ಬಾರಕ್ (ಇದನ್ನು ಸಾಮಾನ್ಯವಾಗಿ ಬಾರಕ್ಯು ಎಂದು ಉಚ್ಚರಿಸಲಾಗುತ್ತದೆ.ಇದು ನೈಋತ್ಯ ಫ್ರಾನ್ಸ್ ನ ತುರ್ಸನ್ ಪ್ರದೇಶದ ಸುತ್ತಮುತ್ತಲೂ ದೊರೆಯುವ ಫ್ರೆಂಚ್ ವೈನ್ ಗಾಗಿ ಬೆಳೆಯುವ ದ್ರಾಕ್ಷಿ ತಳಿಯ ಬಿಳಿ ದ್ರಾಕ್ಷಿಯಾಗಿದೆ. ಇದರಿಂದ ಪೂರ್ಣ ಪ್ರಮಾಣದ ಬಗೆ ಬಗೆಯ ಮದ್ಯಸಾರಗಳನ್ನು ಅದರ ಕರಟಕಾಯಿಯ ಕಂಪಿನ ಮೂಲಕ ತಯಾರಿಸಬಹುದಾಗಿದೆ.[] ಹಣ್ಣು ಬೆಳೆಗಳ ತಜ್ಞರ ಅನುಮಾನದ ಪ್ರಕಾರ ಸದ್ಯದ ದ್ರಾಕ್ಷಿ ತಳಿಯು ಫೊಲ್ಲೆ ಬ್ಲಾಂಕೆಯ ಕಸಿಯಾಗಿದೆ.(ಇದು ಬಹುಶಃ ಬೊರ್ಡೆಲೆಜಾ ಜುರಿಯಾ ಗೆ ಸಮಾನಾರ್ಥಕವಾಗಿದೆ.)ಅದಲ್ಲದೇ ಸುವಿಗ್ನಾನ್ ಬ್ಲಾಂಕ್ ಜೊತೆಗೆ ತನ್ನ ಗುಣಲಕ್ಷಣಗಳನ್ನು ತೋರಿಸುತ್ತದೆ.[]

Baroque
Grape (Vitis)
Color of berry skin Blanc
Species Vitis vinifera
Also called See list of synonyms
Origin France

ಇತಿಹಾಸ

ಬದಲಾಯಿಸಿ
 
ಸುಗ್ನಿಆನ್ ಬ್ಲಾಂಚ್ (ಚಿತ್ರಿಸಿದ್ದು), ಈ ಜಾತಿಯ ದ್ರಾಕ್ಷಿಯು ಒಂದೇ ರೀತಿಯ ಬಾರಕ್ ಲಕ್ಷಣಗಳನ್ನೇ ಹೊಂದಿರುತ್ತದೆ.ಇದು ಫ್ರೆಂಚ್ ನ ಇನ್ನೊಂದು ಬಿಳಿ ದ್ರಾಕ್ಷಿಯ ಕಂಪುಳ್ಳ ಲಕ್ಷಣ ಪಡೆದಿದೆ ಎಂದು ನಂಬಲಾಗಿದ್ದು ಫೊಲ್ಲೆ ಬ್ಲಾಂಚ್ ಬಿಳಿಯ ಜಾತಿಯ ದ್ರಾಕ್ಷಿಯು ಬಾರಕ್ ವಿಶಿಷ್ಟತೆ ಹೊಂದಿರುತ್ತದೆ.

ಈ ದ್ರಾಕ್ಷಿಯ ನಿಜವಾದ ಮೂಲ ಯಾವುದೆಂಬುದು ನಿಖರವಾಗಿ ತಿಳಿದಿಲ್ಲ,ಆದರೆ ಹಣ್ಣು ಬೆಳೆಗಳ ತಜ್ಞರು ಮಾತ್ರ, ಫೊಲ್ಲೆ ಬ್ಲಾಂಕೆ ಮತ್ತು ಸುವಿಗ್ನಾನ್ ಬ್ಲಾಂಕ್ ಗಳ ಮಿಶ್ರಣದ ತಳಿಯೇ ಈ ಬಿಳಿ ದ್ರಾಕ್ಷಿಗಳೆಂದು ನಂಬುತ್ತಾರೆ.[] ಈ ಮೊದಲು ಫ್ರಾನ್ಸ್ ನ ನೈಋತ್ಯದಲ್ಲಿ ಎಲ್ಲಾ ಕಡೆಗೂ ಇದನ್ನು ಬೆಳೆಯಲಾಗುತ್ತಿತ್ತು.ಆದರಿಂದು ಅದರ ಬಳ್ಳಿಯನ್ನು ಪ್ರಧಾನವಾಗಿ ಲಾಂಡೆಸ್ ಡಿಪಾರ್ಟ್ ಮೆಂಟ್ ನಲ್ಲಿ ವಿರಳವಾಗಿ ಬೆಳೆಯಲಾಗುತ್ತದೆ.ಇಲ್ಲಿ Vin délimité de qualité supérieure (VDQS) ಎಂಬ ಗುಣಮಟ್ಟದ ದ್ರಾಕ್ಷಿಯನ್ನು ತುರ್ಸನ್ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗುತ್ತದೆ. ಆಗ 20ನೆಯ ಶತಮಾನದಲ್ಲಿ ಬಾರಕ್ ದ್ರಾಕ್ಷಿಯು ಬೆಳೆಗಾರರಲ್ಲಿ ಜನಪ್ರಿಯತೆ ಗಳಿಸಿತು.ಯಾಕೆಂದರೆ ಈ ತಳಿಯು ಸುಮಾರಾಗಿ ಬೂರ್ಸ್ಟ್ ಹುಡಿಗೆ ಯಾವುದೇ ಪ್ರತಿಕ್ರಿಯೆ ತೋರದಿರುವುದು ಇದರ ಬಹು ಮುಖ್ಯ ಗುಣವಾಗಿದೆ.ಅದಲ್ಲದೇ ಇನ್ನುಳಿದ ದ್ರಾಕ್ಷಿ ತಳಿಗಳಲ್ಲಿನ ಹತ್ತರಲ್ಲಿನ ಒಂದು ಪಾಲು ಮಾತ್ರ ನಾಶವಾಗಬಹುದು. ಆದರೆ 1980 ರ ಹೊತ್ತಿಗೆ ಈ ದ್ರಾಕ್ಷಿ ಬೆಳೆಯು ಅಳಿವಿನಂಚಿನಲ್ಲಿತ್ತು.ಯಾಕೆಂದರೆ ಲಾಂಡೆಸೆ ಮತ್ತು ಸುತ್ತಮುತ್ತಲಿನ ಪ್ರದೇಶವು ಕೃಷಿ ಮತ್ತು ಕೈಗಾರಿಕೆಗಳ ಅಭಿವೃದ್ಧಿಗೆ ಒಳಪಟ್ಟಿತ್ತು.ಹೀಗಾಗಿ ದ್ರಾಕ್ಷಿ ಬೆಳೆಗಳ ಪ್ರದೇಶಗಳು ಕಣ್ಮರೆಯಾಗಲಾರಂಭಿಸಿದ್ದವು.[]

ವೈನ್ ತಯಾರಿಕೆಯ ಇತಿಹಾಸಕಾರ ಮತ್ತು ತಜ್ಞ ಜಾಂಕಿಸ್ ರಾಬಿನ್ಸನ್ ಅವರ ಪ್ರಕಾರ ಬಾರಕ್ಯು ತಳಿಯನ್ನು ಬಾಣಸಿಗ ಮೈಕೆಲ್ ಗೆರಾರ್ಡ್ ಅವರ ಪ್ರಯತ್ನದಿಂದಾಗಿ ಅದರ ಅಳಿವನ್ನು ತಡೆಯಲಾಗಿತ್ತು.ಅದಲ್ಲದೇ ಅವರು ಮೈಕೆಲ್ ಪ್ರಮಾಣಿತ ಎಗ್ನೆಯ್-ಲೆಸ್-ಬೇನ್ಸ್ ನಲ್ಲಿ 3 ತಾರಾ ಹೊಟೆಲು ಲೆಸ್ ಪ್ರೆಸ್ ಡೆ ಎಗೆನೆಸ್ ನ್ನು ತಮ್ಮ ಒಡೆತನದಲ್ಲಿಯೇ ನಡೆಸುತ್ತಿದ್ದರು. ತುರ್ಸನ್ ನಲ್ಲಿದ್ದ ವೈನ್ ಎಸ್ಟೇಟ್ ನ್ನು ಅವರು ಮತ್ತು ಅವರ ಪತ್ನಿ ಗೆರೆರ್ಡ್ ಜೊತೆಯಾಗಿ ಈ ಬೆಳೆಯಲ್ಲಿ ಆಸಕ್ತಿ ಹುಟ್ಟುವಂತೆ ಕಾರ್ಯ ಮಾಡಿದರು.ಬಾರಕ್ಯು-ಮೂಲದ ಉತ್ತಮ ಕಂಪುಳ್ಳ ಮದ್ಯ ಉತ್ಪಾದನೆಗೆ ಅವರು ಪ್ರೊತ್ಸಾಹಿಸಿದರು.ಹಲವಾರು ವಿಮರ್ಶಕರು ಇದನ್ನು "ಖ್ಯಾತಿಯುಳ್ಳದ್ದು" ಎಂದು ಬಣ್ಣಿಸಿದರು.[]

ಮದ್ಯ ತಯಾರಿಕೆಯ ಪ್ರದೇಶ

ಬದಲಾಯಿಸಿ
 
ಫ್ರಾನ್ಸ್ ನ ನೈಋತ್ಯದಲ್ಲಿನ ಲಾಂಡ್ಸೆ ಡಿಪಾರ್ಟ್ ಮೆಂಟ್ ಮಳಿಗೆಯಲ್ಲಿ ಬಾರಕ್ ಜಾತಿಯ ವಿಶಿಷ್ಟ ಶೈಲಿಯ ದ್ರಾಕ್ಷಿಯ ಮಾರಾಟಕ್ಕೆ ಮೀಸಲಾದ ಅಂಗಡಿ ಇದೆ.

ದ್ರಾಕ್ಷಿಯು ಬಹುತೇಕ ಫ್ರಾನ್ಸ್ ನ ನೈಋತ್ಯ ಭಾಗದ ತುರ್ಸಾನ್ []ಪ್ರದೇಶದಲ್ಲಿ ಖ್ಯಾತಿ ಪಡೆದಿದೆ.ಜಗತ್ತಿನ ಹಲವೆಡೆ ಇದರ ಬೆಳೆ ಬೆಳೆಯುತ್ತಿದ್ದರೂ ಅದು ಆಕ್ರಮಿಸಿದ ಜಾಗ ಮಾತ್ರ ಇದಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ ಎಂದು ಹೇಳಬಹುದು.[]

ಮದ್ಯಸಾರಗಳು

ಬದಲಾಯಿಸಿ

ಬಾರಕ್ಯು ಇಳುವರಿಗಳಿಂದ ಪೂರ್ಣ ಪ್ರಮಾಣದ ಮದ್ಯ ತಯಾರಿಸಬಹುದಾಗಿದೆ,ಇವುಗಳಲ್ಲಿ ಎಷ್ಟು ಪ್ರಮಾಣದ ಆಲ್ಕ್ ಹಾಲ್ ಮಟ್ಟಗಳು ಮತ್ತು ಸಾಂದ್ರತೆ ಇದೆ ಎಂಬುದನ್ನು ಗುರ್ತಿಸಬಹುದಾಗಿದೆ. ಸುಗ್ನಿಆನ್ ಬ್ಲಾಂಚ್ ತಳಿಯಂತೆಯೇ ಇದು ಅದೇ ತರಹದ ಕಂಪುಳ್ಳ ಗುಣಲಕ್ಷಣಗಳನ್ನು ಹಂಚಿಕೊಂಡಿರುತ್ತದೆ.[]

ಸಮಾನಾರ್ಥಕಗಳು

ಬದಲಾಯಿಸಿ

ನೂರಾರು ವರ್ಷಗಳಿಂದ, ಬಾರಕ್ ಅದೇ ರೀತಿ ಗುಣಲಕ್ಷಣದ ದ್ರಾಕ್ಷಿ ತಳಿಗಳನ್ನು ಹೊಂದಿದೆ ಅವುಗಳಲ್ಲಿ: ಬಾರಕೆ, ಬಾರೊಕಾ, ಆರೊಕೆ, ಬಾರೊಕ್ವು, ಬ್ಲ್ಯಾಂಕ್ ಬೊರ್ಡಿಸ್ಲ್ಸ್, ಬೊರ್ಡಿಸ್ಲ್ಸ್, ಬೊರ್ಡಿಸ್ಲ್ಸ್ ಬ್ಲ್ಯಾಂಕ್ , ಬೊರ್ಡೆಲಿಜಾ ಜುರಿಯಾ, ಬೊರ್ಡಿಸ್ಲ್ಸ್, ಬೊರ್ಡಿಸ್ಲ್ಸ್, ಕ್ಲಾವೆರಿಕ್ ಬ್ಲ್ಯಾಂಕ್ , ಎಸ್ಕ್ರಿಪ್ಟ್ ಫೊಲ್ಲೆ, ಮುಸ್ಕೊಡೆಲ್ಲೆ ದೆ ನೇಟ್ಸ್, ಪೆಟಿಟ್ ಬೊರ್ಡಿಸ್ಲ್ಸಿ, ಪ್ಲಾಂಟ್ ಬೊರ್ಡೆಲೆಸ್ ಅಂಡ್ ಸೇಬಲ್ ಬ್ಲ್ಯಾಂಕ್.[]

ಉಲ್ಲೇಖಗಳು‌‌

ಬದಲಾಯಿಸಿ
  1. ಜೆ. ರಾಬಿನ್ಸನ್ ಜಾನ್ಸಿಸ್ ರಾಬಿನ್ಸನ್ಸ್ ವೈನ್ ಕೋರ್ಸ್ ಥರ್ಡ್ ಎಡಿಶನ್ pg 100 ಅಬ್ಬೆವಿಲ್ಲೆ ಪ್ರೆಸ್ 2003 ISBN 0-7892-0883-0
  2. ೨.೦ ೨.೧ ೨.೨ ೨.೩ Oz ಕ್ಲಾರ್ಕೆಎನ್ ಸೈಕ್ಲೊಪಿಡಿಯಾ ಆಫ್ ಗ್ರೇಪ್ಸ್ pg 42 ಹಾರ್ಕೊರ್ಟ್ ಬುಕ್ಸ್ 2001 ISBN 0-15-100714-4
  3. ೩.೦ ೩.೧ ೩.೨ ಜೆ. ರಾಬಿನ್ಸನ್(ed) "ದಿ ಆಕ್ಸ್ ಫೊರ್ಡ್ ಕಂಪ್ಯಾನಿಯನ್ ಟು ವೈನ್" ಥರ್ಡ್ ಎಡಿಶನ್ pg 65 ಆಕ್ಸಫರ್ಡ್ ಯುನ್ವರ್ವಸಿಟಿ ಪ್ರೆಸ್2006 ISBN 0-19-860990-6
  4. ವಿಟಿಸ್ ಇಂಟರ್ ನ್ಯಾಶನಲ್ ವೈರೈಟಿ ಕೆಟಲ್ಯಾಗ್"ಬಾರಕ್ Archived 2012-04-30 ವೇಬ್ಯಾಕ್ ಮೆಷಿನ್ ನಲ್ಲಿ." ಎಕ್ಸೆಸ್ಡ್: ಡಿಸೆಂಬರ್ 14ನೆಯ, 2009