ಬಿಡಾರಂ ಕೃಷ್ಣಪ್ಪ

ಕರ್ನಾಟಕ ಸಂಗೀತದ ವಿದ್ವಾಂಸರು

ಬಿಡಾರಂ ಕೃಷ್ಣಪ್ಪ (ಕ್ರಿ.ಶ.೧೮೬೬ - ೧೯೩೧)[೧] ಗಾನವಿಶಾರದ ಎಂದು ಬಿರುದು ಹೊಂದಿದ್ದ ಕೃಷ್ಣಪ್ಪನವರು ೧೮೬೬ ರಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರ ಹಿರಿಯರು ದಕ್ಷಿಣ ಕನ್ನಡಜಿಲ್ಲೆಯವರು. ಕರ್ನಾಟಕ ಸಂಗೀತದ ಬಹುದೊಡ್ಡ ವಿದ್ವಾಂಸರು. ಇವರ ಶಿಷ್ಯರಲ್ಲಿ ಟಿ.ಚೌಡಯ್ಯ, ಬಿ.ದೇವೇಂದ್ರಪ್ಪ ಮುಂತಾದವರು ಪ್ರಮುಖರು.[೨] ಬಿಡಾರಂ ಕೃಷ್ಣಪ್ಪ(೧೮೬೬-೧೯೩೧)ನಾಲ್ಮಡಿ ಕೃಷ್ಣರಾಜೇಂದ್ರ ಒಡೆಯರ ಆಸ್ಥಾನದಲ್ಲಿ ಕರ್ಣಾಟಕ ಸಂಗೀತ ವಿದ್ವಾಂಸರು, ಮತ್ತು ವಾಗ್ಗೇಯಕಾರರು ಸಹಿತ. ಚಾಮರಾಜ ಒಡೆಯರ (೧೮೬೨-೧೮೯೪) ಆಸ್ಥಾನದಲ್ಲಿಯೂ ತಮ್ಮ ಕೃತಿ ರಚನೆ ಹಾಗೂ ಸಂಗೀತದಿಂದ ಹೆಸರುವಾಸಿಯಾಗಿದ್ದರು.

'ಬಿಡಾರಂ' ಎಂಬ ಹೆಸರು ಬರಲು ಕಾರಣ

ಬದಲಾಯಿಸಿ
ಬಿಡಾರಂ ಕೃಷ್ಣಪ್ಪ

'ಮುಮ್ಮಡಿ ಕೃಷ್ಣರಾಜ ಒಡೆಯರ' ಕಾಲದಲ್ಲಿ ಒಂದು 'ಯಕ್ಷಗಾನ ತಂಡ' ಮೈಸೂರಿಗೆ ಆಗಮಿಸಿತ್ತು. ಅವರ ಪ್ರದರ್ಶನ ಕಂಡ ಮಹಾಸ್ವಾಮಿಗಳು ಅವರಲ್ಲಿ ಕೆಲವರನ್ನು ಮೈಸೂರಿನಲ್ಲಿಯೇ ಉಳಿಸಿಕೊಂಡು 'ಶಿವರಾಮ್ ಪೇಟೆ'ಯಲ್ಲಿ ಅವರಿಗೆ ಬಿಡಾರಗಳನ್ನು ಕಟ್ಟಿಸಿಕೊಟ್ಟರು. ಹೀಗೆ ಅಲ್ಲಿ ವಾಸಿಸುತ್ತಿದ್ದ ಕೃಷ್ಣಪ್ಪ,[೩] ಮತ್ತು ನಿವಾಸಿಗಳಿಗೆ 'ಬಿಡಾರದವರೆಂಬ ಹೆಸರು' ಬಂತು.

'ಕೃಷ್ಣಪ್ಪ', ಕೊಂಕಣಿ ಭಾಷೆ ಮಾತಾಡುವ 'ಗೌಡ ಸಾರಸ್ವತ ಬ್ರಾಹ್ಮಣ'ರ ಜಾತಿಯಲ್ಲಿ ಹೊಸ ಉಡುಪಿ ಜಿಲ್ಲೆಯ 'ನಂದಲಿಕ' ಊರಿನಲ್ಲಿ ಕ್ರಿ.ಶ. ೧೮೬೬ ರಲ್ಲಿ ಗೋಕುಲಷ್ಟಮಿಯ ದಿನ ಜನಿಸಿದರು. ಜನಿಸಿದ ಶಿಶುವಿಗೆ 'ಕೃಷ್ಣ'ನೆಂದು ನಾಮಕರಣವಾಯಿತು. ಚಿಕ್ಕ ವಯಸ್ಸಿನಲ್ಲೇ ತಂದೆಯವರ ದೇಹಾಂತವಾಯಿತು. ತಾಯಿಯ ಆಸರೆಯಲ್ಲಿ ಬಡತನದಲ್ಲಿ ಬೆಳೆದ ಕೃಷ್ಣ ಮತ್ತು ಅವನ ಅಣ್ಣನಿಗೆ ಹರಿದಾಸರ ಕೃತಿಗಳೇ ಜೀವನಕ್ಕೆ ಆಧಾರವಾಯಿತು. ದಿವವೂ ಭಿಕ್ಷಾಟಣೆಯಿಂದ ಜೀವನ ಸಾಗುತ್ತಿತ್ತು. ತಿಮ್ಮಯ್ಯನೆಂಬ ಸಾಹುಕಾರರ ಅನುಗ್ರಹದಿಂದ ಸಂಗೀತ ಕಲಿಯಲು ಪ್ರಯತ್ನ ನಡೆಯಿತು. ಆಗಿನ ಕಾಲದ ಸುಪ್ರಸಿದ್ಧ ಸಂಗೀತ ವಿದ್ವಾಂಸ, ಕರೂರು ರಾಮಸ್ವಾಮಿಯವರಲ್ಲಿ ಶಿಷ್ಯವೃತ್ತಿಯನ್ನು ಪ್ರಾರಂಭಿಸಿದರು. ಸಾಹುಕಾರ ತಿಮ್ಮಯ್ಯನವರ ಹಣದ ಆಸರೆ ಮತು ಬಿಡಾರದಲ್ಲಿ ವಾಸ, ನಡೆಯುತ್ತಿತ್ತು. ಸಾಹುಕಾರ ತಿಮ್ಮಯ್ಯ ನವರ ಪ್ರಯತ್ನದಿಂದ ಮೈಸೂರರಮನೆಯಲ್ಲಿ ಸಂಗೀತ ವಿದ್ವಾಂಸರಾಗಿ ನೇಮಕಗೊಂಡರು. ಗಾನವಿಶಾರದರೆಂದು ಅರಮನೆಯಲ್ಲಿ ಪ್ರಸಿದ್ಧಿಹೊಂದಿದ್ದಲ್ಲದೆ, ನಟನೆಯಲ್ಲೂ ಒಳ್ಳೆಯ ಕೌಶಲ್ಯವನ್ನು ಹೊಂದಿದ್ದರು.ಕನ್ನಡ ಭಾಷೆಯಲ್ಲಿ ಹರಿದಾಸ ಕೃತಿಗಳಿಗೆ ವಿಶೇಷ ಮಹತ್ವವನ್ನು ಕೊಟ್ಟು, ಜನಪ್ರಿಯರಾದರು. ಬಿಡಾರಂ ಕೃಷ್ಣಪ್ಪನವರಿಗೆ ಶ್ರೀ ತ್ಯಾಗರಾಜರು,ಶ್ಯಾಮಾಶಾಸ್ತ್ರಿಗಳು ಹಾಗೂ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳ ಬಗ್ಗೆ ಗೌರವವಿತ್ತು. ಆದರೆ,ಹೆಚ್ಚಿನ ಒಲವು, ಸಂಗೀತ ಪಿತಾಮಹ ಶ್ರೀ ಪುರುಂದರ ದಾಸರ,ವ್ಯಾಸತೀರ್ಥರ,ವಾದಿರಾಜರ,ಹಾಗೂ ಕನಕದಾಸರಿಂದ ರಚಿತವಾದ ಅನುಪಮ ಕನ್ನಡ ಕೃತಿಗಳನ್ನು ಕಂಡರೆ ಪ್ರಾಣ. ಹೀಗೆ ಕನ್ನಡಕ್ಕಾಗಿ ವಿಶಿಷ್ಟಸೇವೆ ಸಲ್ಲಿಸಿದರು. ಕೆಲಕಾಲ, ವೀಣೆ ಶೇಷಣ್ಣನವರ ಬಳಿ ಸಂಗೀತವನ್ನು ಅಭ್ಯಾಸಮಾಡಿದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಶೈಲಿಯನ್ನು ದೇವರನಾಮಗಳಿಗೆ ಬಳಸಿ ವೇಕಿಕೆಯ ಮೇಲೆ ಹಾಡಿ ಜನಪ್ರಿಯಮಾಡಿದರು. ದೇವರ ನಾಮಗಳನ್ನು ಹಾಡುವುದಲ್ಲ್ದೆ ಕೃತಿರಚನೆಯನ್ನೂ ಮಾಡಿದರು.

'ಬಿಡಾರಂ ಕೃಷ್ಣಪ್ಪನವರು', ೧೯೩೧ ನೆಯ ಇಸವಿ,ಮಾರ್ಚ್ ತಿಂಗಳ ೨೯ ರಂದು ದೈವಾಧೀನರಾದರು. .

ಪ್ರಶಸ್ತಿಗಳು

ಬದಲಾಯಿಸಿ
  1. ಶುದ್ಧ ಸ್ವರಾಚಾರ್ಯ,
  2. ಪಲ್ಲವಿ ಕೃಷ್ಣಪ್ಪ,
  3. ಗಾನ ವಿಶಾರದ,

ಶಿಷ್ಯರು

ಬದಲಾಯಿಸಿ

ಪಿಟೀಲುವಾದಕ,ಟಿ ಚೌಡಯ್ಯ

ಉಲ್ಲೇಖಗಳು

ಬದಲಾಯಿಸಿ
  1. ಕಣಜ, ಬಿಡಾರಂ ಕೃಷ್ಣಪ್ಪ[ಶಾಶ್ವತವಾಗಿ ಮಡಿದ ಕೊಂಡಿ]
  2. "ಕನ್ನಡ ಪ್ರಭ, 16, may, 2014, 'ಬಿಡಾರಂ ಕೃಷ್ಣಪ್ಪ ಕಟ್ಟಿಸಿದ ರಾಮ ಮಂದಿರ'". Archived from the original on 2014-08-01. Retrieved 2014-11-16.
  3. ,ನೇಸರು ಪತ್ರಿಕೆ,ಪುಟ-೧೧, Nov, 2014, ಬಿಡಾರಂ ಕೃಷ್ಣಪ್ಪ-ಗಾಯನ ವಿದ್ವಾಂಸರು