ಬಿ.ಹನುಮಂತಾಚಾರ್.(ಮಾರ್ಚ್ ೨೨,೧೯೨೨ - ೧೯೮೭) ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಸ್ಯನಟರು ಮತ್ತು ಯೂನಿವಾಕ್ಸ್ ವಾದನ ಮತ್ತು ಸಂಗೀತ ನಿರ್ದೇಶನಕ್ಕೆ ಹೆಸರಾದವರು. ಇವರು ತಮ್ಮ ವಿಶಿಷ್ಟವಾದ ಮಾತಿನ ಧಾಟಿ ಹಾಗೂ ಉತ್ತರ ಕರ್ನಾಟಕದ ಭಾಷಾಶೈಲಿಯಿಂದ ಜನಪ್ರಿಯರಾಗಿದ್ದಾರೆ.

ಬಿ. ಹನುಮಂತಾಚಾರ್
ಜನನಮಾರ್ಚ್ ೨೨, ೧೯೨೨
ಬಳ್ಳಾರಿ
ಮರಣ೧೯೮೭
ವೃತ್ತಿ(ಗಳು)ಚಲನಚಿತ್ರ ನಟ, ಯೂನಿವಾಕ್ಸ್ ವಾದಕ, ಸಂಗೀತ ನಿರ್ದೇಶಕ

ಬಳ್ಳಾರಿಯಲ್ಲಿ ಜನಿಸಿ,ಬಾಲ್ಯದಲ್ಲೇ ರಂಗಭೂಮಿಯ ನಂಟು ಅಂಟಿಸಿಕೊಂಡ ಹನುಮಂತಾಚಾರ್, ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿಯಲ್ಲಿ ಹಾಸ್ಯನಟರಾಗಿ ಹೆಸರು ಮಾಡಿದರು.ಇವರು ಅಭಿನಯಿಸಿದ ಮೊದಲ ಕನ್ನಡ ಚಿತ್ರ ದೇವ ಕನ್ನಿಕಾ.

ಇವರ ಅಭಿನಯದ ಕೆಲವು ಕನ್ನಡ ಚಿತ್ರಗಳು

ಬದಲಾಯಿಸಿ


"ಯೂನಿವಾಕ್ಸ್" ಎಂಬ ವಾದ್ಯ

ಬದಲಾಯಿಸಿ

ಯೂನಿವಾಕ್ಸ್ - ಒಂದು ವಿಶಿಷ್ಟ ವಾದ್ಯ.ಒಂದೇ ವಾದ್ಯದಲ್ಲಿ ೮-೧೦ ಬಗೆಯ ವಾದ್ಯಗಳ ಧ್ವನಿಯನ್ನು ಹೊರಹೊಮ್ಮಿಸುವುದು ಇದರ ವೈಶಿಷ್ಟ್ಯ.ಇದು ೬೦ರ ದಶಕದ ಹಿಂದಿ ಚಲನಚಿತ್ರ್ಗಗಳಲ್ಲಿ ಜನಪ್ರಿಯವಾಗಿತ್ತು.ಈ ವಾದ್ಯ ಕನ್ನಡಕ್ಕೂ ಬರಬೇಕು ಎಂದು ಹಂಬಲಿಸಿದವರು ಹನುಮಂತಾಚಾರ್.ಮುಂಬಯಿಗೆ ತೆರಳಿ,ಆಸಕ್ತಿ ವಹಿಸಿ ,ಕಲಿತು,ಸುಮಾರು ೭೦ಕ್ಕೂ ಹೆಚ್ಚು ಕನ್ನಡ ಚಲನಚಿತ್ರ್ಗಗಳಲ್ಲಿ ಈ ವಾದ್ಯ ಬಳಕೆ ಮಾಡಿದರು.

ಸಂಗೀತ ಆಚಾರ್ಯನಾಗಿ

ಬದಲಾಯಿಸಿ

ಹನುಮಂತಾಚಾರ್ ಹಾಸ್ಯನಟನಾಗಿ ಮಾತ್ರವಲ್ಲ,ಯೂನಿವಾಕ್ಸ್ ಎಂಬ ವಾದ್ಯವನ್ನು ಚಿತ್ರಸಂಗೀತದಲ್ಲಿ ಬಳಸಿ,ಜನಪ್ರಿಯರಾಗಿದ್ದಾರೆ.ಭಕ್ತ ಕನಕದಾಸ - ಈ ವಾದ್ಯವನ್ನು ಬಳಸಿದ ಕನ್ನಡದ ಮೊದಲನೆಯ ಚಿತ್ರ.ಈ ಚಿತ್ರದ 'ಈತನೀಗ ವಾಸುದೇವನು..' - ಎಂಬ ಹಾಡು ಈ ವಾದ್ಯದ ನೆರವಿನಿಂದ ಹೆಚ್ಚು ಸುಶ್ರಾವ್ಯವಾಗಿ ಮೂಡಿ ಬಂದಿದೆ.

ಮುಂದೆ ಹನುಮಂತಾಚಾರ್ಯರು ಈ ವಾದ್ಯದ ಮೂಲಕ ನಾಡಿನಾದ್ಯಂತ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ಸಹಾ ನಡೆಸಿ ಪ್ರಖ್ಯಾತರಾದರು. ಮುಂದೆ ಕ್ಯಾಸೆಟ್ ಯುಗದಲ್ಲಿ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿನ ಅನೇಕ ಭಕ್ತಿ ಗೀತೆಗಳ ಸಂಗೀತ ನಿರ್ದೇಶಕರಾಗಿ ನೂರಾರು ಭಕ್ತಿಗೀತೆಗಳ ಕ್ಯಾಸೆಟ್ಟುಗಳನ್ನು ಹೊರತಂದರು. ಈ ನಿಟ್ಟಿನಲ್ಲಿ ಡಾ. ರಾಜಕುಮಾರ್ ಅವರ ಬಹಳಷ್ಟು ಭಕ್ತಿಗೀತೆಗಳನ್ನು ಹನುಮಂತಾಚಾರ್ಯರು ನಿರ್ದೇಶಿಸಿದ್ದರು.

ಈ ಮಹಾನ್ ಕಲಾವಿದ ಸಂಗೀತಜ್ಞ ಬಿ. ಹನುಮಂತಾಚಾರ್ ಅವರು ೧೯೮೭ರ ವರ್ಷದಲ್ಲಿ ಈ ಲೋಕವನ್ನಗಲಿದರು.