ಬಾಗ್‍ನಾಥ್ ದೇವಾಲಯ

ಬಾಗ್‍ನಾಥ್ ದೇವಾಲಯವು (ಹಿಂದಿ:बागनाथ मंदिर) ಶಿವನಿಗೆ ಸಮರ್ಪಿತವಾದ ಪುರಾತನ ದೇವಾಲಯವಾಗಿದ್ದು, ಬಾಗೇಶ್ವರ್ ನಗರದಲ್ಲಿ ಸರಯು ಮತ್ತು ಗೋಮತಿ ನದಿಗಳ ಸಂಗಮದಲ್ಲಿದೆ.[][] ಬಾಗ್‍ನಾಥ್ ದೇವಾಲಯವು ಎಲ್ಲಾ ಗಾತ್ರದ ಗಂಟೆಗಳಿಂದ ಕೂಡಿದೆ ಮತ್ತು ಆಕರ್ಷಕ ಕೆತ್ತನೆಗಳನ್ನು ಹೊಂದಿದೆ.[] ಇದು ಬಾಗೇಶ್ವರ ಜಿಲ್ಲೆಯ ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ.[] ಶಿವರಾತ್ರಿಯ ಸಂದರ್ಭದಲ್ಲಿ ಇದು ಭಕ್ತರಿಂದ ತುಂಬಿರುತ್ತದೆ.[] ಬಾಗೇಶ್ವರ ನಗರಕ್ಕೆ ಈ ದೇವಾಲಯದಿಂದ ಹೆಸರು ಬಂದಿದೆ.[][]

ರಾಜ ಲಕ್ಷ್ಮಿ ಚಂದ್‍ನು 1450 ರಲ್ಲಿ ಪ್ರಸ್ತುತ ಕಟ್ಟಡವನ್ನು ನಿರ್ಮಿಸಿದನು.

7 ನೇ ಶತಮಾನದಿಂದ ಬಾಗ್‍ನಾಥ್ ದೇವಾಲಯವು ಅಸ್ತಿತ್ವವದಲ್ಲಿದೆ ಎಂದು ಕೆಲವು ಮೂಲಗಳು ಹೇಳಿದರೂ,[] ನಾಗರ ಶೈಲಿಯಲ್ಲಿರುವ ಈಗಿನ ಕಟ್ಟಡವನ್ನು 1450 ರಲ್ಲಿ ಚಂದ್ ಅರಸ ಲಕ್ಷ್ಮಿ ಚಂದ್ ನಿರ್ಮಿಸಿದನು.[][][] ದೇವಾಲಯದಲ್ಲಿನ ವಿವಿಧ ಪ್ರತಿಮೆಗಳು ಕ್ರಿ.ಶ 7 ನೇ ಶತಮಾನದಿಂದ ಕ್ರಿ.ಶ. 16 ನೇ ಶತಮಾನದವರೆಗಿನ ಕಾಲಮಾನದ್ದೆಂದು ನಿರ್ಧಾರವಾಗಿದೆ.[೧೦]

ಛಾಯಾಂಕಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Singh, Kautilya; Chakrabarty, Arpita (21 September 2016). "Water police post opens in Bageshwar to tackle drowning incidents, crimes". Almora: ದಿ ಟೈಮ್ಸ್ ಆಫ್‌ ಇಂಡಿಯಾ. TNN. Retrieved 15 October 2016.
  2. "Bagnath temple". travelomy.com. Archived from the original on 3 December 2017. Retrieved 29 October 2012.
  3. Singh, Sarina (15 September 2010). India. Ediz. Inglese (in ಇಂಗ್ಲಿಷ್). Lonely Planet. p. 498. ISBN 9781742203478.
  4. Kumar, Brajesh (2003). Pilgrimage Centres of India (in ಇಂಗ್ಲಿಷ್). Diamond Pocket Books (P) Ltd. p. 96. ISBN 9788171821853.
  5. "Terror threat fails to deter devotees". The Tribune. Dehradun. Press Trust of India. 7 March 2016. Retrieved 15 October 2016.
  6. ೬.೦ ೬.೧ Nag, Prithvish (1999). Tourism and Trekking in Nainital Region (in ಇಂಗ್ಲಿಷ್). Concept Publishing Company. p. 83. ISBN 9788170227694.
  7. ೭.೦ ೭.೧ Kasniyal, B D (15 May 2016). "Development gains elude Kumaon's holy place". The Tribune. Pithoragarh. Retrieved 15 October 2016.
  8. Guides, Rough (3 October 2016). The Rough Guide to India (in ಇಂಗ್ಲಿಷ್). Rough Guides Limited. ISBN 9780241295397. Retrieved 15 October 2016.
  9. "Bagnath Temple (Bageshwar)". onlytravelguide.com.
  10. District Census Handbook: Bageshwar (PDF) (in English) (Series-6 Part XII-B ed.). Dehradun: Directorate of Census Operations, Uttarakhand. 2011. Retrieved 15 October 2016.{{cite book}}: CS1 maint: unrecognized language (link)

History Behind Bagnath Temple