Pheasant-tailed Jacana
In non-breeding plumage at Bharatpur, Rajasthan, India.
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
Hydrophasianus

Wagler, 1832
ಪ್ರಜಾತಿ:
H. chirurgus
Binomial name
Hydrophasianus chirurgus
(Scopoli, 1786)
ಭಾರತದ ರಾಜಸ್ಥಾನದ ಭರತ್‌ಪುರ್‌ ನಗರದಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯರಹಿತ ಗರಿಗಳಕುಚ್ಚು.

ಫೆಸೆಂಟ್‌-ಬಾಲದ ಜ್ಯಾಕನ (ಹೈಡ್ರೋಫಾಸಿಯೇನಸ್‌ ಚಿರುರ್ಗಸ್ ‌) ಪಕ್ಷಿಯು ಹೈಡ್ರೋಫಾಸಿಯೇನಸ್‌ ಕುಲದ ಏಕೈಕ ಮಾದರಿ/ಪ್ರತಿನಿಧಿಯಿರುವ ಜ್ಯಾಕನ ಆಗಿದೆ. ಜ್ಯಾಕನಗಳು ಜ್ಯಾಕನಿಡೇ ಕುಟುಂಬದ ನೀರಹಕ್ಕಿಗಳ ಸಮೂಹವಾಗಿದ್ದು ಅವುಗಳ ಪ್ರಥಮ ಆದ್ಯತೆಯ ವಾಸಸ್ಥಾನವಾದ ಆಳವಿಲ್ಲದ ಸರೋವರಗಳಲ್ಲಿ ತೇಲುವ ಸಸ್ಯವರ್ಗದ ಮೇಲೆ ನಡೆದುಕೊಂಡು ಹೋಗಲು ಅನುಕೂಲಿಸುವ ದೊಡ್ಡ ಗಾತ್ರದ ಕಾಲುಗಳು ಹಾಗೂ ಕಾಲುಗುರುಗಳಿಂದಲೇ ಅವುಗಳನ್ನು ಗುರುತಿಸಬಹುದಾಗಿರುತ್ತದೆ. ಫೆಸೆಂಟ್‌-ಬಾಲದ ಜ್ಯಾಕನ ಪಕ್ಷಿಯು ಸಾಧಾರಣವಾಗಿ ಸಸ್ಯವರ್ಗಗಳ ಮೇಲೆ ನಡೆದುಕೊಂಡು ಹೋಗುವುದಾದರೂ ಈಜುವ ಸಾಮರ್ಥ್ಯವನ್ನೂ ಹೊಂದಿರುತ್ತದೆ. ಇವುಗಳಲ್ಲಿ ಹೆಣ್ಣು ಪಕ್ಷಿಗಳು ಗಂಡು ಪಕ್ಷಿಗಳಿಗಿಂತ ಹೆಚ್ಚು ವರ್ಣಮಯವಾಗಿರುತ್ತವಲ್ಲದೇ ಅವು ಬಹುಪತಿತ್ವ ಜೀವನದ ಪಕ್ಷಿಗಳಾಗಿವೆ.

ಜ್ಯಾಕನ ಎಂಬುದು ಬ್ರೆಝಿಲಿಯನ್‌ ಪೋರ್ಚುಗೀಸ್‌ ಪದ ಜಾಕಾನಾ 'ದ (ಅದೇ ಪಕ್ಷಿಗೆ ಟೂಪಿ ಭಾಷೆಯಲ್ಲಿ ಕರೆವ ಹೆಸರಿನ ಮೂಲದ ) ಲಿನ್ನೇಯಸ್‌ ' ಹುಸಿ-ಲ್ಯಾಟಿನ್‌‌ ತಪ್ಪು ಕಾಗುಣಿತ ರೂಪವಾಗಿದ್ದು ಇದರ ಉಚ್ಚಾರಣೆಯು ಸರಿಸುಮಾರಾಗಿ [ža.sa.náN] ಎಂಬಂತಿರುತ್ತದೆ.

ಹರಡಿಕೆ ಬದಲಾಯಿಸಿ

ಫೆಸೆಂಟ್‌-ಬಾಲದ ಜ್ಯಾಕನ ಪಕ್ಷಿಯು ತನ್ನ ಸಂತಾನೋತ್ಪತ್ತಿಯನ್ನು ಭಾರತ, ಆಗ್ನೇಯ ಏಷ್ಯಾ ಹಾಗೂ ಇಂಡೋನೇಷ್ಯಾಗಳಲ್ಲಿ ನಡೆಸುತ್ತದೆ. ಈ ಪಕ್ಷಿಯು ತನ್ನ ವ್ಯಾಪ್ತಿಯ ಬಹುಪಾಲು ಪ್ರದೇಶಗಳಲ್ಲಿ ವಲಸೆ ಹೋಗದ ಪಕ್ಷಿಯಾಗಿದ್ದರೂ, ದಕ್ಷಿಣ ಚೀನಾ ಹಾಗೂ ಹಿಮಾಲಯ ಪರ್ವತ ಪ್ರದೇಶಗಳಿಂದ ಬರುವ ಉತ್ತರ ದಿಕ್ಕಿನ ಸಂತಾನೋತ್ಪತ್ತಿ ಉದ್ದೇಶದಿಂದ ಬರುವ ಪಕ್ಷಿಗಳು ಭಾರತದ ಪರ್ಯಾಯ ದ್ವೀಪ ಪ್ರದೇಶಗಳು ಹಾಗೂ ಆಗ್ನೇಯ ಏಷ್ಯಾಗಳಿಗೆ ವಲಸೆ ಹೋಗುತ್ತವೆ. ಅಳಿವಿನಂಚಿನಲ್ಲಿರುವ ಪಕ್ಷಿಯೆಂದು ಪರಿಗಣಿತವಾಗಿರುವ ತೈವಾನ್‌ನಲ್ಲೂ ಕೂಡಾ ಇದು ವಲಸೆ ಹೋಗದ ಪಕ್ಷಿಯಾಗಿದೆ. ಆಸ್ಟ್ರೇಲಿಯಾದಲ್ಲಿ ಈ ಪಕ್ಷಿಯನ್ನು ಅಲೆಮಾರಿ ಪಕ್ಷಿಯೆಂದು ದಾಖಲಿಸಲಾಗಿದೆ.

ವಿವರಣೆ ಬದಲಾಯಿಸಿ

 
ಭಾರತದ ಹೈದರಾಬಾದ್‌ನಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯಸಹಿತ ಗರಿಗಳಕುಚ್ಚು.

ಇದು ವಿಭಿನ್ನವಾದ ಸಂತಾನೋತ್ಪತ್ತಿಯ ಗರಿಗಳನ್ನು ಹೊಂದಿರುವ ಏಕಮೇವ ಜ್ಯಾಕನ ಆಗಿದೆ. ಫೆಸೆಂಟ್‌-ಬಾಲದ ಜ್ಯಾಕನ ಪಕ್ಷಿಯು ಎದ್ದು ಕಾಣಿಸುವಂತಹಾ ಹಾಗೂ ನಿಚ್ಚಳವಾಗಿ ಗುರುತಿಸಬಲ್ಲಂತಹಾ ಪಕ್ಷಿಯಾಗಿದೆ. ಅವು ಸುಮಾರು 31 cmಗಳಷ್ಟು ಉದ್ದವಾಗಿರುತ್ತವೆ ಹಾಗೂ ಹೆಣ್ಣು ಪಕ್ಷಿಗಳು ಗಂಡುಪಕ್ಷಿಗಳಿಗಿಂತ ದೊಡ್ಡದಾಗಿರುತ್ತವೆ. ಸಂತಾನೋತ್ಪತ್ತಿಯ ಋತುವಿನಲ್ಲಿ ಇದರ ಉದ್ದವಾದ ಬಾಲವು ಇನ್ನೂ 8 cmಗಳಷ್ಟು ಉದ್ದವಾಗುತ್ತದೆ. ಹೊರಮುಖವಾದ ಹಾರಲು ನೆರವಾಗುವ ಗರಿಗಳು ಅಗಲವಾದ ತುದಿ ಹಾಗೂ ಕಿರಿದಾದ ತಲದ 2 cmಗಳಷ್ಟು ವಿಸ್ತರಣೆಯನ್ನು ಹೊಂದಿರುತ್ತವೆ ಹಾಗೂ ಏಳನೆಯ ಹಾರಲು ನೆರವಾಗುವ ಗರಿಯು ವಿಸ್ತಾರವಾಗಿ ಮುಂಚಾಚಿಕೊಂಡಿರುತ್ತದೆ.

ಸಂತಾನೋತ್ಪತ್ತಿ ಸಾಮರ್ಥ್ಯದ ವಯಸ್ಕ ಪಕ್ಷಿಗಳು ಪ್ರಧಾನವಾಗಿ ಕಪ್ಪಾಗಿದ್ದು ರೆಕ್ಕೆಗಳು, ಶಿರೋಭಾಗ ಹಾಗೂ ಕತ್ತಿನ ಮುಂಭಾಗದ ಪಟ್ಟೆಯು ಬಿಳಿಯದಾಗಿರುತ್ತದೆ. ಕತ್ತಿನ ಹಿಂಬದಿಯು ಚಿನ್ನದ ಬಣ್ಣದ್ದಾಗಿರುತ್ತದೆ. ಹುಬ್ಬಿನ ಮೇಲೆ ಕಣ್ಸೆಳೆಯುವ ಬಿಳಿಯ ಪಟ್ಟೆಯಿರುತ್ತದೆ. ಅದರ ಕಾಲುಗಳು ಹಾಗೂ ತೀರ ಉದ್ದವಾದ ಕಾಲ್ಬೆರಳುಗಳು ಬೂದುಬಣ್ಣದ್ದಾಗಿರುತ್ತವೆ.

ಸಂತಾನೋತ್ಪತ್ತಿ ಸಾಮರ್ಥ್ಯವಿಲ್ಲದ ವಯಸ್ಕ ಪಕ್ಷಿಗಳು ಉದ್ದನೆಯ ಬಾಲವನ್ನು ಹೊಂದಿರುವುದಿಲ್ಲ. ವಕ್ಷ ಸ್ಥಳದಲ್ಲಿ ಕಂದು ಬಣ್ಣದ ಪಟ್ಟಿ ಹಾಗೂ ಕತ್ತಿನ ಪಟ್ಟಿಯ ಹೊರತಾಗಿ ದೇಹದ ಕೆಳಭಾಗಗಳು ಸಂಪೂರ್ಣವಾಗಿ ಬಿಳಿಯದಾಗಿರುತ್ತದೆ. ಕತ್ತಿನ ಬದಿಗಳು ಚಿನ್ನದ ಬಣ್ಣದ್ದಾಗಿರುತ್ತವೆ.

ಎಳೆಯ ಪಕ್ಷಿಗಳು ಕಂದು ಬಣ್ಣದ ಮೇಲ್ಭಾಗಗಳನ್ನು ಹೊಂದಿರುತ್ತದೆ. ಎದೆಯ ಪಟ್ಟಿಯು ಮಾಸಲು ಕಂದು ಬಣ್ಣದಾಗಿದ್ದು ಹೊರತುಪಡಿಸಿ ದೇಹದ ಕೆಳಭಾಗವೆಲ್ಲವೂ ಬಿಳಿಯದಾಗಿರುತ್ತದೆ.

ಅಳತೆಗಳು ( ರಾಸ್‌ಮುಸ್ಸೆನ್‌ ಹಾಗೂ ಆಂಡರ್‌ಟನ್‌ರ ದಾಖಲೆಗಳ ಅನುಸಾರ): ಉದ್ದ/ವಿಸ್ತಾರ 310 mm 390–580 mm (ಸಂತಾನೋತ್ಪತ್ತಿ) ರೆಕ್ಕೆ (ಹಾರಲು ನೆರವಾಗುವ ಗರಿಗಳ ವಿಸ್ತರಣೆಯನ್ನೂ ಒಳಗೊಂಡು) 190–244 mm (ವಯಸ್ಕಪಕ್ಷಿಗಳು) 168–228 mm (ಎಳೆಯ ಪಕ್ಷಿಗಳು) ಕೊಕ್ಕು 23–30 mm ಕಾಲಿನ ಕಾಂಡ/ಪಾದಗುಲ್ಫ 45–58 mm ಬಾಲ 194–376 mm (ಸಂತಾನೋತ್ಪತ್ತಿ ಸಾಮರ್ಥ್ಯಸಹಿತ) 110–117 mm (ಸಂತಾನೋತ್ಪತ್ತಿ ಸಾಮರ್ಥ್ಯರಹಿತ)

ಸಂತಾನವೃದ್ಧಿ ಬದಲಾಯಿಸಿ

ಈ ಜ್ಯಾಕನಗಳು ತೇಲುವ ಸಸ್ಯವರ್ಗದ ಮೇಲೆ ಮಾರ್ಚ್‌ ತಿಂಗಳಿನಿಂದ ಜುಲೈನವರೆಗೆ ಸಂತಾನೋತ್ಪತ್ತಿಯನ್ನು ನಡೆಸುತ್ತವೆ. ದಕ್ಷಿಣ ಭಾರತದಲ್ಲಿ, ಮಳೆಗಾಲದ ಅವಧಿಯಾದ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಸಂತಾನೋತ್ಪತ್ತಿಯನ್ನು ನಡೆಸುತ್ತವೆ. ಈ ಪಕ್ಷಿಗಳು ಬಹುಪತಿತ್ವ ಪದ್ಧತಿಯವಾಗಿದ್ದು, ಒಂದು ಹೆಣ್ಣು ಪಕ್ಷಿಯು 10 ಕಾವುಗಳವರೆಗೆ ಮೊಟ್ಟೆಗಳನ್ನು ಇಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ನಾಲ್ಕು ಕಪ್ಪು-ಗುರುತುಗಳುಳ್ಳ ಕಂದು ಮೊಟ್ಟೆಗಳನ್ನು ತೇಲುವ ಗೂಡುಗಳಲ್ಲಿ ಇಡಲಾಗುತ್ತದೆ.

ಅಭ್ಯಾಸಗಳು ಬದಲಾಯಿಸಿ

ಫೆಸೆಂಟ್‌-ಬಾಲದ ಜ್ಯಾಕನ ಪಕ್ಷಿಯ ಆಹಾರದ ಪ್ರಧಾನ ಮೂಲಗಳೆಂದರೆ ತೇಲುವ ಸಸ್ಯವರ್ಗಗಳಿಂದ ಇಲ್ಲವೇ ಮೇಲ್ಮುಖ ಹರಿವಿನ ನೀರಿನಿಂದ ಹುಳಹುಪ್ಪಟೆಗಳು ಹಾಗೂ ಇತರೆ ಅಕಶೇರುಕ ಪ್ರಾಣಿಗಳು ಆಯ್ದುಕೊಳ್ಳುತ್ತವೆ.

ಅವುಗಳ ಕೂಗುಗಳಲ್ಲಿ ಮ್ಯೂಯಿಂಗ್‌ ಮೀ-ಆನ್ಪ್ ‌‌ ಹಾಗೂ ನಾಸಿಕಮೂಲ ಕೂಗು ಟೀಯುನ್‌ ಗಳು ಸೇರಿವೆ

ಉಲ್ಲೇಖಗಳು ಬದಲಾಯಿಸಿ

  • BirdLife International (2004). Hydrophasianus chirurgus. 2006. IUCN Red List of Threatened Species. IUCN 2006. www.iucnredlist.org. Retrieved on 12 May 2006. ಈ ಜಾತಿಯ ಕುರಿತು ಏಕೆ ಕನಿಷ್ಟ ಮಟ್ಟದ ಕಾಳಜಿಯನ್ನು ತೋರಿಸಲಾಗುತ್ತಿದೆ ಎಂಬುದರ ಕುರಿತಾದ ಸಮರ್ಥನೆಯನ್ನು ದತ್ತಾಂಶದ ಸಂಗ್ರಹದ ನಮೂದುಗಳು ಒಳಗೊಂಡಿವೆ
  • ಷೋರ್‌ಬರ್ಡ್ಸ್‌ ಲೇಖಕರು ಹೇಮನ್‌, ಮರ್ಚಂಟ್‌‌ ಮತ್ತು ಪ್ರೇಟರ್‌ ISBN 0-395-60237-8
  • ರಾಸ್‌ಮುಸ್ಸೆನ್‌, P. ಮತ್ತು J. ಆಂಡರ್‌ಟನ್‌‌ (2005) ಬರ್ಡ್ಸ್‌ ಆಫ್‌ ಸೌತ್‌ ಏಷ್ಯಾ - ದ ರಿಪ್ಲೇ ಗೈಡ್‌. ಸ್ಮಿತ್‌ಸೋನಿಯನ್‌ ಮತ್ತು ಲಿಂಕ್ಸ್‌ ಎಡಿಸಿಯನ್ಸ್‌.

ಸ್ವಭಾವಗಳು, ನಡವಳಿಕೆ, ಗರಿಗಳ ವಿನ್ಯಾಸ ಬದಲಾಯಿಸಿ