ಬಫತ್
ಬಫತ್, ಇದನ್ನು ಬಾಫದ್ ಅಥವಾ ಬಫಾತ್ ಎಂದು ಕೂಡ ಉಚ್ಚರಿಸಲಾಗುತ್ತದೆ. ಇದು ಮಂಗಳೂರು ಮತ್ತು ಗೋವಾದ ಪಾಕಪದ್ಧತಿಗಳಲ್ಲಿ, ವಿಶೇಷವಾಗಿ ಮಂಗಳೂರಿನ ಕ್ಯಾಥೋಲಿಕ್ ಮತ್ತು ಗೋವಾನ್ ಕ್ಯಾಥೋಲಿಕ್ ಅಡುಗೆಗಳಲ್ಲಿ ಬಳಸಲಾಗುವ ಒಂದು ಪ್ರಕಾರದ ಮಸಾಲಾವಾಗಿದೆ. ಇದು ಸಾಮಾನ್ಯವಾಗಿ ಒಣ ಮೆಣಸು, ಕೊತ್ತಂಬರಿ ಬೀಜಗಳು, ಜೀರಿಗೆ ಬೀಜಗಳು, ಸಾಸಿವೆ ಬೀಜಗಳು, ಕರಿಮೆಣಸು, ಅರಿಶಿನ, ದಾಲ್ಚಿನ್ನಿ ಮತ್ತು ಲವಂಗಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಇದು ಪೋರ್ಚುಗೀಸ್ ಮತ್ತು ಗೋವಾ ಸಂಸ್ಕೃತಿಗಳ ಪ್ರಭಾವವನ್ನು ಒಳಗೊಂಡಿದೆ. ಬಫತ್ ಹಂದಿಮಾಂಸದ ಸಾರು (ಸ್ಟ್ಯೂ) ನಲ್ಲಿ ಅದರ ಬಳಕೆಗೆ ಹೆಚ್ಚು ಹೆಸರುವಾಸಿಯಾಗಿದೆ. ಇದನ್ನು ಬಫತ್ ಅಥವಾ "ದುಕ್ರಾ ಮಾಸ್" ಎಂದೂ ಕರೆಯುತ್ತಾರೆ. ಇದನ್ನು ಸಾಮಾನ್ಯವಾಗಿ ಸನ್ನಾ(ಇಡ್ಲಿಯ ಸೋದರಸಂಬಂಧಿ) ಜೊತೆಗೆ ನೀಡಲಾಗುತ್ತದೆ. ಇದನ್ನು ಇತರ ಮಾಂಸ ಮತ್ತು ತರಕಾರಿಗಳನ್ನು ಮಸಾಲೆ ಮಾಡಲು ಸಹ ಬಳಸಲಾಗುತ್ತದೆ.[೧][೨]
References
ಬದಲಾಯಿಸಿ- ↑ Brien, Charmaine O' (15 ಡಿಸೆಂಬರ್ 2013). The Penguin Food Guide to India (in ಇಂಗ್ಲಿಷ್). Penguin UK. p. 372. ISBN 978-93-5118-575-8.
- ↑ "Have you had these seven iconic Mangalore dishes?". 18 ಏಪ್ರಿಲ್ 2016. Retrieved 6 ಜನವರಿ 2022.