ಬಾಡಿಗೆಗೆ ತೆಗೆದುಕೊಳ್ಳುವುದು

(ಬಾಡಿಗೆ ಇಂದ ಪುನರ್ನಿರ್ದೇಶಿತ)

ಬಾಡಿಗೆಗೆ ತೆಗೆದುಕೊಳ್ಳುವುದು ಎಂದರೆ ಮತ್ತೊಬ್ಬರ ಒಡೆತನದಲ್ಲಿರುವ ಒಂದು ಸರಕು, ಸೇವೆ, ಅಥವಾ ಆಸ್ತಿಯ ತಾತ್ಕಾಲಿಕ ಬಳಕೆಗೆ ಪಾವತಿ ಮಾಡಲಾಗುವಂಥ ಒಂದು ಒಪ್ಪಂದ ಮಾಡಿಕೊಳ್ಳುವುದು ಎಂದರ್ಥ. ಒಟ್ಟಾರೆ ಭೋಗ್ಯವೆಂದರೆ ಹಿಡುವಳಿದಾರನು ಸಂಪೂರ್ಣ ಬಾಡಿಗೆ ಮೊತ್ತವನ್ನು ಪಾವತಿಸುತ್ತಾನೆ ಮತ್ತು ಜಮೀನಿನ ಒಡೆಯನು ಒಡೆತನದಲ್ಲಿ ನಿಯತವಾಗಿ ಉಂಟಾಗುವ ಎಲ್ಲ ಆಸ್ತಿ ಶುಲ್ಕಗಳನ್ನು ಪಾವತಿಸುತ್ತಾನೆ.

ಖರೀದಿ ಮಾಡುವ ಬದಲು ಬಾಡಿಗೆ ತೆಗೆದುಕೊಳ್ಳುವುದಕ್ಕೆ ಅನೇಕ ಸಂಭಾವ್ಯ ಕಾರಣಗಳಿವೆ, ಉದಾಹರಣೆಗೆ: 1) ಅನೇಕ ಕಾನೂನುವ್ಯಾಪ್ತಿಗಳಲ್ಲಿ (ಭಾರತ, ಸ್ಪೇನ್, ಆಸ್ಟ್ರೇಲಿಯಾ, ಯುನೈಟಡ್ ಕಿಂಗ್ಡಂ, ಅಮೇರಿಕ ಸೇರಿದಂತೆ) ವ್ಯಾಪಾರ ಅಥವಾ ವ್ಯವಹಾರದಲ್ಲಿ ಬಳಸಲಾದ ಬಾಡಿಗೆಗೆ ತೆರಿಗೆ ವಿನಾಯಿತಿ ಸಿಗುತ್ತದೆ, ಬಹುತೇಕ ಕಾನೂನುವ್ಯಾಪ್ತಿಗಳಲ್ಲಿ ಮನೆ ಮೇಲಿನ ಬಾಡಿಗೆಗೆ ತೆರಿಗೆ ವಿನಾಯಿತಿ ಸಿಗುವುದಿಲ್ಲ. 2) ಹಣಕಾಸು ಅಭಾವ, ಉದಾಹರಣೆಗೆ ಮನೆ ಕೊಂಡುಕೊಳ್ಳಲು ಸಾಧ್ಯವಾಗದಿದ್ದಾಗ ಮನೆಯನ್ನು ಬಾಡಿಗೆ ತೆಗೆದುಕೊಳ್ಳುವುದು. ಒಡೆತನಕ್ಕೆ ಬೇಕಾದ ಪೂರ್ಣ ಬೆಲೆ ಪಾವತಿಸಲು ಒಬ್ಬರು ಬಯಸದೇ ಇರುವುದು, ಬದಲಾಗಿ ನಿರ್ದಿಷ್ಟ ಕಾಲಾವಧಿಯಲ್ಲಿ ಸಣ್ಣ ಸಂದಾಯಗಳಿಗೆ ಒಪ್ಪುವುದು. 3) ಇಳಿತಾಯ ಮತ್ತು ವಹಿವಾಟು ವೆಚ್ಚಗಳ ಕಾರಣದಿಂದ ಉಂಟಾಗುವ ಹಣಕಾಸು ಅಪಾಯವನ್ನು ಕಡಿಮೆ ಮಾಡುವುದು, ವಿಶೇಷವಾಗಿ ಸ್ವಲ್ಪವೇ ಸಮಯಾವಧಿಗೆ ಮಾತ್ರ ಬೇಕಾಗಬಹುದಾದ ಸ್ಥಿರಾಸ್ತಿಗಾಗಿ. 4) ಏನಾದರೂ ಕೇವಲ ತಾತ್ಕಾಲಿಕವಾಗಿ ಅಗತ್ಯವಿರುವಾಗ, ಉದಾ. ವಿಶೇಷ ಪರಿಕರ, ಟ್ರಕ್ಕು, ಅಥವಾ ತ್ಯಾಜ್ಯ ಧಾರಕದ ವಿಷಯದಲ್ಲಿ. 5) ಈಗಾಗಲೇ ಒಬ್ಬರ ಒಡೆತನದಲ್ಲಿರಬಹುದಾದ ಅಥವಾ ಇರದೇ ಇರಬಹುದಾದ ಏನಾದರೂ ಬೇಕಾದಾಗ ಆದರೆ ಬಳಕೆಗೆ ಹತ್ತಿರದಲ್ಲಿರದಿದ್ದಾಗ, ಉದಾಹರಣೆಗೆ ಪ್ರಯಾಣದ ನಿಮಿತ್ತ ದೂರದಲ್ಲಿದ್ದಾಗ ಮೋಟಾರು ವಾಹನ ಅಥವಾ ಸೈಕಲ್ಲು ಬಾಡಿಗೆ ತೆಗೆದುಕೊಳ್ಳುವುದು. 6) ಖರೀದಿಗಿಂತ ಅಗ್ಗವಾದ ಪರ್ಯಾಯದ ಅಗತ್ಯವಿರುವಾಗ, ಉದಾಹರಣೆಗೆ ಚಲನಚಿತ್ರವನ್ನು ಬಾಡಿಗೆಗೆ ತೆಗೆದುಕೊಳ್ಳುವುದು: ಒಬ್ಬ ವ್ಯಕ್ತಿಯು ಚಲನಚಿತ್ರದ ಪೂರ್ಣ ಬೆಲೆ ಪಾವತಿಸಲು ಇಷ್ಟಪಡದಿರುವುದು, ಹಾಗಾಗಿ ಅವರು ಸ್ವಲ್ಪ ಕಡಿಮೆ ಬೆಲೆಗೆ ಅದನ್ನು ಬಾಡಿಗೆಗೆ ಪಡೆಯುತ್ತಾರೆ, ಆದರೆ ಅದನ್ನು ನಂತರ ಮತ್ತೊಮ್ಮೆ ವೀಕ್ಷಿಸುವ ಅವಕಾಶವನ್ನು ಬಿಟ್ಟುಕೊಡುವುದು. 7) ಬಾಡಿಗೆದಾರನು ಆಸ್ತಿಯ ಸಂರಕ್ಷಣೆಯ (ಹುಲ್ಲುಹಾಸಿನ ಹುಲ್ಲನ್ನು ಕತ್ತರಿಸುವುದು, ಹಿಡಿಕೆ ಮೋರದಿಂದ ಹಿಮವನ್ನು ಸರಿಸುವುದು, ಇತ್ಯಾದಿ) ಭಾರವನ್ನು ಅದರ ಒಡೆಯ ಅಥವಾ ಅವನ ದಳ್ಳಾಳಿಗಳಿಗೆ ಬಿಟ್ಟುಕೊಡಲು ಇಷ್ಟಪಡಬಹುದು. 8) ಕ್ರಿಯಾವಧಿ ಮತ್ತು ಸಂರಕ್ಷಣೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. 9) ಆಸ್ತಿಯನ್ನು ಖರೀದಿಸಿದ ಸಂದರ್ಭದಲ್ಲಿ ಒಂದು ಕಂಪನಿಯ ಆಯವ್ಯಯ ಪಟ್ಟಿ ಮೇಲೆ ಭಾರಹಾಕಬಲ್ಲ ಋಣವನ್ನು ಬಾಡಿಗೆ ಪಡೆಯುವಿಕೆಯು ಆಯವ್ಯಯ ಪಟ್ಟಿಯಿಂದ ದೂರವಿಡುತ್ತದೆ. 10) ಉತ್ಪನ್ನಗಳನ್ನು ವಿಲೇವಾರಿ ಮಾಡುವ, ಅತಿ ಉತ್ಪಾದಿಸುವ ಅಥವಾ ಕಡಿಮೆ ಬಳಸುವ ಬದಲು ಉಪಯುಕ್ತತೆಯನ್ನು ಗರಿಷ್ಠೀಕರಿಸುವ ಮೂಲಕ ಉತ್ಪನ್ನಗಳನ್ನು ಹೆಚ್ಚು ಸಮರ್ಥವಾಗಿ ಬಳಸಿದರೆ ಬಾಡಿಗೆ ಪಡೆಯುವುದು ಪರಿಸರಕ್ಕೆ ಉತ್ತಮವಾಗಿದೆ.[]

ಉಲ್ಲೇಖಗಳು

ಬದಲಾಯಿಸಿ
  1. "Why buy it when you can rent it?", The Observer, 2004-06-27. Retrieved on 2009-09-09.