ಬಯೋಪಾಲಿಮರ್‌ ಗಳು ಜೀವಿಗಳಿಂದ ಉತ್ಪಾದಿಸುವ ಪಾಲಿಮರ್‌ಗಳಾಗಿವೆ. ಸೆಲ್ಯುಲೋಸ್, ಪಿಷ್ಟ, ಚಿಟಿನ್, ಪ್ರೋಟೀನುಗಳು, ಪೆಪ್ಟೈಡ್‌ಗಳು, ಡಿಎನ್‌ಎ ಮತ್ತು ಆರ್‌ಎನ್‌ಎ‍ಗಳು ಬಯೋಪಾಲಿಮರ್‌ಗಳಿಗೆ ಉದಾಹರಣೆಗಳು, ಇದರಲ್ಲಿ ಕ್ರಮವಾಗಿ ಮಾನೊಮರ್‌ನ ಘಟಕಗಳು, ಶರ್ಕರ , ಅಮೈನೊ ಆಸಿಡ್‌ಗಳು, ಮತ್ತು ನ್ಯೂಕ್ಲಿಯೋಟೈಡ್‌‌ಗಳಾಗಿವೆ. [] [] [] []

ಡಿಎನ್‌ಎ ಡಬಲ್ ಹೆಲಿಕ್ಸ್ ಬಯೋಪಾಲೀಮರ್‌ನ ಭಾಗದ ಸೂಕ್ಷ್ಮ ರಚನೆ


ಸೆಲ್ಯೂಲೋಸ್‌ಗಳು ಸಾಧಾರಣವಾದ ಬಯೋಪಾಲಿಮರ್‌ಗಳಾಗಿವೆ ಹಾಗೆಯೇ ಜಗತ್ತಿನಲ್ಲಿಯೇ ಅತ್ಯಂತ ಜಟಿಲವಾದ ಜೈವಿಕ ಸಂಯುಕ್ತವಾಗಿವೆ. ಪ್ರತಿಶತ 33ರಷ್ಟು ಸಸ್ಯಗಳ ಭಾಗವು ಸೆಲ್ಯೂಲೋಸ್ ಆಗಿದೆ. ಉದಾಹರಣೆಗೆ, ಹತ್ತಿಯಲ್ಲಿರುವ ಸೆಲ್ಯೂಲೋಸ್‌ ಪ್ರಮಾಣ ಶೇ.~90 ರಷ್ಟಿದ್ದರೆ ಮರದಲ್ಲಿರುವ ಸೆಲ್ಯೂಲೋಸ್‌ ಪ್ರಮಾಣವು ಶೇ. ~ 50 ರಷ್ಟಿರುತ್ತದೆ. []

ಕೆಲವು ಬಯೋಪಾಲಿಮರ್‌ಗಳು ಮಣ್ಣಿನಲ್ಲಿ ಲೀನವಾಗುವ ಜೈವಿಕ ವಿಘಟನೀಯವಾಗಿದೆ.ಆದ್ದರಿಂದಲೇ ಅವುಗಳು ಸೂಕ್ಷ್ಮಜೀವಿಗಳಿಂದ (ಮೈಕ್ರೋ ಆರ್ಗಾನಿಸಮ್) ವಿಘಟನೆಗೊಳಪಟ್ಟು CO2 ಮತ್ತು ನೀರಾಗಿ ವಿಭಜನೆಗೊಳ್ಳುತ್ತವೆ. ಅದಲ್ಲದೆ ಕೆಲವು ಜೈವಿಕ ವಿಘಟನೀಯ ಬಯೋಪಾಲಿಮರ್‌ಗಳು ಗೊಬ್ಬರಗಳಾಗಬಲ್ಲವಾಗಿದೆ.ಅವುಗಳನ್ನು ಕೈಗಾರಿಕಾ ಗೊಬ್ಬರ ತಯಾರಿಕಾ ವಿಧಾನಗಳಿಗೊಳಪಡಿಸಬಹುದಾಗಿದೆ ಮತ್ತು 6 ತಿಂಗಳಲ್ಲಿ ಶೇ. 90 ರಷ್ಟು ವಿಘಟನೆಗೊಳ್ಳಬಲ್ಲದು. ಈ ರೀತಿಯ ಬಯೋಪಾಲಿಮರ್‌ಗಳನ್ನು ಯುರೋಪಿಯನ್ ಮಾನದಂಡ EN 13432 (2000)ದ ಅಡಿಯಲ್ಲಿ ’ವಿಘಟನೀಯ’ ಎನ್ನುವ ಚಿಹ್ನೆಯಡಿಯಲ್ಲಿ ಗುರುತಿಸಲಾಗುತ್ತದೆ.ಈ ಚಿಹ್ನೆಯಲ್ಲಿ ಗುರುತಿಸಲಾದ ಪ್ಯಾಕೇಜ್‌ಗಳನ್ನು ಕೈಗಾರಿಕಾ ವಿಘಟನೀಯ ವಿಧಾನಕ್ಕೊಳಪಡಿಸಬಹುದಾಗಿದೆ ಮತ್ತು 6 ತಿಂಗಳಿನೊಳಗೆ (ಅಥವಾ ಕಡಿಮೆ) ವಿಘಟನೆಗೊಳಪಡುತ್ತವೆ.ವಿಘಟನೀಯ ಪಾಲಿಮರ್‌ಗೆ ಉದಾಹರಣೆಯೆಂದರೆ 20 μm ದಪ್ಪವಾದ ಪಿಎಲ್‌ಎ ಪದರ: ಇದಕ್ಕಿಂತ ದಪ್ಪವಾದ ಪದರವನ್ನು ಅವು ಜೈವಿಕ ವಿಘಟನೀಯವಾದರೂ ಪಾಲಿಮರ್‌ ಎಂದು ಪರಿಗಣಿಸಲಾಗುವುದಿಲ್ಲ. ಸದ್ಯದಲ್ಲಿಯೇ ಗೃಹ ವಿಘಟನೀಯ ಲೋಗೋವನ್ನು ಸ್ಥಾಪಿಸುವ ಸಾಧ್ಯತೆ ಇದೆ. ಆಗ ಗ್ರಾಹಕರು ತಮ್ಮ ಮನೆಯ ವಿಘಟನೀಯವನ್ನು ನೇರವಾಗಿ ತಮ್ಮ ವಿಘಟನೀಯ ಗುಂಡಿಗೆ ಹಾಕಬಹುದಾಗಿದೆ.[]

ಸೆಲ್ಯುಲೋಸ್‌ನ ಸೂಕ್ಷ್ಮರಚನೆ; ಸಾಮಾನ್ಯವಾದ ಬಯೋಪಾಲೀಮರ್‌
ಆಟೋಮಿಕ್ ಫೋರ್ಸ್ ಸೂಕ್ಷ್ಮದರ್ಶನದ ರೇಖೀಯ ಪಾಲೀಮರ್‌ ಸರಪಳಿಯ ಚಿತ್ರ ಸರಪಳಿ ಆಕಾರರೇಖೆಯ ಉದ್ದವೆಂದರೆ 204 nm. ಪಾಲೀಮರ್‌ನ ದಪ್ಪವು 0.4 nm.[]

ಪಾಲಿಮರ್ ಮತ್ತು ಬಯೋಪಾಲಿಮರ್‌ಗಳ ನಡುವಿನ ವ್ಯಾಖ್ಯಾನಗಳಲ್ಲಿ ಪ್ರಮುಖವಾದ ವ್ಯಾತ್ಯಾಸವೆಂದರೆ ಅವುಗಳ ರಚನಾ-ಕ್ರಮದಲ್ಲಿನ ವ್ಯತ್ಯಾಸಗಳು.ಬಯೊಪಾಲಿಮರ್‌ ಗಳೂ ಸೇರಿದಂತೆ ಪಾಲಿಮರ್‌ಗಳು ಮಾನೊಮರ್‌ಗಳೆಂದು ಕರೆಯಲಾಗುವ ಪುನರಾವರ್ತಿತವಾದ ಘಟಕಗಳಿಂದಾಗಿವೆ.ಬಯೊಪಾಲಿಮರ್‌ಗಳು ಕೆಲವೊಮ್ಮೆ ಚೆನ್ನಾಗಿ ವ್ಯಾಖ್ಯಾನಿಸಲಾದ ರಚನಾಕ್ರಮಗಳಾಗಿವೆ, ಆದಾಗ್ಯೂ ಇದು ಒಂದು ವ್ಯಾಖ್ಯಾನಿಸಲಾದ ಗುಣವಾಗಿಲ್ಲ (ಉದಾ: ಲಿಂಗೋ ಸೆಲ್ಯೂಲೋಸ್): ಇದರ ನಿಖರವಾದ ರಾಸಾಯನಿಕ ಸಂಯೋಜನೆಯಾಗಿದೆ ಮತ್ತು ಪ್ರೋಟೀನುಗಳಲ್ಲಿ ಪ್ರಾಥಮಿಕ ರಚನಾಕ್ರಮದಲ್ಲಿ ಜೋಡಿಸಲಾದ ಘಟಕಗಳ ಸರಣಿಯಾಗಿದೆ.ಹಲವಾರು ಬಯೋಪಾಲಿಮರ್‌ಗಳು ತಾವಾಗಿಯೇ ಕ್ಯಾರೆಕ್ಟರಿಸ್ಟಿಕ್ ಕಾಂಪ್ಯಾಕ್ಟ್ ಆಕೃತಿಗಳಾಗಿ ಪರಿವರ್ತನೆಗೊಳ್ಳುತ್ತದೆ (ಪ್ರೋಟೀನ್ ಫೋಲ್ಡಿಂಗ್‌ನ್ನು, ದ್ವಿತೀಯ ರಚನಾಕ್ರಮ ಮತ್ತು ತೃತೀಯ ರಚನಾಕ್ರಮಗಳನ್ನು ನೋಡಿ) ಇದರಲ್ಲಿ ಅದರ ಜೈವಿಕವಾದ ಕಾರ್ಯಗಳನ್ನು ಮತ್ತು ಸಂಕೀರ್ಣವಾದ ಪ್ರಾಥಮಿಕ ರಚನಾಕ್ರಮಗಳನ್ನು ಕಂಡುಹಿಡಿಯಬಹುದಾಗಿದೆ. ರಚನಾಕ್ರಮದ ಜೀವಶಾಸ್ತ್ರವು ಬಯೋಪಾಲಿಮರ್‌ಗಳ ರಚನಾಗುಣಗಳ ಅಧ್ಯಯನವಾಗಿದೆ.ಇದಕ್ಕೆ ತದ್ವಿರುದ್ಧವಾಗಿ ಸಿಂಥಟಿಕ್ ಪಾಲಿಮರ್‌ ಗಳು ಸರಳವಾದ ಮತ್ತು ಹೆಚ್ಚು ಯಾದೃಚ್ಛಿಕ ( ಅಥವಾ stochastic) ರಚನಾಕ್ರಮಗಳನ್ನು ಹೊಂದಿವೆ.ಇದು ಅಣುರಾಶಿಯ ವಿಂಗಡಣೆಗೆ ಅನುವುಮಾಡಿಕೊಡುತ್ತದೆ ಇದು ಬಯೋಪಾಲಿಮರ್‌ಗಳಲ್ಲಿ ಇರುವುದಿಲ್ಲ.ವುಗಳ ಸಂಶ್ಲೇಷಣೆಯು ಟೆಂಪ್ಲೆಟ್ ನಿರ್ದೇಶಿತ ವಿಧಾನದಿಂದ ನಿಯಂತ್ರಿತವಾಗಿರುವುದರಿಂದ ಹೆಚ್ಚಿನ ಜೀವಿಯಲ್ಲಿಯ ವ್ಯವಸ್ಥೆಯಲ್ಲಿ ಒಂದೇ ವಿಧದ ಎಲ್ಲಾ ಬಯೋಪಾಲಿಮರ್‌ಗಳು ಒಂದೇ ಸಮನಾಗಿರುತ್ತದೆ: ಅವುಗಳೆಲ್ಲವೂ ಒಂದೇ ರೀತಿಯ ಸರಣಿಗಳನ್ನು ಮತ್ತು ಕೆಲವೇ ಕೆಲವು ಮಾನೊಮರ‍್‍ಗಳನ್ನು ಒಳಗೊಂಡಿರುತ್ತವೆ ಎಲ್ಲವೂ ಒಂದೇ ದ್ರವ್ಯರಾಶಿಯನ್ನು ಹೊಂದಿರುತ್ತವೆ. ಸಿಂಥಟಿಕ್‌ಪಾಲಿಮರ್‌ಗಳಲ್ಲಿರುವ ಪಾಲಿಮೊನೊಡಿಸ್ಪರ್ಸಿಟಿಗೆ ವಿರುದ್ಧವಾದ ಇದನ್ನು ಮೊನೊಡಿಸ್ಪರ್ಸಿಟಿಯೆಂದು ಕರೆಯುವರು. ಇದರ ಪರಿಣಾಮವಾಗಿ ಬಯೋಪಾಲಿಮರ್‌ಗಳು ಪಾಲಿಡೈವರ್ಸಿಟಿ ಸೂಚ್ಯಂಕ 1ನ್ನು ಹೊಂದಿವೆ.[]

ಸ್ಥೂಲ ಸಮೀಕ್ಷೆ

ಬದಲಾಯಿಸಿ

ಬಯೋಪಾಲಿಮರ್‌ಗಳು (ನವೀಕರಿಸಬಹುದಾದ ಪಾಲಿಮರ್‌ಗಳೆಂದು ಕರೆಯಲಾಗುವ) ಸಾಮಾನ್ಯವಾಗಿ ಜೀವರಾಶಿ (ಬಯೋಮಾಸ್‌)ಗಳಿಂದ ಉತ್ಪಾದನೆಯಾಗುತ್ತದೆ,ಇದು ಬೀಟ್‌, ಆಲೂಗೆಡ್ದೆ ಅಥವಾ ಗೋಧಿ ಬೆಳೆಗಳಿಂದ ಬರುತ್ತದೆ. ಬಯೊಪಾಲಿಮರ್‌ಗಳನ್ನು ಉತ್ಪಾದಿಸಲು ಬಳಸಿದ್ದರಿಂದ ಈ ಬೆಳೆಗಳನ್ನು ಆಹಾರವಲ್ಲದ ಬೆಳೆಗಳೆಂದು ವಿಂಗಡಿಸಲಾಗಿದೆ ಮತ್ತು ಕೆಳಗಿನ ರೀತಿಯಲ್ಲಿ ಪರಿವರ್ತಿಸಲಾಗುತ್ತದೆ:ಸಿಹಿ ಬೀಟ್ > ಗ್ಲೈಕೋನಿಕ್ ಆ‍ಸಿಡ್ > ಪಾಲಿಗ್ಲೋನಿಕ್ ಆ‍ಸಿಡ್ ಸ್ಟಾರ್ಚ್ > (ಹುದುಗುವುದು) > ಲ್ಯಾಕ್ಟಿಕ್ ಆ‍ಸಿಡ್ > ಪಾಲಿಲ್ಯಾಕ್ಟಿಕ್ ಆ‍ಸಿಡ್ (PLA) ಜೀವರಾಶಿ > (ಹುದುಗುವುದು) > ಬಯೋಎಥೆನಾಲ್ > ಈಥೇನ್ > ಪಾಲೀಎಥಲಿನ್ ಬಯೋಪಾಲಿಮರ್‌ಗಳು ನವೀಕರಿಸಬಹುದಾದ, ತಾಳಬಲ್ಲ,ಮತ್ತು ಇಂಗಾಲದ ತಟಸ್ಥಗಳಾಗಿದೆ ಬಯೊಪಾಲಿಮರ್‌ಗಳನ್ನು ನವೀಕರಿಸಬಹುದು, ಏಕೆಂದರೆ ಅವುಗಳನ್ನು ವರ್ಷದಿಂದ ವರ್ಷಕ್ಕೆ ಅನಿರ್ದಿಷ್ಟವಾಗಿ ಬೆಳೆಯಬಲ್ಲ ಸಸ್ಯದ ವಸ್ತುಗಳಿಂದ ಮಾಡಲಾಗಿರುತ್ತದೆ. ಈ ಸಸ್ಯದ ವಸ್ತುಗಳು ಆಹಾರವಲ್ಲದ ಬೆಳೆಗಳ ಕೃಷಿಯಿಂದ ಬರುತ್ತದೆ. ಆದ್ದರಿಂದ ಬಯೋಪಾಲಿಮರ್‌ಗಳ ಉಪಯೋಗವು ನಿರಂತರವಾಗಿ ಈ ಕೈಗಾರಿಕೆಗಳು ಉಳಿಯಲು ಸಾಧ್ಯವಾಗಿಸುತ್ತವೆ. ಇದಕ್ಕೆ ವಿರುದ್ಧವಾಗಿ ಪಾಲಿಮರ್‌ಗಳ ಪೂರಕ ವಸ್ತುಗಳು ಪೆಟ್ರೊಕೆಮಿಕಲ್‌ಗಳಿಂದ ಬಂದುದಾಗಿದೆ ಮತ್ತು ಕೊನೆಯದಾಗಿ ನಾಶವಾಗುತ್ತದೆ. ಇದಲ್ಲದೆ ಬಯೋಪಾಲಿಮರ್‌ಗಳು ಇಂಗಾಲದ ಉತ್ಸರ್ಜನವನ್ನು ನಿಲ್ಲಿಸುವ ಮತ್ತು CO2ವನ್ನು ವಾತಾವರಣದಲ್ಲಿ ಕಡಿಮೆಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.ಅವುಗಳು ವಿಘಟಿಸುವಾಗ ಬಿಡುಗಡೆಯಾದ CO2ವನ್ನು ಬೆಳೆಗಳು ಹೀರಿಕೊಳ್ಳುತ್ತವೆ, ಹೀಗಾಗಿ ಇದು ಇಂಗಾಲದ ತಟಸ್ಥವಾಗಿವೆ. ಬಯೋಪಾಲಿಮರ್‌ಗಳು ಜೈವಿಕವಿಘಟನಕಾರಿಯಾಗಿದೆ, ಮತ್ತು ಕೆಲವು ಗೊಬ್ಬರವಾಗಬಲ್ಲವೂ ಆಗಿದೆ ಕೆಲವು ಬಯೊಪಾಲಿಮರ್‌ಗಳು ಜೈವಿಕವಿಘಟನಕಾರಿಗಳಾಗಿವೆ: ಅವುಗಳು ಸೂಕ್ಷ್ಮಜೀವಿಗಳಿಂದ CO2 ಮತ್ತು ನೀರಾಗಿ ಪರಿವರ್ತನೆಯಾಗುತ್ತದೆ. ಇದಲ್ಲದೆ ಕೆಲವು ಜೈವಿಕ ವಿಘಟನಕಾರೀ ಬಯೋಪಾಲಿಮರ್‌ಗಳು ಗೊಬ್ಬರವಾಗಬಲ್ಲವಾಗಿವೆ: ಅವುಗಳನ್ನು ಕೈಗಾರಿಕಾ ಗೊಬ್ಬರ ತಯಾರಿಕಾ ವಿಧಾನಗಳಿಗೊಳಪಡಿಸಬಹುದಾಗಿದೆ ಮತ್ತು 90%, 6 ತಿಂಗಳಲ್ಲಿ ವಿಘಟನೆಯಾಗುತ್ತದೆ. ಬಯೋಪಾಲಿಮರ್‌ಗಳು ’ವಿಘಟನೀಯ’ ಎನ್ನುವ ಗುರುತಿನಡಿಯಲ್ಲಿ ಯುರೋಪಿಯನ್ ಮಾನದಂಡ EN 13432 (2000)ಗಳಲ್ಲಿ ಬರುತ್ತದೆ

ಪಾಲೀಸ್ಯಾಕರೈಡ್‌ಗಳು

ಬದಲಾಯಿಸಿ

ಶರ್ಕರಾರ್ಧಾರಿತ ಬಯೋಪಾಲಿಮರ್‌‌ಗಳು ಹೆಚ್ಚಾಗಿ ಮೂಲಕ್ಕಿಂತ ಬಹಳ ಕಠಿಣವಾಗಿವೆ. ಶರ್ಕರ ಪಾಲಿಮರ್‌ಗಳು ಒಂದೇ ದಿಕ್ಕಿನಲ್ಲಿ ಅಥವಾ ಕವಲುಗಳಿಂದ ಕೂಡಿದೆ, ಇವುಗಳು ಗ್ಲೈಕೋಸೈಡಿಕ್ ಬಂಧಗಳೊಂದಿಗೆ ಸೇರುತ್ತದೆ. ಆದಾಗ್ಯೂ, ನಿಖರವಾದ ಸಂಯೋಜನೆಯ ಸ್ಥಳನಿಯೋಜನೆಯು ಬದಲಾಗಬಹುದು ಮತ್ತು ಸಂಯೋಜನಾ ಕಾರ್ಯಗಳ ಗುಂಪುಗಳ ದಿಕ್ಕು ಕೂಡಾ ಪ್ರಮುಖವಾಗುತ್ತದೆ. ಇದರ ಪರಿಣಾಮವಾಗಿ ಸಂಯೋಜಿಸಿದ ರಿಂಗ್‌ನಲ್ಲಿರುವ ಇಂಗಾಲದ ಸ್ಥಳದಲ್ಲಿ α- ಮತ್ತು β-ಗ್ಲೈಕೊಸೈಡಿಕ್ ಬಂಧಗಳು ಉಂಟಾಗುತ್ತವೆ. ಇದಲ್ಲದೆ ಅಮೈನೇಶನ್‌ಗಳಂತಹ ಹಲವು ಸ್ಯಾಚರೈಡ್ ಘಟಕಗಳಲ್ಲಿ ಅನೇಕ ರಾಸಾಯನಿಕ ಮಾರ್ಪಾಡುಗಳಾಗುತ್ತದೆ, ಮತ್ತು ಗ್ಲೈಕೋಪ್ರೊಟೀನ್‌ಗಳಂತಹ ಇತರ ಅಣುಗಳ ಸೃಷ್ಠಿಯಾಗಬಹುದು ಪಾಲಿಸ್ಯಾಕರೈಡ್‌ಗಳು ಪ್ರಸ್ತುತ ಕೈಗಾರಿಕಾ ಮೂಲವಸ್ತುವಿನ ಉಪಯೊಗಕ್ಕಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ, ಅವುಗಳೆಂದರೆ ಸೆಲ್ಯುಲೋಸ್ ಮತ್ತು ಪಿಷ್ಟ ಬ್ಯಾಕ್ಟೀರಿಯಾ ಮತ್ತು ಫಂಗಸ್‌ಗಳಿಂದ ತಯಾರಾದ ಸಂಕೀರ್ಣ ಕಾರ್ಬೊಹೈಡ್ರೆಟ್ ಪಾಲಿಮರ್‌ಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.ಉದಾಹರಣೆಗೆ ಕ್ಸಾಂತನ್, ಕರ್ಡ್ಲನ್, ಪುಲ್ಲುಲನ್ ಮತ್ತು ಹಯಲುರೋನಿಕ್ ಆ‍ಯ್‌ಸಿಡ್. ಇದರ ನಂತರ ಪಾಲಿಮರ್‌ಗಳು ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚಿನ ವಿಧದ ಕಾರ್ಬೋಹೈಡ್ರೇಟ್ ಮಾನೋಮರ್‌ಗಳನ್ನು ಹೊಂದಿರುತ್ತದೆ, ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಜೋಡಿಸಿದ ಕವಲು ರಚನಾಕ್ರಮಗಳನ್ನು ಪಾಲಿಮರ್‌ಗಳು ಹೊಂದಿರುತ್ತದೆ. ಪಿಷ್ಟ, ಉದಾಹರಣೆಗೆ ಕವಲಿನ ಮತ್ತು ಒಂದೇ ಭೌತಿಕ ಸಂಯೋಜನೆಯುಳ್ಳ ಪಾಲಿಮರ್‌ಗಳು (ಕ್ರಮವಾಗಿ ಅಮೈಲೊಪೆಕ್ಟಿನ್ ಮತ್ತು ಅಮೈಲೊಸ್), ಆದರೆ ಇದು ಒಂದೇ ರೀತಿಯ ಕಾರ್ಬೊಹೈಡ್ರೇಟ್‌ಗಳನ್ನು (ಶರ್ಕರ) ಹೊಂದಿರುತ್ತದೆ: ಗ್ಲುಕೋಸ್. ಸೆಲ್ಯೊಲೋಸ್ ಮತ್ತು ಪಿಷ್ಟಗಳೆರಡೂ ನೂರಾರು ಅಥವಾ ಸಾವಿರಾರು ಗ್ಲೂಕೋಪೈರನೊಸೈಡ್‌ಗಳ ಪುನರಾವರ್ತಿತ ಘಟಕಗಳಿಂದಾಗುತ್ತದೆ. ಈ ಘಟಕಗಳು ಅಸೆಟಾಲ್ ಬಂಧಗಳಿಂದ ಸಂಯೋಜಿಸಿರುತ್ತದೆ, ಒಂದು ಘಟಕದಲ್ಲಿ ಸೈಕ್ಲಿಕ್ ಗ್ಲೂಕೊಸ್ ಮಧ್ಯೆ ಇಂಗಾಲದ ಅಣುಗಳು ಮತ್ತು ಇನ್ನೊಂದರಲ್ಲಿ ಹೈಡ್ರಾಕ್ಸಿಲ್ ಗುಂಪನ್ನು ಹೊಂದಿರುತ್ತದೆ.

 
ಅಮೈಲೋಸ್ ಕಣದ ರಚನೆ.


ಪಿಷ್ಟವು ಸಸ್ಯಗಳಲ್ಲಿ ಹೆಚ್ಚಾಗಿರುವ ಪಾಲಿಮರ್ ಆಗಿದೆ.ಇದರ ಉತ್ಪಾದನೆಯಲ್ಲಿ ಬಳಸುವ ಪ್ರಮುಖ ಬೆಳೆಗಳೆಂದರೆ ಆಲೂಗೆಡ್ಡೆ, ಜೋಳ ಮತ್ತು ಅಕ್ಕಿ. ಈ ಎಲ್ಲಾ ಸಸ್ಯಗಳು ಪಿಷ್ಟವನ್ನು ಸಣ್ಣ ಕಾಳುಗಳ ರೂಪದಲ್ಲಿ ಉತ್ಪಾದಿಸುತ್ತದೆ, ಇದರ ಗಾತ್ರ ಮತ್ತು ರಚನೆಯು ಸಸ್ಯದಿಂದ ಸಸ್ಯಕ್ಕೆ ಬದಲಾಗುತ್ತದೆ. ಸಾಮಾನ್ಯವಾಗಿ ಲೀನಿಯರ್ ಪಾಲಿಮರ್, ಅಮೈಲೋಸ್‌ಗಳು 20 wt% ಸಣ್ಣ ಕಾಳುಗಳು, ಮತ್ತು ಬ್ರಾಂಚ್ಡ್ ಪಾಲಿಮರ್ ಅಮೈಲೊಪೆಕ್ಟಿನ್ ಮತ್ತಿತರವನ್ನು ಹೊಂದಿರುತ್ತದೆ ಅಮಲೋಸ್ ಹರಳುರೂಪದಾಗಿದ್ದು ಸರಿಸುಮಾರು 500,000 ಅಣುರಾಶಿಯನ್ನು ಹೊಂದಿರುತ್ತದೆ, ಆದರೆ ಕುದಿಯುವ ನೀರಿನಲ್ಲಿ ಕರಗುತ್ತದೆ. ಅಮೈಲೊಪೆಕ್ಟಿನ್ ಕುದಿಯುವ ನೀರಿನಲ್ಲಿ ಕರಗುವುದಿಲ್ಲ, ಅದರೆ ಅವುಗಳನ್ನು ಆಹಾರದಲ್ಲಿ ಬಳಸುತ್ತಾರೆ, ಎರಡೂ ಅಸೆಟಾಲ್‌ಗಳು ಕಿಣ್ವಗಳ ಸಂಪರ್ಕಕ್ಕೆ ಬಂದ ತಕ್ಷಣ ಹಡ್ರಲೈಸ್ ಆಗುತ್ತದೆ.ಹೆಚ್ಚಿದ ಬೆಲೆಯಿಂದ ಮತ್ತು ತಗ್ಗಿದ ಲಭ್ಯತೆಯಿಂದಾಗಿ ಸಾಂಪ್ರದಾಯಿಕ ಪದರಗಳ ತಯಾರಿಕೆಯಲ್ಲಿ ರಾಳದ ಬದಲಾಗಿ ಪಿಷ್ಟವನ್ನು ಮೂಲವಸ್ತುವನ್ನಾಗಿ ಪದರಗಳ ನಿರ್ಮಾಣದಲ್ಲಿ ಬಳಸುತ್ತಾರೆ.ಪಿಷ್ಟವು ಕಡಿಮೆ ವಾಹಕತೆಯನ್ನು ಹೊಂದಿರುವುದರಿಂದ ಮತ್ತು ಆಕರ್ಷಕವಾಗಿರುವುದರಿಂದ ಆಹಾರ ಪೊಟ್ಟಣದಲ್ಲಿ ಬಳಸುತ್ತಾರೆ.ಪಿಷ್ಟವು ಕೃಷಿಯ ಹಸಿಗೊಬ್ಬರಗಳ ಪದರ ತಯಾರಿಕೆಯಲ್ಲಿಯೂ ಬಳಸುತ್ತಾರೆ, ಏಕೆಂದರೆ ಇದು ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳಿಂದ ಹಾನಿಕರವಲ್ಲದ ಉತ್ಪನ್ನಗಳಾಗಿ ವಿಘಟನೆಯಾಗುತ್ತದೆ. ಪಿಷ್ಟದ ಸಂಶೋಧನೆಯು ನೀರಿನ ಅಡ್ಸಾರ್ಪಶನ್‌ನ ರಾಸಾಯನಿಕ ಬದಲಾವಣೆ, ಮತ್ತು ಅದರ ಥರ್ಮೊಮೆಕಾನಿಕಲ್ ಶೀಯರ್‌ನ ವಿರೋಧದ ಸಂಶೋಧನೆಯನ್ನೊಳಗೊಳ್ಳುತ್ತದೆ. ಪಿಷ್ಟವು ಪಾಲಿಮರ್ ಆಗಿದ್ದರೂ ಒತ್ತಡದಲ್ಲಿ ಸ್ಥಿತಿಸ್ಥಾಪಕತ್ವವನ್ನು ಹೊಂದಿಲ್ಲ. 150°Cಕ್ಕಿಂತ ಹೆಚ್ಚಿನ ಉಷ್ಣತೆಯಲ್ಲಿ ಗ್ಲೂಕೋಸೈಡ್ ಸಂಯೋಜನೆಗಳು ಬೇರ್ಪಡುತ್ತವೆ, ಮತ್ತು 250°Cಕ್ಕಿಂತ ಹೆಚ್ಚಾದಾಗ ಪಿಷ್ಟದ ಕಾಳು ಎಂಡೋಥರ್ಮಲೀ ಕುಸಿಯುತ್ತದೆ.ಕಡಿಮೆ ಉಷ್ಣಾಂಶದಲ್ಲಿ ರೆಟ್ರೊಗ್ರಡೇಶನ್‌ನನ್ನು ಗಮನಿಸಬಹುದು. ಇದು ಹೈಡ್ರೋಜನ್ ಬಂಧಗಳನ್ನು ಪುನಃ ಸಂಸ್ಥಾಪಿಸುತ್ತದೆ ಮತ್ತು ತಣ್ಣಗಾಗುವಾಗ ಅಣುಗಳ ಸರಪಳಿಯನ್ನು ಜೋಡಿಸುತ್ತದೆ. ಕೊನೆಯದಾಗಿ 10°Cಯಲ್ಲಿ ಹನಿ ಹನಿಯಾಗುವುದನ್ನು ಗಮನಿಸಬಹುದು. ಹಾಗಾಗಿ, ಬಿಸಿನೀರಿನಲ್ಲಿ ಪಿಷ್ಟವು ಚೆದುರಿ ಪದರಗಳಾಗಿ ಎರಕ ಮಾಡಲ್ಪಟ್ಟರೂ, ಮೇಲಿನ ಕ್ರಿಯೆಯು ಪದರದಲ್ಲಿ ಸುಲಭವಾಗಿ ಒಡೆದುಹೋಗುವ ಪ್ಲಾಸ್ಟಿಕ್ ಬದಲಾವಣೆಯನ್ನು ಮತ್ತು ಅಂತಿಮ ಎರಕ ಲೋಪ ಉಂಟಾಗುತ್ತದೆ. ಜೈವಿಕವಿಘಟನೆಯಾಗಬಲ್ಲ ಪ್ಲಾಸ್ಟಿಕ್‌ಗಳಲ್ಲಿ, ಪಿಷ್ಟವನ್ನು ತನ್ನ ಸಣ್ಣಕಾಳಿನೊಂದಿಗೆ ಭೌತಿಕವಾಗಿ ಪೂರ್ಣ ಮಿಶ್ರ ಮಾಡಿದಾಗ ಅಥವಾ ಕರಗಿದಾಗ ಮತ್ತು ವಿಶಿಷ್ಟವಾದ ಪಾಲಿಮರ್‌ನೊಂದಿಗೆ ಅಣುಗಳ ಹಂತದಲ್ಲಿ ಸಮ್ಮಿಶ್ರಣ ಮಾಡಿ ಅನ್ವಯಿಸಲಾಗುತ್ತದೆ. ಯಾವುದೇ ರೂಪದಲ್ಲಿದ್ದರೂ, ಮಿಶ್ರಣದಲ್ಲಿರುವ ಪಿಷ್ಟವು ಕಿಣ್ವಗಳ ಸಂಪರ್ಕಕ್ಕೆ ಬಂದಾಗ ನಾಶವಾಗುತ್ತದೆ ಅಥವಾ ಅಮೈಲಸ್ ಮತ್ತು ಗ್ಲೂಕೊಸೈಡಸೆಸ್ ಆಗಿ ಬದಲಾಗುತ್ತದೆ ಪಿಷ್ಟದ ಅಣುವು ಎರಡು ಪ್ರಮುಖವಾದ ಗುಂಪುಗಳನ್ನು ಹೊಂದಿದೆ, –OH ಸಬ್‌ಸ್ಟಿಟ್ಯೂಶನ್ ಪ್ರತಿಕ್ರಿಯೆಗೊಳಪಡುತ್ತದೆ ಮತ್ತು C–O–C ಬಂಧವು ಸರಪಳಿಯನ್ನು ತುಂಡರಿಸುತ್ತದೆ.ಗ್ಲೂಕೋಸಿನ ಹೈಡ್ರಾಕ್ಸಿಲ್ ಗುಂಪು ನ್ಯೂಕ್ಲೊಯೋಫಿಲಿಕ್ ಗುಣವನ್ನು ಹೊಂದಿದೆ. –OH ಗುಂಪಿನ ಪ್ರತಿಕ್ರಿಯೆಯಿಂದ ಅನೇಕ ಗುಣಗಳಲ್ಲಿ ಬದಲಾವಣೆಗಳನ್ನುಂಟುಮಾಡುತ್ತದೆ. ಉದಾಹರಣೆಗೆ ಪಾಲಿಇಥೈಲೀನ್‌ನಲ್ಲಿ ಸೈಲೇನ್‌ನನ್ನು ಪ್ರತಿಕ್ರಿಯೆಗೊಳಪಡಿಸಿದಾಗ ಅದರ ಪ್ರಸರಣವು ಉತ್ತಮಗೊಳ್ಳುತ್ತದೆ. –OH ಗುಂಪನ್ನು ಕ್ರಾಸ್‌ಲಿಕಿಂಗ್ ಅಥವಾ ಬ್ರಿಡ್ಜಿಂಗ್‌ಗೊಳಪಡಿಸಿದಾಗ ಅದರ ಜಾಲದ ರಚನೆಯಲ್ಲಿ ಬದಲಾವಣೆಗಳುಂಟಾಗುತ್ತದೆ ಮತ್ತು ಜಿಗುಟು ಹೆಚ್ಚಾಗುತ್ತದೆ, ನೀರಿನ ಹಿಡಿದಿಡುವ ಶಕ್ತಿಯು ಕಡಿಮೆಯಾಗುತ್ತದೆ ಮತ್ತು ಥರ್ಮೊಮೆಕಾನಿಕಲ್ ಶಿಯರ್‌ಗೆ ಅದರ ಪ್ರತಿರೋಧಕತ್ವವು ಹೆಚ್ಚುತ್ತದೆ

 
ಅಮೈಲೋಪೆಕ್ಟಿನ್ ಕಣದ ರಚನೆ.

ಅಸಿಟಲ್‌ನೊಂದಿಗಿನ ಪಿಷ್ಟವು ಫೈಬರ್ ರಚನೆಯಿಂದ ಅಥವಾ ಪಾಲಿಮರ್‌ನ ಪದರ ರಚನೆಯಲ್ಲಿ ಮೂಲ ಪಿಷ್ಟಕ್ಕೆ ಹೋಲಿಸಿದಾಗ ಹೆಚ್ಚಿನ ಅನೊಕೂಲಗಳನ್ನು ಹೊಂದಿದೆ ಪಿಷ್ಟದ ಅಸಿಟೈಲೀಕರಣವು ಉತ್ತಮ ಪ್ರತಿಕ್ರಿಯೆಯಾಗಿದೆ ಮತ್ತು ಸಂಯೋಜಿಸುವಿಕೆಗೆ ಉಳಿದವುಗಳಿಗಿಂತ ಸುಲಭವಾದ ಉತ್ಪನ್ನವಾಗಿದೆ.ಪಿಷ್ಟದ ಅಸಿಟೇಟ್ ಪಿಷ್ಟಕ್ಕಿಂತ ಹೆಚ್ಚು ಹೈಡ್ರೊಫೊಬಿಕ್ ಆಗಿದೆ ಮತ್ತು ತೇವದಲ್ಲಿ ಅಪಕರ್ಷಕ ಗುಣಗಳನ್ನು ಹೆಚ್ಚು ಪ್ರತಿರೋಧವನ್ನು ವ್ಯಕ್ತಪಡಿಸುತ್ತದೆ ಇನ್ನೊಂದು ಉಪಯೋಗವೆಂದರೆ ಪಿಷ್ಟದ ಅಸಿಟೇಟ್ ಪಿಷ್ಟಕ್ಕಿಂತ ಹೆಚ್ಚು ಕರಗುವ ಗುಣವನ್ನು ಹೊಂದಿದೆ ಮತ್ತು ಸುಲಭವಾಗಿ ಸಾಧಾರಣವಾದ ದ್ರಾವಕಗಳಲ್ಲಿ ಪದರಗಳಾತ್ತವೆ. ಅಸಿಟಲೀಕರಣದ ಡಿಗ್ರಿಯನ್ನು ಟ್ರಾನ್ಸೆಸ್ಟರಿಫಿಕೇಶನ್‌ನಿಂದ ಸುಲಭವಾಗಿ ನಿಯಂತ್ರಿಸಬಹುದು, ಪಾಲಿಮರ್‌ಗಳು ಹೈಡ್ರೊಫೋಬಿಸಿಟಿಯ ಹಂತದೊಂದಿಗೆ ನಿರ್ಮಾಣವಾಗಲು ಅನುವುಮಾಡಿಕೊಡುತ್ತದೆ. ಪಿಷ್ಟವು ಅಸಿಟಲೀಕರಣಗೊಂಡಿರುತ್ತದೆ [ ಲೀನಿಯರ್ ಅಮೈಲೋಸ್‌ನ ಅಧಿಕ ಪ್ರಮಾಣದೊಂದಿಗೆ(70%)] ಮತ್ತು ಇದರ ಎಂಜೈಮ್ಯಾಟಿಕ್ ಡಿಗ್ರಡೇಶನನ್ನು ಅಭ್ಯಸಿಸಬಹುದಾಗಿದೆ. ಪಿಷ್ಟದ ಅಸಿಟೇಟನ್ನು ಪೈರಿಡಿನ್/ಅಸಿಟಿಕ್ ಅನ್‌ಹೈಡ್ರಿಡ್‌ನ ಮಿಶ್ರಣದೊಂದಿಗಿನ ಪಿಷ್ಟದ ಅಸಿಟಲೀಕರಣದಿಂದ ತಯಾರಿಸಲಾಗಿದೆ ಮತ್ತು 90% ಫಾರ್ಮಿಕ್ ಆಮ್ಲದ ದ್ರಾವಣದಿಂದ ಪದರಗಳಲ್ಲಿ ಹಾಕಲಾಗುತ್ತದೆ. ಎಸಿಟೈಲ್‌ನ್ನು pHನ ಬದಲಾವಣೆಗೆ ವಿರೋಧಿಸುವ ಅಮೈಲೇಸ್ ದ್ರಾವಣಗಳಿಗೆ ಪದರಗಳ ಸರಣಿಯ ಹಂತದಲ್ಲಿ ತೆರೆದಿಟ್ಟಿದೆ.ಅಸಿಟೈಲ್‌ನೊಂದಿಗಿದ್ದಾಗ ನೀರಿನ ದ್ರಾವಣದಲ್ಲಿ ಪದರಗಳ ದೃಡತೆಯನ್ನು ಕಾಯ್ದುಕೊಳ್ಳುತ್ತದೆ, ಆದರೆ ಅಸಿಟೈಲ್ ಆ‍ಯ್‌ಸಿಡ್ ಆಲ್ಫ ಮತ್ತು ಬೀಟ ಅಮೈಲಸ್‌ ಮಿಶ್ರಣದಿಂದ 1 h ಸಮಯದೊಳಗೆ ಅವನತಿಹೊಂದಲು ಸಾಕಷ್ಟಿರುವುದಿಲ್ಲ.ಬಯೊರಿಯಾಕ್ಟರ್‌ನ ಪೊರೆಯಾಗಿ ಈ ಪದರಗಳನ್ನು ಬಳಸಲಾಗುತ್ತದೆ, ಇದಕ್ಕೆ ಕಿಣ್ವನ್ನು ಸೇರಿಸಿದ ನಂತರ ನಾಶವಾಗುತ್ತದೆ.

ಸೆಲ್ಯುಲೋಸ್

ಬದಲಾಯಿಸಿ

ಅನೇಕ ಸಂಶೋಧಕರು ಪಾಲಿಮರ್ ರಾಸಾಯನಶಾಸ್ತ್ರವು ಸೆಲ್ಯುಲೋಸ್‌ನ ವಿವರಣದಿಂದ ಉಗಮಗೊಂಡಿದೆ ಎಂದು ನಂಬುತ್ತಾರೆ. ಸೆಲ್ಯುಲೋಸನ್ನು 150 ವರ್ಷಗಳ ಹಿಂದೆ ಮೊದಲಭಾರಿಗೆ ಪ್ರತ್ಯೇಕವಾಗಿಸಲಾಯಿತು. ಸೆಲ್ಯುಲೋಸ್ ಅಣುಗಳ ಸರಪಳಿಯು ಉದ್ದವಾಗಿರುವುದರಿಂದ ಮತ್ತು ಒಂದು ಪುನರಾವರ್ತಿತ ಘಟಕವನ್ನು ಹೊಂದಿರುವುದರಿಂದ ( ಸೆಲ್ಲೊಬಯೋಸ್), ಇತರ ಸಸ್ಯಉತ್ಪನ್ನಗಳಾದ ಪಾಲಿಸ್ಯಾಕರೈಡ್‌‌ಗಳಿಗಿಂತ ಭಿನ್ನವಾಗಿದೆ. ನೈಸರ್ಗಿಕವಾಗಿ ಇದು ಹರಳಿನ ರೂಪದಲ್ಲಿರುತ್ತದೆ.ಜೀವಕೋಶದ ಗೋಡೆಗಳಿಂದ ಸೆಲ್ಯುಲೋಸ್‌ನ್ನು ಮೈಕ್ರೊಫಿಬ್ರಿಲ್‌ಗಳಲ್ಲಿ ರಾಸಾಯನಿಕ ಎಕ್ಸ್‌ಟ್ರಾಕ್ಷನ್‌ನಿಂದ ಬೇರ್ಪಡಿಸಲಾಗುತ್ತದೆ. ಸೆಲ್ಯುಲೋಸ್ ಹೆಚ್ಚಾಗಿ ಹರಳು ರೂಪದಲ್ಲಿರುತ್ತದೆ, ಹೆಚ್ಚಿನ ಅಣುರಾಶಿಯನ್ನು ಹೊಂದಿದ ಪಾಲಿಮರ್ ಆಗಿದ್ದು ಎಲ್ಲದರಲ್ಲೂ ಕರಗುವುದಿಲ್ಲ, ಹೆಚ್ಚು ಉಗ್ರವಾಗಿದ್ದು ಹೈಡ್ರೋಜನ್ ಬಂಧಗಳನ್ನು ಮುರಿಯುವ ದ್ರಾವಕಗಳಾಗಿವೆ. ಸೆಲ್ಯುಲೋಸ್‌ನ ಕರಗದ ಗುಣದಿಂದಾಗಿ ಸಂಸ್ಕರಣೆಯಲ್ಲಿ ಸುಲಭವಾಗಿ ಬಳಸಲು ಇದನ್ನು ಉತ್ಪನ್ನವಾಗಿ ಪರಿವರ್ತಿಸಲಾಗುತ್ತದೆ. ಕೆಲವು ಫಂಗೈಗಳು ಕಿಣ್ವಗಳನ್ನು ಸ್ರವಿಸುತ್ತದೆ ಸೆಲ್ಯುಲೋಸ್ ಉತ್ಕರ್ಷಣ ಕ್ರಿಯೆಯಿಂದಾಗಿ ಕೆಟಲೈಸ್‌ ಆಗುತ್ತದೆ ಅಥವಾ ಸೆಲ್ಯುಲೋಸ್‌ನ ಎಂಜೈಮ್ಯಾಟಿಕ್ ಹೈಡ್ರಾಲಿಸಿಸ್‌ನಿಂದ ಕಡಿಮೆ ಅಣುರಾಶಿಯಿರುವ ಆಲಿಗೊಮರ್‌ಗಳು ಉತ್ಪತ್ತಿಯಾಗುತ್ತದೆ.ಫ್ರೀ ರ್ಯಾಡಿಕಲ್ ಅಟ್ಯಾಕ್‌ಗಾಗಿ ಪೆರಾಕ್ಸೈಡ್‌ಗಳು ಸೆಲ್ಯುಲೋಸ್‌ನ C2–C3 ಸ್ಥಾನದಲ್ಲಿ ಹೈಡ್ರೋಜನ್ ಪೆರಾಕ್ಸೈಡನ್ನೊದಗಿಸುತ್ತದೆ, ಇದು ಪ್ರತಿಕ್ರಿಯಾತ್ಮಕವಾಗಿದ್ದು ಕಡಿಮೆ ಅಣುರಾಶಿಯಿರುವ ಕಣಗಳನ್ನು ಹೈಡ್ರಲೈಸ್‌ ಮಾಡುತ್ತದೆ. ಬ್ಯಾಕ್ಟೀರಿಯಾಗಳೂ ಕಿಣ್ವಗಳನ್ನು ಸ್ರವಿಸುತ್ತದೆ, ಕೆಲವು ಸ್ರವಿಸುವ ಸ್ರವಿಕೆಗಳು ಒಟ್ಟಾಗಿ ಸೆಲ್ಯುಲೋಸ್‌ನ್ನು ಕಾರ್ಬೊಹಡ್ರೇಟ್ ನ್ಯೂಟ್ರಿಯಂಟ್‌ಗಳನ್ನಾಗಿಸುತ್ತವೆ, ಇದನ್ನು ಸೂಕ್ಷ್ಮಾಣು ಜೀವಿಗಳು ತಮ್ಮ ಬದುಕಿಗಾಗಿ ಉಪಯೋಗಿಸುತ್ತದೆ. ಆಮ್ಲಜನಕವಿರುವ ಮಣ್ಣಿನ ಪರಿಸ್ಥಿತಿಗಳು ಅನೇಕ ರೀತಿಯ ಒಟ್ತಿಗೆ ಕಾರ್ಯನಿರ್ವಹಿಸುವ ಬ್ಯಾಕ್ಟೀರಿಯಾ ಮತ್ತು ಫಂಗೈಗಳನ್ನು ಹೊಂದಿರುತ್ತದೆ. ಪ್ರಾಥಮಿಕ ಸೂಕ್ಷ್ಮಾಣುಜೀವಿಗಳು ಸೆಲ್ಯುಲೋಸ್‌ನ್ನು ಗ್ಲೂಕೊಸ್ ಮತ್ತು ಸೆಲ್ಲೊಡೆಕ್ಸ್‌ಟ್ರಿನ್‌ಗಳನ್ನಾಗಿಸುತ್ತದೆ, ಮತ್ತೊಂದು ಭಾಗವನ್ನು ತಾವು ಉಪಯೋಗಿಸಿಕೊಳ್ಳುತ್ತದೆ, ಮತ್ತು ದ್ವಿತೀಯ ಸೂಕ್ಷ್ಮಾಣುಜೀವಿಗಳು ಸೆಲ್ಲೊಡೆಕ್ಸ್‌ಟ್ರಿನ್‌‌ನ್ನು ಅವುಗಳು ಬಳಸುವ ಗ್ಲೂಕೊಸನ್ನಾಗಿ ಪರಿವರ್ತಿಸುವ ಎಂಜೈಮನ್ನು ಸ್ರವಿಸುತ್ತದೆ. ನಂತರದಲ್ಲಿ ಗ್ಲೂಕೋಸನ್ನು ಬಳಸಿ ಪ್ರಾಥಮಿಕ ಸೂಕ್ಷ್ಮಾಣುಜೀವಿ ಬೆಳೆಯುತ್ತವೆ, ಏಕೆಂದರೆ ಸೆಲ್ಲೊಡೆಕ್ಸ್‌ಟ್ರಿನ್‌‌ನ ಬೆಳವಣಿಗೆಯನ್ನು ಇವು ತಡೆಯುತ್ತದೆ, ಇವು ವಾತಾವರಣದಲ್ಲಿ ಹೆಚ್ಚಾದಾಗ ಗ್ಲುಕನಸೆಸ್‌ನ್ನು ತಡೆಯುತ್ತದೆ. ಕೊನೆಯದಾಗಿ ಆಮ್ಲಜನಕವಿರುವ ಜೈವಿಕವಿಘಟನೆಯ ಉತ್ಪನ್ನವಾಗಿ CO2 ಮತ್ತು ನೀರು ಉಂಟಾಗುತ್ತದೆ. ಆಮ್ಲಜನಕವಿರದ ವಾತಾವರಣದಲ್ಲಿ CO2, ಹೈಡ್ರೋಜನ್, ಮೀಥೇನ್, ಹೈಡ್ರೋಜನ್ ಸಲ್ಫೈಡ್ ಮತ್ತು ಅಮೋನಿಯದಂತಹ ಅನೇಕ ಉತ್ಪನ್ನಗಳು ಉಂಟಾಗುತ್ತದೆ. ಅಜೈವಿಕ ಸಂಯುಕ್ತಗಳು ಬಳಸುವ CO2ವನ್ನು ಉತ್ಕರ್ಷಣಶೀಲ ಪ್ರತಿಕ್ರಿಯೆಗಳಿಂದ ತಯಾರಿಸಲಾಗುತ್ತದೆ, ಅವುಗಳೆಂದರೆ ವಾತಾವರಣದಲ್ಲಿ ಅಪಕರ್ಷಣಕಾರಿಯಂತೆ ವರ್ತಿಸುವ ಸಲ್ಫೇಟ್ ಮತ್ತು ನೈಟ್ರೇಟ್ ಅಯಾನುಗಳು. ಅನ್‌ಎರೋಬಿಕ್ ಬ್ಯಾಕ್ಟೀರಿಯ ತಾಯಾರಿಸಿದ ಹೈಡ್ರೋಜನ್‌ನನ್ನು ಆಟೋಟ್ರೋಫಿಕ್ ಬ್ಯಾಕ್ಟೀರಿಯಾ ಭೋಗಿಸುತ್ತದೆ, ಇದರಿಂದಾಗಿ ಅಸಿಟಿಕ್ ಆ‍ಸಿಡ್ ಅಥವಾ ಮೆಥೇನ್ ತಯಾರಿಸಲು ಅಪಕರ್ಷಣಕಾರೀ ಸಂಯುಕ್ತಗಳು ಮತ್ತು CO2 ಕಡಿಮೆಯಾಗುತ್ತದೆ ಸೆಲ್ಯುಲೋಸ್ ಉಳಿದ ಪಾಲಿಮರ್‌ಗಳಿಗಿಂತ ಹೆಚ್ಚಿನ ಗಮನಸೆಳೆಯುತ್ತದೆ, ಏಕೆಂದರೆ ಇದು ಅನೇಕ ಬಾರಿ ಅನೇಕ ಸೂಕ್ಷ್ಮಾಣುಜೀವಿಗಳಿಂದ ಧಾಳಿಗೊಳಗಾಗಿದೆ, ಮತ್ತು ಇದನ್ನು ವಸ್ತ್ರೋದ್ಯಮದಲ್ಲಿ ಯಾವುದೇ ಅಡಿಟಿವ್‌ಗಳಿಲ್ಲದೆ ಬಳಸಲಾಗುತ್ತದೆ. ಸೆಲ್ಯುಲೋಸ್ ಹೊಲಸು ಮತ್ತು ತ್ಯಾಜ್ಯಗಳ ಮುಖ್ಯಭಾಗವಾಗಿದೆ.ಇದು ಬಹಳ ಬೇಗ ಕೊಳೆತು ಮಣ್ಣಾಗುವುದು ಒಂದು ವರವಾಗಿದೆ. ಸೆಲ್ಯುಲೋಸ್‌ನ ಹುದುಗುವಿಕೆಯನ್ನು ಎಥೆನಾಲ್ ಮತ್ತು ಅಸಿಟಿಕ್ ಆ‍ಸಿಡ್‌ನಂತಹ ರಾಸಾಯನಿಕಗಳ ಒಂದು ಮೂಲವಾಗಿದೆ, ಆದರೆ ಇದು ವಾಣಿಜ್ಯಿಕವಾಗಿ ಇದುವರೆಗೂ ಬಳಕೆಯಾಗಿಲ್ಲ. ಸೆಲ್ಯುಲೋಸ್‌ನ ಎಲ್ಲಾ ಮುಖ್ಯ ಉತ್ಪನ್ನಗಳು, ಮೂರು ಹೈಡ್ರಾಕ್ಸಿಲ್ ಗುಂಪುಗಳಲ್ಲಿ ಒಂದು ಅಥವಾ ಹೆಚ್ಚಿನ ಪ್ರತಿಕ್ರಿಯಾ ಉತ್ಪನ್ನಗಳಾಗಿವೆ, ಅವೆಂದರೆ:(1)ಈಥರ್‌ಗಳು ಉದಾ: ಮಿಥೈಲ್ ಸೆಲ್ಯುಲೋಸ್ ಮತ್ತು ಹೈಡ್ರಾಕ್ಸಿಲ್ ಈಥೈಲ್ ಸೆಲ್ಯುಲೋಸ್; (2)ಎಸ್ಟರ್ಸ್ ಉದಾ: ಸೆಲ್ಯುಲೋಸ್ ಅಸಿಟೇಟ್ ಮತ್ತು ಸೆಲ್ಯುಲೋಸ್ ಕ್ಸಂಥೇನ್, ಸೆಲ್ಯುಲೋಸ್ ಈಥರ್ ಆಗುವಾಗ ಪದರಗಳನ್ನೇರ್ಪಡಿಸಲು ದ್ರಾವ್ಯ ಮಧ್ಯವರ್ತಿಯಾಗಿ ಬಳಸಲಾಗುತ್ತದೆ, ಆ ಸಮಯದಲ್ಲಿ ನಿಯಂತ್ರಿತ ಹೈಡ್ರಾಲಿಸಿಸ್‌ನಿಂದಾಗಿ ಸೆಲ್ಯುಲೋಸ್ ಉತ್ಪಾದನೆಯಾಗುತ್ತದೆ; ಮತ್ತು (3)ಅಸಿಟಲ್‌ಗಳು, C2 ಮತ್ತು C3 ಹೈಡ್ರಾಕ್ಸಿಲ್ ಗುಂಪುಗಳು ಮತ್ತು ಬುಟೈರಾಲ್‌ಡಿಹೈಡ್‌ಗಳ ನಡುವೆ ಸೈಕ್ಲಿಕ್ ಅಸಿಟಾಲ್ ಉಂಟಾಗುತ್ತದೆ. ಸೆಲ್ಯುಲೋಸ್‌ನ ಜೈವಿಕವಿಘಟನೆಯು ಸಂಕೀರ್ಣವಾದುದು, ಏಕೆಂದರೆ ಸೆಲ್ಯುಲೋಸ್ ಲಿಗ್‌ನಿನ್‌ನೊಂದಿಗೆ ಇರುತ್ತದೆ, ಉದಾ: ಮರದ ಕೋಶದ ಗೋಡೆಗಳಲ್ಲಿ.ವೈಟ್-ರಾಟ್ ಫಂಗೈ ಪ್ರಮುಖವಾಗಿ ಲಿಗ್‌ನಿನ್‌ನನ್ನು ಮತ್ತು ಸೆಲ್ಯೂಲೇಸ್‌ ವಿಘಟಿಸಲು ಎಕ್ಸೊಸೆಲ್ಯುಲಾರ್ ಪೆರಾಕ್ಸಿಡಸೆಸ್‌ನ್ನು ಕಡಿಮೆ ಪ್ರಮಾಣದಲ್ಲಿ ಸ್ರವಿಸುತ್ತದೆ, ಸೆಲ್ಯೂಲೇಸ್‌ ಪಾಲೀಸ್ಯಾವರೈಡ್‌ಗಳನ್ನು ವಿಘಟಿಸಿ ಸರಳ ಶರ್ಕರವನ್ನು ಪಡೆಯಲು ಈ ಸೂಕ್ಷ್ಮಾಣುಜೀವಿಗಳಿಗೆ ಸ್ಯೂಟ್ರಿಯಂಟ್ ಆಗಿ ವರ್ತಿಸುತ್ತವೆ.ಬ್ರೌನ್-ರಾಟ್ ಫಂಗೈ ಸೆಲ್ಯುಲೋಸ್ ಮತ್ತು ಹೆಮಿಸೆಲ್ಯುಲೋಸ್‌ನ್ನು ವಿಘಟಿಸಲು ಎಂಜೈಮನ್ನು ಸ್ರವಿಸುತ್ತವೆ. ಸಾಫ್ಟ್-ರಾಟ್ ಫಂಗೈ ಸಹ ಈ ಪ್ರಮುಖ ಎರಡು ವಿಧದ ಪಾಲಿಸ್ಯಾಕರೈಡ್‌‌ಗಳನ್ನು ವಿಘಟಿಸುತ್ತದೆ. ಸೆಲ್ಯುಲೋಸ್ ಎಸ್ಟರ್ಸ್ ಇಂಗಾಲದ ಚಕ್ರದಲ್ಲಿ ಸಮರ್ಥವಾಗಿ ಭಾಗವಹಿಸುವ ಪಾಲಿಮರ್‌ಗಳ ಒಂದು ಗುಂಪನ್ನು ಪ್ರತಿನಿಧಿಸುತ್ತದೆ, ಸೂಕ್ಷ್ಮಾಣು ಜೀವಶಾಸ್ತ್ರದ ಮೂಲಕ ಕೆಟಲೈಸ್ ಮಾಡಲಾದ ಡಿ-ಎಸ್ಟರಿಫಿಕೇಶನ್ ಮತ್ತು ಸೆಲ್ಯುಲೋಸ್ ಮತ್ತು ಸಾವಯವ ಆಮ್ಲಗಳ ವಿಘಟನೆಯಾಗುತ್ತದೆ ಸೆಲ್ಯುಲೋಸ್ ಅಸಿಟೇಟನ್ನು ಪ್ರಸ್ತುತ ಬೃಹತ್ ಪ್ರಮಾಣದಲ್ಲಿ ಫೈಬರ್‌ನಿಂದ ಫಿಲ್ಮಗಳವರೆಗೊ, ಇಂಜೆಕ್ಷನ್ ಮೌಲ್ಡಿಂಗ್ ಥರ್ಮೊಪ್ಲಾಸ್ಟಿಕ್‌ಗಳಲ್ಲಿ ಬಳಸುತ್ತಾರೆ. ಇದು ಭೌತಿಕ ಗುಣಗಳನ್ನು ಹೊಂದಿದೆ ಮತ್ತು ಕಡಿಮೆ ಉತ್ಪಾದನಾ ವೆಚ್ಚವನ್ನು ಹೊಂದಿದೆ ಮತ್ತು ಇತರ ಜೈವಿಕವಿಘಟನಾಕಾರಿ ಪಾಲಿಮರ್‌ಗಳನ್ನು ಹೊರತುಪಡಿಸಿದರೆ ಇದೇ ಅತ್ಯಂತ ಹೆಚ್ಚು ಮಾರುಕಟ್ಟೆಯಲ್ಲಿ ಬಳಕೆಯಾಗುತ್ತಿರುವುದಾಗಿದೆ. ಅವುಗಳ ಡಿಗ್ರಿ ಆಫ್ ಸಬ್‌ಸ್ಟಿಟ್ಯೂಶನ್‌ನನ್ನು ಬದಲಿಸಿ ಸೆಲ್ಯುಲೋಸ್ ಅಸಿಟೇಟ್ ಪದರಗಳನ್ನು ಅಭಿವೃದ್ಧಿ ಪಡಿಸಿದರು, ಅವುಗಳನ್ನು ಈ ಬೆಂಚ್-ಸ್ಕೇಲ್ ವ್ಯವಸ್ಥೆಯಲ್ಲಿ ಅಳೆಯಲಾಯಿತು. ಇದಲ್ಲದೆ, ವಾಣಿಜ್ಯಿಕವಾದ ಜೈವಿಕವಿಘಟನಕಾರಿ ಪಾಲಿಮರ್‌ಗಳಾ ಪಾಲಿ (ಹೈಡ್ರಾಕ್ಸಿಬ್ಯುಟರೇಟ್-ಕೊ-ವಲೆರೇಟ್)(ಪಿಹೆಚ್‌ಬಿವಿ) ಮತ್ತು ಪಾಲಿಕಾರ್ಪೊಲಕ್ಟೋನ್ (ಪಿಸಿಎಲ್)ಗಳು ಉಲ್ಲೇಖಗಳಾಗಿ ಒಳಗೊಂಡಿದೆ. ಪದರದ ವಿಯೋಜನೆ ಮತ್ತು ಪದರದ ತೂಕದ ನಷ್ಟದ ಆಧಾರದಲ್ಲಿ ಸೆಲ್ಯುಲೋಸ್ ಅಸಿಟೇಟ್, ಸರಾಸರಿ 2.20ಕ್ಕಿಂತ ಕಡಿಮೆ ಡಿಗ್ರಿ ಆಫ್ ಸಬ್‌ಸ್ಟಿಟ್ಯೂಶನ್‌ನ್ನು ಹೊಂದಿದೆ, ಇದು ಪಿಹೆಚ್‌ಬಿವಿಗಿಂತ ಕಡಿಮೆ ವಿಭಜನಾ ದರವನ್ನು ಹೊಂದಿದೆ. ವಿಘಟನೆಗೊಂಡ ಪದರಗಳ ಎನ್‌ಎಮ್‌ಆರ್‌ ಮತ್ತು ಜಿಪಿಸಿ ವಿಶ್ಲೇಷಣೆಯು ನಿಧಾನವಾಗಿ ವಿಘಟನೆಯಾಗುವ ಸೆಲ್ಯುಲೋಸ್ ಅಸಿಟೇಟ್ ಮತ್ತು ಹೆಚ್ಚು ಹೈಲೀ ಸಬ್‌ಸ್ಟಿಟ್ಯೂಟ್ ಆಗಿರುವುದರಿಂದ ಕಡಿಮೆ ಅಣುರಾಶಿಯಿರುವ ಕಣವನ್ನು ಬೇರ್ಪಡಿಸುವುದನ್ನು ಪ್ರತಿಸಿಧಿಸುತ್ತದೆ. ಕಡಿಮೆ ಡಿಗ್ರಿ ಆಫ್ ಸಬ್‌ಸ್ಟಿಟ್ಯೂಶನ್‌ನಲ್ಲಿ ಈಸ್ಟರೇಸ್ ಪ್ರಕ್ರಿಯೆಯಲ್ಲಿ ಸೆಲ್ಯುಲೋಸ್ ಅಸಿಟೇಟ್‌ನ ಇರುತ್ತದೆ. ಪೆಸ್ಟಲೋಟಿಯಾಪ್ಸಿಸ್ ವಸ್ಟರ್‌ಡಿಜ್ಕಿ ಕ್ವಾರ್ಟರ್ ಮಾಸ್ಟರ್(ಕ್ಯೂಎಮ್) 381ನಲ್ಲಿ ಲೊ ಡಿಎಸ್ ಸೆಲ್ಯುಲೋಸ್ ಈಸ್ಟರ್‌ನ್ನು ಬಳಸಿಕೊಳ್ಳಲಾಗಿದೆ. ರೀಸ್ ಸಂಪೂರ್ಣ ಸಬ್ಸಿಟ್ಯೂಟ್ ಆದ ಸೆಲ್ಯುಲೋಸ್ ಟ್ರೈಅಸಿಟೇಟ್ ಜೈವಿಕ ವಿಘಟನೆಯಾಗಬಲ್ಲದೆಂಬುದಕ್ಕೆ ಯಾವುದೇ ಸಾಕ್ಷಿಸಿಗಲಿಲ್ಲ.ಉಳಿದವರು ಸೆಲ್ಯುಲೋಸ್ ಅಸಿಟೇಟ್‌ನಿಂದಾದ ರಿವರ್ಸ್ ಆಸ್ಮಾಸಿಸ್ ಮೆಂಬ್ರೇನ್‌ನಲ್ಲಿ ಈಸ್ಟರೇಸ್ ಪ್ರಕ್ರಿಯೆಯ ಸಾಕ್ಷಿ ದೊರೆಯಿತು. ಸೆಲ್ಯುಲೋಸ್ ಈಸ್ಟರ್‌ಗಳು ಮತ್ತು ಅದರ CO2ನ ರೂಪಾಂತರದಿಂದ ಇಂಗಾಲದ ಸೂಕ್ಷ್ಮಾಣುಜೀವಿ ಹಂತದ ಬಳಕೆಯು ಪಾಲಿಮರ್ ಜೈವಿಕ ವಿಘಟನೆಯಾಗುವುದನ್ನು ದೃಡಪಡಿಸುತ್ತದೆ ಮತ್ತು ಪೂರ್ಣ ಖನಿಜೀಕರಿಸುವಿಕೆಗೆ ಬೇಕಾಗುವ ಸಾಮರ್ಥ್ಯವು ನೈಸರ್ಗಿಕವಾಗಿದೆ, ಸೂಕ್ಷ್ಮ ಜೀವವಿಜ್ಞಾನದ ಪ್ರಕಾರವಾಗಿ ಕ್ರಿಯಾಶೀಲ ವಾತಾವರಣವುಂಟಾಗುತ್ತದೆ. ಸೆಲ್ಯುಲೋಸ್ ಈಥರ್‌ಗಳ ಜೈವಿಕವಿಘಟನೆಯನ್ನು ಅಭ್ಯಸಿಸಲಾಯಿತು ಮತ್ತು ಇದನ್ನು ಸೆಲ್ಯುಲೋಸ್ ಈಥರ್‌ಗಳೆಂದು ಕರೆಯುತ್ತಾರೆ, ಇದರ ಡಿಎಸ್ 1ಕ್ಕಿಂತ ಕಡಿಮೆಯಿರುವ ಕಣಗಳು ಪಾಲಿಮರ್‌ನ ಬದಲಿಸದ ಅವಶೇಷಗಳು ಸೂಕ್ಶ್ಮಾಣುಜೀವಿಗಳ ಧಾಳಿಯಿಂದ ವಿಭಜನೆಯಾಗುತ್ತದೆ. ಸೆಲ್ಯುಲೋಸ್‌ನ ಈಥರ್ ಕೊಂಡಿಗಳು ಸೂಕ್ಮಾಣು ಜೀವಿಗಳ ಧಾಳಿಯನ್ನು ವಿರೋಧಿಸುತ್ತವೆಂದು ಪರಿಗಣಿಸಲಾಗುತ್ತದೆ. ಸೆಲ್ಯುಲೋಸ್ ಈಸ್ಟರ್‌ಗಳ ಜೈವಿಕವಿಘಟನಾ ಸಾಮರ್ಥ್ಯದ ಬಗೆಗಿನ ವರದಿಗಳಲ್ಲಿ ವಿವಾದಗಳಿವೆ.

ಚಿಟಿನ್ ಮತ್ತು ಚಿಟೊಸನ್

ಬದಲಾಯಿಸಿ

ಚಿಟಿನ್ ಏಡಿಗಳು, ಕಡಲೇಡಿಗಳು, ಸೀಗಡಿಗಳು ಮತ್ತು ಕೀಟಗಳ ಕವಚಗಳಲ್ಲಿ ಕಂಡುಬರುವ ಮ್ಯಾಕ್ರೊಮಾಲಿಕ್ಯೂಲ್ (ದೊಡ್ಡಅಣು) ಆಗಿದೆ. ಚಿಟಿನ್ ಚಿಟಿನೇಸ್‌ನಿಂದ ವಿಘಟನೆಗೊಳಗಾಗಬಹುದು ಚಿಟಿನ್ ಫೈಬರ್‌ಗಳನ್ನು ಕೃತಕ ಚರ್ಮ ಮತ್ತು ಹೀರಿಕೊಳ್ಳಬಹುದಾದ ಹೊಲಿಗೆಗಳಿಗಾಗಿ ಉಪಯೋಗಿಸಲಾಗುತ್ತದೆ ಚಿಟಿನ್ ತನ್ನ ಮೂಲರೂಪದಲ್ಲಿ ಕರಗದ ವಸ್ತುವಾಗಿದೆ ಆದರೆ ಚಿಟೋಸನ್ ಭಾಗಶಃ ಡಿಅಸಿಟಲೈಜ್ಡ್ ರೂಪದಲ್ಲಿದ್ದು ನೀರಿನಲ್ಲಿ ಕರಗುತ್ತದೆ. ವಸ್ತುಗಳು ಜೈವಿಕವಾಗಿ ಹೊಂದಬಲ್ಲಂತಹದಾಗಿದ್ದು ಆ‍ಯ್ಯ್೦ಟಿ ಮೈಕ್ರೊಬಿಯಲ್ ಚಟುವಟಿಕೆಗಳನ್ನು ಹೊಂದಿವೆ, ಅದರೊಂದಿಗೆ ಹೆವಿ ಮೆಟಲ್ ಅಯಾನುಗಳನ್ನು ಹೀರಿಕೊಳ್ಳುತ್ತದೆ. ನೀರನ್ನು ಉಳಿಸಿಕೊಳ್ಳುವ ಮತ್ತು ತೇವಾಂಶವನ್ನು ಹೊಂದಿರುವ ಗುಣದಿಂದ ಇವುಗಳನ್ನು ಸೌಂದರ್ಯೊಧ್ಯಮದಲ್ಲಿ ಬಳಸಲಾಗುತ್ತದೆ. ಚಿಟಿನ್ ಮತ್ತು ಚಿಟೋಸನ್‌ನ್ನು ವಾಹಕವಾಗಿ ಬಳದುವುದರಿಂದ ನೀರಿನಲ್ಲಿ ಕರಗಬಲ್ಲ ಪ್ರೋಡ್ರಗ್ ಅನ್ನು ಸಂಶ್ಲೇಷಣೆ ಮಾಡಲಾಗುತ್ತದೆ. ನವೀನ ಚಿಟೋಸನ್‌ಗಳನ್ನು ಹಲವಾರು ರಸಾಯನಿಕ ಮತ್ತು ಜೈವಿಕ ಗುಣಗಳಿರುವಂತೆ ತಯಾರಿಸಲಾಗುತ್ತದೆ. ಉದಾ: ಎನ್-ಕಾರ್ಬೊಕ್ಸಿಮೆಥೈಲ್‌ಚಿಟೊಸನ್ ಮತ್ತು ಎನ್-ಕಾರ್ಬೊಕ್ಸಿಬುಟೈಲ್‌ಚಿಟೊಸನ್‌ಗಳನ್ನು ಸೌಂದರ್ಯ ಸಾಧನಗಳಲ್ಲಿ ಮತ್ತು ಗಾಯದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಚಿಟಿನ್ ಉತ್ಪನ್ನಗಳನ್ನು ಔಷಧಿಯನ್ನು ಹಾಕಿಡಲು ಬಳಸುತ್ತಾರೆ, ಮತ್ತು ಹೀರಿಕೊಳ್ಳುವ ಹೊಲಿಗೆಗಳಲ್ಲಿ ಚಿಟಿನ್ ಬಳಕೆಯ ವರದಿಯ ಪ್ರಕಾರ ಚಿಟಿನ್‌ಗಳನ್ನು, ಪಾಲಿ(ಗ್ಲೈಕೊಲಿಕ್ ಆ‍ಯ್‌ಸಿಡ್) (ಪಿಜಿಎ), ಪ್ಲೈನ್ ಕರುಳುಹುರಿ ಮತ್ತು ಕ್ರೋಮಿಕ್ ಕರುಳುಹುರಿಗಳನ್ನು ಹೊಂದಿರುವ ವಸ್ತುಗಳಲ್ಲಿ ಅತ್ಯಂತ ಕಡಿಮೆ ಲಂಭನೆಯನ್ನು ಹೊಂದಿರುತ್ತವೆ. ಚಿಟಿನ್‌ನ ಅಂಗಾಂಶ ಪ್ರತಿಕ್ರಿಯೆಯು ಅದರ ಪಿಜಿಎಯಷ್ಟೇ ಇರುತ್ತದೆ

ಆಲ್ಜಿನಿಕ್ ಆಮ್ಲ

ಬದಲಾಯಿಸಿ

ಹಲವಾರು ದ್ರಾವಣದಲ್ಲಿನ ಪಾಲಿಸ್ಯಾಚಡ್‌ಗಳು ಕೌಂಟರ್-ಅಯಾನುಗಳೊಂದಿಗೆ ಸಂಪರ್ಕವೇರ್ಪಟ್ಟಾಗ ಜೆಲ್‌ಗಳಾಗುತ್ತವೆ. ಕ್ರಾಸ್-ಲಿಂಕಿಂಗ್‌ನ ಮಟ್ಟವು ಪಿಹೆಚ್, ಕೌಂಟರ್-ಅಯಾನುಗಳ ವಿಧ, ಮತ್ತು ಪಾಲಿಮರ್‌ಗಳ ಕಾರ್ಯಕಾರಿ ವಿದ್ಯುದಾವೇಶ ಸಾಂದ್ರತೆಯನ್ನವಲಂಬಿಸಿರುತ್ತದೆ. ಅಗ್ಲಿನೇಟ್‌ಗಳನ್ನು ಅವುಗಳ ಜೆಲ್‌ಗಳನ್ನು ತಯಾರಿಸುವ ಸಾಮರ್ಥ್ಯಕ್ಕಾಗಿ ಡೈವಾಲೆಂಟ್ ಧನ ಆಯಾನುಗಳ ಉಪಸ್ಥಿತಿಯಲ್ಲಿ ಅಭ್ಯಸಿಸಲಾಯಿತು. ಆಲ್ಗಿನಿಕ್ ಆ‍ಯ್‌ಸಿಡ್ ನೀರಿನಲ್ಲಿ ಕರಗಬಹುದಾದ ಸಾಲ್ಟನ್ನು ಮೋನೊವಾಲೆಂಟ್ ಧನ ಐಯಾನುಗಳೊಂದಿಗೆ ಕಡಿಮೆ ಅಣುರಾಶಿಯಿರುವ ಅಮೈನ್‌ಗಳು ಮತ್ತು ಕ್ವಾಟರ್ನರಿ ಅಮೋನಿಯಮ್ ಸಂಯುಕ್ತಗಳನ್ನು ತಯಾರಿಸುತ್ತದೆ. ಪಾಲಿವಾಲೆಂಟ್ ಧನಾಯಾನುಗಳಾದ Ca2+, Be2+, Cu2+, Al3+ ಮತ್ತು Fe3+ಗಳೊಂದಿಗೆ ಇದು ನೀರಿನಲ್ಲಿ ಕರಗದ ವಸ್ತುವಾಗುತ್ತದೆ. ಅಲ್ಜಿನೇಟ್‌ ಜೆಲ್‌ಗಳನ್ನು ನಿಯಂತ್ರಿತ ಬಿಡುಗಡೆಯ ಡ್ರಗ್ ಹಂಚಿಕೆ ಪದ್ಧತಿಗಳಲ್ಲಿ ಬಹಳವಾಗಿ ಬಳಸಲಾಗುತ್ತದೆ. ಅಲ್ಜಿನೇಟ್‌ಗಳನ್ನು ಹಲವಾರು ಸಸ್ಯನಾಶಕಗಳು, ಸೂಕ್ಷ್ಮಾಣುಜೀವಿಗಳು ಮತ್ತು ಕೋಶಗಳನ್ನು ತುಂಬಲು ಮಾಡಲು ಬಳಸಲಾಗುತ್ತದೆ.

ಪಾಲಿಪೆಪ್ಟೈಡ್‌ಗಳು

ಬದಲಾಯಿಸಿ
 
ಅಮೈನೊ ಆಮ್ಲವನ್ನು ಕೂಡಿಸಿ ಪ್ರೋಟೀನ್ ಪಾಲೀಮರ್‌ನ್ನು ತಯಾರಿಸುವ ಪೆಪ್ಟೈಡ್‌ ಬಂಧದ ಅನುರಣನದ ರಚನೆ.

ಪಾಲಿಪೆಪ್ಟೈಡ್‌ನ್ನು ಅದರ ಅಮೈನೊ ಆ‍ಯ್‌ಸಿಡ್‌ನ ಉಳಿದ ಪದಾರ್ಥಗಳನ್ನಾಗಿ ಪಟ್ಟಿ ಮಾಡಲಾಗಿದೆ, ಅವುಗಳು ಅಮೈನೊನಿಂದ ಕಾರ್ಬಾಕ್ಸಿಲಿಕ್‌ ಆ‍ಯ್‌ಸಿಡ್‌ನಂತಹುದರಲ್ಲೂ ಇರುತ್ತದೆ. ಅಮೈನೊ ಆ‍ಯ್‌ಸಿಡ್‌ನ ಅವಶೇಷಗಳು ಯಾವಾಗಲೂ ಪೆಪ್ಟೈಡ್ ಬಂಧಗಳಿಂದ ಬಂಧಿಸಲ್ಪಟ್ಟಿರುತ್ತದೆ. ಯಾವುದೇ ಪಾಲಿಪೆಪ್ಟೈಡನ್ನು ಆಡುಮಾತಿನಲ್ಲಿ ಪ್ರೋಟೀನೆಂದು ಗುರುತಿಸುತ್ತಾರೆ, ಇದು ದೊಡ್ಡ ಅಥವಾ ಪೂರ್ಣಕಾರ್ಯವನ್ನು ಮತ್ತು ಹಲವು ಪಾಲಿಪೆಪ್ಟೈಡ್ ಸರಣಿಗಳು ಹಾಗೂ ಒಂದು ಸರಣಿಯನ್ನೂ ಸಹ ಪ್ರತಿನಿಧಿಸುತ್ತದೆ. ಪ್ರೊಟೀನನ್ನು ನಾನ್-ಪೆಪ್ಟೈಡ್ ಘಟಕಗಳನ್ನು ಒಳಗೊಳ್ಳುವಂತೆ ಆಧುನಿಕರಿಸಲಾಗಿದೆ, ಅವೆಂದರೆ ಸ್ಯಾಚರೈಡ್ ಸರಣಿಗಳು ಮತ್ತು ಲಿಪಿಡ್‌ಗಳು.ವಿಘಟನೆಯಿಂದಲ್ಲದೆ ಸಾಮಾನ್ಯವಾಗಿ ಕರಗದ ಪ್ರೊಟೀನನ್ನು ಔದ್ಯೋಗಿಕ ಉಪಯೋಗಗಳಿಗಾಗಿ ಬಳಸುತ್ತಾರೆ. ಅವುಗಳನ್ನು ಪ್ರಾಥಮಿಕವಾಗಿ ಅವುಗಳ ಮೂಲೂಪದಲ್ಲಿಯೇ ಬಳಸುತ್ತಾರೆ. ನಾರಿನಿಂದ ಕೂಡಿದ ಪ್ರೋಟೀನುಗಳಾದ ಉಣ್ಣೆ, ರೇಷ್ಮೆ ಮತ್ತು ಕೊಲಜೆನ್‌ಗಳಿಗೆ ಅನ್ವಯಿಸುತ್ತದೆ. ಎಲ್ಲಾ ಪ್ರೊಟೀನುಗಳು ನಿರ್ಧಿಷ್ಟವಾದ ಕೊ-ಪಾಲೊಮರ್‌ಗಳಾಗಿದ್ದು ಆಲ್ಫಾ-ಅಮೈನೊ ಆ‍ಯ್‌ಸಿಡ್‌ಗಳ ವಿವಿಧ ಜೋಡಣೆಗಳಾಗಿರುತ್ತದೆ. ಆದ್ದರಿಂದ ಪ್ರೊಟೀನುಗಳ ಜೈವಿಕಸಂಯೋಜನೆಯು ಹಲವಾರು ಕಿಣ್ವಗಳನ್ನು ಹೊಂದಿದ್ದು ಸಂಕೀರ್ಣವಾದ ವಿಧಾನವಾಗಿದೆ. ಇದಕ್ಕೆ ವಿರುದ್ಧವಾಗಿ ಸಾಮಾನ್ಯವಾದ ಪ್ರೊಟಿಯಸೆಸ್‌ನೊಂದಿಗಿನ ಕಿಣ್ವದೊಂದಿಗೆ ವಿಘಟನೆಯಾಗುವ ಪ್ರೊಟೀನುಗಳು ಸುಲಭವಾಗಿ ಅಮೈಡ್ ಹೈಡ್ರಾಲಿಸಿಸ್ ಪ್ರಕ್ರಿಯೆಗೊಳಗಾಗುತ್ತವೆ.

ಜೆಲಟಿನ್

ಬದಲಾಯಿಸಿ

ಜೆಲಟಿನ್ ಒಂದು ಪ್ರಾಣಿಯ ಪ್ರೋಟೀನಾಗಿದ್ದು ಪೆಪ್ಟೈಡ್‌ನೊಂದಿಗೆ 19 ಅಮೈನೊ ಆ‍ಯ್‌ಸಿಡನ್ನು ಒಳಗೊಂಡಿರುತ್ತದೆ ಮತ್ತು ವಿವಿಧ ಕಿಣ್ವಗಳಿಂದ ಹೈಡ್ರಲೈಸ್‌ಗೊಳಗಾಗುತ್ತದೆ ಇದರಿಂದ ಅವುಗಳ ಅಮೈನೊ ಆ‍ಯ್‌ಸಿಡ್ ಅಥವಾ ಪೆಪ್ಟೈಡ್ ದೊರೆಯುತ್ತದೆ. ಉದ್ದೇಶಿತ ಜೈವಿಕವಿಘಟನಾ ಕ್ರಿಯೆಯ ಗುಣವು ಜೆಲಟಿನ್‌ನನ್ನು ಹೆಚ್ಚು ಸೂಕ್ತವನ್ನಾಗಿಸುತ್ತದೆ. ಜೆಲಟಿನ್ ಒಂದು ನೀರಿನಲ್ಲಿ ಕರಗಬಲ್ಲ, ಜೈವಿಕವಿಘಟನೆಯಾಗಬಲ್ಲ ಪಾಲೀಮರ್‌ ಅಗಿದೆ, ಇದು ಹೆಚ್ಚಿನ ಕೈಗಾರಿಕಾ, ಔಷಧಿಗಳಿಗೆ ಸಂಬಂಧಿಸಿದ, ಜೀವವೈದ್ಯಕೀಯ ಉಪಯೋಗಗಳಿಗಾಗಿ ಬಳಸುತ್ತಾರೆ. ಹೆಚ್ಚಾಗಿ ಕೋಸ್ಟಿಂಗ್, ಅನೇಕ ಔಷಧಿಗಳನ್ನು ಮೈಕ್ರೊಎನ್‌ಕ್ಯಾಪ್ಸುಲೇಟಿಂಗ್ ಮತ್ತು ಕೋಟಿಂಗ್‌ಗಳಲ್ಲಿ ಮತ್ತು ಜೈವಿಕವಾಗಿ ವಿಘಟನೆಯಾಗಬಲ್ಲ ಹೈಡ್ರೊಜೆಲ್‌ಗಳನ್ನು ತಯಾರಿಸಲು ಬಳಸುತ್ತಾರೆ. ಸರಳ ಮತ್ತು ಸರಿಹೊಂದಬಹುದಾದ ಜೆಲಿಟಿನ್ ಪದರವನ್ನಾಧರಿಸಿದ ಕೃತಕ ಚರ್ಮವನ್ನು ತಯಾರಿಸಲು ಒಂದು ವಿಧಾನವನ್ನು ಕಂಡುಹಿಡಿಯಲಾಯಿತು, ಅದು ತೆರೆದ ಗಾಯವನ್ನು ಮುಚ್ಚಿ ಹಾನಿಗೊಳಗಾಗದಂತೆ ಕಾಪಾದುತಿತ್ತು. ವಾಣಿಜ್ಯಿಕವಾಗಿ ಲಭ್ಯವಿರುವ ಜೆಲಟಿನ್‌ನೊಂದಿಗೆ ಪಾಲಿಗ್ಲಿಸೆರಾಲ್‌ಗಳನ್ನು ಸೇರಿಸಲು ಮತ್ತು ಟೆಫ್ಲಾನ್-ಹೊದಿಸಿದ ಫಲಕಗಳಲ್ಲಿ ಪದರಗಳನ್ನು ಹಾಕಲು ಈ ವಿಧಾನವನ್ನು ಬಳಸಲಾಗಿದೆ. ಪದರವು ಗಟ್ಟಿಯಾಗಿದ್ದು ತೆರೆದ ಗಾಯದ ಮೇಲೆ ಅಂಟಿಕೊಂಡಿರುತ್ತದೆ ಅವರು ಜೈವಿಕವಾಗಿ ಕ್ರಿಯಾಶೀಲವಾಗಿರುವ ಕಣಗಳನ್ನು ಸೇರಿಸಬಹುದು, ಅವೆಂದರೆ ಅನೇಕ ದಿನಗಳ ವರೆಗೆ ಬಿಡುಗಡೆಯಾಗುವ ಬೆಳೆಯಲು ಸಹಾಯಕ ಅಂಶಗಳು ಮತ್ತು ಜೀವನಿರೋಧಕಗಳು. ಪದರಗಳನ್ನು γ-ಕಿರಣಗಳ ಮೊಲಕ ಬರಡಾಗಿಸಬಹುದು ಅಥವಾ ಬರಡಾಗಿಸುವ ಕ್ರಮಕ್ಕೊಳಪಡಿಸಿ ತಯಾರಿಸಬಹುದು. ಕಸಿ ಮಾಡುವ ಮೂಲಕ ನೈಸರ್ಗಿಕವಾದ ಪಾಲಿಮರ್‌ಗಳ ರಾಸಾಯನಿಕ ಮರುಬಳಕೆ ಮತ್ತು ನೈಸರ್ಗಿಕವಾಗಿ ದೊರೆತ ವಸ್ತುಗಳ ಬಳಕೆಯಂತಹ ಎರಡು ಉದ್ದೇಶಗಳನ್ನು ಪೂರೈಸುತ್ತದೆ.(ಉದಾ: ಪ್ರೊಟೀನುಗಳು) ಪೆಟ್ರೋಲಿಯಮ್ ಆಧಾರದ ಪಾಲಿಮರ್‌ಗಳ ಬದಾಲಾಗಿ ಉಪಯೋಗಿಸುವ ಈ ಜೈವಿಕವಿಘಟನಾ ಕಣವು ನಿಧಾನವಾಗಿ ಹೊಂದಿಕೊಳ್ಳುತ್ತದೆ ಅಥವಾ ಬಹಳ ಬೇಗ ವಿಘಟನೆಯಾಗುತ್ತದೆ. ನೈಸರ್ಗಿಕವಾದ ಪಾಲಿಮರ್‌ಗಳ ಆಧುನೀಕರಣಕ್ಕಾಗಿ ಕಸಿಮಾಡುವಿಕೆಯನ್ನು ವಿಸ್ತರಿಸಲು ಒಂದು ತಂಡವು ಮೆಥೈಲ್ ಮೆಥಾಕ್ರೈಲೇಟ್‌‌ನ್ನು ರ್ಯಾಡಿಕಲ್‌ ಇನಿಶಿಯೇಟರ್ ಮೂಲಕ ಜೆಲೆಟಿನ್ನಾಗಿ ಕಸಿಮಾಡಲಾಯಿತು ಮತ್ತು ಇದನ್ನು ನೀರಿನ ದ್ರಾವಣದ ಮೂಲಕ 60ರಿಂದ 80 °C ತಾಪಮಾನದಲ್ಲಿಟ್ಟು ಅಭ್ಯಸಿಸಲಾಯಿತು. ಇದರಿಂದ ತಿಳಿದುಬಂದ ಅಂಶಗಳೆಂದರೆ:(1) ಕಡಿಮೆ ತಾಪಮಾನದಲ್ಲಿ ಕಸಿಮಾಡಿವಿಕೆಯ ಸಮರ್ಥ್ಯವು ಹೆಚ್ಚಾಗುತ್ತದೆ; (2)ಶೀಘ್ರವಾಗಿ ಏರಿಕೆಯಾದ ಕಸಿ ಸಾಮರ್ಥ್ಯವು ಹೆಚ್ಚಿನ ತಾಪಮಾನದಲ್ಲಿನ ಪಾಲಿಮರೀಕರಣದಿಂದಾಗುತಿತ್ತು, ಇದನ್ನು ಹೊಮೋ ಪಾಲಿಮರ್ ಮತ್ತು ಮೂಲ ಜೆಲೆಟಿನ್‌ಗಳ ಸಂಯೋಜನೆಗೆ ಸಹಕಾರಿಯಾಯಿತು; (3)ಮತ್ತು ಪಾಲಿಮರೀಕರಣದಲ್ಲಿ ಕವಲುಗಳ ಸಂಖ್ಯೆ ಕಡಿಮೆಯಾಗಿರುತ್ತದೆ ಹಾಗೆ ಮತ್ತು ಕವಲಿನ ಪಾಲಿಮರ್‌ಗಳ ಅಣುರಾಶಿಯು ಹೆಚ್ಚಾಗಿರುತ್ತದೆ.

ಬ್ಯಾಕ್ಟೀರಿಯಾದಿಂದಾದ ಪಾಲಿಸ್ಟರ್‌ಗಳು

ಬದಲಾಯಿಸಿ

ನೈಸರ್ಗಿಕವಾದ ಪಾಲಿಇಸ್ಟರ್‌ಗಳು ಹಲವು ವಿಧದ ಬ್ಯಾಕ್ಟೀರಿಯಾಗಳ ಕೋಶದೊಳಗಿನ ಅಂಶಗಳಿಂದ ತಯಾರಿಸಲಾಗುತ್ತದೆ, ಇವುಗಳು ಈಗ ಹೆಚ್ಚಿನ ಗಮನ ಸೆಳೆಯುವ ಜೈವಿಕ್ ವಿಘಟನಕಾರಿಗಳಾಗಿವೆ, ಕರಗಿಸಿ ವಿಧಾನಕ್ಕೊಳಡಿಸಬಲ್ಲ ಪಾಲಿಮರ್‌ಗಳನ್ನು ನವೀಕರಿಸಬಹುದಾದ ಮೂಲಗಳಿಂದ ತಯಾರಿಸಬಹುದಾಗಿದೆ. ಥರ್ಮೊಪ್ಲಾಸ್ಟಿಕ್ ಗುಂಪಿಗೆ ಸೇರಿದ ಬಯೋಪಾಲಿಮರ್‌‌ಗಳು ತಮ್ಮ ಜಡ ಪ್ಲಾಸ್ಟಿಕ್‌ನ ಗುಣಗಳನ್ನು ಪ್ರದರ್ಶಿಸಬಹುದು, ತೂಗುತ್ತಿರುವ ಆಲ್ಕೈಲ್ ಗುಂಪಿನ ಗಾತ್ರಕ್ಕನುಗುಣವಾಗಿ, R, ಮತ್ತು ಪಾಲಿಮರ್‌ನ ಜೋಡಿಸುವಿಕೆಯನ್ನಾಧರಿಸಿ ಒಳ್ಳೆಯ ಗುಣಗಳನ್ನು ಹೊಂದಲು ಗಟ್ಟಿಯಾದ ಎಲಾಸ್ಟೊಮರ್‌ಗಳನ್ನು ಬಲಪಡಿಸಬೇಕು,ಈ ಎಲ್ಲಾ ಪಾಲಿಇಸ್ಟರ‍್‌ಗಳು ಬೀಟಾ ಸ್ಥಾನದಲ್ಲಿ 100% ಪ್ರತಿಶತ ನೋಟದಲ್ಲಿ (ಆಪ್ಟಿಕಲೀ) ಶುದ್ಧವಾದ ಘಟಕಗಳನ್ನು ಹೊಂದಿದೆ, ಆದ್ದರಿಂದ ಎಲ್ಲಾ 100% ಐಸೊಟ್ಯಾಕ್ಟಿಕ್ ಆಗಿವೆ. ಪಾಲೀಮರ್‌ R=CH3, ಪಾಲೀ-β-ಹೈಡ್ರೊಆಕ್ಸಿಬ್ಯುಟೈರೇಟ್‌ಗಳು ಹೆಚ್ಚಾಗಿ ಹರಳುರೂಪದಲ್ಲಿದ್ದು 180 °C ಕರಗುವ ಬಿಂದುವನ್ನು ಹೊಂದಿದೆ, ಗಾಜಿನ ಟ್ರಾನ್ಸಿಶನ್ ತಪಮಾನ Tg ಸರಾಸರಿ 5 °C ಆಗಿದೆ. ಇದು ಅತ್ಯಂತ ಹೆಚ್ಚು ಹರಳುಗೊಳ್ಳುವಿಕೆ(crystallinity) ಮತ್ತು ಹೆಚ್ಚಿನ ಸಾಪೇಕ್ಷತೆಯ Tgಯು ಪದರಗಳನ್ನು ಹೊಂದಿರುವುದರಿಂದ ಪ್ಲಾಸ್ಟಿಕ್ಕಿನ ಪಿಹೆಚ್‌ಬಿಗಳನ್ನು ಹೆಚ್ಚು ಸುಲಭವಾಗಿ ಒಡೆಯುವಂತಿದೆ, ಆದ್ದರಿಂದ ಕೊಪಾಲೀಮರ್‌ಗಳ ಘಟಕಗಳು ವಿಶೇಷವಾಗಿ R=C2H5ಗಳಂತಹ ಇತರ ಆಲ್ಕೈಲ್ ಗುಂಪುಗಳನ್ನು ಹೊಂದಿರುತ್ತದೆ. ಈ ಎಲ್ಲಾ ವಸ್ತುಗಳು ನೈಸರ್ಗಿಕವಾಗಿ ಜೈವಿಕವಿಘಟನಾಕಾರಿಗಳಾಗಿವೆ. ವಿವಿಧ ಬ್ಯಾಕ್ಟೀರಿಯಾಗಳು ಉದ್ದನೆಯ ಅಲ್ಕೈಲ್ ಸಬ್‍‌ಸ್ಟಿಟ್ಯೂಯಂಟ್‌ಗಳನ್ನು ಉತ್ಪಾದಿಸುತ್ತವೆ, ಸಾಮಾನ್ಯವಾಗಿ ಇವು ಕೊಪಾಲೀಮರ್‌ಗಳ ರೂಪದಲ್ಲಿದ್ದು ಕಡಿಮೆ ಡಿಗ್ರಿಯ ಹರತ್ವ ಮತ್ತು ಕಡಿಮೆ Tm ಮತ್ತು Tgನ್ನು ಹೊಂದಿರುತ್ತದೆ. ಇದರಿಂದಾಗಿ ಉದ್ದನೆಯ ಅಲ್ಕೈಲ್ ಸರಪಳಿ ಪಾಲಿಇಸ್ಟರ್‌ಗಳು ಥರ್ಮೊಪ್ಲಾಸ್ಟಿಕ್ ಎಲಾಸ್ಟೊಮರ್‌ಗಳಂತೆ ಉಪಯುಕ್ತವಾಗಿವೆ, ಇದು ಉತ್ತಮವಾದ ಶಕ್ತಿ ಮತ್ತು ದೃಡತೆಯನ್ನು ಹೊಂದಿದೆ ಮತ್ತು ನೈಸರ್ಗಿಕವಾಗಿ ಜೈವಿಕವಿಘಟನಕಾರಿಗಳಾಗಿವೆ.ಪಿಹೆಚ್‍‌ಬಿಯ ಕೊಪಾಲೀಮರ್‌‌ಗಳನ್ನು ತಯಾರಿಸಲು ದೊಡ್ಡ ಪ್ರಮಾಣದ, ನಿಯಂತ್ರಿತ ಫರ್ಮೆಂಟೇಶನ್ ವಿಧಾನವನ್ನು ಅಭಿವೃದ್ಧಿ ಪಡಿಸುವುದಕ್ಕೆ ಗಮನ ಹರಿಸಲಾಗಿದೆ. ವಿವಿಧ ಇಂಗಾಲದ ಮೂಲಗಳನ್ನು ಬ್ಯಾಕ್ಟೀರಿಯಾಗಳಿಗೆ ತಿನ್ನಿಸುವುದರಿಂದ ಬೇರೆ ಬೇರೆ ಕೊಪಾಲೀಮರ್‌‌ಗಳನ್ನು ಪಡೆಯಬಹುದು ಮತ್ತು ಇವುಗಳು ಪಿಹೆಚ್‌ಬಿಗಿಂತ ಉತ್ತಮ ಯಾಂತ್ರಿಕ ಗುಣಗಳನ್ನು ಹೊಂದಿವೆ. ಪಿಹೆಚ್‌ಬಿಯ ಜೈವಿಕವಿಘಟನೆ ಮತ್ತು ಅದರ ಕೊಪಾಲೀಮರ್‌‌ಗಳನ್ನು ಮಣ್ಣಿನಲ್ಲಿ, ಕ್ರಿಯಾಶೀಲಗೊಳಿಸಿದ ಕೆಸರಿನಲ್ಲಿ ಮತ್ತು ಸಮುದ್ರದ ನೀರಿನಲ್ಲಿ ಅಭ್ಯಸಿಸಲಾಯಿತು. ಮೂಲ ಪಾಲಿಇಸ್ಟರ‍್‌ಗಳೂ ಸಹ ನೀರಿನಲ್ಲಿ ಬಹಳ ನಿಧಾನಗತಿಯಲ್ಲಿ ಹೈಡ್ರಲೈಸ್ ಆಗುತ್ತದೆ. ಜೀವಿಯಲ್ಲಿಯ ನಲ್ಲಿ ಇದು ಪ್ರಮುಖ ವಿಘಟನಾ ಕ್ರಿಯೆಯಾಗಿದ್ದು ಪಾಲೀಮರ್‌ನ ಸರಪಳಿ ಛೇದನವನ್ನೊಳಗೊಂಡಿರುತ್ತದೆ‌. ವಿಟ್ರೊನಲ್ಲಿನ ಹೈಡ್ರಾಕ್ಸಿಬುಟೌರೇಟ್-ಹೈಡ್ರಾಕ್ಸಿವಲೆರೇಟ್ ಕೊಪಾಲೀಮರ್‌‌ಗಳ ಹೈಡ್ರಾಲಿಟಿಕ್ ವಿಘಟನೆಯು ಮಲ್ಮೈನ ಆಧುನೀಕರಣದೊಂದಿಗೆ ಆರಂಭವಾಗಿತ್ತು, ಮಾತೃಕೆಗೆ ನೀರಿನ ವಿಸರಣದಿಂದ ಉಂಟಾಗುತ್ತದೆ.ಪೊರೊಸಿಟಿಯಲ್ಲಾಗುವ ಏರಿಕೆಯಿಂದಾಗಿ ವಿಸರಣೆಯುಂಟಾಗಿ ವಿಘಟನಾ ಉತ್ಪನ್ನಗಳ ನಿವಾರಣೆಯಾಗುತ್ತದೆ.

ಗುಣಲಕ್ಷಣ

ಬದಲಾಯಿಸಿ

ಸರಣಿಗಳ ಮಾಹಿತಿಯನ್ನು ಕಂಡುಹಿಡಿಯಲು ಅನೇಕ ಜೀವಭೌತಿಕವಾದ ತಂತ್ರಗಳಿವೆ ಪ್ರೋಟೀನ್ ಸರಣಿಯನ್ನು ಇಡಮನ್ ವಿಘಟನೆಯಿಂದ ಕಂಡುಹಿಡಿಯಬಹುದು, ಇದರಲ್ಲಿ N-ಟರ್ಮಿನಲ್ ಅವಶೇಷಗಳು ಸರಪಳಿಯಿಂದ ಒಂದೇ ಬಾರಿಗೆ ಹೈಡ್ರಲೈಸ್ ಆಗುತ್ತವೆ, ಉತ್ಪನ್ನವನ್ನುಂಟುಮಾಡಿ ನಂತರ ಗುರುತಿಸಲಾಗುತ್ತದೆ. ರಾಶಿರೋಹಿತ ಮಾಪಕ ತಂತ್ರವನ್ನು ಸಹ ಬಳಸಬಹುದು. ನ್ಯೂಕ್ಲಿಕ್ ಆಮ್ಲದ ಸರಣಿಯನ್ನು ವಿದ್ಯುತ್ಸರಣ ಮತ್ತು ಕ್ಯಾಪಿಲರಿ ವಿದ್ಯುತ್ಸರಣದ ಮೂಲಕ ಕಂಡುಹಿಡಿಯಬಹುದು. ಕೊನೆಯದಾಗಿ ಜೈವಿಕಪಾಲೀಮರ್‌‌ಗಳ ಯಾಂತ್ರಿಕ ಗುಣಗಳನ್ನು ಆಪ್ಟಿಕಲ್ ಟ್ವೀಜರ್‌ಗಳು ಅಥವಾ ಅಟೋಮಿಕ್ ಫೋರ್ಸ್ ಸೂಕ್ಷ್ಮ ದರ್ಶನದ ಮೂಲಕ ಅಳೆಯಬಹುದು.ಡ್ಯುಯಲ್ ಪೊಲರೈಸೇಶನ್ ಇಂಟೆರ್‌ಫೆರೊಮೆಟ್ರಿಯನ್ನು ದೃಡೀಕರಿಸಿದ ಬದಲಾವಣೆಗಳನ್ನು ಅಥವಾ ಪಿಹೆಚ್‌ನ, ತಾಪಮಾನ, ಅಯಾನುಗಳ ಸಾಮರ್ಥ್ಯ ಅಥವಾ ಇತರ ಬಂಧಕ ಪಾಲುದಾರ ಮೂಲಕ ಉದ್ರೇಕಿಸಿದಾಗ ಉಂಟಾಗುವ ಇವುಗಳ ಸ್ವಯಮ್ ಕೂಟವನ್ನು ಅಳೆಯಲು ಬಳಸಬಹುದು.[][೧೦][೧೧]

ಜೈವಿಕವಿಘಟನೆಯ ಅಂಶಗಳು

ಬದಲಾಯಿಸಿ

ಪಾಲೀಮರ್ ರಚನೆ

ಬದಲಾಯಿಸಿ

ನೈಸರ್ಗಿಕ ಮ್ಯಾಕ್ರೊಕಣಗಳು ಉದಾ. ಪ್ರೊಟೀನು, ಸೆಲ್ಯುಲೋಸ್, ಮತ್ತು ಪಿಷ್ಟವು ಪರಿಸರದಲ್ಲಿ ಹೈಡ್ರಾಲಿಸಿಸ್‌ನ ನಂತರದ ಉತ್ಕರ್ಷಣದಲ್ಲಿ ವಿಘಟನೆಯಾಗುತ್ತದೆ.ಹೆಚ್ಚಿನ ಸಿಂಥೆಟಿಕ್ ಜೈವಿಕ ವಿಘಟನಕಾರೀ ಪಾಲೀಮರ್‌ಗಳು ಪಾಲೀಮರ್ ಸರಪಳಿಯೊಂದಿಗೆ ಹೈಡ್ರಲೈಸ್ ಆಗಬಹುದಾದ ಕೊಂಡಿಗಳನ್ನು ಹೊಂದಿರುತ್ತವೆ. ಉದಾ. ಅಮೈಡ್ ಎನಮಿನ್, ಎಸ್ಟರ್, ಯೂರಿಯ, ಮತ್ತು ಯುರೆಥೇನ್ ಕೊಂಡಿಗಳು ಸೂಕ್ಷ್ಮಾಣುಜೀವಿಗಳು ಮತ್ತು ಹೈಡ್ರಾಲಿಕ್ ಕಿಣ್ವಗಳಿಂದ ಜೈವಿಕವಿಘಟನೆಯಾಗುತ್ತದೆ.ಪ್ರೊಟೀನಿನಲ್ಲಿನ ಪಕ್ಕದ ಸಬ್‌ಸ್ಟಿಟ್ಯೂಯಂಟ್‌ಗಳು ಅನೇಕ ಪ್ರೊಟಿಯೊಲೈಟಿಕ್ ಕಿಣ್ವಗಳು ನಿರ್ಧಿಷ್ಟವಾಗಿ ಪೆಪ್ಟೈಡ್‌ನ ಹೈಡ್ರಲಿಸಿಸ್‌ನನ್ನು ಕೆಟಲೈಸ್ ಮಾಡುತ್ತದೆ, ಸಬ್‌ಸ್ಟಿಟ್ಯೂಟ್ ಆದ ಪಾಲೀಮರ್‌ಗಳು ಸಬ್‌ಸ್ಟಿಟ್ಯೂಯಂಟ್‌ಗಳನ್ನು ಹೊಂದಿರುತ್ತದೆ ಅವೆಂದರೆ ಬೆಂಜಿಲ್,ಹೈಡ್ರಾಕ್ಸಿ, ಕಾರ್ಬಾಕ್ಸಿ, ಮಿಥೈಲ್,ಮತ್ತು ಫಿನೈಲ್ ಗುಂಪುಗಳನ್ನು ಜೈವಿಕ ವಿಘಟನೆಯನ್ನು ಹೆಚ್ಚಿಸುವ ನಿರೀಕ್ಷೆಯಲ್ಲಿ ತಯಾರಿಸಲಾಗಿತ್ತು. ಬೆಂಜಿಲೈಟ್ ಮಾಡಲಾದ ಪಾಲೀಮರ್‌ಗಳಲ್ಲಿ ಪಾಲಿಮೈಡ್‌ಗಳಿಗೆ ಮಿಶ್ರಪ್ರತಿಕ್ರಿಯೆ ದೊರೆತಿದೆ. ಕಿಣ್ವದ ಅಸಮಮಿತ ವರ್ತನೆಯನ್ನು ಇಲ್ಲಿ ಕಾಪಾಡಲಾಗಿದೆ. ಹೆಚ್ಚಿನ ಕಿಣ್ವಗಳ ಕೆಟಲೈಸ್ಡ್ ಪ್ರತಿಕ್ರಿಯೆಗಳು ಅಕ್ವಿಯಸ್ ಮಾಧ್ಯಮದಲ್ಲಾಗುತ್ತದೆ, ಸಿಂಥೆಟಿಕ್ ಪಾಲೀಮ‌ರ್‌ಗಳ ಹೈಡ್ರಾಲಿಕ್-ಹೈಡ್ರೊಫೊಬಿಕ್ ಗುಣಗಳು ಅವುಗಳ ಜೈವಿಕವಿಘಟನಾ ಕ್ರಿಯೆಗೆ ದಕ್ಕೆಯನ್ನುಂಟುಮಾಡುತ್ತದೆ. ಇತರ ಈಥರ್ ಹೈಡ್ರಾಲಿಕ್ ಅಥವಾ ಹೈಡ್ರೊಫೊಬಿಕ್ ರಚನೆಯ ಪಾಲೀಮರ್‌ಗಳಿಗಿಂತ ಹೈಡ್ರೊಫೊಬಿಕ್ ಮತ್ತು ಹೈಡ್ರೊಫಿಲಿಕ್‌ನ ಅಂಶಗಳಿರುವ ಪಾಲಿಮರ್‌ಗಳು ಹೆಚ್ಚು ಜೈವಿಕವಿಘಟನೀಯವಾಗಿರುತ್ತದೆ ಸಿಂಥೆಟಿಕ್ ಪಾಲೀಮರ್‌ಗಳು ಎಂಜೈಮ್ ಕೆಟಲಿಸಿಸ್‌ನಿಂದ ವಿಘಟಿಸಬೇಕಾದರೆ ಪಾಲೀಮರ್‌ ಸರಪಳಿಯು ಕ್ರಿಯಾಶೀಲ ಕಿಣ್ವಗೆ ಹೊಂದಿಕೊಳ್ಳುವಂತಿರಬೇಕು. ಫ್ಲೆಕ್ಸಿಬಲ್ ಅಲಿಫ್ಯಾಟಿಕ್ ಪಾಲಿಇಸ್ಟರ್‌ಗಳು ಪರಿಸರ ವ್ಯವಸ್ಥೆಯಲ್ಲಿ ವಿಘಟಿಸುತ್ತವೆ, ಹೆಚ್ಚು ಜಡವಾದ ಅರೊಮ್ಯಾಟಿಕ್ ಪಾಲೀಮರ್‌ ಸಂಯುಕ್ತಗಳು ಸಾಮಾನ್ಯವಾಗಿ ಜೈವಿಕವಗಿಯೂ ನಿಷ್ಕ್ರಿಯವಾಗಿರುತ್ತದೆ.

ಪಾಲೀಮರ್ ಸ್ವರೂಪಶಾಸ್ತ್ರ

ಬದಲಾಯಿಸಿ

ಪ್ರೋಟೀನ್ ಮತ್ತು ಸಿಂಥಟಿಕ್ ಪಾಲೀಮರ್‍ಗಳ ನಡುವಿನ ವ್ಯತ್ಯಾಸವೆಂದರೆ ಪ್ರೋಟೀನ್ ಪಾಲಿಪೆಪ್ಟೈಡ್ ಸರಪಳಿಯಲ್ಲಿ ಸಮನಾದ ಪುನರಾವರ್ತಿತ ಘಟಕಗಳನ್ನು ಹೊಂದಿಲ್ಲ.ಪ್ರೊಟೀನ್‌ ಸರಪಳಿಯ ಈ ಕ್ರಮರಾಹಿತ್ಯತೆಯು ಕಡಿಮೆ ಪ್ರಮಣದಲ್ಲಿ ಹರಳಾಗುವಂತೆ ಮಾಡುತ್ತದೆ. ಈ ಗುಣವು ಪ್ರೋಟೀನನ್ನು ಜೈವಿಕ ವಿಘಟನಕಾರಿಯನ್ನಾಗಿಸಿದೆ ಇನ್ನೊಂದೆಡೆ ಸಿಂಥೆಟಿಕ್ ಪಾಲಿಮರ್‌ಗಳು ಕಡಿಮೆ ಪುನರಾವರ್ತಿತ ಘಟಕಗಳನ್ನು ಹೊಂದಿದೆ. ಇದು ಹರಳತ್ವವನ್ನು ಹೆಚ್ಚಿಸುತ್ತವೆ, ಹೈಡ್ರಲೈಸ್ ಆಗಬಹುದಾದ ಗುಂಪುಗಳನ್ನು ಕಿಣ್ವಗೆ ದೊರೆಯದಂತೆ ಮಡುತ್ತದೆ. ಇದರಿಂದಾಗಿ ಉದ್ದನೆಯ ಪುನರಾವರ್ತಿತ ಘಟಕಗಳನ್ನು ಹೊಂದಿದ ಸಿಂಥೆಟಿಕ್ ಪಾಲೀಮರ್‌ಗಳು ಕಡಿಮೆ ಹರಳತ್ವವನ್ನು ಹೊಂದಿರುತ್ತದೆ ಹೀಗಾಗಿ ಜೈವಿಕ ವಿಘಟನಕಾರಿಯಾಗಿರುತ್ತದೆ. ಪಾಲೀಮರ್‌ನ ಸರಣಿಯು ಸಬ್‌ಟಿಲಿನ್‌ನಿಂದ ಸುಲಭವಾಗಿ ವಿಘಟಿಸುತ್ತದೆ. ಅರ್ಧ-ಹರಳತ್ವದ ಪಾಲೀಮರ್‌ ನಮೂನೆಗಳ ರಾಸಾಯನಿಕ ವಿಘಟನೆಯು ಕೆಲವು ನಿರ್ಧಿಷ್ಟ ಗುಣಬದಲಾವಣೆಗಳನ್ನು ತೋರಿಸುತ್ತದೆ. ವಿಘಟನೆಯ ಸಂದರ್ಭದಲ್ಲಿ, ಮಾದರಿಯ ಹರಳತ್ವವು ಮೊದಲು ಶೀಘ್ರವಾಗಿ ಹೆಚ್ಚುತ್ತದೆ ಹರಳತ್ವವು 100%ನ್ನು ತಲುಪುತ್ತಿದ್ದ ಹಾಗೆ ನಿಧಾನಗತಿಯಲ್ಲಿ ಸಾಗುತ್ತದೆ. ಇದರಿಂದಾಗಿ ಮಾದರಿಯ ಅಮಾರ್ಫಸ್ ಭಾಗಗಳು ಅದೃಶ್ಯವಾಗುತ್ತದೆ. ಸೂಕ್ಷ್ಮಾಣು ಜೀವಿಗಳ ಮತ್ತು ಪಿಸಿಎಲ್‌ನ ಕಿಣ್ವದ ವಿಘಟನೆಯ ಮೇಲಿನ ಮಾರ್ಫಾಲಜಿಯ ಪರಿಣಾಮಗಳನ್ನು ಮತ್ತು ಜೈವಿಕವಾಗಿ ವಿಘಟನೆಯಾಗಬಲ್ಲ ಪಾಲೀಮರ್‌ನೊಂದಿಗಿನ ಸಾಮರ್ಥ್ಯದ ಅನ್ವಯಿಕಗಳನ್ನು ಅಭ್ಯಸಿಸಲಾಯಿತು. ಸ್ಕ್ಯಾನಿಂಗ್ ಎಲೆಕ್ಟ್ರಾನ್ ಮೈಕ್ರೊಸ್ಕೋಪಿ(ಎಸ್‌ಇಎಮ್)ಯು ಭಾಗಶಃ ಹರಳತ್ವವನ್ನು ಹೊಂದಿರುವ ಪಾಲಿಪ್ರೊಲಕ್ಟೇನ್ ಪದರದ ವಿಘಟನೆಯನ್ನು ಆಯ್ದ ರೀತಿಯಲ್ಲಿ ಫಿಲಾಮೆಮೆಂಟಸ್ ಫಂಗೈಗಳು ಮಾಡುತ್ತವೆ, ಇದರೊಂದಿಗೆ ಹರಳತ್ವದ ಭಾಗಗಳ ವಿಘಟನೆಯೊಂದಿಗೆ ಮಾರ್ಫಸ್ ಭಾಗಗಳು ವಿಘಟನೆಯಾಗುತ್ತವೆ. ಸೂಕ್ಷ್ಮಾಣುಜೀವಿಗಳು ಆಯ್ದವಿಘಟನೆಗೆ ಕಾರಣವಾಗುವ ಎಕ್ಟ್ರಾಸೆಲ್ಯುಲಾರ್ ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ. ಈ ಆಯ್ಕೆಯನ್ನು ಕಡಿಮೆ-ಜೋಡಿಸಲಾದ ಅಮಾರ್ಫಸ್ ಭಾಗಗಳಲ್ಲಿ ಪ್ರಭಾವ ಬೀರುತ್ತದೆ, ಇದು ಪಾಲಿಮರ್ ಸರಪಳಿಯಲ್ಲಿ ಕಿಣ್ವಗಳಿಗೆ ಸುಲಭವಾಗಿ ಪ್ರವೇಶವನ್ನೊದಗಿಸುತ್ತದೆ. ಗಾತ್ರ, ಆಕಾರ ಮತ್ತು ಹರಳುಗಳ ಸಂಖ್ಯೆಯು ಚಲಿಸುವ ಸರಪಳಿಯ ಅಕಾರರಹಿತ ಭಾಗಗಳ ಮೇಲೆ ಗಂಭೀರ ಪರಿಣಾಮವನ್ನು ಹೊಂದಿದೆ ಮತ್ತು ಇದು ವಿಘಟನಾ ಗತಿಯ ಮೇಲೆ ಪ್ರಭಾವ ಬೀರುತ್ತದೆ. ವಿಘಟನೆಯನ್ನು ವಿಸ್ತರಿಸುವ ಮೂಲಕ ದಿಕ್ಕನ್ನು ಬದಲಿಸುವ ಪರಿಣಾಮಗಳನ್ನು ಅಭ್ಯಾಸದಿಂದ ಪ್ರಮಾಣೀಕರಿಸಲಾಗಿದೆ.ಜೈವಿಕವಿಘಟನೆಯು ರಾಸಾಯನಿಕ ವಿಘಟನೆಗಿಂತ ವಿಭಿನ್ನವಾಗಿರುತ್ತದೆ . 40% ನಷ್ಟು ನೀರಿನ ಮಿಥೈಲ್‌ಅಮೈನ್‌ನ ದ್ರಾವಣಗಳಿಂದ ಉಂಟಾಗುವ ವಿಘಟನೆಯ ಕುರಿತಾದ ಅಧ್ಯಯನವು ಸ್ವರೂಪಶಾಸ್ತ್ರ ಮತ್ತು ಅಣು ಭಾರದಲ್ಲಿನ ಬದಲಾವಣೆ ಮತ್ತು ವಿಘಟನೆಗೊಳಿಸುವ ಏಜೆಂಟುಗಳ ಸಬ್‌ಸ್ಟ್ರೇಟ್‌ಗೆ ಪ್ರಸರಿಸುವ ಸಾಮರ್ಥ್ಯದಲ್ಲಿ ಬದಲಾವಣೆ ಕಂಡುಬಂದಿದೆ ಎಂದು ಹೇಳುತ್ತದೆ. ಅಮಾರ್ಫಸ್ ಮತ್ತು ಹರಳತ್ವದ ಭಾಗಗಳಲ್ಲಿನ ವಿಘಟನಾ ಗತಿಯಲ್ಲಿನ ಭಿನ್ನತೆಯನ್ನು ಗಮನಿಸಲಾಯಿತು. ಎಂಜೈಮ್ ಹರಳತ್ವದ ಭಾಗಗಳನ್ನು ಮಿಥೈಲ್‍‌ಅಮೈನಿಗಿಂತ ಬೇಗ ವಿಘಟಿಸುತ್ತದೆ. ಕ್ವಾಂಟಿಟೇಟಿವ್ ಜಿಪಿಸಿ( ಜೆಲ್ ಪರ್ಮಿಯೇಶನ್ ಕ್ರೊಮಾಟಿಗ್ರಫಿ) ವಿಶ್ಲೇಷಣೆಯು ಮಿಥೈಲ್ ಅಮೈನ್‌ಗಳು ಹರಳತ್ವದ ಭಾಗಗಳನ್ನು ವಿಘಟಿಸುವುದನ್ನು ತೋರಿಸುತ್ತದೆ, ಒಂದು ಮತ್ತು ಎರಡು ಉತ್ಪನ್ನಗಳನ್ನು ತಯಾರಿಸುತ್ತದೆ. ಎಂಜೈಮ್ ವ್ಯವಸ್ಥೆಯಲ್ಲಿ ಯಾವುದೇ ಮಧ್ಯಂತರ ಅಣುರಾಶಿಯಿರುವ ವಸ್ತುಗಳಿರುವುದಿಲ್ಲ ಮತ್ತು ಕಡಿಮೆ ತೂಕದವು ವಿಘಟನೆಯಾಗುತ್ತವೆ. ವಿಘಟನೆಯು ಆಯ್ದ ಭಾಗಗಳಲ್ಲಾದರೂ ಸರಪಳಿಯು ಮುಗಿದ ತಕ್ಷಣವೇ ಹರಳತ್ವದ ಭಾಗಗಳು ವಿಘಟಿಸಲು ಆರಂಭಿಸುತ್ತದೆ, ಇದನ್ನು ಎಕ್ಸೊ ಕಿಣ್ವಗಳಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಹರಳತ್ವದ ಪಾರ್ಶ್ವದ ಗಾತ್ರ ವಿಘಟನಾ ಗತಿಯಮೇಲೆ ತೀವ್ರವಾದ ಪರಿಣಾಮಗಳನ್ನು ಹೊಂದಿದೆ ಏಕೆಂದರೆ ಹರಳಿನ ಪ್ಯಾಕಿಂಗ್‌ನಿಂದ ಹರಳತ್ವದ ವಸ್ತುವಿನಲ್ಲಿ ಹರಳಿನ ಅಂಚಿನಲ್ಲಿ ವಿಘಟನಾ ಕ್ರಿಯೆಯು ನಡೆಯುತ್ತದೆ. ಪಕ್ಕದಲ್ಲಿರುವ ಚಿಕ್ಕ ಹರಳಿನ ಗಾತ್ರವು ಹೆಚ್ಚಿನ ಹರಳಿನ ಮೇಲ್ಮೈನ ಅಂಚನ್ನು ದೊಡ್ಡ ಪ್ರಮಾಣದ ಪಾಲೀಮರ್‌ಗಳಲ್ಲುಂಟುಮಾಡುತ್ತದೆ.‌ ಕಿಣ್ವ ಸಕ್ರಿಯವಾಗಿರುವ ಪ್ರದೇಶಗಳ ಆರ್ದ್ರೀಕರಣಕ್ಕೆ ಮೊದಲು ವೇಗವು ಲಭ್ಯವಿರುವ ಸಬ್‌ಸ್ಟ್ರೇಟ್‌ನ ಮೇಲೆ ಅವಲಂಬಿತವಾಗಿರುತ್ತದೆ. ಚಿಕ್ಕ ಗಾತ್ರದ ಪಾರ್ಶ್ವದ ಹರಳು ಹೆಚ್ಚಿನ ವಿಘಟನಾ ಗತಿಯನ್ನು ಪ್ರದರ್ಶಿಸುತ್ತದೆ. ಒಟ್ಟು ಪಾಲೀಮರ್‌ಗೆ ಹೋಲಿಸಿದಾಗ ಪಿಸಿಎಲ್‌ ಪದರದ ವಿಘಟನೆಯ ಗತಿಯು ಸೊನ್ನೆ ಕ್ರಮದಲ್ಲಿರುತ್ತದೆ , ಆದರೆ ಸಾಂದ್ರವಾದ ಅಂಚಿನಲ್ಲಿ ಹರಳನ್ನು ಹೊಂದಿರುವ ವಸ್ತುವಿನೊಂದಿಗೆ ಇದು ಸೊನ್ನೆ ಕ್ರಮದಲ್ಲಿರುವುದಿಲ್ಲ. ಪಿಸಿಎಲ್ ಪದರಗಳ ವಿಘಟನಾ ಗತಿಯನ್ನು ಹೆಚ್ಚಿಸುತ್ತದೆ, ಬಿಸಿ ಮಾಡಿ ತಣ್ಣಗೆ ಮಾಡುವಂತಹ ಹದಮಾಡುವಿಕೆಯು ಪಿಸಿಎಲ್‌ನ ವಿಘಟನಾ ಗತಿಯನ್ನು ಕಡಿಮೆ ಮಾದುತ್ತದೆ. ಇದು ಪಾರ್ಶ್ವದ ಹರಳಿನ ಗಾತ್ರದಲ್ಲಾದ ವಿರುದ್ದದ ಬದಲಾವಣೆಯಿಂದಾಗಿದೆ. ರಾಸಾಯನಿಕ ಸಂಯೋಜನೆ ಮತ್ತು ಭೌತಿಕ ಗುಣಗಳಿಗನುಗುಣವಾಗಿ ಪಾಲೀಮರ್‌ಗಳ ವಿಶೇಷವಾಗಿ ಪಾಲಿಇಸ್ಟರ್‌ಗಳ ವಿಟ್ರೊ ರಾಸಾಯನಿಕ ಮತ್ತು ಕಿಣ್ವದ ವಿಘಟನೆಯನ್ನು ವಿಶ್ಲೇಷಿಸಲಾಯಿತು. ಹಲವಾರು ಭಾರಿ ಕೊಪಾಲೀಮರ್‌ಗಳ ಸಂಯೋಜನೆಯು ಕಡಿಮೆ ಕರಗುವ ಬಿಂದುವನ್ನು ಹೊಂದುವುದು ವಿಘಟನೆಯಲ್ಲಿ ಕಂಡುಬರುತ್ತದೆ. ಅಂದುಕೊಂಡಂತೆಯೇ, ಅತ್ಯಂತ ಕಡಿಮೆಯಿರುವ ಪ್ಯಾಕಿಂಗ್ ರೀತಿಯು ಶೀಘ್ರವಾದ ವಿಘಟನಾ ಗತಿಗೆ ಹೊಂದುತ್ತದೆ.

ವಿಕಿರಣದ ಪರಿಣಾಮಗಳು

ಬದಲಾಯಿಸಿ

ಯುವಿ ಬೆಳಕಿನೊಂದಿಗಿನ ಪೊಟೊಲಿಸಿಸ್ ಮತ್ತು ಪಾಲೀಮರ್ γ-ಕಿರಣದ ಪ್ರದೀಪನವು ರ್ಯಾಡಿಕಲ್‌ಗಳನ್ನು ಅಯಾನುಗಳನ್ನು ತಯಾರಿಸುತ್ತದೆ, ಕೆಲವೊಮ್ಮೆ ಒಡಕು ಮತ್ತು ಕ್ರಾಸ್‌ಲಿಂಕಿಂಗ್‌ಗೆ ಎಡೆಮಾಡಿಕೊಡುತ್ತದೆ. ಉತ್ಕರ್ಷಣ ಕ್ರಿಯೆಯೂ ನಡೆಯುತ್ತದೆ, ಆಮ್ಲಜನಕದ ಅನುಪಸ್ಥಿತಿಯಲ್ಲಿ ಬೆಳಕಿಗೆ ತೆರೆದುಕೊಳ್ಳುವುದು ಅಪರೂಪವಾಗಿದೆ. ಸಾಮಾನ್ಯವಾಗಿ ಇದು ವಸ್ತುವು ಜೈವಿಕವಿಘಟನೆಗೆ ತೆರೆದುಕೊಳ್ಳುವಂತೆ ಬದಲಾವಣೆಯನ್ನುಂಟುಮಾಡುತ್ತದೆ. ಪ್ರಾರಂಭದಲ್ಲಿ, ವಿಭಜಿಸಿದ ಪಾಲೀಮರ್‌ನ ಹೆಚ್ಚಿನ ಭಾಗವು ಉಪಯೋಗಿಸಲ್ಪಡುವವರೆಗೆ ಗಮನಿಸಿದ ವಿಘಟನೆಯ ವೇಗವು ಹೆಚ್ಚಾಗುವುದನ್ನು ನಿರೀಕ್ಷಿಸಲಾಗುತ್ತದೆ ಮತ್ತು ಕ್ರಾಸ್‌ಲಿಂಕ್ ಮಾಡಿದ ಪಾಲೀಮರ್ ಭಾಗಕ್ಕಾಗಿ ನಿಧಾನ ಗತಿಯ ವಿಘಟನೆಯು ಉಂಟಾಗುತ್ತದೆ. ಹೈಡ್ರಲೈಸ್ ಆಗಬಹುದಾದ ಪಾಲೀಮರ್‌ಗಳ ಮೇಲಿನ UV ಪ್ರದೀಪನದ ಪರಿಣಾಮಗಳ ಅಧ್ಯಯನವು ಇದನ್ನು ದೃಡೀಕರಿಸಿತು. ಹಾಗೆಯೇ ಜೈವಿಕವಿಘಟನೆಯನ್ನು ಪಾಲೀಆಲ್ಕೀನ್‌ಗಳ ಫೊಟೊಉತ್ಕರ್ಷಣವು (ಹಲವು ಬಾರಿ)ಉತ್ತೇಜಿಸುತ್ತದೆ. ಕಾರ್ಬೊನಿಲ್ ಮತ್ತು ಇಸ್ಟರ‍್ಗಳುಂಟಾಗುವುದು ಈ ಬದಲಾವಣೆಗಳಿಗೆ ಕಾರಣವಾಗಿವೆ. ಈ ವಿಧಾನವನ್ನು ಕಾರ್ಬೊನಿಲ್ ಗುಂಪುಗಳನ್ನು ಹೊಂದಿದ ಆಲ್ಕೀನುಗಳ ಕೊಪಾಲೀಮರ‍್ಗಳನ್ನು ತಯಾರಿಸಲು ಆ ಮೂಲಕ ಅವುಗಳು ವಿಘಟನೆಗೆ ಹೆಚ್ಚು ಪ್ರಭಾವಿತವಾಗುವಂತೆ ಮತ್ತು ವಿಘಟನೆಯ ಮೊದಲು ಫೊಟೊಲಿಟಿಕ್ ಕ್ಲೀವೇಜ್‌ಗೆ ಒಳಗಾಗುವಂತೆ ಮಾಡಲು ಅಭಿವೃದ್ದಿ ಪಡಿಸಲಾಯಿತು. ಇದರಲ್ಲಿನ ತೊಂದರೆಯೆಂದರೆ ಸುಟ್ಟ ಮಾದರಿಯಲ್ಲಿ ಎರಡು ವರ್ಷಗಳಲ್ಲಿ ನಿರ್ಲಕ್ಷಿಸಬಹುದಾದ ವಿಘಟನೆಯನ್ನು ಗಮನಿಸಲಾಯಿತು. ಫೊಟೊಲಿಸಿಸ್‌ನ ಮೊದಲಿನ ಜೋಡಣೆಗಳನ್ನು ಮಾಡುವವರೆಗೂ ಪ್ಲಾಸ್ಟಿಕ್ ತ್ಯಾಜ್ಯಗಳ ವಿಸರ್ಜನೆಯ ಸಮಸ್ಯೆಯು ಗಂಭೀರವಾಗಿರುತ್ತದೆ, ಇದನ್ನು ಸೂರ್ಯನ ಬೆಳಕಿಗೆ ತಾಗುವಂತೆ ಇದನ್ನು ವಿಸರ್ಜಿಸಲಾಗುವುದಿಲ್ಲ. ನಿರೀಕ್ಷೆಯಂತೆ γ-ಕಿರಣದ ಪ್ರದೀಪನವು ಪಾಲಿಇಸ್ಟರ್‌ಗಳ ವಿಟ್ರೊ ವಿಘಟನೆಯ ಗತಿಯ ಮೇಲೆ ಪರಿಣಾಮ ಬೀರುತ್ತದೆ, ಈ ವಿಧಾನವು ಮುಂದುವರೆದಂತೆ ವಿಘಟನೆಯ ದ್ರಾವಣದ ಪಿಹೆಚ್ ಕಡಿಮೆಯಾಗುತ್ತದೆ. ಸಮಯ-ಬದಲಾವಣೆ ವಕ್ರರೇಖೆಗಳು ಸಿಗ್ಮಾಯ್ಡಲ್ ಆಕಾರವನ್ನು ಪ್ರದರ್ಶಿಸುತ್ತಿದ್ದು ಅವು ಮೂರು ಹಂತಗಳನ್ನೊಳಗೊಂಡಿದೆ: ಪ್ರಾರಂಭಿಕ, ತೀವ್ರಗೊಂಡ,ಮತ್ತು ನಂತರದ ಹಂತಗಳು. γ-ಕಿರಣದ ಪ್ರದೀಪನದೊಂದಿಂಗೆ ಈ ಮೂರು ಕ್ರಿಯೆಗಳು ಆವರಿಸುವ ಪದೇಶದ ಉದ್ದವು ಬದಲಾಗತ್ತದೆ. ಪ್ರಾರಂಭಿಕ ಹಂತದಲ್ಲಿ ವಿಕಿರಣದ ಪ್ರಮಾಣವು ಹಚ್ಚಾದಂತೆ ತೆಗೆದುಕೊಳ್ಳುವ ಸಮಯವು ಕಡಿಮೆಯಾಗುತ್ತದೆ. ಪಿಹೆಚ್‌ನಲ್ಲಿ ತೀವ್ರತರದ ಬದಲಾವಣೆಯಾದಂತೆ ಅದರ ಹಿಗ್ಗುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಇದೇ ರೀತಿಯ ಪರಿಣಾಮಗಳನ್ನು ಕಿಣ್ವದಲ್ಲಿನ ಮತ್ತು ಸೂಕ್ಷ್ಮಾಣು ಜೀವಿಗಳಲ್ಲಿನ ವಿಘಟನೆಯಲ್ಲಿಯೂ ಸಹ ಪ್ರದರ್ಶಿಸುತ್ತದೆ.

ಅಣುವಿನ ತೂಕ

ಬದಲಾಯಿಸಿ

ಜೈವಿಕವಿಘಟನೆ ಪ್ರಕ್ರಿಯೆಗಳ ಮೇಲೆ ಅಣುವಿನ ತೂಕದ ಪ್ರಭಾವಗಳ ಮೇಲೆ ಹಲವು ಅಧ್ಯಯನಗಳು ಆಗಿವೆ. ಕಣ್ಣಿಗೆ ಕಾಣುವ ಬಹು ವ್ಯತ್ಯಾಸಗಳನ್ನು ವಿಘಟನೆಯ ಸಮಯದಲ್ಲಿ ಪತ್ತೆಯಾಗುವ ಬದಲಾವಣೆಗಳ ಸೀಮಿತೆಗಳಿಗೆ ಅಥವಾ ಹೆಚ್ಚಿನ ಬಾರಿ ಬದಲಾಗುವ ಅಣುವಿನ ತೂಕದ ಪಾಲಿಮರ್ ನಮೂನೆಗಳ ಸ್ವರೂಪ ಹಾಗೂ ಹೈಡ್ರೋಫಿಲಿಸಿಟಿ-ಹೈಡ್ರೋಫೋಬಿಸಿಟಿಗಳಲ್ಲಿನ ವ್ಯತ್ಯಾಸಗಳಿಗೆ ಆರೋಪಿಸಬಹುದು. ಸೂಕ್ಷ್ಮಾಣುಜೀವಿಗಳು ಎಕ್ಸೊಸೈಮ್ಸ್ (ಕೊನೆಯ ಗುಂಪಿನ ಪಾಲಿಮರ್‌ಗಳ ಒಳ ವಿಂಘಟನೆ) ಹಾಗೂ ಎಂಡೊಸೈಮ್ಸ್ (ಪಾಲಿಮರ್‌ಗಳನ್ನು ಗೊತ್ತುಗುರಿಯಿಲ್ಲದೆ ಸರಣಿಯ ಉದ್ದಕ್ಕೂ ವಿಂಘಟಿಸುವುದು) ಎರಡನ್ನು ಉತ್ಪತ್ತಿಸುತ್ತವೆ. ಎಕ್ಸೊಸೈಮ್ಸ್‌ನ ಸಂದರ್ಭದಲ್ಲಿ ವಿಘಟನೆಯ ಗತಿಯ ಮೇಲೆ ಹೆಚ್ಚು ಅಣುವಿನ ಪರಿಣಾಮವನ್ನು ಹಾಗೂ ಎಂಡೊಸೈಮ್ಸ್‌ನ ಸಂದರ್ಭದಲ್ಲಿ ತುಲನಾತ್ಮಕವಾಗಿ ಸ್ವಲ್ಪ ಅಣುವಿನ ತೂಕದ ಪರಿಣಾಮವನ್ನು ಒಬ್ಬ ಅಪೇಕ್ಷಿಸಬಹುದು.ಪ್ಲಾಸ್ಟಿಕ್‌ಗಳ ಅಣುವಿನ ತೂಕ ಹೆಚ್ಚು ಇರುವವರೆಗೂ ಅವು ತುಲನಾತ್ಮಕವಾಗಿ ಸೂಕ್ಷ್ಮ ಜೀವಿಯ ಧಾಳಿಯಿಂದ ಪ್ರತಿರಕ್ಷಿತವಾಗಿ ಉಳಿಯುತ್ತವೆ. ಹಲವು ಪ್ಲಾಸ್ಟಿಕ್‌ಗಳು ಸೂಕ್ಷ್ಮ ಜೀವಿಯ ಬೆಳವಣಿಗೆಯನ್ನು ಬೆಂಬಲಿಸುವುದಿಲ್ಲ. ಹೇಗಿದ್ದರೂ, ಕಡಿಮೆ ಅಣುವಿನ ತೂಕದ ಹೈಡ್ರೊಕಾರ್ಬನ್‌ಗಳನ್ನು ಸೂಕ್ಷ್ಮ ಜೀವಿಗಳಾಗಿ ವಿಘಟಿಸಬಹುದು. ಅವುಗಳನ್ನು ಸೂಕ್ಷ್ಮ ಜೀವಿ ಕೋಶಗಳು ಕೊಂಡೊಯ್ಯುತ್ತವೆ, ಸಹಕಿಣ್ವ-A ಯ ಲಗ್ಗತ್ತಿಸುವಿಕೆಯಿಂದ ’ಸಕ್ರೀಯವಾಗುತ್ತವೆ’ ಹಾಗೂ ಸೂಕ್ಷ್ಮ ಜೀವಿ ಕೋಶಗಳ ಒಳಗೆ ಕೋಶಕ ಜೀವರಾಸೈನಿಕಗಳಾಗಿ ಪರಿವರ್ತಿತವಾಗುತ್ತವೆ. ಹೇಗಿದ್ದರೂ, ಈ ಪ್ರಕ್ರಿಯೆಗಳು ಕೋಶಗಳ (ಪ್ರಾಯಶಃ) ಹೊರಗಿನ ವಾತಾವರಣದಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ, ಹಾಗೂ ಪ್ಲಾಸ್ಟಿಕ್ ಪರಮಾಣುಗಳು ದೊಡ್ಡ ಗಾತ್ರದಲ್ಲಿರುವ ಕಾರಣ ಕೋಶಗಳೊಳಗೆ ಪ್ರವೇಶಿಸಲು ಸಾಧ್ಯವಾಗದು. ಸ್ಟಾರ್ಚ್ ಹಾಗೂ ಸೆಲ್ಯುಲೋಸ್ ಅಂತಹ ನೈಜ್ಯ ಪರಮಾಣುಗಳೊಂದಿಗೆ ಈ ಸಮಸ್ಯ ಉಂಟಾಗುವುದಿಲ್ಲ, ಕಾರಣ ಕಡಿಮೆ ಅಣುವಿನ ತೂಕದ ಅಂಶಗಳಾಗಿ ಕಿಣ್ವಗಳಿಂದಾಗುವ ಪರಿವರ್ತನೆಯ ಪ್ರತಿಕ್ರಿಯೆ ಸೂಕ್ಷ್ಮ ಜೀವಿ ಕೋಶಗಳ ಹೊರಗೆ ಉಂಟಾಗುತ್ತದೆ. ಹೇಗಿದ್ದರೂ, ಬೆಳಕಿನ ವಿಘಟನೆ ಅಥವಾ ರಾಸಾಯನಿಕ ವಿಘಟನೆಗಳು ಸೂಕ್ಷ್ಮ ಜೀವಿಗಳ ಧಾಳಿ ಮುಂದುವರಿಯುವ ಮಟ್ಟದವರೆಗೆ ಅಣುವಿನ ತೂಕವನ್ನು ಇಳಿಸಿಬಹುದು.

ಜೈವಿಕವಿಘಟನೆ ಪದ್ಧತಿಗಳು

ಬದಲಾಯಿಸಿ

ಜೀವಶಾಸ್ತ್ರಕ್ಕೆ ಸಂಬಂಧಿಸಿದ ವಾತಾವರಣ, ಅಂದರೆ ಪಾಲಿಮರ್‌ಗಳಿರುವ ಜೈವಿಕ ಆವರಣಗಳಲ್ಲಿ ಪಾಲಿಮರ್ ಪದಾರ್ಥಗಳ ಕ್ಷೀಣಿಸುವಿಕೆಗೆ ಕಾರಣವಾದ ಜೈನಿಕ ಪ್ರತಿನಿಧಿಗಳು ಒಳಗೊಂಡಿದೆ. ಸೂಕ್ಷ್ಮಕ್ರಿಮಿಗಳು, ಅಣಬೆ ಹಾಗೂ ಅವುಗಳ ಕಿಣ್ವಗಳಂತಹ ಜೈವಿಕ ಪ್ರತಿನಿಧಿಗಳು ಆಹಾರದ ಮೂಲದಂತೆ ಒಂದು ಪದಾರ್ಥವನ್ನು ಸೇವಿಸಿ ಅದರ ಮೂಲ ಸ್ವರೂಪವನ್ನು ಮರೆಯಾಗಿಸುತ್ತದೆ. ಸರಿಯಾದ ತೇವ, ತಾಪಮಾನ, ಹಾಗೂ ಆಮ್ಲಜನಕದ ಲಭ್ಯತೆಯ ಅಡಿಯಲ್ಲಿ, ಜೈವಿಕವಿಘಟನೆಯು ತುಲನಾತ್ಮಕವಾಗಿ ಒಂದು ಕ್ಷಿಪ್ರ ಪ್ರಕ್ರಿಯೆ.

ಸೂಕ್ಷ್ಮಾಣುಜೀವಿಗಳು

ಬದಲಾಯಿಸಿ

ನೈಜ್ಯ ಹಾಗೂ ಸಿಂಥೆಟಿಕ್ ಪಾಲಿಮರ್‌ಗಳ ಜೈವಿಕವಿಘಟನೆಯಲ್ಲಿ ಎರಡು ತರಹದ ಸೂಕ್ಷ್ಮಾಣುಜೀವಿಗಳು ನಿರ್ದಿಷ್ಟ ಕುತುಹಲದ್ದಾಗಿದೆ: ಸೂಕ್ಷ್ಮಕ್ರಿಮಿಗಳು ಹಾಗೂ ಅಣಬೆ.

ಯುಮಿಸೆಟೆಸ್, ಅಥವಾ ನಿಜವಾದ ಅಣಬೆ, ವಸ್ತುಗಳ ವಿಘಟನೆಯನ್ನು ಸಂಭವಿಸುವ ವಿಶೇಷ ಪ್ರಾಮುಖ್ಯತೆಯ ಸೂಕ್ಷ್ಮಜೀವಿಗಳು. ಅಣಬೆ ಜೀವಕಣಕೇಂದ್ರಿತ, ಬೀಜಕಣ-ನಿರ್ಮಿತ, ಸಸ್ಯಹರಿತ್ತುವುಳ್ಳ ಜೀವಿಗಳು, ಇವು ಲೈಂಗಿಕವಾಗಿ ಹಾಗೂ ಅಲೈಂಗಿಕವಾಗಿ ಎರಡು ತರಹಗಳಲ್ಲೂ ಪುನರುತ್ಪತ್ತಿಗೊಳ್ಳುತ್ತವೆ; ಹಲವುಗಳು ತಂತುಯುಕ್ತ ದೈಹಿಕ ಆಕಾರಗಳನ್ನು, ಹಾಗೂ ಚಿಟಿನ್ ಅಥವಾ ಸೆಲ್ಯುಲೋಸ್‌ನ ಕೋಶ ಪದರಗಳನ್ನು ಹೊಂದಿರುತ್ತವೆ. 80,000 ಗಿಂತ ಹೆಚ್ಚಿನ ತಳಿಗಳು ತಿಳಿದುಬಂದಿವೆ. ನಿಜವಾದ ಅಣಬೆ ಎಲ್ಲೆಡೆ ಅಸ್ತಿತ್ವದಲ್ಲಿವೆ. ಪಾಲಿಮರ್ ಸಂಯೋಜನೆಗಳಲ್ಲಿ ಇರುವ ಪುಷ್ಟಿದಾಯಕ ವಸ್ತುಗಳ ಸರಬರಾಜಿಗೆ ಬೇಕಾಗುವ ಅಜೈವಿಕ ಸಬ್‌ಸ್ಟ್ರೇಟ್‌ಗಳನ್ನು ಒಡೆದು ಹಾಕುವ ಕಿಣ್ವಗಳ ಉತ್ಪತ್ತಿಯು ಅವುಗಳ ಪ್ರಾಮುಖ್ಯತೆ ಕ್ಷೀಣಿಸುವ ಪ್ರತಿನಿಧಿಗಳಾಗಿರುವುದಕ್ಕೆ ಒಂದು ಕಾರಣ. ಅತ್ಯುತ್ತಮ ಬೆಳೆವಣಿಗೆ ಹಾಗೂ ವಿಘಟನಾತ್ಮಕ ಪ್ರಕ್ರಿಯೆಗೆ ನಿರ್ಧಾರಿತ ಪರಿಸರದ ಪರಿಸ್ಥಿತಿಗಳು ಅಗತ್ಯವಾಗಿರುತ್ತದೆ. ಇದರಲ್ಲಿ ಅತ್ಯುತ್ತಮ ತಾಪಮಾನ, ಪುಷ್ಟಿದಾಯಕ ವಸ್ತುಗಳ ಉಪಸ್ಥಿತಿ, ಹಾಗೂ ಹೆಚ್ಚು ಆರ್ದ್ರತೆ ಒಳಗೊಂಡಿವೆ. ನೈಸರ್ಗಿಕ ಪಾಲಿಮರ್‌ಗಳ ವಿಭಾಗದಲ್ಲಿ ಲೋಹಪರೀಕ್ಷಾ ಕಾರ್ಯಕ್ಕಾಗಿ ಬಳಸಲಾಗುವ ಮತ್ತು ಸಿಂಥಟಿಕ್ ಪಾಲಿಮರ್‌ಗಳಲ್ಲಿನ ಲೋಹಪರೀಕ್ಷಾ ಪ್ರಕ್ರಿಯೆಗಳಲ್ಲಿ ಉಪಯುಕ್ತವಾದ ಪರಿಕ್ಷಾ ಫಂಗಸ್ಸುಗಳ ಗುಂಪು ವರ್ಗೀಕರಣದ ಪ್ರಕಾರವಾಗಿ ಅತ್ಯಂತ ಮಿಶ್ರಸ್ವರೂಪದ ಗುಂಪಾಗಿದ್ದು ಅದು ತಮ್ಮಲ್ಲಿಯೇ ಯಾವುದೇ ಗಮನಾರ್ಹವಾದ ವರ್ಗೀಕೃತ ಸಮಾನತೆಗಳನ್ನು ಪ್ರದರ್ಶಿಸುವುದಿಲ್ಲ (ಉದಾಹರಣೆಗೆ ಅಂಗರಚನಾಶಾಸ್ತ್ರದ ಆಧಾರದ ಮೇಲೆ).ಅವುಗಳ ಬೀಜಕಣಗಳ ಪುನರುತ್ಪತ್ತಿ ಅಲೈಂಗಿಕವಾಗಿರುತ್ತದೆ ಹಾಗೂ ಲೈಂಗಿಕ ಅಂಶದ ಒಕ್ಕೂಟದಿಂದ ಉತ್ಪತ್ತಿಯಾಗುವ ಬೀಜಕಣಗಳೊಂದಿಗೆ ಸಂಬಂಧಿತ ಪರಿವರ್ತನೆ ಕಡಿಮೆಯಾಗಿರುತ್ತದೆ ಎಂದು ಪ್ರಾಥಮಿಕವಾಗಿ ಹಲವುಗಳನ್ನು ಆಯ್ಕೆ ಮಾಡಲಾಗಿತ್ತು. ಹೆಚ್ಚು ಒಪ್ಪುವಂತಹ ಜೀವಿಗಳನ್ನು ಸಂತತಿ ಅಥವಾ ಸಂಗೋಪನ ಸಂಗ್ರಹ ಸಂಖ್ಯೆಯಿಂದ ನಿರೂಪಿಸಲಾಗುತ್ತದೆ.

ಸೂಕ್ಷ್ಮಕ್ರಿಮಿಗಳು

ಬದಲಾಯಿಸಿ

ಸಿಜೋಮೈಸಿಟ್ಸ್, ಒಂದು ಸೂಕ್ಷ್ಮಕ್ರಿಮಿ, ಪಾಲಿಮರ್ ಕ್ಷಿಣಿಸುವಿಕೆಯಲ್ಲಿ ಅಣಬೆಯ ಸಂಬಂಧವಾಗಿ ನಿರ್ಧರಿಸಲಾಗದಂತಹ ಪಾತ್ರವನ್ನು ವಹಿಸಿದೆ. ಸೂಕ್ಷ್ಮಕ್ರಿಮಿಗಳು ಏಕ-ಕೋಶದ ಕಡ್ಡಿ, ಗೋಲ, ಅಥವಾ ಸುರುಳಿ ಆಕಾರಗಳಲ್ಲಿ ಇರಬಹುದು. ಇತರಗಳು ಸರಣಿಯಂತೆ ಅಥವಾ ತಂತಿಯಂತೆ ಇರುತ್ತವೆ. ಸೂಕ್ಷ್ಮಕ್ರಿಮಿಗಳು ಆಮ್ಲಜನಕದ ಉಪಸ್ಥಿತಿ ಅಥವಾ ಅನುಪಸ್ಥಿತಿಯಲ್ಲಿ ಇರಬಲ್ಲವು.ವ್ಯತಿರಿಕ್ತವಾಗಿ, ಅನಬೆ ಅಗತ್ಯವಾಗಿ ಆಮ್ಲಜನಕದ ಉಪಸ್ಥಿತಿಯಲ್ಲಿ ಇರುತ್ತವೆ. ಕೆಲವು ಸೂಕ್ಷ್ಮಕ್ರಿಮಿಗಳು ಚಲಿಸಬಲ್ಲದಾಗಿರುತ್ತದೆ, ಮತ್ತು ಇತರವು ಪ್ರಧಾನವಾಗಿ ಅಸಸ್ಯಹರಿತ್ತು ಆಗಿರುತ್ತವೆ. ಕಿಣ್ವ ಉತ್ಪತ್ತಿ ಹಾಗೂ ಪುಷ್ಟಿದಾಯಕ ವಸ್ತುಗಳನ್ನು ಪಡೆಯಲು ಆಗುವ ಅಜೈವಿಕ ಸಬ್‌ಸ್ಟ್ರೇಟ್‌ನ ಸಂಘಟಿತ ವಿಘಟನೆ ಕೂಡ ಅವುಗಳ ಕ್ಷಿಣಿಸುವ ಕ್ರಿಯೆಯ ಒಂದು ಮುಖ್ಯ ಪರಿಣಾಮ.ಸೂಕ್ಷ್ಮಕ್ರಿಮಿಗಳು ಮಣ್ಣಿನಲ್ಲಿ ಉಪಸ್ಥಿತವಾಗಿದ್ದು ವಸ್ತುಗಳ ವಿಘಟನೆಗೆ ಪ್ರಮುಖ ಪ್ರತಿನಿಧಿಗಳು. ಸೆಲ್ಯುಲೈಟಿಕ್ ವಿಘಟನೆಯನ್ನು ನಡೆಸಿದಾಗ ಸೆಲ್ಯುಲೋಸಿಕ್ ಸಸ್ಯ ಜೀವ, ಮರದ ಉತ್ಪನ್ನಗಳು, ಹಾಗೂ ಬಟ್ಟೆಯ ಉದ್ಯಮಗಳಿಗೆ ನಿರ್ಧಾರಿತವಾಗಿ ಪರಿಣಾಮ ಬೀರುತ್ತದೆ.

ಕಿಣ್ವಗಳು

ಬದಲಾಯಿಸಿ

ರಾಸಾಯನಿಕ ಕ್ರಿಯಾವರ್ಧಕಗಳಿಗೆ ಸಮಾನವಾದ ಕ್ರಿಯೆಯನ್ನು ಹೊಂದ ಕಿಣ್ವಗಳು ಅಗತ್ಯವಾಗಿ ಜೀವಶಾಸ್ತ್ರದ ಕ್ರಿಯಾವರ್ಧಕಗಳು. ಸಕ್ರಿಯ ಶಕ್ತಿಯನ್ನು ಇಳಿಸುವುದರಿಂದ ವಾತಾವರಣದಲ್ಲಿನ ಕ್ರಿಯೆಗಳ ಗತಿಯಲ್ಲಿ ಏರಿಕೆಯನ್ನು ಕಿಣ್ವಗಳು ಪ್ರೇರಿಸುತ್ತವೆ, ಇಲ್ಲವಾದರೆ ರಾಸಾಯನಿಕ ಪ್ರತಿಕ್ರಿಯೆಗಳಿಗೆ ಇದು ನೆರವಾಗದಿರಬಹುದು (ಉದಾ. ನೀರು pH 7 ಹಾಗೂ 30 °C ರಲ್ಲಿ). ಕಿಣ್ವಗಳ ಉಪಸ್ಥಿತಿಯಲ್ಲಿ, ಪ್ರತಿಕ್ರಿಯೆಯ ಗತಿಯಲ್ಲಿ 108–1020 ಏರಿಕೆಯನ್ನು ಹಲವು ಬಾರಿ ಗಮನಿಸಬಹುದು. ಪ್ರಧಾನವಾದ ಕಿಣ್ವಗಳು ಪ್ರೋಟಿನ್‌ಗಳು, ಅವುಗಳಲ್ಲಿ ಒಂದು ಪೊಲಿಪೆಪ್ಟೈಡ್ ಸರಣಿ ಜಟಿಲ ಮೂರು-ಆಯಾಮಗಳ ರಚನೆಯೊಂದಿಗೆ ಇರುತ್ತದೆ. ಕಿಣ್ವ ಕ್ರಿಯೆ ರಚನೆಯನ್ನು ಘಟಿಸುವುದಕ್ಕೆ ಬಹಳ ಹತ್ತಿರದಿಂದ ಸಂಬಂಧಿತವಿದೆ. ಕಿಣ್ವಗಳ ಮೂರು -ಆಯಾಮಗಳ ರಚನೆಯು ಪ್ರಾಥಮಿಕ ಗುಣಲಕ್ಷಣಗಳ ರಚನೆಗಳೊಂದಿಗೆ ಮೇಲ್ಮೈ ಪ್ರದೇಶದ ಮೇಲೆ ಕೆಲವೊಂದು ಪದರಗಳು ಹಾಗೂ ಪೊಟ್ಟಣಗಳ ರೀತಿಯಲ್ಲಿದ್ದು (ಉದಾಹರಣೆಗೆ, ನಿರ್ದಿಷ್ಟ ಅಮಿನೋ ಆ‍ಯ್‌ಸಿಡ್ ಅನುಕ್ರಮದಲ್ಲಿ) ಚಟುವಟಿಕೆ ನಡೆಯುವ ಸ್ಥಳದಲ್ಲಿ ಕಂಡುಬರುತ್ತದೆ. ಚಟುವಟಿಕೆ ನಡೆಯುವ ಸ್ಥಳದಲ್ಲಿ ಕಿಣ್ವಗಳ ಮತ್ತು ಘನೀಕರಣದ ನಡುವಿನ ಪರಸ್ಪರ ಕ್ರಿಯೆಯು ರಾಸಾಯನಿಕ ಪ್ರತಿಕ್ರಿಯೆಗೆ ಪ್ರಮುಖ ಪಾತ್ರವಹಿಸಿ ನಿರ್ದಿಷ್ಟವಾದ ಉತ್ಪನ್ನ ನೀಡುತ್ತದೆ. ಕೆಲವೊಂದು ಕಿಣ್ವಗಳ ಕೆಲವೊಂದು ಚಟುವಟಿಕೆಗಳು ಪ್ರೋಟೀನೇತರ ಲೋಹದ ಅಯಾನ್‌ಗಳ ಜೊತೆಗೆ ಹೆಚ್ಚು ಜೊತೆಯಾಗಿರುತ್ತದೆ,ಉದಾಹರಣೆಗೆ ಸೋಡಿಯಂ,ಪೊಟಾಶಿಯಂ,ಮೆಗ್ನೇಶಿಯಂ,ಕ್ಯಾಲ್ಸಿಯಂ,ಅಥವಾ ಸತು. ಜೈವಿಕ ಪ್ರೋಟೀನೆತರಗಳನ್ನು ಕೂಡ ಸಹಕಿಣ್ವಗಳು ಎಂದು ಕರೆಯಲಾಗುತ್ತದೆ ಮತ್ತು ಇವುಗಳು ರಚನೆಗಳಲ್ಲಿ ಬದಲಾವಣೆಯನ್ನೂ ತರಬಹುದು. ಇತರೆಗಳು ಚಯಾಪಚಯ ಆವರ್ತನದಲ್ಲಿ ಪ್ರಮುಖವಾದ ಅಂಶಗಳಾಗಾದ (ಥಯಾಮಿನ್,ಬಯೋಟಿನ್,ಇತರೆ)ಇನ್ನೂ ಕೆಲವು ವಿಭಿನ್ನ ಬಿ-ವಿಟಮಿನ್ಸ್‌ಗಳಿಂದ ಬಂದಿದೆ. ಪರಿಪೂರ್ಣ ನಿರ್ಧಿಷ್ಟ ಲಕ್ಷಣಗಳಿರುವ ಕಿಣ್ವಗಳಿಗೆ, ಬದಲಾಗದ ಗಡುಸಾದ ರಚನೆಯನ್ನು ಸೂಚಿಸುವ ’ಕೀ-ಅಂಡ್-ಲಾಕ್’ ಸಿದ್ಧಾಂತವು ಒಂದು ಸಮಂಜಸವಾದ ಮಾದರಿಯಾಗಿದೆ. ಚಟುವಟಿಕೆಯ ಸ್ಥಳದಲ್ಲಿ ಕಿಣ್ವ ಮತ್ತು ಸಬ್‌ಸ್ಟ್ರೇಟ್‌ಗಳ ಪ್ರಾಥಮಿಕ ಸಂಪರ್ಕದ ಸ್ವಲ್ಪ ಹೊಂದಾಣಿಕೆಯು ಹೆಚ್ಚಿನ ಬಂಧನ ನೀಡುವ ಸಾಧ್ಯತೆಯಿದೆ (ಕಿಣ್ವ-ಸಬ್‌ಸ್ಟ್ರೇಟ್),ಕೆಲವೊಮ್ಮೆ ಪ್ರೋಟೀನೆತರಗಳು ಕಿಣ್ವಕ್ಕೆ ಬಂಧನ ನೀಡಲು ಈ ಬದಲಾವಣೆಗಳು ಪ್ರೇರೆಪಿಸುತ್ತವೆ.

ಕಿಣ್ವದ ಚಟುವಟಿಕೆಗಳು

ಬದಲಾಯಿಸಿ

ಎಲ್ಲಾ ಕಿಣ್ವಗಳು ನಿರ್ದಿಷ್ಟವಾದ ವಾತಾವರಣಕ್ಕೆ ಹೊಂದಿಕೊಂಡಿರುತ್ತದೆ ಮತ್ತು ಅಲ್ಲಿ ನಿರ್ಧಿಷ್ಟ ಉದ್ದೇಶಕ್ಕಾಗಿ ಪ್ರಶಸ್ತವಾದ ಚಟುವಟಿಕೆ ಮತ್ತು ಮೂರು ಆಯಾಮಗಳ ಆಕೃತಿಗಳನ್ನು ಪಡೆಯುತ್ತವೆ. ಮಾನವನ ದೇಹದಲ್ಲಿರುವ ಕೋಶಗಳಲ್ಲಿ ನೀರಿನಲ್ಲಿನ ಪಿಹೆಚ್ 6–8 ಇರುತ್ತದೆ, ಅಯಾನಿನ ಸಾಮರ್ಥ್ಯವು 0.15 ಮೊಲಾರ್ (ಸಹಜವಾದ ಫಿಸಿಯೊಲಾಜಿಕ್ ಆದ ಕ್ಷಾರವು NaClನಲ್ಲಿ 0.9% ರಷ್ಟಿರುತ್ತದೆ) ಮತ್ತು 35–40°Cರಷ್ಟು ತಾಪಮಾನವಿರುತ್ತದೆ. ಇವುಗಳಲ್ಲಿ ಯಾವುದಾದರೂ ಒಂದರಲ್ಲಿನ ಸಣ್ಣ ಬದಲಾವಣೆಯು ಪೂರ್ಣ ಕಿಣ್ವದ ಚಟುವಟಿಕೆಗಳನ್ನು ಸ್ಥಗಿತಗೊಳಿಸಬಹುದು ಅಥವಾ ಸರಿಯಾಗದಂತೆ ನಾಶಪಡಿಸಬಹುದು. ನೀರಲ್ಲದೆ ಇತರ ದ್ರಾವಣಗಳು, ವಿಶೇಷವಾಗಿ ಜೈವಿಕ ದ್ರಾವಕಗಳು ಅನೇಕ ಕಿಣ್ವಗಳಿಗೆ ಮಾರಕವಾಗಿರುತ್ತದೆ, ಆದರೆ ಕೆಲವು ಕಿಣ್ವಗಳು ಇಂಥಹ ವಾತಾವರಣದಲ್ಲಿಯೂ ಚಟುವಟಿಕೆಯಿಂದಿರುತ್ತವೆ. ಉದಾ: ಬಿಸಿನೀರಿನ ಬುಗ್ಗೆಗಳು ಮತ್ತು ಕ್ಷಾರಯುಕ್ತ ವಾತಾವರಣಗಳು. ವಿವಿಧ ಕಿಣ್ವಗಳು ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತದೆ, ಕೆಲವು ಕಿಣ್ವಗಳು ಫ್ರೀ ರ್ಯಾಡಿಕಲ್ ಕ್ರಿಯೆಯ ಮೂಲಕ ಸಬ್‌ಟ್ರೇಟ್ (ಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲವಸ್ತು)ನಲ್ಲಿ ಬದಲಾವಣೆಯನ್ನುಂಟು ಮಾಡುತ್ತದೆ, ಉಳಿದವು ಬದಲೀ ರಾಸಾಯನಿಕ ಕ್ರಿಯೆಗಳಲ್ಲಿ ತೊಡಗುತ್ತವೆ. ಇದಕ್ಕೆ ಉದಾಹರಣೆಯೆಂದರೆ ಜೈವಿಕ ಉತ್ಕರ್ಷಣ ಮತ್ತು ಜೈವಿಕ ಹೈಡ್ರಾಲಿಸಿಸ್. ಕೆಲವು ಕಿಣ್ವಗಳು ಆಮ್ಲಜನಕದೊಂದಿಗೆ ನೇರವಾಗಿ ವರ್ತಿಸುತ್ತದೆ, ಇದಕ್ಕೆ ಉದಾಹರಣೆಯೆಂದರೆ ಉಸಿರಾಟದಲ್ಲಿ ಸಕ್ರಿಯವಾಗಿರುವ ಸೈಟೊಕ್ರೊಮಾಕ್ಸಿಡೇಸ್. ಆಮ್ಲಜನಕವು ಆಮಜನಕವಿರುವ ಸೂಕ್ಷ್ಮಾಣುಜೀವಿಗಳ ಚಾಯಾಪಚಯ ಕ್ರಿಯೆಯಲ್ಲಿ ವಿಶೇಷ ಪಾತ್ರ ವಹಿಸುತ್ತದೆ. ಹಲವು ಕಡೆಗಳಲ್ಲಿ ಆಮ್ಲಜನಕವು ಸಬ್‌ಸ್ಟ್ರೇಟಿನಲ್ಲಿ ನೇರವಾಗಿ ಸಂಯೋಜಿಸಿರುತ್ತದೆ. ಕಿಣ್ವಗಳು ಒಂದೋ ಹೈಡ್ರಾಕ್ಸಿಲೇಸ್ ಆಗಿರುತ್ತದೆ ಅಥವಾ ಆಕ್ಸಿಜನೇಸ್ ಆಗಿರುತ್ತದೆ.

ಉಪಯೋಗಗಳು

ಬದಲಾಯಿಸಿ

ಜಿವಿಕ ವಿಘಟನಕಾರಿ ಪಾಲೀಮರ್‌ಗಳು ಪ್ರಮುಖವಾಗಿ ಈ ಮೂರು ಕ್ಷೇತ್ರಗಳಲ್ಲಿ ಉಪಯೋಗಗಳನ್ನು ಹೊಂದಿದೆ: ವೈದ್ಯಕೀಯ, ಕೃಷಿ ಮತ್ತು ಗ್ರಾಹಕರ ವಸ್ತುಗಳ ಕಟ್ಟುವಿಕೆ ಇವುಗಳಲ್ಲಿ ಕೆಲವನ್ನು ವಾಣಿಜ್ಯಿಕ ಉತ್ಪನ್ನಗಳಲ್ಲಿ ಬಳಕೆಯಾಗಿವೆ. ಅವುಗಳ ವಿಶೇಷ ಗುಣ ಮತ್ತು ಉತ್ತಮವಾದ ಘಟಕ ಮೌಲ್ಯದಿಂದಾಗಿ ಅದನ್ನು ಉಳಿದೆರಡು ಕ್ಷೇತ್ರಗಳಿಗಿಂತ ವೈದ್ಯಕೀಯ ಉಪಕರಣಗಳಲ್ಲಿ ಶೀಘ್ರವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಈ ವಿಭಾಗವು ಕೆಳಗಿನ ಕ್ಷೇತ್ರಗಳಲ್ಲಿ ವಿಶೇಷ ಅನ್ವಯಿಸುವಿಕೆಗಳ ಸ್ಥೂಲ ಸಮೀಕ್ಷೆಗಳನ್ನೊಳಗೊಂಡಿದೆ:ಎಲೆಕ್ಟ್ರಾನಿಕ್ಸ್, ಫೊಟೊನಿಕ್ಸ್, ಎರೊಸ್ಪೇಸ್, ವೈದ್ಯಕೀಯ ಮತ್ತು ಔಷಧಿಗಳ ತಯಾರಿಕೆ, ಆಹಾರ ಮತ್ತು ಕೃಷಿ, ಕಟ್ಟುವಿಕೆ, ನಿರ್ಮಾಣದ ಇಂಜಿನಿಯರಿಂಗ್, ಇತ್ಯಾದಿ. ಇನ್ನಿತರ ಕ್ಷೇತ್ರಗಳೆಂದರೆ: ಜೈವಿಕತಂತ್ರಜ್ಞಾನದಲ್ಲಿನ ರಾಸಾಯನಿಕ ಪಾಲಿಮರ್ ಸಂಶ್ಲೇಷಣೆಗಾಗಿ ಮಾನೊಮರ್‌ಗಳ ಉತ್ಪಾದನೆ, ಮೂಲವಸ್ತುಗಳ ಪರಿವರ್ತನೆ, ಸವೆತ, ರಚನೆ, ವಾತಾವರಣದ ಪರಿಣಾಮಗಳು, ಆರೋಗ್ಯದ ನೀಡಿಕೆ, ಕಾನೂನು, ಪರಿಸರ ವಿಜ್ಞಾನದ ಮತ್ತು ಆರ್ಥಿಕ ಕ್ಷೇತ್ರಗಳು.[೧೨][೧೩][೧೪][೧೫]

ಪ್ಲಾಸ್ಟಿಕ್‌ಗಳು

ಬದಲಾಯಿಸಿ

ಪ್ಲಸ್ತಿಚ್ ಉಪಯೊಗಗಲು

ಫಿಲ್ಲರ್ (ಭರ್ತಿಸಾಧನ)

ಬದಲಾಯಿಸಿ

ಸ್ಟಾರ್ಚ್ ಹಲವಾರು ವರ್ಷಗಳ ಕಾಲ ಹಲವಾರು ಉದ್ದೇಶಗಳಿಗಾಗಿ ಪ್ಲಾಸ್ಟಿಕ್‌ನ ಒಂದು ಸಂಯೋಜಕವಾಗಿ ಬಳಸಲ್ಪಟ್ಟಿದೆ. ಸ್ಟಾರ್ಚ್ ಇದು ಹಲವಾರು ಸಂಶ್ಲೇಷಿತ ರಾಳಗಳ ವ್ಯವಸ್ಥೆಗಳಲ್ಲಿ ನೀರಿಗೆ ಅಪ್ರವೇಶ್ಯವಾದ ಆದರೆ ನೀರಿನ ಆವಿಗೆ ಪ್ರವೆಶವನ್ನು ನೀಡುವಂತಹ ಫಿಲ್ಮ್‌ಗಳನ್ನು ಮಾಡುವಲ್ಲಿ ಒಂದು ಫಿಲ್ಲರ್‌ನಂತೆ ಸಂಯೋಜಿಸಲ್ಪಡುತ್ತದೆ. ಸ್ಟಾರ್ಚ್ ಇದು ಎಲ್‌ಡಿಪಿಇ ಯಲ್ಲಿನ ಒಂದು ಜೈವಿಕ ವಿಘಟನೀಯ ಫಿಲ್ಲರ ಆಗಿ ವರದಿ ಮಾಡಲ್ಪಟ್ಟಿದೆ. ಒಂದು ಸ್ಟಾರ್ಚ್-ಭರ್ತಿ ಮಾಡಲ್ಪಟ್ಟ ಪಾಲಿಥಿಲೀನ್ ಫಿಲ್ಮ್ ಇದು ತಯಾರಿಸಲ್ಪಟ್ಟಿತು, ಇದು ಸ್ಟಾರ್ಚ್ ಅನ್ನು ಹೊರತೆಗೆದ ನಂತರ ರಂಧ್ರಗಳಿಂದ ತುಂಬಿದ ಫಿಲ್ಮ್ ಆಗಿ ಬದಲಾಗಲ್ಪಡುತ್ತದೆ. ಈ ರೀತಿಯ ರಂಧ್ರಗಳಿಂದ ತುಂಬಿದ ಫಿಲ್ಮ್ ಸರಾಗವಾಗಿ ಸೂಕ್ಷ್ಮಾಣುಜೀವಿಗಳಿಂದ ನಾಶವಾಗಲ್ಪಡುತ್ತದೆ ಮತ್ತು ಆಮ್ಲಜನಕದ ಜೊತೆಗೆ ವೇಗವಾಗಿ ನೆನೆಯಲ್ಪಡುತ್ತದೆ, ಆ ಮೂಲಕ ಜೈವಿಕ ಮತ್ತು ಆಕ್ಸಿಡೀಕರಣ ಮಾರ್ಗಗಳ ಮೂಲಕ ಪಾಲಿಮರ್‌ ವಿಘಟನೆಯನ್ನು ಹೆಚ್ಚಿಸುತ್ತದೆ. ಐಸೋಸೈನೇಟ್‌ಗಳು ಹೈಡ್ರಾಕ್ಸಿಲ್ ಗುಂಪುಗಳ ಜೊತೆಗೆ ಹೆಚ್ಚಿನ ಮಟ್ಟದಲ್ಲಿ ಪ್ರತಿಕ್ರಿಯಾತ್ಮಕವಾಗಿರುವ ಕಾರಣದಿಂದ, ಅವುಗಳು ಸ್ಟಾರ್ಚ್ ಜೊತೆಗೆ ಸಹಸಂಪರ್ಕವಾಗುವ ಸಂಶ್ಲೇಷಿತ ರಾಳಗಳ ಪ್ರತಿಕ್ರಿಯಾತ್ಮಕಗಳ ಹಲವಾರು ಸಂಖ್ಯೆಗಳನ್ನು ನಿರ್ಮಿಸುವುದಕ್ಕೆ ಬಳಸಿಕೊಳ್ಳಲ್ಪಡುತ್ತವೆ. ಐಸೋಸೈನೇಟ್‌ ಸಂಶ್ಲೇಷಿತ ರಾಳಗಳಿಗೆ ಸ್ಟಾರ್ಚ್‌ನ ಸಂಯೋಜನೆಯು ಗಣನೀಯ ಪ್ರಮಣದಲ್ಲಿ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ದ್ರಾವಕ ಪ್ರತಿಬಂಧಕತೆಯನ್ನು ಮತ್ತು ಶಕ್ತಿಯ ಲಕ್ಷಣಗಳನ್ನು ಉತ್ತಮಗೊಳಿಸುತ್ತದೆ. ಸ್ಟಾರ್ಚ್ ಇದು ಪ್ರತಿಕ್ರಿಯತೆಯ ಪ್ರಮಾಣವನ್ನು ಉತ್ತಮಗೊಳಿಸುವುದಕ್ಕೆ ಐಸೋಸೈನೇಟ್ ಪ್ರತಿಕ್ರಿಯೆಗೂ ಮುಂಚೆ ಕೊಬ್ಬಿನ ಎಸ್ಟರ್‌ಗಳಂತಹ ಪೋಲಾರ್ ಅಲ್ಲದ ಗುಂಪುಗಳ ಜೊತೆಗೆ ಬದಲಾವಣೆಗೆ ಒಳಗಾಗಲ್ಪಡಬಹುದು. ಡೈಐಸೋಸೈನೇಟ್-ಪರಿವರ್ತಿತ ಪಾಲಿಸ್ಟರ್‌ಗಳನ್ನು ಎಲಾಸ್ಟೊಮರ್‌ಗಳನ್ನು ಉತ್ಪಾದನೆ ಮಾಡುವುದಕ್ಕೆ ಸ್ಟಾರ್ಚ್ ಅನ್ನು ಫಿಲ್ಲರ್ ಆಗಿ ಮತ್ತು ಸಹ ಸಂಪರ್ಕ ಕಲ್ಪಿಸುವ ಘಟಕವಾಗಿ ಸಂಯೋಜನಗೊಳಿಸಲು ಒಂದು ವಿಧಾನವನ್ನು ಅಭಿವೃದ್ಧಿಗೊಳಿಸಲಾಯಿತು.ಪಾಲಿಲ್ಯಾಸ್ಟಿಕ್ ಆಮ್ಲ (ಪಿಎಲ್‌ಎ), ಸ್ವಾಭಾವಿಕವಾಗಿ ಸಂಭವಿಸುವ ಝೈನ್, ಮತ್ತು ಪಾಲಿ-3-ಹೈಡ್ರಾಕ್ಸಿಬ್ಯೂಟೈರೇಟ್‌ಗಳಂತಹ ಕೆಲವು ಜೈವಿಕಪಾಲಿಮರ್‌‌ಗಳು ಪ್ಲಾಸ್ಟಿಕ್‌ಗಳಂತೆ ಬಳಸಲ್ಪಡುತ್ತವೆ, ಇವು ಪಾಲಿಸ್ಟೀರಿನ್ ಅಥವಾ ಪಾಲಿಥಿಲೀನ್ ಆಧಾರಿತ ಪ್ಲಾಸ್ಟಿಕ್‌ಗಳ ಬಳಕೆಗೆ ಪರ್ಯಾಯವನ್ನು ಒದಗಿಸುತ್ತವೆ. ಕೆಲವು ಪ್ಲಾಸ್ಟಿಕ್‌ಗಳು ’ಕೆಳಮಟ್ಟಕ್ಕೆ ತರಬಹುದಾದ’ ಪ್ಲಾಸ್ಟಿಕ್‌ಗಳು, ’ಆಕ್ಸಿ-ಡಿಗ್ರೆಡೇಬಲ್’ ಅಥವಾ ’ಯುವಿ-ಡಿಗ್ರೆಡೇಬಲ್’ ಪ್ಲಾಸ್ಟಿಕ್‌ಗಳು ಎಂದು ಉಲ್ಲೇಖಿಸಲಡುತ್ತವೆ. ಇದರ ಅರ್ಥವೇನೆಂದರೆ ಅವುಗಳು ಬೆಳಕಿಗೆ ಅಥವಾ ಗಾಳಿಗೆ ತೆರೆಯಲ್ಪಟ್ಟಾಗ ಅವು ಮುರಿಯಲ್ಪಡುತ್ತವೆ ಎಂಬುದಾಗಿದೆ, ಆದರೆ ಈ ಪ್ಲಾಸ್ಟಿಕ್‌ಗಳು ಈಗಲೂ ಕೂಡ (ಹೆಚ್ಚಿನ ಪಕ್ಷ 98 ಪ್ರತಿಶತ) ಎಣ್ಣೆ-ಆಧಾರಿತ ಮತ್ತು ಯುರೋಪಿಯನ್ ಯೂನಿಯನ್ ಡೈರೆಕ್ಟಿವ್ ಆನ್ ಪ್ಯಾಕೇಜಿಂಗ್ ಮತ್ತು ಪ್ಯಾಕೇಜಿಂಗ್ ವೇಸ್ಟ್ ಆಕ್ಟ್‌ನ (94/62/EC) ಕೆಳಗೆ ’ಜೈವಿಕಡಿಗ್ರೆಡೇಬಲ್’ ಎಂಬುದಾಗಿ ಪ್ರಸ್ತುತದಲ್ಲಿ ಪ್ರಮಾಣೀಕರಿಸಲ್ಪಟ್ಟಿದೆ. ಜೈವಿಕಪಾಲಿಮರ್‌‌ಗಳು, ಆದಾಗ್ಯೂ, ಮುರಿಯಲ್ಪಡುತ್ತವೆ ಮತ್ತು ಕೆಲವು ಜೈವಿಕ ಪಾಲಿಮರ್‌ಗಳು ಗೃಹಕತ್ಯಗಳ ಬೆರಕೆಗಳಿಗೆ ಯೋಗ್ಯವಾಗುವಂತವಾಗಿರುತ್ತವೆ.

ಪ್ಯಾಕೇಜಿಂಗ್‌

ಬದಲಾಯಿಸಿ

ಜೈವಿಕಪಾಲಿಮರ್‌‌ಗಳಿಂದ ಹಲವಾರು ವಿಧದ ಪ್ಯಾಕೇಜಿಂಗ್‌ಗಳನ್ನು ಮಾಡಬಹುದು: ಆಹಾರದ ಟ್ರೇಗಳು, ಸುಲಭವಾಗಿ ನಾಶವಾಗುವ ವಸ್ತುಗಳನ್ನು ಸಂರಕ್ಷಿಸುವುದಕ್ಕಾಗಿ ಬ್ಲೌನ್ ಸ್ಟಾರ್ಚ್ ಪೆಲ್ಲೆಟ್‌ಗಳು, ಸುತ್ತುವುದಕ್ಕಾಗಿ ತೆಳುವಾದ ಫಿಲ್ಮ್‌ಗಳು ಇತ್ಯಾದಿ. ’ಪ್ಯಾಕೇಜಿಂಗ್ ಪಾಲಿಮರ್‌ಗಳ’ ಭೌತಿಕ ಗುಣಲಕ್ಷಣಗಳು ರಾಸಾಯನಿಕ ವಿನ್ಯಾಸ, ಅಣುಗಳ ತೂಕ, ಹರಳೀಕರಣ ಮತ್ತು ಬಳಸಲ್ಪಟ್ಟ ಪಾಲಿಮರ್‌ಗಳ ಸಂಸ್ಕಾರಕ ಪರಿಸ್ಥಿತಿಗಳು ಮುಂತಾದವುಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವಿತವಾಗಲ್ಪಡುತ್ತವೆ. ಪ್ಯಾಕೇಜಿಂಗ್‌ನಲ್ಲಿ ಅವಶ್ಯಕವಾದ ಭೌತಿಕ ಗುಣಲಕ್ಷಣಗಳು ಯಾವ ವಸ್ತುವು ಪ್ಯಾಕ್ ಮಾಡಲ್ಪಡುತ್ತದೆ ಹಾಗೆಯೇ ಯಾವ ವಾತಾವರಣದಲ್ಲಿ ಪ್ಯಾಕ್ ಮಾಡಲ್ಪಟ್ಟ ವಸ್ತುವು ಸಂಗ್ರಹಿಸಲ್ಪಡುತ್ತದೆ ಎಂಬ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ಅವಧಿಗಳ ಕಾಲ ಘನೀಕರಿಸಿ ಇಡಬೇಕಾದ ವಸ್ತುಗಳಿಗೆ ವಿಶೇಷ ರೀತಿಯ ಪ್ಯಾಕೇಜಿಂಗ್ ಅವಶ್ಯಕವಾಗುತ್ತದೆ. ಆಹಾರ ವಸ್ತುಗಳು ಹಾಳಾಗದ ವಸ್ತುಗಳಿಗಿಂತ ಹೆಚ್ಚಿನ ಬಿಗಿಯಾದ ಪ್ಯಾಕೇಜಿಂಗ್ ಅವಶ್ಯಕತೆಗಳನ್ನು ಹೊಂದಿರುತ್ತವೆ. ಜೈವಿಕ ವಿಘಟನಾ ಪ್ಯಾಕೇಜಿಂಗ್‌ನ ಅಭಿವೃದ್ಧಿಯಲ್ಲಿನ ಸವಾಲೆಂದರೆ ವಾಸ್ತವವಾಗಿ ಜೈವಿಕ ವಿಘಟನಾತ್ಮಕ ಪಾಲಿಮರ್‌ಗಳನ್ನು ಒಂದು ಪದರವಾಗಿ ಸೀಳಲ್ಪಟ್ಟ ಫಿಲ್ಮ್ ಅಥವಾ ಸಿಂಥೆಟಿಕ್ ಪದರುಗಳಲ್ಲಿ ಕಂಡುಬರುವ ಗುಣಲಕ್ಷಣಗಳಂತಹ ಒಂದು ಫಿಲ್ಮ್ ಬ್ಲೆಂಡ್‌ಗಳ ಒಳಗೆ ವಾಸ್ತವವಾಗಿ ಜೈವಿಕ ವಿಘಟನಾ ಪ್ಲಾಸ್ಟಿಕ್ ಆಗಿ ಸಂಯೋಜನವಾಗುವಂತೆ ಮಾಡುತ್ತವೆ. ಉದಾಹರಣೆಗೆ, ಆಹಾರ ವಸ್ತುಗಳ ಅನ್ವಯಿಕೆಗಳಲ್ಲಿ, ಇದು ತುಂಬಾ ಕಡಿಮೆ ಪ್ರಮಾಣದ ಆಮ್ಲಜನಕ ವ್ಯಾಪ್ಯತೆ ಮತ್ತು ಖಾದ್ಯ ಯೋಗ್ಯವಾಗಿರುವಂತಹ ಮತ್ತು ಪಿಹೆಚ್‌ಬಿವಿ ಯನ್ನು ಒಂದು ಬಾಹ್ಯ ಪ್ಯಾಕೇಜಿಂಗ್ ಆಗಿ ಬಳಸಿಕೊಳ್ಳುವಂತಹ ಪ್ಲಾಸ್ಟಿಕ್ ಪುಲ್ಯೂಲನ್ ಜೊತೆ ಆಹಾರ ವಸ್ತುಗಳಿಗೆ ಲೇಪನ ಮಾಡುವುದಕ್ಕೆ ಬಳಸಲ್ಪಡುತ್ತದೆ. ಎರಡೂ ಪಾಲಿಮರ್‌ಗಳು ಸಂಸ್ಕರಣವನ್ನು ಮಾಡುವ ಸಮಯದಲ್ಲಿ ಸಾಕಷ್ಟು ಪ್ರಮಾಣದ ತೇವಾಂಶವು ಇರುವಂತಹ ಸಂದರ್ಭಗಳಲ್ಲಿ ಕರಗಿ ಬಾಗಲ್ಪಡುವ ಕಾರಣದಿಂದ ಪುಲ್ಯೂಲನ್ ಮತ್ತು ಪಿಎಚ್‌ಬಿವಿ ಗಳ ಒಂದು ಫಿಲ್ಮ್ ಬ್ಲೆಂಡ್ ಇವೂ ಕೂಡ ಉತ್ಪತ್ತಿಯಾಗಲ್ಪಡುತ್ತವೆ. ಪಿಎಚ್‌ಬಿವಿ ಗೆ ಪುಲ್ಯೂಲನ್‌ನ ಸಂಯೋಜನೆಯು ಆಮ್ಲಜನಕದ ವ್ಯಾಪ್ಯತೆಯನ್ನು ಕಡಿಮೆಗೊಳಿಸುತ್ತದೆ ಮತ್ತು ಪುಲ್ಯೂಲನ್‌ನ ನೀರಿನ ವಿಲಯನತ್ವದ ಕಾರಣದಿಂದ ಅದರ ವೇಗವಾದ ತೆಗೆದುಹಾಕುವಿಕೆಯನ್ನು ಅನುಸರಿಸಿ ಪಿಎಚ್‌ಬಿವಿ ತೆರೆಯಲ್ಪಟ್ಟ ವ್ಯಾಪಿತವಾದ ಮೇಲ್ಮೈಯ ಕಾರಣದಿಂದ ಬಾಗಲ್ಪಟ್ಟ ಜೈವಿಕ ವಿಘಟನೆಯನ್ನು ಹೆಚ್ಚಿಸುತ್ತದೆ. ಹಲವಾರು ಬಹುಶರ್ಕರ-ಆಧಾರಿತ ಜೈವಿಕಪಾಲಿಮರ್‌ಗಳು ಲೇಪನ ಮಾಡುವ ವಸ್ತುಗಳು ಅಥವಾ ಪ್ಯಾಕ್ ಮಾಡುವ ವಸ್ತುಗಳನ್ನು ಬಳಸಿಕೊಳ್ಳುತ್ತವೆ. ಅವುಗಳು ಸ್ಟಾರ್ಚ್, ಪುಲ್ಯೂಲನ್ ಮತ್ತು ಚೈಟೋಸನ್ ಇವುಗಳನ್ನು ಒಳಗೊಳ್ಳುತ್ತವೆ. ಸಿಂಥೆಟಿಕ್ ಪಾಲಿಮರ್ ಫಿಲ್ಮ್‌ಗಳ ವಿಘಟನೆಯು ಸ್ಟಾರ್ಚ್ ಅನ್ನು ಒಂದು ಫಿಲ್ಲರ ಆಗಿ ಸಂಯೋಜಿಸುವ ಮೂಲಕ ಹೆಚ್ಚಿಸಬಹುದು. 10% ಕಾಳು ಸ್ಟಾರ್ಚ್‌ನ ಜೊತೆ ಬಾಗಲ್ಪಡುವ ಎಲ್‌ಡಿಪಿಇ ಗಳು ಸಾಂಪ್ರದಾಯಿಕ ತಂತ್ರಗಾರಿಕೆಗಳನ್ನು ಬಳಸಿಕೊಂಡು ಉತ್ಪತ್ತಿ ಮಾಡಲ್ಪಡುತ್ತವೆ ಮತ್ತು ದಿನಸಿ ಸಾಮಾನುಗಳಿಗೆ ಅಥವಾ ಕೆಲಸಕ್ಕೆ ಬಾರದ ವಸ್ತುಗಳಿಗಾಗಿ ಬ್ಯಾಗ್‌ಗಳನ್ನು ಮಾಡಲು ಬಳಸಿಕೊಳ್ಳಲ್ಪಡುತ್ತವೆ. ಪುಲ್ಯೂಲನ್ ಇದು ಪ್ರಾಥಮಿಕವಾಗಿ α-1,6 ಸಂಪರ್ಕಗಳಿಂದ ಸಂಯೋಜಿತವಾದ ಮಾಲ್ಟೋಟ್ರೈಸ್ ಘಟಕಗಳನ್ನು ಒಳಗೊಂಡಿರುತ್ತದೆ. ಇದು ಎಕ್ಸ್ಟ್ರಾಸೆಲ್ಯುಲರ್ ದ್ವಿತೀಯಕ ಚಯಾಪಚಯದಂತೆ ಹಲವಾರು ಫಂಗಿಗಳ ಮೂಲಕ ಉತ್ಪತ್ತಿಯಾಗಲ್ಪಡುತ್ತದೆ. ಪುಲ್ಯೂಲನ್ ಇದು ತನ್ನ ನೈಸರ್ಗಿಕ ಮೂಲದ ಕಾರಣದಿಂದಾಗಿ ಜಪಾನ್‌ನಲ್ಲಿ ಆಹಾರದ ಒಂದು ಮೂಲವಾಗಿ ವಾಣಿಜ್ಯೀಕರಣಗೊಳ್ಳಲ್ಪಟ್ಟಿತ್ತು ಮತ್ತು ಆಹಾರದ ಲೇಪನಗಳ ಅವಶ್ಯಕತೆಗಳಿಗೆ ಅನುಮೋದಿಸಲ್ಪಟ್ಟಿದೆ. ಇದು ಒಂದು -ನೀರಿನಲ್ಲಿ-ಕರಗುವ ಪಾಲಿಮರ್ ಆಗಿದೆ, ಇದು ಕಡಿಮೆ ಪ್ರಮಾಣದ ಆಮ್ಲಜನಕ ವ್ಯಾಪ್ಯತೆಯನ್ನು ಪ್ರದರ್ಶಿಸುವ ನಿರ್ದಿಷ್ಟವಾದ ಯೋಗ್ಯ ಫಿಲ್ಮ್‌ಗಳನ್ನು ಉತ್ಪತ್ತಿ ಮಾಡುತ್ತದೆ. ಒಂದು ಲೋಹದ ಪ್ಲೇಟ್ ರೋಲರ್‌ನ ಒಂದು 1–20% ಜಲೀಯ ಕರಗುವಿಕೆಯನ್ನು ಅಳವಡಿಸುವ ಮೂಲಕ ಫಿಲ್ಮ್‌ಗಳು ಉತ್ಪತ್ತಿಯಾಗಲ್ಪಡುತ್ತವೆ. ಒಂದು ಪ್ಲಾಸ್ಟೀಕಾರಕದಂತೆ ಸಾಕಷ್ಟು ನೀರು ಅಸ್ತಿತ್ವದಲ್ಲಿದ್ದರೆ ಸ್ಟಾರ್ಚ್‌ನಂತೆ ಪುಲ್ಯೂಲನ್ ಕೂಡ ತಾಪ ಮತ್ತು ಒತ್ತಡದ ಜೊತೆ ಕರಗಲ್ಪಡುತ್ತದೆ. ಪಾಲಿಲ್ಯಾಕ್ಟಿಕ್ ಆಮ್ಲವು (ಪಿಎಲ್‌ಎಲ್‌ಎ) ಲ್ಯಾಕ್ಟಿಕ್ ಆಮ್ಲ ಮಾನೋಮರ್‌ನ ಒಂದು ರಾಸಾಯನಿಕ ಸಾಂದ್ರೀಕರಣ ಪ್ರತಿಕ್ರಿಯೆಯ ಮೂಲಕ ಉತ್ಪತ್ತಿಯಾಗಲ್ಪಡುತ್ತದೆ ಮತ್ತು 45–70 ಎಮ್‌ಪಿಎ ಮುರಿಯುವಿಕೆಯಲ್ಲಿ ಒಂದು ಕರ್ಷಕ ಬಲವನ್ನು ಹೊಂದಿರುತ್ತದೆ ಮತ್ತು 85–105% ರ ಒಂದು ದೀರ್ಗೀಕರಣವನ್ನು ಹೊಂದಿರುತ್ತದೆ. ಆರ್ಗೋನ್ ರಾಷ್ಟ್ರೀಯ ಲ್ಯಾಬೋರೇಟರಿಯು ಆಲೂಗಡ್ಡೆಯ ಸ್ಟಾರ್ಚ್‌ನಿಂದ 100 ಎಚ್ ಗೆ ಬದಲಾಗಿ 10 ಎಚ್ ನಲ್ಲಿ ಗ್ಲೂಕೋಸ್ ಅನ್ನು ಉತ್ಪತ್ತಿ ಮಾಡುವ ಪ್ರಕ್ರಿಯೆಗೆ ಸ್ವಾಮ್ಯವನ್ನು ಪಡೆದುಕೊಂಡಿದೆ. ನಂತರದಲ್ಲಿ ಗ್ಲೂಕೋಸ್ ಲ್ಯಾಕ್ಟಿಕ್ ಆಮ್ಲಕ್ಕೆ ಕಿಣ್ವವಾಗಿ ಬದಲಾಗಲ್ಪಡುತ್ತದೆ ಮತ್ತು ಸಂಸ್ಕರಿಸಲ್ಪಡುತ್ತದೆ. ಆಲೂಗಡ್ಡೆಯ ತ್ಯಾಜ್ಯಗಳಿಂದ ಉತ್ಪತ್ತಿ ಮಾಡಲ್ಪಟ್ಟ ಲ್ಯಾಕ್ಟಿಕ್ ಅಮ್ಲವು ಪಿಎಲ್‌ಎಲ್‌ಎ ಅನ್ನು ಉತ್ಪತ್ತಿ ಮಾಡುವುದಕ್ಕೆ ಮತ್ತು ಜೈವಿಕ ವಿಘಟನೀಯ ಪ್ಯಾಕ್ ಮಾಡುವ ಘಟಕಗಳನ್ನು ಒಂದು ವಿವೇಚನಾಯುಕ್ತ ಬೆಲೆಯಲ್ಲಿ ಉತ್ಪಾದಿಸುವುದಕ್ಕೆ ಸಾಕಷ್ಟು ಕಡಿಮೆ ಪ್ರಮಾಣದಲ್ಲಿರುತ್ತದೆ. ದಿನಸಿ ಸಾಮಾನುಗಳು ಮತ್ತು ತ್ಯಾಜ್ಯ ಬ್ಯಾಗ್‌ಗಳು, ಡೈಪರ್ ಬ್ಯಾಕಿಂಗ್‌ಗಳು, ಸಿಕ್ಸ್-ಪ್ಯಾಕ್ ರಿಂಗ್‌ಗಳು ಮತ್ತು ಫಾಸ್ಟ್ ಫುಡ್ ಕಂಟೇನರ್‌ಗಳನ್ನು ಒಳಗೊಂಡ ಪರಿಗಣನೆಯ ಅಡಿಯಲ್ಲಿ ಪಿಎಲ್‌ಎಲ್‌ಎ-ಆಧಾರಿತ ಪ್ಯಾಕೇಜಿಂಗ್ ಅನ್ನು ಒಳಗೊಳ್ಳುತ್ತವೆ.

ಕಂಟೇನರ್‌ಗಳು

ಬದಲಾಯಿಸಿ

ವಿಘಟನೆ ಹೊಂದಬಲ್ಲ ಪ್ಲಾಸ್ಟಿಕ್‌ಗಳಿಗೆ ಒಂದು ಸಣ್ಣ ಪ್ರದೇಶವು ಸಣ್ಣ ವ್ಯವಸಾಯ ಮಾಡುವ ಕಂಟೇನರ್‌ಗಳಿಗೆ ಪಾಲಿಕ್ಯಾಪ್ರೋಲ್ಯಾಕ್ಟೋನ್‌ನ ಬಳಕೆಯ ತಾಣಗಳಾಗಿರುತ್ತವೆ. ಆದಾಗ್ಯೂ ವಿಘಟನೆ ಹೊಂದಬಲ್ಲ ಪ್ಲಾಸ್ಟಿಕ್‌ಗಳಿಗೆ ಇದು ಒಂದು ಸಣ್ಣ ಪ್ರಮಾಣದ ಅನ್ವಯಿಕೆಯಾಗಿದೆ, ಇದು ಒಂದು ತರ್ಕಬದ್ಧವಾದ ಅವಧಿಯೊಳಗಿನ ಪಾಲಿಮರ್ ಅನ್ನು ಬಳಸಿಕೊಳ್ಳಲ್ಪಟ್ಟ ಕೆಲವು ಅನ್ವಯಿಕೆಗಳಲ್ಲಿ ಒಂದಾಗಿರುವ ಕಾರಣದಿಂದ ಇಲ್ಲಿ ಅಸ್ತಿತ್ವದಲ್ಲಿ ಇರಲ್ಪಡುತ್ತದೆ. ಈ ರೀತಿಯ ಪಾಲಿಕ್ಯಾಪ್ರೋಲ್ಯಾಕ್ಟೋನ್ ಪ್ಲಾಂಟಿಂಗ್ ಕಂಟೇನರ್‌ಗಳು ಗಿಡಗಳ ನೆಡುವಿಕೆಯ ಯಾಂತ್ರೀಕೃತ ಮಷಿನ್ ಪ್ಲಾಂಟಿಂಗ್‌ಗಾಗಿ ಬಳಸಿಕೊಳ್ಳಲ್ಪಡುತ್ತವೆ. ಮಣ್ಣಿನಲ್ಲಿ ಆರು ತಿಂಗಳ ಒಳಗಾಗಿ, ಪಾಲಿಕ್ಯಾಪ್ರೋಲ್ಯಾಕ್ಟೋನ್ ಇದು ಗಣನೀಯ ಪ್ರಮಾಣದ ಜೈವಿಕ ವಿಘಟನೆಯಡಿಯಲ್ಲಿ ಸಾಗಬೇಕೆಂದು ಕಂಡುಹಿಡಿಯಲ್ಪಟ್ಟಿತು, ಇದು ಒಂದು ವರ್ಷದಲ್ಲಿ 95% ತೂಕದ ಕಳೆದುಕೊಳ್ಳುವಿಕೆಯ ಜೊತೆಗೆ 48% ತೂಕದ ಕಳೆದುಕೊಳ್ಳುವಿಕೆಗೆ ಕಾರಣವಾಗುತ್ತದೆ.

ವೈದ್ಯಕೀಯ

ಬದಲಾಯಿಸಿ

ಜೈವಿಕ ವಿಘಟನೀಯ ಪ್ಲಾಸ್ಟಿಕ್‌ಗಳು ನಾಳೀಯ ಮತ್ತು ಅರ್ಥೋಪಿಡಿಕ್ ಶಸ್ತ್ರಚಿಕಿತ್ಸೆಗಳಲ್ಲಿ ಶಸ್ತ್ರಚಿಕಿತ್ಸೆಯ ಅಂತರ್ನಿವೇಶಗಳಾಗಿ ಅಭಿವೃದ್ಧಿಗೊಳಿಸಲ್ಪಟ್ಟಿವೆ, ಇವು ದೇಹದ ಒಳಗೆ ನಿಯಂತ್ರಿತ ದೀರ್ಘ-ಅವಧಿಯ ಮಾದಕ ವಸ್ತುಗಳ ಬಿಡುಗಡೆಗೆ ಅಂತರ್ನಿವೇಶವಾದ ಮೆಟ್ರೀಸೀಸ್‌ಗಳಂತೆ, ಹೀರಿಕೊಳ್ಳುವ ಶಸ್ತ್ರಚಿಕಿತ್ಸೆಯ ಹೊಲಿಗೆಗಳು, ಮತ್ತು ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ಬಳಸಿಕೊಳ್ಳಲ್ಪಡುತ್ತವೆ. ಇತ್ತೀಚಿನಲ್ಲಿ ಜೈವಿಕ ಮೂಲವಸ್ತು ಎಂಬ ಶಬ್ದವು ವೈದ್ಯಕೀಯ ಸಾಧನ ಅನ್ವಯಿಕೆಗಳಲ್ಲಿ ಜೀವಶಕ್ತಿಯಿಲ್ಲದ ವಸ್ತುವಾಗಿ ಉಲ್ಲೇಖಿಸಲ್ಪಡುತ್ತದೆ, ಅದು ಒಂದು ಜೈವಿಕ ವ್ಯವಸ್ಥೆಯ ಜೊತೆಗೆ ಪರಸ್ಪರ ಕ್ರಿಯೆಯನ್ನು ನಡೆಸುವ ಉದ್ದೇಶವನ್ನು ಹೊಂದಿರುತ್ತದೆ. ಅನ್ಯ ವಸ್ತುಗಳಿಗೆ ಅಂಗಾಂಶವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ವಿಷಯದ ಜೊತೆಗೆ ವ್ಯವಹರಿಸುವ ಜೈವಿಕ ಸಾಮರಸ್ಯ ಎಂಬ ಶಬ್ದವನ್ನು ಉಲೇಖಿಸುವುದೂ ಕೂಡ ಮಹತ್ವದ ಸಂಗತಿಯಾಗುತ್ತದೆ. ಜೈವಿಕ ಸಾಮರಸ್ಯ ಇದು ಒಂದು ನಿರ್ದಿಷ್ಟವಾದ ಅನ್ವಯಿಕೆಯಲ್ಲಿ ಒಂದು ಸರಿಯಾದ ಬಾಹ್ಯ ಪ್ರತಿಕ್ರಿಯೆಯ ಜೊತೆ ಕಾರ್ಯನಿರ್ವಹಿಸುವುದಕ್ಕೆ ಒಂದು ವಸ್ತುವಿನ ಸಾಮರ್ಥ್ಯ ಎಂದು ಹೇಳಲಾಗುತ್ತದೆ. ಜೈವಿಕ ಮೂಲವಸ್ತುಗಳು ಸಾಮನ್ಯವಾಗಿ ಈ ಕೆಳಗಿನ ಉದ್ದೇಶಗಳಿಗಾಗಿ ಬಳಸಲ್ಪಡುತ್ತವೆ:

(a) ಕಾಯಿಲೆಗೆ ಒಳಗಾಗಲ್ಪಟ್ಟ ಅಥವಾ ಸಮರ್ಪಕವಾಗಿ ಕಾರ್ಯನಿರ್ವಹಿಸದ ಅಂಗಾಂಶಗಳನ್ನು ಬದಲಾಯಿಸುವುದಕ್ಕೆ, ಕೀಲುಗಳ ಬದಲಾಯಿಸುವಿಕೆಯಂತೆ, ಕೃತಕವಾದ ಹೃದಯದ ಕವಾಟಗಳು ಮತ್ತು ಅಪಧಮನಿಗಳು, ಹಲ್ಲಿನ ಪುನರ್‌ನಿರ್ಮಾಣ ಮತ್ತು ಅಂತರ್‌ನೇತ್ರೀಯ ಮಸೂರಗಳು;

(b) ಗೋಚರವಾಗುವ ಹೊಲಿಗೆಗಳನ್ನು ಒಳಗೊಂಡಂತೆ ಅಂಗಾಂಶಗಳ ದುರಸ್ತಿಯಲ್ಲಿ ಬಳಸಲ್ಪಡುತ್ತದೆ, ಆದರೆ ಮೂಳೆಯ ಮುರಿತದ ಪ್ಲೇಟ್‌ಗಳು, ಅಸ್ಥಿರಜ್ಜು ಮತ್ತು ಸ್ನಾಯುರಜ್ಜುಗಳ ದುರಸ್ತಿಯ ಸಾಧನಗಳಲ್ಲಿ ಬಳಸಲ್ಪಡುತ್ತದೆ;

(c) ಹೀಮೋಡಯಾಲೀಸಿಸ್‌ನಲ್ಲಿರುವಂತೆ (ಕಿಡ್ನಿಯ ಕಾರ್ಯವನ್ನು ಬದಲಾಯಿಸುವುದು), ಆಕ್ಸಿಜನೇಷನ್ (ಶ್ವಾಸಕೋಶಗಳು), ಎಡ ಕುಕ್ಷೀಯ ಅಥವಾ ಪೂರ್ತಿ ಹೃದಯದ ಒತ್ತಾಸೆ (ಹೃದಯ), ವ್ಯಾಪನ (ಮೂತ್ರಪಿಂಡ), ಮತ್ತು ಇನ್ಸುಲಿನ್ ವಿಲೇವಾರಿ (ಮೇದೋಜೀರಕ ಗ್ರಂಥಿ) ಮುಂತಾದ ಪ್ರಮುಖ ಅಂಗಗಳ ಎಲ್ಲಾ ಅಥವಾ ಭಾಗಶಃ ಕಾರ್ಯಗಳನ್ನು ಬದಲಾಯಿಸುವುದಕ್ಕೆ ಬಳಸಲ್ಪಡುತ್ತದೆ;

(d) ದೇಹದಲ್ಲಿ ಔಷಧಗಳ ವಿತರಣೆ ಮಾಡುವುದಕ್ಕೆ ಬಳಸಲ್ಪಡುತ್ತದೆ, ಉದ್ದೇಶಿತ ಸ್ಥಾನಗಳಿಗೆ (ಅಂದರೆ ನೇರವಾಗಿ ಒಂದು ಗಡ್ಡೆಗೆ) ಅಥವಾ ನಿಯಂತ್ರಿಸಲ್ಪಟ್ಟ ವಿತರಣಾ ಪ್ರಮಾಣಗಳಿಗೆ (ಇನ್ಸುಲಿನ್, ಪಾಲಿಕಾರ್ಪಿನ್, ಗರ್ಭನಿರೋಧಕಗಳು) ಬಳಸಲ್ಪಡುತ್ತದೆ;

ಡ್ರಗ್ (ಔಷಧಗಳ) ವಿಲೇವಾರಿ

ಬದಲಾಯಿಸಿ

ಡ್ರಗ್ ವಿತರಣೆ ಸಾಧನಗಳಂತೆ ಪಾಲಿಮರೀಕೃತ ವಸ್ತುಗಳ ಬಳಕೆಗೆ ಒಂದು ಹೊಸ ಆಯಾಮವು ಜೈವಿಕ ವಿಘಟನೆಯನ್ನು ಒಂದು ವ್ಯವಸ್ಥೆಯೊಳಗೆ ಸಂಯೋಜನ ಮಾಡುವುದಕ್ಕೆ ಅವಶ್ಯಕವಾದ ಸಾಧನಗಳನ್ನು ಒಳಗೊಳ್ಳುತ್ತದೆ. ಹಲವಾರು ಸಂಖ್ಯೆಯ ವಿಘಟನೆ ಹೊಂದಬಲ್ಲ ಪಾಲಿಮರ್‌ಗಳು ಹಲವಾರು ವಿಧದ ಸಂಶ್ಲೇಷಿತ ಮತ್ತು ನೈಸರ್ಗಿಕ ದ್ರವ್ಯಗಳನ್ನು ಒಳಗೊಂಡಂತೆ ಈ ಉದ್ದೇಶಗಳಿಗಾಗಿ ಸಂಭಾವ್ಯವಾಗಿ ಉಪಯೋಗಕರವಾಗಿರುತ್ತವೆ. ವೈದ್ಯಕೀಯದಲ್ಲಿ ಉದ್ದೇಶಿತವಾಗಿ ವಿಘಟನೆ ಹೊಂದಬಲ್ಲ ಪಾಲಿಮರ್‌ಗಳ ಬಳಕೆಯು ಡ್ರಗ್ ವಿತರಣೆ ವ್ಯವಸ್ಥೆಗಳಲ್ಲಿ ಹೊಸ ಸಂಶೋಧನೆಗಳ ಜೊತೆ ಪ್ರಸಿದ್ಧಿಗೆ ಬಂದಿತು. ಡ್ರಗ್ ವಿತರಣೆಗಳ ಸಾಂಪ್ರದಾಯಿಕ ವಿಧಾನಗಳ ಕೊರತೆಗಳು, ಉದಾಹರಣೆಗೆ ಮಾತ್ರೆಗಳು ಅಥವಾ ಇಂಜೆಕ್ಷನ್ ಮೂಲಕ, ಸರಿಯಾಗಿ ತಿಳಿಯಲ್ಪಟ್ಟಿವೆ. ಒಂದು ಪ್ರಮಾಣವು ಅನ್ವಯಿಸಲ್ಪಟ್ಟಾಗ, ಪ್ಲಾಸ್ಮಾ ಹಂತಗಳು ವೃದ್ಧಿಯಾಗಲ್ಪಡುತ್ತವೆ ಆದರೆ ಇವುಗಳು ಡ್ರಗ್ ಪ್ರಮಾಣವು ಚಯಾಪಚಯಗೊಳ್ಳಲ್ಪಟ್ಟಾಗ ತ್ವರಿತವಾಗಿ ಕಡಿಮೆಯಾಗಲ್ಪಡುತ್ತವೆ ಮತ್ತು ತ್ವರಿತವಾಗಿ ಚಿಕಿತ್ಸಕ ಹಂತಗಳಿಂದ ಕೆಳಗಿಳಿಯಲ್ಪಡುತ್ತವೆ. ಮುಂದಿನ ಡ್ರಗ್ ಪ್ರಮಾಣವು ಪ್ಲಾಸ್ಮಾ ಹಂತವನ್ನು ಮತ್ತೊಮ್ಮೆ ಹೆಚ್ಚಿನ ಮಟ್ಟಕ್ಕೆ ಕರೆದೊಯ್ಯುತ್ತದೆ ಮತ್ತು ದೃಷ್ಟಿಗೋಚರ ವ್ಯಾಪ್ತಿಗಿಂತ ಹೊರಗಿರುವ ಡ್ರಗ್ ಪ್ಲಾಸ್ಮಾ ಹಂತಗಳ ಹೆಚ್ಚಿನ ಪ್ರಮಾಣಗಳ ಜೊತೆ ಒಂದು ಚಕ್ರೀಯ ಮಾದರಿಯು ಸ್ಥಾಪಿತಗೊಳ್ಳಲ್ಪಡುತ್ತದೆ. ಅದಕ್ಕೆ ಜೊತೆಯಾಗಿ, ಡ್ರಗ್ ಸಾಮಾನ್ಯವಾಗಿ ದೇಹದೆಲ್ಲೆಡೆಗೂ ವ್ಯಾಪಿಸಲ್ಪಡುತ್ತದೆ ಮತ್ತು ಇದು ಯಾವ ನಿರ್ದಿಷ್ಟವಾದ ಪ್ರದೇಶದಲ್ಲಿ ಅವಶ್ಯಕವಾಗಿರುತ್ತದೆಯೋ ಅದಕ್ಕೆ ಉದ್ದೇಶಿತವಾಗಿರುವುದಿಲ್ಲ. ಈ ಸಮಸ್ಯೆಗಳಿಗೆ ಹಲವಾರು ಸಂಭವನೀಯ ಪರಿಹಾರಗಳಲ್ಲಿ ಒಂದು ಯಾವುದೆಂದರೆ ನಿಯಂತ್ರಿತಗೊಳ್ಳಲ್ಪಟ್ಟ ಡ್ರಗ್ ವಿತರಣಾ ವ್ಯವಸ್ಥೆಗಳು, ಇದರಿಂದ ಡ್ರಗ್ ಒಂದು ಸ್ಥಿರವಾದ , ಪೂರ್ವನಿರ್ಧಾರಿತ ಪ್ರಮಾಣದಲ್ಲಿ ಬಿಡುಗಡೆಯಾಗಲ್ಪಡುತ್ತದೆ ಮತ್ತು ಸಂಭವನೀಯವಾಗಿ ಒಂದು ನಿರ್ದಿಷ್ಟ ಸ್ಥಾನಕ್ಕೆ ಉದ್ದೇಶಿತವಾಗಲ್ಪಡುತ್ತದೆ. ಒಂದು ಪ್ರಮುಖವಾದ ವಿಧಾನವೆಂದರೆ, ಒಂದು ಪಾಲಿಮರ್ ಒಳತೊಗಲಿನಲ್ಲಿ ಶೇಖರಿಸಲ್ಪಟ್ಟ ಡ್ರಗ್ ವಿಧಾನವಾಗಿದೆ ಅಥವಾ ಒಂದು ಪಾಲಿಮರ್ ಜೀವ್ಯವಶೇಷದಲ್ಲಿ ಕೋಶೀಕರಿಸಲ್ಪಡುತ್ತದೆ ಮತ್ತು ಅಲ್ಲಿ ಡ್ರಗ್ ಅಂತರ್ನಿವೇಶನವನ್ನು ಅನುಸರಿಸುತ್ತ ಅಂಗಾಂಶದೊಳಗೆ ಸಾಂದ್ರೀಕರಿಸಲ್ಪಡುತ್ತದೆ. ಕೆಲವು ದೃಷ್ಟಾಂತಗಳಲ್ಲಿ, ವಿತರಣೆಯ ಯಾಂತ್ರೀಕೃತೆಗೆ ಪಾಲಿಮರ್ ಸವೆತ ಅಥವಾ ವಿಘಟನೆಗೆ ಕಾರಣವಾಗುವಂತೆ ಮಾಡುತ್ತದೆ. ಪಾಲಿ (ಲ್ಯಾಕ್ಟಿಕ್ ಆಮ್ಲ) ಮತ್ತು ಪಾಲಿ (ಆರ್ಥೋ ಎಸ್ಟರ್)ಗಳಂತಹ ವಿಘಟನಾ ಪಾಲಿಮರ್‌ಗಳು ಡ್ರಗ್ ವಿತರಣಾ ವ್ಯವಸ್ಥೆಗಳಿಗೆ ಬಳಸಲ್ಪಡುತ್ತವೆ.ನಿರ್ದಿಷ್ಟವಾದ ವಿಲಯನ (ಕರಗುವ) ಪಾಲಿಮರ್‌ಗಳು ಉದ್ದೇಶಿತ ಡ್ರಗ್‌ಗಳಿಗೆ ಗ್ರಾಹಕವಾಗಿ ಬಳಸಿಕೊಳ್ಳಲ್ಪಡುತ್ತವೆ. ಒಂದು ಗುಂಪು ಬದಿಯ ಗುಂಪುಗಳಿಗೆ ಸಂಯೋಜಿಸಲ್ಪಟ್ಟ ಪಾಲಿಮರ್‌ಗಳ ಹಲವಾರು ವಿಧಗಳ ಬಳಕೆಯನ್ನು ವರದಿ ಮಾಡಿತು, ಬಂಧಗಳ ವಿಚ್ಛೇದಗಳನ್ನು ಅನುಸರಿಸಿ ಬಿಡುಗಡೆಯಾಗಲ್ಪಡುವ ಕೆಲವು ನಿರ್ದಿಷ್ಟವಾದ ಡ್ರಗ್‌ಗಳು ಅವುಗಳನ್ನು ಬೆನ್ನು ಮೂಳೆಗೆ ಸಂಯೋಜಿಸುತ್ತವೆ. ಇಲ್ಲಿ ಉದ್ದೆಶಿತತೆ ಅಥವಾ ಆಯ್ಕೆ ಮಾಡಿಕೊಳ್ಳುವಿಕೆಯು ಬಂಧಗಳನ್ನು ಬಳಸಿಕೊಂಡು ಸಾಧಿಸಲ್ಪಡುತ್ತವೆ, ಅವು ಕೆಲವು ನಿರ್ದಿಷ್ಟವಾದ ಸಂದರ್ಭಗಳ ಅಡಿಯಲ್ಲಿ ವಿಚ್ಛೇದಗೊಳ್ಳಲ್ಪಡುತ್ತದೆ, ಉದಾಹರಣೆಗೆ ಮೂತ್ರಪಿಂಡಗಳ ಕಿಣ್ವಗಳ ಮೂಲಕ, ಅವುಗಳು ತಮ್ಮ ನಿರ್ದಿಷ್ಟವಾದ ಕಾರ್ಯಗಳ ಸ್ಥಾನದಲ್ಲಿ ಕೇವಲ ಡ್ರಗ್ ಅನ್ನು ಮಾತ್ರ ಬಿಡುಗಡೆ ಮಾಡುತ್ತವೆ. ಒಂದು ಪ್ಲಾಸ್ಟೀಕೃತ, ಜೈವಿಕ ವಿಘಟಿತ ಪಾಲಿಮರಿಕ್ ವಸ್ತುವಿನ ವಿನ್ಯಾಸವು ಡ್ರಗ್-ವಿತರಣಾ ವ್ಯವಸ್ಥೆಯ ಒಂದು ಅನ್ವಯಿಕೆಯಾಗಿ ಪ್ರಯತ್ನಿಸಲ್ಪಟ್ಟಿತು. ಒಂದು ಪಾಲಿ (-ಲ್ಯಾಕ್ಟಿಕ್ ಆಮ್ಲ) ಒಲಿಗೆಮೆರ್ ಇದು 1,2-ಪ್ರಾಪಿಲಿನ್ ಗ್ಲೈಕೋಲ್ ಮತ್ತು ಗ್ಲೈಸೆರಾಲ್ ಜೊತೆಗೆ ಪ್ಲಾಸ್ಟೀಕೃತವಾಗಲ್ಪಡುತ್ತದೆ. ಎರಡನೆಯ ಪ್ಲಾಸ್ಟೀಕೃತವು ಕಡಿಮೆ ಪ್ರಮಾಣದ ಸಾಮರಸ್ಯವನ್ನು ತೋರಿಸಿತು, ಅದೇ ರೀತಿಯಾಗಿ 1,2-ಪ್ರಾಪಿಲಿನ್ ಗ್ಲೈಕೋಲ್ ಇದು ಹೆಚ್ಚಿನ ಮಟ್ಟದ ಸಾಂದ್ರತೆಗಳ ಜೊತೆಗಿನ ಪಾಲಿಮರ್ ಜೊತೆ ಸಾಮರಸ್ಯವಾಗಿದೆ. ತಯಾರಿಸಲ್ಪಟ್ಟ ಮಿಶ್ರಣವು ಗಣನೀಯ ಪ್ರಮಾಣದ ಸಂಸ್ಕಾರಕ ತಾಪಮಾನಗಳನ್ನು ಪ್ರದರ್ಶಿಸಿತು ಮತ್ತು ಬಿಡುಗಡೆಯ ಪ್ರಾಥಮಿಕ ಹಂತಗಳಲ್ಲಿ ಸ್ಯಾಲಿಸಿಲಿಕ್ ಆಮ್ಲದ ವಿತರಣೆಗಳನ್ನು ಹೆಚ್ಚು ಮಾಡಿತು. ಆದ್ದರಿಂದ ಇದು ಡ್ರಗ್ ವಿತರಣಾ ವ್ಯವಸ್ಥೆಗಳನ್ನು ನಿರ್ಮಿಸುವುದಕ್ಕೆ ಸಹಾಯಕವಾಗಿರುತ್ತದೆ ಎಂಬಂತೆ ಭಾವಿಸಲಾಯಿತು, ಅದು ಸುಲಭವಾದ ಮತ್ತು ಸುರಕ್ಷಿತವಾದ ಸಂಸ್ಕರಣಕ್ಕೆ ಸಹಾಯ ಮಾಡುತ್ತದೆ, ಮತ್ತು ಬಿಡುಗಡೆಯು ಪೂರ್ಣಗೊಂಡ ನಂತರ ಶಸ್ತ್ರಚಿಕಿತ್ಸೆಯ ರಿಟ್ರೀವಲ್‌ನ ಅವಶ್ಯಕತೆಯ ಹೊರತಾಗಿ ದೇಹದ ಕುಹರದೊಳಗೆ ಸೇರಿಸಲ್ಪಡುತ್ತದೆ. ಅದಕ್ಕೂ ಹೆಚ್ಚಾಗಿ, ಡ್ರಗ್ ವಿತರಣೆಯ ವಿಭಿನ್ನಾತ್ಮಕ ಪ್ರಮಾಣಗಳು ದೃಷ್ಟಾಂತಗಳಿಗೆ ಆಸಕ್ತಿಯನ್ನು ಅಗಾಧಗೊಳಿಸಬಹುದು, ಅಲ್ಲಿ ಚಿಕಿತ್ಸೆಯ ಪ್ರಾರಂಭದಲ್ಲಿ ವರ್ಧಿತವಾಗಲ್ಪಟ್ಟ ಡ್ರಗ್ ಪ್ರಮಾಣಗಳು ಅವಶ್ಯಕವಾಗಿರುತ್ತವೆ.

ಶಸ್ತ್ರಚಿಕಿತ್ಸಾ ಹೊಲಿಗೆಗಳು

ಬದಲಾಯಿಸಿ

ರಚನಾತ್ಮಕ ದೃಢತೆಯ ಹಾನಿಯುಲ್ಲಿ ಅಂಗಾಂಶ ಹಾಳಾಗುವಿಕೆಯ ಪರಿಣಾಮ ಕಂಡುಬರುತ್ತದೆ,ಉದಾಹರಾಣೆಗೆ ಮೃದುವಾದ ಅಂಗದಲ್ಲಿ ಆಳವಾದ ಗಾಯ ಅಥವಾ ಎಲುಬಿನ ಮುರಿತದಲ್ಲಿ ಸ್ವಂತವಾಗಿ ಗುಣ ಹೊಂದುವ ಅಥವಾ ಹೊಂದದಿರುವುದಕ್ಕೆ ನೆರವಾಗದೇ ಇರಬಹುದು. ಅಂಗಾಂಶ ವಶದಲ್ಲಿಟ್ಟುಕೊಳ್ಳುವುದಕ್ಕೆ ಕೆಲವು ವಸ್ತುಗಳು ಅಥವಾ ಸಲಕರಣೆಗಳನ್ನು ಒಳತೂರಿಸಿದಾಗ ಗುಣಮಾಡುವ ಪ್ರಕ್ರಿಯೆಯನ್ನು ಹೆಚ್ಚು ಸುಲಭಗೊಳಿಸಬಹುದು. ಆಳ ಮತ್ತು ಆಳವಿಲ್ಲದ ಗಾಯ ಇವೆರಡನ್ನು ಗುಣಪಡಿಸಲು ಹೊಲಿಗೆಗಳನ್ನು ಬಳಸಲಾಗುತ್ತದೆ. ಒಮ್ಮೆ ಗುಣವಾದರೇ,ಹೊಲಿಗೆಗಳು ಅನಗತ್ಯವಾಗುತ್ತವೆ ಮತ್ತು ಗುಣವಾದ ಅಂಗಾಂಶಗಳ ಮೇಲೆ ಅನಪೇಕ್ಷಿತ ನಿರ್ಬಂಧ ಹೇರಬಹುದು ಇದು ದೈಹಿಕವಾಗಿ ಅಥವಾ ವಿಘಟನೆಯಿಂದ ಅ ಸ್ಥಳದಿಂದ ವಸ್ತುವನ್ನು ತೊಲಗಿಸಲು ಅರ್ಹವಾಗಿದೆ. ವಿಲೀನಗೊಳ್ಳಬಹುದಾದ ಸಿಂಥೆಟಿಕ್ ಹೊಲಿಗೆಗಳನ್ನು 1960ರಲ್ಲಿ ಅಭಿವೃದ್ಧಿ ಪಡಿಸಲಾಯಿತು, ಅಂಗಾಂಶಗಳಲ್ಲಿ ಜೈವಿಕ ಹೊಂದಾಣಿಕೆಯ ಸಾಧ್ಯತೆ ಇರುವುದರಿಂದ ಇದನ್ನು ಬಳಸಲಾಯಿತು, ಇವುಗಳನ್ನು ಈಗ ಟ್ರ್ಯಾಚಿಯೊಬ್ರಾಂಚಿಯಲ್ ಶಸ್ತ್ರಚಿಕಿತ್ಸೆ ಹಾಗೂ ಸಾಮಾನ್ಯವಾದ ಶಸ್ತ್ರಚಿಕಿತ್ಸೆಯಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಇವುಗಳು ಬಹುವಿಧನಾರಿನ ಹೊಲಿಗೆಗಳಾಗಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಪಾಲಿಗ್ಲೈಕೊಸೈಡ್ (ಪಿಜಿಎ), ಪಾಲಿ- -ಲ್ಯಾಕ್ಟಿಡ್(ಪಿಎಲ್‌ಎ) ಮತ್ತು ಇದರ ಕೊಪಾಲೀಮರ್‌‌ಗಳು, ಮತ್ತು ಪಾಲಿಗ್ಯಾಕ್ಟಿನ್‌ಗಳು ಹೆಚ್ಚು ಪ್ರಸಿದ್ಧವಾಗಿವೆ ಮತ್ತು ಈಗ ವಾಣಿಜ್ಯೀಕವಾಗಿ ಲಭ್ಯವಿದೆ. ಹೀಗೀದ್ದಾಗ್ಯೂ, ನಿರಂತರ ಹೊಲಿಗೆಗೆ ಒರಟಾದ ಮೇಲ್ಮೈ ಹೊಂದಿದ ಹೆಣಿದ ಹೊಲಿಗೆಗಳು ಉಪಯುಕ್ತವಾಗುವಿದಿಲ್ಲ. ಎಕನಾರು ಹೊಲಿಗೆಗಳು ನಯವಾದ ಮೇಲ್ಮೈ ಹೊಂದಿದ್ದು ನಿರಂತರ ಹೊಲಿಗೆಗೆ ಅರ್ಹವಾಗಿದೆ. ಏಕನಾರು ಹೊಲಿಗೆಗೆ, ಪಿಜಿಎ ಅಥವಾ ಪಿಎಲ್‌ಎ ಹೆಚ್ಚು ಗಟ್ಟಿಯಾಗಿವೆ ಮತ್ತು ಪ್ಲೆಕ್ಸಿಬಲ್ ಆಗಿದೆ. ಕಡಿಮೆ ಬೆಂಡಾಗುವ ಗುಣ ಹೊಂದಿರುವುದರಿಂದ ಹೆಚ್ಚು ಪ್ಲಿಕ್ಸಿಬಲ್ ಆದ ಪಾಲಿಡೈಯಾಕ್ಸಾನೊನ್ಸ್ ಮತ್ತು ಪಾಲಿಗ್ಲೈಕೊನೆಟ್ಸ್‌ಗಳನ್ನು ಹೊಲಿಗೆಗಳಿಗೆ ಬಳಸಬಹುದು. ಇದಲ್ಲದೆ, ಕೊಪಾಲೀಮರ್‌‌ಗಳಾದ ಲ್ಯಾಕ್ಟಿಡ್ ಮತ್ತು ε-ಕ್ಯಾಪ್ರೊಲೆಕ್ಟೋನ್-ಪಾಲಿ(ಸಿಎಲ್-ಎಲ್‌ಎ) ಗಳು ಜೈವಿಕವಾಗಿ ವಿಲೀನಗೊಳ್ಳುವ ಎಲಾಸ್ಟಿಕ್ ವಸ್ತುಗಳು ಮತ್ತು ಇವುಗಳನ್ನು ಚಿಕಿತ್ಸೆಗೆ ಹೇಗೆ ಬಳಸಿಕೊಳ್ಳಬಹುದೆಂಬುದನ್ನು ಅದ್ಯಯನ ನಡೆಸಲಾಗಿದೆ.

ಮೂಳೆ ಸ್ಥೀರಿಕರಣ

ಬದಲಾಯಿಸಿ

ಮೂಳೆಯ ಗಾಯ ಗುಣವಾಗುವುದಕ್ಕೆ ಯಾವುದೇ ತೊಂದರೆಯಾಗದಂತೆ ಮುರಿತದ ಚಿಕೆತ್ಸೆಯಲ್ಲಿ ಲೋಹ ಅಳವಡಿಕೆ ಯಶಸ್ವಿಯಾಗಿದೆ. ಆದರೂ ಮೂಳೆಯ ಹೊರಗಿನ ಭಾಗ ಮತ್ತು ಸ್ಟೀಲ್ ತುಂಬಾ ವಿಭಿನ್ನ ಯಾಂತ್ರಿಕೃತ ಲಕ್ಷಣ ಹೊಂದಿದೆ. ಮೂಳೆಯ ಪುನಶ್ಚೈತನ್ಯಶಕ್ತಿಯ ಸ್ಥಿರತೆ ಕೇವಲ 1/10 ಅಳವಡಿಸಿದ ಸ್ಟೀಲ್‌ನ ಒತ್ತಡದ ಶಕ್ತಿಯು 10 ಪಟ್ಟು ಕಡಿಮೆ. ಹಾಗೆಯೇ, ಅಳವಡಿಸಿದ ಲೋಹ ತೆಗೆಯುವಿಕೆಯಿಂದ ದುರ್ಬಲ ಮೂಳೆ ಮತ್ತೆ ಮುರಿತಕ್ಕೊಳಗಾಗಬಹುದು. ಜೈವಿಕವಾಗಿ ವಿಘಟನೆಯಾಗಬಹುದಾದ ಅಳವಡಿಕೆಗಳು ಮೂಳೆ ಗುಣಪಡಿಸುವಲ್ಲಿ ಶೀಘ್ರವಾಗಿ ಪ್ರಕ್ರಿಯೆ ನಡೆಸುತ್ತವೆ,ವಸ್ತುವಿನ ಭಾರ ಹೊರುವುದನ್ನು ಕಡಿಮೆಗೊಳಿಸುತ್ತದೆ. ತಿಂಗಳುಗಳ ನಂತರ ವಸ್ತು ಸಂಪೂರ್ಣವಾಗಿ ಕಣ್ಮರೆಯಾಗಿ ಎರಡನೇಯ ಶಸ್ತ್ರಚಿಕಿತ್ಸೆ ಅಗತ್ಯವಿರವುದಿಲ್ಲ. ಪಿಜಿಎ, ಪಿಎಲ್‌ಎ, ಪಾಲಿಡೈಯಾಕ್ಸಾನೊನ್ಸ್ ಮತ್ತು ಪಿಎಚ್‌ಡಿಗಳು ಈ ಸ್ಥಳದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಚಿಕಿತ್ಸಾತ್ಮಕ ಅನ್ವಯಿಕೆಯಲ್ಲಿ,ಪಾಲಿಡೈಯಾಕ್ಸಾನೊನ್ಸ್‌ನ್ನು ಮೂಳೆನಾರು ಹೆಚ್ಚಿಸಲು ,ಮೂಳೆನಾರು ಹೊಲಿಗೆಯ ಸುರಕ್ಷತೆಗೆ, ಆಂತರಿಕವಾಗಿ ಜೋಡಿಸುವ ಹೊಲಿಗೆಗೆ ಮತ್ತು ಆಂತರಿಕ ಹೊಲಿಗೆಯು ಶಸ್ತ್ರಚಿಕಿತ್ಸೆಯ ನಂತರ ಮೊದಲಿನ ಅತಿರೇಕದ ಚಲನೆಗಾಗಿ ಶಿಫಾರಸು ಮಾಡಲಾಗುತ್ತದೆ. ಜೈವಿಕವಾಗಿ ವಿಘಟನೆಯಾಗುವ ಪಾಲಿಮರ್‌ಗಳು ಇತರ ಅನೇಕ ಅನ್ಚಯಿಕಗಳಿಗೆ ಉಪಯುಕ್ತವಾಗಿವೆ. ಮಜ್ಜೆ ವಿಭಾಜಕ ಅಟೋಲೊಗಸ್ ಮೂಳೆ ವಸ್ತು ರಕ್ಷಿಸಲು ಸಹಾಯ ಮಾಡಬಹುದು. ಮೂಳೆ ಮಜ್ಜೆ ಮುಚ್ಚಲು ಒಂದು ಪ್ಲಗ್‌ನ್ನು ಎಂಡೊಪ್ರೊಸ್ಥೆಟಿಕ್ ಕೀಲು ಬದಲಾವಣೆಗೆ ಬಳಸಿಕೊಳ್ಳಲಾಗುತ್ತದೆ. ಯಾಂತ್ರೀಕೃತ ಭಾರಕ್ಕೆ ಹೊರತಾಗಿ ದೊಡ್ಡ ಪ್ರಮಾಣದ ಮೂಳೆ ದೋಷ ಸರಿಪಡಿಸಲು ಫೈಬರ್‌ಗಳನ್ನು ಉಪಯೋಗಿಸಿಕೊಳ್ಳಲಾಗುತ್ತದೆ.

ನಾಳ ಕಸಿಗಳು

ಬದಲಾಯಿಸಿ

ಹಲವಾರು ಸಂಶೋಧನೆಗಳು ಅಂಗ ನ್ಯೂನತೆ ಸರಿಪಡಿಸುವ ಶಸ್ತ್ರ ಚಿಕಿತ್ಸೆಗೆ ಸಣ್ಣ ವ್ಯಾಸದ ನಾಳವನ್ನು ಅಭಿವೃದ್ಧಿ ಪಡಿಸತೊಡಗಿದ್ದಾರೆ. ಒಂದು ಗುಂಪು ಏಕೀಕೃತವಾದ ಮ್ಯಾಟ್ರಿಸ್‌ನೊಂದಿಗೆ ಸಣ್ಣ ವ್ಯಾಸವುಳ್ಳ ನಾಳ ಪ್ರೊಥೆಸಿಸ್ ರಚಿಸಿದ್ದಾರೆ,ಬೆಳೆಯುತ್ತಿರುವ ಅನಾಸ್ಟೊಮೊಟಿಕ್ ನಿಯೊಂಟಿಮಾದೊಳಗೆ ವಿಲೀನವಾಗಬಹುದು. ಜೆಲಟಿನ್–ಹೆಪ್ಯಾರಿನ್ ಸಂಕೀರ್ಣವು ಪರಿಣಾಮಕಾರಿಯಾಗಿ ಕ್ರಾಸ್-ಲಿಂಕ್ ಮಾಡಲ್ಪಟ್ಟಾಗ, ಅದು ಏಕಕಾಲದಲ್ಲಿಯೇ ಒಂದು ತಾತ್ಕಾಲಿಕ ಆ‍ಯ್‌೦ಟಿ-ತ್ರೋಂಬೋಜೆನಿಕ್ ಮೇಲ್ಮೈ ಹಾಗೂ ಒಂದು ಅತ್ಯುತ್ತಮ ಅನಾಸ್ಟೋಮೆಟಿಕ್ ನಿಯೋಇಂಟಿಮಾಗೆ ಸಬ್‌ಸ್ಟ್ರಕ್ಚರ್ ಆಗಿ ಕೆಲಸ ಮಾಡಬಹುದು ಎಂಬುದನ್ನು ಕಂಡುಕೊಳ್ಳಲಾಯಿತು.

ಪ್ರತಿ-ಹೊಂದಾಣಿಕೆ

ಬದಲಾಯಿಸಿ

ಶಸ್ತ್ರಚಿಕಿತ್ಸೆಯಾದ ನಂತರದಲ್ಲಿ ಅಂಗಾಂಶ ಹೊಂದಾಣಿಕೆಯು ಗಂಭೀರವಾದ ತೊಂದರೆಗೆ ಕಾರಣವಾಗಬಹುದು. ಗಾಯಗೊಂಡ ಮೃದು ಅಂಗಾಂಶಗಳ ಮೇಲೆ ಬಿಗಿಯಾಗಿ ಆವರಿಸಿಕೊಳ್ಳಬೇಕಾದ ವಸ್ತುಗಳು ಸುರಕ್ಷಿತವಾಗಿ ಅಂಗಾಂಶ ಹೊಂದಾಣಿಕೆಯಾಗುವಂತೆ ವಿಸ್ತಾರಗೊಳ್ಳಬಲ್ಲ ಮತ್ತು ಗಟ್ಟಿಯಾಗಿರಬೇಕು ಮತ್ತು ಗಾಯಗೊಂಡ ಅಂಗಗಳು ಸಂಪೂರ್ಣವಾಗಿ ಪುನಶ್ಚೇತನಗೊಂಡ ನಂತರ ಜೈವಿಕವಿಘಟನೆ ಮತ್ತು ಪುನರ್‌ವಿಲೀನಗೊಳ್ಳಬಲ್ಲಂತವುಗಳಾಗಿರಬೇಕು. ಹೊಸದಾಗಿ ರಚಿಸಲಾದ ಅಂಗಾಂಶ ಹೊಂದಾಣಿಕೆ ಪ್ರತಿಬಂಧಕ ವಸ್ತುವು ಗಾಯ ಗುಣವಾಗುವ ಪ್ರಮಾಣ ಮತ್ತು ನಾನ್‌ಟಾಕ್ಸಿಸಿಟಿಯೊಂದಿಗೆ ಹೊಂದಾಣಿಕೆಯಲ್ಲಿ ಹೊಂದಿಕೊಳ್ಳದ ಮೇಲ್ಮೈ ಗುಣಲಕ್ಷಣಗಳು,ಜೈವಿಕವಾಗಿ ಹೊಂದಾಣಿಕೆಯಾಗುವ ಸಾಧ್ಯತೆ,ಜೈವಿಕ ವಿಘಟನೆಯಂತಹ ಹಲವಾರು ಅವಶ್ಯಕತೆಗಳನ್ನು ಪೂರೈಸಲು ಒಂದು ತಂಡವು ಪೋಟೋಕ್ಯುರೆಬಲ್ ಮ್ಯುಕೊಪಾಲಿಸ್ಯಾಚುರೈಟ್ಸ್ ಅಭಿವೃದ್ಧಿ ಪಡಿಸಿದ್ದಾರೆ. ಮ್ಯುಕೊಪಾಲಿಸ್ಯಾಚುರೈಟ್ಸ್ (ಹ್ಯಾಲುರಾನಿಕ್ ಆ‍ಯ್‌ಸಿಡ್ ಮತ್ತು ಕಾಂಡ್ರೊನಿಥಿನ್ ಸಲ್ಫೇಟ್) ಸಿನಾಮಿಕ್ ಆಮ್ಲದ ಲವಣ ಅಥವಾ ಥಿಮಿನ್‌ನಂತಹ ಫೋಟೋರಿಯಾಕ್ಟಿವ್ ಗುಂಪಿನೊಂದಿಗೆ ಕಾರ್ಯನಿರ್ವಹಿಸುತ್ತದೆ,ಪೋಟೋರಿಯಾಕ್ಟಿವ್ ಗುಂಪಿನ ಅಣುಗಳ ನಡುವಣ ಪೋಟೋಡಿಮರೈಸೇಶನ್ ಮೂಲಕ ಯುವಿ ಹೊಳೆಯುವಿಕೆಯು ಜಲದಲ್ಲಿ ಕರಗದ ಅರೆ ಘನರೂಪದ ದ್ರಾವಣ ಉತ್ಪಾದಿಸುತ್ತದೆ. ಹೆಚ್ಚಿನ ನೀರಿನಿಂದ ಉಬ್ಬಬಲ್ಲ ಹಾಗೂ ವಿಸ್ತಾರಗೊಳ್ಳಬಲ್ಲ ಸಾಮರ್ಥ್ಯವಿದ್ದ, ಕಡಿಮೆ ಸಬ್‌ಸ್ಟಿಟ್ಯೂಶನ್ ಮಟ್ಟವಿರುವ ಬೆಳಕಿನಿಂದ ಪ್ರಕ್ರಿಯೆಗೊಳಿಸಲ್ಪಟ್ಟ ಪದರಗಳು ಅಂಗಾಂಶ ಅಂಟಿಕೊಳ್ಳುವಿಕೆಯನ್ನು ತಡೆದವು ಮತ್ತು ಹೆಚ್ಚಿನ ಜೈವಿಕ ವಿಘಟನಾ ಸಾಧ್ಯತೆಯನ್ನು ಪ್ರದರ್ಶಿಸಿದವು. ಹೊಸದಾಗಿ ರಚಿತವಾದ ಮ್ಯುಕೊಪಾಲಿಸ್ಯಾಚುರೈಟ್ಸ್ ಅರೆ ಘನರೂಪದ ದ್ರಾವಣಗಳು ಬಯೋಆಕ್ಟಿವ್ ಕ್ರಮದಲ್ಲಿ ಗಾಯಗೊಂಡ ಅಂಗಗಳ ಸರಿಪಡಿಸಿವಿಕೆಯಲ್ಲಿ ನೆರವಾಗಬಹುದೆಂದು ಇದು ಸೂಚಿಸುತ್ತದೆ.

ಕೃತಕ ಚರ್ಮ

ಬದಲಾಯಿಸಿ

ಸುಟ್ಟಗಾಯಗಳನ್ನು ಗುಣಪಡಿಸಲು,ಬದಲಿ ಚರ್ಮ ಅಥವಾ ಗಾಯಕ್ಕೆ ಔಷಧಿಯನ್ನು ಹಚ್ಚುವುದಕ್ಕೆ ಜೈವಿಕವಿಘನೆಗೊಳಗಾಗುವ ಪಾಲಿಮರಿಕ್ ವಸ್ತುಗಳನ್ನು ಇತ್ತಿಚೀಗೆ ಅಭಿವೃದ್ಧಿ ಪಡಿದಿದ್ದಾರೆ. ವಾಣಿಜ್ಯಿಕವಾಗಿ ಅಭಿವೃದ್ಧಿಪಡಿಸಲಾದ ಕೃತಕ ಚರ್ಮಗಳಲ್ಲಿ ಕೊಲೆಜೆನ್,ಚಿಟಿನ್ ಮತ್ತು ಪಾಲಿ-ಲ್ಯುಸೈನ್‌ನಂತಹ ಜೈವಿಕ ವಿಭಜನೆಗೊಳಗಾಗುವ ಪಾಲಿಮರ್‌ಗಳು ಬಳಕೆಯಾಗುತ್ತವೆ.ಒಂದು ತಂಡವು ಕೃತಕ ಚರ್ಮಕ್ಕಾಗಿ ಸಣ್ಣನಾರಿನ ಕೊಲೆಜೆನ್(ಎಫ್-ಕೊಲೆಜೆನ್)ಜೊತೆಗೆ ಜೆಲಟಿನ್ ಬಳಸಿ ಸ್ಪಾಂಜ್ ರೂಪದಲ್ಲಿ ಹೊಸ ಮಾದರಿಯ ಜೈವಿಕವಸ್ತು ಅಭಿವೃದ್ಧಿ ಪಡಿಸಿದ್ದಾರೆ. ಕ್ರಾಸ್‌ಲಿಂಕ್ಸ್‌ನಿಂದ ಸ್ಪಾಂಜ್ ಭೌತಿಕವಾಗಿ ಮತ್ತು ಚಯಾಪಚಯಿಯಂತೆ ಸ್ಥಿರವಾಗಿರುತ್ತದೆ. ಹಲವಾರು ಮಾದರಿಯ ಕೊಲೆಜಿನ್ ಆಧಾರಿತ ಕೃತಕ ಚರ್ಮವನ್ನು ಅಭಿವೃದ್ಧಿ ಪಡಿಸಲಾಗಿದ್ದರೂ, ಮೂಲ ಕೊಲೆಜಿನ್‌ನ ಕೆಲವು ಅನಪೇಕ್ಷಿತ ಲಕ್ಷಣಗಳು ಇಲ್ಲಿ ಕಂಡುಬಂದವು, ಉದಾಹರಣೆಗೆ ಫೈಬ್ರೋಬ್ಲಾಸ್ಟ್‌ಗಳಲ್ಲಿ ದಂಡದಂತಹ ಆಕಾರಗಳನ್ನುಂಟುಮಾಡಿತು ಮತ್ತು ಫೈಬ್ರೋಬ್ಲಾಸ್ಟ್‌ಗಳಲ್ಲಿನ ಕೊಲಾಜಿನೇಸ್ ವಂಶವಾಹಿಗಳ ವ್ಯಕ್ತಗೊಳ್ಳುವಿಕೆಯನ್ನು ಹೆಚ್ಚಿಸಿತು. ಜೆಲಟಿನ್‌ನೊಂದಿಗಿನ ಎಫ್‌-ಕೊಲೆಜಿನ್ ಈ ಸಮಸ್ಯೆಗಳನ್ನು ಮೀರುವಂತೆ ಕಂಡುಬಂತು. ಔಷಧ ಸಾಗಿಸುವ ಸಾಮರ್ಥ್ಯದ ಜೈವಿಕ ಸಿಂಥೆಟಿಕ್ ಗಾಯ ಡ್ರೆಸಿಂಗ್ ಮಾಡುವಿಕೆಯನ್ನು ಇನ್ನೊಂದು ತಂಡ ಅಭಿವೃದ್ಧಿಪಡಿಸಿದೆ. ಈ ಔಷಧೀಯವಾದ ಗಾಯದ ಡ್ರೆಸಿಂಗ್ ಮಾಡುವಿಕೆಯು ಚಿಟೊಸನ್‌ನಿಂದ ಪಡೆಯಲಾದ ಕೊಲೆಜಿನ್‌ನ ಸ್ಪಂಜಿನಂತಹ ಮಿಶ್ರಣದ ಶೀಟ್‌ನಿಂದ ರಚನೆಯಾಗಿದ್ದು, ಇದರ ಮೇಲೆ ಜೆಂಟಾಮೈಸಿನ್ ಸಲ್ಫೇಟ್‌ ಸೇರಿಸಿರುವ ಪಾಲಿಯುರೆಥೇನ್ ಪದರದಿಂದ ಹೊದಿಸಲಾಗಿರುತ್ತದೆ. ಪ್ರನಾಳೀಯ ಪರೀಕ್ಷೆಯಿಂದ ಗಾಯಕ್ಕೆ ಹಚ್ಚುವ ಔಷಧ ಬ್ಯಾಕ್ಟೀರಿಯಾ ಬೆಳೆಯುವುದನ್ನು ನಿರೋಧಿಸುತ್ತದೆ ಮತ್ತು ಕೋಶಕ್ಕೆ ಹಾನಿಯಾಗುವುದನ್ನು ಕಡಿಮೆಗೊಳಿಸುತ್ತದೆ. ಈ ಗಾಯಕ್ಕೆ ಹಚ್ಚುವ ಔಷಧವನ್ನು ಎರಡನೆಯ ಮಟ್ಟದ ಬಾಹ್ಯವಾಗಿ ಸುಟ್ಟಿರುವ ಗಾಯಗಳು, ಆಳವಾಗಿ ಸುಟ್ಟ ಗಾಯಗಳು,ಡೋನರ್ ಸೈಟ್ಸ್ ಮತ್ತು ಅಧಿಕ ವೇದನೆ ಪಡುತ್ತಿರುವ 80 ಕ್ಲಿನಿಕಲ್ ಪ್ರಕರಣಗಳಲ್ಲಿ ಪರೀಕ್ಷೆಗೆ ಬಳಸಿಕೊಳ್ಳಲಾಗಿದೆ ಮತ್ತು ಉತ್ತಮವಾದ ಫಲಿತಾಂಶವನ್ನು ಪಡೆಯಲಾಗಿದೆ. ಜೈವಿಕವೈದ್ಯಕೀಯ ಇಂಜನಿಯರಿಂಗ್‌ನಲ್ಲಿ ಕೃತಕ ಮಿಶ್ರಣ ಚರ್ಮ ಅಭಿವೃದ್ಧಿ ಕೂಡ ಪ್ರಮುಖ ಗುರಿಯಾಗಿದೆ. ಇಲ್ಲಿ, ಸಿಂಥೆಟಿಕ್ ಪಾಲೀಮರ್‌ಗಳು ಮತ್ತು ಜೀವಕೋಶ ಕೃಷಿಗಳನ್ನು ಒಟ್ಟಾಗಿಸಿ ಒಂದು ಸಿಂಥೆಟಿಕ್–ಜೈವಿಕ ಸಂಯುಕ್ತವನ್ನು ಉಂಟುಮಾಡುತ್ತವೆ. ಈ ಪ್ರಕರಣದಲ್ಲಿ,ಪ್ರನಾಳದಲ್ಲಿ ಬೆಳೆಯುತ್ತಿರುವ ಕೋಶಗಳು ಮತ್ತು ಅಂಗಾಂಶ ಕೃಷಿಗೆ ಜೈವಿಕ ವಿಘಟಕ ಪಾಲಿಮರ್‌ಗಳು ಕಾರ್ಯಸ್ಥಾನವಾಗಿ ಅವಶ್ಯವಾಗಬಹುದು.

1930 ಮತ್ತು 1940ರ ಅವಧಿಯಲ್ಲಿ ಹಸಿರುಮನೆ ಹೊದಿಕೆಗೆ,ಕೀಟನಿಯಂತ್ರಣ ಮತ್ತು ಹಸಿಗೊಬ್ಬರಕ್ಕಾಗಿ ಪ್ಲಾಸ್ಟಿಕ್ ಹಾಳೆಗಳನ್ನು ಪರಿಚಯಿಸಿದಂದಿನಿಂದ ಕೃಷಿ ಬಳಕೆಯಲ್ಲಿ ಪಾಲಿಮರ್‌ಗಳ ಬಳಕೆ ವ್ಯಾಪಕ ಪ್ರಮಾಣದಲ್ಲಿ ಬೆಳೆದಿದೆ. ಪಾಲಿಮರ್‌ಗಳ ಪ್ರಮುಖ ವರ್ಗಗಳಲ್ಲಿ ಇವೆಲ್ಲವು ಒಳಗೊಳ್ಳುತ್ತವೆ,ಉದಾಹರಣೆಗೆ ಪ್ಲಾಸ್ಟಿಕ್‌ಗಳು,ಲೇಪನ, ಎಲಾಸ್ಟೋಮರ್‌ಗಳು,ನಾರುಗಳು,ಮತ್ತು ನೀರಿನಲ್ಲಿ ಕರಗಬಲ್ಲ ಪಾಲಿಮರ್‌ಗಳು ಇವುಗಳನ್ನ ಕ್ರಿಮಿನಾಶಕ ಮತ್ತು ಪೌಷ್ಠಿಕತೆ,ಮಣ್ಣು ಹದಮಾಡುವಿಕೆ,ಬೀಜ ಸಂಸ್ಕರಣೆ,ಜೆಲ್ ಪ್ಲಾಂಟಿಗ್ ಮತ್ತು ಸಸ್ಯ ರಕ್ಷಣೆಯಲ್ಲಿ ನಿಯಂತ್ರಿತವಾಗಿ ಬಿಡುಗಡೆ ಮಾಡುವಲ್ಲಿ ಬಳಸಲಾಗುತ್ತದೆ. ಹಾಗಿದ್ದರೂ, ಜೈವಿಕವಾಗಿ ವಿಘಟನೆಗೊಳ್ಳಬಲ್ಲ ಪ್ಲ್ಯಾಸ್ಟಿಕ್‌ಗಳನ್ನು ಕೃಷಿಯಲ್ಲಿ ಬಳಸಲಾಗುವ ಹೊದಿಕೆಗಳು ಮತ್ತು ಸಸಿಯ ಚೀಲಗಳನ್ನು ಮಾಡಲು ಬಳಸಬಹುದಾಗಿದೆ ಕೂಡಾ. ಗೊಬ್ಬರ ತಯಾರಿಕೆಯಲ್ಲಿ ಕೂಡ ಇತರೆ ಜೈವಿಕವಿಘಟಕ ವಸ್ತುಗಳ ಜೊತೆಗೆ ಜೈವಿಕವಾಗಿ ವಿಘನೆಯಾಗುವ ಪ್ಲಾಸ್ಟಿಕ್ ಬಳಕೆ ಕೊನೆಯ ವಿಘಟನಕಾರಿಯಾಗುತ್ತದೆ ಮತ್ತು ಇದು ಮಣ್ಣು ಸುಧಾರಣೆಯಲ್ಲಿ ಉಪಯುಕ್ತ ವಸ್ತುವಾಗಿ ಬದಲಾಗುತ್ತದೆ.

ಮಲ್ಚಿಂಗ್ ಫಿಲ್ಮ್ಸ್

ಬದಲಾಯಿಸಿ

ಬೆಳೆಗಾರರಿಗೆ ಮಲ್ಚಸ್ ಪ್ಲಾಸ್ಟಿಕ್ ಫಿಲ್ಮ್ಸ್ ಬಳಕೆ ಮಾಡಲು ನೆರವಾಗಿ ಸಸ್ಯ ಬೆಳೆವಣಿಗೆಗೆ ಅನುಕೂಲವಾಗಿಸುತ್ತದೆ ಮತ್ತು ನಂತರದಲ್ಲಿ ಹೊಲದಲ್ಲಿ ಪೋಟೋಡಿಗ್ರೇಡ್ ಮಾಡುವುದರಿಂದ ತೆಗೆದುಹಾಕುವ ವೆಚ್ಚ ತಪ್ಪಿಸಬಹುದು. ತೇವಾಂಶ ರಕ್ಷಣೆಗೆ,ಕಳೆ ಕಡಿಮೆ ಮಾಡಲು ಮತ್ತು ಮಣ್ಣಿನ ತಾಪಮಾನ ಹೆಚ್ಚಿಸಲು,ಹಾಗೆಯೇ ಸಸ್ಯಗಳಲ್ಲಿ ಬೆಳೆಯುವ ಪ್ರಮಾಣ ಸುಧಾರಿಸಲು ಪ್ಲಾಸ್ಟಿಕ್ ಹೊದಿಕೆಯು ಅವಶ್ಯಕವಾಗಿವೆ. ಉದಾಹರಣೆಗೆ, ಕಪ್ಪು ಪಾಲಿಥೀನ್ ಮಲ್ಚ್ ಬಳಸಿದ ಕಾರಣ ಒಂದು ಕಲ್ಲಂಗಡಿ ಹೊಲದಲ್ಲಿ ಎರಡರಿಂದ ಮೂರರಷ್ಟು ಹೆಚ್ಚಿನ ಬೆಳೆ ಬೆಳೆದದ್ದು ಕಂಡುಬಂತು ಮತ್ತು ಎರಡು ವಾರ ಮೊದಲೇ ಹಣ್ಣಾದವು. ಕಳೆಗಳು ಮತ್ತು ಮಣ್ಣು ಗಟ್ಟಿಯಾಗಿವಿಕೆಯನ್ನು ಮಲ್ಚ್ ಬಳಕೆಯ ತಪ್ಪಿಸುತ್ತದೆ, ಹಾಗೆಯೇ ಬೇರಿಗೆ ಹಾನಿಯಾಗುವಿಕೆ, ಮತ್ತು ಕುಂಠಿತ ಬೆಳವಣಿಗೆ ಅಥವಾ ಸಸ್ಯಗಳು ಸಾಯುವಿಕೆಯನ್ನು ತಪ್ಪಿಸುತ್ತದೆ. ರಾಸಾಯನಿಕ ಗೊಬ್ಬರ ಮತ್ತು ನೀರಿನ ಅವಶ್ಯಕತೆಯನ್ನು ಕಡಿಮೆ ಮಾಡುತ್ತದೆ.ಸ್ಟಾರ್ಚ್-ಪಾಲಿವಿನಿಲ್ ಆಲ್ಕೊಹಾಲ್ ಪದರವನ್ನು ಜಲ-ನಿರೋಧಕ ಪಾಲಿಮರ್‌ನ ತೆಳು ಪದರದೊಂದಿಗೆ ಲೇಪನ ಮಾಡಿದಾಗ ವಿಘಟನೆಯಾಗದ ಕೃಷಿಗೆ ಬೇಕಾದ ಮಲ್ಚಿಂಗ್ ಪದರವನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಪಿಷ್ಟ-ಆಧಾರಿತ ಪಾಲಿಎಥಿಲಿನ್ ಪದರಗಳು 40%ವರೆಗೆ ಪಿಷ್ಟ,ಯೂರಿಯಾ,ಅಮೊನಿಯಾ,ಮತ್ತು ಕಡಿಮೆ ಪ್ರಮಾಣದ ಪಾಲಿಎಥಿಲಿನ್‌ಗಳ(ಎಲ್‌ಡಿಪಿಇ) ವಿವಿಧ ಭಾಗಗಳು ಮತ್ತು ಪಾಲಿ (ಎಥಿಲಿನ್-ಕೊ-ಆ‍ಯ್‌ಕ್ರಿಲಿಕ್-ಆ‍ಯ್‌ಸಿಡ್) (ಇಎ‌ಎ)ಇವುಗಳಿಂದ ಫಾರ್ಮುಲೇಟೆಡ್ ಆಗಿರುತ್ತದೆ ಮತ್ತು ಹೊಂದಿರುತ್ತವೆ. ಪಿಎ‌ಎ ಕಾಂಪ್ಯಾಕ್ಟಿಬಿಲೈಸರ್ ಆಗಿ ವರ್ತಿಸುತ್ತದೆ ಅಮೊನಿಯಾದ ಉಪಸ್ಥತಿಯಲ್ಲಿ ಪಿಷ್ಟ ಮತ್ತು ಪಿಇ ನಡುವೆ ಸಂಕೀರ್ಣವಾಗಿ ರೂಪುಗೊಳ್ಳುತ್ತದೆ. ಅದರಿಂದ ಉಂಟಾಗುವ ಸಮ್ಮಿಶ್ರಣವನ್ನು ಪದರಗಳನ್ನಾಗಿ ಮಾಡಲಾಗುತ್ತದೆ ಮತ್ತು ಅದರ ಭೌತಿಕ ಲಕ್ಷಣಗಳು ಎಲ್‌ಡಿಪಿಇಗೆ ಸಮೀಪದ್ದಾಗುತ್ತವೆ.ಒಂದು ಪ್ರಯೋಗದಲ್ಲಿ ಬಳಸಿ ಬಿಸಾಡಬಹುದಾದ ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ)ಪ್ಲಾಸ್ಟಿಕ್ಸ್‌ ಒಳಗಡೆ ಭರ್ತಿಸಾಧನವಾಗಿ ಸಂಯೋಜಿತ ಪಿಷ್ಟದ ದೊಡ್ಡ ಪ್ರಮಾಣಕ್ಕೆ ಮೂರು ಕಾರ್ಯವಿಧಾನಗಳನ್ನು ಬಳಸಲಾಗುತ್ತದೆ. ಮೊದಲನೆಯ ಕಾರ್ಯವಿಧಾನದಲ್ಲಿ,ನೀರಿನ NaOH ನೊಂದಿಗೆ ಪಿಷ್ಟ ಮಿಶ್ರಣ ಮಾಡಲಾಗುತ್ತದೆ ಮತ್ತು ನಂತರ ಸ್ವಲ್ಪ ಪ್ರಮಾಣದ ಕಾರ್ಬನ್ ಡಿಸಲ್ಫೈಡ್ ಸೇರಿಸಿ (ಪ್ರತೀ mol ಪಿಷ್ಟಕ್ಕೆ ಸಾಮಾನ್ಯವಾಗಿ 0.1 mol CS2). ಪಿಷ್ಟ ಸ್ಯಾಂತಿಕ್ ಆಮ್ಲದ ಲವಣದ ದ್ರಾವಣ ತಯಾರಿಸಲಾಗುತ್ತದೆ. ಈ ಪಿಷ್ಟ ಸ್ಯಾಂತಿಕ್ ಆಮ್ಲದ ಲವಣದ ದ್ರಾವಣಕ್ಕೆ ಪಿವಿಸಿ ಲ್ಯಾಟೆಕ್ಸ್ ಸೇರಿಸಲಾಗುತ್ತದೆ. NaNO2 ಮತ್ತು ಸ್ಪಟಿಕ ಸೇರಿಸುವುದರಿಂದ ಪಿಷ್ಟ ಸ್ಯಾಂತಿಕ್ ಆಮ್ಲದ ಲವಣ ಮತ್ತು ಪಿವಿಸಿ ರಾಳಗಳು ಘನರೂಪದಲ್ಲಿ ತಳಕ್ಕೆ ಇಳಿಯುತ್ತವೆ. ಇದು ಡೈಯಾಕ್ಟಿಲ್ ಸಲ್ಫೇಟ್ (DOP) ಜೊತೆಗೆ ಮಿಶ್ರವಾಗುವುದರಿಂದ ಉತ್ತಮವಾದ ಪುಡಿ ದೊರೆಯುತ್ತದೆ. ಎರಡನೆಯ ತಂತ್ರದಲ್ಲಿ (ಮಂದಗೊಳಿಸುವ ವಿಧಾನ), ಪಿವಿಸಿ ಲ್ಯಾಟೆಕ್ಸ್ ನೊಂದಿಗೆ ಮಿಶ್ರಣಗೊಳಿಸುವ ಮೊದಲು ನೀರಿನಲ್ಲಿ ಬಿಸಿಮಾಡುವುದರಿಂದ ಪೂರ್ಣ ಪಿಷ್ಟ ಜೆಲಟಿನೀಕರಣವಾಗುತ್ತದೆ. ನೀರಿದಿಂದ ಬೇರ್ಪಡಿಸಿದ ನಂತರ,ಒಣ ಉತ್ಪನ್ನವನ್ನು ಡಿಒಪಿಯೊಂದಿಗೆ ಮಿಶ್ರಣಮಾಡಲಾಗುವುದು.ಮೂರನೇಯ ಕಾರ್ಯವಿಧಾನದಲ್ಲಿ,ಪಿವಿಸಿ ಮತ್ತು ಡಿಒಪಿಯೊಂದಿಗೆ ಪಿಷ್ಟ ಒಣದಾಗಿ ಮಿಶ್ರಣಗೊಳ್ಳುತ್ತದೆ. ಈ ಪದರುಗಳು ವಿವಿಧ ಕೃಷಿ ಉಪಯೋಗಕ್ಕೆ ಉಪಯುಕ್ತವಾಗುತ್ತದೆ. ಇದಲ್ಲದೆ,ಪಾರದರ್ಶಕ ಪಾಲಿಎಥಿಲಿನ್ ಕಪ್ಪು ಅಥವಾ ಬೂದುಬಣ್ಣಕ್ಕಿಂತ ಉಷ್ಣ ಹೀರಿಕೊಳ್ಳುವಲ್ಲಿ ಹೆಚ್ಚು ಪರಿಣಾಮಕಾರಿಾಗಿದೆ ಮಣ್ಣಿನ ತಾಪಮಾನವು ಕಪ್ಪು ಪದರದ 1.7 – 2.7°ಸೆಗೆ ಹೋಲಿಸಿದಾಗ ಸ್ವಚ್ಛವಾದ ಪರದ ಕೆಳಗಡೆ 5.5°ಸೆ ವರೆಗೆ ಹೆಚ್ಚಾಗಬಹುದು. ಪಾಲಿಮರ್ ಪದರಗಳಿಂದ ವಿಕಿರಣಕಾರಿ ತಾಪವು ರಾತ್ರಿಯಲ್ಲಿ ಕಡಿಮೆಯಾಗಿ ಮಣ್ಣು ತಂಪಾಗುತ್ತದೆ. ಕೆಲವು ಸನ್ನಿವೇಷಗಳಲ್ಲಿ,ಪಾಲಿಎಥಿಲಿನ್ ಮಲ್ಚಸ್‌ಗಳ ಸೌರತಾಪಮಾನದಿಂದಾಗಿ ಕಳೆ ನಿಯಂತ್ರಣವಾದ ವರದಿಯಾಗುತ್ತದೆ. ಅದೇ ಸ್ಥಳದಲ್ಲಿ ಬಿಟ್ಟರೆ ಸಾಂಪ್ರಾದಾಯಿಕ ಪದರಗಳು ಕೊಯ್ಲಿನ ಸಮಯದಲ್ಲಿ ಅಥವಾ ಮುಂದಿನ ವರ್ಷದ ಬೇಸಾಯದ ಕೆಲಸದಲ್ಲಿ ಸಮಸ್ಯೆ ಉಂಟುಮಾಡಬಹುದು. ತೆಗೆದುಹಾಕುವುದು ಮತ್ತು ಎಸೆಯುವುದು ವೆಚ್ಚದಾಯಕ ಮತ್ತು ಅನಾನುಕೂಲಿಯಾಗಿದೆ. ಹೀಗಿದ್ದಾಗ್ಯೂ,ಕಡಿಮೆ ಆಯಸ್ಸಿನ ಜೈವಿಕವಾಗಿ ವಿಘಟನೆಯಾಗುವ ಅಥವಾ ಪೋಟೋಡಿಗ್ರೆಬಲ್ ಪದರಳನ್ನು ಪಭಿವೃದ್ಧಿ ಪಡಿಸುವತ್ತ ಆಸಕ್ತಿ ಬೆಳೆಯುತ್ತದೆ ನಿಯಂತ್ರಿತ ವಿಘಟನೆಗೆ ದೊಡ್ಡ ಪ್ರಮಾಣದ ಪಾಲಿಮರ್ ಮಾದರಿಗಳನ್ನು ರಚಿಸಲಾಗಿದ್ದರೂ,ಕೆಲವೆ ಕೆಲವು ವಾಣಿಜ್ಯೀಕರಣವಾಗಿವೆ. ಈ ಕಾರ್ಯಕ್ಕೆ ಬಳಸಲಾಗುವ ಪ್ಲ್ಯಾಸ್ಟಿಕ್‌ಗಳು ಬೆಳಕಿನ-ಸೂಕ್ಷ್ಮತೆ ಹೊಂದಿದ ಅಡಿಟಿವ್‌ಗಳನ್ನು ಹೊಂದಿರುತ್ತಿದ್ದು ಅವುಗಳು ವಸ್ತುಗಳು ಬೆಳಕಿನಿಂದ ವಿಘಟನೆ ಹೊಂದುವಂತೆ ಮಾಡುತ್ತವೆ.ಮಲ್ಚ್ ಪದರಗಳಿಗಾಗಿ ಬಳಸಲಾಗುತ್ತಿರುವ ಪ್ಲಾಸ್ಟಿಕ್ಸ್‌ಗಳು ಸಾಮಾನ್ಯವಾಗಿ ಕಡಿಮೆ ಪ್ರಮಾಣದ ಪಾಲಿಎಥಿಲಿನ್‌ಗಳು ,ಪಾಲಿ (ವಿನೈಲ್ ಕ್ಲೋರೈಡ್),ಪಲಿಬ್ಯೂಟಿಲಿನ್ ಅಥವಾ ವಿನೈಲ್ ಅಸಿಟೇಟ್‌ನೊಂದಿಗೆ ಎಥಿಲಿನ್ ಕೋಪಾಲಿಮರ್ ಹೊಂದಿರುತ್ತದೆ. ವಿಶೇಷವಾಗಿ ಪೋಟೋಡಿಗ್ರೆಡೆಬಲ್ ಕ್ರಮವು ಕಬ್ಬಿಣದ ಮತ್ತು ನಿಕ್ಕೆಲ್ ಡೈಬ್ಯುಟೆಲ್‌ಡೈಥಿಯೊಕಾರ್ಬಾಮೇಟ್ಸ್‌ಗಳ ಮಿಶ್ರಣ ಹೊಂದಿರುತ್ತದೆ,ಇದರ ಪ್ರಮಾಣವು ನಿರ್ದಿಷ್ಟವಾಗಿ ಬೆಳೆಯುವ ಅವಧಿಗೆ ರಕ್ಷಣೆ ಒದಗಿಸಲು ಹೊಂದಿಕೊಳ್ಳುತ್ತದೆ. ಬೆಳವಣಿಗೆಯ ಅವಧಿ ಮುಗಿದ ನಂತರ ಪ್ಲಾಸ್ಟಿಕ್ ಬೆಳಕಿಗೆ ಹಾಳಾಗುವಂತೆ ಮಾಡಿರುತಾರೆ. ಈ ಬಳಕೆಗೆ ಉದ್ದೇಶಿಸಲಾದ ಇನ್ನೊಂದು ಅಡಿಟಿವ್ ವ್ಯವಸ್ಥೆ ಎಂದರೆ ಬದಲಾಗಿ ಬಳಸಿದ ಬೆಂಜೊಫಿನಾನ್‌ಗಳು ಮತ್ತು ಟಿಟಾನಿಯಮ್ ಅಥವಾ ಜಿರ್ಕೋನಿಯಮ್ ಚೆಲೇಟ್‌ಗಳ ಸಂಯುಕ್ತ. ಪ್ರಮುಖವಾಗಿ ವಾಣಿಜ್ಯೀಕವಾಗಿ ಹಾಳಾಗುವ ಮಲ್ಚ ಯಾವುದೆಂದರೆ ಬೆಳಕಿನಿಂದ ಹಾಳಾಗುವ ಪಾಲಿ(1-ಬುಟೆನ್) ಪಿಷ್ಟದ ಜೊತೆಗೆ ಪಾಲಿ(ವಿನೈಲ್ ಆಲ್ಕೋಹಾಲ್),ಪಾಲಿ (ಎಥಿಲಿನ್-ಕೋ-ಆ‍ಯ್‌ಕ್ರಿಲಿಕ್ ಅ‍ಯ್‌ಸಿಡ್) ಮತ್ತು ಪಾಲಿ(ವಿನೈಲ್ ಕ್ಲೋರೈಡ್) ಮೇಲೆ ಆಧಾರಿತವಾದ ಜೈವಿಕವಾಗಿ ವಿಘಟನೆಯಾಗುವ ಪದರಗಳನ್ನು ಯುಎಸ್‌ಡಿಎ ಪ್ರಯೋಗಾಲಯಗಲಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಪಾಲಿ ಲ್ಯಾಕ್ಟೋನ್ ಮತ್ತು ಪಾಲಿ(ವಿನೈಲ್ ಆಲ್ಕೋಹಾಲ್)ಪದರಗಳು ಮಣ್ಣಿನಲ್ಲಿನ ಸೂಕ್ಷ್ಮಾಣುಜೀವಿಗಳಿಂದ ಸುಲಭವಾಗಿ ನಾಶವಾಗುತ್ತದೆ ಆದರೆ ಕಬ್ಬಿಣ ಅಥವಾ ಕ್ಯಾಲ್ಸಿಯಂ ಕೊಡುವುದರಿಂದ ಪಾಲಿ ಎಥಿಲಿನ್ ನಾಡ ಮಾಡುವಿಕೆ ಹೆಚ್ಚು ವೇಗವಾಗುತ್ತದೆ. ವಿಘಟನೆಯಗುವ ಮಲ್ಚ್‌ಗಳು ಸುಲಭವಾಗಿ ಮುರಿದು ಹೋಗುವ ಚೂರುಗಳಾಗಿ ಕಟಾವು ಮಾಡುವ ಯಂತ್ರದ ಮೂಲಕ ಯಾವುದೇ ತೊಂದರೆ ಇಲ್ಲದೆ ಹಾದುಹೋಗುತ್ತದೆ ಮತ್ತು ಬದಲಿ ನಾಟಿಗೆ ಯಾವುದೇ ತೊಂದರೆ ಉಂಟುವಾಡುವುದಿಲ್ಲ. ಪರಿಣಾಮಕಾರಿಯಾದ ಫುಮಿಗೆಂಟ್ ಮಲ್ಚ್‌ಗಳಿಗೆ ಕಡಿಮೆ-ಸಚ್ಛಿದ್ರತೆಯಿರುವ ಪದರಗಳ ಅಗತ್ಯವಿದ್ದು, ಅವು ನೆಮಾಟೊಸೈಡ್ಸ್, ಇನ್‌ಸೆಕ್ಟಿಸೈಡ್ಸ್, ಹೆರ್ಬಿಸೈಡ್ಸ್‌ನಂತಹ ಭಾಷ್ಪಶೀಲ ರಾಸಾಯನಿಕಗಳು ನಷ್ಟವಾಗುವುದನ್ನು ಕಡಿಮೆ ಮಾಡುತ್ತವೆ ಮತ್ತು ಕಡಿಮೆ ಅನ್ವಯ ಮಟ್ಟವನ್ನು ಕಾಯ್ದುಕೊಳ್ಳುತ್ತವೆ.

ನಿಯಮಿತ ಬಿಡುಗಡೆ

ಬದಲಾಯಿಸಿ

ನಿರ್ದಿಷ್ಟ ಪ್ರಾಮಾಣ ಮತ್ತು ಪೂರ್ವನಿರ್ಧಾರಿತ ಸಮಯದಲ್ಲಿ ಗುರಿಯಾಗಿರಿಸಿಕೊಂಡ ಗುಂಪಿಗೆ ಜೀವಶಾಸ್ತ್ರೀಯವಾಗಿ ಚಲನಾತ್ಮಕವಾಗಿರುವ ರಾಸಾಯನಿಕಗಳು ಲಭ್ಯವಾಗುವಂತೆ ನಿಯಮಿತ ಬಿಡುಗಡೆ ಕ್ರಮದಲ್ಲಿ ಮಾಡಲಾಗುತ್ತದೆ. ಪಾಲಿಮರ್‌ಗಲು ಮೊದಲಿಗೆ ವಿತರಣೆಯ ಪ್ರಮಾಣ,ಗತಿಶೀಲತೆ ಮತ್ತು ರಾಸಾಯನಿಕ ಘಟಕಗಳ ಪರಿಣಾಮಕಾರಿ ಅವಧಿಯನ್ನು ನಿಯಂತ್ರಣ ಮಾಡುತ್ತದೆ. ಸಿಆರ್ ಸೂತ್ರೀಕರಣಗಳ ಪ್ರಮುಖ ಉಪಯೋಗವೆಂದರೆ ಒಂದು ನಿರ್ಧಿಷ್ಟ ಸಮಯದಲ್ಲಿ ಕಡಿಮೆ ರಾಸಾಯನಿಕಗಳನ್ನು ಬಳಸಬಹುದಾಗಿದೆ ಮತ್ತು ಆ ಮೂಲಕ ನಿರ್ದೇಶಿಸಲಾಗಿಲ್ಲದ ಜೀವಿಗಳ ಮೇಲೆ ಆಗುವ ಪರಿಣಾಮವನ್ನು ಕಡಿಮೆ ಮಾಡುತ್ತದೆ ಮತ್ತು ಒಸರುವಿಕೆ, ಭಾಷ್ಪೀಕರಣ ಮತ್ತು ವಿಘಟನೆಯನ್ನು ಕಡಿಮೆ ಮಾಡುತ್ತದೆ. ಈ ಪ್ರತಿಕ್ರಿಯೆಗಳಿಂದ ಪಾಲಿಮರ್‌ಗಳ ದೊಡ್ಡ ಅಣುವಿನ ಗುಣ ರಾಸಾಯನಿಕ ಹಾನಿಯ ಇತಿಮಿತಿಗೆ ಆಧಾರವಾಗಿದೆ. ಸಿಆರ್ ಪಾಲೀಮರಿಕ್ ವ್ಯವಸ್ಥೆಯನ್ನು ವ್ಯಾಪಕವಾದ ಎರಡು ಗುಂಪುಗಳಾಗಿ ವಿಭಾಗಿಸಬಹುದು. ಮೊದಲನೆಯದಾಗಿ, ಪಾಲಿಮೆಟ್ರಿಕ್ ಮೆಟ್ರಿಕ್ಸ್ ಅಥವಾ ಲೇಪನದಿಂದಾಗಿ ಕ್ರಿಯಾತ್ಮಕ ಏಜೆಂಟ್ ಕರಗುತ್ತದೆ,ಚದುರಿಹೋಗುತ್ತದೆ, ಅಥವಾ ಕುಗ್ಗಿಹೋಗುತ್ತದೆ ಬಿಡುಗಡೆಯು ಸಾಮಾನ್ಯವಾಗಿ ವಿಸರಣದ ಪ್ರಕ್ರಿಯೆಗಳ ಮೂಲಕ ಅಥವಾ ಮ್ಯಾಟ್ರಿಕ್ಸ್‌ನ ಜೈವಿಕ ಅಥವಾ ರಾಸಾಯನಿಕ ಛಿದ್ರೀಕರಣದ ಮೂಲಕ ಘಟಿಸುತ್ತದೆ. ಎರಡನೆಯ ವರ್ಗದ ಪಾಲೀಮರ್‌ಗಳು ದೊಡ್ಡ ಅಣುವಿನ ಬೆನ್ನೆಲುಬಿನ ಅಥವಾ ಪರಾವಲಂಬಿ ಭಾಗದ ಸರಪಳಿಯ ಭಾಗವಾಗಿ ಕ್ರಿಯಾತ್ಮಕ ಏಜೆಂಟ್ ಹೊಂದಿರುತ್ತದೆ.ಬಯೋಆ‍ಯ್‌ಕ್ಟೀವ್ ಏಜೆಂಟ್‌ಗಳು ಅಥವಾ ಪಾಲಮರ್‌ಗಳ ನಡುವಿನ ಜೀವಶಾಸ್ತ್ರಿಯ ಅಥವಾ ರಾಸಾನಿಕ ಬಂಧನ ಒಡೆಯುವಿಕೆಯಿಂದ ಬಿಡುಗಡೆಯ ಫಲಿತಾಂಶ ದೊರೆಯುತ್ತದೆ. ಸಂಯೋಜಿತ ಕೃಷಿ ರಾಸಾಯನಿಕಗಳು,ಸಣ್ಣ ಗುಳಿಗೆಗಳು,ಭೌತಿಕವಾಗಿ ಕರಗುವಿಕೆ,ಪ್ಲಾಸ್ಟಿಕ್ಸ್‌ನಲ್ಲಿ ಚದುರಿಹೋಗುವಿಕೆ,ಲ್ಯಾಮಿನೇಟ್ಸ್,ಟೊಳ್ಳಾದ ಫೈಬರ್ಸ್ ಮತ್ತು ಪದರಗಳನ್ನು ಒಳಗೊಂಡ ವ್ಯವಸ್ಥೆಯಲ್ಲಿರುತ್ತದೆ. ಪ್ರತಿಯೊಂದು ತರಹದ ಉಪಕರಣಗಳಿಗೂ ಚಲನಾತ್ಮಕ ಮಾದರಿಯನ್ನು ಅಭಿವೃದ್ಧಿಪಡಿಸಲಾಯಿತು. ಪಿಷ್ಟ ಸೆಲ್ಯುಲೋಸ್, ಚಿಟಿನ್, ಆಲ್ಗಿನಿಕ್ ಆ‍ಯ್‌ಸಿಡ್, ಲಿಗ್ನಿನ್ ನೈಸರ್ಗಿಕ ಪಾಲಿಮರ್‌ಗಳನ್ನು ಸಿಆರ್ ವ್ಯವಸ್ಥೆಯಲ್ಲಿ ಬಳಸಲಾಗುತ್ತದೆ ಅಧಿಕವಾಗಿರುವಿಕೆ,ಕಡಿಮೆಯಾಗಿರುವಿಕೆ,ಮತ್ತು ಜೈವಿಕ ವಿಘಟನೆಯಾಗುವಿಕೆ ಇವುಗಳು ಅನುಕೂಲತೆಗಳಾಗಿವೆ. ಅವುಗಳು ವ್ಯುತ್ಪತ್ತಿಗೊಳಿಸುವಿಕೆಗಾಗಿನ ಕಾರ್ಯಸಾಧ್ಯತೆಯನ್ನು ಹೊಂದಿದ್ದರೂ, ಇವುಗಳು ಸುತ್ತುವರಿಯುವಿಕೆ, ಚದುರುವಿಕೆ, ಮತ್ತು ರಚನೆಗೆ ಸೂಕ್ತವಾದ ಗುಣಮಟ್ಟದ ದ್ರಾವಕದಲ್ಲಿ ಕರಗದಿರುವಿಕೆ ಒಂದು ಪ್ರಮುಖ ಅನಾನುಕೂಲತೆಯಾಗಿದೆ. ಸಿಟು ಎನ್‌ಕ್ಯಾಪ್ಸುಲೇಶನ್ ಮೂಲಕ ದ್ರಾವಕದ ಸಮಸ್ಯೆಯನ್ನು ಪರಿಹರಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ, ಮತ್ತು ಆ ಮೂಲಕ ಒಂದು ಆಯ್ದ ಕ್ರಿಮಿನಾಶಕವನ್ನು ಹೊಂದಿದ ಜಿಲಾಟಿನ್‌ಯುಕ್ತವಾದ ಪಿಷ್ಟವನ್ನು ಕ್ಯಾಲ್ಸಿಯಂ ಕ್ಲೋರೈಡ್ ಅಥವಾ ಬೋರಿಕ್ ಆಮ್ಲವನ್ನು ಸೇರಿಸುವ ಮೂಲಕ ಅಥವಾ ಆಕ್ಸಿಡೇಶನ್ ನಂತರ ಸಾಂಥನೇಶನ್ ಮಾಡುವ ಮೂಲಕ ಕ್ರಾಸ್‌ಲಿಂಕ್ ಮಾಡಲಾಗುತ್ತದೆ. ಅದರ ಪರಿಣಾಮವಾಗಿ ಆ ಕ್ರಿಮಿನಾಶಕವು ಆ ಕಣಗಳಲ್ಲಿ ಆವರಿಸಿಕೊಳ್ಳಲ್ಪಡುತ್ತದೆ. ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಬಳಕೆಯು ಸಿಆರ್‌ ತಂತ್ರಜ್ಞಾನಕ್ಕೆ ಒಂದು ಪ್ರಮುಖವಾದ ದೊಡ್ಡಪ್ರಮಾಣದ ಅಪ್ಲಿಕೇಶನ್‌ ಆಗಿದೆ. ಇ.ಜಿ.ಯೂರಿಯಾ, ಪ್ರಮುಖವಾದ ನೈಟ್ರೋಜನ್ ಮೂಲವಾಗಿದೆ,ಪಾಲೀಮರ್‌ ರೂಪದಲ್ಲಿ ಫಾರ್ಮಲ್‌ಡೀಹೈಡ್ ಜೊತೆಗೆ ಸುಲಭವಾಗಿ ಪ್ರತಿಕ್ರಿಯಿಸುತ್ತದೆ. ಪಾಲಿಮರ್‌ನ ಆನಂತರದ ಜಲಚ್ಛೇಧನ ಯೂರಿಯಾ ಬೆಳೆಗಳು. ಆದಾಗ್ಯೂ,ಇದು ಸಿಆರ್‌ಗೆ ಸರಳ ಮತ್ತು ಅಗ್ಗದ ವ್ಯವಸ್ಥೆಯಾಗಿದೆ.

ಇವನ್ನೂ ಗಮನಿಸಿ

ಬದಲಾಯಿಸಿ
  • ಬಯೊಮಟೀರಿಯಲ್‌ಗಳು
  • ಜೈವಿಕಪ್ಲಾಸ್ಟಿಕ್‌ಗಳು
  • ಬಯೋಪಾಲಿಮರ್‌‌ಗಳು & ಕೋಶ (ಜರ್ನಲ್)
  • ಪಾಲೀಮರ್‌ ರಾಸಾಯನ ಶಾಸ್ತ್ರ
  • ಮಂದಗೊಳಿಸುವಿಕೆಯ ಪಾಲೀಮರ್‌ಗಳು
  • ಡಿಎನ್‌ಎ ಸರಣಿ
  • ಮೆಲನಿನ್
  • ಆಹಾರವಲ್ಲದ ಬೆಳೆಗಳು
  • ಫಾಸ್ಫೊರಮೈಡೈಟ್
  • ಸಣ್ಣ ಪರಮಾಣುಗಳು
  • ಅನುಕ್ರಮ
  • ವಾರ್ಮ್-ಲೈಕ್ ಸರಪಳಿ

ಉಲ್ಲೇಖಗಳು

ಬದಲಾಯಿಸಿ
  1. ಮೊಹಾಂತಿ, ಎ.ದೆ., et al., ನ್ಯಾಚುರಲ್ ಫೈಬರ್ಸ್, ಬಯೋಪಾಲಿಮರ್‌‌ಗಳು, ಆ‍ಯ್‌೦ಡ್ ಬಯೊಲಾಂಪೊಸಿಟ್ಸ್ (ಸಿಆರ್‌ಸಿ ಪ್ರೆಸ್, 2005)
  2. ಚಂದ್ರ, ಆರ್., ಮತ್ತು ರುಸ್ಟಗಿ, ಆರ್., "ಬಯೊಡಿಗ್ರೇಡೆಬಲ್ ಪಾಲೀಮರ್ಸ್", ಪ್ರೊಗ್ರೆಸ್ ಇನ್ ಪಾಲೀಮರ್‌ ಸೈನ್ಸ್, ಸಂಪುಟ. 23, p. 1273 (1998)
  3. ಮೇಯರ್ಸ್, ಎಮ್.ಎ., et al., "ಬಯೋಲಾಜಿಕಲ್ ಮೆಟೀರಿಯಲ್ಸ್: ಸ್ಟ್ರಕ್ಚರ್ & ಮೆಕಾನಿಕಲ್ ಪ್ರಾಪರ್ಟೀಸ್", ಪ್ರೊಗ್ರೆಸ್ ಇನ್ ಮಟೀರಿಲ್ ಸೈನ್ಸ್, ಸಂಪುಟ. 53, p. 1 (2008)
  4. ಕುಮಾರ್, ಎ., et al., "ಸ್ಮಾರ್ಟ್ ಪಾಲೀಮರ್ಸ್: ಫಿಸಿಕಲ್ ಫಾರ್ಮ್ಸ್ & ಬಯೊಎಂಜಿನಿಯರಿಂಗ್ ಅಪ್ಲಿಕೇಶನ್ಸ್ ", ಪ್ರೊಗ್ರೆಸ್ ಇನ್ ಪಾಲೀಮರ್‌ ಸೈನ್ಸ್, ಸಂಪುಟ. 32, p.1205 (2007)
  5. ಕ್ಲೆಮ್, ಡಿ., ಹೆಯುಬ್ಲಿನ್, ಬಿ., ಫಿಂಕ್, ಹೆಚ್., ಮತ್ತು ಬಾನ್,ಎ., "ಸೆಲ್ಯುಲೋಸ್: ಫ್ಯಾಸಿನೇಟಿಂಗ್ ಬಯೋಪಾಲೀಮರ್‌ / ಸಸ್ಟೈನೆಬಲ್ ರಾ ಮಟೀರಿಯಲ್", Ang. ಚೆಮಿಎ(Intl. Edn.) ಸಂಪುಟ. 44, p. 3358 (2004)
  6. ಸ್ಟೀವನ್ಸ್, ಇ.ಎಸ್., ಗ್ರೀನ್ ಪ್ಲಾಸ್ಟಿಕ್ಸ್: ಆ‍ಯ್‌ಣ್ ಇಂಟ್ರಡಕ್ಷನ್ ಟು ದ ನ್ಯೂ ಸೈನ್ಸ್ ಆಫ್ ಬಯೊಡಿಗ್ರೇಡೆಬಲ್ ಪ್ಲಾಸ್ಟಿಕ್ಸ್ , ಪ್ರಿನ್ಸ್‌ಟನ್ ಯುನಿವರ್ಸಿಟಿ ಪ್ರೆಸ್(2001)
  7. [6]
  8. ಸ್ಟುಪ್, ಎಸ್.ಐ ಮತ್ತು ಬ್ರೌನ್, ಪಿ.ವಿ., "ರೋಲ್ ಆಒಹ್ ಪ್ರೋಟೀನ್ಸ್ ಇನ್ ಮೈಕ್ರೊಸ್ಟಕ್ಚರಲ್ ಕಂಟ್ರೋಲ್: ಬಯೊಮಟೀರಿಯಲ್ಸ್, ಸೆರಾಮಿಕ್ಸ್ & ಸೆಮಿಕಂಡಕ್ಟರ್ಸ್", ಸೈನ್ಸ್, ಸಂಪುಟ. 277, p. 1242 (1997)
  9. ವಾನ್ ಡರ್ ಮಾರೆಲ್, ಜೆ.ಆರ್.ಸಿ., ಇಂಟ್ರಡಕ್ಷನ್ ಟು ಬಯೊಪಾಲೀಮರ್‌ ಫಿಸಿಕ್ಸ್ (ವರ್ಲ್ಡ್ ಸೈಂಟಿಫಿಕ್ ಪಬ್ಲಿಶಿಂಗ್ ಕಂ., 2007)
  10. ಸ್ಪೆರ್ಲಿಂಗ್, ಎಲ್.ಹೆಚ್., ' ಇಂಟ್ರಡಕ್ಷನ್ ಟು ಫಿಸಿಕಲ್ ಪಾಲಿಮರ್ ಸೈನ್ಸ್,(ಜಾನ್ ವಿಲೆ & ಸನ್ಸ್ Inc., 1986)
  11. ಸೈಟೊ, ಹೆಚ್., et al., ಸಾಲಿಡ್ ಸ್ಟೇಟ್ ಎನ್‌ಎಮ್‌ಆರ್ ಸ್ಪೆಕ್ಟ್ರೊಸ್ಕೋಪೀ ಬಯೋಪಾಲೀಮರ್ಸ್: ಪ್ರಿನ್ಸಿಪಲ್ಸ್ ಆ‍ಯ್೦ಡ್ ಅಪ್ಲಿಕೇಶನ್ಸ್ (ಸ್ಪ್ರಿಂಜರ್, 2006)
  12. ಕಸಪಿಸ್, ಎಸ್., ನರ್ಟನ್, ಐ.ಟಿ. ಮತ್ತು ಉಬ್ಬಿಂಕ್, ಜೆ.ಬಿ., Eds., ಮಾಡರ್ನ್ ಬಯೊಪಾಲೀಮರ್‌ ಸೈನ್ಸ್: ಬ್ರಿಡ್ಜಿಂಗ್ ದ ಡಿವೈಡ್ ಬಿಟ್ವೀನ್ ಫಂಡಮೆಂಟಲ್ ಟ್ರೀಟೀಸ್ ಆ‍ಯ್‌೦ಡ್ ಇಂಡಸ್ಟ್ರಿಯಲ್ ಅಪ್ಲಿಕೇಶನ್ಸ್ (ಅಕಾಡೆಮೆಕ್ ಪ್ರೆಸ್, 2009)
  13. ವೆಕ್ಶಿನ್, ಎನ್.ಎಲ್., ಫೊಟೊನಿಕ್ಸ್ ಆಫ್ ಜೈವಿಕಪಾಲೀಮರ್ಸ್ (ಸ್ಪ್ರಿಂಜರ್, 2002)
  14. ಸ್ಟೈನ್‌ಬುಚೆಲ್, ಎ., ಜೈವಿಕಪಾಲೀಮರ್ಸ್: ಜನರಲ್ ಆಸ್ಪೆಕ್ಟ್ಸ್ ಆ‍ಯ್‌೦ಡ್ ಸ್ಪೆಶಲ್ ಅಪ್ಲಿಕೇಶನ್ಸ್ , (ವಿಲೆ - ವಿಸಿಹೆಚ್ 2003)
  15. ಡಿಕಿನ್‌ಸನ್, ಇ. ಮತ್ತು ವಾನ್ ವ್ಲಿಯೆಟ್, ಟಿ., ಫುಡ್ ಕೊಲಾಯ್ಡ್ಸ್, ಜೈವಿಕಪಾಲೀಮರ್ಸ್ ಆ‍ಯ್‌೦ಡ್ ಮಟೀರಿಯಲ್ಸ್ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ, ಗ್ರೇಟ್ ಬ್ರಿಟನ್, 2003)

ಹೊರಗಿನ ಕೊಂಡಿಗಳು

ಬದಲಾಯಿಸಿ