ಬಿಲ್ಲುಗಾರ ಮೀನು
ಆರ್ಚರ್ ಫಿಶ್ (Archer Fish) ಎಂದು ಕರೆಯಲ್ಪಡುವ ಇದು ಮೀನಿನ ಒಂದು ಪ್ರಭೇದ. ತಮ್ಮ ವಿಶೇಷವಾದ ಬಾಯಿಯ ಮೂಲಕ ನೀರನ್ನು ಚಿಮ್ಮಿ ಕೀಟಗಳನ್ನು ಹೊಡೆದುರುಳಿಸುವ ಕಾರಣದಿಂದ ಇದಕ್ಕೆ ಈ ಹೆಸರು ಬಂದಿದೆ. ಇವು ಉಪ್ಪುನೀರು ಮತ್ತು ಸಿಹಿನೀರು ಸೇರುವಂತಹ ಜಾಗಗಳಲ್ಲಿ ಇರುತ್ತವೆ. ಸಾಮಾನ್ಯವಾಗಿ ನದಿಯ ನೀರು ಸಮುದ್ರದ ಅಲೆಗಳನ್ನು ಸೇರುವ ಜಾಗ ಹಾಗೂ ಮ್ಯಾಂಗ್ರೋವ್ ಗಳಲ್ಲಿ ವಾಸಿಸುತ್ತವೆ. ಇದಲ್ಲದೇ ಸಮುದ್ರದಲ್ಲಿ ಹಾಗೂ ಸಮುದ್ರದಿಂದ ದೂರವಿರುವ ಸಿಹಿನೀರಿನಲ್ಲೂ ಕಾಣಸಿಗುತ್ತವೆ.[೧] ಭಾರತ ಶ್ರೀಲಂಕಾದಿಂದ ಹಿಡಿದು ಉತ್ತರಆಸ್ಟೇಲಿಯಾ, ಮೆಲನೇಶಿಯ ತನಕದ ಪೂರ್ಣ ಆಗ್ನೇಯ ಏಶಿಯಾದಲ್ಲಿ ಇವೆ.
ಉಲ್ಲೇಖಗಳು
ಬದಲಾಯಿಸಿ- ↑ Arthington, A., and McKenzie, F. "Review of Impacts of Displaced/Introduced Fauna Associated with Inland Waters. Archived December 1, 2008, ವೇಬ್ಯಾಕ್ ಮೆಷಿನ್ ನಲ್ಲಿ." Environment Australia Archived April 25, 2009, ವೇಬ್ಯಾಕ್ ಮೆಷಿನ್ ನಲ್ಲಿ. Australia: State of the Environment Technical Paper Series (Inland Waters), Series 1, 1997. Accessed 2009-05-24.