ಬಳ್ಳಾರಿ ಎಂ ರಾಘವೇಂದ್ರ

ಬಳ್ಳಾರಿ ಎಂ ರಾಘವೇಂದ್ರ ಖ್ಯಾತ ಕರ್ನಾಟಕ ಸಂಗೀತ ವಿದ್ವಾಂಸರಲ್ಲಿ ಒಬ್ಬರು. ಶ್ರೀಯುತರು ಬೆಂಗಳೂರು ವಿಶ್ವವಿದ್ಯಾನಿಲಯದ ಸಂಗೀತ ವಿಭಾಗದಲ್ಲಿ ಉನ್ನತ ಪದವಿಯನ್ನು ಹೊಂದಿರುವರು. ಪ್ರಸ್ತುತ ಆಕಾಶವಾಣಿ ಮೈಸೂರು ನಿಲಯದ ಕಾರ್ಯಕ್ರಮ ನಿರ್ವಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ಪಷ್ಟತೆಯಿಂದ, ವಿವಿಧ ಲಯ ಪ್ರಕಾರಗಳನ್ನು ಬಳಸಿ, ಭಾವಪೂರ್ಣತೆಯೊಂದಿಗೆ ಕೃತಿಗಳನ್ನು ಅರ್ಪಿಸುವುದು ಶ್ರೀಯುತರ ವಿಶಿಷ್ಟತೆಗಳಲ್ಲಿ ಒಂದು.[] ಅವರು ಪ್ರಸ್ತುತ ಮೈಸೂರು ಜಿಲ್ಲೆಯಲ್ಲಿ ವಾಸವಾಗಿದ್ದಾರೆ.


ವಿದ್ವಾನ್ ಬಳ್ಳಾರಿ ಎಮ್. ರಾಘವೇಂದ್ರ
ಜನ್ಮನಾಮರಾಘವೇಂದ್ರ
ಜನನ (1958-04-23) ಏಪ್ರಿಲ್ ೨೩, ೧೯೫೮ (ವಯಸ್ಸು ೬೬)
ಮೂಲಸ್ಥಳಬಳ್ಳಾರಿ
ಸಂಗೀತ ಶೈಲಿಕರ್ನಾಟಕ ಸಂಗೀತ
ವೃತ್ತಿನಿವೃತ್ತ ಸಹಾಯಕ ಕೇಂದ್ರ ನಿರ್ದೇಶಕರು ಆಕಾಶವಾಣಿ

ಸಂಗೀತ ಪರಂಪರೆ

ಬದಲಾಯಿಸಿ

ವಿದ್ವಾನ್ ಬಳ್ಳಾರಿ ಎಂ ರಾಘವೇಂದ್ರ ಬಳ್ಳಾರಿಯ ಹೊಸಪೇಟೆಯಲ್ಲಿ ಜನಿಸಿದರು.[] ಅನೇಕ ಪೀಳಿಗೆಗಳಿಂದ ಅವರ ಪೂರ್ವಜರು ಕರ್ನಾಟಕ ಸಂಗೀತವನ್ನು ರೂಢಿಸಿಕೊಂಡು ಬಂದಿದ್ದಾರೆ. ಅವರ ತಾತ ಬಳ್ಳಾರಿ ಮುಂಡ್ರಿಗಿ ರಾಘವೇಂದ್ರಾಚಾರ್ ಕರ್ನಾಟಕದ ಪ್ರಚಲಿತ ಹರಿದಾಸ ಪರಂಪರೆಗೆ ಸೇರಿದವರು.[][]

ರಾಘವೇಂದ್ರಾಚಾರ್ ಅವರ ತಂದೆ ನರಸಿಂಹಾಚಾರ್ ಹಾಗು ತಾತ ವೆಂಕಣ್ಣಾಚಾರ್.[] ಇವರುಗಳು ಮೂಲತಹ ಗದಗ್ ಜಿಲ್ಲಯ ಮುಂಡ್ರಿಗಿ ಹಳ್ಳಿಗೆ ಸೇರಿದವರು. ರಾಘವೇಂದ್ರಾಚಾರರು ಮುಂದೆ ಮುಂಡ್ರಿಗಿ ತಾಲುಕ್ಕನ್ನು ಬಿಟ್ಟು ಬಳ್ಳಾರಿಗೆ ಬಂದು ಸೇರಿದರು[] ರಾಘವೇಂದ್ರಾಚಾರರು ಸಂಗೀತದ ಅನೇಕ ಪ್ರಕಾರಗಳಲ್ಲಿ ಪರಿಣಿತಿಯನ್ನು ಹೊಂದಿದ್ದರು ಹಾಗು ಶ್ರೀಯುತರು ಮದ್ರಾಸಿನ ಕ್ವೀನ್ಸ್ ಮೇರೀ ಕಾಲೇಜಿನಲ್ಲಿ ಸಂಗೀತ ವಿಭಾಗದ ಪ್ರಾಧ್ಯಾಪಕರಾಗಿದ್ದರು(ಪ್ರೊ: ಸಾಂಬಮೂರ್ತಿಗಳ ಸಮಕಾಲೀನರು).[] ರಾಘವೇಂದ್ರಾಚಾರರು ಪುಟ್ಟರಾಜ ಗವಾಯಿಗಳಿಗೂ ಕೆಲ ಕಾಲ ಸಂಗೀತ ಪಾಠ ಹೇಳಿದ್ದರೆಂದು ಹೇಳಲಾಗುತ್ತದೆ[]

ಬಳ್ಳಾರಿ ಎಂ ರಾಘವೇಂದ್ರ ಅವರ ತಂದೆ ಬಳ್ಳಾರಿ ಎಂ ವೆಂಕಟೇಶ್ ಆಚಾರ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸರು ಹಾಗು ಅವರ ಚಿಕ್ಕಪ್ಪ ದಿವಂಗತ ಶೇಷಗಿರಿ ಆಚಾರ್ ಕರ್ನಾಟಕ ಸಂಗೀತದಲ್ಲಿ ವಾಗ್ಗೇಯಕಾರರಾಗಿದ್ದರು.[] ಅವರ ಚಿಕ್ಕಪ್ಪ ಮತ್ತು ತಂದೆ ಬಳ್ಳಾರಿ ಸಹೋದರರೆಂಬ ಹೆಸರಿನಿಂದಲೇ ಪ್ರಸಿದ್ದರಾಗಿ ೧೯೫೦ ರಿಂದ ೧೯೬೦ರ ಕಾಲಘತಟ್ಟ್ದಲ್ಲಿ ಭಾರತದ ಅನೇಕ ಭಾಗಗಳಲ್ಲಿ ಸಂಗೀತ ಕಛೇರಿಗಳನ್ನು ಜೊತೆಯಾಗಿ ನೀಡಿದ್ದಾರೆ.[][] ಬಳ್ಳಾರಿ ಸಹೋದರರಿಗೆ ಸಂಗೀತ ಕಛೇರಿಗಳಲ್ಲಿ ಪಾಲ್ಘಾಟ್ ಮಣಿ ಐಯ್ಯರ್, ಲಾಲ್ಗುಡಿ ಜಯರಾಮನ್, ಪಾಲ್ಘಾಟ್ ಆರ್ ಮಣಿ, ಟಿ ಕೆ ಮೂರ್ತಿ, ಎಮ್ ಎಸ್ ಗೋಪಾಲ್ ಕೃಷ್ಣ, ಉಮ್ಯಾಳ್ ಪುರಮ್ ಕೆ ಶಿವರಾಮನ್, ಟಿ ಎನ್ ಕೃಷ್ಣನ್, ಕರೈಕುಡಿ ಮಣಿ ಇವರೆ ಮೊದಲಾದ ಶ್ರೇಷ್ಠ ವಿದ್ವಾಂಸರುಗಳು ವಾದ್ಯಸಹಯೋಗವನ್ನು ನೀಡಿದ್ದಾರೆ.[] ಬಳ್ಳಾರಿ ಎಮ್ ವೆಂಕಟೇಶ್ ಆಚಾರ್ ಅವರಿಗೆ ಮೈಸೂರಿನ ಸಂಗೀತ ಸಭಾದವರ ವತಿಯಿಂದ ಸಂಗೀತ ವಿದ್ಯಾನಿಧಿ ಪ್ರಶಸ್ತಿ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಅವಧೂತ ಪೀಠದ ವತಿಯಿಂದ ಆಸ್ಥಾನ ವಿದ್ವಾನ್ ಪ್ರಶಸ್ತಿ, ಹಾಗು ಕರ್ನಾಟಕ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ವತಿಯಿಂದ ಕರ್ನಟಕ ಕಲಾಶ್ರಿ ಇವೆ ಮೊದಲಾದ ಬಿರುದಾವಳಿಗಳೊಂದಿಗೆ ಗೌರವಿಸಲಾಗಿದೆ.[]

ಬಳ್ಳಾರಿ ಎಂ ರಾಘವೇಂದ್ರ ಅವರ ಸಹೋದರಿ ವಾಣಿ ಸತೀಶ್ ಅವರು ತಮ್ಮ ಹತ್ತನೆ ವಯಸ್ಸಿನಲ್ಲೆ ಸಂಗೀತ ಕಛೇರಿಯನ್ನು ನೀಡಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತದ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ.[] ಶ್ರೀಮತಿ ವಾಣಿ ಆಕಾಶವಾಣಿಯಲ್ಲಿ 'ಎ' ಶ್ರೇಣಿ ಕಲಾವಿದರಾಗಿದ್ದಾರೆ. ಶ್ರೀಮತಿ ವಾಣಿ ಭಕ್ತಿರಸದಿಂದ ತುಂಬಿದ ಕೃತಿಗಳನ್ನು ಹಾಡುವದರಲ್ಲಿ ಪ್ರಚಲಿತರು. ಇವರು ಮದುವೆಯಾದನಂತರ ಅಮೇರಿಕಾದಲ್ಲಿ ವಾಸವಾಗಿದ್ದರು,ವಿದೇಶಗಳಲ್ಲಿ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.[] ೧೯೯೦ರ ಬಳಿಕ ಭಾರತ ಹಾಗು ವಿದೇಶಗಳಲ್ಲಿ ಸಂಗೀತ ಕಚೇರಿಗಳನ್ನು ನೀಡುತ್ತಾ ಬಂದಿದ್ದಾರೆ.[] ಇವರು ಆಕಶವಾಣಿ, ದೂರದರ್ಶನ ಹಾಗು ಮತ್ತಿತರ ವಾಹಿನಿಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಲೇ ಬಂದಿದ್ದಾರೆ.[].

ಸಂಗೀತ ಶಿಕ್ಷಣ

ಬದಲಾಯಿಸಿ

ಬಳ್ಳಾರಿ ಎಂ ರಾಘವೇಂದ್ರ ಅವರ ಸಂಗೀತಾಭ್ಯಾಸ ಮೊದಲಿಗೆ ತಮ್ಮ ಚಿಕ್ಕಪ್ಪನವರಾದ ಶೇಷಗಿರಿ ಆಚಾರ್ ಅವರ ಮಾರ್ಗದರ್ಶನದಲ್ಲಿ ನೆರವೇರಿತು. ಶೇಷಗಿರಿ ಆಚಾರ್ ಅವರು ೪೦೦ರ ವರೆಗೆ ಕೃತಿಗಳನ್ನು ರಚಿಸಿದಂತಹವರು. ಬಳ್ಳಾರಿ ಎಂ ರಾಘವೇಂದ್ರ ಅವರು ತಮ್ಮ ತಂದೆಯಾದ ಬಳ್ಳಾರಿ ಎಮ್ ವೆಂಕಟೇಶ್ ಆಚಾರ್ ಅವರಿಂದಲೂ ಹೆಚ್ಚಾಗಿ ಪ್ರಭಾವಿತರಾಗಿದ್ದಾರೆ. ಇಬ್ಬರು ಗುರುಗಳ ಸತತ ನೆರವಿನಿಂದ ಸಂಗೀತ ಕ್ಷೇತ್ರದಲ್ಲಿ ಉತ್ತಮ ಮಾರ್ಗದರ್ಶನ ಪಡೆಯುವ ಭಾಗ್ಯ ಲಭ್ಯವಾಯಿತೆಂದು ರಾಘವೇಂದ್ರರವರು ಹೇಳುತ್ತಾರೆ. ಆದರೆ ಬಳ್ಳಾರಿ ಸಹೋದರರ ಸಮಯದಲ್ಲಿ ಸಾಕಷ್ಟು ಅವಕಾಶಗಳು ಇರಲಿಲ್ಲವೆಂದೂ ಅವರು ಅಭಿಪ್ರಾಯಪಡುತ್ತಾರೆI[]

ನಮ್ಮ ಗುರುಗಳಿಬ್ಬರೂ ಒಂದು ಖಾನವಳಿಯಲ್ಲಿ ಇಟ್ಟಿದ್ದ ರೇಡಿಯೋದ ಮೂಲಕ ಶಾಸ್ತ್ರೀಯ ಸಂಗೀತವನ್ನು ಕೇಳಲೆಂದು ನಿತ್ಯವೂ ಹೋಗುತ್ತಿದ್ದರು. ಇದು ಅವರ ಅಸಾಧಾರಣ ಬದ್ಧತೆ ಹಾಗು ನಿಷ್ಠೆಯನ್ನು ಬಿಂಬಿಸುತ್ತದೆ. ಇಂದಿನ ದಿನಗಳಲ್ಲಿ ನಮಗೆ ಎಲ್ಲವು ಸುಲಭವಾಗಿ ಲಭ್ಯವಿದ್ದರೂ, ಈ ಅನುಭವಸ್ತರ ಮಟ್ಟಕ್ಕೆ ಬೆಳೆಯಲಾರೆವು!

ಬಳ್ಳಾರಿ ಎಮ್. ರಾಘವೇಂದ್ರ

ಯಶಸ್ವೀ ಸಂಗೀತಗಾರರು

ಬದಲಾಯಿಸಿ

ಶ್ರೀಯುತರು ಸಂಗೀತವನ್ನು ಆದರಿಸಿ ನಿಯೋಜಿಸಿದ ಆಸ್ವಾದ, ಸ್ವರಸಂಗಮದಂತಹ ಕಾರ್ಯಕ್ರಮಗಳು ಕಲಾರಸಿಕರಲ್ಲಿ ಅತ್ಯಂತ ಜನಪ್ರಿಯವಾಗಿದೆ.[] ರಾಘವೇಂದ್ರಾರವರು ಸಂಗೀತ ಸೇವೆಯನ್ನು ಅತ್ಯಂತ ಸಮರ್ಪಕವಾಗಿ ತಮ್ಮ ಶಿಷ್ಯರಿಗೆ ಸಂಗೀತ ಪಾಠವನ್ನು ನೀಡುವುದರ ಮೂಲಕ ಸಲ್ಲಿಸುತ್ತಿದ್ದಾರೆ. ತಮ್ಮ ಶಿಷ್ಯರಿಗೆ ಅವರವರ ಕ್ಷಮತೆಗಳನ್ನು ಗ್ರಹಿಸಿ ಅದಕ್ಕೆ ಅನುಗುಣವಾಗಿ ಸಂಗೀತವನ್ನು ಕಲಿಸುವ ವಿಶಿಷ್ಟ ಕಲೆಯನ್ನು ಹೊಂದಿದ್ದಾರೆ.[] ಶ್ರೀಯುತರು ಗಾಯಕರಾಗಿರುವುದಲ್ಲದೆ ಕೊಣ್ಣಕೋಲ್ ಮತ್ತು ಮೋರ್ಚಿಂಗ್ ನಲ್ಲು ಪರಿಣತಿಯನ್ನು ಹೊಂದಿದ್ದಾರೆ.[] ಬಳ್ಳಾರಿ ಎಂ ರಾಘವೇಂದ್ರಾರವರು ಹಿಂದುಸ್ತಾನಿ ಶೈಲಿಯ ಸಂಗೀತವನ್ನು ಕಲಿತ್ತಿದ್ದು ಅನೇಕ ಹಿಂದುಸ್ತಾನಿ ಗಾಯಕರೊಂದಿಗೆ ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದಾರೆ.[] ರಾಘವೇಂದ್ರಾರವರು ಸಂಗೀತವನ್ನು ಕುರಿತಂತೆ ಅನೇಕ ವಿಷಯ ಗೋಷ್ಠಿಗಳನ್ನು ಹಾಗು ಪ್ರಯೋಗಗಳನ್ನು ನಡೆಸಿಕೊಟ್ಟಿದ್ದಾರೆ. ಶ್ರೀಯುತರು ಯುರೋಪ್ ಹಾಗು ಕೆನಡಾಗಳಲ್ಲಿ ಟಿ ಎ ಎಸ್ ಮಣಿ ಅವರ ಸಮೂಹದೊಂದಿಗೆ ಸಂಗೀತ ಕಾರ್ಯಕ್ರಮಗಳಿಗಾಗಿ ಪ್ರವಾಸಮಾಡಿದ್ದಾರೆ.[].ಶ್ರೀಯುತರು ಕರ್ನಾಟಕದ ಮೂಲೆಗಳಲ್ಲಿ ಶಾಸ್ತ್ರೀಯ ಸಂಗಿತವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಬಹುಮಟ್ಟಿಗೆ ಸಫಲರಾಗಿದಾರೆ.[]

ಪಾರಂಪರಿಕ ಸಂಗೀತ ಶೈಲಿ

ಬದಲಾಯಿಸಿ

ಸಂಗೀತ ಕಛೇರಿಗಳನ್ನು ಅರ್ಪಿಸುವ ಹಾಗು ಅಚ್ಚುಕಟ್ಟಾಗಿ ರೂಪಿಸುವ ಶೈಲಿಯು ಶ್ರೀಯುತರಿಗೆ ಪಾರಂಪರಿಕವಾಗಿ ಹರಿದುಬಂದಿದೆ.[] ಇವರ ಪಾರಂಪರಿಕ ಶೈಲಿಯಲ್ಲಿ ವರ್ಣಕ್ಕೆ ಅರ್ಪಿಸಿದ ರಾಗವನ್ನೆ ರಾಗ ತಾನ ಪಲ್ಲವಿಗೂ ಪ್ರಯೊಗಿಸುವುದು ಒಂದು ವಿಶೇಷ.[] ಹಾಡನ್ನು ಅನುಪಲ್ಲವಿಯಿಂದ ಪ್ರಾರಂಭಿಸುವುದು ಮತ್ತೊಂದು ವಿಶೇಷ.[] ಪತಂತರವನ್ನು ಬೆಳಸುವಲ್ಲೂ ಇವರ ಶೈಲಿಯ ಸಂಗೀತ ಪರಂಪರೆಯು ಪ್ರಮುಖ ಪಾತ್ರವನ್ನುವಹಿಸಿದೆ.[]

  1. ೧.೦ ೧.೧ ೧.೨ ೧.೩ ೧.೪ "Profile: Bellary M Raghavendra". Archived from the original on 11 ಏಪ್ರಿಲ್ 2013. Retrieved 17 February 2013.
  2. ೨.೦೦ ೨.೦೧ ೨.೦೨ ೨.೦೩ ೨.೦೪ ೨.೦೫ ೨.೦೬ ೨.೦೭ ೨.೦೮ ೨.೦೯ Govind, Ranjini (30 August 2012). "On the path of tradition". India: The Hindu. Retrieved 17 February 2013.
  3. ೩.೦ ೩.೧ "ಕಲೆ > ಸಂಗೀತ > ಕರ್ನಾಟಕ ಸಂಗೀತ > ಬಳ್ಳಾರಿ ಎಂ.ಶೇಷಗಿರಿ ಆಚಾರ್". Archived from the original on 12 ಏಪ್ರಿಲ್ 2013. Retrieved 17 February 2013.
  4. ೪.೦೦ ೪.೦೧ ೪.೦೨ ೪.೦೩ ೪.೦೪ ೪.೦೫ ೪.೦೬ ೪.೦೭ ೪.೦೮ ೪.೦೯ "Gurus: Vidwan Bellary M Raghavendra". Archived from the original on 21 ಜನವರಿ 2019. Retrieved 17 February 2013.
  5. ವೈ.ಎನ್., ಗುಂಡೂರಾವ್‌. "ದಿನಮಣಿಗಳು:ಎಂ. ವೆಂಕಟೇಶಾಚಾರ್". Archived from the original on 12 ಏಪ್ರಿಲ್ 2013. Retrieved 17 February 2013.