ಬಸವನ ಹುಳು
ಮೃದ್ವಂಗಿಗಳು
ಬಸವನ ಹುಳು | |
---|---|
Helix pomatia, a species of land snail | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | |
ವರ್ಗ: |
ಬಸವನ ಹುಳು ನೀರಿನಲ್ಲಿ ಹಾಗೂ ಭೂಮಿಯಲ್ಲಿ ವಾಸಿಸುತ್ತವೆ. ಕೆಲವು ಜೀವಿಗಳು ಗಿಡಗಳನ್ನು, ಎಲೆಗಳನ್ನು ತಿನ್ನುತ್ತವೆ ಇನ್ನೂ ಕೆಲವು ಬಸವನ ಹುಳುಗಳು ಬೇರೆ ಜೀವಿಗಳನ್ನು ತಿನ್ನುತ್ತವೆ. ಒಣಹವೆಯಲ್ಲಿ ಭೂಮಿಯ ಮೇಲೆ ಇರುವ ಬಸವನ ಹುಳುಗಳು ತಮ್ಮ ಚಿಪ್ಪುಗಳನ್ನು ಮುಚ್ಚುವ ಮೂಲಕ ತಮ್ಮನ್ನು ತೇವವಾಗಿ ಇಟ್ಟುಕೊಳ್ಳುತ್ತವೆ. ಗೊಂಡೆಹುಳುಗಳು ಹಾಗು ಬಸವನ ಹುಳುಗಳಲ್ಲಿ ಇರುವ ಒಂದೇ ವ್ಯತ್ಯಾಸವೆಂದರೆ ಗೊಂಡೆಹುಳುಗಳಿಗೆ ಯಾವುದೇ ಚಿಪ್ಪುಗಳು ಇಲ್ಲ. ಬಸವನ ಹುಳುಗಳಿಗೆ ಬಲವಾದ ಹಲ್ಲುಗಳಿರುತ್ತವೆ. ನೀರಿನಲ್ಲಿ ಬದುಕುವ ಬಸವನ ಹುಳುವಿನ (limpet) ಹಲ್ಲು ಜಗತ್ತಿನ ಎಲ್ಲಕ್ಕಿಂತ ಹೆಚ್ಚು ಗಟ್ಟಿಯಾದ ವಸ್ತುವೆಂದು ತಿಳಿದುಬಂದಿದೆ.
ಅಪಾಯಕಾರಿ ಶಂಖಹುಳು
ಬದಲಾಯಿಸಿ- ಕೆಲವರಿಗೆ ಕಪ್ಪೆ ಚಿಪ್ಪು, ಶಂಖಗಳನ್ನು ಕೂಡಿಟ್ಟುಕೊಳ್ಳುವ, ಸಂಗ್ರಹಿಸಿಟ್ಟುಕೊಳ್ಳುವ ಹವ್ಯಾಸವನ್ನು ನೋಡಿರುತ್ತೇವೆ. ಅಂಥವರಿಗೆ ಈ ಕೋನ್ ಎಂಬ ಶಂಖ ಇಷ್ಟವಾಗದೇ ಇರಲು ಸಾಧ್ಯವೇ ಇಲ್ಲ. ಆದರೆ ಅದರ ಸೌಂದರ್ಯಕ್ಕೆ ಮರುಳಾಗಿ ಮುಟ್ಟಲು ಹೋದರೆ, ಈ ಪುಟ್ಟ ಶಂಖ ಹುಳು ಜೀವಕ್ಕೇ ಎರವಾಗುವಷ್ಟು ಶಕ್ತಿಶಾಲಿಯಾದುದು. ಈ ಸಾಗರದಾಳದ ಜೀವಿಗೆ ಈಟಿಯಂಥ ಕೊಕ್ಕೆಯಿದ್ದು, ಆ ಮೂಲಕ ಮಾರಣಾಂತಿಕ ವಿಷಕಾರಿ ಅಂಶವನ್ನು ದೇಹಕ್ಕೆ ಚುಚ್ಚಬಲ್ಲದು. ಈ ಕೊಕ್ಕೆ ಮನುಷ್ಯರ ಚರ್ಮದ ಒಳಗೆ ಸಲೀಸಾಗಿ ಹೋಗಬಲ್ಲದು. ಗಟ್ಟಿಯಾದ ಕೈಗವಸನ್ನು ತೊಟ್ಟಿದ್ದರೂ ಅವುಗಳ ಒಳಗೂ ಹೊಕ್ಕಬಲ್ಲಷ್ಟು ಮೊನಚಿರುತ್ತದೆ.
- ತನ್ನ ಈ ಮೊನಚಾದ ಕೊಕ್ಕೆಯಿಂದಲೇ ಮೀನುಗಳನ್ನು ಒಂದೆರಡು ಸೆಕೆಂಡುಗಳಲ್ಲೇ ದುರ್ಬಲಗೊಳಿಸಬಲ್ಲದು. ಕೊಕ್ಕೆಯನ್ನು ತನ್ನ ಬೇಟೆಗೆ ಅಂಟಿಸಿ ನಂತರ ವಿಷವನ್ನು ಕಕ್ಕುತ್ತದೆ. ಕೆಲವೇ ನಿಮಿಷಗಳಲ್ಲಿ ಅದನ್ನು ತಿಂದು ಹಾಕುತ್ತದೆ. ಮೀನಿಗಷ್ಟೇ ಅಲ್ಲ, ಮನುಷ್ಯರಿಗೂ ಇದು ಮಾರಣಾಂತಿಕ. ಈ ಶಂಖ ಹುಳುವಿನ ವಿಷದ ಒಂದು ಹನಿ ಇಪ್ಪತ್ತು ಮಂದಿಯನ್ನು ಕೊಲ್ಲಬಲ್ಲಷ್ಟು ಸಮರ್ಥವಾಗಿರುವುದರಿಂದ ಇದಕ್ಕೆ ‘ಸಾಗರದಲ್ಲಿನ ಅತಿ ಹೆಚ್ಚು ವಿಷಕಾರಿ ಪ್ರಭೇದ’ ಎಂದು ಕರೆಯಲಾಗಿದೆ.
- ಕೋನೊಟಾಕ್ಸಿನ್ ಎಂದು ಕರೆಸಿಕೊಳ್ಳುವ ಈ ವಿಷ, ಕೆಲವು ವಿಧದ ನರಗಳ ಮೇಲೆ ಅತಿ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಮನುಷ್ಯರಿಗೆ ಚುಚ್ಚಿದರೆ ಸಾಕು, ತೀವ್ರ ನೋವಿನೊಂದಿಗೆ ಶ್ವಾಸಕೋಶದ ತೊಂದರೆ ಉಂಟಾಗುತ್ತದೆ. ದೃಷ್ಟಿ ಮಸುಕಾಗುವುದು, ಶ್ರವಣ ದೋಷ ಉಂಟಾಗುವ ಸಾಧ್ಯತೆ ಇದೆ. ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ದೊರೆಯದೇ ಇದ್ದರೆ, ಚುಚ್ಚಿದ ಕೆಲವೇ ಗಂಟೆಗಳಲ್ಲಿ ಸಾವೂ ಸಮೀಪಿಸುತ್ತದೆ. [೧]
ನೋಡಿ
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ "ವಿಷಕಾರಿ ಹುಳು;ಅತಿ ಅಪಾಯಕಾರಿ ಈ ಶಂಖುಹುಳು10 Nov, 2016". Archived from the original on 2016-11-10. Retrieved 2016-11-10.