕ್ಷ್ಮಿ ಕೊಡುಗೆ ನೀಡಿದರು.[] [] ೧೯೮೦ ರಲ್ಲಿ ಕೊಚ್ಚಿಯ ವಿಶ್ವವಿದ್ಯಾನಿಲಯದಲ್ಲಿ ನಡೆದ ಪರಮಾಣು ಶಕ್ತಿ ಇಲಾಖೆಯ ದ್ವಿವಾರ್ಷಿಕ ಉನ್ನತ ಶಕ್ತಿ ಭೌತಶಾಸ್ತ್ರ ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು. ಇದರ ನಂತರ ಅವರಿಗೆ ಮತ್ತು ಅವರ ಅಧ್ಯಯನಗಳಿಗೆ ಹೆಚ್ಚಿನ ಗೌರವ ನೀಡಲಾಯಿತು. ಕ್ಯಾನ್ಸರ್‌ನಿಂದಾಗಿ ಅವರ ಆರೋಗ್ಯ ಹದಗೆಟ್ಟಿದ್ದರೂ ಬಾಹ್ಯ ಕ್ಷೇತ್ರಗಳಲ್ಲಿನ ಸಾಪೇಕ್ಷ ತರಂಗ ಸಮೀಕರಣಗಳ ಕುರಿತು ಐದು ಪ್ರಕಟಣೆಗಳನ್ನು ಪ್ರಕಟಿಸಿದರು ಮತ್ತು ವೈಜ್ಞಾನಿಕ ಸಮುದಾಯಕ್ಕೆ ಈ ಹಿಂದೆ ತಿಳಿದಿಲ್ಲದ ದೊಡ್ಡ ವರ್ಗದ ಸಾಪೇಕ್ಷತಾ ಸಮೀಕರಣಗಳನ್ನು ವಿವರಿಸುವ ಮೂಲಕ ಪಿಎಚ್‌ಡಿಗಾಗಿ ತನ್ನ ಅವಶ್ಯಕತೆಗಳನ್ನು ಪೂರ್ಣಗೊಳಿಸಿದರು. ಸೂಪರ್‌ಸಿಮ್ಮೆಟ್ರಿಯು ಹೆಚ್ಚು ಜನಪ್ರಿಯವಾಗುತ್ತಿದ್ದಂತೆ ಅವರ ಕೆಲಸವು ಸ್ಥಳಾಂತರಗೊಂಡಿತು ಮತ್ತು ಅವರು ಈ ವಿಷಯದ ಮೇಲೆ ಎರಡು ಪತ್ರಿಕೆಗಳನ್ನು ಬರೆದರು. ಎರಡು ವರ್ಷಗಳಿಗೂ ಹೆಚ್ಚು ಕಾಲ ಬಿ. ಸಾಪೇಕ್ಷತಾ ಸಮೀಕರಣಗಳನ್ನು ವಿವಿಧ ಕೋನಗಳಿಂದ ಅಧ್ಯಯನ ಮಾಡುತ್ತಿದ್ದರು. [] []

ವೈಯಕ್ತಿಕ ಜೀವನ

ಬದಲಾಯಿಸಿ

೧೯೭೮ ರಲ್ಲಿ ಟಿ. ಜಯರಾಮ್‍ ಅವರನ್ನು ಮದುವೆಯಾದ ನಂತರ, ಬಿ. ವಿಜಯಲಕ್ಷ್ಮಿ ಅವರು ನಿಧಾನವಾಗಿ ಸಮಯ ಸಿಕ್ಕಂತೆ ಕಮ್ಯುನಿಸ್ಟ್ ಎಡಪಂಥೀಯ ಚಳುವಳಿಗಳಲ್ಲಿ ಹೆಚ್ಚು ತೊಡಗಿಸಿಕೊಂಡರು, ಹಾಗೂ ಅವರ ನಂಬಿಕೆಗಳು ನಾಸ್ತಿಕತೆಗೆ ತಿರುಗಿದವು. ಕ್ವಾಂಟಮ್ ಮೆಕ್ಯಾನಿಕ್ಸ್‌ನಲ್ಲಿ ಆಕೆಯ ಅಧ್ಯಯನದ ಸಮಯದಲ್ಲಿ ಅವರು ವ್ಯಾಪಕವಾದ ಹೊಟ್ಟೆ ಮತ್ತು ಕಿಬ್ಬೊಟ್ಟೆಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅಂತಿಮವಾಗಿ ಅವರನ್ನು ಗಾಲಿಕುರ್ಚಿಯಲ್ಲಿ ಇರಿಸಲಾಯಿತು, ಆದರೂ ಅವರು ತಮ್ಮ ಕೆಲಸವನ್ನು ಮುಂದುವರೆಸಿದರು.[] []

ಮರಣ ಮತ್ತು ಪರಂಪರೆ

ಬದಲಾಯಿಸಿ

ಬಿ. ವಿಜಯಲಕ್ಷ್ಮಿ ಅವರು ೧೨ ಮೇ ೧೯೮೫ ರಂದು ನಿಧನರಾದರು.[] []

ಶಶಿ ಕುಮಾರ್ ಇವರ ಜೀವನದ ಕುರಿತು "ವಿಜಯಲಕ್ಷ್ಮಿ: ದಿ ಸ್ಟೋರಿ ಆಫ್ ಎ ಯಂಗ್ ವುಮನ್ ವಿತ್ ಕ್ಯಾನ್ಸರ್" ಎಂಬ ಸಾಕ್ಷ್ಯಚಿತ್ರವನ್ನು ರಚಿಸಿದ್ದಾರೆ.[]

ಉಲ್ಲೇಖಗಳು

ಬದಲಾಯಿಸಿ
  1. "Undaunted by Cancer, She Wrote 11 International Papers Before Passing Away". The Better India (in ಅಮೆರಿಕನ್ ಇಂಗ್ಲಿಷ್). 2019-09-14. Retrieved 2019-11-26.
  2. ೨.೦ ೨.೧ Sen, Nayonika (2019-03-04). "B. Vijayalakshmi : The Physicist Who Fought Feudalistic Academia| #IndianWomenInHistory". Feminism In India (in ಅಮೆರಿಕನ್ ಇಂಗ್ಲಿಷ್). Retrieved 2019-11-26.
  3. ೩.೦ ೩.೧ Govindarajan, T R. "A heroic struggle of a scientist with cancer". Lilavati's Daughters (PDF). {{cite book}}: |website= ignored (help)
  4. ೪.೦ ೪.೧ ೪.೨ Sen, Nayonika (2019-03-04). "B. Vijayalakshmi : The Physicist Who Fought Feudalistic Academia| #IndianWomenInHistory". Feminism In India (in ಅಮೆರಿಕನ್ ಇಂಗ್ಲಿಷ್). Retrieved 2019-11-26.Sen, Nayonika (4 March 2019). "B. Vijayalakshmi : The Physicist Who Fought Feudalistic Academia| #IndianWomenInHistory". Feminism In India. Retrieved 26 November 2019.
  5. ೫.೦ ೫.೧ ೫.೨ ೫.೩ Govindarajan, T R. "A heroic struggle of a scientist with cancer". Lilavati's Daughters (PDF). {{cite book}}: |work= ignored (help)Govindarajan, T R. "A heroic struggle of a scientist with cancer". Lilavati's Daughters (PDF). Indian Academy of Sciences.
  6. "Undaunted by Cancer, She Wrote 11 International Papers Before Passing Away". The Better India (in ಅಮೆರಿಕನ್ ಇಂಗ್ಲಿಷ್). 2019-09-14. Retrieved 2019-11-26."Undaunted by Cancer, She Wrote 11 International Papers Before Passing Away". The Better India. 14 September 2019. Retrieved 26 November 2019.
  7. "Mr. Sashi Kumar". Celebrate. 22 March 2012. Archived from the original on 18 December 2019. Retrieved 16 December 2019.


ಬಾಹ್ಯ ಕೊಂಡಿಗಳು

ಬದಲಾಯಿಸಿ