ಬಾಗಲಕೋಟೆ ವಿಧಾನಸಭಾ ಕ್ಷೇತ್ರ

ಬಾಗಲಕೋಟೆ ವಿಧಾನಸಭಾ ಕ್ಷೇತ್ರ (ಕ್ಷೇತ್ರ ಸಂಖ್ಯೆ-೨೪) ಬಾಗಲ್ಕೋಟೆ ಜಿಲ್ಲೆಯ ೭ ಕ್ಷೇತ್ರಗಳಲ್ಲಿ ಒಂದು. ಹುನಗುಂದ, ಬಾದಾಮಿ ಮತ್ತು ಬೀಳಗಿ ಕ್ಷೇತ್ರಗಳು ಬಾಗಲಕೋಟೆ ಕ್ಷೇತ್ರಕ್ಕೆ ಅಂಟಿಕೊಂಡಿರುವ ವಿ.ಸ. ಕ್ಷೇತ್ರಗಳಾಗಿವೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದ ಭಾಗವಾಗಿಯೂ ಗುರುತಿಸಿಕೊಂಡಿದೆ.

ಬಾಗಲಕೋಟೆ ಜಿಲ್ಲೆಯ ನಕ್ಷೆ. ಕೆಂಪು ಬಣ್ಣದಲ್ಲಿ ಇರುವುದು ಬಾಗಲಕೋಟೆ ವಿಧಾನಸಭಾ ಕ್ಷೇತ್ರ

ಕ್ಷೇತ್ರದ ವಿಶೇಷತೆಗಳು ಬದಲಾಯಿಸಿ

ಬಾಗಲಕೋಟೆ ಚಾಲುಕ್ಯ ಅರಸರ ಆಡಳಿತದಲ್ಲಿ ಇದ್ದ ಪ್ರದೇಶ. ವಿಜಯನಗರ, ಪೇಶ್ವೆ, ಹೈದರ್ ಅಲಿ, ಮರಾಠಾ ರಾಜವಂಶದ ರಾಜರು ಸಹ ಇಲ್ಲಿ ಆಡಳಿತ ನಡೆಸಿದ್ದರು. ಬಾದಾಮಿ, ಐಹೊಳೆ, ಪಟ್ಟದಕಲ್ಲುನಂತಹ ಪ್ರಮುಖ ಐತಿಹಾಸಿಕ ಸ್ಥಳಗಳನ್ನು ಹೊಂದಿರುವ ಬಾಗಲಕೋಟೆಗೆ ಮುಳುಗಡೆ ನಗರಿ ಎಂಬ ಅಡ್ಡಹೆಸರೂ ಇದೆ. ಆಲಮಟ್ಟಿ ಜಲಾಶಯದ ಕಾರಣ, ಹಳೆ ಬಾಗಲಕೋಟೆಯ ಹಲವು ಭಾಗಗಳು ಮುಳುಗಡೆಯಾಗಿವೆ. ಈಗ ಅಸ್ತಿತ್ವದಲ್ಲಿರುವ ಬಾಗಲಕೋಟೆ ಪಟ್ಟಣ ನವನಗರ ಎಂದು ಗುರುತಿಸಿಕೊಂಡಿದೆ[೧].

ಚುನಾವಣಾ ಇತಿಹಾಸ ಬದಲಾಯಿಸಿ

ಬಾಗಲಕೋಟೆ ವಿ.ಸ. ಕ್ಷೇತ್ರದಲ್ಲಿ ಇದುವರೆಗೆ ಒಟ್ಟು ೧೬ ಬಾರಿ ಸಾರ್ವತ್ರಿಕ ಚುನಾವಣೆಗಳು ನಡೆದಿವೆ. ಒಟ್ಟು ೭ ಅವಧಿಗೆ ಕಾಂಗ್ರೆಸ್ (೧೯೫೭, ೧೯೬೨, ೧೯೬೭, ೧೯೭೨, ೧೯೭೮, ೨೦೧೩ ಮತ್ತು ೨೦೨೩), ೫ ಬಾರಿ ಬಿಜೆಪಿ (೧೯೮೫, ೧೯೯೯, ೨೦೦೪, ೨೦೦೮, ೨೦೧೮), ೨ ಬಾರಿ ಜನತಾದಳ(೧೯೮೯ ಮತ್ತು ೧೯೯೪) ತಲಾ ೧ ಬಾರಿ ಪಕ್ಷೇತರ (೧೯೮೩) ಮತ್ತು ಅಸ್ಸಾಂ ಗಣಪರಿಷತ್ (೧೯೯೮) ಅಭ್ಯರ್ಥಿಗಳು ಅಧಿಕಾರದ ಗದ್ದುಗೆ ಏರಿದ್ದಾರೆ. ಕಾಂಗ್ರೆಸ್, ಬಿಜೆಪಿ ಮತ್ತು ಜನತಾದಳ ಪಕ್ಷಗಳ ನಡುವೆ ತೀವ್ರ ಪೈಪೋಟಿ ಇರುವುದನ್ನು ಕಾಣಬಹುದು.

ಮೊದಲ ಮೂರು ಚುನಾವಣೆಗಳಲ್ಲಿ ಅಂದರೆ ೧೯೫೧, ೧೯೫೭ ಹಾಗೂ ೧೯೬೨ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಬಿ ಟಿ ಮುರ್ನಾಳ್ ಹ್ಯಾಟ್ರಿಕ್‌ ಜಯ ಸಾಧಿಸಿದ್ದರು. ಅದೇ ರೀತಿ ಬಿಜೆಪಿ ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ ಸಹ ಮೂರು ಬಾರಿ (ಆದ್ರೆ ಇದು ಸತತ ಗೆಲುವು ಅಲ್ಲ) ಅಂದರೆ ೨೦೦೪, ೨೦೦೮ ಮತ್ತು ೨೦೧೮ರ ಚುನಾವಣೆಯಲ್ಲಿ ಗೆದ್ದ ಇನ್ನೊಬ್ಬ ಸಂಸದರಾಗಿದ್ದಾರೆ[೧].

ಮತದಾರರು ಬದಲಾಯಿಸಿ

ಅಂಕಿ ಅಂಶ ಬದಲಾಯಿಸಿ

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ- ೨,೪೫,೧೪೩[೨]

  • ಪುರುಷರು- ೧,೨೧,೭೦೬
  • ಮಹಿಳೆಯರು-೧,೨೩,೪೨೧
  • ತೃತೀಯ ಲಿಂಗಿ- ೧೬

ಜಾತಿವಾರು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. ೧.೦ ೧.೧ "ಬಾಗಲಕೋಟೆ ವಿಧಾನಸಭಾ ಕ್ಷೇತ್ರ". ಈ ದಿನ.ಕಾಂ. ಈ ದಿನ. Retrieved 15 June 2023.
  2. "24-Bagalkot Information Electoral Population". kgis.ksrsac.in. ಕರ್ನಾಟಕ ಚುನಾವಣಾ ಮಾಹಿತಿ ವ್ಯವಸ್ಥೆ. Retrieved 15 June 2023.