ಬಾಂಬೆ ಫ್ಲೈಯಿಂಗ್ ಕ್ಲಬ್
ಬಾಂಬೆ ಫ್ಲೈಯಿಂಗ್ ಕ್ಲಬ್ ಭಾರತದ ಫ್ಲೈಯಿಂಗ್ ಕ್ಲಬ್ ಗಳಲ್ಲಿ ಅತ್ಯಂತ ಪುರಾತನವಾದುದು. ಇದು ಜುಹು ಏರೋಡ್ರೋಮ್, ಬಾಂಬೆ (ಮುಂಬೈ) ನಲ್ಲಿದೆ. [೧]
ಇತಿಹಾಸ
ಬದಲಾಯಿಸಿಬಾಂಬೆ ಫ್ಲೈಯಿಂಗ್ ಕ್ಲಬ್ ಅನ್ನು ೨೯ ಮೇ ೧೯೨೮ ರಂದು ಸ್ಥಾಪಿಸಲಾಯಿತು. ೧೯೨೯ ರ ಜನವರಿ ೧೩ ರಂದು ಭಾರತ ಸರ್ಕಾರವು ಅವರಿಗೆ ಎರಡು ಡಿ ಹ್ಯಾವಿಲ್ಯಾಂಡ್ ಮಾತ್ ವಿಮಾನಗಳನ್ನು ನೀಡಿತು. ಅವುಗಳನ್ನು ಸ್ವೀಕರಿಸಿ ಅವರು ಹಾರಾಟವನ್ನು ಪ್ರಾರಂಭಿಸಿದರು. ಸಂಸ್ಥೆಯ ತರಬೇತಿಯಿಂದ ಹನ್ನೆರಡು ಅರ್ಹ ಹಾರಾಟಗಾರರು (ಅದರಲ್ಲಿ ಆರು ಜನ ಭಾರತೀಯರು) ಹೊರಬಂದಾಗ, ಇಂಥ ಸಾಧನೆ ಮಾಡಿದ ಮೊಟ್ಟ ಮೊದಲ ಭಾರತೀಯ ಫ್ಲೈಯಿಂಗ್ ಕ್ಲಬ್‌ಗೆ ನೀಡಲಾಗುವ ಬಹುಮಾನವಾಗಿ ಮೂರನೆಯ ವಿಮಾನ, ಡಿಎಚ್ ಮಾತ್ (ಜಿಪ್ಸಿ) ಅನ್ನು ಸರ್ ಚಾರ್ಲ್ಸ್ ವೇಕ್‌ಫೀಲ್ಡ್ ಅವರು ಈ ಸಂಸ್ಥೆಗೆ ನೀಡಿದರು. [೨] ಕ್ಲಬ್ ಈ ವಿಮಾನಗಳನ್ನು ತರಬೇತಿ, ಮನರಂಜನಾ ಹಾರಾಟ ಮತ್ತು ವಿಮಾನ ಪ್ರಯಾಣಕ್ಕಾಗಿ ಬಳಸಿತು. ದುರದೃಷ್ಟವಶಾತ್, ಜುಹುದಲ್ಲಿನ ಏರೋಡ್ರೋಮ್ ಮಳೆಗಾಲದಲ್ಲಿ ಬಳಸಲು ಸೂಕ್ತವಲ್ಲ ಎಂಬ ಕಾರಣಕ್ಕಾಗಿ ಕ್ಲಬ್‌ನ ಚಟುವಟಿಕೆಗಳು ಸೀಮಿತವಾಗಿದ್ದವು. [೩] ಈ ಸಮಸ್ಯೆಯನ್ನು ೧೯೩೭ರಲ್ಲಿ ಪರಿಹರಿಸಲಾಯಿತು. [೪] ಏರೋಡ್ರೋಮ್‌ನಲ್ಲಿ ಹ್ಯಾಂಗರ್ ಮತ್ತು ಗ್ಯಾರೇಜ್‌ಗಳನ್ನು ನಿರ್ಮಿಸಲು ೧೭ ಆಗಸ್ಟ್ ೧೯೩೧ರಂದು ಕ್ಲಬ್ ತನ್ನ ಪರವಾನಗಿಯನ್ನು ಪಡೆಯಿತು. [೫]
ಭಾರತೀಯ ನಾಗರಿಕ ವಿಮಾನಯಾನ ಪಿತ ಜೆಆರ್ ಡಿ ಟಾಟಾ, ಪೈಲಟ್ ಪರವಾನಗಿ ಪಡೆದ ಮೊಟ್ಟ ಮೊದಲ ಭಾರತೀಯ, ೧೯೨೯ರಲ್ಲಿ ಇದೇ ಕ್ಲಬ್ ನಲ್ಲಿ ತರಬೇತಿ ಪಡೆದರು. ಅವರ ಸಹೋದರಿ, ಲೇಡಿ ದಿನ್ಷಾ ಪೆಟಿಟ್, ಭಾರತದಲ್ಲಿ ಪೈಲಟ್ ಪರವಾನಗಿ ಪಡೆದ ಮೊದಲ ಮಹಿಳೆ. [೬]
ಪ್ರಸ್ತುತದಲ್ಲಿ ಈ ಕ್ಲಬ್ ಒಂದು ಸೆಸ್ನಾ 152 ಏರೋಬಾಟ್, ಐದು ಸೆಸ್ನಾ 172 ಅನ್ನು ಹೊಂದಿದೆ. ಅದರಲ್ಲಿ ಒಂದು ಗಾಮಿನ್ ೧೦೦೦ ಗ್ಲಾಸ್ ಕಾಕ್‌ಪಿಟ್, ಒಂದು ಅವಳಿ ಎಂಜಿನ್ ಪೈಪರ್ ಪಿಎ -34 ಸೆನೆಕಾ ಮತ್ತು ಒಂದು ಪೈಪರ್ ಸೂಪರ್ ಕಬ್ ಪಿಎ -18 ಇವೆ. ಮುಂಬೈಯ ಅತಿಯಾದ ವಾಯುದಟ್ಟಣೆಯ ಅನನುಕೂಲವನ್ನು ತಪ್ಪಿಸಲು ಕ್ಲಬ್ ತನ್ನ ತರಬೇತಿ ಕಾರ್ಯಾಚರಣೆಯ ಒಂದು ಭಾಗವನ್ನು ೨೦೦೯ರಲ್ಲಿ ಧುಲೆ ಪಟ್ಟಣದ ಸಮೀಪದ ಧುಲೆ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಿತು. ಕ್ಲಬ್ ತನ್ನ ತರಬೇತಿ ಚಟುವಟಿಕೆಗಳನ್ನು ಯಾವುದೇ ನಿರ್ಬಂಧಗಳಿಲ್ಲದೆ ನಡೆಸಲು ಮಹಾರಾಷ್ಟ್ರ ವಿಮಾನ ನಿಲ್ದಾಣ ಅಭಿವೃದ್ಧಿ ಕಂಪನಿಯಿಂದ ಏರ್ ಸ್ಟ್ರಿಪ್ ಅನ್ನು ಗುತ್ತಿಗೆಗೆ ಪಡೆಯಿತು. [೭] ನಗರದ ಹೆಸರು ಬದಲಾದರೂ ಕ್ಲಬ್ ತನ್ನ ಹಳೆಯ ಹೆಸರನ್ನು ಉಳಿಸಿಕೊಂಡಿದೆ. ಆದಾಗ್ಯೂ ಹಾರುವ ತರಬೇತಿ, ಹವ್ಯಾಸಿ ಹಾರುವಿಕೆ ಮತ್ತು ಸದಸ್ಯರ ಹಾರಾಟ, ಮುಂಬೈನ ಜುಹು ವಿಮಾನ ನಿಲ್ದಾಣದಲ್ಲಿಯೂ ಮುಂದುವರಿದಿದೆ.
ಬಾಹ್ಯ ಕೊಂಡಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Bombay Flying Club to open up the skies". The Times of India. 25 December 2003. Archived from the original on 11 August 2011. Retrieved 12 June 2010.
- ↑ "Bombay Flying Club "At Home"". Flight Global. 7 February 1930. Retrieved 17 September 2011.
- ↑ "Bombay Flying Club First Annual Report". Flight Global. 1 August 1929. Retrieved 16 September 2011.
- ↑ "Juhu Improvements". Flight Global. 28 October 1937. Retrieved 17 September 2011.
- ↑ "Bombay Flying club moves court against AAI order". The Times of India. 3 April 2012. Archived from the original on 10 July 2012. Retrieved 24 April 2012.
- ↑ "Bombay Flying Club First Annual Report". Flight Global. 1 August 1929. Retrieved 16 September 2011.
- ↑ "Busy city skies push flying club to Dhule". The Times of India. 24 May 2010. Archived from the original on 16 May 2013. Retrieved 2 March 2012.