ಬಲಿಪ ನಾರಾಯಣ ಭಾಗವತ
ಬಲಿಪ ನಾರಾಯಣ ಭಾಗವತರು [೧೩ ಮಾರ್ಚ್ ೧೯೩೮ - ೧೬ ಫೆಬ್ರವರಿ ೨೦೨೩] ತೆಂಕುತಿಟ್ಟಿನ ಹಿರಿಯ ಮತ್ತು ಪ್ರಸಿದ್ಧ ಭಾಗವತರು. ೬೦ ವರ್ಷಗಳ ಕಾಲ ಕಲಾಸೇವೆ ಮಾಡಿರುವ ಅವರು ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ೪ ದಶಕಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದವರು. ಇವರು ಯಕ್ಷಗಾನದ ಹಲವಾರು ಪ್ರಸಂಗಗಳನ್ನು ರಚಿಸಿದ್ದಾರೆ. ಯಕ್ಷಗಾನ ಹಾಡುಗಳ ಅನೇಕ ಕೃತಿಗಳನ್ನೂ ರಚಿಸಿದ್ದಾರೆ[೧][೨][೩]
ಬಲಿಪ ನಾರಾಯಣ ಭಾಗವತ | |
---|---|
ಜನನ | ೧೨ ಮಾರ್ಚ್ ೧೯೩೮ |
ಮರಣ | February 16, 2023 | (aged 84)
ವೃತ್ತಿ | ಯಕ್ಷಗಾನದ ಭಾಗವತ |
ವೈಯಕ್ತಿಕ ಜೀವನ
ಬದಲಾಯಿಸಿಬಲಿಪರು ಕಾಸರಗೋಡಿನ ಪಡ್ರೆ ಗ್ರಾಮದಲ್ಲಿ ಮಾರ್ಚ್ ೧೩, ೧೯೩೮ರಂದು ಜನಿಸಿದರು. ಇವರ ತಂದೆ ಬಲಿಪ ಮಾಧವ ಭಟ್ ಮತ್ತು ತಾಯಿ ಸರಸ್ವತಿ. ಇವರು ೭ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ತಮ್ಮ ಅಜ್ಜ ದಿ.ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತು ೧೩ನೇ ವರ್ಷದಲ್ಲಿ ರಂಗಪ್ರವೇಶಗೈದರು. ಇವರ ಪತ್ನಿ ಶ್ರೀಮತಿ ಜಯಲಕ್ಷ್ಮಿ. ಇವರ ನಾಲ್ವರು ಪುತ್ರರ ಪೈಕಿ, ಮಾಧವ ಬಲಿಪರಿಗೆ ಹಿಮ್ಮೇಳವಾದನ ತಿಳಿದಿದ್ದು, ಶಿವಶಂಕರ ಬಲಿಪ ಮತ್ತು ಪ್ರಸಾದ ಬಲಿಪರು ಉತ್ತಮ ಭಾಗವತರು, ಪ್ರಸಾದ ಬಲಿಪರು ಕಟೀಲು ಮೇಳದಲ್ಲಿ ಮುಖ್ಯ ಭಾಗವತರಾಗಿ ಸೇವೆ ಸಲ್ಲಿಸುತ್ತಾರೆ. ಇನ್ನೋರ್ವ ಪುತ್ರ ಶಶಿಧರ್ ಬಲಿಪ ಕೃಷಿಕರು. ಭಾಗವತರು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಸಮೀಪದ ನೂಯಿ ಎಂಬಲ್ಲಿ ವಾಸವಾಗಿದ್ದರು.[೪]
ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆ
ಬದಲಾಯಿಸಿಬಲಿಪ ನಾರಾಯಣ ಭಾಗವತರು ೬೦ ವರ್ಷಗಳ ಕಾಲ ಯಕ್ಷಗಾನ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪಡ್ರೆ ಜಠಾಧಾರಿ ಮೇಳವನ್ನು ಇವರು ಮೊದಲಿಗೆ ಆರಂಭಿಸಿದರು. ೩೦ ಪ್ರಕಟಿತ ಮತ್ತು ೧೫ ಅಪ್ರಕಟಿತ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಯಕ್ಷಗಾನದ ೫೦ಕ್ಕೂ ಹೆಚ್ಚು ಪ್ರಸಂಗಗಳ ಕಂಠಪಾಠ ಬಲಿಪರಿಗಿತ್ತು. ಕಪ್ಪು ಮೂರು, ಬಿಳಿ ಐದರ ಸ್ವರದಲ್ಲಿ ಬಲಿಪರು ಹಾಡುತ್ತಿದ್ದರು. ಇವರನ್ನು ತೆಂಕುತಿಟ್ಟು ಯಕ್ಷರಂಗದ ಭೀಷ್ಮ ಎಂದು ಕರೆಯುತ್ತಾರೆ. ಇವರ ಯಕ್ಷಗಾನದ ಸುದೀರ್ಘ ಸೇವೆಗಾಗಿ ಅಭಿಮಾನಿಗಳು 'ಬಲಿಪ ಅಮೃತ ಭವನ'ವನ್ನು ಕಟ್ಟಿಸಿಕೊಟ್ಟಿದ್ದಾರೆ. ಬಲಿಪ ನಾರಾಯಣ ಭಾಗವತರು 'ಐದು ದಿನದ ದೇವೀ ಮಹಾತ್ಮೆ' ಎಂಬ ಮಹಾಪ್ರಸಂಗವನ್ನು ರಚಿಸಿದ್ದು ವೇಣೂರಿನ ಕಜೆ ಸುಬ್ರಹ್ಮಣ್ಯ ಭಟ್ ಮತ್ತು ಅವರ ಸ್ನೇಹಿತರು ಇದನ್ನು ಪ್ರಕಟಿಸಿದ್ದಾರೆ. ಯಕ್ಷಗಾನದ ಇತಿಹಾಸದಲ್ಲೇ ಇದೊಂದು ಮಹತ್ವದ ಕೃತಿಯಾಗಿದೆ.[೫]
ಪ್ರಶಸ್ತಿಗಳು, ಗೌರವಗಳು
ಬದಲಾಯಿಸಿ- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೨೦೧೦
- ಸಾಮಗ ಪ್ರಶಸ್ತಿ ೨೦೧೨
- ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ `ಜ್ಞಾನ ಪ್ರಶಸ್ತಿ' ೨೦೦೩
- ಕರ್ನಾಟಕ ಜಾನಪದ ಪರಿಷತ್ತು 'ದೊಡ್ಡಮನೆ ಲಿಂಗೇಗೌಡ' ಪ್ರಶಸ್ತಿ, ೨೦೦೨
- 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ `ಕರ್ನಾಟಕ ಶ್ರೀ 'ಪ್ರಶಸ್ತಿ, ೨೦೦೩
- ಪದವೀಧರ ಯಕ್ಷಗಾನ ಮಂಡಳಿ ಮುಂಬಯಿ `ಅಗರಿ ಪ್ರಶಸ್ತಿ', ೨೦೦೨
- ಶೇಣಿ ಪ್ರಶಸ್ತಿ, ೨೦೦೨
- ಕವಿ ಮುದ್ದಣ ಪುರಸ್ಕಾರ, ೨೦೦೩
- ಕೂಡ್ಲು ಸುಬ್ರಾಯ ಶ್ಯಾನುಭೋಗ ಪ್ರಶಸ್ತಿ, ೨೦೦೩
- ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವತಿಯಿಂದ ಬೆಂಗಳೂರಿನ ರಾಜ್ಯಮಟ್ಟದ ಸನ್ಮಾನ, ೨೦೦೩
- ಕರ್ನಾಟಕ ಸಂಘ ದುಬೈಯಲ್ಲಿ ಸನ್ಮಾನ, ೨೦೦೩
- ಪಾರ್ತಿಸುಬ್ಬ ಪ್ರಶಸ್ತಿ[೬]
- ಆಳ್ವಾಸ್ ನುಡಿಸಿರಿ ಪ್ರಶಸ್ತಿ[೭][೮]
ನಿಧನ
ಬದಲಾಯಿಸಿ೧೬ ಫೆಬ್ರವರಿ ೨೦೨೩ರಂದು ೮೫ನೇ ವಯಸ್ಸಿನಲ್ಲಿ ಮೂಡಬಿದರೆಯ ಆಸ್ಪತ್ರೆಯಲ್ಲಿ ನಿಧನರಾದರು.[೯]
ಉಲ್ಲೇಖಗಳು
ಬದಲಾಯಿಸಿ- ↑ https://www.thehindu.com/todays-paper/tp-national/tp-karnataka/committee-to-name-building-after-yakshagana-singer-balipa/article4774692.ece
- ↑ http://bayalata.com/?1~741~%E0%B2%AC%E0%B2%B2%E0%B2%BF%E0%B2%AA%20%E0%B2%85%E0%B2%AE%E0%B3%83%E0%B2%A4%20%E0%B2%AD%E0%B2%B5%E0%B2%A8%20Balipa%20Amrutha%20Bhavana
- ↑ https://vijaykarnataka.com/news/mangaluru/veteran-yakshagana-singer-balipa-narayana-bhagavatha-no-more/articleshow/97987135.cms
- ↑ https://www.prajavani.net/district/dakshina-kannada/yakshagana-artist-balipa-narayana-bhagavatha-passed-away-1015935.html
- ↑ https://www.vijayavani.net/yakshagana-artist-balipa-narayana-bhagavatha-passed-away/
- ↑ https://kannada.oneindia.com/news/karnataka/2018-parthi-subba-award-for-balipa-narayana-bhagavatha-150899.html
- ↑ http://yakshavarthe.blogspot.com/2010/10/alvas-nudisiri-award-to-balipa-narayana.html
- ↑ "ಆರ್ಕೈವ್ ನಕಲು". Archived from the original on 2018-09-18. Retrieved 2018-11-16.
- ↑ https://www.vijayavani.net/yakshagana-artist-balipa-narayana-bhagavatha-passed-away/
ಹೊರಸಂಪರ್ಕ ಕೊಂಡಿಗಳು
ಬದಲಾಯಿಸಿ- ಯಕ್ಷಗಾನದ 'ವಿಶ್ವವಿದ್ಯಾಲಯ' ಬಲಿಪರು, ಪ್ರಜಾವಾಣಿ, ಲೇ: ಡಾ. ನಾಗವೇಣಿ ಮಂಚಿ