ಬಝರ್ಡ್
ಬಝರ್ಡ್ | |
---|---|
Adult male G. m. australis showing the contrasting underside plumage. In the nominate subspecies, the contrast is even stronger due to the pure white belly. Note short grey-tipped tail. | |
Conservation status | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | Chordata
|
ವರ್ಗ: | |
Subclass: | |
ಕೆಳವರ್ಗ: | |
ಮೇಲ್ಗಣ: | |
ಗಣ: | |
ಕುಟುಂಬ: | |
ಉಪಕುಟುಂಬ: | |
ಕುಲ: | Geranoaetus (disputed)
|
ಪ್ರಜಾತಿ: | G. melanoleucus
|
Binomial name | |
Geranoaetus melanoleucus (Vieillot, 1819)
| |
Synonyms | |
Buteo fuscescens (Vieillot, 1819) |
ಬಝರ್ಡ್ ಒಂದು ಬಗೆಯ ಹದ್ದು. ಬ್ಯೂಟಿಯೋನಿಡೀ ಕುಟುಂಬಕ್ಕೆ ಸೇರಿದೆ. ಬಸ್ಟಾಟರ್ ಟೀಸ ಇದರ ಶಾಸ್ತ್ರೀಯ ಹೆಸರು. ದೇಹದ ಬಣ್ಣ ಕಂದು. ಕತ್ತಿನ ಭಾಗದಲ್ಲಿ ಬಿಳಿಬಣ್ಣ. ಗಲ್ಲದ ಮೇಲೆ ಎರಡು ಕಪ್ಪು ಪಟ್ಟಿಗಳು. ಹೀಗೆ ಇದರ ಕಂದು ಬಿಳಿ-ಕಪ್ಪು ಮಿಶ್ರಣದಿಂದ ಈ ಹದ್ದನ್ನು ಸುಲಭವಾಗಿ ಗುರುತಿಸಬಹುದು. ಇದು ದಕ್ಷಿಣ ಭಾರತದಲ್ಲಿ ಅಪರೂಪ. ಉತ್ತರ ಭಾರತ ಹಾಗೂ ಹಿಮಾಲಯ ಪರ್ವತದ ತಪ್ಪಲಿನಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಹೆಚ್ಚು ಸಾಂದ್ರತೆ ಇಲ್ಲದ ಕಾಡುಗಳಲ್ಲಿ ಮತ್ತು ಮೈದಾನ ಪ್ರದೇಶಗಳಲ್ಲಿಯೂ ಇದನ್ನು ಕಾಣಬಹುದು. ದೊಡ್ಡ ಕೀಟ, ಓತಿಕ್ಯಾತ, ಇಲಿ ಮುಂತಾದವು ಇದರ ಆಹಾರ. ಗಂಡುಹೆಣ್ಣು ಎರಡೂ ಸಹಕರಿಸಿ ಗೂಡು ಕಟ್ಟುತ್ತವೆ. ಫೆಬ್ರುವರಿ ಮೇ ಅವಧಿಯಲ್ಲಿ. ಗೂಡು ಕಾಗೆ ಗೂಡಿನಂತೆ ಕಡ್ಡಿಗಳಿಂದ ರಚಿಸಲ್ಪಟ್ಟಿರುತ್ತದೆ. ಇದರೊಳಗೆ ಹೆಣ್ಣು ಬಝರ್ಡ್ ಹಸುರು-ಬಿಳಿ ಬಣ್ಣದ ಮೊಟ್ಟೆ ಇಡುತ್ತದೆ. ಹೆಣ್ಣು ಮಾತ್ರ ಮೊಟ್ಟೆಗಳಿಗೆ ಕಾವು ಕೊಡುತ್ತದೆ. ತಂದೆ ತಾಯಿ ಎರಡೂ ಮರಿಗಳಿಗೆ ಆಹಾರ ಉಣಿಸಿ ಪೋಷಿಸುತ್ತದೆ. ಅಮೆರಿಕ ಮತ್ತು ಇಂಗ್ಲೆಂಡುಗಳಲ್ಲಿ ಎಲ್ಲ ಹದ್ದುಗಳಿಗೂ ಬಝರ್ಡ್ ಎಂದೇ ಹೆಸರು. ಅಲ್ಲಿಯ ಹದ್ದುಗಳ ಪೈಕಿ ನಾವು ಬಝರ್ಡ್ ಎಂದು ಗುರುತಿಸುವ ಹದ್ದಿಗೆ ಹತ್ತಿರದ ಸಂಬಂಧಿ ಆದದ್ದು ಬ್ಯೂಟಿಯೋ ಜಮೈಕನೆನ್‍ಸಸ್. ಬ್ಯೂಟಿಯೋನಿಡೀಯಲ್ಲಿ ಸುಮಾರು 90 ಪ್ರಭೇದಗಳಿವೆ. (ಎ.ಕೆಯು.)
ಉಲ್ಲೇಖಗಳು
ಬದಲಾಯಿಸಿ- ↑ BirdLife International (2012). "Geranoaetus melanoleucus". IUCN Red List of Threatened Species. Version 2013.2. International Union for Conservation of Nature. Retrieved 26 November 2013.
{{cite web}}
: Invalid|ref=harv
(help)