ಬಿ.ಆರ್.ಲಕ್ಷ್ಮಣರಾವ್

ಬಿ.ಆರ್.ಲಕ್ಷ್ಮಣರಾವ್, ಅವರು ಕನ್ನಡದ ಪ್ರೇಮಕವಿ , ನವೋದಯ, ನವ್ಯ, ಬಂಡಾಯ ಮೊದಲಾದ ಯಾವ ಗುಂಪಿಗೂ ಸೇರದ ಕವಿ, ಭಾವಗೀತೆಗಳ ಕವಿ. ಲಕ್ಷ್ಮಣರಾಯರ 'ಅಮ್ಮ, ನಿನ್ನ ಎದೆಯಾಳದಲ್ಲಿ',‘ಸುಬ್ಭಾಭಟ್ಟರ ಮಗಳೇ’,‘ನಾ ಚಿಕ್ಕವನಾಗಿದ್ದಾಗ ಅಪ್ಪ ಹೇಳುತ್ತಿದ್ದರು',' ಜಾಲಿಬಾರಿನಲ್ಲಿ ಕೂತ ಪೋಲಿ ಗೆಳೆಯರು' ಮುಂತಾದ ಕವಿತೆಗಳು ಜನಪ್ರಿಯವಾಗಿವೆ. ಈ ಪದ್ಯಗಳು, ಹಲವು ವೇಳೆ ಕೆ.ಎಸ್.ನ ಅವರ ‘ಶ್ಯಾನುಭೋಗರ ಮಗಳು’, ‘ರಾಯರು ಬಂದರು ಮಾವನ ಮನೆಗೆ’ ಪದ್ಯಗಳಿಗೆ ಸರಿಹೋಲಿಕೆಯಂತಿವೆ.

ಬಿ.ಆರ್.ಲಕ್ಷ್ಮಣರಾವ್

ಜನನ,ವಿದ್ಯಾಭ್ಯಾಸ

ಬದಲಾಯಿಸಿ

ಬಿ.ಆರ್.ರಾಜಾರಾವ್‌ ಮತ್ತು ವೆಂಕಟಲಕ್ಷ್ಮಮ್ಮನವರ ಮಗನಾಗಿ 'ಲಕ್ಷ್ಮಣ್,' ಚಿಕ್ಕಬಳ್ಳಾಪುರ ಜಿಲ್ಲೆಯ 'ಚೀಮಂಗಲ'ದಲ್ಲಿ ೧೯೪೬ ರ ಸೆಪ್ಟಂಬರ್ 9ರಂದು ಜನಿಸಿದರು. ಲಕ್ಷ್ಮಣರ ಪ್ರಾರಂಭಿಕ ಶಿಕ್ಷಣ ಚಿಂತಾಮಣಿಯಲ್ಲಿ ನೆರವೇರಿತು. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ; ಮತ್ತು ಬಿ.ಎಡ್.‌ ಪದವಿಗಳನ್ನೂ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ; ಪದವಿಯನ್ನೂ ಗಳಿಸಿದರು.

ಬರವಣಿಗೆ ಚಿಕ್ಕವಯಸ್ಸಿನಲ್ಲೇ

ಬದಲಾಯಿಸಿ

ಇನ್ನು ಕಾಲೇಜಿನಲ್ಲಿ ಓದುತ್ತಿರುವಾಗಲೇ, ಲಕ್ಷ್ಮಣರಾವ್, ಹಲವಾರು ಕವನಗಳನ್ನು ಬರೆದರು. ಅವೆಲ್ಲಾ 'ಲಹರಿ', 'ಗೋಕುಲ', 'ಸಂಕ್ರಮಣ' ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ನವ್ಯ ಸಾಹಿತ್ಯದ ಚಳವಳಿ ಮೊದಲುಗೊಂಡು, 'ಚುಟುಕು', 'ವಿಡಂಬನೆ', ಭಾವಗೀತೆ' ಮತ್ತು ಇತರ ಎಲ್ಲ ಪ್ರಕಾರಗಳಲ್ಲಿಯೂ ಕವಿತೆ ಬರೆಯುತ್ತಾ ಬಂದಿದ್ದಾರೆ. 'ಅವರ ಕವಿತೆಯ ಕೆಲವು ಸಾಲುಗಳು : ನಾನಾಗಬೇಕು ರೈತನ ಬಂಧು ಒಂದು ಮಣ್ಣುಹುಳ.

ಮಾನವತೆಯ ಕಟ್ಟಡಕ್ಕೆ ಪ್ರೀತಿಯೊಂದೇ ಇಟ್ಟಿಗೆ, ಇಟ್ಟಿಗೆಗಳ ಬೆಸೆಯಬೇಕು ಕರುಣೆ ಸ್ನೇಹದೊಟ್ಟಿಗೆ ಸುತ್ತ ನೋವು ನೀಗಿದಾಗ ನಿನ್ನ ನಗೆಗೂ ಅರ್ಥ ಇಲ್ಲದಿರಲು ನಿನ್ನ ಈ ಹತಾಶೆ ಕೂಡ ಸ್ವಾರ್ಥ

ಪ್ರೀತಿ ಪರಿಧಿಯಲಿ ನಮ್ಮ ಪರಿಭ್ರಮಣ, ಪ್ರೀತಿಯೆ ಪಥ ನಮಗೆ; ನೋವು ನಲಿವಿನಲಿ ಸದಾ ಉಳಿದಿರಲಿ ಈ ಪ್ರೀತಿಯ ಬೆಸುಗೆ.

ಗೆಳೆಯರಿರಲಿ ಈ ಬಾಳಿನಲಿ, ಗೆಳೆಯರಿರಲಿ ಕೊನೆ ತನಕ; ಹಗುರ ಹೃದಯ ತಿಳಿ ಮನಸಿರಲಿ, ನೀಗಿ ಎಲ್ಲ ತವಕ.

ಕವನ ಸಂಕಲನಗಳು

ಬದಲಾಯಿಸಿ
  • ಗೋಪಿ ಮತ್ತು ಗಾಂಡಲೀನ(೧೯೭೧)
  • ಟುವಟಾರ (೧೯೭೮)
  • ಲಿಲ್ಲಿಪುಟ್ಟಿಯ ಹಂಬಲ(೧೯೮೧)
  • ಶಾಂಗ್ರಿ-ಲಾ (೧೯೮೭)
  • ಅಪರಾಧಂಗಳ ಮನ್ನಿಸೊ(೧೯೯೨)
  • ನನ್ನಮಟ್ಟಿಗೆ (೨೦೧೪)
  • ಮತ್ತೆ ಲೋಲೀಟ (೨೦೧೮)(ಆಯ್ದ ಕವನಗಳು)
  • ನವೋನ್ಮೇಷ (೨೦೨೦)
  • ಕೋಲಂಬಸ್ (೧೯೮೫) (ಆಯ್ದ ಕವನಗಳು)
  • ಎಡೆ (೧೯೯೮)
  • ಇವಳು ನದಿಯಲ್ಲ (೨೦೦೩)
  • ಹನಿಗವಿತೆಗಳು (೨೦೦೬)
  • ಮಧ್ಯಸ್ಥ (೧೯೯೭) (ಆಯ್ದ ಕವನಗಳು)
  • ಕ್ಯಾಮೆರಾ ಕಣ್ಣು (೨೦೧೭) (ಸಮಗ್ರ ಕಾವ್ಯ)
  • ಬೆಸ್ಟ್ ಆಫ್ ಬಿ.ಆರ್.ಎಲ್ (೨೦೨೧) ಆಯ್ದ
 ಕವನಗಳು 
  • ಮನಸು ಬಾವಲಿಯಂತೆ (೨೦೨೧) ಅನುವಾದಿತ
 ಕವನಗಳು)

ಕಥಾ ಸಂಕಲನಗಳು

ಬದಲಾಯಿಸಿ
  • ಜೆಸ್ಟರ್.
  • ಕಬ್ಬೆಕ್ಕು.
  • ನಿರಂತರ
  • ಪ್ರೀತಿಯ ಬೆಳಕು (ಸಮಗ್ರ ಕಥಾ ಸಂಕಲನ)

ಕಾದಂಬರಿ

ಬದಲಾಯಿಸಿ
  • ಹೀಗೊಂದು ಪ್ರೇಮಕಥೆ

ನಾಟಕಗಳು

ಬದಲಾಯಿಸಿ
  • ಭಲೇಮಲ್ಲೇಶಿ
  • ನನಗ್ಯಾಕೋ ಡೌಟು
  • ಶೇಮ್ ಶೇಮ್ ರಾಜ
  • ಮೂರು ರಂಗ ರೂಪಾಂತರಗಳು

ಇತರೆ ಕೃತಿಗಳು

ಬದಲಾಯಿಸಿ
  • ಪಡಿಮಿಡಿತ (ಲೇಖನಗಳು))
  • ಲಿಬಿಡೊ ಬಿಡುವುದಿಲ್ಲ (ಬಿಡಿ ಬರಹಗಳು)
  • ಕವಿ(ತೆ)ಯ ಕತೆ (ಆಯ್ದ ಕವಿತೆಗಳ ಹಿನ್ನೆಲೆ)
  • ಹಾಡಿನ ಜಾಡು (ಆಯ್ದ ಭಾವಗೀತೆಗಳ ಹಿನ್ನೆಲೆ)
  • ಬಿನ್ನಹಕೆ ಬಾಯಿಲ್ಲವಯ್ಯ ( ಲೇಖನಗಳು)

ಅನುವಾದಗಳು

ಬದಲಾಯಿಸಿ
  • ರಜನೀಶ್ ನಿಜರೂಪ. (ಇಂಗ್ಲೀಷ್ ಮೂಲ ಹ್ಯೂಮಿಲೇನ್)

ಭಾವಗೀತೆಗಳ ಕ್ಯಾಸೆಟಗಳು

ಬದಲಾಯಿಸಿ
  • ಸುಬ್ಬಾಭಟ್ಟರ ಮಗಳೇ (೨೦೦೫)
  • ಆಲಿಂಗನ
  • ಹೇಳಿಹೋಗು ಕಾರಣ

ಅಂಕಣ ಬರಹಗಳು

ಬದಲಾಯಿಸಿ
  • ಒಡನಾಟ (ಮಯೂರ ಮಾಸ ಪತ್ರಿಕೆ)

ಸಂಪಾದನೆ

ಬದಲಾಯಿಸಿ
  • ಕನ್ನಡ ಕವಿಕಾವ್ಯ ಕುಸುಮ-೪೨(ಇತರರೊಂದಿಗೆ)

ಅಭಿನಂದನ ಗ್ರಂಥಗಳು

ಬದಲಾಯಿಸಿ
  • ಚಿಂತಾಮಣಿ (೨೦೦೬)
  • ಗೆಳೆಯ ಲಕ್ಷ್ಮಣ:(೨೦೨೧)

ಪ್ರಶಸ್ತಿ,ಬಹುಮಾನಗಳು

ಬದಲಾಯಿಸಿ
  • ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ,
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,
  • ಗೊರೂರು ಸಾಹಿತ್ಯ ಪ್ರಶಸ್ತಿ,
  • ಚುಟುಕು ರತ್ನ ಪ್ರಶಸ್ತಿ,
  • ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ,
  • ಡಾ.ಪು.ತಿ.ನ. ಕಾವ್ಯ ಪುರಸ್ಕಾರ,
  • ಆರ್ಯಭಟ ಪ್ರಶಸ್ತಿ,
  • ಮಾಸ್ತಿ ಪ್ರಶಸ್ತಿ
  • ಸಾಹಿತ್ಯ ಕಲ್ಪತರು ಪ್ರಶಸ್ತಿ

ಕಿರುತೆರೆಯ ಧಾರಾವಾಹಿಗಳಿಗೆ ಶೀರ್ಷಿಕೆ ಗೀತರಚನೆ

ಬದಲಾಯಿಸಿ
  • ಎದೆ ತುಂಬಿ ಹಾಡುವೆನು,
  • ಮಂಥನ ,
  • ನಮ್ಮಮ್ಮ ಶಾರದೆ,
  • ಬೃಂದಾವನ,
  • ಅಪ್ಪ,
  • ಅನಾವರಣ

ಬಾಹ್ಯ ಸಂಪರ್ಕ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ