ಡಾ.ಬಿ.ಎಸ್.ಶೈಲಜಾ ಅವರು ಖಗೋಳಶಾಸ್ತ್ರ ವಿಜ್ಞಾನಿ ಮತ್ತು ಲೇಖಕಿ. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಖಗೋಲ ವಿಜ್ಞಾನ, ಗಣಿತದ ಕುರಿತ ಪುಸ್ತಕಗಳನ್ನು ಬರೆದಿದ್ದಾರೆ. ಪತ್ರಿಕೆಗಳಲ್ಲಿ ಲೇಖನ ಮತ್ತು ಅಂಕಣಗಳನ್ನು ಬರೆಯುತ್ತಿದ್ದಾರೆ. ಅವರು ಬೆಂಗಳೂರಿನ 'ಜವಾಹರಲಾಲ್ ನೆಹರೂ ತಾರಾಲಯ'ದ ನಿರ್ದೇಶಕಿ'ಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಹಲವಾರು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಕಟಣೆಗಳನ್ನು ಮಾಡಿದ್ದಾರೆ. ತಾರಾಲಯದಲ್ಲಿ ಸೀನಿಯರ್ ಸೈಂಟಿಫಿಕ್ ಕನ್ಸಲ್ಟೆಂಟ್ ಆಗಿದ್ದಾರೆ.[೧]

ವೈಯಕ್ತಿಕ ಜೀವನ, ವಿದ್ಯಾಭ್ಯಾಸ ಹಾಗೂ ವೃತ್ತಿಜೀವನಸಂಪಾದಿಸಿ

 • ತಂದೆ ಬ.ನ. ಸುಂದರರಾವ್, ತಾಯಿ ರತ್ನಮ್ಮ.
 • ಇವರು ಭೌತಶಾಸ್ತ್ರದಲ್ಲಿ ಎಮ್.ಎಸ್ಸಿ. ಯನ್ನು ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ವೋಲ್ಫ್-ರಾಯೆಟ್ ಬೈನರಿ ಸ್ಟಾರ್ಸ್ ವಿಷಯದ ಮೇಲೆ ಪಿ.ಎಚ್ಡಿ.ಯನ್ನು ಭಾರತೀಯ ಖಭೌತ ಸಂಸ್ಥೆಯಲ್ಲಿ ಪಡೆದಿದ್ದಾರೆ.
 • ಬಿ. ಎಸ್. ಶೈಲಜಾ ಅವರು ೧೯೯೪ರಲ್ಲಿ ಜವಾಹರ್ ಲಾಲ್ ನೆಹರು ತಾರಾಲಯವನ್ನು ಸೇರಿದರು. ೨೦೧೭ರಲ್ಲಿ ನಿವೃತ್ತಿಯಾದರು.
 • ಅವರು ಅನೇಕ ಶೈಕ್ಷಣಿಕ ಸಮಿತಿ, ಪಠ್ಯ ಪುಸ್ತಕ ಸಮಿತಿ, ಅಧ್ಯಯನ ಸಮಿತಿ ಮತ್ತು ಅನೇಕ ವಿಜ್ಞಾನ ಕೇಂದ್ರ ಮತ್ತು ವಸ್ತು ಸಂಗ್ರಹಾಲಯದ ಮಾರ್ಗದರ್ಶನ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. *ಇವರು ಹಿರಿಯ ವೈಜ್ಞಾನಿಕಾಧಿಕಾರಿಯಾಗಿ, ಉಪ ನಿರ್ದೇಶಕರಾಗಿ ನಂತರ ೨೦೧೨ರಲ್ಲಿ ತಾರಾಲಯದ ನಿರ್ದೇಶಕರಾಗಿ ನೇತೃತ್ವ ವಹಿಸಿದರು.

ಇವರ ಆಸಕ್ತಿಯುತ ವಿಷಯಗಳು ನೋವೆ, ವಿಶಿಷ್ಟ ನಕ್ಷತ್ರಗಳು ಹಾಗೂ ಧೂಮಕೇತುಗಳಾಗಿದ್ದವು. ತಾರಾಲಯದಲ್ಲಿ ಹಲವು ಶೈಕ್ಷಣಿಕ ಕಾರ್ಯಕ್ರಮಗಳು ಹಾಗೂ ಆಕಾಶವೀಕ್ಷಣಾ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದರು. ಅವರು ಖಗೋಳ ಶಾಸ್ತ್ರದ ಇತಿಹಾಸದ ಕುರಿತು ಅತ್ಯಂತ ಆಸಕ್ತಿಯನ್ನು ಹೊಂದಿದ್ದಾರೆ. ಇವರು ಸದ್ಯ ಶಿಲಾ ಶಾಸನಗಳು, 17ನೇ ಶತಮಾನದ ಹಸ್ತಪ್ರತಿಗಳ ಅನುವಾದ ಮತ್ತು ವಿಶ್ಲೇಷಣೆ, ದೇವಾಲಯಗಳ ಖಗೋಳೀಯ ಅಂಶಗಳು, ಸ್ಮಾರಕಗಳು ಮತ್ತು ಕಲಾಕೃತಿಗಳು – ಈ ವಿಷಯಗಳ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ.[೨]

ಬರೆವಣಿಗೆಸಂಪಾದಿಸಿ

ಇವರು ನಿಯತಕಾಲಿಕೆಗಳಲ್ಲಿ 120 ಪ್ರಕಟಣೆಗಳನ್ನು ಹಾಗೂ 17 ಪುಸ್ತಕಗಳನ್ನು ಬರೆದಿದ್ದಾರೆ. ಮುನ್ನೂರಕ್ಕೂ ಹೆಚ್ಚು ಜನಪ್ರಿಯ ಲೇಖನಗಳನ್ನು ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಅನೇಕ ಸಾಪ್ತಾಹಿಕ ಅಂಕಣಗಳನ್ನು ಬರೆದಿದ್ದಾರೆ. 'ಹೊಸತು' ಪತ್ರಿಕೆಗೆ 1999 ಆಗಸ್ಟ್ ನಿಂದ ‘ನಭಾವಲೋಕನ’ ಎಂಬ ಮಾಸಿಕ ಅಂಕಣ ಬರೆಯುತ್ತಿದ್ದರು.

ಕೃತಿಗಳುಸಂಪಾದಿಸಿ

 • ಆಗಸದ ಅಲೆಮಾರಿಗಳು
 • ಬಾನಿಗೊಂದು ಕೈಪಿಡಿ
 • ಶುಕ್ರಗ್ರಹದ ಸಂಕ್ರಮಣ
 • ಏನು..? ಗಣಿತ ಅಂದ್ರಾ?
 • ಬಾಲಂಕೃತ ಚುಕ್ಕಿ ಧೂಮಕೇತು
 • ಆಕಾಶದಲ್ಲಿ ಏನಿದೆ? ಏಕಿದೆ
 • ಸಫಾರಿ ಎಂಬ ಲಕ್ಷುರಿ (ಪ್ರವಾಸ ಕಥನ) (2007),
 • ನನ್ನ ಮಿತ್ರ ಸೋರಣ್ಣ (ಜೆ.ಬಿ.ಎಸ್. ಹಾಲ್ಲೆನರ ಮಿ. ಲೀಕಿಯ ಅನುವಾದ)
 • ನವಕರ್ನಾಟಕ ಜ್ಞಾನವಿಜ್ಞಾನ ಕೋಶದಲ್ಲಿ ಖಗೋಳ ವಿಜ್ಞಾನ ಭಾಗದ ರಚನೆ
 • ದೂರದರ್ಶಕ
 • ಗ್ರಹಣ
 • ಸೂರ್ಯ
 • ಸೌರವ್ಯೂಹ
 • Chintamani Ragoonatha Charry and Contemporary Indian Astronomy
 • Transit of Venus
 • Ganitagannadi : Mirror of Mathematics

ಪ್ರಶಸ್ತಿ, ಗೌರವಗಳುಸಂಪಾದಿಸಿ

 • ‘ಶುಕ್ರಗ್ರಹದ ಸಂಕ್ರಮಣ’ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ[೩]
 • 'ಆಗಸದ ಅಲೆಮಾರಿಗಳು’ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
 • 'ಬಾಲಂಕೃತ ಚುಕ್ಕಿ ಧೂಮಕೇತು' ಪುಸ್ತಕಕ್ಕೆ ಶಿವಮೊಗ್ಗ ಕರ್ನಾಟಕ ಸಂಘದ ‘ಹಸೂಡಿ ವೆಂಕಟಾಚಲಶಾಸ್ತ್ರಿ ವಿಜ್ಞಾನ ಸಾಹಿತ್ಯ ಪ್ರಶಸ್ತಿ’-೨೦೧೪[೪]
 • ‘ಆಕಾಶದಲ್ಲಿ ಏನಿದೆ? ಏಕಿದೆ?’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದ​ರ್ಸ್‌ ದತ್ತಿ ಪ್ರಶಸ್ತಿ, ೨೦೨೦[೫]
 • ಎಚ್.ಎನ್. ದತ್ತಿನಿಧಿ ಬಹುಮಾನ[೬]
 • ಆರ್ಯಭಟ ಪ್ರಶಸ್ತಿ[೭]

ಉಲ್ಲೇಖಗಳುಸಂಪಾದಿಸಿ

 1. "Directory of officers and employees". ತಾರಾಲಯ. Retrieved 26 September 2021.
 2. "ಬಿ. ಎಸ್. ಶೈಲಜಾ". ತಾರಾಲಯ. Retrieved 26 September 2021.
 3. ಶಿವಮೊಗ್ಗ ಕರ್ನಾಟಕ ಸಂಘದ 2013ರ ಪ್ರಶಸ್ತಿ ಘೋಷಣೆ, ಒನ್ ಇಂಡಿಯಾ (ಕನ್ನಡ) June 13, 2014
 4. 'ಮೌಲ್ಯ ಕಳಕೊಂಡ ನಾಡು ತಲೆ ಎತ್ತಲು ಆಗದು': ಡಾ. ಬಂಜಗೆರೆ, ಕನ್ನಡಪ್ರಭ, ೦೬ ಜುಲೈ ೨೦೧೪
 5. "ಶೈಲಜಾ, ಸತ್ಯನಾರಾಯಣಗೆ ಕಸಾಪ ದತ್ತಿ ಪ್ರಶಸ್ತಿ". Kannadaprabha News. 12 September 2020. Retrieved 26 September 2021.
 6. "About the author". ಬುಕ್ ಬ್ರಹ್ಮ. Retrieved 26 September 2021.
 7. "About the author". ಬುಕ್ ಬ್ರಹ್ಮ. Retrieved 26 September 2021.

ಬಾಹ್ಯ ಸಂಪರ್ಕಗಳುಸಂಪಾದಿಸಿ