ಬಿ. ಜಿ. ಖೇರ್
ಬಿ. ಜಿ. ಖೇರ್[೧] ಎಂದು ಪ್ರಸಿದ್ಧರಾದ ಬಾಲಾಸಾಹೇಬ್ ಗಂಗಾಧರ್ ಖೇರ್, ಅಗಿನ ಬ್ರಿಟಿಷ್ ಬಾಂಬೆ ಸರಕಾರದ ಪ್ರಧಾನ ಮಂತ್ರಿಯಾಗಿದ್ದರು. (Marathi: बाळासाहेब गंगाधर खेर) (ಆಗಸ್ಟ್ ೨೪, ೧೮೮೮-ಮಾರ್ಚ್, ೮, ೧೯೫೭) ಬಾಂಬೆ ರಾಜ್ಯಕ್ಕೆ ಈಗಿನ ಮಹಾರಾಷ್ಟ್ರ ಮತ್ತು ಗುಜರಾತ್ ಸೇರಿತ್ತು. ಲಾಯರ್, ಸಾಲಿಸಿಟರ್, ರಾಜಕೀಯ ಪಟು ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದರು. ಸರಳ ಸ್ವಭಾವದ ನಿರಾಡಂಬರ ವ್ಯಕ್ತಿಯಾಗಿದ್ದ ಖೇರ್ ರವರು, ಒಳ್ಳೆಯ ವಾಗ್ಮಿ ಮತ್ತು ಮೇಧಾವಿ ಹಾಗೂ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಅವರನ್ನು ಜನರೆಲ್ಲ ಸಜ್ಜನ್ ಎಂದು ಹೊಗಳುತ್ತಿದ್ದರು.
ಜನನ ಹಾಗೂ ವಿದ್ಯಾಭ್ಯಾಸ
ಬದಲಾಯಿಸಿಬಿ.ಜಿ.ಖೇರ್ [೨] ರವರು, ೪, ಆಗಸ್ಟ್, ೧೮೮೮ ರಲ್ಲಿ ರತ್ನಾಗಿರಿಯಲ್ಲಿ ಒಂದು ಸಾಮಾನ್ಯ ಮರಾಠಿ ಕುಟುಂಬದಲ್ಲಿ ಜನಿಸಿದರು. ಬಾಲ್ಯದಲ್ಲಿ ಕೆಲವು ಸಮಯ ಜಮಖಂಡಿ ರಾಜ್ಯದ ಕುಂದಗೋಳ ದಲ್ಲಿದ್ದರು. ಗೋಪಾಲಕೃಷ್ಣ ಗೋಖಲೆಯವರ ಆದೇಶದಂತೆ ’ಪುಣೆ’ಯಲ್ಲಿ ಬಂದು ನೆಲೆಸಿ ’ನ್ಯೂ ಇಂಗ್ಲೀಷ್ ಸ್ಕೂಲ್’ ನಲ್ಲಿ ಭರ್ತಿಪಡೆದರು. ಸನ್, ೧೯೦೮ ರಲ್ಲಿ, ’ವಿಲ್ಸನ್ ಕಾಲೇಜ್’ ನಿಂದ ಬಿ.ಎ. ಪದವಿಯನ್ನು ಗಳಿಸಿದರು. ಸಂಸ್ಕೃತದಲ್ಲಿ ಅತಿಹೆಚ್ಚು ಅಂಕಗಳಿಂದ ಉತ್ತಿರ್ಣರಾದ ಖೇರ್ ರವರಿಗೆ ಭಾವುದಾಜಿ ಲಾಡ್ ಪಾರಿತೋಷಕ ದೊರೆಯಿತು.[೩]
ರಾಜಕೀಯಕ್ಕೆ ಧುಮುಕಿದರು
ಬದಲಾಯಿಸಿ೧೯೨೨ ರಲ್ಲಿ ರಾಜಕೀಯಕ್ಕೆ ಪಾದಾರ್ಪಣೆಮಾಡಿದರು. ಮುಂಬಯಿ ಶಾಖೆಯ ಸ್ವರಾಜ್ ಪಾರ್ಟಿಯ ಕಾರ್ಯದರ್ಶಿಯಾಗಿ ಆಯ್ಕೆಯಾದರು.೧೯೩೦ರಲ್ಲಿ ಅಸಹಕಾರ ಚಳುವಳಿಯಲ್ಲಿ ಮಹಾತ್ಮಾ ಗಾಂಧಿಯವರ ಮಾರ್ಗದರ್ಶನದಲ್ಲಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ, ೮ ತಿಂಗಳು ಕಠಿಣ ಜೈಲುವಾಸ ಹಾಗೂ ಜುಲ್ಮಾನೆಯನ್ನು ಅನುಭವಿಸಬೇಕಾಯಿತು. ಪುನಃ ೧೯೩೨ ರಲ್ಲಿ ೨ ವರ್ಷ ಕಠಿಣ ಸೆರೆಮನೆವಾಸವನ್ನು ಅನುಭವಿಸಬೇಕಾಯಿತು. ೧೯೩೭ ರಲ್ಲಿ ಪ್ರಥಮ ಮುಂಬಯಿ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಅಕ್ಟೋಬರ್ ೧೯೩೯ ರವರೆಗೆ ಆ ಸ್ಥಾನದಲ್ಲಿದ್ದರು. ೧೯೪೦ ರಲ್ಲಿ ಕ್ವಿಟ್ ಇಂಡಿಯ ಆಂದೋಳನದ ಸಮಯದಲ್ಲಿ ಅವರನ್ನು ಬಂಧಿಸಿ ಬಂದೀಖಾನೆಯಲ್ಲಿ ಇಡಲಾಯಿತು. ಮುಂದೆ, ಆಗಸ್ಟ್ ೧೯೪೨ ರಲ್ಲಿ ಬ್ರಿಟಿಷ್ ಸರಕಾರ,ಅವರನ್ನು ಜೈಲಿಗೆ ಕಳಿಸಿದರು. ೧೪, ಜುಲೈ, ೧೯೪೪ ರಲ್ಲಿ ಜೈಲಿನಿಂದ ಬಿಡುಗಡೆ ದೊರೆಯಿತು. ೩೦, ಮಾರ್ಚ್, ೧೯೪೬ ರಲ್ಲಿ ಖೇರ್ ರವರು, ಪುನಃ ಮುಂಬಯಿನ ಪ್ರಧಾನಿಯಾದರು. ೨೧, ಏಪ್ರಿಲ್, ೧೯೫೨ ರವರೆಗೆ ಆ ಸ್ಥಾನದಲ್ಲಿದ್ದರು.
ಪ್ರಶಸ್ತಿಗಳು
ಬದಲಾಯಿಸಿ- ೧೯೫೪ ರಲ್ಲಿ 'ಪದ್ಮ ವಿಭೂಷಣ ಪ್ರಶಸ್ತಿ'.
ನಿಧನ
ಬದಲಾಯಿಸಿ'ಬಿ.ಜಿ.ಖೇರ್ ರವರು, ಪುಣೆಯಲ್ಲಿ ೮, ಮಾರ್ಚ್, ೧೯೫೭ ರಲ್ಲಿ ನಿಧನರಾದರು.
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2012-03-02. Retrieved 2014-03-30.
- ↑ "ಆರ್ಕೈವ್ ನಕಲು". Archived from the original on 2016-03-08. Retrieved 2014-03-30.
- ↑ http://irishphotoarchive.photoshelter.com/gallery/1952-B-G-Kher-Indian-Ambassador-to-Ireland-presents-his-Credentials-to-President-OKelly/G0000cNC1FQyPMa4/C00002PuQMcS.8KY
<References >/