ಬಬಲಾದಿ ಶ್ರೀ ಸದಾಶಿವ ಮಠ
ಶ್ರೀ ಗುರು ಚಕ್ರವರ್ತಿ ಬಬಲಾದಿ ಸದಾಶಿವ ಮೂರ್ತಿ ಮಹಾಪುರುಷರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಸಾರವಾಡ ಗ್ರಾಮದಲ್ಲಿ ಜನಸಿ ಬಬಲಾದಿ ಗ್ರಾಮದಲ್ಲಿ ಲಿಂಗೈಕ್ಯರಾದರು. ಪ್ರತಿವರ್ಷ ಬಬಲಾದಿಯಲ್ಲಿ ಮಹಾಶಿವರಾತ್ರಿಯ ಅಮವಾಷೆ ದಿನ ಬೃಹತ್ ಜಾತ್ರೆ ಮತ್ತು ಜಾನುವಾರುಗಳ ಜಾತ್ರೆ ಜರುಗುತ್ತದೆ. ಬಬಲಾದಿ ಗ್ರಾಮದಲ್ಲಿ ಭವ್ಯವಾದ ಮಠವಿದೆ.[೧]
ಚರಿತ್ರೆ
ಬದಲಾಯಿಸಿಅಲ್ಲಿರುವ ಚಂದ್ರಗಿರಿ ದೇವಿ ಮಠದಲ್ಲಿ. ಈ ಮಠದಲ್ಲಿರುವ ತ್ರಿಕಾಲ ಜ್ಞಾನಿ ಚಿಕ್ಕಪ್ಪಯ್ಯ ಮತ್ತು ಸದಾಶಿವ ಮುತ್ಯಾ ಅವರು ಚಂದ್ರಗಿರಿ ದೇವಿಯ ಆರಾಧಕರು. ಈ ಇಬ್ಬರು ಪವಾಡ ಪುರುಷರು ಸೇರಿ ಒಟ್ಟು 10 ಗದ್ದುಗೆಗಳು ಇಲ್ಲಿದ್ದು, ಈ ಗದ್ದುಗೆಗಳ ಮೇಲೆ ಭಕ್ತರು ಮದ್ಯವನ್ನು ಹಾಕುವ ಮೂಲಕ ನೈವೇದ್ಯ ಅರ್ಪಿಸುತ್ತಾರೆ.
ಸಾರವಾಡ ಗ್ರಾಮದಿಂದ ಬಂದ ಚಿಕ್ಕಪ್ಪಯ್ಯ ಇಲ್ಲಿಗೆ ಬಂದು ನೆಲೆಸಿದ್ದರು. ಅಂದು ಈಗಿರುವ ಸಮಾಧಿ ಸ್ಥಳದಲ್ಲೇ ಹಾವು-ಮುಂಗಸಿ, ಇಲಿ-ಬೆಕ್ಕು, ಆಡು-ತೋಳ, ಮೊಲ-ನಾಯಿ ತುಂಬಾ ಅನ್ಯೋನ್ಯವಾಗಿ ಬದುಕಿದ್ದವು. ಸುಮಾರು 400 ವರ್ಷಗಳ ಹಿಂದೆಯೇ ತ್ರಿಕಾಲ ಜ್ಞಾನದ ಬಗ್ಗೆ ಇಲ್ಲಿ ಭವಿಷ್ಯ ಬರೆಯಲಾಗಿತ್ತು. ಇಲ್ಲಿಗೆ ಚಿಕ್ಕಪ್ಪಯ್ಯ ಸ್ವಾಮೀಜಿ ನೆಲಸಿದ ಮೇಲೆ ಅವರ ಬಳಿಕ ಸದಾಶಿವ ಮುತ್ಯಾ ಸೇರಿದಂತೆ ಇತರ ಎಂಟು ಜನ ಸಿದ್ಧಿ ಪುರುಷರು ಬಂದು ನೆಲೆಸಿದ್ದರು. ಈ ಸತ್ಪುರಷರು ಆಡಿದ, ಮಾಡಿದ ಪವಾಡಗಳಿಗೆ ಲೆಕ್ಕವಿಲ್ಲ. ಇವರು ಆಡುವ ಮಾತುಗಳು ನಿಜವಾಗುತ್ತಿದ್ದವು. ಹಾಕುವ ಶಾಪಗಳು ತಟ್ಟುತ್ತಿದ್ದವು.
ಕಾಲಜ್ಞಾನದಿಂದಲೇ ಪ್ರಸಿದ್ಧಿ ಪಡೆದಿರುವ ಬಬಲಾದಿ ಮಠ ವಿಶೇಷ ಸಂಪ್ರದಾಯವನ್ನು ಹೊಂದಿದೆ. ಪ್ರತಿವರ್ಷ ಶಿವರಾತ್ರಿ ಅಮಾವಾಸ್ಯೆಯಂದು ಜರುಗುವ ಜಾತ್ರೆಗೆ ಚಂದ್ರಗಿರಿ ತಾಯಿಯ ಜಾತ್ರೆಯೆಂದು ಕರೆಯಲಾಗುತ್ತದೆ. ಬಬಲಿ ಎಂಬ ಗಿಡಗಳು ಆವರಿಸಿ ದಟ್ಟ ಅರಣ್ಯಪ್ರದೇಶವಾಗಿದ್ದ ಗ್ರಾಮವು, ಕಾಲಾನಂತರ ಬಬಲಾದಿ ಎಂದು ಕರೆಯಲ್ಪಟ್ಟಿತು. ದಟ್ಟಡವಿಯಲ್ಲಿ ಗೊಲ್ಲರ, ಬೇಟೆಗಾರರ ಉಪಟಳ ಅಧಿಕವಾಗಿತ್ತು. ಇಂಥ ಸಂದರ್ಭದಲ್ಲಿ ಲೋಕಜ್ಞಾನಿ ಸಾರವಾಡದ ಚಿಕ್ಕಪ್ಪಯ್ಯನವರು ಬಬಲಾದಿಗೆ ಆಗಮಿಸಿ ಚಂದ್ರಗಿರಿಯ ಚಂದ್ರಮ್ಮ ತಾಯಿಯನ್ನು ಬಬಲಾದಿಗೆ ಕರೆತಂದು ಗೊಲ್ಲರನ್ನು ಸದೆಬಡೆದು ಇಲ್ಲಿಯೇ ಮಠವನ್ನು ಸ್ಥಾಪಿಸಲು ಕಾರಣೀಕರ್ತರಾದರು. ಆದರೆ ಚಿಕ್ಕಪ್ಪಯ್ಯನವರು ತಾವು ಮಠದ ಪೀಠವೇರದೆ ಷಣ್ಮುಖಸಿದ್ಧರನ್ನು ಪೀಠಾಧಿಪತಿಗಳನ್ನಾಗಿ ಮಾಡಿ ಲೋಕ ಸಂಚಾರಿಗಳಾದರು. ಮಠದ ಪರಂಪರೆಯಲ್ಲಿ 10 ಸ್ವಾಮೀಜಿಗಳು ಆಗಿಹೋಗಿದ್ದಾರೆ. ಅವರಲ್ಲಿ 18ನೇ ಶತಮಾನದಲ್ಲಿ ಸದಾಶಿವ ಸ್ವಾಮಿಗಳು ಪವಾಡ ಪುರುಷರಾಗಿ ನೂರಾರು ಲೋಕೋದ್ಧಾರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಮಠವು ಸರ್ವಧರ್ಮ ಸಮನ್ವಯದ ಕೇಂದ್ರವಾಗಿ ಮಾರ್ಪಟ್ಟಿತು. ಸ್ವಾಮಿಗಳು ಹಸಿರು ರುಮಾಲು, ಬೆಳ್ಳಿ ಕಾಲಡಗಿತೋಡೆ, ಬೆತ್ತ ಹಾಗೂ ಕುದುರೆ ಇವುಗಳನ್ನು ಬಳಕೆ ಮಾಡುವುದು ಮಠದ ಸಂಪ್ರದಾಯ.
ಭವಿಷ್ಯವಾಣಿ
ಬದಲಾಯಿಸಿಇವರು ಹೇಳಿದ ಭವಿಷ್ಯಗಳು ಇಂದಿಗೂ ನಿಜವಾಗುತ್ತ ಬಂದಿವೆ. ಮಠದ ಗುರುವನ್ನು ಕೃಷ್ಣಾ ನದಿಯಿಂದ ಮಠವರೆಗೆ ಹೆಗಲ ಮೇಲೆ ಹೊತ್ತುಕೊಂಡು ಬರುತ್ತಾರೆ. ಕೃಷ್ಣಾ ನದಿಯಿಂದ ಮಠದ ವರೆಗೆ ನಾಲ್ಕು ಬಾರಿ ಭವಿಷ್ಯ ಹೇಳಲಾಗುತ್ತದೆ. ಐದನೇ ಬಾರಿ ಮಠದ ಗುರುಮಾತೆಯ ಎದುರು ಶಿಶುಮಗ ಭವಿಷ್ಯ ಹೇಳುತ್ತಾನೆ. ಜಗತ್ತಿನಲ್ಲಿ ಭವಿಷ್ಯದಲ್ಲಿ ನಡೆಯುವ, ಘಟಿಸಬಹುದಾದ ದುರಂತಗಳು, ಮಳೆ, ಬೆಳೆ, ಪ್ರಳಯ ಮತ್ತಿತರ ಸುಖ-ದುಃಖದ ಘಟನೆಗಳನ್ನು ಇಲ್ಲಿ ಹೇಳುವುದು ಗಮನಾರ್ಹವಾಗಿದೆ. ಇಲ್ಲಿ ನುಡಿಯುವ ಭವಿಷ್ಯ ಕರಿ ಕಲ್ಲಿನ ಮೇಲೆ ಬಿಳಿಗೆರೆ ಹೇಳಿದಷ್ಟೇ ನಿಖರವಾಗಿರುತ್ತದೆ. ರೇಡಿಯೋ, ರೈಲು ಬರಲಿವೆ ಎಂದು ಇಲ್ಲಿ ಹಲವಾರು ಶತಮಾನಗಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಅದು ನಿಜವಾಗಿದೆ.
ಮದ್ಯದ ನೈವೇದ್ಯ
ಬದಲಾಯಿಸಿಇಲ್ಲಿ ಮದ್ಯದ ನೈವೇದ್ಯ ಅರ್ಪಿಸಲೂ ಒಂದು ಕಾರಣವಿದೆ. ಇಲ್ಲಿನ ಸಿದ್ಧಿ ಪುರುಷ ಚಿಕ್ಕಪ್ಪಯ್ಯ ತಮ್ಮ ಸಿದ್ಧಿಗಾಗಿ ಬಿಂದುವಿನ ಪ್ರಮಾಣದಲ್ಲಿ ಮದ್ಯವನ್ನು ಸೇವಿಸಿ ಸಾಧನೆಗೆ ಕುಳಿತುಕೊಳ್ಳುತ್ತಿದ್ದರು. ಆದರೆ, ಕಾಲಾಂತರದಲ್ಲಿ ಇದನ್ನೇ ಪ್ರಮುಖವಾಗಿ ಪರಿಗಣಿಸಿರದ ಭಕ್ತರು ಈ ಗದ್ದುಗೆಗೆ ಮದ್ಯದ ನವೈದ್ಯ ಅರ್ಪಿಸಲಾರಂಭಿಸಿದರು. ಈ ಕುರಿತು ಮಠದ ಆಡಳಿತ ಮಂಡಳಿಯವರು ಎಷ್ಟೇ ತಿಳುವಳಿಕೆ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ. ಮದ್ಯದ ನೈವೇದ್ಯ ಸಾಂಗವಾಗಿ ಮುಂದುವರೆದುಕೊಂಡು ಬಂದಿದೆ. ಹಿಂದೆ ಬ್ರಿಟಿಷ್ ಪೊಲೀಸ್ ಅಧಿಕಾರಿಯೊಬ್ಬರು ಜಾತ್ರೆ ಸಮಯದಲ್ಲಿ ಮದ್ಯವನ್ನು ನಿಷೇಧಿಸಿದರು ಆಗ ಸದಾಶಿವಂ ಅಜ್ಜನವರು ಕೃಪೆಯಿಂದ ಬಬಲಾದಿ ಯಲ್ಲಿ ಹರಿಯುವ ಕೃಷ್ಣಾ ನದಿ ಸಂಪೂರ್ಣ ಮಾಧ್ಯಮವಾಗಿತ್ತು ಆಗ ಅಲ್ಲಿಗೆ ಬಂದ ಪೊಲೀಸ್ ಅಧಿಕಾರಿ ಸದಾಶಿವ ಅಜ್ಜನವರಲ್ಲೀ ಕ್ಷಮೆ ಕೇಳಿ ಮತ್ತೆ ಜಾತ್ರೆಯಲ್ಲಿ ಮಧ್ಯಕ್ಕೆ ಅನುಮತಿ ಮಾಡಿಕೊಟ್ಟರು
ಜುಟ್ಟು ಇಲ್ಲದ ತೆಂಗಿನಕಾಯಿ
ಬದಲಾಯಿಸಿಈ ಮಠದಲ್ಲಿ ಇನ್ನೋಂದು ವಿಶಿಷ್ಠ ಸಂಪ್ರದಾಯವಿದೆ. ಬಹುತೇಕ ಎಲ್ಲ ಮಠ ಮಂದಿರಗಳಲ್ಲಿ ಟೆಂಗಿನಕಾಯಿ ಒಡೆಯುವುದು ಸಾಮಾನ್ಯ. ಜನರೂ ಸಾಮಾನ್ಯವಾಗಿ ಜುಟ್ಟು ಇರುವ ತೆಂಗಿನಕಾಯಿಯನ್ನೇ ಒಡೆಯುತ್ತಾರೆ. ಆದರೆ, ಇಲ್ಲಿ ಮಾತ್ರ ಇದಕ್ಕೆ ತದ್ವಿರುದ್ದ. ಇಲ್ಲಿ ಜುಟ್ಟು ಇಲ್ಲದ ಬೋಳ ಟೆಂಗಿನಕಾಯಿ ಒಡೆಯುತ್ತಾರೆ. ಇದು ಯಾಕೆ ಗೊತ್ತಾ? ಹೊಳೆ ಬಬಲಾದಿ ಮಠದವರ ಜುಟ್ಟು ಯಾರ ಕೈಗೂ ಸಿಕ್ಕಿಲ್ಲ ಎಂಬುದರ ಪ್ರತೀಕ ಇದಾಗಿದೆ.[೨]
ಸರ್ವಧರ್ಮ ಸಮನ್ವಯ ಕೇಂದ್ರ
ಬದಲಾಯಿಸಿಜಾತ್ರೆಯಲ್ಲಿ ಮುಸ್ಲಿಮರು ಪಾತೆ ಕೊಡುವುದರೊಂದಿಗೆ ಜಾತ್ರೆ ಪ್ರಾರಂಭವಾಗುತ್ತದೆ. ಮುಂದೆ ಘಟಿಸಬಹುದಾದ ಸಂಗತಿಗಳ ಬಗ್ಗೆ ತಮ್ಮ ನೀತಿಪದಗಳಲ್ಲಿ ಹೇಳಿದ ಚಿಕ್ಕಪ್ಪಯ್ಯನವರ ನುಡಿಗಳನ್ನು ಜನರ ಮಾತಿನಲ್ಲಿ ಈಗಲೂ ಕೇಳಬಹುದು. ಚಂದ್ರಮ್ಮ ತಾಯಿ ಇಲ್ಲಿ ಜೀವಂತ ಸಮಾಧಿಯಾಗಿದ್ದಾಳೆಂಬ ಪ್ರತೀತಿ ಇದೆ. ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುವ ಭಕ್ತರಿಗೆ ಬೇಡಿದ ವರವನ್ನು ದಯಪಾಲಿಸುತ್ತಾಳೆ. ತಾಯಿಯ ಆಶೀರ್ವಾದದಿಂದ ಸದಾಶಿವ ಸ್ವಾಮಿಗಳಿಗೆ ವಾಕ್‌ಸಿದ್ಧಿ ಆಗಿತ್ತು ಎಂಬ ನಂಬಿಕೆಯಿದೆ. ದೇವಾಲಯದಲ್ಲಿ ಸಿದ್ದರಾಮೇಶ್ವರರು, ಚಂದ್ರಗಿರಿದೇವಿ, ಓಂಕಾರಯ್ಯ ಸ್ವಾಮಿಗಳು, ಗಂಗಾಧರಯ್ಯ ಸ್ವಾಮಿಗಳು, ಶಂಕ್ರಯ್ಯ ಸ್ವಾಮಿಗಳು, ಸದಾಶಿವ ಸ್ವಾಮಿಗಳು, ಶಿವಲಿಂಗ ಸ್ವಾಮಿಗಳು, ಓಂಕಾರಯ್ಯ ಸ್ವಾಮಿಗಳು, ಗಂಗಾಧರಯ್ಯ ಸ್ವಾಮಿಗಳು ಹಾಗೂ ಶಿವರುದ್ರಯ್ಯ ಸ್ವಾಮಿಗಳು ಹೀಗೆ 10 ಪವಾಡ ಪುರುಷರ ಗದ್ದುಗೆಗಳು ಸಾಲಾಗಿ ಪೂಜೆಗೊಳ್ಳುತ್ತವೆ. ಒಂದೇ ಸ್ಥಳದಲ್ಲಿ ಸರ್ವ ಸ್ವಾಮಿಗಳ ಮೂರ್ತಿಗಳು ಭಕ್ತರಿಗೆ ದರ್ಶನವಾಗುತ್ತವೆ. ಸದ್ಯ ಮಠದ ಪೀಠಾಧಿಕಾರಿಗಳಾಗಿರುವ ದ್ರಾಕ್ಷಾಯಣಿದೇವಿ ಶಿವರುದ್ರಯ್ಯ ಹಿರೇಮಠ ಅವರ ಸಾರಥ್ಯದಲ್ಲಿ ಜಾತ್ರೆ ನೆರವೇರುತ್ತದೆ. ಮಠದ ಗುರುಗಳು ಮುಂದೆ ಮಳೆ- ಬೆಳೆ ಬಗ್ಗೆ ಹೇಳಿಕೆ ನುಡಿಯುತ್ತಾರೆ.
ಶಾಖಾ ಮಠಗಳು
ಬದಲಾಯಿಸಿ- ಹಣಮಸಾಗರ, ತಾ|| ಜಿ|| ವಿಜಯಪುರ.
- ಸಾರವಾಡ, ತಾ|| ಜಿ|| ವಿಜಯಪುರ.
- ಕತಕನಹಳ್ಳಿ (ಕತ್ನಳ್ಳಿ), ತಾ|| ಜಿ|| ವಿಜಯಪುರ.
- ಚಮಕೇರಿ, ತಾ|| ಅಥಣಿ, ಜಿ|| ಬೆಳಗಾವಿ
- ಇಟ್ನಾಳ, ತಾ|| ಚಿಕ್ಕೋಡಿ, ಜಿ|| ಬೆಳಗಾವಿ
- ಅರಭಾಂವಿ, ತಾ|| ಗೋಕಾಕ, ಜಿ|| ಬೆಳಗಾವಿ
- ಹೆಬ್ಬಾಳಟ್ಟಿ: ತಾ॥ ಬಬಲೇಶ್ವರ :ಜಿ॥ ವಿಜಯಪುರ
- ಭೆoಡವಾಡ : ತಾ II ರಾಯಬಾಗ. : ಜಿ II ಬೆಳಗಾವಿ
- Kadarkoppa ಜಿ#Bagalkot
ತಾ#ಬಾದಾಮಿ
- ರಂಜನಗಿ , ತಾ॥ಮುಧೋಳ ಜಿ॥ ಬಾಗಲಕೋಟೆ
- ಸಾಲಹಳ್ಳಿ ತಾ// ರಾಮದುರ್ಗ ಜಿ // ಬೆಳಗಾವಿ
ದಾಸನಾಳ ತಾ||ಯರಗಟ್ಟಿ ಜಿ||ಬೆಳಗಾವಿ
- ಶಿರೋಳ, ತಾ॥ಮುಧೋಳ ಜಿ॥ ಬಾಗಲಕೋಟೆ
ಉಲ್ಲೇಖಗಳು
ಬದಲಾಯಿಸಿ