ಬಯಾಂಕಲಾ (ತ್ವಚೆಯ ಆರೈಕೆ)

ಬಯಾಂಕಲಾ ಎಂಬುದು ಚೀನಾದ ಶಾಂಘೈನಲ್ಲಿ ಶುರುವಾದ ನೈಸರ್ಗಿಕ ಚರ್ಮದ ಆರೈಕೆಯ ಬ್ರಾಂಡ್. ಇದನ್ನು ಫ್ರೆಂಚ್ ಉದ್ಯಮಿ ಜೀನ್ ಝಿಮ್ಮರ್ಮ್ಯಾನ್ ರೂಪಿಸಿದ್ದಾರೆ.[] ಝಿಮ್ಮರ್ಮ್ಯಾನ್ ಅವರು ಚೀನಾದ ಗಿಡಮೂಲಿಕೆ ತಜ್ಞರೊಂದಿಗೆ ಚರ್ಚಿಸಿ ಈ ಬ್ರಾಂಡ್ ಅನ್ನು ಸ್ಥಾಪಿಸಿದರು. ಅವರು ಚೀನಾದಲ್ಲಿ ಲೇನ್ ಕ್ರಾಫರ್ಡ್ ಡಿಪಾರ್ಟ್ಮೆಂಟ್ ಸ್ಟೋರ್‌ಗಳ ಜನರಲ್ ಮ್ಯಾನೇಜರ್ ಆಗಿದ್ದಾಗ, ಉನ್ನತ ಮಟ್ಟದ ಚೀನೀ ಬ್ರಾಂಡ್ ಅನ್ನು ರಚಿಸಲು ನಿರ್ಧರಿಸಿದರು. ಇದೇ ಬಯಾಂಕಲಾ ಎಂಬ ಬ್ರಾಂಡ್‌ಗೆ ಸ್ಫೂರ್ತಿಯಾಯಿತು.[]

ಬಯಾಂಕಲಾ
巴颜 喀拉
ಸಂಸ್ಥೆಯ ಪ್ರಕಾರಖಾಸಗಿ
ಸ್ಥಾಪನೆಜನವರಿ 1, 2008 (2008-01-01)
ಸಂಸ್ಥಾಪಕ(ರು)ಜೀನ್ ಝಿಮ್ಮರ್ಮನ್
ಮುಖ್ಯ ಕಾರ್ಯಾಲಯಶಾಂಘೈ, ಚೀನಾ
ಕಾರ್ಯಸ್ಥಳಗಳ ಸಂಖ್ಯೆ೧೯
ವ್ಯಾಪ್ತಿ ಪ್ರದೇಶಶಾಂಘೈ
ಪ್ರಮುಖ ವ್ಯಕ್ತಿ(ಗಳು)ಜೀನ್ ಝಿಮ್ಮರ್ಮನ್, ಸಿ‌ಇಒ
ಉದ್ಯಮಸೌಂದರ್ಯವರ್ಧಕಗಳು
ಉತ್ಪನ್ನತ್ವಚೆಯ ಆರೈಕೆ ಉತ್ಪನ್ನಗಳು
ಸೌಂದರ್ಯವರ್ಧಕಗಳು
ಜಾಲತಾಣwww.bayankala.com

ಹಳದಿ ನದಿ ಮೂಲವನ್ನು ಹೊಂದಿರುವ ದಕ್ಷಿಣ-ಮಧ್ಯ ಕಿಂಗ್ಹೈನಲ್ಲಿರುವ ಬಯಾನ್ ಹರ್ ಪರ್ವತಗಳ ಹೆಸರನ್ನು ಈ ಬ್ರಾಂಡ್ಗೆ ಇಡಲಾಗಿದೆ. ಈ ಬ್ರ್ಯಾಂಡ್ನ ಸಂಕೇತವೆಂದರೆ "ಹುಲು", ಸಾಂಪ್ರದಾಯಿಕವಾಗಿ ಒಂದು ಪಾತ್ರೆಯಾಗಿ ಬಳಸಲ್ಪಡುವ ಮತ್ತು ಚೀನೀ ಔಷಧಾಲಯದ ಸಂಕೇತವಾಗಿ ಮುಂಭಾಗದಲ್ಲಿ ನೇತುಹಾಕಲ್ಪಡುವ ಸೋರೆಕಾಯಿ ರೂಪದ ಚೀನೀ ಬಾಟಲಿ.[]

ಸಾಂಪ್ರದಾಯಿಕ ಚೀನೀ ಪದಾರ್ಥಗಳು

ಬದಲಾಯಿಸಿ

ಸಾಂಪ್ರದಾಯಿಕ ಚೀನೀ ಗಿಡಮೂಲಿಕೆ ಔಷಧದ ಪಾಕವಿಧಾನಗಳನ್ನು ಹೊಂದಿರುವ ಮೊದಲ ಚೀನೀ "ಐಷಾರಾಮಿ ಚರ್ಮದ ಆರೈಕೆ ಬ್ರಾಂಡ್" ಎಂದು ಬಯಾಂಕಲಾ ಹೇಳಿಕೊಂಡಿದೆ.[] ಬ್ರ್ಯಾಂಡ್ ಪರಿಕಲ್ಪನೆಯು ಚೀನೀ ಸಸ್ಯಶಾಸ್ತ್ರ ಸಾಂಪ್ರದಾಯಿಕವಾಗಿ ಬಳಸಲಾಗುವ ೫ ಪದಾರ್ಥಗಳನ್ನು ಒಳಗೊಂಡಿದೆ. ಈ ಬ್ರಾಂಡ್ ಅನ್ನು ದಕ್ಷಿಣ ಚೀನಾ ಗುವಾಂಗ್ಝೌನಲ್ಲಿ ತಯಾರಿಸಲಾಗುತ್ತದೆ ಮತ್ತು ಕೆಲವು ಉತ್ಪನ್ನಗಳನ್ನು ಚೀನಾದಲ್ಲಿ ಸಾವಯವ ಎಂದು ಪ್ರಮಾಣೀಕರಿಸಲಾಗಿದೆ.[] ಸಾಂಪ್ರದಾಯಿಕ ಚೈನೀಸ್ ಲೂನರ್ ಕ್ಯಾಲೆಂಡರ್ ಪ್ರಕಾರ ಪ್ರತಿ ಉತ್ಪನ್ನವನ್ನು ಹಳದಿ ನದಿಯ ಮೂಲದಿಂದ ಶುದ್ಧ ನೀರನ್ನು ಬಳಸಿ ರೂಪಿಸಲಾಗಿದೆ ಎಂದು ಝಿಮ್ಮರ್ಮ್ಯಾನ್ ಹೇಳುತ್ತಾರೆ.[]

ಉಲ್ಲೇಖಗಳು

ಬದಲಾಯಿಸಿ
  1. Huang, Hung (15 February 2012). "ChinaFile: Beauty Brands Back from the Dead". Women's Wear Daily. Retrieved 7 May 2012.
  2. "Chinese skincare products embrace the wisdom of the ages". The China Biz. 5 January 2011. Archived from the original on 13 August 2016. Retrieved 7 May 2012.
  3. ೩.೦ ೩.೧ "Chinese skincare products embrace the wisdom of the ages". The China Biz. 5 January 2011. Archived from the original on 13 August 2016. Retrieved 7 May 2012."Chinese skincare products embrace the wisdom of the ages". The China Biz. 5 January 2011. Archived from the original Archived 2016-08-13 ವೇಬ್ಯಾಕ್ ಮೆಷಿನ್ ನಲ್ಲಿ. on 13 August 2016. Retrieved 7 May 2012.
  4. Huang, Hung (15 February 2012). "ChinaFile: Beauty Brands Back from the Dead". Women's Wear Daily. Retrieved 7 May 2012.Huang, Hung (15 February 2012). "ChinaFile: Beauty Brands Back from the Dead". Women's Wear Daily. Retrieved 7 May 2012.
  5. "Local brands going Chic". Beijing Today. 21 October 2011. Archived from the original on 27 July 2012. Retrieved 7 May 2012.


ಬಾಹ್ಯ ಸಂಪರ್ಕಗಳು

ಬದಲಾಯಿಸಿ