ಬಾಸ್ಕೆಟ್‌ಬಾಲ್ ಮೈದಾನ

ಬಾಸ್ಕೆಟ್‌ಬಾಲ್‌ನಲ್ಲಿ, ಬಾಸ್ಕೆಟ್‌ಬಾಲ್ ಮೈದಾನ ವು ಆಟವಾಡುವ ಅಂಗಣ, ಆಯತಾಕಾರದ ಮೈದಾನದಲ್ಲಿ ಎರಡೂ ಪಕ್ಕದಲ್ಲಿ ಬಾಸ್ಕೆಟ್‌ಗಳಿರುತ್ತವೆ. ಅಧಿಕೃತವಾದ ಅಥವಾ ಸಂಘಟಿತ ಬಾಸ್ಕೆಟ್‌ಬಾಲ್, ವಿಶೇಷವಾಗಿ ಒಳಾಂಗಣದಲ್ಲಿ ಆಡುವಾಗ, ಸಾಮಾನ್ಯವಾಗಿ ಗಟ್ಟಿಮರದಿಂದ ಮಾಡಿರಲಾಗುತ್ತದೆ, ಹೆಚ್ಚಾಗಿ ಮೇಪಲ್ ಮರದ ದಾರುವಿನಿಂದ ಮಾಡಿ ನಯವಾಗಿ ಹೊಳಪು ನೀಡಲಾಗಿರುತ್ತದೆ. ಇತರೆ ಒಳಾಂಗಣ ಮೇಲ್ಮೈಯಲ್ಲಿ ತೂಗುಹಾಕಿರುವಂತಹ ಒಂದರೊಳಗೊಂದನ್ನು ತಳಕು ಹಾಕಿದ ಪ್ಲಾಸ್ಟಿಕ್‌ನ ಚಪ್ಪಟೆಯಾಕಾರದ ತುಂಡುಗಳನ್ನು ಜೋಡಿಸಲಾಗಿರುತ್ತದೆ. ಹೊರಾಂಗಣ ಮೇಲ್ಮೈಗಳು ಪ್ಲಾಸ್ಟಿಕ್‌ನ ಒಂದರೊಳಗೊಂದು ತಳಕು ಹಾಕಿದ ಚಪ್ಪಟೆ ತುಂಡುಗಳನ್ನು ಹೊಂದಿರುತ್ತವೆ (ಕ್ರೀಡೆಯ ಮೈದಾನಗಳು), ಆಸ್ಫಾಲ್ಟ್, ಬ್ಲ್ಯಾಕ್‌ಟಾಪ್, ಅಥವಾ ಅದೇ ರೀತಿಯ ವಸ್ತುಗಳನ್ನು ಬಳಸಲಾಗಿತ್ತು. ಹವ್ಯಾಸಿ ಆಟಗಾರರು ವಿಶೇಷವಾದ ಟರ್ಮ್ಯಾಕ್‌ ಮೇಲ್ಮೈಯನ್ನು ಬಳಸಬಹುದು.

ನ್ಯಾಷನಲ್ ಬಾಸ್ಕೆಟ್ ಬಾಲ್ ಸಂಘದ ಮಿನ್ನೆಸೊಟ ಟಿಂಬೆರ್‌ವೋಲ್ವ್‌ನ ಹೋಮ್ ಮೈದಾನ

ಆಟದ ಮುಖ್ಯ ಉದ್ದೇಶವೆಂದರೆ ಚೆಂಡನ್ನು ಮೈದಾನದ ಇನ್ನೊಂದು ಬದಿಯ ದುಂಡಗಿನ ಬಳೆಯಲ್ಲಿ ಹಾಕಬೇಕು. ಈ ಆಟವನ್ನು ಮೊದಲು ಕಂಡುಹಿಡಿದಾಗ ನಿಜವಾದ ಬಾಸ್ಕೆಟ್‌ಗಳನ್ನು ಬಳಸಲಾಗಿತ್ತು. ಡಾ. ಜೇಮ್ಸ್‌ ನೈಸ್ಮಿತ್‌ರ ಮೂಲ ನಿಯಮಗಳಲ್ಲಿ ನಮೂದಿಸಿರುವಂತೆ "ಇನ್ನೊಂದು ಬದಿಯಿಂದ ಚೆಂಡನ್ನು ಬಾಸ್ಕೆಟ್‌ನೊಳಗೆ ಹಾಕಿದಾಗ ಅದರ ಜಾಗ ಕದಲದೆ ಹಾಗೇ ಇದ್ದಾಗ ಮಾತ್ರ ಅದನ್ನು ಗೋಲ್ ಎಂದು ಆಗುವುದು." [೧] ಆದರೆ, ಇದರಲ್ಲಿ ಚೆಂಡನ್ನು ಬಾಸ್ಕೆಟ್‌ನೊಳಗೆ ಹಾಕುವುದು ಹಾಗೂ ಬಾಸ್ಕೆಟ್‌ನಿಂದ ಬಾಲನ್ನು ಪ್ರತಿಬಾರಿ ತೆಗೆಯುವುದು ಅನಾನುಕೂಲವನ್ನುಂಟು ಮಾಡಿತು, ಆದ್ದರಿಂದ ಅತಿ ಶೀಘ್ರದಲ್ಲಿ ಬಾಸ್ಕೆಟ್‌ ಬದಲಿಗೆ ಲೋಹದ ಬಳೆಗಳನ್ನು ಬಳಸಲಾಯಿತು (ಚೆಂಡು ನೇರವಾಗಿ ಕೆಳಗೆ ಬೀಳುವಂತೆ ಸಾಮಾನ್ಯವಾಗಿ ಇದರ ಜೊತೆಗೆ ನೇತಾಡುವ ಬಲೆಯನ್ನು ಸೇರಿಸಲಾಗುತ್ತದೆ.) ಬಳೆಗಳನ್ನು ಆಯತಾಕಾರದ (ಕೆಲವುಸಲ ಫ್ಯಾನು ಆಕಾರದ) ಬ್ಯಾಕ್‌ಬೋರ್ಡ್‌ಗಳಿಗೆ ಜೋಡಿಸಲಾಗಿದ್ದು, ಈ ಬ್ಯಾಕ್‌ಬೋರ್ಡ್‌ಗಳನ್ನು ಲೋಹ, ಫೈಬರ್‌ಗಾಜು, ಆಕ್ರಿಲಿಕ್, ಅಥವಾ ಹದಗೊಳಿಸಿದ ಗಾಜಿನಿಂದ ಮಾಡಲಾಗುತ್ತದೆ.

ಬಾಸ್ಕೆಟ್‌ಬಾಲ್ ಮೈದಾನವು ವಿಭಿನ್ನ ಆಕಾರಗಳಲ್ಲಿ ಮತ್ತು ಗಾತ್ರಗಳಲ್ಲಿ ಇರುತ್ತದೆ. ‍ಎನ್‌.ಬಿ.ಎ.ಯಲ್ಲಿ,ಮೈದಾನವು 94 ಅಡಿ by 50 ಅಡಿ (28.65 ಮೀ by 15.24 ಮೀ) ಇರುತ್ತದೆ. ಇಂಟರ್ನ್ಯಾಷನಲ್ ಬಾಸ್ಕೆಟ್‌ಬಾಲ್ ಫೆಡೆರೇಷನ್ (ಎಫ್‌ಐಬಿಎ) ನಿಯಮಗಳ[೨] ಅಡಿಯಲ್ಲಿ, ಮೈದಾನವು ಸ್ವಲ್ಪ ಮಟ್ಟಿಗೆ ಚಿಕ್ಕದಾಗಿದ್ದು, ನಿಖರವಾಗಿ 28 ಮೀ by 15 ಮೀ (91'10.4" by 49'2.6") ಅಳತೆಯನ್ನು ಹೊಂದುತ್ತದೆ, ಅದಾಗ್ಯೂ ರಾಷ್ಟ್ರೀಯ ಒಕ್ಕೂಟಗಳು ಚಿಕ್ಕ ಮೈದಾನಗಳನ್ನು ಉಪಯೋಗಿಸುವ ಅನುಮತಿಯನ್ನು ಪಡೆದಿವೆ, ಆದರೆ ಅವು ಕೊನೆಯ ಪಕ್ಷ 26 ಮೀ by 14 ಮೀ (85'3.6" by 45'11.2") ಅಳತೆಯನ್ನು ಹೊಂದಿರಬೇಕು. ಪ್ರೌಢ ಶಾಲೆಯ ಮೈದಾನಗಳು ಸ್ವಲ್ಪ ಮಟ್ಟಿಗೆ ಚಿಕ್ಕದಾಗಿದ್ದು, 84' by 50' ಅಳತೆಯನ್ನು ಹೊಂದಿರುತ್ತವೆ ಮತ್ತು ಕೆಲವು ಪ್ರಾಥಮಿಕ ಶಾಲೆಗಳು 74' x 42' ಅಳತೆಯ ಮೈದಾನಗಳನ್ನು ಹೊಂದಿರುತ್ತವೆ. ಹವ್ಯಾಸಿ ಬಾಸ್ಕೆಟ್‌ಬಾಲ್‌ನಲ್ಲಿ, ಮೈದಾನದ ಗಾತ್ರಗಳು ಬಹಳ ಭಿನ್ನವಾಗಿರುತ್ತವೆ. ಬಾಸ್ಕೆಟ್‌ಗಳು ಯಾವಾಗಲು ನೆಲದಿಂದ 10' (3.05m) ಎತ್ತರದಲ್ಲಿರುತ್ತವೆ (ಬಹುಶಃ ತರುಣರ ಸ್ಫರ್ಧೆಯಲ್ಲಿ ಹೊರತುಪಡಿಸಿ).

ಬ್ಯಾಸ್ಕೆಟ್‌ಬಾಲ್ ಮೈದಾನದ ಹಾಗೂ ಹಿಂಭಾಗದ ಹಲಗೆಯ ರೇಖಾಚಿತ್ರ ಬದಲಾಯಿಸಿ

ಅಂತರ್‌ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಒಕ್ಕೂಟ, ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಸಂಘ, ಮತ್ತು ರಾಷ್ಟ್ರೀಯ ಕಾಲೇಜುಮಟ್ಟದ ಕ್ರೀಡೆಯ ಸಂಘದ ನಿಯಮಗಳಿಂದ ಸೂಚಿಸಲಾದ ಲೇಔಟ್ (ನಾಕಾಸೆ). ಎನ್‌ಬಿಎ

ಆಯಾಮಗಳು ಬದಲಾಯಿಸಿ

ಕ್ಷೇತ್ರ ಎನ್‌ಬಿಎ ಎಫ್‌ಐಬಿಎ ಡಬ್ಲುಎನ್‌ಬಿಎ ಮೆನ್ಸ್ ಎನ್‌ಸಿಎ‌ಎ[೩] ವುಮೆನ್ಸ್ ಎನ್‌ಸಿಎ‌ಎ[೩] ಮತ್ತು ಯು.ಎಸ್.ಎಚ್.ಎಸ್ ಯು.ಎಸ್. ಜೂನಿಯರ್ ಎಚ್.ಎಸ್.
ಇಂಪೀರಿಯಲ್ ಮೆಟ್ರಿಕ್ ಇಂಪೀರಿಯಲ್ ಮೆಟ್ರಿಕ್ ಇಂಪೀರಿಯಲ್ ಮೆಟ್ರಿಕ್ ಇಂಪೀರಿಯಲ್ ಮೆಟ್ರಿಕ್ ಇಂಪೀರಿಯಲ್ ಮೆಟ್ರಿಕ್ ಇಂಪೀರಿಯಲ್ ಮೆಟ್ರಿಕ್
ಮೈದಾನದ ಉದ್ದ 94 ಅಡಿ 28.65 ಮೀ 91.86 ಅಡಿ 28 ಮೀ ಎನ್‌ಬಿಎ ಇರುವ ಹಾಗೆ 94 ಅಡಿ - ಎನ್‌ಸಿಎ‌ಎ, 84 ಅಡಿ ಎಚ್‌ಎಸ್ 25.6 ಮೀ 74 ಅಡಿ 22.56 ಮೀ
ಮೈದಾನದ ಅಗಲ 50 ಅಡಿ 15.24 ಮೀ 49.21 ಅಡಿ 15 ಮೀ ಎನ್‌ಬಿಎ ಇರುವ ಹಾಗೆ 42 ಅಡಿ 12.8 ಮೀ
ರಿಮ್‌ನ ಎತ್ತರ 10 ಅಡಿ 3–0 ಎನ್‌ಬಿಎ ಇರುವ ಹಾಗೆ
ಬಾಸ್ಕೆಟ್‌ನಿಂದ ಸೀಮಿತ ಪ್ರದೇಶಕ್ಕೆ ಇರುವ ದೂರ 4 ಅಡಿ 1.22 ಮೀ 4.10 ಅಡಿ 1.25 ಮೀ ಅಸ್ತಿತ್ವದಲ್ಲಿಲ್ಲ
ವೃತ್ತದ ಕೇಂದ್ರದ ವ್ಯಾಸ 12 ಅಡಿ 3.66 ಮೀ 11.81 ಅಡಿ 3.6 ಮೀ ಎನ್‌ಬಿಎ ಇರುವ ಹಾಗೆ
ಬಾಸ್ಕೆಟ್‌ನಿಂದ 3-ಪಾಯಿಂಟ್ ರೇಖೆಗೆ ಇರುವ ದೂರ 23.75 ಅಡಿ
22 ಅಡಿ ಪಕ್ಕಗಳು
7.24 ಮೀ
6.70 ಮೀ
20.5 ಅಡಿ
22.15 ಅಡಿ (Oct. 2010ರಿಂದ
6.25 ಮೀ
6.75 ಮೀ , ಅಡಿ ರೇಖೆ 6.60ಮೀ ಅಕ್ಟೋಬರ್. 2010ರಿಂದ)
20.5 ಅಡಿ 6.25 ಮೀ 20.75 ಅಡಿ 6.32 ಮೀ 19.75 ಅಡಿ 6.01 ಮೀ ಪ್ರೌಢಶಾಲೆಯಲ್ಲಿರುವ ಹಾಗೆ
ಕೀ (ಮಬ್ಬಾದ ಕಿರುದಾರಿ ಅಥವಾ
ಸೀಮಿತ ಪ್ರದೇಶ) ಅಗಲ
ಎಫ್‌ಟಿ ರೇಖೆ 16 ಅಡಿ 4.88 ಮೀ 11.81 ಅಡಿ 3.6 ಮೀ ಎನ್‌ಬಿಎ ಇರುವ ಹಾಗೆ 12 ಅಡಿ 3.66 ಮೀ ಎನ್‌ಸಿಎ‌ಎ ಇರುವ ಹಾಗೆ
ಅಂತಿಮ ರೇಖೆ 19.69 ಅಡಿ 5 ಮೀ
ಬ್ಯಾಕ್‌ಬೋರ್ಡ್‌ನಿಂದ ಫ್ರೀ-ತ್ರೋ ರೇಖೆಯವರೆಗಿನ ದೂರ 15 ಅಡಿ 4.57 ಮೀ 15.09 ಅಡಿ 4.6 ಮೀ ಎನ್‌ಬಿಎ ಇರುವ ಹಾಗೆ
  • ಎನ್‌ಬಿಎ ಮೂರು-ಪಾಯಿಂಟ್ ರೇಖೆಯು, ಅಡಿ ರೇಖೆಯಲ್ಲಿ ಪ್ರಾರಂಭವಾಗುವ ಮತ್ತು ಇದು ವೃತ್ತಖಂಡವನ್ನು 23 ft 9 in (7.24 m) ದಾಟಿದಾಗ ಮುಕ್ತಾಯವಾಗುವ ಕ್ಷೇತ್ರದಲ್ಲಿನ ಉದ್ದಸಾಲಿನಿಂದ 3 ಅಡಿ (0.91 ಮೀ) ಇರುತ್ತದೆ. 22 ft (6.7 m) ಅಳತೆಯು, ಅಡಿ ರೇಖೆಗೆ ಸಮಾಂತರದ ರೇಖೆಯು ಮೈದಾನದ ಉದ್ದನೆಯ ಅಕ್ಷರೇಖೆಯನ್ನು ಮತ್ತು ಬಾಸ್ಕೆಟ್‌ನ ಮಧ್ಯಭಾಗವನ್ನು ಛೇದಿಸಿದಾಗ ಮಾತ್ರ ಅನ್ವಯವಾಗುತ್ತದೆ.

ಬಾಸ್ಕೆಟ್‌ಬಾಲ್ ಮೈದಾನದ ವಿಭಾಗಗಳು ಬದಲಾಯಿಸಿ

ಮಧ್ಯದ ವೃತ್ತ ಬದಲಾಯಿಸಿ

ಗುಟ್ಟಿನಸುಳಿವು ನೀಡುವ ಪುರ್ವ ಈ ಪ್ರದೇಶವನ್ನು ಪ್ರವೇಶಿಸಲು ಅನುಮತಿ ಪಡೆದ ಕೇವಲ ಇಬ್ಬರು ಆಟಗಾರರು ಚೆಂಡನ್ನು ಲಂಘಿಸುವ ಸ್ಫರ್ಧಾಳುಗಳು (ಸಾಮಾನ್ಯವಾಗಿ ಆದಾರೆ ಯಾವಾಗಲು ಅಲ್ಲ). ನ್ಯಾಯವಿಮರ್ಶಕ ಚೆಂಡನ್ನು ಗಾಳಿಯಲ್ಲಿ ಎಸೆದಾಗ, ಈ ಇಬ್ಬರು ಚೆಂಡನ್ನು ತಮ್ಮ ತಂಡದ ಆಟಗಾರರ ಕೈಗೆ ತಳ್ಳಲು ಜಿಗಿಯುತ್ತಾರೆ.

ಮೂರು-ಪಾಯಿಂಟ್ ರೇಖೆ ಬದಲಾಯಿಸಿ

ಎರಡು-ಪಾಯಿಂಟ್ ಪ್ರದೇಶವನ್ನು ಮೂರು-ಪಾಯಿಂಟ್ ಪ್ರದೇಶದಿಂದ ಪ್ರತ್ಯೇಕಿಸುವ ರೇಖೆಯೇ ಮೂರು-ಪಾಯಿಂಟ್ ರೇಖೆ; ಈ ರೇಖೆಯ ಆಚೆ ಪರಿವರ್ತನೆಯಾದ ಯಾವುದೇ ಷಾಟ್ (ಏಟು) ಮೂರು ಪಾಯಿಂಟ್‌‍‌ಗಳನ್ನು ಪಡೆಯುತ್ತದೆ. ಒಂದು ವೇಳೆ ಎಸೆಯುವ ಆಟಗಾರ ರೇಖೆಯ ಮೇಲೆ ಹೆಜ್ಜೆಯನ್ನು ಇಟ್ಟಿದ್ದರೆ, ಅದನ್ನು ಎರಡು ಪಾಯಿಂಟ್‌ಗಳೆಂದು ಪರಿಗಣಿಸಲಾಗುವುದು. ಮೂರು-ಪಾಯಿಂಟ್ ರೇಖೆಯಿಂದ ಆಚೆಗೆ ಎಸೆಯುವ ಕಾರ್ಯದಲ್ಲಿ ಆವುದೇ ಉಲ್ಲಘನೆಯಾದಾಗ, ಎಸೆತವು ಒಳಗೆ ಹೋಗದಿದ್ದರೆ ಆಟಗಾರನಿಗೆ ಮೂರು ಉಚಿತ ಎಸೆತಗಳ ಅವಕಾಶ ಮತ್ತು ಒಂದು ವೇಳೆ ಒಳಗೆ ಹೋಗಿದ್ದರೆ ಒಂದು ಉಚಿತ ಅವಕಾಶವನ್ನು ನೀಡಲಾಗುವುದು.

ಬಾಸ್ಕೆಟ್ ಮಧ್ಯಭಾಗದಿಂದ ಮೂರು-ಪಾಯಿಂಟ್‌ವರೆಗು ಇರುವ ದೂರವು, ಹಂತದ ಅಥವಾ ಒಕ್ಕೂಟದ ಆಧಾರದ ಮೇಲೆ ಬದಲಾಗುತ್ತದೆ, ಮತ್ತು ಅನೇಕಬಾರಿ ಬದಲಾಯಿಸಲಾಗಿದೆ. ಒಕ್ಕೂಟ ಅಥವಾ ಹಂತಗಳು ಪ್ರಸ್ತುತ ಉಪಯೋಗಿಸುವ ಪ್ರತಿಯೊಂದು ಅಂತರಗಳು ಈ ಕೆಳಗೆ ಸೂಚಿಸಿದಂತಿವೆ:

19.75 feet (6.02 m): ಎನ್‌ಸಿಎ‌ಎ (ಮಹಿಳೆ), ಪ್ರೌಢ ಶಾಲೆ

20.5 feet (6.2 m): ಅಂತರರಾಷ್ಟ್ರೀಯ, ಡಬ್ಲುಎನ್‌ಬಿಎ

20.75 feet (6.32 m): ಎನ್‌ಸಿಎ‌ಎ (ಪುರುಷ)

22 feet (6.7 m) ದಿಂದ 23.75 feet (7.24 m): ಎನ್‌ಬಿಎ

ಎನ್‌ಬಿಎ ಮೂರು-ಪಾಯಿಂಟ್ ರೇಖೆಯನ್ನು 1979-80 ಸೀಸನ್‌ನಲ್ಲಿ ಅಳವಡಿಸಿಕೊಂಡಿದೆ. ಇದು ಒಂದು ಮಾರ್ಪಡಿಸಲಾಗುವ ಅಂತರವಾಗಿದ್ದು, ಮಧ್ಯಭಾಗಗಳಲ್ಲಿ 22 feet (6.7 m) ದಿಂದ ತುದಿಯ ಕೀ ಯಿಂದ ಆಚೆ 23.75 feet (7.24 m) ವರೆಗಿನ ಶ್ರೆಣಿಯನ್ನು ಹೊಂದಿರುತ್ತದೆ. 1994–95, 1995–96, ಮತ್ತು 1996-97 ಸೀಸನ್‌‌ಗಳ ಸಮಯದಲ್ಲಿ, ಎನ್‌ಬಿಎ ಸಮಗ್ರ ಅಂತರವನ್ನು ಬಾಸ್ಕೆಟ್‌ನ ಸುತ್ತ 22 feet (6.7 m) ಒಂದೇ ರೀತಿಯಲ್ಲಿ ಚಿಕ್ಕದಾಗಿಸುವುದರ ಮೂಲಕ ತಗ್ಗಿದ ಅಂಕಗಳನ್ನು ಸಂಭೋದಿಸುವ ಪ್ರಯತ್ನವನ್ನು ಮಾಡಿದೆ. 1996-97ರ ಸೀಸನ್‌ ನಂತರ ಇದನ್ನು ಇದರ ಮೂಲ ಸ್ಥಿತಿಗೆ ಮರಳಿತರಲಾಯಿತು.

ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಕಾಲೇಜು ಬಾಸ್ಕೆಟ್‌ಬಾಲ್‌ಗಳಲ್ಲಿ ಹಾಗು ಬಹುತೇಕ ಪ್ರೌಢ ಶಾಲೆ ಒಕ್ಕೂಟಗಳಲ್ಲಿ, ಅಂತರವು 19.75 ಅಡಿ ಇರುತ್ತದೆ. ಮೇ 26, 2007ರಂದು, ಎನ್‌ಸಿಎ‌ಎ ಆಟಾಅಡುವ ನಿಯಮಗಳ ಸಮಿತಿಯು ಪುರುಷರಿಗಾಗಿ ಮೂರು-ಪಾಯಿಂಟ್ ರೆಖೆಯನ್ನು ಒಂದು ಅಡಿ ಹಿಂದಕ್ಕೆ ಸರಿಸಿ ಅಂತರವನ್ನು 20.75 ಅಡಿ ಮಾಡಲು ಅಂಗೀಕರಿಸಿದೆ. ಈ ನಿಯಮವನ್ನು 2008-2009ರ ಸೀಸನ್‌ನಲ್ಲಿ ಆಚರಣೆಯಲ್ಲಿಡಲಾಯಿತು. ಮಹಿಳೆಯರಿಗಾಗಿ (ಎನ್‌ಸಿಎ‌ಎ) ಮೂರು-ಪಾಯಿಂಟ್ ರೇಖೆಯು 19.75 ಅಡಿ ಅಂತರದಲ್ಲೇ ಉಳಿಯಿತು.

ಯುನೈಟೆಡ್ ಸ್ಟೇಟ್ಸ್‌ನ ಹೊರಗೆ ಬಹುತೇಕ ದೇಶಗಳಲ್ಲಿ ಮತ್ತು ಎಫ್‌ಐಬಿಎ ಸ್ಫರ್ಧೆಗಳಲ್ಲಿ ಪ್ರಸ್ತುತ ಉಪಯೋಗಿಸಲಾಗುತ್ತಿದ್ದ ಅಂತರರಾಷ್ಟ್ರೀಯ ಅಂತರವು 20.5 ಅಡಿ (6.25 ಮೀ). ಡಬ್ಲುಎನ್‌ಬಿಎನ ಅಂತರವು ಸಹ ಇದೆ ಆಗಿದೆ.

ಸುತ್ತಳತೆ ಬದಲಾಯಿಸಿ

ಸುತ್ತಳತೆಯನ್ನು ಬಾಸ್ಕೆಟ್‌ಗೆ ಅತ್ಯಂತ ದೂರದಲ್ಲಿರುವ ಆದರೆ ಉಚಿತ ಎಸೆತ ಪಥದ ಹೊರಗಿನ ಮತ್ತು ಮೂರು-ಪಾಯಿಂಟ್ ರೇಖೆಯ ಒಳಗಿರುವ ಪ್ರದೇಶವನ್ನಾಗಿ ವ್ಯಾಖ್ಯಾನಿಸಲಾಗುವುದು. ಈ ಪ್ರದೇಶದಲ್ಲಿ ಪರಿವರ್ತಿಸಲಾದ ಷಾಟ್‌ಗಳನ್ನು "ಸುತ್ತಳತೆಯ ಷಾಟ್ಸ್" ಅಥವಾ "ಮಧ್ಯಮ-ಶ್ರೇಣಿಯ ಷಾಟ್ಸ್" ಎಂದು ಕರೆಯಲಾಗುತ್ತದೆ.

ಲೋ ಪೋಸ್ಟ್ ಪ್ರದೇಶ ಬದಲಾಯಿಸಿ

ಲೋ ಪೋಸ್ಟ್‌ನ್ನು ಬಾಸ್ಕೆಟ್‌ನ ಹತ್ತಿರದ ಆದರೆ ಉಚಿತ ಎಸೆತಗಳ ಪಥದ ಹೊರಗಿನ ಪ್ರದೇಶಗಳನ್ನಾಗಿ ವ್ಯಾಖ್ಯಾನಿಸಲಾಗುತ್ತದೆ.[೪] ಅಮೆರಿಕದ ಬಾಸ್ಕೆಟ್‌ಬಾಲ್‌ನಲ್ಲಿನ ಕೌಶಲ್ಯದಲ್ಲಿ ಈ ಪ್ರದೇಶವು ಅತ್ಯಗತ್ಯವಾದುದಾಗಿದೆ (ಅಂತರರಾಷ್ಟ್ರೀಯ ಬಾಸ್ಕೆಟ್‌ಬಾಲ್‌ನಲ್ಲಿ, ಪ್ರಸ್ತುತ ಕೀಯು ತ್ರಾಪಿಜ್ಯಾಕಾರದಲ್ಲಿದೆ, ಆದ್ದರಿಂದ ಲೋ ಪೋಸ್ಟ್ ಆಟವು ಪ್ರಖ್ಯಾತವಾದುದಲ್ಲ). ಪರಿಣಿತ ಲೋ ಪೋಸ್ಟ್ ಆಟಗಾರರು ಜಿಗಿತದ ಷಾಟ್ ಇಲ್ಲದೆನೆ ಹೆಚ್ಚಿನ ಅಂಕಗಳನ್ನು ಗಳಿಸಬಲ್ಲರು.

ಕೀ: ಬದಲಾಯಿಸಿ

ಕೀ ಅಥವಾ ನೆರಳಿನ ರೇಖೆಯು ಬಾಸ್ಕೆಟ್‌ನ ಕೆಳಗೆ ಹೆಚ್ಚಾಗಿ ಬಣ್ಣಹಚ್ಚುವ ಪ್ರದೇಶವನ್ನು ಸೂಚಿಸುತ್ತದೆ; ಎನ್‌ಬಿಎ ಗೆ, ಇದು 16 feet (4.9 m) ವಿಶಾಲವಾಗಿರುತ್ತದೆ, ಎನ್‌ಸಿಎ‌ಎ ಗೂ ಇದು 12 feet (3.7 m) ವಿಶಾಲವಾಗಿರುತ್ತದೆ; ಎರಡೂ ದೃಷ್ಟಾಂತಗಳಿಗೂ ಇದು 15 feet (4.6 m) ಇದು ಬ್ಯಾಕ್‌ಬೋರ್ಡ್‌ನಿಂದ ಆರಂಭವಾಗುತ್ತದೆ. ಆಯತಾಕಾರದ ಮೇಲ್ಭಾಗದಲ್ಲಿ ಉಚಿತ-ಎಸೆತದ ರೇಖೆ ಇದ್ದು, ಎಸೆತ ಕಾರ್ಯದಲ್ಲಿ ಅವರು ಉಲ್ಲಂಘನೆಯನ್ನು ಮಾಡಿದಾಗ ಅಥವಾ ಇತರ ಯಾವುದಾದರು ದಂಡ ವಿದಿಸಿದಾಗ ಈ ರೇಖೆಯ ಹಿಂದೆಯೇ ಆಟಗಾರರು ವಿರೋಧವಿಲ್ಲದ ಎಸೆತಗಳನ್ನು ಎಸೆಯುತ್ತಾರೆ. ಉಚಿತ-ಎಸೆತ ರೇಖೆಯಿಂದ ಆಚೆ ತ್ರಿಜ್ಯದೊಂದಿಗೆ 6 feet (1.8 m) ವೃತ್ತವನ್ನು ಬಿಡಿಸಲಾಗುವುದು; ಇದನ್ನು ಮಧ್ಯದ ವೃತ್ತದಲ್ಲಿ ಇದೇ ಮಾದಲಿಯಲ್ಲಿ ಮಾಡುವ ಜಿಗಿಯುವ ಚೆಂಡಿನ ದೃಷ್ಟಾಂತಗಳಿಗೆ ಉಪಯೋಗಿಸಲಾಗುತ್ತದೆ. ಹ್ಯಾಶಸ್‌ನಲ್ಲಿ ಎರಡು 6 ಗಳಿವೆ, ಉಚಿತ ಎಸೆತ ರೇಖೆಯಿಂದ 3 ಅಡಿ. ಈ ಗುರುತುಗಳಿಂದ ಯಾವುದೇ ಉಪಯೋಗವಿಲ್ಲ, ಅದಾಗ್ಯೂ ಎನ್‌ಬಿಎ ನಿಯಮ 1 (ಜಿ) ಪ್ರಕಾರ ಈ ಗುರುತುಗಳನ್ನು ಬಿಡಿಸುವ ಅಗತ್ಯವಿದೆ.

ಎಫ್‌ಐಬಿಎ ಪಂದ್ಯಾಟಗಳಿಗೆ, ಅಕ್ಟೋಬರ್ 2010ರಿಂದ ಕೀ ಆಯತಾಕಾರವಾಗಿ 4.9 ಮೀ ಅಗಲ ಮತ್ತು 5.8 ಮೀ ಉದ್ದವಾಗಿರುತ್ತದೆ. ಮುಂಚೆ ಇದು ಉಚಿತ-ಎಸೆತ ರೇಖೆಯಲ್ಲಿ ತ್ರಾಪಿಜ್ಯ 3.7 ಮೀಟರುಗಳು (12 ಅಡಿ) ಅಗಲವಾಗಿ ಮತ್ತು ಮುಕ್ತಾಯ ರೇಖೆಯಲ್ಲಿ 6 ಮೀಟರುಗಳು (19 ಅಡಿ ಮತ್ತು 6.25 ಇಂಚುಗಳು) ಇರುತ್ತಿತ್ತು.

ಕೀ ಯನ್ನು ಪ್ರಮುಖವಾಗಿ ಆಟಗಾರರು ಪ್ರತಿಸ್ಪರ್ಧಿ ತಂಡದ ಬಾಸ್ಕೆಟ್‌ ಕೆಳಗೆ ಧೀರ್ಘಕಾಲ (ಗರಿಷ್ಟ 3 ಸೆಕೆಂಡುಗಳು) ಇರುವಿಕೆಯನ್ನು ತಡೆಯಲು ಉಪಯೋಗಿಸಲಾಗುತ್ತದೆ.

ನಿಷೇದಿತ ಪ್ರದೇಶದ ವೃತ್ತಖಂಡ ಬದಲಾಯಿಸಿ

ಬಾಸ್ಕೆಟ್‌ನ ಮಧ್ಯಭಾಗದಿಂದ 4 ಅಡಿ (1.22 ಮೀ) ವೃತ್ತಖಂಡವನ್ನು ನಿಷೇದಿತ ಪ್ರದೇಶದ ವೃತ್ತಖಂಡ ಎಂದು ಹೇಳಲಾಗುತ್ತದೆ, ಇದನ್ನು ಪ್ರಸ್ತುತ ಕೆಲವು ವಿನಾಯಿತಿಗಳೊಂದಿಗೆ ಎನ್‌ಬಿಎ ಯಲ್ಲಿ ಮಾತ್ರ ಉಪಯೋಗಿಸಲಾಗುತ್ತಿದೆ, ಎದುರಾಳಿಯನ್ನು ತಡೆಯುವ ಆಟಗಾರರು ಈ ಪ್ರದೇಶದಲ್ಲಿ ಕೆಣಕುವ ನಿಯಮಗಳ ಉಲ್ಲಂಘನೆಗಳನ್ನು ಒತ್ತಾಯಿಸಲು ಸಾದ್ಯವಿಲ್ಲ.

ಇತರೆ ರೇಖೆಗಳು ಬದಲಾಯಿಸಿ

ಎನ್‌ಬಿಎ ನೆಲದ ಪ್ರದೇಶಗಳಲ್ಲಿ, ಅಂತಿಮ ರೇಖೆಗಳಲ್ಲಿ ಕೀ ಹತ್ತಿರ ಎರಡು ರೇಖೆಗಳನ್ನು ಎಳೆಯಲಾಗುತ್ತದೆ - ರೇಖೆಗಳಿಗೆ ನೇರವಾಗಿ ಹಿಂದೆ ಇರುವ ಪ್ರದೇಶವನ್ನು ಸ್ಪಾಟ್ (ಜಾಗ)ವನ್ನಾಗಿ ಉಪಯೋಗಿಸಲಾಗಿದ್ದು, ಪ್ರತಿಸ್ಪರ್ಧಿದಾಳಿಯಲ್ಲಿನ ತಂಡಗಳು ಚೆಂಡನ್ನು ಅಲ್ಲಿಯೇ ಒಳಕ್ಕೆ ಬರಮಾಡಿಕೊಳ್ಳುವರು.

ಎನ್‌ಬಿಎ ನೆಲದ ಪ್ರದೇಶಗಳಲ್ಲಿನ ಮೂರು-ಪಾಯಿಂಟ್ ರೇಖೆಯ ಲಂಬ ರೇಖೆಗಳಿಗೆ ಸಮಾಂತರದ ಅದೇ ತರಹದ ರೇಖೆಯನ್ನು ಅದೇ ಉದ್ದೇಶಕ್ಕಾಗಿ ಉಪಯೋಗಿಸಲಾಗುತ್ತದೆ; ಹಾಗು ಈ ರೇಖೆಯು ತರಬೇತುದಾರ ನಿಲ್ಲಬಹುದಾದ (ಉದ್ದಸಾಲುಗಳಿಂದ ಪಕ್ಕಕ್ಕೆ) ಅತ್ಯಂತ ದೂರದ ಸೀಮಾರೇಖೆಯನ್ನು ನಿರ್ಣಯಿಸುತ್ತದೆ. ನೆರವಾಗಿ ಈ ಪ್ರದೇಶದ ಹಿಂದೆ ಇರುವ ಪ್ರದೇಶವೇ ತಂಡದ ಬೆಂಚ್.

ಎನ್‌ಬಿಎ ಸ್ಥಳಗಳಲ್ಲಿನ ಅರ್ಧ-ಅಂಗಣ ರೇಖೆಯಮೇಲೆ 2 ರೇಖೆಗಳು ಆಟವಾಡುವ ಮೈದಾನದಿಂದ ಹೊರಕ್ಕೆ ವಿಸ್ತರಿಸಲ್ಪಟ್ಟು, ಪ್ರತಿಸ್ಪರ್ಧಿಗಳು ತಾವು ಆಟವಾಡುವ ಮೈದಾನವನ್ನು ಪ್ರವೇಶಿಸುವ ಮೊದಲು ನಿಂತು ತಮ್ಮ ಸರದಿಗಾಗಿ ಕಾಯುವ ಸ್ಥಳವನ್ನು ಸೂಚಿಸುತ್ತದೆ; ನೇರವಾಗಿ ಈ ಪ್ರದೇಶದ ಹಿಂದೆ ಕಾಲಸೂಚಕ ಮತ್ತು ಕಾಯ್ದಿರಿಸಿದ ನ್ಯಾಯ ನಿರ್ಣಯಕರುಗಳಂತಹ ಮೈದಾನದ-ಹೊರಗಿನ ವಿವಿಧ ಅಧಿಕಾರಿಗಳಿರುತ್ತಾರೆ.

ಮುಂದಿನ ಬದಲಾವಣೆಗಳು ಬದಲಾಯಿಸಿ

ಏಪ್ರಿಲ್ 26, 2008ರಂದು, ಎಫ್‌ಐಬಿಎ ಮೈದಾನವನ್ನು ಗುರುತಿಸುವ ನಿಯಮಗಲಲ್ಲಿ ಅನೇಕ ಪ್ರಮುಖ ಮಾರ್ಪಾಡುಗಳನ್ನು ಪ್ರಕಟಿಸಿತು. ಈ ಮಾರ್ಪಾಡುಗಳು ಅಕ್ಟೋಬರ್ 1, 2010ರಂದಿನ ಪ್ರಮುಖ ಅಂತತರಾಷ್ಟ್ರೀಯ ಸ್ಪರ್ಧೆಗಳಿಗೆ, ಆ ವರ್ಷದ ನಂತರದ ಪುರುಷರ ಮತ್ತು ಮಹಿಳೆಯರ ವರ್ಲ್ಡ್ ಚಾಂಪಿಯನ್‌ಷಿಪ್‌ಗಳಿಗೆ ಅನ್ವಯಿಸುತ್ತವೆ, ಮತ್ತು ಅಕ್ಟೋಬರ್ 1, 2012ರಂದಿನ ಇತರ ಸ್ಪರ್ಧೆಗಳಿಗೆ ಕಟ್ಟಾಯವಾಗುತ್ತವೆ (ಅದಾಗ್ಯೂ ರಾಷ್ಟ್ರೀಯ ಒಕ್ಕೂಟಗಳು ಹೊಸಾ ಮಾದರಿಯ ಗುರುತುಗಳನ್ನು 2012ರ ಮೊದಲೆ ಅನುಸರಿಬಹುದಾಗೊದೆ). ಬದಲಾವಣೆಗಳು ಈ ರೀತಿ ಇವೆ:[೫]

  • ಎನ್‌ಬಿಎ ಪರಿಮಾಣಗಳೊಂದಿಗೆ, ಎನ್‌ಬಿಎ ಯಲ್ಲಿ ಇರುವ ಹಾಗೆ ಕೀ ಆಕಾರವು ತ್ರಾಪಿಜ್ಯದಿಂದ ಆಯತಾಕಾರಕ್ಕೆ ಬದಲಾಗುವುದು.
  • ವೃತ್ತಖಂಡದ ಮೇಲ್ಬಾಗದ ಎನ್‌ಬಿಎ ಗಾಗಿ 23 ft 9 in (7.24 m) ಕ್ಕೆ ಹೋಲಿಸಿದರೆ, ಮೂರು-ಪಾಯಿಂಟ್ ರೇಖೆಯನ್ನು ಪ್ರಸ್ತುತ ಇರುವ 6.25 ಮೀಟರುಗಳಿಂದ (20 ಅಡಿ 6.1 ಇಂಚುಗಳಿಂದ) ಹಿಂದಕ್ಕೆ 6.75 ಮೀಟರುಗಳಿಗೆ (22 ಅಡಿ 1.7 ಇಂಚುಗಳಿಗೆ) ಸರಿಸಲಾಗುವುದು.
  • ಎಫ್‌ಐಬಿಎ ಯು ವಿಶಾಲವಾದ 1.25 ಮೀಟರುಗಳ (4 ಅಡಿ 1.2 ಇಂಚುಗಳ) ಎನ್‌ಬಿಎ'ನ ನಿಷೇದಿತ ಪ್ರದೇಶದ ವೃತ್ತಖಂಡವನ್ನು ಅನುಸರಿಸುತ್ತದೆ.

ಇವನ್ನೂ ನೋಡಿ ಬದಲಾಯಿಸಿ

  • ಅಸೆಂಬ್ಲಿ ಹಾಲ್
  • ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಒಳಾಂಗಣ ಕ್ರೀಡಾಂಗಣದ ಪಟ್ಟಿ#ಪ್ರಮುಖ ಕಾಲೇಜು ಒಳಾಂಗಣ ಕ್ರೀಡಾಂಗಣಗಳು

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2007-02-10. Retrieved 2010-11-08.
  2. "Official Basketball Rules 2006". International Basketball Federation. 2006. Archived from the original (pdf) on 2007-02-07. Retrieved 2007-04-14.
  3. ೩.೦ ೩.೧ "NCAA Court and Equipment Rules" (PDF). 2010. Archived from the original (pdf) on 2010-06-27. Retrieved 2010-04-07.
  4. "ಬಾಸ್ಕೆಟ್‌ಬಾಲ್ ಶಬ್ಧಕೋಶದ ಪದಗಳು, ವ್ಯಾಖ್ಯಾನ, ಪಥದ ಭಂಗ". Archived from the original on 2009-04-30. Retrieved 2010-11-08.
  5. "The FIBA Central Board approves historic rule changes" (Press release). FIBA. 2008-04-26. Archived from the original on 2008-04-30. Retrieved 2008-04-28.

ಬಾಹ್ಯ ಕೊಂಡಿಗಳು ಬದಲಾಯಿಸಿ