ಬಟಗುರ್ ಕಚುಗಾ
ಬಟಗುರ್ ಕಚುಗಾ
ಬದಲಾಯಿಸಿದಕ್ಷಿಣ ಏಷ್ಯಾ ಮೂಲದ ಬಟಗುರ್ ಕಚುಗಾ ಒಂದು ಅಪರೂಪದ ಪ್ರಾಣಿ. ತಲೆಯ ಮೇಲ್ಭಾಗದಲ್ಲಿ ಕೆಂಪು ಚಿತ್ತಾರ ಹೊಂದಿರುವ ಇದು ಆಮೆ ಜಾತಿಯದಾಗಿದೆ. ದೆಹದ ತೂಕ ಸುಮಾರು ೨೫ ಕೆ.ಜಿ. ಹೊಂದಿದ್ದು, ಬೆನ್ನಿನ ಚಿಪ್ಪು ಸುಮಾರು ೫೬ ಸೆಂ.ಮೀ ಸುತ್ತಳತೆಯದ್ದಾಗಿರುತ್ತದೆ. ಗಂಡು ಆಮೆಗಿಂತ ಹೆಣ್ಣು ಆಮೆ ಉದ್ದವಿರುತ್ತದೆ. ಮಳೆಗಾಲದ ಕೊನೆಯಲ್ಲಿ ಗಂಡು ಆಮೆ ತಲೆ ಮತ್ತು ಕುತ್ತಿಗೆಯ ಮೇಲೆ ಹಳದಿ, ಕೆಂಪು, ನೀಲಿ, ಬಿಳಿ ಬಣ್ಣಗಳು ಗಾಡವಾಗುತ್ತವೆ.[೧]
ಭೌಗೋಳಿಕ ಆವಾಸ ಸ್ಥಾನ
ಬದಲಾಯಿಸಿಪ್ರಾಚೀನ ಕಾಲದಿಂದಲೂ ಇದು ಮಧ್ಯ ನೇಪಾಳ , ಈಶಾನ್ಯ ಭಾರತ, ಬಾಂಗ್ಲಾದೆಶಗಳಲ್ಲಿ ಕಂಡು ಬರುವ ಅಪರೂಪದ ಪ್ರಾಣಿ. ಗಂಗಾನದಿ ಪ್ರದೇಶದಲ್ಲಿ ಹಾಗೂ ವಾಯವ್ಯ ಮ್ಯಾನ್ಮಾರ್ನಲ್ಲಿ ಕೂಡ ಇಂಥ ಪ್ರಾಣಿಗಳು ಕಂಡುಬರುತ್ತವೆ. ಇತ್ತೀಚಿನ ಸಮೀಕ್ಷೇಯ ಪ್ರಕಾರ ಕೇವಲ ೪೦೦ ಕ್ಕೂ ಕಡಿಮೆ ಪ್ರಮಾಣದಲ್ಲಿ ಹೆಣ್ಣು ಆಮೆಗಳು ಕಂಡು ಬಂದಿವೆ.[೨]
ಆಹಾರ
ಬದಲಾಯಿಸಿನೀರಿನಲ್ಲಿರುವ ಸಸ್ಯಗಳೇ ಇದರ ಪ್ರಮುಖ ಆಹಾರವಾಗಿದೆ.
ವರ್ತನೆ
ಬದಲಾಯಿಸಿಕಲ್ಲು ಬಂಡೆಯ ಮೇಲೆ, ಮರಳು ದಿಬ್ಬದ ಮೇಲೆ ಬಂದು ಸೂರ್ಯನ ಶಾಖ ಪಡೆಯುತ್ತದೆ.
ಅವಸಾನ
ಬದಲಾಯಿಸಿಈ ಆಮೆಗಳನ್ನು ಅವುಗಳ ಮಾಂಸ, ಚಿಪ್ಪುಗಳಿಗಾಗಿ ಬೇಟೆಯಾಡಲಾಗುತ್ತದೆ. ಮೀನು ಹಿಡಿಯುವ ಸಂದರ್ಭದಲ್ಲಿ ಹಾಗು ಮರಳು ಗಣಿಗಾರಿಕೆ ಸಂದರ್ಭಗಳಲ್ಲಿ ಇವು ಅವಸಾನ ಹೊಂದುತ್ತಿದೆ '
ಸಂತಾನೋತ್ಪತ್ತಿ
ಬದಲಾಯಿಸಿಬಟಗುರ್ ಕಚುಗಾ ವಯಸ್ಕ ಹೆಣ್ಣು ಆಮೆಯು ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಮೊಟ್ಟೆ ಇಡುತ್ತದೆ. ಮೊಟ್ಟೆಗಳು ಸುಮಾರು ೬೪-೭೫ ಎಮ್.ಎಮ್ (೨-೩ ಇಂಚು) ಉದ್ದ ಮತ್ತು ೩೮-೪೬ ಎಮ್.ಎಮ್ ಅಗಲ ಇರುತ್ತದೆ. ಸುಮಾರು ೧೧ ರಿಂದ ೩೦ ಮೊಟ್ಟೆಗಳಾಗುವಾಗ ಅದರ ಗಾತ್ರದಲ್ಲಿ ಬದಲಾವಣೆ ಕಂಡುಬರುತ್ತದೆ.
ವೈಜ್ಣಾನಿಕ ವರ್ಗೀಕರಣ
ಬದಲಾಯಿಸಿ- ಸಾಮ್ರಾಜ್ಯ ; ಅನಾಮಲಿಯಾ
- ವೈಜ್ಣಾನಿಕ ಹೆಸರು ; ಬಟಗುರ್ ಕಚುಗಾ
- ಕುಟುಂಬ ; ಜಿಯೋಮಿಡಯ್
- ವರ್ಗ ; ರೆಪ್ಟಿಲಿಯಾ
- ಗಣ ; ಟೆಸ್ಟುಡೈನ್ಸ್
- ಉಪಗಣ ; ಕ್ರಿಪ್ಟೋಡಿರಾ
- ಜಾತಿ ; ಬಟಗುರ್
- ತಳಿಗಳು ; ಬಿ. ಕಚುಗಾ
-ಉಲ್ಲೇಖನ-
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2014-09-21. Retrieved 2015-01-23.
- ↑ http://www.iucnredlist.org/details/10949/0
.