ಬಾ. ಸಾಮಗ
'ನವದೆಹಲಿಯ ಕನ್ನಡ ಪತ್ರಿಕೆ', 'ದೆಹಲಿ ಕನ್ನಡಿ'ಗ,ದ ಸಂಪಾದಕ, 'ಬಾ. ಸಾಮಗ'ರವರು, ಹೊರನಾಡಿನಲ್ಲಿ ಕನ್ನಡ ನಾಡು, ನುಡಿ, ಸಾಹಿತ್ಯ,, ಸಂಸ್ಕೃತಿಯ ಅಭಿವೃದ್ಧಿಗಾಗಿ ಸೊಂಟಕಟ್ಟಿ ದುಡಿಯುತ್ತಿರುವ ಕನ್ನಡಿಗರಲ್ಲಿ ಪ್ರಮುಖರು. ಈಗಾಗಲೇ ೩ ದಶಕಗಳಿಂದ ಈ ಪತ್ರಿಕೆ ನಡೆದು ಬರುತ್ತಿದೆ. ೩೦ ನೆಯ ರಾಷ್ಟ್ರೀಯ ಕನ್ನಡ ಸಮ್ಮೇಳನ ೨೦೧೩ ರ ಏಪ್ರಿಲ್, ೬-೭ ರಂದು ಜರುಗಲಿದ್ದು, ಬಾ.ಸಾಮಗರನ್ನು ಅಭಿನಂದಿಸಲು ಸಿದ್ಧತೆ ನಡೆಯುತ್ತಿದೆ. ಈ ಸಮಯದಲ್ಲಿ 'ಸಾಮಗರ ಅಭಿನಂದನಾ ಗ್ರಂಥ'ವನ್ನು ಹೊರತರಲು ನಿರ್ಧರಿಸಲಾಗಿದೆ.
ಒಳ್ಳೆಯ ಸಂಘಟಕ
ಬದಲಾಯಿಸಿ'ದೆಹಲಿ ಕನ್ನಡಿಗ ಪತ್ರಿಕೆ'ಯ ಆಶ್ರಯದಲ್ಲಿ ಕನ್ನಡಕ್ಕೆ ಇನ್ನೂ ಹೆಚ್ಚಿನ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾನ್ಯತೆ, ಕನ್ನಡಿಗರಿಗೆ ಎಲ್ಲಾ ರಂಗಗಳಲ್ಲಿ ನ್ಯಾಯ ಒದಗಿಸಲು ಹೊಸದಿಲ್ಲಿಯಲ್ಲಿ ಇದುವರೆವಿಗೆ, ೨೯ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕನ್ನಡ ಸಮ್ಮೇಳನಗಳನ್ನು ಯಶಸ್ವಿಯಾಗಿ ಏರ್ಪಡಿಸಿದ ಶ್ರೇಯ, ಬಾ. ಸಾಮಗರವರದು. ಇದಲ್ಲದೆ ಮುಂಬಯಿ ಸಮೇತ ಹೊರನಾಡಿನಲ್ಲಿ ೧೦ ಅಖಿಲ ಭಾರತ ಕನ್ನಡ ಸಾಹಿತ್ಯ ಸಂಸ್ಕೃತಿ ಸಮ್ಮೇಳನಗಳನ್ನು ಆಯೋಜಿಸಿ, ೧೫ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ನೂರಾರು ಲೇಖನಗಳನ್ನೂ ಬರೆದಿದ್ದಾರೆ. ಹೊರನಾಡು ಕನ್ನಡಾಭಿವೃದ್ಧಿಗಾಗಿ ಸಾಮಗರನ್ನು ಗೌರವಿಸಲಾಯಿತು.
ಪ್ರಶಸ್ತಿಗಳು
ಬದಲಾಯಿಸಿ- ಸನ್. ೨೦೧೦ ರಲ್ಲಿ ಗದಗಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜರುಗಿದ, '೭೬ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ'ದಲ್ಲಿ ಸನ್ಮಾನಿಸಲಾಯಿತು.